ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಂಗಳವಾರ ರಾತ್ರಿ ವೇಳೆಗೆ ಖಾಸಗಿ ವಾಹನದಲ್ಲಿ ಬಂದ ಗೋಕಳ್ಳರು ರಸ್ತೆ ಬದಿಯಲ್ಲಿದ್ದ ದನಗಳನ್ನು ಕದಿಯುವ ಯತ್ನ ನಡೆಸಿದ್ದು, ಎರಡು ಪ್ರತ್ಯೇಕ ಘಟನೆಯಲ್ಲಿ ಒಂದು ಗೋವನ್ನು ಕಳವುಗೈಯ್ಯಲಾಗಿದೆ.
ಖಾಸಗಿ ಪ್ಯಾಸೆಂಜರ್ ವಾಹನದಲ್ಲಿ ಬಂದಿರುವ ಆಗಂತುಕರು ಗಂಗೊಳ್ಳಿ ಬಂದರು ರಸ್ತೆ ಬಾರ್ ಎದುರು ರಾತ್ರಿ ಹೊತ್ತಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗೋವನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಈ ಘಟನೆಗೂ ಮೊದಲು ಮ್ಯಾಂಗನೀಸ್ ರಸ್ತೆಯಲ್ಲಿ ಗೋಕಳ್ಳತನ ಮಾಡಲು ಯತ್ನಿಸಿದ್ದು, ಸ್ಥಳೀಯರು ಕೂಗಿಕೊಂಡಿದ್ದರಿಂದ ದನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾರೆ.
ಸಿಸಿ ಟಿವಿ ಪೂಟೇಜ್ ಆಧಾರ ಮೇಲೆ ಗಂಗೊಳ್ಳಿ ಪಿಎಸೈ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗಂಗೊಳ್ಳಿಯ ಹಿಂದೂ ಜಾಗರಣಾ ವೇದಿಕೆ ಒಂದು ಪ್ರತ್ಯೇಕ ದೂರು ದಾಖಲಿಸಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
► ಗಂಗೊಳ್ಳಿಯಲ್ಲಿ ಗೋಕಳ್ಳತನ ಮಾಡಿದ್ದ ಆರೋಪಿ ಬಂಧನ – https://kundapraa.com/?p=38849 .
ಇದನ್ನೂ ಓದಿ:
► ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಮಾಡಿದ ಮಾದರಿ ಶಿಕ್ಷಕ ಬಾಬು ಶೆಟ್ಟಿ – https://kundapraa.com/?p=38485 .
► ಉಡುಪಿ ಜಿಲ್ಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಹಿತಿಗಾಗಿ ಸಹಾಯವಾಣಿ – https://kundapraa.com/?p=38453 .
► ಮನೆಯಲ್ಲಿಯೇ ಕುಳಿತು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸೇವೆ ಪಡೆಯುವ ನೂತನ ಯೋಜನೆ ಜಾರಿ – https://kundapraa.com/?p=38501 .