ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿಯೊಬ್ಬ ಕಲಾವಿದರು ತಮ್ಮ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದಾಗ ಆ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಜನರು ಗುರುತಿಸಿ ಗೌರವಿಸುತ್ತಾರೆ. ಆದರೆ ಯಾವ ಕಲಾವಿದರೂ ಕಲೆಗೆ ಕೊಡುವುದು ಏನೂ ಇಲ್ಲ. ಅರ್ಹತೆಗಿಂತ ಶ್ರದ್ಧಾಭಕ್ತಿಯಿಂದ ಮಾಡುವ ಕರ್ತವ್ಯ ಮುಖ್ಯ. ಕಲೆಯಿಂದ ಪಡೆದು ತಾವು ಬೆಳವಣಿಗೆ ಸಾಧಿಸುತ್ತಾರೆ. ಕಲಾವಿದರ ಉತ್ಕೃಷ್ಟ ಸೇವೆಯನ್ನು ಗುರುತಿಸಿ ಗೌರವಿಸಿದಾಗ ಕಲೆಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಹೇಳಿದರು. ಹೆರಗುಡಿ ಬಲಮುರಿ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಬುಧವಾರ ರಾತ್ರಿ ಜರುಗಿದ ಸಮಾರಂಭದಲ್ಲಿ ಯಳಜಿತ ಗ್ರಾಮದ ಹೆರಗುಡಿ ಪುಂಡರೀಕ ಭಟ್ ಮತ್ತು ಸಹೋದರರ ಆಯೋಜಕತ್ವದಲ್ಲಿ ಅರೆಶಿರೂರು ರಾಮಚಂದ್ರ ಭಟ್ ಸಂಸ್ಮರಣಾರ್ಥ ನೀಡಲಾದ 2017ನೇ ಸಾಲಿನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು. ಭಾರತೀಯ ಜೀವವಿಮಾ ನಿಗಮದ ಮಂಗಳೂರು ಶಾಖೆಯ ಮುಖ್ಯ ಪ್ರಬಂಧಕ ಎಚ್. ರಾಧಾಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಯಕ್ಷಗಾನ ಭಾಗವತ ಹೇರಂಜಾಲು ಗೋಪಾಲ ಗಾಣಿಗ, ಧಾರ್ಮಿಕ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿಪಿಐ(ಎಂ) ಪಕ್ಷದ ಅಖಿಲ ಭಾರತ ೨೨ನೇ ಮಹಾ ಅಧಿವೇಶನ ಜರಗಲಿರುವುದರ ಪೂರ್ವಭಾವಿಯಾಗಿ ದೇಶದ ಎಲ್ಲಾ ರಾಜ್ಯ, ಜಿಲ್ಲಾ, ತಾಲೂಕು ವಲಯವಾರು ಸಮ್ಮೇಳನಗಳು ಜರಗುತ್ತಿದ್ದು, ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಘಟಕದ ಶಾಖಾ ಸಮ್ಮೇಳನಗಳು ಜರಗುತ್ತಿದ್ದು, ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಘಟಕದ ಶಾಖಾ ಸಮ್ಮೇಳನಗಳು ಸಂಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಸಿಪಿಐ(ಎಂ) ಬೈಂದೂರು ವಲಯ ಸಮ್ಮೇಳನವು ಹೆಮ್ಮಾಡಿ ಆದರ್ಶ ಯುವಕ ಮಂಡಲದ ಸಭಾಂಗಣದ ಅಬ್ರಹಾಂ ಕರ್ಕಡ ವೇದಿಕೆಯಲ್ಲಿ ಯಶಸ್ವಿಯಾಗಿ ಜರಗಿತು. ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸಮ್ಮೇಳನದ ಉದ್ಘಾಟನೆ ಮಾಡುತ್ತಾ ದೇಶದಲ್ಲಿ ದುಡಿಯುವ ಜನರ ಐಕ್ಯತೆಯನ್ನು ಜಾತಿ, ಧರ್ಮ, ಭಾಷೆಗಳನ್ನು ಬಳಸಿ ವಿಚಿದ್ರಗೊಳಿಸುವ ಸಂಘ ಪರಿವಾರದ ಹುನ್ನಾರಕ್ಕೆ ಪ್ರತಿರೋಧ ಒಡ್ಡಬೇಕು. ಸಾಮೂಹಿಕ ಕ್ರಾಂತಿಕಾರಿ ಕಮ್ಯೂನಿಸ್ಟ್ ಪಕ್ಷವನ್ನು ಸಂಘಟಿಸುವಲ್ಲಿ ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು. ಅವರು ಮುಂದುವರಿದು ಮಾತನಾಡುತ್ತಾ, ಬಡತನ/ಸಮಸ್ಯೆಗಳನ್ನು ಪರಿಹರಿಸಲು ಬಂಡವಾಳಶಾಹಿಗೆ ಸಾಮರ್ಥ್ಯವೂ ಇಲ್ಲ, ನೈತಿಕತೆಯೂ ಇಲ್ಲ ಎಂದು ಟೀಕಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮುಖಂಡ ರಾಜೀವ ಪಡುಕೋಣೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಟ್ಟುವೆವು ನಾವು ಹೊಸ ನಾಡೊಂದನ್ನು, ರಸದ ಬೀಡೊಂದನ್ನು ಎನ್ನುವ ಗೋಪಾಲಕೃಷ್ಣ ಅಡಿಗರ ಹುಮ್ಮಸ್ಸು ಇಂದಿನ ಯುವಜನತೆಯಲ್ಲಿ ಉಕ್ಕಬೇಕಾಗಿದೆ. ಅಂದು ಅವರು ಕಂಡ ಕನಸು, ಗುರಿ ಸಂಪೂರ್ಣವಾಗಿ ನನಸಾಗಿಲ್ಲ. ಅವರ ಚಿಂತನೆ ಹಾಗೂ ದೂರದೃಷ್ಟಿ ಸಾರ್ವಕಾಲಿಕವಾಗಿ ಪ್ರಸ್ತುತವಾದುದು. ನವ್ಯದ ಹೊಸ ದಾರಿಯನ್ನು ಕನ್ನಡದ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಅಡಿಗರ ಕವಿತೆಗಳು ಇಂದಿಗೂ ಅನ್ವಯಿಸುವ ಸಂದೇಶವನ್ನು ಸಾರುತ್ತವೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೋ. ಉಪೇಂದ್ರ ಸೋಮಯಾಜಿ ಹೇಳಿದರು. ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಕಂಬದಕೋಣೆ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಸಾಪ ಮತ್ತು ಗೀತಾನಂದ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ನಡೆದ ಭಾವಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಒಂದು ವರ್ಗದ ಕಣ್ಣು ತೆರೆಸಿದ ಕವಿ ಅಡಿಗರು ಎನ್ನುವ ಮಾತಿದೆ. ಆದರ್ಶ, ಕಲ್ಪನೆಯೊಳಗೆ ತೇಲುತ್ತಿದ್ದ ಸಾಹಿತ್ಯ ಲೋಕವನ್ನು ವಾಸ್ತವದ ನೆಲೆಗಟ್ಟಿನಲ್ಲಿ ಕಟ್ಟಿಕೊಡಬಲ್ಲ ಸಾಹಿತ್ಯಗಳನ್ನು ರಚಿಸುವ ಮೂಲಕ ಹೊಸ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿಗೆ ಸಮೀಪದ ಉಪ್ಪುಂದದಲ್ಲಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಮಂಗಳೂರು, ಕರ್ನಾಟಕ ತೋಟಗಾರಿಕಾ ಮಹಾಮಂಡಲ ಬೆಂಗಳೂರು ಇವರ ಮೂಲಕ ರಾಜ್ಯ ವಲಯ ಯೋಜನೆಯ ಅನುದಾನದಿಂದ ೪೦ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಧುನಿಕ ಮಾರಾಟ ಮಳಿಗೆ ಮತ್ತು ಸಂಗ್ರಹಣಾ ಕೇಂದ್ರ ಕಟ್ಟಡಕ್ಕೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಅವರು ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉಡುಪ, ಉಪ್ಪುಂದ ಗ್ರಾಪಂ ಅಧ್ಯಕ್ಷೆ ದುರ್ಗಮ್ಮ, ಸದಸ್ಯ ಐ ನಾರಾಯಣ, ಗ್ರಾಮಸ್ಥ ಎಸ್ ಮದನ್‌ಕುಮಾರ್ ಉಪ್ಪುಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭೂಸುಧಾರಣೆ, ಇಪ್ಪತ್ತು ಅಂಶ ಕಾರ್ಯಕ್ರಮ, ಬ್ಯಾಂಕುಗಳ ರಾಷ್ಟ್ರೀಕರಣ, ಸೂರಿಲ್ಲದವರಿಗೆ ಸೂರು ಹೀಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ದೇಶದಲ್ಲಿ ಮಹತ್ತರವಾದ ಪರಿವರ್ತನೆಯನ್ನು ತಂದ ಕೀರ್ತಿ ಇಂದಿರಾಗಾಂಧಿಯವರಿಗೆ ಸಲ್ಲಬೇಕಿದೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಭಾನುವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಜನ್ಮ ಶತಾಬ್ದಿ ಅಂಗವಾಗಿ ಹಮ್ಮಿಕೊಂಡಿದ್ದ ದೀಪನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿರಾ ಗಾಂಧಿಯವರ ದೂರದೃಷ್ಠಿತ್ವದಿಂದ ದೇಶ ಸದೃಢವಾಗಿ ಬೆಳೆಯುತ್ತಿದೆ. ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವುದರೊಂದಿಗೆ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯೋಣ ಎಂದವರು ಕರೆ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್ ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಜಿಲ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಲಾವಿದರು ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸುವುದರೊಂದಿಗೆ ಹೊಸ ಪ್ರತಿಭೆಗಳಿಗೂ ಪ್ರೋತ್ಸಾಹಿಸುವುದು ಬಹುಮುಖ್ಯ. ತಾವು ಬೆಳೆಯುವುದರೊಂದಿಗೆ ತಮ್ಮೊಂದಿಗೆ ಇರುವವರನ್ನು ಗುರುತಿಸಿ ಅವರ ಬೆನ್ನು ತಟ್ಟುವ ಕೆಲಸ ಮಾಡಿದರೆ ಅವರೂ ಬೆಳೆಯುತ್ತಾರೆ ಎಂದು ಕೆಎಸ್‌ಆರ್‌ಟಿಸಿ ಅಧ್ಯಕ್ಷ, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಮಯ್ಯಾಡಿ ಧರ್ಮಸ್ಥಳ ಮಂಜುನಾಥೇಶ್ವರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸವಿ ಸವಿ ನೆನಪು ಕಲಾ ಸಂಸ್ಥೆಯ ಸಾವಿರ ಸಂಭ್ರಮ ಕಾರ್ಯಕ್ರಮದಲ್ಲಿ ಗಾನ ಯಕ್ಷಗಾನ ನಾಟ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯೋಪಧ್ಯಾಯ ಬಿ. ಹನುಮಂತ ಹಾಗೂ ಭಜನಾ ಕೀರ್ತನಕಾರ ರಾಜು ದೇವಾಡಿಗ ಚಪ್ಪರಮನೆ ಬಿಜೂರು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಹೊಬಳಿ ಅಧ್ಯಕ್ಷ ಗಣಪತಿ ಹೋಬಳಿದಾರ್, ಶಿರೂರು ಗ್ರಾಪಂ ಸದಸ್ಯ ರಘುರಾಮ ಪೂಜಾರಿ, ಉದ್ಯಮಿ ರಾಮ ಪೂಜಾರಿ, ಕುಂದಾಪುರ ಕಾರ್ಪೊರೇಷನ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಘಟಕದ ಅಧ್ಯಕ್ಷರಾಗಿ ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವ್ಯದ್ಯಕೀಯ ನಿರ್ದೇಶಕರಾದ ಡಾ. ಸತೀಶ ಪೂಜಾರಿ ಆಯ್ಕೆಯಾಗಿದ್ದಾರೆ. ಕಳೆದ 18 ವರ್ಷಗಳಿಂದ ಕುಂದಾಪುರದಲ್ಲಿ ಕಿವಿ, ಮೂಗು, ಗಂಟಲು ತಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ದಕ್ಷಿಣ ಭಾರತದ ಗಾನ ಕೋಗಿಲೆ ಡಾ||ಎಸ್.ಜಾನಕಿ ಹಾಗೂ ದಕ್ಷಿಣ ಭಾರತದ ಮೇರು ಗಾಯಕಿ ವಾಣಿಜಯರಾಂರಂತಹ ಮೇರು ಗಾಯಕಿಯರನ್ನು ಕುಂದಾಪುರಕ್ಕೆ ಕರೆಯಿಸಿ ಅಭಿನಂದಿಸಿ ಸಂಗೀತ ಕಾರ್ಯಕ್ರಮ ಆಂಯೋಜಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವರಲ್ಲದೇ ಆರ್ಯಭಟ ಪ್ರಶಸ್ತಿ ವಿಜೇತ ಗಾಯಕ ರಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ, ದಾರಿ, ಕನಸುಗಳನ್ನು ನನಸು ಮಾಡಿಕೊಳ್ಳಲು ಸರಿಯಾದ ಮಾರ್ಗದರ್ಶನದ ಅಗತ್ಯತೆ ಇದೆ. ಶಾಲಾ ಕಾಲೇಜುಗಳಲ್ಲಿ ಪಾಠ ಪ್ರವಚನಗಳ ನಡುವೆ ಇಂತಹ ತರಬೇತಿ ಮಾರ್ಗದರ್ಶನ ನೀಡುವುದು ಅಸಾಧ್ಯ. ವಿದ್ಯಾರ್ಥಿವೇತನಕ್ಕಿಂತ ಮಾಹಿತಿ ತರಬೇತಿ ಶಿಬಿರಗಳಿಂದ ಹೆಚ್ಚಿನ ಲಾಭ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಅವಶ್ಯವಿರುವ ಮಾಹಿತಿ ತರಬೇತಿ ಪಡೆದುಕೊಳ್ಳಬೇಕು. ಉತ್ತಮ ಜನರ ಸಹವಾಸ ಗೆಳೆತನ ಬೆಳೆಸಿಕೊಂಡರೆ ಮಾತ್ರ ನಮ್ಮ ಜೀವನ ಉತ್ತಮವಾಗಲು ಸಾಧ್ಯ ಎಂದು ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಹೇಳಿದರು. ಅವರು ಗಂಗೊಳ್ಳಿಯ ನಿನಾದ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಜ್ಞಾನಗಂಗಾ ಹಾಗೂ ಗಂಗಾಮೃತ ಯೋಜನೆಯ ಭಾಗವಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜ್ಞಾನಾಮೃತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿನ ಸಂಗೀತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಕುಸುಮಾ ಫೌಂಡೇಶನ್ ಆಯೋಜಿಸಲಾಗುತ್ತಿರುವ ವಿನೂತನ ಕಾರ್ಯಕ್ರಮ ‘ಗಾನಕುಸುಮ – 2017’ ಸಂಗೀತ ಸ್ವರ್ಧೆ ಮೂರನೇ ಆವೃತ್ತಿಯ ನೊಂದಾವಣಿಗೆ ಪ್ರತಿ ವರ್ಷದಂತೆ ಅರ್ಜಿ ಆಹ್ವಾನಿಸಲಾಗಿದ್ದು, ಕುಂದಾಪುರ ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಸಂಗೀತದ ಬಗೆಗೆ ಸಾಮಾನ್ಯ ಜ್ಞಾನ, ಅಭಿರುಚಿ ಹಾಗೂ ಆಸಕ್ತಿ ಇರುವ 20ರ (1.1.1997) ವಯೋಮಾನದೊಳಗಿನ ವಿದ್ಯಾರ್ಥಿಗಳು ಸ್ವರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿಯ ಚಿತ್ರಗೀತೆಗಳನ್ನು ಹಾಡಲು ಅವಕಾಶವಿದೆ. ಮೂರು ಹಂತಗಳಲ್ಲಿ ಸ್ವರ್ಧೆ ನಡೆಯಲಿದ್ದು ಒಟ್ಟು ಸ್ವರ್ಧಿಗಳಲ್ಲಿ 12 ಸೆಮಿಪೈನಲ್’ನಲ್ಲಿ ಫೈನಲ್ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಫೈನಲ್ನಲ್ಲಿ ಆಯ್ಕೆಯಾದ ಓರ್ವರನ್ನು ‘ಗಾನಕುಸುಮ 2017’ ಎಂದು ಘೋಷಿಸಲಾಗುವುದು ಮತ್ತು ಫೈನಲ್ ಹಂತ ಪ್ರವೇಶಿಸಿದ 8 ಮಂದಿಗೆ ಕುಸುಮಾಂಜಲಿ 2017 ಕಾರ್ಯಕ್ರಮದಲ್ಲಿ ವೃತ್ತಿಪರ ಕಲಾವಿದರೊಂದಿಗೆ ಹಾಡಲು ಅವಕಾಶ ನೀಡಲಾಗುತ್ತದೆ. ನವೆಂಬರ್ 27ನೇ ತಾರೀಕಿನ ಒಳಗಾಗಿ ಶಾಲಾ ಕಾಲೇಜಿನ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸತ್ಸಂಗ ಬದುಕಿನ ವಿಕಸನಕ್ಕೆ ದಾರಿದೀಪವಾಗಿದೆ. ಸಮಾಜವಿಂದು ಉತ್ತಮ ಚಿಂತನೆಗಳಿಂದ ವಿಮುಖರಾಗುತ್ತಿರುವುದರಿಂದ ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಿದೆ. ಶಾಂತಿ ನೆಮ್ಮದಿ ತೃಪ್ತ ಭಾವವೇ ನಮ್ಮನ್ನು ಉನ್ನತಿಯೆಡೆಗೆ ಕೊಂಡೊಯ್ಯುವ ಶಕ್ತಿಯಾಗಿದೆ. ಇಂತಹ ಶಕ್ತಿ ಹರಿಕಥೆ, ಸತ್ಸಂಗಗಳಿಂದ ನಮಗೆ ಲಭಿಸುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಹರಿದಾಸರಾದ ಬಿ. ಸಿ. ರಾವ್ ಶಿವಪುರ ಹೇಳಿದರು. ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ನವೆಂಬರ್ ತಿಂಗಳ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಹರಿಹರ ಸೇವಾ ಬಳಗದ ಸಹಕಾರದೊಂದಿಗೆ ಆಯೋಜಿಸಿದ ಹರಿಕಥೆ ಸತ್ಸಂಗ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಕುಂದಾಪುರದ ಪ್ರಸಿದ್ಧ ವೈದ್ಯರಾದ ಡಾ. ಎಸ್, ಎನ್.ಪಡಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರಾದ ಕೋಣಿ ನರಸಿಂಹ ಪೂಜಾರಿ, ಶ್ರೀಮತಿ ಲಕ್ಷ್ಮೀ ನರಸಿಂಹ ಪೂಜಾರಿ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿವೃತ್ತ ಅಧ್ಯಾಪಕರಾದ ಹರಿಶ್ಚಂದ್ರ ಹೆಬ್ಬಾರ್, ಕೋಟೇಶ್ವರ ಹರಿಹರ ಸೇವಾ ಬಳಗದ ಅಧ್ಯಕ್ಷ ಎನ್. ಮೋಹನ್ ಆಚಾರ್ಯ, ಗೊಂಬೆಯಾಟದ…
