ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ, ಹಾಗೂ ಪುಟಾಣಿಗಳಾದ ಪರೀಕ್ಷಿತ್ ಜಿ ಐತಾಳ್ ಹಾಗೂ ಶಯಂತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ರೂಪಿಸಿದ ಮಕ್ಕಳ ಸಾಹಿತ್ಯದೊಲವಿನ ವೇದಿಕೆಯಾದ ಚಾರಣ ಪತ್ರಿಕೆಯ ೯ನೇ ಸಂಚಿಕೆ ಅನಾವರಣ ಕಾರ್ಯಕ್ರಮವು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಾಂತಾರಾಮರ ಅಧ್ಯಕ್ಷತೆಯಲ್ಲಿ ಜರುಗಿತು. ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಶ್ರೀ ಶಾಂತಾರಾಮ ಚಾಲನೆ ನೀಡಿದರು. ಮಕ್ಕಳು ಕನ್ನಡ ಗೀತೆಗಳ ಸಮೂಹ ಗಾಯನದ ಮೂಲಕ ರಂಜಿಸಿದರು. ಯುವಸಾಹಿತಿ ಪೂರ್ಣಿಮಾ ಎನ್ ಭಟ್ ಚಾರಣ ಸಂಚಿಕೆಯನ್ನು ಅನಾವರಣಗೊಳಿಸಿ ಎಲ್ಲಡೆ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತೀ ತಿಂಗಳೂ ಸಾಹಿತ್ಯ ಸಂಚಿಕೆಯನ್ನು ರೂಪಿಸಿ ಮಕ್ಕಳಲ್ಲಿ ಸಾಹಿತ್ಯದೊಲವನ್ನು ಹುಟ್ಟು ಹಾಕುತ್ತಿರುವುದು ಶ್ಲಾಘನೀಯ. ಮಕ್ಕಳು, ಪೋಷಕರು ಇದರ ಉದ್ದೇಶವನ್ನು ಅರ್ಥಮಾಡಿಕೊಂಡು, ಕನ್ನಡವನ್ನು ಸ್ಪಷ್ಟವಾಗಿ ಬರೆಯುವ, ನಿರರ್ಗಳವಾಗಿ ಓದುವ ಮಾತನಾಡುವ ಕೌಶಲ ಬೆಳೆಸಿಕೊಳ್ಳಬೇಕು. ಯಾವುದೇ ಭಾಷೆಯನ್ನು ಕಲಿತರೂ ಕನ್ನಡಿಗರಾದ ನಮ್ಮಲ್ಲಿ ಕನ್ನಡತನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸತ್ಕರ್ಮ, ಉಪಾಸನೆಗಳನ್ನು ನಿರಂತರವಾಗಿ ಮಾಡುತ್ತಿದ್ದರೆ ಜೀವನದಲ್ಲಿ ಯೋಗ್ಯ ಫಲ ದೊರೆಯುತ್ತದೆ. ಧರ್ಮ, ಸಂಸ್ಕಾರ, ಸಂಸ್ಕೃತಿ ಮೊದಲಾದವುಗಳನ್ನು ಅನುಸರಿಸುತ್ತಾ ಹಿರಿಯರು ನಡೆದುಕೊಂಡು ದಾರಿಯಲ್ಲಿ ಸಾಗುವ ಪ್ರಯತ್ನ ಮಾಡಬೇಕು. ಆರಾಧನೆ, ಉಪಾಸನೆಗಳನ್ನು ಮಾಡುತ್ತಿದ್ದರೆ ನಮ್ಮಲ್ಲಿನ ಅಜ್ಞಾನ, ಅಂಧಕಾರ ದೂರವಾಗಿ ಜೀವನ ಪಾವನವಾಗುತ್ತದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಅವರು ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಗುಜ್ಜಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನವನ್ನು ಪೂರ್ವಜರು ಬಹಳ ಶ್ರಮಪಟ್ಟು ಕಟ್ಟಿ ಬೆಳೆಸಿದ್ದು, ಶ್ರೀದೇವರ ಅನುಗ್ರಹದಿಂದ ದೇವಾಲಯ ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ದೇವಾಲಯದ ಅಭಿವೃದ್ಧಿಯಿಂದ ದೇವರ ಸಾನಿಧ್ಯ ಕೂಡ ಹೆಚ್ಚಿ ಭಕ್ತರ ಮನೋಭಿಷ್ಟಗಳು ನೆರವೇರುತ್ತದೆ ಎಂದು ಅವರು ಹರಸಿದರು. ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ರೋಹಿದಾಸ ನಾಯಕ್ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ದೇವಳದ ಅರ್ಚಕ ವೇದಮೂರ್ತಿ ಜಿ.ಅನಂಕಕೃಷ್ಣ ಭಟ್, ವೇದಮೂರ್ತಿ ಜಿ.ವಸಂತ ಭಟ್, ವೇದಮೂರ್ತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದು ಯಕ್ಷಗಾನ ವೃತ್ತಿ ಮೇಳಗಳಲ್ಲಿ ಸಮರ್ಥ ಯುವ ಕಲಾವಿದರ ಕೊರತೆ ಇದೆ. ಯಕ್ಷಗಾನ ಕಲಾಕೇಂದ್ರಗಳು ಮಕ್ಕಳಿಗೆ ತರಬೇತಿ ನೀಡಿ ಅವರನ್ನು ಭವಿಷ್ಯದ ಉತ್ತಮ ಕಲಾವಿದರನ್ನಾಗಿ ರೂಪಿಸುವ ಮೂಲಕ ಈ ಕೊರತೆಯನ್ನು ನೀಗಬೇಕು ಎಂದು ಉದ್ಯಮಿ, ಕೋಟ ಅಮೃತೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಆನಂದ ಸಿ. ಕುಂದರ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನ ನಾಗೂರಿನ ಗುಂಜಾನುಗುಡ್ಡೆಯ ಮಾರ್ವಿ ರಾಮಕೃಷ್ಣ ಹೆಬ್ಬಾರ್ ರಂಗಮಂದಿರದಲ್ಲಿ ನಡೆಸಿದ ದಿ. ವೆಂಕಟರಮಣ ಗಾಣಿಗ ನೆನಪಿನೋಕುಳಿ ಯಕ್ಷಗಾನ ದಶಮಿ ಕಾರ್ಯಕ್ರಮದ ಭಾನುವಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಯಕ್ಷಗಾನಕ್ಕೆ ಹೇರಂಜಾಲು ವೆಂಕಟರಮಣ ಗಾಣಿಗ ಮತ್ತು ಮಾರ್ವಿ ರಾಮಕೃಷ್ಣ ಹೆಬ್ಬಾರ್ ಅವರ ಕೊಡುಗೆ ಅನನ್ಯವಾದುದು. ಅವರ ಹೆಸರಿನಲ್ಲಿ ಈ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ವಿತರಿಸುತ್ತಿರುವುದು ಪ್ರಶಂಸನೀಯ ಕಾರ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ ಹೇರಂಜಾಲು ಯಕ್ಷಗಾನ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ, ಯಕ್ಷಗಾನ ಶಾಲೆಗೆ ಸರ್ಕಾರದ ಅನುದಾನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗದಗದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಟ್ಟಿನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಸುದರ್ಶನ್ ಶೆಟ್ಟಿ ಪ್ರಥಮ ಸ್ಥಾನ ಪಡೆದು ಛತ್ತೀಸ್‌ಗಡದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ನೆಲೆಯಲ್ಲಿ ಕಾಲ್ತೋಡು ಗ್ರಾಮಸ್ಥರ ಪರವಾಗಿ ಪಂಚಾಯತ್ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಇವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯದ ಸುದರ್ಶನ್ ಶೆಟ್ಟಿ ಇವರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಉಪಾಧ್ಯಕ್ಷ ರಾಜು ಪೂಜಾರಿ, ಮಾಜಿ ಅಧ್ಯಕ್ಷ ಮಾದಯ್ಯ ಶೆಟ್ಟಿ, ಸದಸ್ಯರಾದ ಚಂದು ಕುಲಾಲ್ತಿ, ಲಲಿತಾ ಶೆಟ್ಟಿ ಮುರೂರು, ಸುಜಾತಾ ಪೂಜಾರಿ, ಗಣೇಶ ಶೆಟ್ಟಿ, ಬೇಬಿ ಭೋವಿ, ವಿನೋದ, ಪಿಡಿಒ ಸತೀಶ್ ತೋಳಾರ್, ಮೆಟ್ಟಿನಹೊಳೆ ಶಾಲಾ ಮುಖ್ಯಶಿಕ್ಷಕ ಹಾಗೂ ಯೋಗಾ ತರಬೇತುದಾರ ಸುಬ್ಬಯ್ಯ ದೇವಾಡಿಗ, ಶಿಕ್ಷಕ ಮಂಜುನಾಥ ದೇವಾಡಿಗ ಹಾಗೂ ಪಂಚಾಯತ್ ಸಿಬ್ಬಂದಿಗಳು ಇದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೌಟುಂಬಿಕ ವಿಚಾರದಲ್ಲಿ ಸಹೋದರರಿಬ್ಬರ ನಡುವೆ ಉಂಟಾದ ಕಲಹ ಆತ್ಯಹತ್ಯೆಯ ಹಂತಕ್ಕೆ ತಲುಪಿದ ಘಟನೆ ಹೊಸಂಗಡಿಯ ಕೆಪಿಟಿಸಿಎಲ್ ವಸತಿ ಗೃಹದಲ್ಲಿ ನಡೆದಿದೆ. ಸಹೋದರನೊಂದಿಗಿನ ಕಲಹದಿಂದ ಈಶ್ವರ್ ಗೌಡ ಎಂಬಾತ ಮನನೊಂದು ಮನೆಯ ಬಾತ್ ರೂಂನ ಮೆಲ್ಚಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ದೃಶ್ಯ ಕಂಡ ಈಶ್ವರ್ ಪತ್ನಿ ವಿನಂತಿ ಆಘಾತಗೊಂಡು ಮಗುವಿನ ಆಟದ ಜೋಕಾಲಿಗೆ ನೇಣು ಬಿಗಿದು ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವಿನಂತಿಯನ್ನು ಕಂಡು ಪಕ್ಕದ ಮನೆಯ ಮಹಿಳೆ ರಕ್ಷಿಸಿ, ನೆರೆಹೊರೆಯವರ ಸಹಾಯದಿಂದ ತಕ್ಷಣ ಕುಂದಾಪುರದ ಸರ್ಕಾರಿ ಆಸ್ಪತ್ರೆ ದಾಖಲಿಸಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವಿನಂತಿ ಹಾಗೂ ಮೃತ ಈಶ್ವರ ದಂಪತಿಗೆ 8 ತಿಂಗಳ ಮಗುವಿದೆ. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚಲನಚಿತ್ರ ತಯಾರಿಯಲ್ಲಿ ಆಸಕ್ತಿಯಿರುವ ಯುವ ಸಮೂಹಕ್ಕೆ ಚಿತ್ರ ನಿರ್ಮಾಣ ಅರಿವು ಮೂಡಿಸುವ ಹಿನ್ನಲೆಯಲ್ಲಿ ಕಾಣಿ ಸ್ಟುಡಿಯೋ ಬೆಂಗಳೂರು-ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪಿಚ್ಚರ್ ಡೈರೀಸ್ ಎಂಬ ಚಲನಚಿತ್ರ ತಯಾರಿ ಕಾರ್ಯಾಗಾರವನ್ನು ನ.12ರಂದು ಬೆಳಿಗ್ಗೆ 9ರಿಂದ ಕೋಟೇಶ್ವರದ ಸಹನ ಕನ್ವೇಶನ್ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಚಲನಚಿತ್ರದ ನಿರ್ದೇಶನ ಆಧಾರಿತ ಚಟುವಟಿಕೆಗಳು, ಚಲನಚಿತ್ರ ವಿಮರ್ಶೆ, ಚರ್ಚೆ, ಚಲನಚಿತ್ರ ಮಾತುಕತೆ ಹಾಗೂ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಒಂದು ಮೊಟ್ಟೆಯ ಕಥೆ ಖ್ಯಾತಿಯ ನಟ ಮತ್ತು ನಿರ್ದೇಶಕ ರಾಜ್ ಬಿ.ಶೆಟ್ಟಿ, ರಾಮಾ ರಾಮಾ ರೇ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಹಾಗೂ ರೈಲ್ವೆ ಚಿಲ್ಡ್ರನ್ ಚಿತ್ರ ನಿರ್ದೇಶಕ ಪೃಥ್ವಿ ಕೊನನೂರ್ ಭಾಗವಹಿಸಲಿದ್ದಾರೆ. ಆಸಕ್ತರು ಕಾರ‍್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, 8867888600, 8867888700 ಕರೆ ಮಾಡಿ ಆಸನಗಳನ್ನು ಮೀಸಲಿರಿಸಬಹುದು ಎಂದು ಕಾಣಿ ಸ್ಟುಡಿಯೋ ಪ್ರಕಟನೆ ತಿಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬಿದ್ಕಲ್ಕಟ್ಟೆ ಗಾವಳಿ ತಿರುವಿನಲ್ಲಿ ಶನಿವಾರ ಬೆಳಗ್ಗೆ ಟ್ರಕ್ ಡಿಕ್ಕಿ ಹೊಡೆದು ಬೈಕ್ ಸವಾರ ರಸ್ತಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾನೆ. ಹೋಟೆಲ್ ಮ್ಯಾನೇಜ್ಮೆಂಟ್ ಪೂರೈಸಿ, ಮಣಿಪಾಲ ಖಾಸಗಿ ಹೋಟೆಲ್ ಉದ್ಯೋಗಿ ಹಾಲಾಡಿ ನಿವಾಸಿ ಶಂಕರ ಕುಲಾಲ್ ಎಂಬವರ ಪುತ್ರ ಶಬರೀಶ್ (20) ಮೃತಪಟ್ಟ ಯುವಕ. ಟ್ರಕ್ ಬೈಕ್‌ಗೆ ಢಿಕ್ಕಿ ಹೊಡೆದು, ಗಂಭೀರ ಗಾಯಗೊಂಡ ವ್ಯಕ್ತಿಯ ಸ್ಥಳೀಯರು ಮಣಿಪಾಲ ಆಸ್ಪ್ರತ್ರೆಗೆ ಸಾಗಿಸಲು ಪ್ರಯತ್ನ ನಡೆಸಿದ್ದು, ಶಬರೀಶ್ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಶಬರೀಶ್ ಮಣಿಪಾಲಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ಈ ಅಪಘಾತ ನಡೆದಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಕೊಡ್ಲಾಡಿ, ಅಂಪಾರು, ಗುಲ್ವಾಡಿ, ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 41 ಕಡೆ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಶಾಸಕ ಗೋಪಾಲ ಪೂಜಾರಿ ನೆರವೇರಿಸಿದರು. ಕೊಡ್ಲಾಡಿ ಹೊಲದಮನೆ ಸೇತುವೆ, ಅಂಪಾರು ಗ್ರಾ.ಪಂ ಮೂಡುಬಗೆ ಹೊಸಿಮನೆ ರಸ್ತೆ, ವಾಲ್ತೂರು ಕುಣಿಗದ್ದೆ ರಸ್ತೆ, ಶಾನ್ಕಟ್ಟು ಮೇಲ್‌ಬೆಟ್ಟು ರಸ್ತೆ, ಗೊರಟೆ ರಸ್ತೆ, ಜಿಗಾರು ರಸ್ತೆ, ಜಿಗಾರುಗುಡ್ಡೆ ರಸ್ತೆ, ಗುಡಿಬೆಟ್ಟು ನಂದಿಕೇಶ್ವರ ದೇವಸ್ಥಾನ ರಸ್ತೆ, ಮೇಲ್‌ಬೈಲು ರಸ್ತೆ, ಬಂಗ್ಲೆಗುಡ್ಡೆ ಮತ್ತು ಕಂಸಾಡಿ ರಸ್ತೆ, ತೆಂಕಬೆಟ್ಟು ಕುಂಬಾರಬೆಟ್ಟು ರಸ್ತೆ, ಗುಲ್ವಾಡಿ ಗ್ರಾ.ಪಂ ಸೌಕೂರು ಚಿಕ್ಕಪೇಟೆ ರಸ್ತೆ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ, ಕಂಬಳಗದ್ದೆ ರಸ್ತೆ, ಕಾವ್ರಾಡಿ ಗ್ರಾ.ಪಂ ನೆಲ್ಲಿಕಟ್ಟೆ ಕೂಡು ರಸ್ತೆ, ಸಾರ್ಕಲ್ ರಸ್ತೆ, ಬ್ರಹ್ಮಲಿಂಗೇಶ್ವರ ದೇವಸ್ಥಾನ ರಸ್ತೆ, ಕಲ್ಲರಬೈಲು ರಸ್ತೆ, ಮುಳ್ಳುಗುಡ್ಡೆ ಪ.ಜಾತಿ ಕಾಲನಿ ರಸ್ತೆ, ಕಂಡ್ಲೂರು ಸೌಕೂರು ರಸ್ತೆ, ಕರ್ಕುಂಜೆ ಗ್ರಾಮದ ಕೊಲ್ಲೂರು ಮುಖ್ಯರಸ್ತೆಯಿಂದ ಕೊರಬೈಲು ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಾಮರ್ಥ್ಯವಿದ್ದರೆ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಇದನ್ನು ಮೈಗೂಡಿಸಿಕೊಂಡರೆ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ. ಸಮಾಜ ಭ್ರಷ್ಟಾಚಾರದಿಂದ ಕೂಡಿದೆ ಎಂದು ದೂಷಿಸುವ ಮೊದಲು ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ತಮ್ಮ ತಮ್ಮ ಕೊಡುಗೆ ಅಗತ್ಯ ಇದೆ ಎಂದು ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಉಪಾಧೀಕ್ಷಕ ದಿನಕರ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಬೈಂದೂರು, ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಉಡುಪಿ, ಸರಕಾರಿ ಪದವಿಪೂರ್ವ ಕಾಲೇಜು ಬೈಂದೂರು ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜರುಗಿದ ’ನನ್ನ ನೋಟ ಭ್ರಷ್ಟಾಚಾರ ಮುಕ್ತ ಭಾರತದತ್ತ’ ಭೃಷ್ಟಾಚಾರ ಜಾಗೃತಿ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಾನೂನುಬದ್ಧ ಹಾಗೂ ನ್ಯಾಯಬದ್ಧವಾಗಿ ಸರಕಾರಿ ನೌಕರರು ಪಡೆಯುವ ಸಂಬಳದ ಹೊರತಾಗಿ ಬೇರೆ ಯಾವುದೇ ಸ್ವರೂಪದಲ್ಲಿ ಗಳಿಸುವ ಪ್ರತಿಯೊಂದೂ ಭ್ರಷ್ಟಾಚಾರದ ಭಾಗವೇ ಆಗಿದೆ. ಭ್ರಷ್ಟಾಚಾರದಿಂದ ಜನಸಾಮಾನ್ಯರಿಗೆ ಅನ್ಯಾಯವಾದರೆ ಅದನ್ನು ವಿರೋಧಿಸುವ, ಪ್ರತಿಭಟಿಸುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನ.೩ ರಿಂದ ೫ರ ತನಕ ನಡೆಯಲಿರುವ ಪ್ರಸಿದ್ಧ ಹಂಪಿ ರಾಷ್ಟ್ರೀಯ ಉತ್ಸವ ೨೦೧೭ರಲ್ಲಿ ಬೈಂದೂರಿನ ಹೆಮ್ಮೆಯ ರಂಗ ಕಲಾಸಂಸ್ಥೆ ’ರಂಗ ಸುರಭಿ’ ತಂಡದ ನಾಟಕ ಪ್ರದರ್ಶನಗೊಳ್ಳಲಿದೆ. ನ.೫ರ ಭಾನುವಾರ ಸಂಜೆ ಹಂಪಿ ಸಾಂಸ್ಕೃತಿಕ ಉತ್ಸವದಲ್ಲಿ ಕಡಲೆಕಾಳು ಗಣಪ ವೇದಿಕೆಯಲ್ಲಿ ಖ್ಯಾತ ನಾಟಕಕಾರ ರಾಜೇಂದ್ರ ಕಾರಂತ್ ಅವರು ರಚಿಸಿ, ಯೋಗೀಶ್ ಬಂಕೇಶ್ವರ ಅವರು ನಿರ್ದೇಶಿಸಿರುವ ’ಪಿಸುಣಾರಿ ಪ್ರೇಮ ಪ್ರಕರಣ’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ನಾಗೇಂದ್ರ ಬಂಕೇಶ್ವರ್ ನೃತ್ಯ ಸಂಯೋಜನೆ, ಚಂದ್ರ ಬಂಕೇಶ್ವರ ಅವರ ಸಂಗೀತ ಸಂಯೋಜನೆ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
