ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಪೊಲೀಸ್ ಸಾರ್ವಜನಕರೊಡಗೂಡಿ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಮಂಗಳವಾರ ’ಏಕತೆಗಾಗಿ ಓಟ’ ಹಮ್ಮಿಕೊಂಡಿದ್ದರು. ಓಟದ ಆರಂಭದಲ್ಲಿ ಮಾತನಾಡಿದ ಎಸ್ಐ ಬಿ. ಸುಬ್ಬಣ್ಣ ಅಕ್ಟೋಬರ್ ೩೧ ಸ್ವತಂತ್ರ ಭಾರತದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಜನ್ಮದಿನ. ನೂರಾರು ಆಳರಸರ ನಡುವೆ ಹರಿಹಂಚಿಹೋಗಿದ್ದ ಭಾರತವನ್ನು ಒಂದುಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದ ಹೈದರಾಬಾದ್ ನಿಜಾಮರ ವಿರುದ್ಧ ಪೊಲೀಸ್ ಕಾರ್ಯಾಚರಣೆ ಆದೇಶಿಸಿ ಹೈದರಾಬಾದ್ ಸಂಸ್ಥಾನವನ್ನೂ ಅವರು ಮಣಿಸಿದ್ದರು. ದೇಶದ ಸಮಗ್ರತೆ ಮತ್ತು ಏಕತೆಗೆ ಅವರ ಸಮಯೋಚಿತ ಮತ್ತು ದಿಟ್ಟ ನಿರ್ಧಾರಗಳು ನಿರ್ಣಾಯಕವೆನಿಸಿದ್ದುವು. ಜಿಲ್ಲಾ ಪೊಲೀಸ್ ವರಿಷ್ಠ ಡಾ. ಸಂಜೀವ್ ಪಾಟೀಲ್ ಅವರ ನಿರ್ದೇಶನದಂತೆ ಪಟೇಲರ ಜನ್ಮದಿನದಂದು ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದರ ಜತೆಗೆ ಇಂದಿನ ಜನ ಸಮುದಾಯಕ್ಕೆ ಅದರ ಮಹತ್ವವನ್ನು ಸಾರುವ ಉದ್ದೇಶದಿಂದ ಏಕತೆಗಾಗಿ ಓಟ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಚ್ಚು ಓದಿಕೊಂಡಿಲ್ಲ.. ಕುಲಕಸಬು ಮರಗೆಲಸ.. ಮಾಡುತ್ತಿರುವುದು ಸೆಂಟರಿಂಗ್ ಕೆಲಸ. ಇಷ್ಟೆಲ್ಲಾ ಇದ್ದರೂ ಯುವಕನ ಹೃದಯ ಕನ್ನಡ ಮನಸ್ಸು. ಸಾಹಿತ್ಯ! ಕನ್ನಡ ರಾಜ್ಯೋತ್ಸವದಂದು ಯುವಕ ನಾಡು ನಡಿಯ ಸಂದೇಶ ಹೊತ್ತು ಪಾದಯಾತ್ರೆ ಮೂಲಕ ಹೊರಟಿದ್ದು ಕುಂದಾಪುರದ ಕಡೆ. ಬೆಳಗ್ಗೆ ೭.೩೦ಕ್ಕೆ ಆರಂಭವಾದ ಕಾಲು ನಡಿಗೆ ಸಂಜೆ ೫ಕ್ಕೆ ಕುಂದಾಪುರಕ್ಕೆ ಬರುವ ಮೂಲಕ ಮುಕ್ತಾಯ. ಉಡುಪಿ ಕುಂದಾಪುರ ನಡುವಿನ ಕನ್ನಡ ಮನಸ್ಸುಗಳು ಮಾತನಾಡಿಸಿದ್ದಾರೆ. ಬೆನ್ನುತಟ್ಟಿ, ಪ್ರೋತ್ಸಾಹಿಸಿ ಹೊಸ ಸಾಹಸಕ್ಕೆ ಮುನ್ನುಡಿ ಬರೆದ ಯುವಕನ ಹೆಸರು ಶಿರೂರು ತಾರಾನಾಥ ಮೇಸ್ತ. ಬೈಂದೂರು ವಿಧಾನ ಸಭಾ ಕ್ಷೇತ್ರ ಶಿರೂರು ನಿತ್ಯಾನಂದ ನಗರ ನಿವಾಸಿ ಜನಾರ್ದನ ಮೇಸ್ತ ಹಾಗೂ ಶಾರದಾ ಮೇಸ್ತ ಮೂವರು ಮಕ್ಕಳಲ್ಲಿ ತಾರಾನಾಥ ಮೇಸ್ತ ಮೊದಲಿಗರು. ಒಬ್ಬ ತಮ್ಮ ಮತ್ತೊಬ್ಬಳಿ ತಂಗಿ ಇದ್ದು, ಮರಗೆಲಸ ಕುಲ ಕಸುಬಾಗಿದ್ದು, ಉಡುಪಿ ಪರಿಸರದಲ್ಲಿ ತಾರಾನಾಥ ಮೇಸ್ತ ಸೆಂಟರಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದರೂ, ಇವರ ಆಸಕ್ತಿ ಕನ್ನಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮನುಷ್ಯ ಒಬ್ಬ ಸಾಮಾಜಿಕ ಪ್ರಾಣಿ. ಆತನಿಗೆ ಸಮಾಜದೊಂದಿಗೆ ಅವಿನಾಭಾವ ಸಂಬಂಧವಿದೆ. ಆತನ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಅಗತ್ಯ. ಶಿಕ್ಷಣ ಪದ್ಧತಿ ಕಾಲದಿಂದ ಕಾಲಕ್ಕೆ ಬದಲಾಗಬೇಕಿದೆ. ಇಂತಹ ಬದಲಾವಣಿಯಲ್ಲಿ ಪೋಷಕರ ಪಾತ್ರ ಹಿರಿದು ಎಂದು ಕುಂದಾಪುರ ಶಿಕ್ಷಣ ಇಲಾಖೆಯ ಪ್ರಭಾರ ಕ್ಷೇತ್ರ ಸಮನ್ವ್ಯಾಧಿಕಾರಿ ಸದಾನಂದ ಬೈಂದೂರ್ ಹೇಳಿದರು.ಅವರು ಕೋಟೇಶ್ವರ ರೋಟರಿ ಕ್ಲಬ್ ಆಯೋಜಿಸಿದ್ದ ‘ಶಿಕ್ಷಣ ಏಕೆ?’ ಎಂಬ ವಿಷಯದ ಮೇಲೆ ಮಾತನ್ನಾಡಿದರು.ರೋಟರಿ ಅಧ್ಯಕ್ಷ ಪ್ರಕಾಶ್ ಆಚಾರ್ ಅಧ್ಯಕ್ಷೆತವಹಿಸಿದ್ದರು.ಕಾರ್ಯದರ್ಶಿ ಸತಿಹೀಶ್ ಆಚಾರ್ ಸ್ವಾಗತಿಸಿದರು,ಪ್ರಾದ್ಯಾಪಕ ಕೃಷಮೂರ್ತಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ದುಬೈ: ಕುಂದಾಪುರ ದೇವಾಡಿಗ ಮಿತ್ರ ಕದಂ ದುಬೈ ಇವರ 8ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕದಂ ರೂವಾರಿ ಎಲಿಗೆಂಟ್ ಗ್ರೂಪ್ ಕಂಪೆನಿಯ ಆಡಳಿತ ನಿರ್ಧೇಶಕರಾದ ದಿನೇಶ್ ದೇವಾಡಿಗ ನಾಗೂರೂ ಇವರ ನೇತ್ರತ್ವದಲ್ಲಿ ಆಜಮಾನ ಬೀಚ್ ಪೋರ್ಟ್ ನಲ್ಲಿ ಜರುಗಿತು. ರಾಮಚಂದ್ರ ದೇವಾಡಿಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಬಿಸಲಾಯಿತು.ಕದಂ ದುಬೈ ಮಹಿಳಾ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ರವಿ ದೇವಾಡಿಗ ನಾಗೂರೂ ಸಂದೇಶ ವಾಚನಗೈದರು. ಸಭೆಯಲ್ಲಿ ದೇವಾಡಿಗ ಸಂಘ ಮುಂಬೈನ ಅಧ್ಯಕ್ಷರಾದ ರವಿ ಎಸ್ ದೇವಾಡಿಗ,ವಿಮರ್ಶಕ ಶ್ರಮಿಕ ಸಂಘಟಕ ವಾಗ್ಮಿಯಾದ ಹಿರಿಯಡ್ಕ ಮೋಹನ್ ದಾಸ್,ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಂಬಿಕಾ ರಾಜು ದೇವಾಡಿಗ ತ್ರಾಸಿ,ಮೊದಲಾದವರನ್ನು ಅಬಿನಂದಿಸಲಾಯಿತು.ಮನುಕುಲದ ಶ್ರೇಷ್ಠ ದೇವಾಡಿಗ ಸಾಧಕ ಪ್ರಶಸ್ತಿಯನ್ನು ಜಿಲ್ಲಾಪಂಚಾಯತ್ ಸದಸ್ಯೆ ಗೌರಿ ದೇವಾಡಿಗ ಇವರಿಗೆ ನೀಡಲಾಯಿತು.ಕದಂ ವಾರ್ಷಿಕ ವರದಿಯನ್ನು ಕದಂ ಸದಸ್ಯ ವಾಸು ದೇವಾಡಿಗ ಮಂಡಿಸಿದರು.ಸಭೆಗೆ ಆಗಮಿಸಿದ ಸಭಿಕರಿಗೆ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರವನ್ನು ಸದಸ್ಯ ಶ್ರೀಧರ್ ದೇವಾಡಿಗ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಕನ್ನಡ ಭಾಷೆಗೆ ಆಗ್ರಪಟ್ಟ ಎನ್ನುವ ನಿಟ್ಟಿನಲ್ಲಿ ಆಡಳಿತದಲ್ಲಿ ಶೇ.೧೦೦ರಷ್ಟು ಕನ್ನಡ ಬಳಕೆಗೆ ಒತ್ತು ಕೊಡಲಾಗಿದೆ. ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕ್ಷೀರ ಭಾಗ್ಯ, ಬಿಸಿಯೂಟ, ಸಮವಸ್ತ್ರದ ಮೂಲಕ ಕನ್ನಡ ಕಲಿಕೆ ಪ್ರಮಾಣ ಹೆಚ್ಚಿಸುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಇಂಗ್ಲಿಷ್ ಎಂಬ ಭ್ರಮೆಯಲ್ಲಿ ಕನ್ನಡ ಕಲಿಕೆಗೆ ಹಿಂದೇಟು ಬೇಡ. ಎಂಟು ಜ್ಞಾನ ಪೀಠ ಮುಡಿಗೇರಿಸಿಕೊಂಡ ಗಟ್ಟಿಭಾಷೆ ಕನ್ನಡ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ ಹೇಳಿದರು. ಅವರು ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ತಾಪಂ ಹಾಗೂ ಪುರಸಭೆ ಆಶ್ರಯದಲ್ಲಿ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿ ದೇಶಕ್ಕೆ ಕನ್ನಡಿಗರ ಕೊಡುಗೆ ದೊಡ್ಡದಿದ್ದು, ಸ್ವಾತಂತ್ರ ಹೋರಾಟದಲ್ಲೂ ಕನ್ನಡರ ಕೊಡಗೆ ಅನನ್ಯ ಎಂದ ಅವರು, ಎಲ್ಲರೂ ಒಟ್ಟಾಗಿ ಭಾವೈಕ್ಯದಿಂದ ರಾಜ್ಯದ ಅಭಿವೃದ್ಧಿಗೆ ಬದ್ದರಾಗೋಣ. ಕನ್ನಡ ಭಾಷೆ, ಸಾಹಿತ್ಯಕ್ಕೆ ಸಾಹಿತಿಗಳು ದೊಡ್ಡ ಕೊಡುಗೆ ನೀಡಿದ್ದು, ಕನ್ನಡ ಭಾಷೆ…
ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಸೇವೆ ಶ್ಲಾಘನೀಯ: ಡಾ. ಸುಬ್ರಹ್ಮಣ್ಯ ಭಟ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಸಾಮಾಜಿಕ ಸ್ಥಾನ-ಮಾನದ ವಿಚಾರದಲ್ಲಿ ಮೂಲೆಗುಂಪಾಗಿರುವ ಇಂತಹ ಕಾರ್ಮಿಕರನ್ನು ಸಂಘಟಿಸಿ ಮುಖ್ಯವಾಹಿನಿಗೆ ತರುವಲ್ಲಿ ಉಪ್ಪುಂದ ಘಟಕದ ಆರಂಭ ಅರ್ಥಪೂರ್ಣ ಎಂದು ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಹೇಳಿದರು. ಬೈಂದೂರು ರೋಟರಿ ಸಭಾಭವನದಲ್ಲಿ ಕರ್ನಾಟಕ ಕಾರ್ಮಿಕರ ವೇದಿಕೆ ಉಪ್ಪುಂದ ಘಟಕ ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು. ಕಾರ್ಮಿಕ ಸಂಘಟನೆಯ ಧ್ಯೇಯೋದ್ಧೇಶಗಳನ್ನು ಅರ್ಥೈಸಿಕೊಂಡು ಅದಕ್ಕೆ ಚ್ಯುತಿ ಬಾರದಂತೆ ಒಗ್ಗಟ್ಟಿನಿಂದ ಸಮಾಜ ಸೇವೆ ಮಾಡಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಸಂಸಾರದ ಶ್ರೇಯಸ್ಸಿಗಾಗಿ ಯಾವುದೇ ದುಶ್ಚಟಗಳ ದಾಸರಾಗದೇ ನ್ಯಾಯ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ದುಡಿದು ಉದ್ದೇಶ ಈಡೇರಿಸಿಕೊಳ್ಳಬೇಕು. ಜಾತಿ, ಧರ್ಮ, ಭೇಧಭಾವವಿಲ್ಲದೇ, ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಗುಲಾಮರಾಗದೇ ಸ್ವತಂತ್ರವಾಗಿ ಬಾಳುವ ಮೂಲಕ ಕಾರ್ಮಿಕರು ದೇಶದ ಬೆನ್ನೆಲಬು ಎಂಬುದನ್ನು ನಿರೂಪಿಸಬೇಕು. ಸರಿಯಾದ ಮಾರ್ಗದರ್ಶನವಿಲ್ಲದೇ ಯುವಪೀಳಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲಾಡಳಿತ, ಉಡುಪಿ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮವು ಬೀಡಿನಗುಡ್ಡೆಯ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ದ್ವಜಾರೋಹಣೆ ನೆರವೇರಿಸಿದ ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು. ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೩೦ ಮಂದಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ೨೦೧೫ ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಜಿಲ್ಲಾ ಮಟ್ಟದಲ್ಲಿ ಗರಿಷ್ಠ ಅಂಕ ಪಡೆದ ೫ ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಗಳನ್ನು ವಿತರಿಸಲಾಯಿತು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉಡುಪಿ ಕುಂಜಿಬೆಟ್ಟುವಿನ ಎಂಜಿಎಂ ಕಾಲೇಜಿನಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಪೂಜೆ ಸಲ್ಲಿಸಿದ ನಂತರ ವಿವಿಧ ಇಲಾಖೆಗಳಿಂದ ನಿರ್ಮಿಸಿದ್ದ ಸ್ಥಬ್ಧಚಿತ್ರಗಳ ಮೆರವಣಿಗೆ ನಡೆಯಿತು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ರಸ್ತೆ, ಸೇತುವೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 40.92 ಕೋಟಿ ಅನುದಾನ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಗ್ರಾಮೀಣಾಧಿವೃದ್ಧಿ ಸಚಿವರು,ಲೋಕೋಪಯೋಗಿ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ತಿಳಿದರು. ಅವರು ಬೈಂದೂರು ಶಾಸಕರ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೊಲ್ಲೂರು ಪ್ರವಾಸಿ ಮಂದಿರ ನಿರ್ಮಾಣ, ಕೊಡ್ಲಾಡಿ ಗ್ರಾಮದ ಹೊಲದಮನೆ ಬಳಿ ಕುಬ್ಜ ನದಿಗೆ ಸೇತುವೆ ನಿರ್ಮಾಣ, ಶಂಕರನಾರಾಯಣ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಪ್ರಯೋಗಾಲಯ ಮತ್ತು ತರಗತಿ ಕೊಠಡಿ ಹಾಗೂ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದೆ ಎಂದರು. ರಸ್ತೆ ಅಭಿವೃದ್ಧಿಗೆ ಅನುದಾನ: ಬೆಳ್ಳಾಲ ಗ್ರಾಮದ ಮೆಲ್ಟು ಮಾಕಾಡಿ ಜೆಡ್ಡು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ೨೦೧೭ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ೪೬ ಮಂದಿಗೆ ಸಾಧಕರಿಗೆ ಹಾಗೂ ೬ ಸಂಘ ಸಂಸ್ಥೆಗಳಿಗೆ ಒಲಿದಿದೆ. ಈ ಪೈಕಿ ಕುಂದಾಪುರ ತಾಲೂಕಿನ ೬ ಮಂದಿ ಸಾಧಕರು ಹಾಗೂ ಒಂದು ಸಂಸ್ಥೆಯೂ ಪ್ರಶಸ್ತಿಗೆ ಆಯ್ಕೆಯಾಗಿದೆ. ನ.೧ ರಂದು ಬೀಡಿನಗುಡ್ಡೆ ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರು: ಯಕ್ಷಗಾನ: ಕೋಟ ಸುರೇಶ ಬಂಗೇರ ಮಣೂರು ಪಡುಕೆರೆ, ಯಳ್ಳಂಪಳ್ಳಿ ಜಗನ್ನಾಥ ಆಚಾರಿ, ನೀಲಾವರ ಹೇರಂಜಾಲು ಸುಬ್ಬಣ್ಣ ಗಾಣಿಗ ಮೂಡುಮಠ, ಕುಂದಾಪುರ ತಾಲೂಕು, ಕೆ.ಸದಾಶಿವ ಅಮೀನ್ ಕೊಕ್ಕರ್ಣೆ, ಸುರೇಂದ್ರ ಪಣಿಯೂರು ವೈದ್ಯಕೀಯ: ಪದ್ಮರಾಜ ಹೆಗ್ಡೆ ಪ್ರೊಫೆಸರ್ ಮತ್ತು ಮುಖ್ಯಸ್ಥರು, ಯುರೋಲಾಜಿ ವಿಭಾಗ, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಶೈಕ್ಷಣಿಕ: ಪ್ರೊ. ಡಾ. ಗೋಪಾಲ ಕೃಷ್ಣ ಪ್ರಭು. ಕೆ ನಿರ್ದೇಶಕರು, ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಮಣಿಪಾಲ ಕ್ರೀಡೆ:…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಪ್ರಸಕ್ತ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಭಾಜನರಾಗಿದ್ದಾರೆ. ಪ್ರಸ್ತುತ ಕತಾರಿನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಅವರು ಸಾಂಸ್ಕೃತಿಕ ರಂಗದಲ್ಲಿ ಸಲ್ಲಿಸಲಾಗುತ್ತಿರುವ ಸೇವೆಯನ್ನು ಗುರುತಿಸಿ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕತಾರ್ನಲ್ಲಿ ಪಸರಿಸುತ್ತಿರುವ ಸುಬ್ರಹ್ಮಣ್ಯ ಅವರು ಕತಾರ್ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕತಾರ್ ಕರ್ನಾಟಕ ಸಂಘದ ಮೂಲಕ ಹತ್ತಾರು ಕನ್ನಡಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ೨೦೧೩-೧೫ನೇ ಸಾಲಿನಲ್ಲಿ ಕರ್ನಾಟಕ ಸಂಘ ಕತಾರಿನ ಸದಸ್ಯತ್ವ ನೋಂದಣಿ ಸಂಚಾಲಕರಾಗಿ, ಕಾರ್ಯಕಾರಣಿ ಸಮಿತಿಯ ಖಜಾಂಜಿಯಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಕ್ರೀಯಾಶೀಲ ವ್ಯಕ್ತಿತ್ವ, ಸಮಾಜ ಸೇವೆಯಡೆಗಿನ ನಿರಂತರ ತುಡಿತ ಹಾಗೂ ಅತ್ಯುತ್ತಮ ಸಂಘಟನಾ ಕೌಶಲ್ಯದಿಂದ ಸುಬ್ರಹ್ಮಣ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಕತಾರ್ ಕರ್ನಾಟಕ ಸಂಘಕ್ಕೆ ಕನ್ನಡಿಗರನ್ನು ಸದಸ್ಯರನ್ನಾಗಿ ಸೇರಿಸುವಲ್ಲಿ ಹಾಗೂ ಈ ಭಾಗದಲ್ಲಿ ವಿವಿಧ ಸಂಘಟನೆಗಳ ಮೂಲಕ ನಿರಂತರವಾಗಿ ಅತ್ಯುತ್ತಮ ಕಾರ್ಯಕ್ರಮ ಹಾಗೂ…
