ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮಾಂತರ ಪ್ರದೇಶಗಳಲ್ಲಿಯೇ ನಿಜವಾದ ಕಲೆ ಅರಳುತ್ತವೆ. ಕಲಾ ಕ್ಷೇತ್ರದಲ್ಲಿ ನೈಜ ಕೆಲಸವಾಗುತ್ತಿರುವುದು ಹಳ್ಳಿಗಳಲ್ಲಿಯೇ. ಮಾಡುವ ಕೆಲಸದಲ್ಲಿ ಪ್ರೀತಿ ಹಾಗೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಗುಣವಿದ್ದಲ್ಲಿ ಕಲೆ ಮತ್ತಷ್ಟು ಬೆಳೆಯುತ್ತದೆ ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ. ತ ಚಿಕ್ಕಣ್ಣ ಹೇಳಿದರು. ಅವರು ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸುರಭಿ ರಿ. ಬೈಂದೂರು ಹಾಗೂ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ ನಡೆಯಲಿರುವ ರಂಗ ಸುರಭಿ 2017 ನಾಟಕ ಸಪ್ತಾಹದ ಆಮಂತ್ರಣ ಪತ್ರಿಕೆ ಹಾಗೂ ವಿಡಿಯೋ ಆಮಂತ್ರಣವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗಮಕಿ ಎಂ. ಆರ್. ಸತ್ಯನಾರಾಯಣ, ಬೈಂದೂರು ಸರಕಾರಿ ಮಾದರಿ ಶಾಲೆ ಮುಖ್ಯೋಪದ್ಯಾಯರಾದ ಜನಾರ್ದನ್, ಸುರಭಿ ಬೈಂದೂರು ಅಧ್ಯಕ್ಷ ಶಿವರಾಮ ಕೊಠಾರಿ, ಕಾರ್ಯದರ್ಶಿ ಲಕ್ಷ್ಮಣ ಕೊರಗ, ಸಲಹೆಗಾರರದ ಜಿ. ತಿಮ್ಮಪ್ಪಯ್ಯ ಮೊದಲಾದವರು ಉಪಸ್ಥಿತರಿದ್ದರು. ಯಸ್ಕೋರ್ಡ್ ಟ್ರಸ್ಟ್ನ ನಿರ್ದೇಶಕರಾದ ಸುಧಾಕರ ಪಿ. ಬೈಂದೂರು ಸ್ವಾಗತಿಸಿದರು,…
Author: ನ್ಯೂಸ್ ಬ್ಯೂರೋ
ಕುಂದಾಪ್ರಡಾಟ್ ಕಾಂ ಸುದ್ದಿ. ಬೈಂದೂರು: ರಾಜ್ಯದಲ್ಲಿಕಾಂಗ್ರೆಸ್ ಸರಕಾರಅಧಿಕಾರಕ್ಕೆ ಬಂದ ಬಳಿಕ ವ್ಯವಸ್ಥಿತವಾಗಿ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನುಟಾರ್ಗೆಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ.ಇದನ್ನು ಪ್ರಶ್ನಿಸುವವರನ್ನು ಕಾನೂನಿನ ಮೂಲಕ ಕಟ್ಟಿಹಾಕುವ ಕೆಲಸವನ್ನು ಮಾಡುತ್ತಿದೆಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದಅಧ್ಯಕ್ಷ ಶ್ರೀಧರ ಬಿಜೂರು ಹೇಳಿದರು. ಅವರು ಹೊನ್ನಾವರ ಪರೇಶ್ ಮೇಸ್ತ ಅವರಅನುಮಾನಾಸ್ಪದ ಸಾವು ಹಾಗೂ ರಾಜ್ಯ ಸರಕಾರದ ಹಿಂದೂ ವಿರೋಧಿ ನಿಲುವು ಖಂಡಿಸಿ ಬೈಂದೂರುಆಂಜನೇಯದೇವಸ್ಥಾನದಆವರಣದಲ್ಲಿಜರುಗಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಹಿಂದುಕಾರ್ಯಕರ್ತರು ಹಾಗೂ ಅಮಾಯಕರನ್ನು ಕೊಲೆ ಮಾಡಿ ಬಳಿಕ ಅದನ್ನು ಸಹಜ ಸಾವು ಎಂದು ಬಿಂಬಿಸುವ ಷಡ್ಯಂತ್ರ ನಡೆದಿದೆ. ಹೊನ್ನಾವರದ ಪರೇಶ್ ಮೇಸ್ತನನ್ನು ಹತ್ಯೆಮಾಡಿ ಪ್ರಕರಣವನ್ನು ಮುಚ್ಚಿಹಾಕಲಾಗುತ್ತಿದೆ. ಪ್ರತಿಭಟನೆಯನ್ನುತಡೆದು ಹಿಂದೂಕಾರ್ಯಕರ್ತರ ಬಲ ಕುಗ್ಗಿಸಲು ಸಾಧ್ಯವಿಲ್ಲ. ಹಿಂದೂಕಾರ್ಯಕರ್ತರು ಸಂಘಟಿತರಾಗಿ ಮುಂದುವರಿದು ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕ ಗೋಪಾಲಕೃಷ್ಣ ಕೆ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ತನಕ ಹಿಂದೂಗಳಿಗೆ ರಕ್ಷಣೆ ಇಲ್ಲ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟಿಸುವುದರಿಂದ ಈವರೆಗೆ ನ್ಯಾಯ ದೊರೆತಿಲ್ಲ. ಶಸ್ತ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಕುಟುಂಬಿಕ ರಾಗಿ ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ದೇಗುಲದ ಕಾರ್ಯ ನಿರ್ವಹಣಾಧಿಕಾರಿ ಜನಾರ್ದನ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಸಮಿತಿ ಸದಸ್ಯರಾದ ರಮೇಶ್ ಗಾಣಿಗ ಕೊಲ್ಲೂರು, ನರಸಿಂಹ ಹಳಗೇರಿ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ, ಅರ್ಚಕ ಡಾ| ಕೆ.ಎನ್. ನರಸಿಂಹ ಅಡಿಗ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ ಶೆಟ್ಟಿ, ತಾ.ಪಂ. ಸದಸ್ಯೆ ಗ್ರೀಷ್ಮಾ ಭಿಡೆ, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಸನತ್ ಬಳೆಗಾರ, ವಾಸುದೇವ ಯಡಿಯಾಳ, ದೇವದಾಸ್, ಪಿ.ಎಲ್. ಜೋಸ್, ರಂಗ ನಾಯ್ಕ ಮೊದಲಾದವರು ಸಚಿವರನ್ನು ಸ್ವಾಗತಿಸಿ ಗೌರವಿಸಿದರು. ಮೆಸ್ಕಾಂ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಸಬ್ಸ್ಟೇಶನ್ಗೆ ಮನವಿ ಇದೇ ಸಂದರ್ಭ…
ನೇರಪ್ರಸಾರ: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ’ರೈತ ಸಿರಿ’ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಕೆಳಗಿನ ವೀಡಿಯೋ ಕ್ಲಿಕ್ ಮಾಡಿ ಇದನ್ನೂ ಓದಿ: ► ಲೋಕಾರ್ಪಣೆಗೆ ಸಿದ್ಧಗೊಂಡಿದೆ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡ ‘ರೈತ ಸಿರಿ’ – http://kundapraa.com/?p=26704 ► ಡಿ.14ರಂದು ಖಂಬದಕೋಣೆ ರೈತರ ಸೇವಾ ಸಹಕಾರಿಯ ರೈತ ಸಿರಿ ಲೋಕಾರ್ಪಣೆ: ಎಸ್. ಪ್ರಕಾಶ್ಚಂದ್ರ ಶೆಟ್ಟಿ – http://kundapraa.com/?p=26699
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದ ರಾಣಿಬಲೆ ಮೀನುಗಾರರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಬೆಳ್ಳಿರಥ ಸಮರ್ಪಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಡಿ. 20ರ ಬುಧವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಬೆಳ್ಳಿರಥ ಸಮರ್ಪಣೆ ಮಾಡಲಿದ್ದಾರೆ ಎಂದು ರಾಣಿಬಲೆ ಮೀನುಗಾರರ ಒಕ್ಕೂಟ ರಿ. ಉಪ್ಪುಂದ ಇದರ ಅಧ್ಯಕ್ಷ ವೆಂಕಟರಮಣ ಖಾರ್ವಿ ತಿಳಿಸಿದರು. ಅವರು ಉಪ್ಪುಂದದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೂರು ವರ್ಷಗಳ ಹಿಂದೆ ಮತ್ಸ್ಯಕ್ಷಾಮ ಉಂಟಾದ ಸಂದರ್ಭ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ರಾಣಿಬಲೆ ಮೀನುಗಾರರು ಬೆಳ್ಳಿ ರಥ ಸಮರ್ಪಿಸುವ ಹರಕೆ ಹೊತ್ತಿದ್ದರು. ಅದರಂತೆ ಪ್ರತಿವರ್ಷ ಬಂದ ಲಾಭದಲ್ಲಿ ಶೇ.1ರಷ್ಟು ಮೊತ್ತವನ್ನು ಬೆಳ್ಳಿರಥ ನಿರ್ಮಾಣಕ್ಕಾಗಿ ಮೀಸಲಿಟ್ಟು ಬೆಳ್ಳಿರಥ ನಿರ್ಮಾಣ ಮಾಡಲಾಗಿದೆ ಎಂದರು. ಸುಮಾರು ೪೫ಲಕ್ಷ ವೆಚ್ಚದಲ್ಲಿ ರಥಶಿಲ್ಪಿ ಬಿ. ಲಕ್ಷ್ಮೀನಾರಾಯಣ ಆಚಾರ್ಯ ಅವರಿಂದ ಬೆಳ್ಳಿರಥ ನಿರ್ಮಾಣಗೊಂಡಿದೆ. ಬೆಳ್ಳಿರಥ ಸಮರ್ಪಣಾ ಕಾರ್ಯಕ್ರಮಕ್ಕೆ ಸುಮಾರು ಹದಿನೈದು ಸಾವಿರ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ನೂತನ ಬೆಳ್ಳಿರಥ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ರೈತ ಸಿರಿ ಲೋಕಾರ್ಪಣೆಗೆ ಸಜ್ಜುಗೊಂಡಿದ್ದು ಡಿ.14ರ ಗುರುವಾರ ಭವ್ಯ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಳ್ಳಲಿದೆ. ರಾಜ್ಯ ಸಹಕಾರ ಸಚಿವ ರಮೇಶ ಜಾರಕಿಹೋಳಿ ಉದ್ಘಾಟಿಸಲಿದ್ದು, ಪ್ರಧಾನ ಕಛೇರಿಯನ್ನು ಮೀನುಗಾರಿಕೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಬ್ಯಾಂಕಿಂಗ್ ವಿಭಾಗವನ್ನು ಕ.ರಾ.ಸ.ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ವಹಿಸಲಿದ್ದಾರೆ. ರೈತಸಿರಿ ಸಭಾಭವನವನ್ನು ಶಾಸಕ ಕೆ.ಗೋಪಾಲ ಪೂಜಾರಿ, ರೈತರ ಉತ್ಪತ್ತಿ ದಾಸ್ತಾನು ಮತ್ತು ಕೃಷಿ ಸಲಕರಣೆ ಮಳಿಗೆಯನ್ನು ಮಾಜಿ ಸಚಿವ ವಿನಯಕುಮಾರ ಸೊರಕೆ, ನ್ಯಾಯಬೆಲೆ ಅಂಗಡಿಯನ್ನು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ನೂತನ ಗಣಕೀಕರಣ ಕೇಂದ್ರವನ್ನು ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ, ಭದ್ರತಾ ಕೋಶವನ್ನು ದ.ಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ ಜ್ಞಾನಗಂಗಾ-೨ ಕಾರ್ಯಕ್ರಮ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಪ್ರತಿ ತಿಂಗಳು ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ಬೋಧನೆಯು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗೇಶ ಶೆಣೈ ಯಳಜಿತ್ ಅವರು ಗೀತೆಯ ೬ನೇ ಅಧ್ಯಾಯ ’ಆತ್ಮ ಸಂನ್ಯಾಸ ಯೋಗ’ದ ಬಗ್ಗೆ ಮಾತನಾಡಿದರು. ಸನ್ಯಾಸ ಆಶ್ರಮದಲ್ಲದೆ ಎಲ್ಲಾ ಆಶ್ರಮಗಳಲ್ಲಿ ತಮ್ಮ ಕರ್ತವ್ಯ ಸಾಧನೆಯಿಂದ ಮುಕ್ತಿಯನ್ನು ಹೊಂದಲು ಸಾಧ್ಯ ಇದೆ ಎಂದು ಹೇಳಿದರು. ತ್ಯಾಗದ ಮೂಲಕ ಆಧ್ಯಾತ್ಮದ ತುತ್ತತುದಿಯನ್ನು ತಲುಪಬಹುದೆಂದು ಕೆಲವು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಜ್ಞಾನಗಂಗಾ ಕಾರ್ಯಕ್ರಮದ ವಿದ್ಯಾರ್ಥಿಗಳಾದ ಜಿ.ವಜ್ರೇಶ ಶೆಣೈ, ಎನ್.ಪದ್ಮಶ್ರೀ ಕಿಣಿ, ಪೂರ್ವಿ ಚಿತ್ತಾಲ್ ಮತ್ತಿತರರು ಭಗವದ್ಗೀತಾ ಕಂಠಪಾಠವನ್ನು ನಡೆಸಿ ಶ್ಲೋಕಗಳ ಅರ್ಥವನ್ನು ತಿಳಿಸುವ ಪ್ರಯತ್ನ ನಡೆಸಿ ಪ್ರಶಂಸೆಗೆ ಪಾತ್ರರಾದರು. ಇದೇ ಸಂದರ್ಭ ಸಭಿಕರಿಂದ ಗೀತೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಲ್ಟೋ ಕಾರು ಹಾಗೂ ಇನ್ಸುಲೇಟರ್ ವಾಹನದ ನಡುವಿನ ಭೀಕರ ಅಪಘಾತದಲ್ಲಿ ತಾಯಿ ಹಾಗೂ ಮಗ ದಾರುಣವಾಗಿ ಮೃತಪಟ್ಟದ ಘಟನೆ ಕೋಟ ಮೂರುಕೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಬಾರಕೂರು ಬೆಣ್ಣೆಕುದ್ರು ನಿವಾಸಿಗಳಾದ ಗಿರಿಜಾ (52) ಹಾಗೂ ಅವರ ಮಗ ಅವಿನಾಶ್ (27) ಮೃತ ದುರ್ದೈವಿಗಳು. ಘಟನೆಯನ್ನು ಕಾರಿನಲ್ಲಿದ್ದ ಮತ್ತಿರ್ವರು ಗಂಭೀರ ಗಾಯಗೊಂಡಿದ್ದಾರೆ. ಆರತಕ್ಷತೆ ಕಾರ್ಯಕ್ರಮಕ್ಕಾಗಿ ಮನೆಯಿಂದ ಕೋಟದ ಕಾಸನಗುಂದುವಿಗೆ ತೆರಳುತ್ತಿದ್ದ ವೇಳೆ ಕೋಟ ಮೂರುಕೈ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪದ ಕಾರು ವಿಭಾಜಕವೇರಿ ಎದುರಿನಿಂದ ಬರುತ್ತಿದ್ದ ಕಂಟೇನರ್ಗೆ ಡಿಕ್ಕಿಯಾಗಿತ್ತು. ಕಾರು ಚಲಾಯಿಸುತ್ತಿದ್ದ ಅವಿನಾಶ್ ಹಾಗೂ ಅವರ ಪಕ್ಕದಲ್ಲಿ ಕುಳಿತಿದ್ದ ಅವರ ತಾಯಿ ಸ್ಥಳದಲ್ಲಿಯೇ ಮೃತಪಟ್ಟರೇ, ಹಿಂಬಂದಿ ಸೀಟಿನಲ್ಲಿ ಕುಳಿತ ಇಬ್ಬರ ಪೈಕಿ ಓರ್ವರ ಸ್ಥತಿ ಚಿಂತಾಜನಕವಾಗಿದ್ದು, ಇನ್ನೊರ್ವರು ಗಂಭೀರ ಗಾಯಗೊಂಡಿದ್ದಾರೆ. ಮೃತ ಅವಿನಾಶ್ ವಿದೇಶದಲ್ಲಿ ಕಾರ್ ಮೆಕ್ಯಾನಿಕ್ ಆಗಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಲಿ., ಉಪ್ಪುಂದ ಇದರ ನೂತನ ಕಟ್ಟಡ ರೈತಸಿರಿ ಲೋಕಾರ್ಪಣೆಗೆ ಸಜ್ಜುಗೊಂಡಿದ್ದು ಡಿ.೧೪ರ ಬುಧವಾರ ಭವ್ಯ ಕಾರ್ಯಕ್ರಮದೊಂದಿಗೆ ಉದ್ಘಾಟನೆಗೊಳ್ಳಲಿದ್ದು, ವಿವಿಧ ಕ್ಷೇತ್ರದ ಗಣ್ಯರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಸಭಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು. ಅವರು ಉಪ್ಪುಂದದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ರಾಜ್ಯ ಸಹಕಾರ ಸಚಿವ ರಮೇಶ ಜಾರಕಿಹೋಳಿ ಉದ್ಘಾಟಿಸಲಿದ್ದು, ಪ್ರಧಾನ ಕಛೇರಿಯನ್ನು ಮೀನುಗಾರಿಕೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ ಮಧ್ವರಾಜ್ ಉದ್ಘಾಟಿಸಲಿದ್ದಾರೆ. ಬ್ಯಾಂಕಿಂಗ್ ವಿಭಾಗವನ್ನು ಕ.ರಾ.ಸ.ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ವಹಿಸಲಿದ್ದಾರೆ. ರೈತಸಿರಿ ಸಭಾಭವನವನ್ನು ಶಾಸಕ ಕೆ.ಗೋಪಾಲ ಪೂಜಾರಿ, ರೈತರ ಉತ್ಪತ್ತಿ ದಾಸ್ತಾನು ಮತ್ತು ಕೃಷಿ ಸಲಕರಣೆ ಮಳಿಗೆಯನ್ನು ಮಾಜಿ ಸಚಿವ ವಿನಯಕುಮಾರ ಸೊರಕೆ, ನ್ಯಾಯಬೆಲೆ ಅಂಗಡಿಯನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಕಾಲೇಜು ಕಟ್ಟಡ ಅಭಿವೃದ್ಧಿ ಕಾಮಗಾರಿಗೆ 7.75 ಕೋಟಿ ಅನುದಾನ ಮಂಜೂರಾಗಿದ್ದು, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಗುದ್ದಲಿಪೂಜೆ ನೆರವೇರಿಸಿದ ಕಾಮಗಾರಿಗಳ ವಿವರ: ಎಡಮೊಗ್ಗೆ ಗ್ರಾ.ಪಂ ಕಮಲಶಿಲೆ ಮುಖ್ಯ ರಸ್ತೆ ಬಡಾಮನೆ ಮಂಗಳಮಕ್ಕಿ ಪ.ಪಂಗಡ ಕಾಲನಿ ರಸ್ತೆ ಅಬಿವೃದ್ದಿ ರೂ 25.00 ಲಕ್ಷ ಸಿದ್ದಾಪುರ –ಹಳ್ಳಿಹೊಳೆ –ಜಡ್ಕಲ್ ರಸ್ತೆ ಕಿ,ಮೀ 0.00 ರಿಂದ 2.00 ವರಗೆ ನಮೀಕರಣ ರೂ 44.00 ಲಕ್ಷ ಸೌಡ –ಸಿದ್ದಾಪುರ ರಸ್ತೆ ಕಿ.ಮೀ 10.00 ರಿಂದ 10.30 ರವರಗೆ ಅಬಿವೃದ್ದಿ ರೂ 50.00 ಲಕ್ಷ ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಅಭಿವೃದ್ದಿ ರೂ 151.00 ಲಕ್ಷ ಸೌಡ ಸಿದ್ದಾಪುರ ರಸ್ತೆ ಅಬಿವೃದ್ದಿ (ಕಿ.ಮೀ 0.00 ರಿಂದ 1.75 ಮತ್ತು 1.75 ಮತ್ತು 2.40 ರಿಂದ 5.05 ವರಗೆ) ರೂ 225.00…
