Author: ನ್ಯೂಸ್ ಬ್ಯೂರೋ

ಡಿ.9ರಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಇಂಟೆಕ್ ಸಮಾವೇಶ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ವಿಧಾಸಭಾ ಕ್ಷೇತ್ರ ಕಾರ್ಮಿಕರ ಒಗ್ಗೂಡಿಸುವಿಕೆ ಮತ್ತು ಕಾರ್ಮಿಕರಿಗೆ ಸರಕಾರದಿಂದ ನೀಡಲಾಗುತ್ತಿರುವ ಸಲವತ್ತುಗಳ ಬಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಡಿ.9ರಂದು ಇಲ್ಲಿನ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ವಿಧಾಸಭಾ ಕ್ಷೇತ್ರದ ಇಂಟೆಕ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಇಂಟೆಕ್ (ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್) ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು. ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನ ಇಂಟೆಕ್ಸಂಘಟನೆಯ ಮೂಲಕ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸರಕಾರದಿಂದ ದೊರಕಿಸಿ ಕೊಡಬೇಕಾದ ಸವಲತ್ತುಗಳನ್ನು ನೇರವಾಗಿ ದೊರೆಯುವಲ್ಲಿ ಶ್ರಮಿಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರಕಾರವೂ ದುಡಿಯುವ ವರ್ಗದ ಶ್ರೇಯೋಭಿವೃದ್ಧಿಗೆ ಹಲವಾರು ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಸಮಾವೇಶದ ಮೂಲಕ ಕಾರ್ಮಿಕರಿಗೆ ದೊರೆಯುತ್ತಿರುವ ಸವಲತ್ತುಗಳ ಬಗೆಗೆ ಮಾಹಿತಿ ನೀಡಲಾಗುವುದು ಎಂದವರು ತಿಳಿಸಿದರು. ಸಮಾವೇಶವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಮರವಂತೆ ಮಾರಿಕಾಂಬಾ ದೇವಸ್ಥಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ, ಪ್ರಸಂಗ ಕರ್ತ ಬಸವರಾಜ ಶೆಟ್ಟಿಗಾರ್ ಅವರು ಬರೆದ ’ಮರವಂತೆ ಮಾರಿಕಾಂಬಾ ಮಹಾತ್ಮೆ’ ಎಂಬ ಯಕ್ಷಗಾನ ಪ್ರಸಂಗದ ಬಿಡುಗಡೆ ನಡೆಯಿತು. ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಧಾರ್ಮಿಕ ಕೇಂದ್ರದ ಇತಿಹಾಸ ಮತ್ತು ಸ್ಥಳಪುರಾಣವನ್ನು ಆಧಾರವಾಗಿಟ್ಟುಕೊಂಡು ಯಕ್ಷಗಾನ ಪ್ರಸಂಗ ರಚಿಸಿದರೆ ಅದಕ್ಕೆ ಭಾರಿ ಜನಪ್ರಿಯತೆ ಲಭಿಸಿದ ಉದಾಹರಣೆಗಳಿವೆ. ಕ್ಷೇತ್ರದ ಪ್ರಚಾರ ಮತ್ತು ಧಾರ್ಮಿಕ ಶ್ರದ್ದೆಯ ಉದ್ದೀಪನವೂ ಅದರಿಂದ ನಡೆಯುತ್ತದೆ ಎಂದರು. ಶೆಟ್ಟಿಗಾರರ ೫೦ನೆ ಪ್ರಸಂಗವಾಗಿ ಮೂಡಿಬಂದ ಪ್ರಸ್ತುತ ಪ್ರಸಂಗವು ಯಶಸ್ವಿಯಾಗಲಿ ಎಂದು ಹಾರೈಸಿದರು. ದೇವಳ ಸಮಿತಿ ಅಧ್ಯಕ್ಷ ನರಸಿಂಹ ದೇವಾಡಿಗ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟಟಿ ಅಭಿನಂದನ ಭಾಷಣ…

Read More

ಕುಂದಾಪ್ರ ಡಾಟ್ ಕಾಂ ವರದಿ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದು. ಕರಾವಳಿಯ ಗಂಡುಕಲೆ ಯಕ್ಷ ಗಾನ ಅಮ್ಮನವರಿಗೆ ಸಲ್ಲಿಸುವ ಪ್ರಸಿದ್ಧ ಸೇವೆ. ಬೆಳಕಿನ ಸೇವೆ ಎಂದೂ ಕರೆಯುತ್ತಾರೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷ ಗಾನ ಮೇಳಕ್ಕೆ ಸುಮಾರು 600 ವರ್ಷಗಳ ಪರಂಪರೆಯಿದೆ. ಇದೇ ಪ್ರಥಮ ಬಾರಿಗೆ ಮಳೆಗಾಲದಲ್ಲಿ ಆಯೋಜಿಸಿದ್ದ ಸೇವೆ ಆಟ ಯಶಸ್ವೀ 95 ದಿನಗಳ ಕಾಲ ನಡೆದು, 2017-18ನೇ ಸಾಲಿನ ಮೇಳಗಳ ತಿರುಗಾಟಕ್ಕೆ ಭಾನುವಾರ ಚಾಲನೆ ದೊರೆಯಲಿದೆ. 2017-18ನೇ ಸಾಲಿನ ಮಂದಾರ್ತಿಯ 5 ಮೇಳಗಳ ತಿರುಗಾಟ ನ.19ರಂದು ಪ್ರಾರಂಭಗೊಂಡಿದೆ. 14 ಸಾವಿರ ಆಟ ಬುಕ್‌: ಈಗಾಗಲೇ 2039-40ನೇ ಸಾಲಿನ ತನಕ ಭಕ್ತರು ಹರಕೆಯಾಟವನ್ನು ನೋಂದಣಿ ಮಾಡಿಕೊಂಡಿದ್ದಾರೆ. ಅಂದರೆ ಸುಮಾರು 14 ಸಾವಿರದಷ್ಟು ಸೇವೆಯಾಟಗಳು ಮುಂಚಿತವಾಗಿಯೇ ನೋಂದಾಯಿಸ್ಪಟ್ಟಿದೆ. ಮಳೆಗಾಲದ ತಿರುಗಾಟ ಹೊರತುಪಡಿಸಿ 5 ಮೇಳಗಳಿಂದ ವರ್ಷದಲ್ಲಿ 900 ಆಟ ಜರುಗಲಿದೆ. ಪ್ರಥಮ ದೇವರ ಸೇವೆ ಆಟ: ಮಂದಾರ್ತಿ ಸಮೀಪದ ಬಾರಾಳಿ ಶ್ರೀ ಗಣಪತಿ ದೇಗುಲದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವೈದ್ಯಕೀಯ ಸೇವೆ ಜಗತ್ತಿನಲ್ಲಿ ಅತ್ಯುನ್ನತವಾದ ಸೇವೆ ಎಂದು ಪರಿಗಣಿಸಲ್ಪಟ್ಟಿದೆ. ವೈದ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ರಾಜ್ಯ ಸರಕಾರ ತರಲುದ್ದೇಶಿಸಿದ ವಿಧೇಯಕಗಳಲ್ಲಿ ಶುಲ್ಕ ಕಡಿತಗೊಳಿಸುವ ವಿಚಾರಗಳಷ್ಟೆ ಎಂದು ಜನ ಭಾವಿಸಿದ್ದರು ಆದರೆ ವೈದ್ಯ ಸಮೂಹಕ್ಕೆ ಭಾದಕವಾಗುವಂತ ಹಲವಾರು ಸಂಗತಿಗಳು ಅದರಲ್ಲಿ ಅಡಕವಾಗಿರುವುದನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ವೈದ್ಯಕೀಯ ಸಂಘ ಮಾಡಬೇಕಿತ್ತು ಎಂದು ಕೆಎಂಸಿ ಮಣಿಪಾಲದ ಇಎನ್‌ಟಿ ವಿಭಾಗದ ಪ್ರೋಫೆಸರ್ ಡಾ. ಬಾಲಕೃಷ್ಣನ್ ಹೇಳಿದರು. ಅವರು ಸಹನಾ ಕನ್‌ವೆನ್‌ಶನ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಘಟಕದ ನೂತನ ಸಾಲಿನ ಅಧ್ಯಕ್ಷರು, ಪದಾಧಿಕಾರಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವ್ಯದ್ಯಕೀಯ ನಿರ್ದೇಶಕರಾದ ಡಾ. ಸತೀಶ ಪೂಜಾರಿ ಅವರು ನೂತನ ಅಧ್ಯಕ್ಷರಾಗಿ ಪದಪ್ರದಾನ ಸ್ವೀಕರಿಸಿ, ಪ್ರತಿಷ್ಠಿತ ಐಎಂಎ ಕುಂದಾಪುರದ ಸರ್ವಸದಸ್ಯರ ವಿಶ್ವಾಸಗಳಿಸಿ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುವುದಾಗಿ ತಿಳಿಸಿದರು. ಐಎಂಎ ಸೆಂಟ್ರಲ್ ಕೌನ್ಸಿಲ್ ಸದಸ್ಯರಾದ ಡಾ. ಕೆ.ಎಸ್.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯಕ್ಕೆ ಬುನಾದಿಯನ್ನೊದಗಿಸಿದೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು. ಈ ಕಾಲೇಜಿನ ಸಂಸ್ಥಾಪಕರಾದ ಡಾ.ಟಿ.ಎಂ.ಎ ಪೈ ಹಾಗೂ ಡಾ.ಎ.ಎಸ್. ಭಂಡಾರ್‌ಕಾರ್ ಅವರು ಅಂದು ಶಿಕ್ಷಣಕ್ಕಾಗಿ ಹಾಕಿಕೊಟ್ಟ ಮಾರ್ಗ ಇಂದು ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು. ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂಸ್ಥಾಪಕರ ಸಂಸ್ಮರಣೆ ೨೦೧೭ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಟಿ.ಎಂ.ಎ. ಪೈ ಅವರು ಯಾವ ಕಾಲದಲ್ಲಿಯೂ ರಾಜಕೀಯ ಪ್ರವೇಶಿಸಿದವರಲ್ಲ. ಅವರ ಧ್ಯೇಯ ಕೇವಲ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದಾಗಿತ್ತು. ಅವರ ಈ ಉತ್ತಮ ಉದ್ದೇಶದಿಂದ ಅಲ್ಲಲ್ಲಿ ನಿರ್ಮಾಣವಾಗಿರುವ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಹಲವರ ಪಾಲಿಗೆ ಬೆಳಕಾಗಿ ಮೂಡಿಬಂದಿದೆ. ಅನಕ್ಷರತೆ, ಅನಾರೋಗ್ಯ, ಬಡತನ ಇವುಗಳು ಮನುಷ್ಯರ ಪಾಲಿಗೆ ಯಾವಾಗಲೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಒಂದೆ ಮಾತರಂ ಗೀತೆಯಿಂದ ಈ ದೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವಿದೆ ಎಂದು ಕೋಟದ ಹೋಟೆಲ್ ಉದ್ಯಮಿ ಕೆ ವೆಂಕಟೇಶ ಪ್ರಭು ಹೇಳಿದ್ದಾರೆ ಶುಕ್ರವಾರ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಪಾರಂಭಗೊಂಡ ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಕೋಟ ವಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶಕ್ಕೆ ನಮ್ಮವರಿಂದಲೆ ಸಮಸ್ಯೆ ಎದುರಿಸುತ್ತಿದ್ದೇವೆ ಅದು ನಮ್ಮ ಭಕ್ತಿಯ ಕೇಂದ್ರವಾದ ಶಬರಿಮಲೈ ದಿವ್ಯ ಜ್ಯೋತಿಯ ವಿಚಾರವಾಗಿ ಅನುಮಾನ ಹುಟ್ಟಿಸುವ ವಾತಾವರಣ ನಿರ್ಮಾಣಗೈಯುತ್ತಿರುವುದು ಅಲ್ಲದೆ ನಮ್ಮ ಬೇರೆ ಬೇರೆ ವಿಚಾರದಲ್ಲೂ ಇದೇ ರೀತಿಯ ಸಮಸ್ಯೆ ಸೃಷ್ಟಿಸುತ್ತಾರೆ ಇದಕ್ಕೆ ಆಸ್ಪದ ಕೊಡಬಾರದು ಇದರ ಬಗ್ಗೆ ಹಿಂದೂ ಧರ್ಮ ಜಾಗೃತರಾಗಬೇಕಿದೆ ಎಂದರು. ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದ ಭಗತ್ ಸಿಂಗ್ ಕ್ರಾಂತಿಕಾರಿ ಬಳಗದ ಧನಂಜಯ ಕುಂದಾಪುರ ಈ ದೇಶದಲ್ಲಿ ಮೂಲವಾಗಿ ಕಾಡುತ್ತಿರುವ ಭಯೋತ್ಪಾದನೆ ,ಮತ್ತಾಂತರ,ಲವ್ ಜಿಹಾದ್ ,ಲ್ಯಾಂಡ್ ಜಿಹಾದ್‌ನಿಂದ ಎದುರಾಗುತ್ತಿರುವ ಸಮಸ್ಯೆಗಳ ವಿರುದ್ಧ ಯಾವ ಸರಕಾರಗಳು ಧ್ವನಿ ಎತ್ತುವುದಿಲ್ಲ ಕ್ರಮಗಳು ಜರಗಿಸುವುದಿಲ್ಲ ಬರೆ ಓಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರಿನ ಪ್ರಥಮ ಸರ್ವಸುಸಜ್ಜಿತ ವಸತಿ ಸಮುಚ್ಚಯದ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಶ್ರೀ ಸೌಪರ್ಣಿಕಾ ಡೆವೆಲಪರ‍್ಸ್ ಹಾಗೂ ಮಹಾವೀರ ಕನ್ಸ್ಟ್ರಕ್ಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿರುವ ’ಓಂ ಮಹಾವೀರ’ ಅಪಾರ್ಟ್‌ಮೆಂಟ್‌ಗೆ ಬಹಳ ಬೇಡಿಕೆ ಇದ್ದು, ಎಲ್ಲಾ ಫ್ಲಾಟ್‌ಗಳು ಮುಂಗಡವಾಗಿ ಬುಕ್ ಆಗಿದೆ. ಕ್ಷೀಪ್ರಗತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮೊದಲ ಅಂತಸ್ತು ಪೂರ್ಣಗೊಂಡು ಎರಡನೇ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ. ಬೈಂದೂರು ಗಂಗಾನಾಡು ರಸ್ತೆಯ ಭರತ್ ನಗರದಲ್ಲಿ ನಿರ್ಮಾಣವಾಗುತ್ತಿರುವ ೧ ಬಿಹೆಚ್‌ಕೆ ಹಾಗೂ ೨ ಬಿಹೆಚ್‌ಕೆ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿ ವಿಶೇಷ ಮುತುವರ್ಜಿಯೊಂದಿಗೆ ಸಾಗುತ್ತಿದೆ. ಉತ್ತಮ ಗುಣಮಟ್ಟದ ನಿರ್ಮಾಣ ಪರಿಕರಗಳನ್ನು ಉಪಯೋಗಿಸಿ ಅಚ್ಚುಕಟ್ಟಾಗಿ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿಯ ಪ್ರತಿ ಹಂತದ ಪ್ರಗತಿ ಹಾಗೂ ಗುಣಮಟ್ಟವನ್ನು ಪರೀಕ್ಷಿಸಲು ಅನುಭವಿ ಮೇಲ್ವಿಚಾರಕರು ಇರುವುದಲ್ಲದೇ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೇಗಿರುತ್ತೆ ಅಪಾರ್ಟ್‌ಮೆಂಟ್: * ವಾಸ್ತುವಿಗೆ ಸರಿಹೊಂದುವ ಪ್ಲಾಟ್ * ವಿಶಾಲ ಪಾರ್ಕಿಂಗ್ ಸೌಲಭ್ಯ * ಎಲ್ಲಾ ಕಾಲದಲ್ಲೂ ಸಮೃದ್ಧ ನೀರಿನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ಥಳಿಯ ಪ್ರತಿಭೆಗಳಿಗೆ ಅವಕಾಶ ಕೊಡುವುದು ದೊಡ್ಡ ಕೆಲಸ. ಮಕ್ಕಳಿಗೆ ಕೊಡಬೇಕಾಗಿರುವುದು ಅವಕಾಶವೇ ಹೊರತು ಬಹುಮಾನವಲ್ಲ. ಕಲೆಯ ಉದ್ದೇಶ ಇನ್ನಷ್ಟು ಮಾನವೀಯರಾಗುವುದು, ಸಮಾಜಶೀಲರಾಗುವುದು ಮತ್ತು ಆ ಮೂಲಕ ದೇಶ ಸೇವೆಗೆ ತೊಡಗಿಕೊಳ್ಳುವಂತೆ ಮಾಡುವುದೇ ಆಗಿದೆ ಎಂದು ಆಕಾಶವಾಣಿ ಕಲಾವಿದ ಚಂದ್ರಶೇಖರ ಕೆದ್ಲಾಯ ಅಭಿಪ್ರಾಯಪಟ್ಟರು. ನಾಗೂರಿನ ಕುಸುಮ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೂರನೇ ಆವೃತ್ತಿಯ ಕುಸುಮಾಂಜಲಿ-2017ರ ’ಗಾನಕುಸುಮ’ ಸಂಗೀತ ಸ್ಪರ್ಧಾಳುಗಳ ಅಯ್ಕೆ (ಅಡಿಶನ್ ರೌಂಡ್) ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮತನಾಡಿದರು. ಇಂದು ಮಕ್ಕಳ ತಲೆಮೇಲೆ ಬೇಡದ ಹೊರೆಯನ್ನು ಹೊರಿಸಿ ಅವರಲ್ಲಿನ ಲವಲವಿಕೆ, ಭಾವನಾತ್ಮಕೆಯನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಎಲ್ಲದಲ್ಲೂ ಪ್ರತಿಫಲಾಕ್ಷೆ ಬಯಸುತ್ತಿರುವುದು ಹೊಸ ತಲೆಮಾರಿನ ಮಕ್ಕಳನ್ನು ಕಂಗೆಡಿಸಿಬಿಟ್ಟಿದೆ. ಸಂಗೀತ ಮನಸ್ಸು ಹಗುರಗೊಳಿಸುವ ಮೂಲಕ ಭಾವನೆಗಳನ್ನು ಹೆಚ್ಚಿಸಿ ಮೆಚ್ಚಿಸಲು ಸಹಕಾರಿಯಗುತ್ತದೆ ಎಂದರು. ಕುಸುಮಾ ಗೂಪ್ ಪ್ರವರ್ತಕ ನಳಿನ್‌ಕುಮಾರ್ ಶೆಟ್ಟಿ ಪ್ರಾಸ್ತಾವಿಸಿ, ತಾಲೂಕಿನ ಪ್ರತಿಭಾನ್ವಿತ ಕಲಾವಿದರನ್ನು, ಗಾಯಕರನ್ನು ಗುರುತಿಸಿ ಪ್ರೋತ್ಸಾಸುವ ಸಂಕಲ್ಪದೊಂದಿಗೆ ಸಂಸ್ಥೆ ತನ್ನ ಮೂರನೇ ಗಾನಕುಸುಮ ಅವೃತ್ತಿಯನ್ನು ಪ್ರಾರಂಭಿಸಲಾಗುತ್ತಿದೆ. ಸ್ಪರ್ಧೆಯು ಮೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತಿಹಾಸ ಪ್ರಸಿದ್ಧ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಮನ್ಮಹಾ ರಥೋತ್ಸವ ಉಪ್ಪುಂದ ಕೊಡಿಹಬ್ಬ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ತಂತ್ರಿಗಳ ನೇತೃತ್ವದಲ್ಲಿ ದೇವಳದಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಭೂತ ಬಲಿ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಸಭಾಭವನದಲ್ಲಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಬಳಿಕ ದೇವಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಬಹಿರಂಗ ಹರಾಜು ಮಾಡಲಾಯಿತು. ವಿಶೇಷ ಆಸಕ್ತಿಯಿಂದ ಹೆಚ್ಚಿನ ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಸೀರೆಗಳನ್ನು ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ರಥ ಎಳೆದು ಸಂಭ್ರಮಿಸಲಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದ್ವಿತೀಯ ಜಾತ್ರೆ ಉಪ್ಪುಂದ ಕೊಡಿಹಬ್ಬವಾಗಿದ್ದು, ಇಲ್ಲಿನ ಗ್ರಾಮದೇವತೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ತಮ್ಮ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ರಾತ್ರಿ ದೇವರ ಅವಭ್ರತಸ್ನಾನ ನಡೆಯಲಿದೆ. ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಧನುರ್ ಲಗ್ನ ಸುಮೂಹರ್ತದಲ್ಲಿ ಭಾನುವಾರ ಬೆಳಗ್ಗೆ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿಗಳು ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ದೇವಳದ ರಥೋತ್ಸವದ ಸಂದರ್ಭ ಗರುಡ ದರ್ಶನ ಆಗುವುದು ವಾಡಿಕೆ. ಸಂಜೆಯ ರಥೋತ್ಸವಕ್ಕೆ ಚಾಲನೆ ಸಿಗುತ್ತಿರುವಂತೆಯೇ ಗರುಡ ದರ್ಶನ ಆಗಿದ್ದು ರಥಕ್ಕೆ ಎರಡು ಸುತ್ತು ಬಂದು ನಿರ್ಗಮಿಸಿದೆ. ಗರುಡದರ್ಶನ ವೀಕ್ಷಿಸಲು ಸಹಸ್ರಾರು ಭಕ್ತರು ನೆರೆದಿದ್ದು ಗರುಡ ರಥಕ್ಕೆ…

Read More