Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ರೈತರಿಗೆ ವಿತರಿಸಲಾಗುವ ಭಿತ್ತನೆ ಬೀಜ, ಕೀಟನಾಶಕಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಈ ಕುರಿತಂತೆ, ಭಿತ್ತನೆ ಬೀಜ ಮತ್ತು ಕೀಟನಾಶಕಗಳ ಮಾದರಿಯನ್ನು ಕೃಷಿ ಇಲಾಖೆಯ ಅಧಿಕಾರಿಗಳು ಪ್ರಯೋಗಾಲಯಗಳ ಮೂಲಕ ಪರೀಕ್ಷಿಸಿ, ರೈತರಿಗೆ ಉತ್ತಮ ಗುಣಮಟ್ಟದ ಭಿತ್ತನೆ ಬೀಜಗಳು ದೊರೆಯುವಂತೆ ಮಾಡಬೇಕು ಎಂದು ರಾಜ್ಯದ ಕೃಷಿ ಸಚಿವ ಬಿ. ಸಿ. ಪಾಟೀಲ್ ಸೂಚಿಸಿದರು. ಸೋಮವಾರ ಅವರು ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯಲ್ಲಿ ಬೀಜ ರಸಗೊಬ್ಬರಗಳ ಲಭ್ಯತೆ ಮತ್ತು ಕೃಷಿ ಉತ್ಪನ್ನಗಳ ಸರಕು ಸಾಗಾಗಣಿಕೆ ಬಗ್ಗೆ, ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಸಂಬಂದಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರಿಗೆ ವಿವಿಧ ಮಳಿಗೆಗಳಲ್ಲಿ ವಿತರಿಸಲಾಗುವ ಭಿತ್ತನೆ ಬೀಜ, ಕೀಟನಾಶಕನ್ನು ಪರೀಕ್ಷಿಸಿ, ಕಳಪೆ ಗುಣಮಟ್ಟದ ಭಿತ್ತನೆ ಬೀಜ, ಅವಧಿ ಮೀರಿದ ಕೀಟನಾಶಕಗಳನ್ನು ಸರಬರಾಜು ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ದೂರು ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಯ ಬಳಿಕ ಅಗತ್ಯ ವಸ್ತುಗಳ ಖರೀದಿಗಿದ್ದ ಸಮಯವನ್ನು ವಿಸ್ತರಿಸಲಾಗಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ ಸರಕಾರ ಸೂಚಿಸಿರುವ ಎಲ್ಲಾ ಅಂಗಡಿಗಳು ತೆರೆದಿರಲಿವೆ. ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ಲಾಕ್‌ಡೌನ್ ಆರಂಭದಿಂದ ಬೆಳಿಗ್ಗೆ 7ರಿಂದ 11ರ ತನವಿದ್ದ ಅಗತ್ಯ ವಸ್ತುಗಳ ಖದೀದಿ ಸಮಯವನ್ನು ನಿನ್ನೆಯ ಆದೇಶದಲ್ಲಿ ಮಧ್ಯಾಹ್ನ 1ರ ತನಕ ವಿಸ್ತರಿಸಲಾಗಿತ್ತು. ಆದರೆ ನಗರ ಪ್ರದೇಶಗಳಲ್ಲಿ ಜನದಟ್ಟಣೆಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಕಷ್ಟವಾಗುತ್ತಿದ್ದುದರಿಂದ ಅಗತ್ಯ ವಸ್ತುಗಳ ಖರೀದಿ ಸಮಯವನ್ನು ವಿಸ್ತರಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ/ ಬೆಳಿಗ್ಗೆ 9ರಿಂದ ಸಂಜೆ 7ರ ತನಕ ಮಧ್ಯದಂಗಡಿ ಓಪನ್: ಇನ್ನು ಮದ್ಯದ ಅಂಗಡಿಗಳು ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆಯ ತನಕ ತೆರೆದಿರಲಿವೆ. ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯ ತನಕ ಸಾರ್ವಜನಿಕರ ಸಂಚಾರವನ್ನು ನಿಷೇಧಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಲು ಎಲ್ಲಾ ಅಗತ್ಯ ವಸ್ತುಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ಕುರಿತಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸಿ ಸರ್ಕಾರದ ಆದೇಶದಂತೆ ಕೆಲವೊಂದು ವಿನಾಯಿತಿ ನೀಡಲಾಗಿರುತ್ತದೆ. ಈಗಾಗಲೇ ಸಿನಿಮಾ ಹಾಲ್‌ಗಳು, ಮಲ್ಟಿಪ್ಲೇಕ್ಸ್ ಶಾಪಿಂಗ್ ಮಾಲ್, ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್, ಸ್ಪೋರ್ಟ್ಸ್ ಕಾಂಪೆಕ್ಸ್ ಮುಂತಾದವುಗಳನ್ನು ಹೊರತ್ತುಪಡಿಸಿ ಉಳಿದ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ. ಮುಂದುವರಿದು ಎಸಿ, ಸೆಂಟ್ರಲ್ ಎಸಿ, ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್ ಅಂಗಡಿಗಳಿಗೆ ಸಂಬಂದಿಸಿದಂತೆ ನಿಬಂಧನೆಗಳನ್ನು ವಿಧಿಸಿ ಪ್ರಾರಂಭಿಸಲು ಅನುಮತಿ ನೀಡುವುದು ಸೂಕ್ತವೆಂದು ನಿರ್ಧರಿಸಿ ಈ ಕೆಳಗಿನ ಷರತ್ತಿಗೊಳಪಟ್ಟು ಈ ಅಂಗಡಿಗಳನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ. ಷರತ್ತುಗಳು: 1) ಚಿನ್ನಾಭರಣ ಮಳಿಗೆಗಳು, ಬಟ್ಟೆ ಅಂಗಡಿಗಳು, ಸಿಂಗಲ್ ಬ್ರ್ಯಾಂಡ್, ಮಲ್ಟಿ ಬ್ರ್ಯಾಂಡ್ ಸೇರಿದಂತೆ ಇತಂಹ ಮಳಿಗೆಗಳಲ್ಲಿ ಎಲ್ಲಾ ಮಹಡಿಗಳಲ್ಲಿ ಸೇರಿ ಒಟ್ಟು ೨೫ ಜನ ಸಿಬ್ಬಂದಿಗಳು ಹಾಗೂ ೨೫ ಜನ ಗ್ರಾಹಕರು ಹಾಗೂ ಮಲ್ಟಿ ಬ್ರಾಂಡ್ ಎಲೆಕ್ರ್ಟಾನಿಕ್ಸ್ ಮಳಿಗೆಗಳಲ್ಲಿ (ಪೈ ಸೇಲ್ಸ್, ಹರ್ಷಮುಂತಾದ) ಒಟ್ಟು 100 ಜನ ಸಿಬ್ಬಂದಿಗಳು ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯಾದ್ಯಂತ ಇಂದಿನಿಂದ ಮದ್ಯದಂಗಡಿಗಳ ಬಾಗಿಲು ತೆರೆದಿದ್ದು, ಮಧ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಖರೀದಿಯಲ್ಲಿ ತೊಡಗಿರುವ ದೃಶ್ಯ ಎಲ್ಲೆಡೆಯೂ ಕಂಡುಬರುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಲ್ಲಾ ಬಾರ್‌ಗಳ ಮುಂದೆಯೂ ಜನಸಂದಣಿ ಸಾಮಾನ್ಯವಾಗಿದ್ದು, ಮದ್ಯಪ್ರಿಯರ ನೂಕುನುಗ್ಗಲಿನಿಂದಾಗಿ ಬೈಂದೂರು ಪೇಟೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆದ ಘಟನೆಯೂ ನಡೆದಿದೆ. ಇಂತಹ ಸಂದರ್ಭದಲ್ಲಿ ಬಾರ್‌ಗಳನ್ನು ಮತ್ತೆ ತೆರೆದಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನ 1ರ ತನಕ ಮಾರಾಟ: ಲಾಕ್‌ಡೌನ್ ಜಾರಿಯಾದಾಗಲಿಂದ ಮುಚ್ಚಿದ್ದ ಮದ್ಯದಂಗಡಿಗಳು, ಇಂದಿನಿಂದ ತೆರೆದಿರುವುದರಿಂದ ಮದ್ಯಪ್ರಿಯರ ಚಡಪಡಿಕೆ ಹೆಚ್ಚಿದ್ದವು. ಎಲ್ಲಾ ಬಾರ್‌ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್ ಮಾಡಲಾಗಿತ್ತು. ಕೆಲವು ಬಾರ್‌ಗಳ ಮುಂದೆ ಹತ್ತಾರು ಮೀಟರ್‌ಗಳಷ್ಟು ದೂರಕ್ಕೆ ಮದ್ಯಪ್ರಿಯರ ಸರತಿ ಸಾಲು ಸಾಗಿತ್ತು. ಕೆಲವೆಡೆ ಗುಂಪುಗುಂಪಾಗಿ ನಿಂತು ಸಾಮಾಜಿಕ ಅಂತರವನ್ನು ಗಾಳಿಗೆ ತೂರಿರುವುದು ಕಂಡುಬಂತು. ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಎಲ್ಲಾ ಅಂಗಡಿ ಬಾಗಿಲು ಹಾಕಬೇಕಿರುವುದರಿಂದ ಬಾರ್‌ಗಳು 1 ಗಂಟೆಯ ಬಳಿಕ ಕ್ಲೋಸ್ ಆಗಲಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಾಕ್ ಡೌನ್‌ನ ಸಂಕಷ್ಟದ ಸಂದರ್ಭದಲ್ಲಿ ಊಟಕ್ಕೆ ಕಷ್ಟಪಡುತ್ತಿದ್ದ ವಲಸೆ ಕಾರ್ಮಿಕರಿಗೆ ನಿತ್ಯವೂ ಎರಡು ಹೊತ್ತಿನ ಊಟ ಒದಗಿಸುತ್ತಿದ್ದ ಕುಂದಾಪುರದ ಡಿವೈಎಫ್‌ಐ, ಸ್ಟಾರ್ ಫ್ರೆಂಡ್ಸ್ ಮತ್ತು ಸಮುದಾಯ ಸಂಘಟನೆಗಳ ಮಾನವೀಯ ಕಾರ್ಯ ಶ್ಲಾಘನೀಯ ಎಂದು ಕುಂದಾಪುರ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಹರೀಶ್ ನಾಯ್ಕ್ ಹೇಳಿದರು. ಅವರು ಲಾಕ್ ಡೌನ್ ಸಡಿಲಿಕೆಯ ಮುನ್ನಾ ದಿನ ಸಂಜೆ ಮೇ 3 ರಂದು ಈ ಸಂಘಟನೆಗಳು ಏರ್ಪಡಿಸಿದ್ದ ಸಾಂಕೇತಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಲಾಕ್ ಡೌನ್ ವೇಳೆ ಕುಂದಾಪುರದಲ್ಲಿ ಅತಂತ್ರರಾಗಿ ಸಿಲುಕಿ ಹಾಕಿಕೊಂಡಿರುವ 40 ರಷ್ಟು ವಲಸೆ ಕಾರ್ಮಿಕರಿಗೆ ಕುಂದಾಪುರದ ಡಿವೈಎಫ್‌ಐ, ಸ್ಟಾರ್ ಫ್ರೆಂಡ್ಸ್ ಮತ್ತು ಸಮುದಾಯ ಸಂಘಟನೆಗಳು 35 ದಿನಗಳ ಕಾಲ ನಿತ್ಯವೂ ಎರಡು ಹೊತ್ತಿನ ಊಟ ನೀಡಿದ್ದವು. ಲಾಕ್ ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಈಗ ಈ ಊಟ ನೀಡುವ ಕಾರ್ಯಕ್ಕೆ ವಿರಾಮ ನೀಡಿ ಸಾಂಕೇತಿಕ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಊಟ ತಯಾರಿಸಲು…

Read More

ಕುಂದಾಪ್ರ ಡಾಟ್ ಕಾಂ ವರದಿ. ಬೈಂದೂರು, ಮೇ.3: ಇಂದು ನಿಧನರಾದ ನಿತ್ಯೋತ್ಸವದ ಕವಿ ಕೆ. ಎಸ್. ನಿಸಾರ್ ಅಹಮದ್ ಅವರು ಕರಾವಳಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ವಿವಿಧ ಕಾರ್ಯಕ್ರಮಗಳಿಲ್ಲಿಯೂ ಭಾಗವಹಿಸಿದ್ದರು. 2017ರಲ್ಲಿ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2020ರಲ್ಲಿ ಬೈಂದೂರು ತಾಲೂಕಿನ ಮೊಗೇರಿ ಹಾಗೂ 2014ರಲ್ಲಿ ಬೈಂದೂರಿನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 2017ರ ಕುಂದಾಪುರ ತಾಲೂಕಿನ ತೆಕ್ಕಟ್ಟೆ ವಿಶ್ವವಿನಾಯಕ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ  ಕನ್ನಡ ಪರ ಹೋರಾಟಗಳ ಅಗತ್ಯ, ಇಂಗ್ಲಿಷ್ ಕಲಿಕೆಯ ಅಗತ್ಯತೆ, ರಾಜಕೀಯ ಪ್ರಕ್ಷುಬ್ಧತೆ, ಕನ್ನಡ ನಾಡಿನ ಪ್ರಾಕೃತಿಕ ವೈಭವ ಹೀಗೆ ಹತ್ತು ಹಲವು ವಿಷಯಗಳ ಕುರಿತಾಗಿ ಮನಮುಟ್ಟುವ ಮನಮುಟ್ಟುವಂತೆ ಮಾತನಾಡಿದ್ದರು. 2012ರ ನವಂಬರ್ 20ರ ವೇಳೆಗೆ ಅಡಿಗರು ಹುಟ್ಟಿದ ನೆಲ ಮತ್ತು ಮನೆ ನೋಡಬೇಕು ಎಂದು ಆಶಿಸಿದರು. ನಿಸಾರ್ ಅವರನ್ನು ಬೈಂದೂರಿನ ಸಾಂಸ್ಕೃತಿಕ ಸಂಘಟಕ ಸುಧಾಕರ ಪಿ. ಬೈಂದೂರು ಮತ್ತು ಲೇಖಕ ಓಂ ಗಣೇಶ್ ಅವರು ಮೊಗೇರಿ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿಬಂದಾಜ್ಞೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಯಾವುದೇ ನಾಗರೀಕರ ಓಡಾಟವನ್ನು ನಿಬಂಧಿಸಲಾಗಿರುತ್ತದೆ. ಪ್ರಸ್ತುತ ಉಡುಪಿ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಆಥವಾ ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವುದಕ್ಕೆ ನಿಬಂಧಗಳಿವೆ. ಅಲ್ಲದೇ ಈ ಬಗ್ಗೆ ಸಾರ್ವತ್ರಿಕವಾದ ಅನುಮತಿ ಇರುವುದಿಲ್ಲ, ಕೇವಲ ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಹೋಗ ಬೇಕಾದಲ್ಲಿ ಅಥವಾ ವೈದ್ಯಕೀಯ ಉಪಕರಣಗಳ ಉತ್ಪಾದನಾ ಘಟಕ ಮುಂತಾದ ಅಗತ್ಯ ಕರ್ತವ್ಯಕ್ಕೆ ಹಾಜರಾಗಲು ಅಂತರ್ ಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಅರ್ಜಿಯನ್ನು ವೈದ್ಯಕೀಯ ಪ್ರಮಾಣ ಪತ್ರ, ಅಗತ್ಯ ಸೇವೆಗಳಾದಲ್ಲಿ ಐಡಿ ಕಾರ್ಡ್, ಸಂಸ್ಥೆಯು ಕಳುಹಿಸಿರುವ ಪತ್ರ ಮುಂತಾದ ದಾಖಲೆಗಳೊಂದಿಗೆ ತಹಶೀಲ್ದಾರರ ಮೂಲಕ ಸಲ್ಲಿಸಲು ಅವಕಾಶವನ್ನು ಈಗಾಗಲೇ ಕಲ್ಪಿಸಲಾಗಿದೆ. ಹೀಗೆ ಸಲ್ಲಿಸಲಾದ ಕೋರಿಕೆಗಳನ್ನು ಅನ್‌ಲೈನ್ ಮುಖಾಂತರ ತಹಶೀಲ್ದಾರು ಪರಿಶೀಲಿಸಿ ಅನುಮೋದನೆಗಾಗಿ ಅಪರ ಜಿಲ್ಲಾಧಿಕಾರಿಗೆ ಸಲ್ಲಿಸುತ್ತಾರೆ. ಅವರು ಅನ್‌ಲೈನ್ ಕೋರಿಕೆಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತಾರೆ. ಆದರೂ ಸಹ ಸಾರ್ವಜನಿಕರು ಅನುಮತಿಗಾಗಿ ಜಿಲ್ಲಾಧಿಕಾರಿಯವರ ಕಛೇರಿಗೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿರುತ್ತಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಹೊರರಾಜ್ಯದಿಂದ ಜಿಲ್ಲೆಗೆ ಆಗಮಿಸುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡುವ ಷರತ್ತಿನೊಂದಿಗೆ, ಉಡುಪಿ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಗೆ ಅಂತರ್ ಜಿಲ್ಲೆ/ ರಾಜ್ಯದಿಂದ ಜನರನ್ನು ಕರೆತರುವ ಮತ್ತು ಜಿಲ್ಲೆಯಿಂದ ಕಳುಹಿಸಿ ಕೊಡುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ನಾಗರೀಕರ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದು, ಹೊರರಾಜ್ಯದಿಂದ ಬರುವವರು ಮತ್ತು ಹೊರ ಜಿಲ್ಲೆಯಿಂದ ಬರುವವರು ಕಡ್ಡಾಯವಾಗಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ, ಜಿಲ್ಲಾಧಿಕಾರಿಗಳು ಒಪ್ಪಗೆ ಸೂಚಿಸುವವರೆಗೂ ಜಿಲ್ಲೆಯ ಗಡಿಯಲ್ಲಿ, ಹೊರ ರಾಜ್ಯದಿಂದ ಆಗಮಿಸುವ ಯಾವುದೇ ವಾಹನಗಳಿಗೆ ಪ್ರವೇಶ ನೀಡದಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೊರರಾಜ್ಯದಿಂದ ಆಗಮಿಸುವವರನ್ನು ಉಡುಪಿಯ ಎಂಜಿಎಂ ಮೈದಾನದಲ್ಲಿ ವ್ಯೆದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸಂಬಂದಪಟ್ಟ ತಾಲೂಕು ಕೇಂದ್ರಗಳಿಗೆ ಕಳುಹಿಸಲಾಗುವುದು ಅಲ್ಲಿ ಅವರನ್ನು ಸರ್ಕಾರಿ ಕ್ವಾರಂಟೈನ್‌ಗಾಗಿ ವಿವಿಧ ಹಾಸ್ಟಲ್ ಗಳನ್ನು ನಿಗಧಿಗೊಳಿಸಿದ್ದು, ಹೋಟಲ್‌ಗಳನ್ನು ಸಹ ನಿಗಧಿಗೊಳಿಸಲಾಗಿದೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೊರೋನಾ ವೈರಸ್ ಭೀತಿಯಿಂದ ದೇಶವೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕುಂದಾಪುರದ ವೇದ ಗಣಿತ ಅಧ್ಯಯನ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ಪರಿಹಾರ ನಿಧಿ(ಪಿ.ಎಂ. ಕೇರ‍್ಸ್)ಗೆ 5 ಲಕ್ಷ ರೂ. ದೇಣಿಗೆಯನ್ನು ವೇದ ಗಣಿತ ಅಧ್ಯಯನ ವೇದಿಕೆ ನಿರ್ದೇಶಕ ಡಾ. ಎಸ್. ಎನ್. ಪಡಿಯಾರ್ ಅವರು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚೇಂಪಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮೋಕ್ತೇಸರರಾದ ದಿನಕರ ಶೆಣೈ, ಪತ್ರಕರ್ತ ಸಂತೋಷ ಕೋಣಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಯು.ಎ.ಇನಲ್ಲಿರುವ ಅನಿವಾಸಿ ಕನ್ನಡಿಗರು ಕರ್ನಾಟಕಕ್ಕೆ ಮರಳಲು ಬಯಸಿದರೆ, ತಮ್ಮ ಹೆಸರನ್ನು ಕೆಎನ್‌ಆರ್‌ಐ ಫೋರಮ್-ಯುಎಇ (http://www.knriuae.com) ವೆಬ್ಸೈಟ್ ಹಾಗೂ ಯುಎಇ ಭಾರತೀಯ ರಾಯಭಾರಿ ಕಛೇರಿ  (http://www.cgidubai.gov.in)ವೆಬ್ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಹಾಗು ಪ್ರದಾನ ಕಾರ್ಯದರ್ಶಿ ಪ್ರಭಾಕರ್ ಅಂಬಲತೆರೆ ದುಬೈಯಲ್ಲಿ ಜಂಟಿಯಾಗಿ ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುಎಇನ ವಿವಿಧ ರಾಜ್ಯಗಳಲ್ಲಿರುವ ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ಇನ್ನಿತರ ಆರೋಗ್ಯ ಸಮಸ್ಯೆ ಇದ್ದವರು, ಸಂದರ್ಶನ ವಿಸಾದಲ್ಲಿ ಬಂದು ಹಿಂತಿರುಗಲು ಸಾಧ್ಯವಾಗದೆ ಇದ್ದವರು ಹಾಗೂ ವಯಸ್ಸಾದವರಿಗೆ ಕರ್ನಾಟಕಕ್ಕೆ ಹಿಂತಿರುಗಲು ಪ್ರಥಮ ಆದ್ಯತೆ ನೀಡಲಾಗುತ್ತಿದೆ. ಕೆಎನ್‌ಆರ್‌ಐ ವೆಬ್ಸೈಟ್‌ನಲ್ಲಿ ಹೆಸರು ನೊಂದಾಯಿಸಿದ ಅನಿವಾಸಿ ಕನ್ನಡಿಗರು ಕಡ್ಡಾಯವಾಗಿ ಭಾರತ ರಾಯಬಾರಿ ಕಛೇರಿ ವೆಬ್ಸೈಟ್‌ನಲ್ಲಿಯೂ ತಮ್ಮ ಹೆಸರನ್ನು ನೊಂದಾಯಿಸಬೇಕು. ಕೆಎನ್‌ಆರ್‌ಐ ಫೋರಂ ಕರ್ನಾಟಕಕ್ಕೆ ಹಿಂದಿರುಗುವವರ ಮಾಹಿತಿ ಪಡೆದರೇ, ರಾಯಬಾರಿ ಕಚೇರಿ ಇಡೀ ಅನಿವಾಸಿ ಭಾರತೀಯರದ್ದು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಹಿಂತಿರುಗಿ ಹೋಗಲು ವಿಮಾನ ಅಥವಾ ಹಡಗು ಅದರ…

Read More