ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈಗ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿದ ಎನ್.ಕೆ ಬಿಲ್ಲವ ಹಾಗೂ ಅವರ ಪತ್ನಿ ಜ್ಯೋತಿ ಅವರನ್ನು ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುನೀತಾ ಅಧ್ಯಕ್ಷತೆ ವಹಿಸಿದ್ದರು. ಎನ್.ಕೆ ಬಿಲ್ಲವರ ಬಗ್ಗೆ ಮುಖ್ಯಶಿಕ್ಷಕರಾದ ವೆಂಕ್ಟ ಉಪ್ಪಾರರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಶಿಕ್ಷಕರಾದ ಭಾರತಿ ಸ್ವಾಗತಿಸಿದರು, ಭಾಸ್ಕರ್ ಪ್ರಭು ಹಾಗೂ ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ದೇವಾಡಿಗ ಸಹಕರಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜಿಲ್ಲಾ ಪಂಚಾಯಿತಿ, ಹೇರೂರು ಗ್ರಾಮ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಉಪ್ಪುಂದ ರೈತಸಿರಿ ಸ್ವಸಹಾಯ ಸಂಘಗಳ ಒಕ್ಕೂಟ, ಮೇಕೋಡು, ಕಿರಿಮಂಜೇಶ್ವರ, ಕೊಡೇರಿ, ಖಂಬದಕೋಣೆ, ಹೇರಂಜಾಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹೇರೂರಿನ ಮೇಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಜಾನುವಾರು ಪ್ರದರ್ಶನ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ‘ಕೇವಲ ಕೃಷಿ ಅವಲಂಬಿಸಿರುವ ರೈತರಿಗೆ ವರ್ಷವಿಡೀ ದುಡಿಮೆ ಇಲ್ಲ. ಅದಕ್ಕಾಗಿ ಹೈನುಗಾರಿಕೆಯನ್ನು ಮಾಡಬೇಕು’ ಎಂದು ಶಾಸಕ ಸಲಹೆ ನೀಡಿದರು. ‘ಹಾಲಿನ ಉತ್ಪಾದನಾ ವೆಚ್ಚ ಸರಿದೂಗಿಸುವ ಬೆಲೆ ಇಲ್ಲ. ಹೈನುಗಾರರಿಗೆ ಸರ್ಕಾರ ಪ್ರತಿ ಲೀಟರ್ಗೆ ?೫ ಪ್ರೋತ್ಸಾಹ ಧನ ನೀಡುತ್ತಿದೆ. ಆದರೂ, ಅವರಿಗೆ ನಿರೀಕ್ಷಿಸಿದ ಪ್ರತಿಫಲ ಸಿಗುತ್ತಿಲ್ಲ. ಆದುದರಿಂದ ಒಕ್ಕೂಟ ಸರಬರಾಜು ಮಾಡುವ ಪಶು ಆಹಾರದ ಬೆಲೆ ಕಡಿಮೆ ಮಾಡಬೇಕು. ಪಶುವೈದ್ಯರು ಅವರಿಗೆ ಉತ್ತಮ ಸೇವೆ ನೀಡಬೇಕು’ ಎಂದ ಅವರು ‘ಈ ಪ್ರದೇಶದಲ್ಲಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಶಾಂತಿ ಸೌಹಾರ್ದದ ವಾತಾವರಣ ನೆಲೆಸಿದ್ದು, ಎಲ್ಲಾ ವರ್ಗಗಳ ಜನರ ಸಹಕಾರದಿಂದ ಗಂಗೊಳ್ಳಿಗೆ ಅಂಟಿಕೊಂಡಿದ್ದ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಳಚಿ ಹೋಗುತ್ತಿದೆ. ಈ ಭಾಗದ ಯುವಕರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಗಂಗೊಳ್ಳಿಯ ಕಾರಣೀಕ ಕ್ಷೇತ್ರವಾಗಿರುವ ಶ್ರೀ ಹಾಲುಮಕ್ಕಿ ಜಟ್ಟಿಗ ದೇವಸ್ಥಾನದಲ್ಲಿ ಹತ್ತು ಸಮಸ್ತರ ಸೇವೆ ಬಯಲಾಟ ಅಪೂರ್ವವಾಗಿದ್ದು, ಇದನ್ನು ಮುನ್ನಡೆಸಿಕೊಂಡು ಬಂದಿರುವ ಸಮಿತಿಯ ಸದಸ್ಯರು ಅಭಿನಂದನಾರ್ಹರು ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ರಾಮ ಪೈ ಮಠದ ಸಮೀಪದಲ್ಲಿರುವ ಶ್ರೀ ಹಾಲುಮಕ್ಕಿ ಜಟ್ಟಿಗ ದೇವಸ್ಥಾನದ ಪ್ರಯುಕ್ತ ಹತ್ತು ಸಮಸ್ತರ ಸೇವೆ ಬಯಲಾಟದ ಬೆಳ್ಳಿ ಹಬ್ಬ ಸಮಾರಂಭದ ಅಂಗವಾಗಿ ದೇವಸ್ಥಾನದ ವಠಾರದಲ್ಲಿ ಶುಕ್ರವಾರ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಗಂಗೊಳ್ಳಿಯ ಪಂಚಗಂಗಾವಳಿ ಸೌಹಾರ್ದ ಕೋ-ಆಪರೇಟಿವ್ ಅಧ್ಯಕ್ಷ ರಾಜು ದೇವಾಡಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ’ ಸುದ್ದಿ ಬೈಂದೂರು: ರೈತರು ಬೆಳೆದ ಬೆಳೆಗೆ ಹಾಪ್ಕಾಮ್ಸ್ ಮಾರಾಟ ಮಳಿಗೆಯಲ್ಲಿ ಲಾಭದಾಯಕ ಧಾರಣೆ ದೊರೆಯಬೇಕು. ಜಿಲ್ಲೆಯ ಹೊರಗಿನ ಉತ್ಪನ್ನ ಮತ್ತು ಇಲ್ಲಿನ ಬೆಳೆಗಳ ದರಗಳಲ್ಲಿ ವ್ಯತಾಸವಿದ್ದು, ಸ್ಥಳೀಯ ರೈತರಿಗೆ ಯಾವುದೇ ಕಾರಣಕ್ಕೆ ನಷ್ಟವಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಮಂಗಳೂರಿನ ಜಿಲ್ಲಾ ಹಾಪ್ಕಾಮ್ಸ್ ಮಾರುಕಟ್ಟೆ, ರಾಜ್ಯ ತೋಟಗಾರಿಕಾ ಮಾರಾಟ ಮಹಾಮಂಡಲ ವತಿಯಿಂದ 2014–15ನೇ ಸಾಲಿನ ರಾಜ್ಯವಲಯ ಯೋಜನೆಯಡಿ ಉಳಿಕೆಯಾಗಿರುವ ಅನುದಾನದಿಂದ ಉಪ್ಪುಂದ ಪೇಟೆಯಲ್ಲಿ ನಿರ್ಮಿಸಿರುವ ನೂತನ ಹಾಪ್ಕಾಮ್ಸ್ ಮಾರಾಟ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಇಂದು ಸಾವಯವ ಮತ್ತು ರಸಗೊಬ್ಬರ ನಡುವೆ ಸಮತೋಲನ ಕಾಪಾಡುವ ಅಗತ್ಯವಿದೆ. ಸಾಧ್ಯವಾದಷ್ಟೂ ಸಾವಯವ ಕೃಷಿಗೆ ಮರಳುವುದು ಅನಿವಾರ್ಯವೆನಿಸಿದೆ. ರೈತರಿಗೆ ತರಬೇತಿ ನೀಡಬೇಕು. ಕೃಷಿಯೊಂದಿಗೆ ತೋಟಗಾರಿಕೆ, ಹೈನುಗಾರಿಕೆ, ಕೋಳಿಸಾಕಣೆ ನಡೆಸುವುದಲ್ಲದೇ, ಕಡಿಮೆ ವೆಚ್ಚದಲ್ಲಿ ಆರೋಗ್ಯ ನೀಡುವ ಪಪ್ಪಾಯಿ, ನುಗ್ಗೆ, ಬಸಳೆ, ತೊಂಡೆ, ಸೌತೆ, ಬಾಳೆ ಬೆಳೆಸಿ ಮನೆಯ ಖರ್ಚಿಗೆ ಬಳಸಿಕೊಂಡು ಸ್ವಾವಲಂಬನೆ ಸಾಧಿಸಬೇಕು’ ಎಂದರು. ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಗೀತ, ಕಲೆ, ಸಂಸ್ಕೃತಿಯ ಉಪಾಸನೆ ಇದ್ದಲ್ಲಿ ಮನುಷ್ಯ ಮನುಷ್ಯನಾಗಿರುತ್ತಾನೆ. ಅಂತಹದ್ದೊಂದು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಸಂಘ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಪ್ರಜ್ಞಾವಂತ ಸಮಾಜದ ಜವಾಬ್ದಾರಿಯಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಂಗ ಸುರಭಿ ೨೦೨೦ – ಶಿಶಿರ ನಾಟಕೋತ್ಸವ ಎರಡನೇ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಜೀವವಿಮಾ ಅಭಿವೃದ್ಧಿ ಅಧಿಕಾರಿ ಸೋಮನಾಥನ್ ಆರ್, ಬೈಂದೂರು ಶಿಶುಮಂದಿರದ ಅಧ್ಯಕ್ಷ ಮಂಜುನಾಥ ಶೆಟ್ಟಿ, ಬೈಂದೂರು ಡಾ. ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ಬೈಂದೂರು ಮಾದರಿ ಶಾಲೆ ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ ಶ್ಯಾನುಭಾಗ್, ಉದ್ಯಮಿ ಕೆ.ಎ ಸತೀಶ್ ಉಡುಪಿ, ಸುರಭಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ವೈ. ಕೊರಗ ಉಪಸ್ಥಿತರಿದ್ದರು. ಗಾಯಕಿ ಗೀತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಆತ್ಮವಿಶ್ವಾಸವನ್ನು ಮೂಡಿಸಬೇಕು ನಿಮ್ಮೊಳಗೆ ಅದ್ಬುತವಾದ ಒಂದು ಶಕ್ತಿ ಅದನ್ನು ಬಳಸಿಕೊಂಡು ಎನು ಬೇಕಾದರೂ ಮಾಡಬಹುದು ಎನ್ನುವುದನ್ನು ಹೇಳಿಕೊಡಿ, ಆಗ ಅವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ಪತ್ರಕರ್ತ ರವಿಬೆಳಗೆರೆ ತಿಳಿಸಿದರು. ಅವರು ಕೋಟ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಮೂಡುಗಿಳಿಯಾರು ಶಾಲಾ ಮೈದಾನದಲ್ಲಿ ಜರಗಿದ ಅದ್ದೂರಿಯ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮ ‘ಅಭಿಮತ ಸಂಭ್ರಮ’ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೀರ್ತಿ ಕಲಶ ಪ್ರಶಸ್ತಿಗೆ ಭಾಜನರಾದ ಯೋಗರಾಜ್ ಭಟ್ಟರು ಕನ್ನಡ ಚಿತ್ರರಂಗದ ಮಾಂತ್ರಿಕ ಸ್ವರೂಪಿ ಸಾಹಿತಿ. ಸ್ವಂತ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಿದ ಸಾಧಕ. ಇವರ ಪ್ರತಿಯೊಂದು ಸಾಲುಗಳು ಜೀವನೋತ್ಸಹವನ್ನು ತುಂಬುತ್ತದೆ ಎಂದರು. ಹುಟ್ಟೂರ ಗೌರವ ಸಂತಸ ತಂದಿದೆ: ಈ ಸಂದರ್ಭ ಚಿತ್ರ ಸಾಹಿತಿ ಯೋಗರಾಜ್ ಭಟ್ ಅವರಿಗೆ ಜನಸೇವಾ ಟ್ರಸ್ಟ್ನ ಕೀರ್ತಿ ಕಳಸ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಭಟ್ಟರು, ನಾನು ಮೂಲತಃ ಮಂದಾರ್ತಿಯವನು ಹೀಗಾಗಿ ಈ ಪ್ರದೇಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡಿ ಅದು ಬಹುಕಾಲ ಉಳಿಯುವಂತೆ ಮಾಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಮಾಜಿ ಜಿಲ್ಲಾ ರೋಟರಿ ಗವರ್ನರ್ ಎ. ಅಭಿನಂದನ್ ಶೆಟ್ಟಿ ಹೇಳಿದರು. ಅವರು ಸುರಭಿ ರಿ. ಬೈಂದೂರು ಹಾಗೂ ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಿ. ಬೈಂದೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ರಂಗ ಸುರಭಿ ೨೦೨೦ – ಶಿಶಿರ ನಾಟಕೋತ್ಸವಕ್ಕೆ ಡೋಲು ಭಾರಿಸಿ ಚಾಲನೆ ನೀಡಿ ಮಾತನಾಡಿ ಕಲೆ ಹಾಗೂ ಕಲಾಕಾರರಿಗೆ ಯಾವುದಾದರೂ ವೇದಿಕೆ ಅಥವಾ ಸಮೂಹದ ಮೂಲಕ ಜೀವ ಕೊಡದಿದ್ದರೆ ಅದು ನಶಿಸುವುದಲ್ಲದೇ ಒಂದು ಪರಂಪರೆಯೂ ಮಾಯವಾಗುತ್ತದೆ ಎಂದು ಹೇಳಿದರು. ಶ್ರೀರಾಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮ ಆಯೋಜನೆ ಸುಲಭ ಸಾಧ್ಯವಲ್ಲ. ವೇದಿಕೆ ಸೃಷ್ಟಿಸುವ ಮೂಲಕ ಕಲಾವಿದರಿಗೊಂದು ಅವಕಾಶ ಹಾಗೂ ಪ್ರೇಕ್ಷಕರಿಗೆ ಮನೋರಂಜನೆ ಏಕಕಾಲದಲ್ಲಿ ದೊರೆತಂತಾಗುವುದು ಎಂದರು. ಬೈಂದೂರು ಸಿಟಿ ಜೆಸಿಐ ಸ್ಥಾಪಕಾಧ್ಯಕ್ಷ ಮಣಿಕಂಠ ಎಸ್., ಉದ್ಯಮಿ ಪ್ರಸಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ, ಪ್ರತಿಭಾವಂತ ಕಲಾವಿದ ಗೌತಮ್ ಕೆ. ಅವರ ಎಲ್ಲಿರುವ ನಾನು ಆಲ್ಬಂ ಸಾಂಗ್ ಫೆ. 11ರ ಬೆಳಿಗ್ಗೆ 10ಗಂಟೆಗೆ ಬಿಡುಗಡೆಗೊಳ್ಳಲಿದೆ. ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಆಲ್ಬಂ ಸಾಂಗ್ ಬಿಡುಗಡೆಗೊಳಿಸಲಿದ್ದಾರೆ. ಆಲ್ಬಂ ಸಾಂಗ್ ನಿರ್ದೇಶನ, ನಟನೆ ಹಾಗೂ ಹಾಡುಗಾರಿಕೆಯಲ್ಲಿ ಗೌತಮ್ ಕೆ. ಇದ್ದರೇ, ದಿಲೀಪ್ ಮರೀಚಿ ಸಾಹಿತ್ಯ ಬರೆದಿದ್ದು, ರಾಜೇಶ್ ನಾಯ್ಕ್ ಹಾಗೂ ಭರತ್ ಕ್ಯಾಮರಾದಲ್ಲಿ ಸಹಕರಿಸಿದ್ದಾರೆ. ನಿತೀಶ್ ಚಿತ್ರಕಥೆಯಲ್ಲಿ ಸಹಕರಿಸಿದ್ದರೆ, ರೆಲ್ವಿನ್ ಮೆಲ್ರಿನ್ ಸಂಕಲನ ಮಾಡಿದ್ದಾರೆ. ಸಹಕಲಾವಿದರಾದ ಶ್ರೇಯಾ ಗೌತಮ್ ನಟಿಸಿದ್ದಾರೆ. ಬಿಡುಗಡೆಯಾದ ಬಳಿಕ ಉಷಾಕಾಮ್ಯ ಪ್ರೊಡಕ್ಷನ್ಸ್ ಯುಟ್ಯೂಬ್ ಚಾನೆಲ್ನಲ್ಲಿ (https://www.youtube.com/channel/UCfRKolvXC7K9Wt_a4eIYn6w/videos) ಲಭ್ಯವಾಗಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗುಜರಾತಿನ ವಡೋದರದಲ್ಲಿ ಮಾಸ್ಟರ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಜ್ಜಾಡಿ ಗ್ರಾಮದ ಕಂಚುಗೋಡು ನಿವಾಸಿ ನಾಗರಾಜ ಖಾರ್ವಿ ಇವರು 200ಮೀ ಬ್ರೆಷ್ಟ್ ಸ್ಟ್ರೋಕ್ನಲ್ಲಿ ಚಿನ್ನದ ಪದಕ, 100ಮೀ ಬ್ರೆಷ್ಟ್ ಸ್ಟ್ರೋಕ್ನಲ್ಲಿ ಚಿನ್ನದ ಪದಕ, 50ಮೀ. ಬ್ರೆಷ್ಟ್ ಸ್ಟ್ರೋಕ್ನಲ್ಲಿ ಕಂಚಿನ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ನಾಗರಾಜ ಖಾರ್ವಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚುಗೋಡು ಮತ್ತು ಗುಜ್ಜಾಡಿ, ಸರಸ್ವತಿ ವಿದ್ಯಾಲಯ ಗಂಗೊಳ್ಳಿಯ ಹಳೆ ವಿದ್ಯಾರ್ಥಿ. ಇವರಿಗೆ ರೇಷ್ಮೆ ಇಲಾಖೆಯ ನಿರೀಕ್ಷಕ ಬಿ. ಕೆ. ನಾಯ್ಕ್, ಈಜು ತರಬೇತುದಾರ ಶಿವಾನಂದ ಗಟ್ಟಿ, ಲೋಕರಾಜ್ ವಿಟ್ಲ ಈಜು ತರಬೇತಿ ನೀಡಿರುತ್ತಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮರವಂತೆ ಮೂಲದ ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಅವರ ’ಇನ್ನೂನು ಬೇಕಾಗಿದೆ’ ಹಾಡಿಗೆ ಬೆಂಗಳೂರಿನಲ್ಲಿ ಜರುಗಿದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಅವರು ಮುಂದಿನ ನಿಲ್ದಾಣ ಚಿತ್ರಕ್ಕಾಗಿ ’ಇನ್ನೂನು ಬೇಕಾಗಿದೆ’ ಹಾಡು ರಚಿಸಿದ್ದರು.
