ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಹದ ಅತೀ ಮುಖ್ಯ ಅಂಗವಾಗಿರುವ ಕಣ್ಣುಗಳ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ನೇತ್ರ ತಪಾಸಣಾ ಶಿಬಿರಗಳು ಸಹಕಾರಿಯಾಗಿದೆ. ದೇಶದಲ್ಲಿ ಲಕ್ಷಾಂತರ ಜನರು ಕಣ್ಣಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಈ ನೆಲೆಯಲ್ಲಿ ಅಂಧತ್ವ ನಿವಾರಣಾ ಅಭಿಯಾನಕ್ಕೆ ಸ್ವಯಂಪ್ರೇರಿತ ನೇತ್ರದಾನಿಗಳು ಕೈಜೋಡಿಸಬೇಕು ಎಂದು ಕೋಟ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೂಪಶ್ರೀ ಹೇಳಿದರು. ದೊಂಬೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆ, ಲಯನ್ಸ್ ಟ್ರಸ್ಟ್ ಫಾರ್ ಸರ್ವಿಸಸ್ ಮತ್ತು ಚಾರಿಟೀಸ್ ಕೋಟ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ, ಉಡುಪಿ ವಿಜಯ್ ಬ್ಯಾಂಕ್ ರಿಟಾಯರ್ಡ್ ಆಫೀಸರ‍್ಸ್ ವೆಲ್‌ಫೇರ್ ಸೋಷಿಯಲ್ ಸೆಂಟರ್, ಮಾರಿಕಾಂಬಾ ಯೂತ್ ಕ್ಲಬ್ ಹವ್ಯಾಸಿ ಕಲಾತಂಡ ಕಳವಾಡಿ-ಬೈಂದೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ವಯಸ್ಸಾದಂತೆ ಕಣ್ಣಿನ ಮಸೂರ…
Author: ನ್ಯೂಸ್ ಬ್ಯೂರೋ
ಉತ್ತಮ ಕಥೆಯ ಸಿನೆಮಾ ಮಾತ್ರ ಬದುಕಿಗೆ ಹತ್ತಿರವಾಗುತ್ತೆ,: ರಾಜ್ ಬಿ. ಶೆಟ್ಟಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಕರಾವಳಿಯ ಹಲವಾರು ಪ್ರತಿಭೆಗಳು ತೊಡಗಿಸಿಕೊಂಡಿದ್ದು, ತಮ್ಮದೇ ಭಿನ್ನ ಶೈಲಿಯ ಮೂಲಕ ಚಿತ್ರರಸಿಕರ ಮನದಲ್ಲಿ ನೆಲೆಯಾಗಿದ್ದಾರೆ. ಸಿನೆಮಾ ರಂಗದಲ್ಲಿ ಶ್ರಮವಹಿಸಿ ಸಾಧನೆಗೈದ ವ್ಯಕ್ತಿಗಳ ಮಾರ್ಗದರ್ಶನ ದೊರೆತರೆ ಸಿನೆಮಾದಲ್ಲಿ ತೊಡಗಿಸಿಕೊಳ್ಳುವವರಿಗೆ ಭವಿಷ್ಯದಲ್ಲಿ ಉತ್ತಮ ದಾರಿಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಹನ ಗ್ರೂಫ್ಸ್‌ನ ಮಾಲಿಕ ಸುರೇಂದ್ರ ಶೆಟ್ಟಿ ಹೇಳಿದರು. ಅವರು ಭಾನುವಾರ ಇಲ್ಲಿನ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾಣಿ ಸ್ಟೂಡಿಯೋ ಆಶ್ರಯದಲ್ಲಿ ಜರುಗಿದ ’ಪಿಚ್ಚರ್ ಡೈರಿಸ್’ ಸಿನೆಮಾ ತಯಾರಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಒಂದು ಮೊಟ್ಟೆಯ ಕಥೆ ಸಿನೆಮಾದ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಮಾತನಾಡಿ ಇಂದಿನ ಬಹುತೇಕ ಕಿರುಚಿತ್ರಗಳಿಗೆ ನಿರ್ದಿಷ್ಟವಾದ ಉದ್ದೇಶವೇ ಇರುವುದಿಲ್ಲ. ಹಲವರು ನಿರ್ದೇಶಕರಾಗಬೇಕು ಎಂಬ ಹಂಬಲದಿಂದ ಕಿರುಚಿತ್ರ ಮಾಡುತ್ತಿದ್ದಾರೆ. ಆದರೆ ಕಿರುಚಿತ್ರ ತಯಾರಿಯ ಹಿಂದೆ ಕಥೆಯನ್ನು ಹೇಳಬೇಕು ಎಂಬ…
ಕುಂದಾಪ್ರ ಡಾಟ್ ಕಾಂ ವರದಿ ನ.17ರ ಕುಂದಾಪುರದ ಅಧಿದೇವರಾದ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ದೀಪೋತ್ಸವ ಹಾಗೂ ರಥೋತ್ಸವದ ಸಂಭ್ರಮ. ಕಾರ್ತಿಕ ಬಹುಳ ಅಮಾವಾಸ್ಯೆಯಂದು ನಡೆಯುವ ಈ ದೀಪಾರಾಧನೆಯನ್ನು ಊರಿನ ಜನ ಸಂಭ್ರಮದಿಂದ ಇದಿರು ನೋಡುತ್ತಿರುತ್ತಾರೆ. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವ. ಈ ಹಬ್ಬಕ್ಕೆ ಒಂದು ವಾರವಿರುವಾಗಲೇ ನಗರದ ಬೀದಿಗಳ ಬದಿಯಲ್ಲಿ ಸಂಚಾರೀ ಅಂಗಡಿಗಳವರು ಸಾಲುಗಟ್ಟಿ ಬೀಡು ಬಿಡುತ್ತಾರೆ. ದೇವಾಲಯದಲ್ಲಿ ದೀಪಾಲಂಕಾರ ಮತ್ತಿತರ ಸಿದ್ಧತೆಗಳು ಆರಂಭವಾಗುತ್ತವೆ. ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದು ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರಬರುತ್ತದೆ. ಈ ಸಂದರ್ಭದಲ್ಲಿ ರಥೋತ್ಸವದ ಮಾದರಿಯಲ್ಲೇ ಹಳಗ – ಜಾಗಟೆ ಮೊದಲಾದ ವಾದ್ಯೋಪಕರಣಗಳ ನಿನಾದ; ದೇವಾಲಯದ ತಂತ್ರಿಗಳ ನೇತೃತ್ವದಲ್ಲಿ ಒಳಗೆ ಮೂರು ಸುತ್ತು ಮತ್ತು ಹೊರಾಂಗಣದಲ್ಲಿ ಮೂರು ಸುತ್ತು – ಹೀಗೆ ಬಲಿಗಲ್ಲುಗಳ ಬಳಿ ಬಲಿ ಸಮರ್ಪಣೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಘಟನೆಯ ಏಳಿಗೆಗೋಸ್ಕರ ಯಾವುದೇ ಫಲಾಪೇಕ್ಷೆಗಳಿಲ್ಲದೇ ಸಮಾನ ಮನಸ್ಕರು ಒಟ್ಟಾಗಿ ಮಾಡಿದ ಸ್ವಾರ್ಥರಹಿತವಾದ ಶ್ರಮ ಅಭಿವೃದ್ಧಿಗೆ ಕಾರಣವಾಗುತ್ತದೆ. ಬುದ್ಧವಂತಿಕೆ, ಕಾರ್ಯಚತುರತೆ ಹಾಗೆಯೇ ಹಿರಿಯರು ಹಾಕಿಕೊಟ್ಟ ವಿಚಾರಧಾರೆಗಳನ್ನು ಹೀಗೆಯೆ ಉಳಿಸಿ ಬೆಳೆಸಬೇಕು ಎಂದು ಕರಸಾಸಂ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ದುರ್ಗಾಪರಮೇಶ್ವರಿ ಯಕ್ಷಕಲಾ ಟ್ರಸ್ಟ್ನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಶಕ್ತಿವಂತರಿಗಿಂತ ಭಕ್ತಿವಂತರು ಹೆಚ್ಚಾಗಿದ್ದರು. ಆದರೆ ಈಗ ಕೆಲವು ಸಂಘಟನೆಗಳಲ್ಲಿ ಶಕ್ತಿವಂತರೇ ಮೇಲ್ಗೈ ಸಾಧಿಸಿರುವುದರಿಂದ ಪರಸ್ಪರ ಅನುಮಾನಗಳು, ಭಿನ್ನಾಭಿಪ್ರಾಯಗಳು ಕಂಡುಬರುತ್ತಿದ್ದು, ಸಮಾಜದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಟ್ರಸ್ಟ್ ಹೆಸರೇ ಸೂಚಿಸುವಂತೆ ಪರಸ್ಪರ ವಿಶ್ವಾಸದಿಂದ ಸರ್ವರೂ ಸಮಾನರು ಎಂಬ ನೆಲೆಯಲ್ಲಿ ಸಮಾಜ ಸೇವೆ ಮಾಡುವ ಮೂಲಕ ನಮ್ಮ ಜೀವನದ ಸಾರ್ಥಕತೆ ಕಾಣಬಹುದು. ಯಕ್ಷಗಾನ ಕಲೆ ಉಳಿಸುವ ನಿಟ್ಟಿನಲ್ಲಿ ಆಸಕ್ತರಿಗೆ ಯಕ್ಷಗಾನ, ಮುಖವರ್ಣಿಕೆ ಉಚಿತ ತರಬೇತಿ ಮತ್ತು ಅಶಕ್ತ ಯಕ್ಷ ಕಲಾವಿದರಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಸುಮ್ಮನೆ ಆರೋಪ ಮಾಡುವ ಬದಲು ಜನಸಾಮಾನ್ಯ, ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆಯನ್ನು ಕೇಳಿದರೆ ಉತ್ತರ ದೊರೆಯುತ್ತೆ. ವಿಧಾನ ಸಭೆಯಲ್ಲಿ ಮಾತನಾಡಿದ್ದೇನೋ ಇಲ್ಲವೋ ಎನ್ನೋದಕ್ಕೆ ನನ್ನ ಬಳಿ ದಾಖಲೆ ಇದೆ. ಅವಶ್ಯವಿದ್ದ ಎಲ್ಲಾ ಕಾರ‍್ಯಕ್ರಮದಲ್ಲೂ ಪಾಲ್ಗೊಂಡಿದ್ದೇನೆ. ಖಾಲಿ ಗೋಡೆ, ಬಿಳಿ ಹಾಳೆ ಮೇಲೆ ಬರೆದದ್ದಕ್ಕೆಲ್ಲಾ ನಾನು ಉತ್ತರಿಸಲಾರೆ. ತಾಂತ್ರಿಕ ಸಮಸ್ಯೆ ಕಳೆದ ಬಳಿಕ ಬಿಜೆಪಿ ಸೇರುತ್ತೇನೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ. ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಭಿವೃದ್ಧಿ ಕೆಲಸ ಬಗ್ಗೆ ಆನಗಳ್ಳಿ ಗ್ರಾಮಸ್ಥರು ಹೇಳಬೇಕು. ಕೋಡಿ ವಾಸಿಗಳು ಮಾತನಾಡಬೇಕು. ಕೋಡಿ, ಆನಗಳ್ಳಿ ಬ್ರಿಜ್ ರಚನೆ ಅಭಿವೃದ್ಧಿ ಅಲ್ಲವಾ? ಕುಂದಾಪುರ ಮಿನಿ ವಿಧಾಸಸೌಧ ರಚನೆ ಆಗಿಲ್ವಾ? ರಸ್ತೆಗಳ ಅಭಿವೃದ್ಧಿ ಮೂರುಕಡೆಜಟ್ಟಿ ನಿರ್ಮಾಣಅಭಿವೃದ್ಧಿಅಲ್ಲವಾ? ತಾಲೂಕಿನಲ್ಲಿ ೩೨ ಗ್ರಾಮ ಪಂಚಾಯತ್, ಒಂದು ಪಟ್ಟಣ ಹಾಗೂ ಪುರಸಭೆ ಇದ್ದು, ಶಾಸಕರ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎನ್ನೋದಕ್ಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಸಕಲ ದಾರ್ಮಿಕ ವಿಧಿ ವಿದಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು. ದೀಪೋತ್ಸವ ಹಾಗೂ ಸಂಕಷ್ಟಹರ ಚತುರ್ಥಿಯ ಅಂಗವಾಗಿ ಶ್ರೀ ದೇವರಿಗೆ ವಿಶೇಷ ಪೂಜೆ ನೆರವೇರಿತು. ಸಾವಿರಾರು ಭಕ್ತರು ಶ್ರೀ ದೇವರ ದರ್ಶನ ಪಡೆದರು ಈ ಸಂದರ್ಭದಲ್ಲಿ ದೇವಳದ ಆಡಳಿತ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್, ಪ್ರದಾನ ಅರ್ಚಕ ಹೆಚ್. ಬಾಲಚಂದ್ರ ಭಟ್, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ ಶರಣ್‌ಕುಮಾರ್ ಇನ್ನಿತರರು ಉಪಸ್ಥಿತರಿದ್ದರು ಚಿತ್ರ : ಸಮಾ ಡಿಜಿಟಲ್, ಕುಂದಾಪುರ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದ್ದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ವಿವಿಧ ಗ್ರಾಮಗಳ 21 ರಸ್ತೆಗಳ ಅಭಿವೃದ್ಧಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು. 10 ಕೋಟಿ ರೂ. ವಿಶೇಷ ಅನುದಾನದಲ್ಲಿ ಗುದ್ದಲಿಪೂಜೆ ನಡೆಸಲಾದ ಕಾಮಗಾರಿಗಳು: ಸೇನಾಪುರ ಗ್ರಾಮದ ಗುಡ್ಡೆಯಂಗಡಿಯಿಂದ ಗುಡ್ಡಮಾಡಿ ಮೂಲಕ ಬಂಟ್ವಾಡಿ(ಮಂಜುರ ಮನೆ ಹತ್ತಿರ) ರಸ್ತೆ ಅಭಿವೃದ್ಧಿ ಅನುದಾನ 15.00.ಲಕ್ಷ ರೂಪಾಯಿ ನಾಡಾ ಗ್ರಾ ಪಂ ಬಡಾಕೆರೆ ಸೇತುವೆಯಿಂದ ಬಡಾಕೆರೆ ಹೊಗುವ ರಸ್ತೆ ಅಭಿವೃದ್ಧಿ ಅನುದಾನ. 25.00 ಲಕ್ಷ ರೂಪಾಯಿ ನಾವುಂದ ಗ್ರಾಮದ ನಂದಯ್ಯನ ಮನೆಯಿಂದ ಕರಾವಳಿ ಮೂಲಕ ಮರವಂತೆ ಕೊಡು ರಸ್ತೆ ಅಭಿವೃದ್ಧಿ ಅನುದಾನ 15.00 ಲಕ್ಷ ರೂಪಾಯಿ ನಾವುಂದ ಗ್ರಾಮದ ಗೋಪಾಲಕೃಷ್ಣ ದೇವಸ್ಥಾನದಿಂದ ಶುಭದಾ ಶಾಲೆವರಗೆ ರಸ್ತೆ ಅಭಿವೃದ್ಧಿ ಅನುದಾನ 15.00 ಲಕ್ಷ ರೂಪಾಯಿ ಕಿರಿಮಂಜೇಶ್ವರ ಗ್ರಾಮದ ನಾಗೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಜನ ಬೇಸತ್ತಿದ್ದು, ರಾಜ್ಯ ಹಾಗೂ ಬೈಂದೂರಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಬೈಂದೂರಲ್ಲಿ ಪರಿವರ್ತನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ‍್ಯಕಾರಿಣಿ ಸದಸ್ಯ ಬಿ.ಎಂ ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.13ರಂದು ಮಧ್ಯಾಹ್ನ 3ಕ್ಕೆ ನಾಗೂರು ಸಂದೀಪನ ಶಾಲೆ ಮುಂಭಾಗ ಬೃಹತ್ ಪರಿವರ್ತನಾ ಸಮಾವೇಶ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ ಅಲ್ಲದೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ನೀಡಿದರು. ಪರಿವರ್ತನಾ ರಥಕ್ಕೆ ತಲ್ಲೂರು ಸಮೀಪ ಭಾರೀ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುತ್ತದೆ. ಅಲ್ಲಿಂದ ಮೆರವಣಿಗೆಯಲ್ಲಿ ನಾಯಕರ ಸಭಾ ಕಾರ‍್ಯಕ್ರಮ ಸ್ವಾಗತಿಸಲಾಗುತ್ತದೆ. 240 ಭೂತ್ ಮಟ್ಟದಿಂದಲೂ ಕಾರ‍್ಯಕರ್ತರು ಪಾಲ್ಗೊಳ್ಳಲಿದ್ದು, 15 ರಿಂದ 20 ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಚುನಾವಣೆಗೆ ಗಿಮಿಕ್‌ಗೆ ಕಾಂಗ್ರೆಸ್ ಗುದ್ದಲಿ ಪೂಜೆ: ಬೈಂದೂರಿನಲ್ಲಿ ಬಿಜೆಪಿ ಪ್ರಬಲವಾಗಿದೆ. ಯಾವುದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ದ.ಕ ಮತ್ತು ಉಡುಪಿ ಅಂತರ್ ಜಿಲ್ಲಾ ಮಟ್ಟದ ಐ.ಟಿ.ಐಗಳ ಪಂದ್ಯಾಟದಲ್ಲಿ ರೆ.ಫಾ.ರೋಬರ್ಟ್ ಝಡ್.ಎಂ.ಡಿ’ಸೋಜಾ ಸ್ಮಾರಕ ಕೈಗಾರಿಕಾ ತರಬೇತಿ ಸಂಸ್ಥೆಗೆ ಹಗ್ಗಜಗ್ಗಾಟದಲ್ಲಿ ಪ್ರಥಮ ಮತ್ತು ವಾಲಿಬಾಲ್ ದ್ವಿತೀಯ ಬಹುಮಾನ ಪಡೆದುಕೊಂಡಿದೆ. ತಂಡದ ಸದಸ್ಯರೊಂದಿಗೆ ಸಂಸ್ಥೆಯ ಪ್ರಾಂಶುಪಾಲರಾದ ಮನೋಹರ್.ಆರ್.ಕಾಮತ್, ಸಂಸ್ಥೆಯ ತರಭೇತಿ ಅಧಿಕಾರಿಯಾದ ರಾಜೇಶ್ ಕೆ.ಸಿ, ಕ್ರೀಡಾ ತರಭೇತುದಾರರಾದ ಕಿಶೋರ್ ಸಸಿಹಿತ್ಲು ಬೈಂದೂರು ಇದ್ದರು.
Cartoon Habba 2017 will starts from November 16th for three days.
