ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಹಟ್ಟಿಕುದ್ರು ಜನರ ಬಹುದಿನಗಳ ಕನಸು ಹಟ್ಟಿಕುದ್ರು-ಬಸ್ರೂರು ಸಂಪರ್ಕ ಸೇತುವೆ ನೆನೆಗುದಿಗೆ ಬಿದ್ದಿದೆ. ಮೂಲಭೂತ ಸೌಕರ್ಯಗಳಿಗಾಗಿ ಬಸ್ರೂರನ್ನೇ ಅವಲಂಬಿಸಿರುವ ಹಟ್ಟಿಕುದ್ರು ಕಳೆದ ಎರಡು ದಶಕಗಳಿಂದ ಬಸ್ರೂರು-ಸಂಪರ್ಕ ಸೇತುವೆ ನಿರ್ಮಿಸುವಂತೆ ಜನಪ್ರತಿನಿಧಿಗಳಲ್ಲಿ ನಿರಂತರವಾಗಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೆ ಯಾವುದೇ ಸ್ಪಂದನ ದೊರಕದೇ ಸಮಸ್ಯೆಗಳ ಸುಳಿಯಲ್ಲೇ ಜೀವನ ಸಾಗಿಸಬೇಕಾದ ದುಸ್ತರ ಸ್ಥಿತಿ ನಿರ್ಮಾಣವಾಗಿದೆ ಹುಟ್ಟಿಕುದ್ರು ದ್ವೀಪ: ಕುಂದಾಪುರ ಸಮೀಪ ಬಸ್ರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಟ್ಟಿಕುದ್ರು ದ್ವೀಪವಾಗಿದೆ. ಪ್ರಾಕೃತಿಕವಾಗಿ ಸಮೃದ್ಧವಾಗಿದ್ದು, ಸುಮಾರು ೩೫೦ರಷ್ಟು ಮನೆಗಳು, ಮೂರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. ಕುಂದಾಪುರ ಶಾಸಕರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಹಟ್ಟಿಕುದ್ರು ಜನತೆಗೆ ನೀಡಿದ ಭರವಸೆಯ ಹಿನ್ನಲೆಯಲ್ಲಿ ಸರಕಾರದ ಗಮನ ಸೆಳೆದು ಹಟ್ಟಿಕುದ್ರುವಿಗೆ ಸಂಪರ್ಕ ಸೇತುವೆ ನಿರ್ಮಿಸಲು ಯೋಜನೆ ರೂಪಿಸಿ ಯಶಸ್ವಿಯಾಗಿದ್ದರು. ಆದರೆ ಈ ಯೋಜನೆ ಹಟ್ಟಿಕುದ್ರು ಮತ್ತು ಹಟ್ಟಿಯಂಗಡಿಯ ನಡುವಿನ ಸಂಪರ್ಕ ಸೇತುವೆಯಾಗಿ ಆ ಭಾಗದಲ್ಲಿ ಸಂಚರಿಸುವವರಿಗೆ ವರದಾನವಾಗಿತ್ತು. ಎಲ್ಲದಕ್ಕೂ ಬಸ್ರೂರು ಆಸರೆ:…
Author: ನ್ಯೂಸ್ ಬ್ಯೂರೋ
ಲವು ಸಂಸ್ಸೃತಿಗಳೊಂದಿಗಿನ ಸಹಬಾಳ್ವೆಯೇ ಬಹುತ್ವ; ಡಾ ಸಿ ಎನ್ ರಾಮಚಂದ್ರನ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಕನ್ನಡದ ಖ್ಯಾತ ವಿಮರ್ಶಕ, ವಿದ್ವಾಂಸ ಸಿ.ಎನ್. ರಾಮಚಂದ್ರನ್ ರತ್ನಾಕರವರ್ಣಿ ವೇದಿಕೆಯಲ್ಲಿ ಉದ್ಘಾಟಿಸಿದರು. ‘ಕರ್ನಾಟಕ:ಬಹುತ್ವದ ನೆಲೆಗಳು’ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಸಮ್ಮೇಳನವನ್ನು ಉದ್ಘಾಟಿಸಿದ ಸಿ.ಎನ್. ರಾಮಚಂದ್ರನ್, “ಪ್ಲೂರಲಿಜ಼ಮ್ ಅಥವಾ ಬಹುತ್ವ” ದ ಕಲ್ಪನೆಯು ಇಂದಿಗೆ ಪ್ರಸ್ತುತವಾದುದು; ಇದು ಅಸ್ಮಿತತೆಯ ರಾಜಕಾರಣ/ ಐಡೆಂಟಿಟಿ ಪಾಲಿಟಿಕ್ಸ್ ಆಗಿ ಬದಲಾಗುತ್ತಿದೆ. ಹಲವು ಸಂಸ್ಕೃತಿಗಳ ಸಹಬಾಳ್ವೆ ಹಾಗು ಬೆಳವಣಿಗೆಯಿಂದ ಬಹುತ್ವ ಸಾಧಿಸಬೇಕಾಗಿದೆ. ಭಾರತದಂತಹ ರಾಷ್ಟ್ರದಲ್ಲಿ ಪ್ರತಿಯೊಂದರಲ್ಲೂ ಬಹುತ್ವವನ್ನು ಕಾಣಬಹುದು. ಬಹುತ್ವದ ಜೊತೆಗೆ ಬರುವ ಮತ್ತೊಂದು ವಿಚಾರವೆಂದರೆ ಅಸ್ಮಿತೆಯದ್ದು. ಬಹುತ್ವದಲ್ಲಿರುವ ಅಸ್ಮಿತೆ ಒಂದು ದಿಕ್ಕಿನಲ್ಲಿದ್ದರೆ, ಬಹುತ್ವೆಂಬ ವಿಶಾಲ ಪರಿಕಲ್ಪನೆ ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಇದರ ಮಧ್ಯೆ ಸಾಮರಸ್ಯವನ್ನು ಸಾಧಿಸಬೇಕಾದ್ದು ತುಂಬಾ ಮುಖ್ಯ’ ಎಂದರು. ಅಸ್ಮಿತೆ ಹಾಗೂ ಬಹುತ್ವಗಳ ಬಗ್ಗೆ ವಿವರಿಸಿದ ಅವರು, ಪ್ರತಿಯೊಂದು ಭಾಷೆ, ಧರ್ಮ, ಸಂಸ್ಕೃತಿ, ಪದ್ಧತಿಗಳೂ ತಮ್ಮ ಅಸ್ಮಿತೆಯ ಉಳಿವಿಗಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ನೆಲದ ಸಂಸ್ಕೃತಿ, ಸಂಪ್ರದಾಯ, ಆಚರಣೆಯನ್ನು ಬಿಂಬಿಸುವ ಸಲುವಾಗಿ ಕಾಣಿ ಸ್ಟುಡಿಯೋ ಕೋಟೇಶ್ವರ-ಬೆಂಗಳೂರು ಇವರ ಆಶ್ರಯದಲ್ಲಿ ಕೋಟೇಶ್ವರ ಕೊಡಿ ಹಬ್ಬದಲ್ಲಿ ತೃತೀಯ ವರ್ಷದ “ಕೊಡಿ ಹಬ್ಬ ಸೆಲ್ಫಿ ಹಬ್ಬ ಸೆಲ್ಫಿ ಪೋಟೋಗ್ರಫಿ ಸ್ಪರ್ಧೇ ಡಿ.3 ಬೆಳಿಗ್ಗೆ 6 ರಿಂದ ಡಿ.4ರ ಬೆಳಿಗ್ಗೆ 6 ರವರೆಗೆ ಜರುಗಲಿದೆ. ಐಸಿರಿ ಎಂಟರ್ಪ್ರೈಸಸ್, ಹನಿಕೊಂಬ್ ಗ್ರೂಪ್, ವರ್ಣ ಪ್ರೀಟಿಂಗ್, ರೋಟರಿ ಕ್ಲಬ್ ಕೋಟೇಶ್ವರ, ರೋಟರ್ಯಾಕ್ಟ್ ಕ್ಲಬ್ ಕೋಟೇಶ್ವರ, ಕೆನರಾ ಕಿಡ್ಸ್, ರಾಮನಾಥಗೋಳಿಕಟ್ಟೆ ಫ್ರೇಂಡ್ಸ್, ಐಶ್ವರ್ಯ ಡಿಜಿಟಲ್ ಸ್ಟುಡಿಯೋ, ಐಶ್ವರ್ಯ ಮೀಡಿಯಾ, ಯಶಸ್ವಿ ಶಾಮಿಯಾನ ವಕ್ವಾಡಿ, ಅಮಯ್ ಇವೆಂಟ್, ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು ಇವರ ಪ್ರಾಯೋಜಕತ್ವದಲ್ಲಿ ಕಾಣಿ ಸ್ಟುಡೀಯೋ ಸಂಯೋಜನೆಯಲ್ಲಿ ಈ ಸೆಲ್ಫಿ ಪೋಟೋಗ್ರಫಿ ಸ್ಟರ್ಧೇ ಜರುಗಲಿದೆ. ಸ್ಪರ್ಧೇಯ ವಿಷಯ: ಕೊಡಿ ಹಬ್ಬದಲ್ಲಿ ವಿವಾಹಿತ ಜೋಡಿ, ಕೊಡಿ ಹಬ್ಬದ ಸಂಭ್ರಮದಲ್ಲಿ ಕುಟುಂಬ, ಕೊಡಿ ಹಬ್ಬದ ಸಂಭ್ರಮ ಎಂಬ ೩ ವಿಷಯಗಳಲ್ಲಿ ಸೆಲ್ಫಿ ಪೋಟೋಗ್ರಫಿ ಸ್ಟರ್ಧೇ ನಡೆಯಲಿದೆ. ಸ್ಪರ್ಧೇಯ ನಿಯಮ: ಈ ಸೆಲ್ಫಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ :ಹಚ್ಚ ಹಸುರಿನ ಪ್ರಕ್ರತಿ ಸೊಬಗಿನ ಸೌಂದರ್ಯದ ಸಹ್ಯಾದ್ರಿ ತಪ್ಪಲಿನಲ್ಲಿ ನೆಲೆಯೂರಿದ್ದೂ ಕುಗ್ರಾಮದ ವಿದ್ಯಾಕಾ೦ಕ್ಷಿ ವಿಧ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿರುವ ತಾಲೋಕಿನ ಹೊಸಂಗಡಿ ಪದವಿ ಪೂರ್ವ ಕಾಲೇಜಿಗೆ ಇದೀಗ 25ರ ಹರೆಯ . ಇದೇ ಡಿಸೆಂಬರ್ 2 ರಂದು ಬೆಳ್ಳಿ ಹಬ್ಬದ ಸಂಬ್ರಮವನ್ನು ಆಚರಿಕೊಳ್ಳುತ್ತಿದೆ . 1993ರಲ್ಲಿ ಪ್ರಾರಂಭವಾಗಿದ್ದ ಸಂಸ್ಥೆ ಈ ವರ್ಷ ರಜತ ಮಹೋತ್ವವಕ್ಕೆ ಅಣಿಯಾಗಿದೆ .ಈಗಾಗಲೇ ಹೊಸತನಕ್ಕೆ ಹೊಸಂಗಡಿ ಸದ್ದಿಲ್ಲದೇ ಸಿದ್ದಗೊಂಡಿದ್ದೂ , ಕಾಲೇಜು ಮದುವಣ ಗಿತ್ತಿಯಂತೆ ಕಂಗೊಳಿಸುತ್ತಿದೆ . ಕಾಲೇಜಿನ ಹಿನ್ನಲೆ : ಪ್ರೌಡ ಶಿಕ್ಷಣ ಮುಗಿಸಿದ ನಂತರ ವಿಧ್ಯಾರ್ಜನೆಗೆ ವಿದ್ಯಾಕಾಂಕ್ಷಿ ವಿದ್ಯಾರ್ಥಿಗಳು ದೂರದ ಶಂಕರನಾರಾಯಾಣ ,ಬಸ್ರೂರು ,ಅಥವಾ ಕುಂದಾಪುರವನ್ನು ಅವಲಂಬಿಸಬೇಕಿತ್ತು.ವಿದ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಪರಿಸ್ತಿತಿ ಅವಲೋಕಿಸಿದ ಕರ್ನಾಟಕ ವಿದ್ಯುತ್ ನಿಗಮವು ತನ್ನ ಅಧೀನದಲ್ಲಿ 1993ರಲ್ಲಿ ಪದವಿ ಪೂರ್ವ ಕಾಲೇಜುನ್ನು ನಿರ್ಮಿಸಿತು . ಆಗಿನ ಕುಂದಾಪುರದ ಶಾಸಕರಾಗಿದ್ದ ,ಪ್ರತಾಪ ಚಂದ್ರಶೆಟ್ಟಿಯವರು ಲೋಕಾರ್ಪಣೆ ಗೊಳಿಸಿದ್ದರು . ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಆರಂಭವನ್ನು ಕಂಡಿದ್ದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ನಮ್ಮಲ್ಲಿ ಕೀಳರಿಮೆ ಸ್ವಮರುಕ ಬೆಳೆಯಲು ಬಿಡಬಾರದು. ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಎದುರಾಗುವ ಅನೇಕ ಕಷ್ಟಗಳನ್ನು ಹಾಗೂ ಸಮಸ್ಯೆಗಳನ್ನು ಎದುರಿಸಲು ಸಾಹಿತ್ಯಗಳು ಸಹಕಾರಿಯಾಗುತ್ತದೆ. ಮನುಷ್ಯನನ್ನು ಸರಿದಾರಿಗೆ ಕೊಂಡೊಯ್ಯುವ ಮತ್ತು ಮನಸ್ಸನ್ನು ಮೃದುವನ್ನಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ವಿವಿಧ ಪ್ರದೇಶಗಳ ವೈಶಿಷ್ಟ್ಯ ಭಾಷೆ ಪ್ರಾಕಾರಗಳನ್ನು ಪರಿಚಯಿಸುವ ಶಕ್ತಿ ಸಾಹಿತ್ಯಕ್ಕಿದೆ. ಹೀಗಾಗಿ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಂಡು ಸಾಹಿತ್ಯ ಕ್ಷೇತ್ರ ಬೆಳೆಯಲು ಸಹಕಾರಿಯಾಗಬೇಕು ಎಂದು ಮಂಗಳೂರಿನ ಹಾಸ್ಯ ಸಾಹಿತ್ಯದ ಲೇಖಕಿ ಭುವನೇಶ್ವರಿ ಹೆಗಡೆ ಹೇಳಿದರು. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಸಾಹಿತ್ಯ ವೇದಿಕೆ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು.ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಕುಂದಾಪುರ ಇವರ ಸಹಭಾಗಿತ್ವದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಯಲು ರಂಗ ಮಂದಿರದಲ್ಲಿ ಆಯೋಜಿಸಿದ ೪ನೇ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನ ’ಸವಿ-ನುಡಿ ಹಬ್ಬ ೨೦೧೭’ವನ್ನು ಬುಧವಾರ ಉದ್ಘಾಟಿಸಿ ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ನೂತನ ಬೈಂದೂರು ತಾಲೂಕಿನ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೊಂಡಿಯಾಗಿ ಬೆಸುಗೆ ಫೌಂಡೇಶನ್ ಬೈಂದೂರು ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಸಂಸ್ಥೆಯ ಮೂಲಕ ಮೊದಲ ಭಾರಿಗೆ ಪಡುವರಿ ಗ್ರಾಮ ಪಂಚಾಯತ್ ಆತಿಥ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಡಿ.೨೮ರಿಂದ ಜ.೧ರ ತನಕ ಐದು ದಿನಗಳ ಕಾಲ ಬೀಚ್ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಬೆಸುಗೆ ಫೌಂಡೇಶನ್ ರಿ. ಬೈಂದೂರು ಇದರ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಹೇಳಿದರು. ಅವರು ಬೈಂದೂರಿನಲ್ಲಿ ನಡೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬೈಂದೂರು ತಾಲೂಕಿನ ಪ್ರಾಕೃತಿಕ ವೈಶಿಷ್ಟ್ಯವನ್ನು ಜಗತ್ತಿಗೆ ತೆರೆದಿಡಬೇಕೆಂಬ ನಮ್ಮ ಹಂಬಲವನ್ನು ಕಾರ್ಯಗತಗೊಳಿಸುವ ಸಲುವಾಗಿ ಸಮಾನ ಮನಸ್ಕರೊಡಗೂಡಿ ’ಬೆಸುಗೆ ಫೌಂಡೇಶನ್ ರಿ. ಬೈಂದೂರು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ತಾಲೂಕಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯೊಂದನ್ನೇ ಮೂಲ ಧ್ಯೇಯವನ್ನಾಗಿರಿಕೊಂಡು ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಈ ಮೂಲಕ ತಾಲೂಕಿನ ಪ್ರವಾಸಿ ಕೇಂದ್ರಗಳ ಬಗೆಗೆ ಮಾಹಿತಿ ಹಾಗೂ ಸರಕಾರದ ಮೂಲಕ ಆಗಬಹುದಾದ ಮೂಲಭೂತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ, ನ.೩೦: ‘ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳನ್ನು ಕೇವಲ ಸಾಕ್ಷರರನ್ನಾಗಿಸುತ್ತಿದೆ. ಆದರೆ ವಿದ್ಯೆಯ ಆಶಯ ಪೂರ್ಣವಾಗುವುದು ಸಾಂಸ್ಕೃತಿಕ ಶಿಕ್ಷಣ ದೊರೆತಾಗ ಮಾತ್ರ. ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ, ಸಾಂಸ್ಕೃತಿಕ ತಳಹದಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯುತ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮಾಡುತ್ತಿದೆ. ಆಳ್ವಾಸ್ ವಿದ್ಯಾರ್ಥಿಸಿರಿಯಂತಹ ಸಮ್ಮೇಳನಗಳು ವಿಚಾರವಂತಿಕೆಯನ್ನು, ಸಾಕಷ್ಟು ವಿಷಯಗಳನ್ನು ಏಕಕಾಲಕ್ಕೆ ಲಕ್ಷಗಟ್ಟಲೇ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿವೆ’ ಎಂದು ಪ್ರಸಿದ್ಧ ರಂಗಕರ್ಮಿ ಮಂಡ್ಯ ರಮೇಶ್ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಆಳ್ವಾಸ್ ವಿದ್ಯಾರ್ಥಿಸಿರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಮಾನವೀಯತೆಯನ್ನು ತಿಳಿಸಿಕೊಡುವ, ಬೇರಿನ ಮಟ್ಟದಲ್ಲಿ ಆಪ್ತತೆಯನ್ನು ಹೆಚ್ಚಿಸುವ ಕೆಲಸ ಈ ಸಮ್ಮೇಳನದಲ್ಲಿ ನಡೆಯುತ್ತಿದೆ. ಇಲ್ಲಿರುವ ಅಚ್ಚುಕಟ್ಟನದ ಹಿಂದಿನ ಶ್ರಮ ವಿಸ್ಮಯಕಾರಿಯಾದುದು. ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳನ್ನು ಒಂದೇ ನೆಲೆಯಲ್ಲಿ ಕಟ್ಟಿಕೊಡುತ್ತಿರುವ ಆಳ್ವಾಸ್ ಬಹುತ್ವದ ನೆಲೆಯಲ್ಲಿ ಬೆಳೆಯುತ್ತಿರುವ ಸಂಸ್ಥೆ ಎಂದರು. ಆಳ್ವಾಸ್ ವಿದ್ಯಾರ್ಥಿಸಿರಿ ಸರ್ವಾಧ್ಯಕ್ಷತೆ ವಹಿಸಿದ ಎಸ್ಡಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅರ್ಜುನ್ ಶೆಣೈ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಹಿಂದೂ ಧರ್ಮದಲ್ಲಿ ಮದುವೆ ಎಂದ ಮೇಲೆ ಸಂಭ್ರಮ ಸಡಗರದೊಂದಿಗೆ ವಾದ್ಯ, ಪುರೋಹಿತರ ಸಂಸ್ಕೃತ ಮಂತ್ರ ಪಠಣ ಸರ್ವೇಸಾಮಾನ್ಯ. ಆ ಸಂಭ್ರಮವೆನ್ನುವುದು ವಧುವರರ ಪಾಲಿಗೆ ವಿಶಿಷ್ಟವಾದದ್ದು. ಹಾಗಾಗಿ ವಿಶಿಷ್ಟ ಕ್ಷಣ ವಿಶೇಷವಾಗಿರಬೇಕೆಂದು ಆಲೋಚಿಸಿದ ಜೋಡಿ ಸಂಸ್ಕೃತ ಮಂತ್ರಘೋಷದ ಬದಲಿಗೆ ಕನ್ನಡ ಮಂತ್ರಘೋಷ ಪಠಣಕ್ಕೆ ಅವಕಾಶ ಮಾಡಿಕೊಟ್ಟು ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ. ಪತ್ರಕರ್ತ ಹಾಗೂ ಜೆಸಿಐ ನಿಕಟಪೂರ್ವಾಧ್ಯಕ್ಷ ಅರುಣಕುಮಾರ್ ಶಿರೂರು ಹಾಗೂ ಬಿಂದು ಅವರು ಭಟ್ಕಳದ ಶ್ರೀ ನಾಗಯಕ್ಷೆ ದೇವಸ್ಥಾನದ ಸಭಾಭವನದಲ್ಲಿ ಇತ್ತಿಚಿಗೆ ಅಚ್ಚಕನ್ನಡದ ಮಂತ್ರಘೋಷದೊಂದಿಗೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿ ಕನ್ನಡ ಪ್ರೇಮಿಗಳಿಗೆ ಮಾದರಿಯಾಗಿದ್ದಾರೆ. ಅಂದಹಾಗೆ ಕಾಸರಗೋಡು ಮೂಲದ ಹಿರೆಮಗಳೂರು ಕಣ್ಣನ್ ಅವರ ಮಕ್ಕಳು ಹಾಗೂ ಶಿಷ್ಯರು ಕನ್ನಡ ಮಂತ್ರದ ಮೂಲಕ ಮದುವೆ ಸಂಪ್ರದಾಯಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಾರಾಹಿ ಯೋಜನೆಯಡಿ ಪರಿಶಿಷ್ಟ ಪಂಗಡದ ಜನತೆಯ ಉಪಯೋಗಕ್ಕಾಗಿ ನಡ್ಪಾಲು ನಲ್ಲಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನಿಂದ , ಪ.ವರ್ಗದ ಜನತೆಗೆ ಪ್ರಯೋಜನ ದೊರೆಯದೇ ಇದ್ದು, ಈ ಕಾಮಗಾರಿ ನಡೆಸಿರುವವರ ವಿರುದ್ದ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡೆ , ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ. ಅವರು, ಕುಂದಾಪುರ ತಾಲೂಕು ಪಂಚಾಯತ್ ನಲ್ಲಿ ಉಡುಪಿ ಜಿಲ್ಲಾ ವಾರಾಹಿ ಯೋಜನೆಗೆ ಸಂಬಂದಿಸಿದಂತೆ, ವಾರಾಹಿ ಯೋಜನೆಯೆ ಎಡ ದಂಡೆ ಮತ್ತು ಬಲದಂಡೆ ಹಾಗೂ ಉಪ ಕಾಲುವೆ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ಕಾಮಗಾರಿಗಳ ನ್ಯೂನತೆಗಳನ್ನು ಸರಿಪಡಿಸಲು ನೀಡಲಾದ ನಿರ್ದೇಶನ ಮತ್ತು ಕೈಗೊಂಡ ಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾರಾಹಿ ಯೋಜನೆಯಡಿ ಬುಡಕಟ್ಟು ಜನರ ಉಪಯೋಗಕ್ಕಾಗಿ , ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಪಾಲು ಗ್ರಾಮದಲ್ಲಿ ೯೦…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಲ್ಕೂವರೆ ವರ್ಷದ ಸತತ ಪ್ರಯತ್ನದ ಫಲವಾಗಿ ನಾಡ ಗ್ರಾಮ ಪಂಚಾಯತಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಯಶಸ್ವಿಯಾಗಿದ್ದು, ಮುಂದಿನ ಹನ್ನೊಂದು ತಿಂಗಳ ಅವಧಿಯಲ್ಲಿ ನಾಡಾ, ಸೇನಾಪುರ, ಬಡಾಕೆರೆ ಹಾಗೂ ಹಡವು ಗ್ರಾಮದ ಜನರಿಗೆ ಕುಡಿಯುವ ನೀರು ದೊರೆಯಲಿದೆ. ಸೌಪರ್ಣಿಕ ಹೊಳೆಯಲ್ಲಿ ಸಾಕಷ್ಟು ನೀರು ದೊರೆಯುವುದರಿಂದ ಈ ಯೋಜನೆಯನ್ನು ಒಂದು ಗ್ರಾಮಕ್ಕೆ ವಿಸ್ತರಿಸುವ ಬಗೆಗೆ ಪ್ರಯತ್ನಿಸಲಾಗುವುದು ಎಂದು ಕೆಎಸ್ಆರ್ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರೂ. 10.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದರು. ಆರ್ಡಿಪಿಆರ್ ಕಮಿಟಿ ಛೇರ್ಮೆನ್ ಆದ ಬಳಿಕ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿ, ಎಂಟು ಭಾರಿ ಟೆಂಡರ್ ಕರೆದರೂ ಯಾರೊಬ್ಬರೂ ಟೆಂಟರ್ ತೆಗೆದುಕೊಳ್ಳಲು ಮುಂದೆ ಬಂದಿರಲಿಲ್ಲ. ಅಂತಿಮವಾಗಿ ಮಂಗಳೂರಿನ ಸಂಸ್ಥೆಯೊಂದು ಗುತ್ತಿಗೆ ಪಡೆದುಕೊಂಡು…
