Cartoon Habba 2017 will starts from November 16th for three days.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಯಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿರುವ ಕನ್ನಡ ಭಾಷೆ ಇಂದು ಅಳಿವಿನಂಚಿನತ್ತ ಸಾಗುತ್ತಿದೆ. ಭಾಷೆಯ ಉಳಿಸುವಿಕೆಯಲ್ಲಿ ನಾವು ನಮ್ಮ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕಿದೆ ಎಂದು ಸಾಹಿತಿ, ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಅವರು ಹೇಳಿದರು. ಅವರು ಇತ್ತಿಚಿಗೆ ಕುಂದಾಪುರದ ದಿನೇಶ್ ಐತಾಳರ ಮನೆಯಲ್ಲಿ ನಡೆದ ’ಮನೆಯಂಗಳದಲ್ಲಿ ಸಾಹಿತ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರು ಸಾಹಿತ್ಯಕೃಷಿಯಲ್ಲಿ ಅಲ್ಪತೃಪ್ತರಾಗದೇ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಉತ್ತಮ ಗುಣಮಟ್ಟದ ಪ್ರಬುದ್ಧ ಸಾಹಿತ್ಯಕ್ಕೆ ಪ್ರಾಮುಖ್ಯತೆ ದೊರೆಯುವಂತಾಗಬೇಕು ಎಂದು ಆಶಿಸಿದರು. ಈ ಸಂದರ್ಭ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾಚಾರ್ ಅವರನ್ನು ಸನ್ಮಾನಿಸಲಾಯಿತು. ದಿನೇಶ್ ಐತಾಳ್ ಅವರು ಉಪಸ್ಥಿತರಿದ್ದರು. ಅಧ್ಯಾಪಕಿ ನಾಗಮ್ಮ, ಸುಪ್ರಸನ್ನ ನಕ್ಕತ್ತಾಯ, ಪ್ರಕಾಶ್ ಹೆಬ್ಬಾರ್, ಪೂರ್ಣಿಮಾ ಭಟ್, ಸುಮಿತ್ರಾ ಐತಾಳ್ ಕವನಗಳನ್ನು ವಾಚಿಸಿದರು. ಕಸಾಪ ಕಾರ್ಯದರ್ಶಿ ಡಾ. ಕಿಶೋರ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಿದ್ಧ ರಂಗಕರ್ಮಿ ಕುಂದಾಪುರ ರೂಪಕಲಾ ಸಂಸ್ಥೆಯ ನಿರ್ದೇಶಕ ಕೆ ಸತೀಶ ಪೈ ಅವರಿಗೆ ಚಿಕ್ಕಮಗಳೂರಿನ ಸಾಂಸ್ಕೃತಿಕ ಸಂಘವು ’ನಟ ಶಿರೋಮಣಿ’ ಬಿರುದು ನೀಡಿ ಗೌರವಿಸಿದೆ. ಚಿಕ್ಕಮಗಳೂರಿನ ಕುವೆಂಪು ರಂಗಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕೆ.ಸತೀಶ ಪೈ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿ ಬಿರುದು ನೀಡಿ ಸತ್ಕರಿಸಿ ಮಾತನಾಡಿದ ಚಿಕ್ಕಮಗಳೂರು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಕಳೆದ ೪೦ ವರ್ಷಗಳಿಂದ ರಂಗಭೂಮಿಯಲ್ಲಿ ವಿವಿಧ ನಾಟಕಗಳನ್ನು ಪ್ರದರ್ಶಿಸಿ ಜನರ ಮನ್ನಣೆಗೆ ಪಾತ್ರವಾಗಿರುವ ಕುಂದಾಪುರದ ರೂಪಕಲಾ ಸಂಸ್ಥೆ ಇಂದು ವಿದೇಶಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡುತ್ತಿದೆ. ನಶಿಸಿ ಹೋಗುತ್ತಿರುವ ನಾಟಕ ಕಲೆಯನ್ನು ಉಳಿಸಿ ಬೆಳೆಸಲು ಕೆ.ಸತೀಶ ಪೈ ನೇತೃತ್ವದ ರೂಪಕಲಾ ಸಂಸ್ಥೆ ಶ್ರಮಿಸುತ್ತಿರುವುದು ಅಭಿನಂದನೀಯ. ಸರ್ಕಾರ ಇಂತಹ ಕಲಾವಿದರ ಸೇವೆಯನ್ನು ಗುರುತಿಸಿ ಗೌರವಿಸುವುದರ ಜೊತೆಗೆ ಈ ಕಲೆಯನ್ನು ಉಳಿಸಿ ಬೆಳೆಸಲು ಪ್ರೋತ್ಸಾಹ ನೀಡಬೇಕಿದೆ ಎಂದರು. ಸಂಘದ ಗೌರವಾಧ್ಯಕ್ಷ ಆರ್.ಶೇಷಾದ್ರಿ, ಅಧ್ಯಕ್ಷ ಗಿರಿಧರ ಯತೀಶ್ ಎಂ.ಎಸ್., ಸುವರ್ಣ ಮಹೋತ್ಸವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭವಿಷ್ಯದ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಸ್ವರ್ಧಾತ್ಮಕ ಪರೀಕ್ಷೆಗಳು ರಹದಾರಿಯಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಸ್ವರ್ಧಾತ್ಮಕ ಪರೀಕ್ಷೆ ಎದುರಿಸುವ ತಯಾರಿ ಮಾಡಿಕೊಂಡರೇ ಸುಲಭವಾಗಿ ಗುರಿ ಸಾಧಿಸಲು ಸಾಧ್ಯವಿದೆ ಎಂದು ಬೈಂದೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಹೇಳಿದರು. ಅವರು ಬೈಂದೂರು ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ನೇತೃತ್ವದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು, ರೋಟರಿ ಕ್ಲಬ್ ಬೈಂದೂರು, ಇಂಟರ‍್ಯಾಕ್ಟ್ ಕ್ಲಬ್ ಬೈಂದೂರು ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಎನ್‌ಟಿಎಸ್‌ಇ ಹಗೂ ಎನ್‌ಎಂಎಂಎಸ್ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಇಂದು ಕೆಎಎಸ್ ಐಎಎಸ್ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು ಸೂಕ್ತ ತಯಾರಿಯೊಂದಿಗೆ ಅವುಗಳನ್ನು ಬಳಸಿಕೊಳ್ಳುವ ಚಾಕಚಕ್ಯತೆ ಹೊಂದಿರಬೇಕಾಗುತ್ತದೆ ಎಂದರು. ಬೈಂದೂರು ರೋಟರಿ ಅಧ್ಯಕ್ಷ ಎಚ್. ಕೃಷ್ಣಪ್ಪ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ವೆಂಕಟೇಶ ಕಾರಂತ್, ಬೈಂದೂರು ಜ್ಯೂನಿಯರ್ ಕಾಲೇಜಿನ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ವಸಂತ್, ಕಾರ್ಯದರ್ಶಿ ಸೌರಭ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಕಾರ್ತಿಕ ಮಾಸದಲ್ಲಿ ಜರಗುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ಶನಿವಾರ ಜರಗಿತು. ದೇವಳದ ತಾಂತ್ರಿಕ ವೇದಮೂರ್ತಿ ಜಿ.ವಸಂತ ಭಟ್ ನೇತೃತ್ವದಲ್ಲಿ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿತು. ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ ದಂಪತಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಯಜಮಾನಿಕೆ ವಹಿಸಿದ್ದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ, ದೇವಳದ ಆಡಳಿತ ಮಂಡಳಿ ಸದಸ್ಯರಾದ ವೇದಮೂರ್ತಿ ಜಿ.ವೇದವ್ಯಾಸ ಕೆ.ಆಚಾರ್ಯ, ಜಿ.ವೆಂಕಟೇಶ ನಾಯಕ್, ಜಿ.ನಾರಾಯಣ ಆಚಾರ್ಯ ಕುಟುಂಬಸ್ಥರು, ಪುರೋಹಿತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಭಕ್ತಾದಿಗಳು ಉಪಸ್ಥಿತರಿದ್ದರು ಶ್ರೀದೇವರ ಪ್ರಸಾದ ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಆಶ್ರಯದಲ್ಲಿ ರೋಟರಿ ಜಿಲ್ಲೆ ೩೧೮೨ ಇದರ ವಲಯ ೧ರ ರೋಟರಿ ಸಾಂಸ್ಕೃತಿಕ ವೈಭವ-೨೦೧೭ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ರೋಟರಿ ವಲಯದ ೭ ಕ್ಲಬ್‌ಗಳು ಭಾಗವಹಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸಾಂಸ್ಕೃತಿಕ ವೈಭವವನ್ನು ರೋಟರಿ ವಲಯ೧ರ ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ ಶೆಟ್ಟಿ ಮೊಳಹಳ್ಳಿ ಉದ್ಘಾಟಿಸಿ, ರೋಟರಿ ಸದಸ್ಯರ ಭಾಂಧವ್ಯವೃದ್ಧಿಯ ದ್ರಷ್ಠಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಹತ್ವಪೂರ್ಣವೆನಿಸಿದೆ. ಪ್ರತಿಯೊಬ್ಬ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಂಭ್ರಮದಲ್ಲಿ ಮಿಂದೇಳುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ೧ರ ಅಸಿಸ್ಟೆಂಟ್ ಗವರ್ನರ್ ಕೆ.ಕೆ.ಕಾಂಚನ್, ಜೋನಲ್ ಲೆಫ್ಟಿನೆಂಟ್ ಜಯಪ್ರಕಾಶ್ ಶೆಟ್ಟಿ, ಮನೋಜ್ ನಾಯರ್, ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕ ಕೆ. ನರಸಿಂಹ ಹೊಳ್ಳ, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷ ಅಜಿತ್ ಕೆ, ಕಾರ್ಯದರ್ಶಿ ಸಿ.ಹೆಚ್. ಗಣೇಶ್, ಕ್ಲಬ್‌ನ ಸಾಂಸ್ಕೃತಿಕ ಕಾರ್ಯದರ್ಶಿ ರಾಜಶೇಖರ ಹೆಗ್ಡೆ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಮತ್ತು ಅಭಿಯೋಗ ಇಲಾಖೆ ಕುಂದಾಪುರ ಇವರ ಸಂಯಕ್ತ ಆಶ್ರಯದಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮ ಕುಂದಾಪುರ ನ್ಯಾಯಾಲಯದ ಸಂಕೀರ್ಣದಲ್ಲಿ ಜರುಗಿತು. ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ, ಗೌರವಾನ್ವಿತ ಡಿ.ಪಿ ಕುಮಾರ ಸ್ವಾಮಿ ಇವರು ಕಾರ್ಯಕ್ರಮವನ್ನು ಉದ್ಘಾಟಸಿ, ಭ್ರಷ್ಟಾಚಾರ ಎಂಬ ಮಹಾಪೀಡುಗಿನಲ್ಲಿ ಲಂಚ ಕೊಡುವುದು ಮತ್ತು ತೆಗೆದುಕೊಳ್ಳುವುದು ಮಾತ್ರ ಭ್ರಷ್ಟಾಚಾರವಲ್ಲ. ಭ್ರಷ್ಟಾಚಾರವನ್ನು ನೋಡಿ ಸುಮ್ಮನಿರುವುದು ಕೂಡಾ ಅತೀ ದೊಡ್ಡ ಭ್ರಷ್ಟಾಚಾರ. ಭ್ರಷ್ಟಾಚಾರದ ವಿರುದ್ಧದ ದ್ಯೇಯೋದ್ದೇಶಗಳನ್ನು ಪಾಲನೆ ಮಾಡಿಕೊಂಡು ಬರುವುದು ಇಂದಿನ ಯುವ ಸಮುದಾಯದ ಅಗತ್ಯದ ಕರ್ತವ್ಯ ಪಾಲನೆಗಳಲ್ಲಿ ಒಂದಾಗಿದೆ ಎಂದರು. ಕುಂದಾಪುರ ಬಾರ್ ಅಸೋಸಿಯೇಷನ್ ಕುಂದಾಪುರ ಇದರ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ, ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶದ ಜನರಿಗೆ ದಿನ ಬೆಳಗಾದರೆ ಭ್ರಷ್ಟಾಚಾರದ ಬಗ್ಗೆ ಕೇಳಿ ಕೇಳಿ ಸಾಕಾಗಿದೆ, ಭ್ರಷ್ಟಾಚಾರ ಎನ್ನುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಾರ್ಕೂರು ರಂಗನಕೆರೆ ಹುಭಾಶಿಕ ಯುವ ಕೊರಗರ ವೇದಿಕೆ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆ ಪ್ರಾಯೋಜಿತ ಕಾರ್ಯಕ್ರಮದಡಿ ಕುಂಭಾಶಿ ಮಕ್ಕಳ ಮನೆಯಲ್ಲಿ ಸುಗಮ ಸಂಗೀತ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಎಸ್. ಶೆಟ್ಟಿ ಸಾಮಾಜಿಕವಾಗಿ ಮತ್ತುಶೈಕ್ಷಣಿಕವಾಗಿ ಹಿಂದುಳಿದಿರುವ ಕೊರಗ ಸಮುದಾಯದ ಮಕ್ಕಳಲ್ಲಿ ಎಲ್ಲರಂತೆ ಸುಪ್ತವಾಗಿರುವ ಪ್ರತಿಭೆ ಇದೆ. ಸರಿಯಾದ ಮಾರ್ಗದರ್ಶನ ಮತ್ತು ಅವಕಾಶ ದೊರೆತರೆ ಮಾತ್ರ ಅದು ಪ್ರಕಟಗೊಳ್ಳಲು ಸಾಧ್ಯ. ಸಂಘಟನೆಗಳು ಲಭ್ಯ ನೆರವು ಪಡೆದು ಅವಕಾಶ ಕಲ್ಪಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ವಾಣಿ ಅಡಿಗ ಇಂತಹ ಕಾರ್ಯಕ್ರಮಗಳನ್ನು ಆಗಾಗ ನಡೆಸುವ ಮೂಲಕ ಕೊರಗ ಮಕ್ಕಳ ಪ್ರತಿಭಾ ಪೋಷಣೆಗೆ ಮುಕ್ತ ಅವಕಾಶ ಕಲ್ಪಿಸಬೇಕು ಎಂದರು. ಗ್ರಾಮ ಪಂಚಾಯತ್ ಸದಸ್ಯೆ ಸಾಲು, ಸಾಮಾಜಿಕ ಕಾರ್ಯಕರ್ತ ಕೊರ್ಗಿ ವಿಠಲ ಶೆಟ್ಟಿ, ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಪದವಿ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ಜೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂರಕ್ಕೆ ಇಪ್ಪತ್ತು ಬಾಲಕರಲ್ಲಿ ಮಧುಮೇಹ. ಆರು ವರ್ಷದ ಬಾಲೆಯಲ್ಲೂ ಋತು ಚಕ್ರ ಬದಲು. ನೂರಕ್ಕೆ ನಾಲ್ಕು ಯುವತಿಯರ ಮೊಗದಲ್ಲಿ ಕೂದಲು. ಐವತ್ತು ವರ್ಷಕ್ಕೆ ನರ ದೌರ್ಬಲ್ಯ. ಶೇ.80ರಷ್ಟು ಯವಕರಲ್ಲಿ ಸಂತಾನೋತ್ಪತ್ತಿ ಕ್ಷೀಣ. ಇದಕ್ಕೆ ಕಾರಣವೇನು ಗೊತ್ತಾ? ಹಾಲಿನ ಉತ್ಪಾದನೆ ವಾಣಿಜ್ಯೀಕರಣ. ಬದಲಾದ ಅಹಾರ ಪದಾರ್ಥ. ಅತಿಯಾದ ರಾಸಾಯನಿಕ ಬಳಕೆ. ಸಹಜತೆ ಬದಲು ಕೃತಕತೆ! ಹೀಗೆ ಬದಲಾದ ಆಹಾರ ಪದಾರ್ಥಗಳಿಂದ ಏನೆಲ್ಲಾ ಆಗುತ್ತದೆ ಎಂಬುವುದನ್ನು ಆಹಾರ ವಿಜ್ಞಾನಿ ಡಾ.ಖಾದರ್ ಮೈಸೂರು ಅವರು ತೆರೆದಿಟ್ಟರು. ಕೋಟೇಶ್ವರ ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆ ಶಾಲಾ ವಠಾರದಲ್ಲಿ ಭಾನುವಾರ ಸಂಜೆ ಆಯೋಜಿಸಿದ ಪ್ರಕೃತಿ ನೀಡಿದ ಸೌಭಾಗ್ಯ ‘ಸಿರಿಧಾನ್ಯ’ ಮಹತ್ವದ ಬಗ್ಗೆ ಮಾತನಾಡಿ, ಕೃತಕ ಹಾಲು ಸಂಪೂರ್ಣ ಆಹಾರವೇ ಅಲ್ಲ. ಅದು ಹಾಲಾಹಲ ಸೃಷ್ಟಿಸುತ್ತದೆ. ಮೂರು ವರ್ಷದ ನಂತರ ಮಾನವ ದೇಹ ಹಾಲು ಜೀರ್ಣಸಿಕೊಳ್ಳುವ ಪ್ರಕ್ರಿಯೆ ನಿಲ್ಲಿಸುತ್ತದೆ. ಕೃತಕ ಹಾಲು ಸಂಪೂರ್ಣ ಆಹಾರ ಹೇಗಾಗುತ್ತದೆ? ತಾಯಿ ಹಾಲೇ ಸಂಪೂರ್ಣ ಆಹಾರ ಎಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕನೊಬ್ಬ ಸಾವನ್ನಪಿದ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡದ ಹಾಲಾಡಿ ಹೊಳೆಯಲ್ಲಿ ನ 6ರ ಸೋಮವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಜನ್ನಾಡಿ ನಿವಾಸಿಗಳಾದ ರಾಜು ಮತ್ತು ಸುಮತಿ ಮೊಗವೀರ ದಂಪತಿಗಳ ಮಗ ಆದರ್ಶ ಮೋಗವೀರ (13) ಎಂದು ಗುರುತಿಸಿಲಾಗಿದೆ, ಇತನು ಬಿದಲ್ಕ್ ಕಟ್ಟೆಯ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿದಲ್ಕ್ ಕಟ್ಕೆಯ ಸರಕಾರಿ ಆಸ್ಪ್ರತ್ರೆಗೆ ರವಾನಿಸಲಾಗಿದ್ದು ಕೋಟ ಠಾಣಾ ಪ್ರಕರಣ ದಾಖಲಾಗಿದೆ.
