Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು (ಹೊಸೂರು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್. ಮ್ಯಾಥ್ಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಾಸ್ತಯ್ಯ ಪೂಜಾರಿ ಹೊಸೂರು, ಉಪಾಧ್ಯಕ್ಷರಾಗಿ ದುರ್ಗಯ್ಯ ಪೂಜಾರಿ ಕಿಸ್ಮತಿ, ಕಾರ್ಯದರ್ಶಿಯಾಗಿ ತಿಮ್ಮ ಮರಾಠಿ ಹೊಸೂರು, ಜೊತೆ ಕಾರ್ಯದರ್ಶಿಯಾಗಿ ಮಹಾದೇವ ಮರಾಠಿ, ಸುಜೇಶ್, ನಾಗಪ್ಪ ಮರಾಠಿ ಹೊಸೂರು, ಸಂಘಟನಾ ಕಾರ್ಯದರ್ಶಿಯಾಗಿ ದೇವಾನಂದ ಹೊಸೂರು, ಗಣೇಶ್ ಆಚಾರಿ ತೂದಳ್ಳಿ ಹಾಗೂ ಖಜಾಂಚಿಯಾಗಿ ಮಹೇಶ್ ಭಂಡಾರಿ ತೂದಳ್ಳಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡ ಉಪ್ಪುಂದ ವಿಶ್ವನಾಥ ದೇವಾಡಿಗ ಕಂಚಿನ ಪದಕ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಕರಾಟೆಯನ್ನು ಜೀವನದ ಹವ್ಯಾಸವಾಗಿಟ್ಟುಕೊಂಡು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಇವರು ಉಪ್ಪುಂದ ದೊಡ್ಡಹಾಡಿಮನೆ ಅಣ್ಣಪ್ಪ ದೇವಾಡಿಗ ಮತ್ತು ಕಾವೇರಿ ದೇವಾಡಿಗರ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಯಾವುದೇ ಫಲಾಪೇಕ್ಷೆ ಮತ್ತು ಪ್ರಚಾರವಿಲ್ಲದೆ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಇನ್ನುಳಿದ ಸಾಧಕರಿಗೆ ಇದರಿಂದ ಪ್ರೋತ್ಸಾಹ ದೊರೆಯಲಿದೆ. ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಾಧಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಮಾಡುತ್ತಿದೆ ಎಂದು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಕಾರ್ಯದರ್ಶಿ ಕೆ.ರಾಮನಾಥ ನಾಯಕ್ ಹೇಳಿದರು. ಅವರು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಂಜೆ ಜರಗಿದ ಎಲೆಮರೆಯ ಕಾಯಿ ಕಾರ್ಯದಲ್ಲಿ ಮಾತನಾಡಿದರು. ಇದೇ ಸಂದರ್ಭ ಉರಗ ತಜ್ಞ ಗುರುರಾಜ್ ಗಂಗೊಳ್ಳಿ ಅವರನ್ನು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜಿ.ವಿಠಲ ಭಾಸ್ಕರ ಶೆಣೈ ಅವರು ಸನ್ಮಾನಿಸಿ ಗೌರವಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಜಿ.ಕೃಷ್ಣಾನಂದ ಮಡಿವಾಳ, ಬಿ.ರಾಘವೇಂದ್ರ ಪೈ ಹಾಗೂ ಕಾರ್ಯದರ್ಶಿ ಗಣೇಶ ಕಿಣಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ನಿರಂತರವಾಗಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಉತ್ತಮ ಆರೋಗ್ಯ, ಮನಸ್ಸು, ಶಾಲಾ ವಾತಾವರಣ ಮತ್ತು ಕಲಿಕಾ ಸನ್ನಿವೇಶಗಳು ಪ್ರಧಾನಕಾರಕಗಳಾಗಿವೆ.ಅದರಲ್ಲಿಯೂ, ವಿದ್ಯಾರ್ಥಿಗಳು ವಿವಿಧ ಆಧುನಿಕ ಸೌಲಭ್ಯಗಳ ಪರಿಣಾಮವಾಗಿ ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವುದು ಶಿಕ್ಷಣ ಸಂಸ್ಥೆಗಳಿಗೆ ಮತ್ತು ಪಾಲಕರಿಗೆ ಪ್ರಮುಖ ಸಮಸ್ಯೆಯಾಗಿದೆ. ಮುಖ್ಯವಾಗಿ ,೬ ರಿಂದ ೧೦ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಎದ್ದು ಕಾಣುವ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಮತ್ತು ಅವುಗಳ ಸಮಸ್ಯೆಗಳ ಬಗ್ಗೆ ಸ್ವತ: ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಶಿಕ್ಷಕರುಗಳಿಗೆ ಅರಿವು ಇರುವುದು ಅನಿವಾರ್ಯವಾಗಿದೆ. ಇವೆಲ್ಲಾ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿಯು ೬ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಾರುಣ್ಯವಸ್ಥೆಯ ಮಹತ್ವ ಮತ್ತು ಸಮಸ್ಯೆಗಳ ಬಗ್ಗೆ ಸಂವಹನ ರೂಪದ ಕಾರ್ಯಗಾರ ಜರುಗಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಆಯುರ್ವೇದ ವೈದ್ಯೆ ಡಾ. ಅಪೇಕ್ಷಾ ರಾವ್ ರವರು ವಿದ್ಯಾರ್ಥಿಗಳಿಗೆ ಕ್ರೀಯಾತ್ಮಕ ಮತ್ತು ಧನಾತ್ಮಕ ಸಲಹೆಗಳನ್ನು ನೀಡಿದರಲ್ಲದೇ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ವತ್ತು, ಸೃಜನಶೀಲತೆ ಮೇಳೈಸಿದ ನಾಗೂರು ಪರಿಸರದ ಮೊಗೇರಿ ಕುಟುಂಬ ವೃಕ್ಷದ ಮೂರು ಶಾಖೆಗಳಲ್ಲಿ ಪಲ್ಲವಿಸಿ ನಾಡಿಗೆ ಪರಿಮಳ ಪಸರಿಸಿ, ಭೌತಿಕವಾಗಿ ಮರೆಯಾದ ಮೂವರು ಅಗ್ರಮಾನ್ಯ ಸಾಧಕರ ಶತಮಾನದ ಸ್ಮೃತಿಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಶು ಕವಯಿತ್ರಿ ಉಳ್ಳೂರಿನ ಅಚ್ಚರಿ ಮೂಕಾಂಬಿಕೆ ಅಮ್ಮನಿಗೆ ಇದು 110ನೆ ವರ್ಷವಾದರೆ, ಯುಗಪ್ರವರ್ತಕ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗ, ಮತ್ತು ಪ್ರತ್ಯುತ್ಪನ್ನಮತಿಯ ಕಾವ್ಯ-ವಿಮರ್ಶಾ ಸೇತು ಬವುಳಾಡಿಯ ಬಿ. ಎಚ್. ಶ್ರೀಧರ ಅವರಿಗಿದು ಶತಮಾನದ ವರ್ಷ. ಈ ತ್ರಿಮೂರ್ತಿಗಳ ಮೂಲ ಪರಿಸರದಲ್ಲಿ ಅವರ ಪ್ರತಿಭೆ, ಪ್ರಸಿದ್ಧಿಗೆ ತಕ್ಕುದಾದ ನೆನಪಿನ ಪರ್ವ 27ರಂದು ಬೆಳಿಗ್ಗೆ 9ರಿಂದ ಸಂಜೆ 6ರ ವರೆಗೆ ಬಿಡುವಿಲ್ಲದೆ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಗೂರಿನ ಒಡೆಯರಮಠ ಗೋಪಾಲಕೃಷ್ಣ ಕಲಾಮಂದಿರದ ಬವುಳಾಡಿ ಮಹಾಲಕ್ಷ್ಮೀ ಹೆಬ್ಬಾರತಿ ಸಭಾವರಣದಲ್ಲಿ ಸಂಪನ್ನವಾಗಲಿದೆ. ನಾಗೂರಿನ ಉಳ್ಳೂರು ಮೂಕಜ್ಜಿ ಪ್ರತಿಷ್ಠಾನ, ಬೆಂಗಳೂರಿನ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಮತ್ತು ಶಿರಸಿಯ ಬಿ. ಎಚ್. ಶ್ರೀಧರ ಪ್ರಶಸ್ತಿ ಸಮಿತಿ ಈ ಸ್ಮರಣೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರಎಜ್ಯುಕೇಶನ್ ಸೊಸೈಟಿ ಪ್ರವರ್ತಿತ, ಡಾ. ಬಿ. ಬಿ. ಹೆಗ್ಡೆ ಪ್ರಥಮದರ್ಜೆಕಾಲೇಜಿನ ರಕ್ಷಕ-ಶಿಕ್ಷಕ ಸಂಘಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನುಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮಚಂದ್ರಶೇಖರ್‌ರವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಗೌರವಾಧ್ಯಕ್ಷರಾಗಿ ಕಾಲೇಜಿನ ಸಂಚಾಲಕರಾದ ಬಿ. ಎಮ್. ಸುಕುಮಾರ ಶೆಟ್ಟಿಯವರು, ಅಧ್ಯಕ್ಷರಾಗಿ ವಿಷ್ಣುಮೂರ್ತಿ ಉಡುಪ ಉಪಾಧ್ಯಕ್ಷರಾಗಿ ಪ್ರೊ. ದೋಮ ಚಂದ್ರಶೇಖರ್, ಕಾರ್ಯದರ್ಶಿಗಳಾಗಿ ಮಮತಾ ಎಸ್. ರಾವ್., ಜೊತೆ ಕಾರ್ಯದರ್ಶಿಗಳಾಗಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಕರ್ ಪಾರಂಪಳ್ಳಿ, ಖಜಾಂಚಿಯಾಗಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ರಕ್ಷಾ ಎಸ್. ಶೆಟ್ಟಿ ಆಯ್ಕೆಯಾದರು. ಪೋಷಕರು, ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ರಕ್ಷಾಎಸ್. ಶೆಟ್ಟಿ ವಂದಿಸಿದರು, ಸುಧಾಕರ್ ಪಾರಂಪಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಮ್ಮಾಡಿ ವೃತ್ತದಲ್ಲಿ ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು. ಪಿ.ಎಫ್.ಐ ಹಾಗೂ ಕೆ.ಎಫ್.ಡಿ ಸಂಘಟನೆಯನ್ನು ನಿಷೇಧಿಸಬೇಕು, ಭ್ರ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿರುವುದಲ್ಲದೇ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಅವರ ವಿರುದ್ಧ ಎ.ಸಿ.ಬಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿದರು. ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್ ಕುಮಾರ ಶೆಟ್ಟಿ ಉಪ್ಪುಂದ ಅವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಅಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುದೇಶ ಕುಮಾರ ಶೆಟ್ಟಿ ಗುಲ್ವಾಡಿ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ಗಾಣಿಗ ಕೆಂಚನೂರು, ಯುವ ಮೋರ್ಚಾ ಪಧಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ವಾಟ್ಸ್‌ಪ್ ಗ್ರೂಪ್‌ಗಳ ಮೂಲಕ ಯುವಕರ ಹಾಡು ಹರಟೆ ಮಾತ್ರ ನಡೆಯದೇ ಆಗಾಗ್ಗೆ ಬಡವರ ಕಣ್ಣೀರೊರೆಸುವ ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇತ್ತಿಚಿಗೆ ನಮ್ಮ ಗೂಡು ವಾಟ್ಸಪ್ ಗ್ರೂಪ್ ಸದಸ್ಯರು ನಮ್ಮ ಪ್ರೀತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಭಿಕ್ಷುಕರಿಗೆ ಮನೆಯಲ್ಲಿಯೇ ರುಚಿಕರ ಊಟ ತಯಾರಿಸಿ ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ವಿತರಿಸಿದರು. ಕುಂದಾಪುರ ತಾಲೂಕಿನ ವಿವಿಧೆಡೆಯ ಯುವಕರಾದ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯುವಕರುಗಳಾದ ರಾಜ್, ಸತೀಶ್, ಚಂದ್ರಶೇಖರ್, ಶ್ರೀನಿವಾಸ್, ಪ್ರತಾಪ್, ಪ್ರವೀಣ್ ಜೆ, ಗೀತಾ, ರಮ್ಯ, ಸುನಿತಾ, ಅನಿತಾ, ಸೀಮಾ ನಮ್ಮ ಪ್ರೀತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೀಕ್ಷುಕರಿಗೆ ಊಟ ವಿತರಿಸಿ ಮಾದರಿ ಕಾರ್ಯದಲ್ಲಿ ಭಾಗಿಯಾದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಕಥೊಲಿಕ್ ಸಭಾ ವತಿಯಿಂದ ಮೇರಿ ಮಾತೆ ಸ್ವರ್ಗಾರೋಹಣದ ಹಬ್ಬದಂದು ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಮತ್ತು ಧರ್ಮಗುರು ವಂ. ಪ್ರವೀಣ್ ಅಮ್ರತ್ ಮಾರ್ಟಿಸ್ ಪವಿತ್ರ ಬಲಿದಾನ ಅರ್ಪಿಸಿದರು. ಚರ್ಚ್ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾರ ಅಧ್ಯಕ್ಷತೆ ವಹಿಸಿ, ಸ್ನಾನಕೋತ್ತರ ಪದವಿಗಳಲ್ಲಿ ಸಾಧನೆ ಮಾಡಿದ ಹಾಗೂ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಮತ್ತು ಪದವಿಯಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಸಿದರು. ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್, ಕಥೊಲಿಕ್ ಸಭೆಯ ನಿರ್ಗಮನ ಅಧ್ಯಕ್ಷ ವಿಲ್ಸನ್ ಆಲ್ಮೇಡಾ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾಉಪಸ್ಥಿತರಿದ್ದರು. ಘಟಕದ ನಿಯೋಜಿತ ಅಧ್ಯಕ್ಷೆ ಶೈಲಾ ಆಲ್ಮೇಡಾ ಸ್ವಾಗತಿಸಿದರು. ವಿನಯಾ ಡಿಕೋಸ್ತಾ ನಿರುಪಿಸಿದರು. ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರ ಗ್ರಾಮದ ನಾಗೂರು ಹೆದ್ದಾರಿ ಬದಿಯಿಂದ ನಾಗೂರು- ಕೊಡೇರಿ ರಸ್ತಗೆ ಸ್ಥಳಾಂತರಗೊಂಡು, ಸಾರ್ವಜನಿಕರ ವಿರೋಧದ ಕಾರಣ ತಾತ್ಕಾಲಿಕವಾಗಿ ಮುಚ್ಚಿದ್ದ ಬಾರ್ ಎಂಡ್ ರೆಸ್ಟೊರಂಟ್‌ನ್ನು ಪೊಲೀಸ್ ರಕ್ಷಣೆಯೊಂದಿಗೆ ತೆರೆಯಲಾಯಿತು. ಪ್ರತಿಭಟನೆಗೆ ಮುಂದಾದ ಜನರಿಗೆ ಉತ್ತರಿಸಿದ ಬಾರ್ ಮಾಲೀಕರು ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಮುಚ್ಚುವಂತೆ ನೀಡಿದ ಮೌಖಿಕ ಆದೇಶವನ್ನು ಪಾಲಿಸಿದ್ದೇವೆ. ಅಬಕಾರಿ ಇಲಾಖೆ ನೀಡಿದ ಅನುಮತಿಯನ್ವಯ ಮತ್ತು ಮುಚ್ಚುವಂತೆ ಯಾವುದೇ ಲಿಖಿತ ಆದೇಶ ಬಾರದಿರುವುದರಿಂದ ಬಾರನ್ನು ತೆರೆಯಲಾಗಿದೆ ಎಂದರು. ಇದರಿಂದ ಆಕ್ರೋಶಿತರಾದ ಜನರು ಶಾಸಕ ಕೆ. ಗೋಪಾಲ ಪೂಜಾರಿ ಅವರ ಮನೆಗೆ ತೆರಳಿ ಬಾರ್‌ಗೆ ಸ್ಥಳೀಯರ ಆಕ್ಷೇಪಣೆ ಇರುವುದರಿಂದ ಅದನ್ನು ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ಕಾಯಿದೆಯಂತೆ ತೀರ್ಮಾನ ತೆಗೆದುಕೊಳ್ಳಲು ತಿಳಿಸಲಾಗುವುದು ಎಂದು ತಿಳಿಸಿದ ಶಾಸಕರು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಾಗೂರಿಗೆ ಭೇಟಿ ನೀಡುವರು ಎಂದು ಪ್ರತಿಭಟನಕಾರರ ಮುಖಂಡರು ತಿಳಿಸಿದ್ದಾರೆ.

Read More