Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆಯನ್ನು ಮಾದರಿಯಾಗಿ ಮಾಡಲು ತೀರ್ಮಾನಿಸಿದ್ದು ಅದರ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆ.೩೧ರಂದು ವಂಡ್ಸೆಯಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ವಂಡ್ಸೆ ಪೇಟೆ ಜನವಸತಿ ಪ್ರದೇಶ, ವಾಣಿಜ್ಯ ಸಂಕೀರ್ಣ, ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿ, ಸ್ವಚ್ಚತೆಯ ಮಹತ್ವ, ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ(ಎಸ್.ಎಲ್.ಆರ್.ಎಂ) ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯರಾದ ಗುಂಡು ಪೂಜಾರಿ, ಉದಯ ಕೆ.ನಾಯ್ಕ, ಸಿಂಗಾರಿ, ಎಸ್.ಎಲ್.ಆರ್.ಎಂ ತರಬೇತಿ ಪಡೆದ ಮೇಲ್ವಿಚಾರಕ ಮಹಮ್ಮದ್ ರಫೀಕ್ ಸಾಹೇಬ್, ಗೋವರ್ಧನ ಜೋಗಿ, ಅಂಬಿಕಾ, ಅನುಸೂಯ, ಸುಧಾಕರ ಪೂಜಾರಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಂಕರ ಆಚಾರ್ಯ, ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಸೇವಾ ಪ್ರತಿನಿಧಿ ಲಾಲಿ ಸೋಜನ್, ಒಕ್ಕೂಟದ ಅಧ್ಯಕ್ಷೆ ಸಂಜೀವಿ, ಮಾಜಿ ಅಧ್ಯಕ್ಷೆ ಜಯಂತಿ ಶೆಟ್ಟಿ, ಪದಾಧಿಕಾರಿ ಜ್ಯೋತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ ಜಿಲ್ಲೆ ಮತ್ತು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಜರಗಿದ ಉಡುಪಿ ಜಿಲ್ಲಾ ಮಟ್ಟದ ಬಾಲಕರ ಹಾಗೂ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳ ವಲಯದ ಪೆರ್ವಾಜೆ ಸರಕಾರಿ ಪ್ರೌಢಶಾಲೆಯ ಬಾಲಕರ ತಂಡ ಹಾಗೂ ಕಾರ್ಕಳ ವಲಯದ ಎಸ್.ವಿ.ಟಿ. ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಂತಿಮ ಹಣಾಹಣಿಯಲ್ಲಿ ಪೆರ್ವಾಜೆ ಸರಕಾರಿ ಪ್ರೌಢಶಾಲೆಯ ಬಾಲಕರ ತಂಡವು ಬ್ರಹ್ಮಾವರ ವಲಯದ ಎಸ್.ವಿ.ಎನ್.ಎನ್. ಆಂಗ್ಲ ಮಾಧ್ಯಮ ಶಾಲೆಯ ತಂಡವನ್ನು ಮತ್ತು ಕಾರ್ಕಳದ ಎಸ್.ವಿ.ಟಿ. ಕಾಲೇಜಿನ ಬಾಲಕಿಯರ ತಂಡವು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್,…

Read More

ಶ್ರೇಯಾಂಕ ಎಸ್ ರಾನಡೆ. ಕುಂದಾಪ್ರ ಡಾಟ್ ಕಾಂ ಲೇಖನ. ವಿಶ್ವದ ಬಹುತೇಕ ರಾಷ್ಟ್ರಗಳು, ಪ್ರದೇಶಗಳು ಒಂದಿಲ್ಲೊಂದು ಕಾರಣದಿಂದ ಬುಲೆಟ್, ಬಾಂಬ್, ಕ್ಷಿಪಣಿಗಳನ್ನು ಹಿಡಿದು ನಿಂತಿವೆ. ಕೆಲವು ಸಾಮ್ರಾಜ್ಯ ವಿಸ್ತರಣೆಗೆ ಅವನ್ನು ಹಿಡಿಯುತ್ತಿದ್ದರೆ ಮತ್ತೆ ಕೆಲವರು ಅವರನ್ನು ತಡೆಯುವುದಕ್ಕಾಗಿಯೋ, ಅಥವಾ ತಮ್ಮ ಅಸ್ಮಿತೆಯ ರಕ್ಷಣೆಗಾಗಿಯೋ ಅಥವಾ ತಮ್ಮನ್ನು ನೆಚ್ಚಿದವರನ್ನು ಕಾಪಾಡಲೋ ಹೀಗೆ ಕಾರಣಗಳು ಹಲವಿದ್ದರೂ ಕೈಯಲ್ಲಿರುವುದು ವಿನಾಶಕಾರಿ ಆಯುಧಗಳು. ಸಿರಿಯಾ, ವೆನೆಜುವೆಲಾದಂತಹ ಕಡೆ ನಾಗರಿಕ ಯುದ್ಧವಾಗುತ್ತಿದ್ದರೆ; ಉತ್ತರ ಕೊರಿಯಾ, ಚೀನಾದಂತಹ ದೇಶಗಳು ಆಕ್ರಮಣಕ್ಕಾಗಿ ಸದಾ ಸಿದ್ಧವಾಗಿವೆ. ಭಯೋತ್ಪಾದನೆ, ಮತಾಂಧತೆಯಿಂದ ಮಧ್ಯಪ್ರಾಚ್ಯ, ಪಶ್ಚಿಮ ಏಷ್ಯಾದ ಪರಿಸ್ಥಿತಿ ರಕ್ತದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ. ಹೀಗೆ ಒಂದಿಲ್ಲೊಂದು ಕಾರಣಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯ ಬದಲಿಗೆ ಅಧಿಕಾರ ಕೇಂದ್ರಿತ “ಹಿಂಸೆ” ಶಕ್ತಿ ರಾಜಕಾರಣದ ಪ್ರಬಲ ಅಸ್ತ್ರವಾಗಿದೆ. ಇಂತಹ ಸಂಕೀರ್ಣ ಸಂದರ್ಭವೇ ವಿಶ್ವದ ಸುತ್ತಲೂ ಆವರಿಸಿರುವಾಗ ಭಾರತವೂ ಅಭಿವೃದ್ಧಿಯ ಬುಲೆಟ್ ಒಂದನ್ನು ನೆಚ್ಚಿದೆ. ಆದರೆ ಇಲ್ಲಿನ ಬುಲೆಟ್ ಬಂದೂಕಿನ ನಳಿಕೆಯಿಂದ ಚಿಮ್ಮುವಂತದ್ದಲ್ಲ. ಪ್ರತೀ ಘಂಟೆಗೆ 350 ಕಿಲೋ ಮೀಟರ್‍ವೇಗದಲ್ಲಿ (ಭಾರತದಲ್ಲಿ ಘಂಟೆಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್‌ನ ಉಪಾಧ್ಯಕ್ಷರನ್ನಾಗಿ ದಿನೇಶ್ ನಾಯ್ಕ್ ಅವರನ್ನು ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಅವರು ನೇಮಕ ಮಾಡಿದ್ದಾರೆ. ಬೈಂದೂರು ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ದಿನೇಶ್ ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತ್ತಿಚಿಗೆ ಕುಂದಾಪುರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ರಸಪ್ರಶ್ನೆ ಸ್ಪರ್ಧೆ ಕಿರಿಯರ ವಿಭಾಗದಲ್ಲಿ ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಿತಿಕಾ ಕೆ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಪಡುವರಿ ಕಲ್ಲುಕಂಟದ ಮನೆ ರಾಘವೇಂದ್ರ ಹಾಗೂ ರಮಾವತಿ ದಂಪತಿಗಳ ಪುತ್ರಿ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಬೆಂಗಳೂರಿನ ಯಕ್ಷಗಾನ ಅಭಿಮಾನಿಗಳು, ಯಕ್ಷ ಸಂಘಟಕರು ಸೇರಿ ಒಂದು ವಿಭಿನ್ನ ಕಾರ್ಯಕ್ರಮ ಆಯೋಜಿಸಿದ್ದಾರೆ. ಕಲೆಯ ಬೆಳವಣಿಗೆಯಲ್ಲಿ ಕಲೆ, ಕಲಾವಿದ, ಪ್ರೇಕ್ಷಕ ಇವುಗಳು ಒಂದು ಸಾಮರಸ್ಯದ ಕೊಂಡಿ ಹೆಣೆದು ನಿಂತಿವೆ. ಯಕ್ಷಗಾನ ಕಲೆಯ ಸರ್ವಾಂಗೀಣ ತಿಳುವಳಿಕೆ ನೀಡುವ, ಹಿಂದಿನ ಸಂಪ್ರದಾಯ, ಇಂದಿನ ಸ್ಥಿತಿ – ದುಸ್ಥಿತಿಗಳ ಬಗೆಗಿನ ಸಮಷ್ಟಿ ಸಂವಾದವೇ ಈ ” ಯಕ್ಷ ವೇದ ತಾಳ ನಿನಾದ” ಕಾರ್ಯಕ್ರಮ. ಬೆಂಗಳೂರಿನ ಯಕ್ಷ ಕಲಾ ಸಾಗರ ಸೆಪ್ಟೆಂಬರ್ 24 ಭಾನುವಾರ ಮಧ್ಯಾಹ್ನ 3:30ಕ್ಕೆ ರವೀಂದ್ರ ಕಲಾಕ್ಷೇತ್ರ ಮುಂಬಾಗದ ಎಡಿಎ ರಂಗಮಂದಿರದಲ್ಲಿ ಯಕ್ಷ ವೇದ ತಾಳ ನಿನಾದ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನದ ರಾಗ, ತಾಳ, ನರ್ತನ, ಸಾಹಿತ್ಯ, ಮಟ್ಟು, ತಿಟ್ಟು, ಪ್ರಬೇಧ ಹೀಗೆ ಎಲ್ಲಾ ಆಯಾಮದ ಸಂವಾದಿಂದ ನಮ್ಮಲ್ಲಿರುವ ಜಿಜ್ಞಾಸೆಗಳಿಗೆ ಉತ್ತರ ದೊರಕಲಿದೆ. ಪ್ರೇಕ್ಷಕರೊಂದಿಗೆ ಸಂವಾದ: ಧಾರೇಶ್ವರರು, ಕೊಳಗಿಯವರು, ವಿಧ್ವಾನ್ರು, ಸರ್ವೇಶ್ವರರು, ಶಂಕರ ಭಾಗವತರು, ಎ.ಪಿ ಪಾಠಕರು, ಕೃಷ್ಣ ಯಾಜಿಯವರು ಭಾಗವಹಿಸಲಿದ್ದಾರೆ. ಪ್ರೇಕ್ಷಕರ ಜೋತೆ ಸಂವಾದದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಜರ್ನಿ ಎನ್ನುವ ಕಿರುಚಿತ್ರದ ಮುಹೂರ್ತವು ನೆರವೇರಿತು. ಛಾಯಾಗ್ರಾಹಕ ದಿನೇಶ್ ಗೋಡೆಯವರು ಕ್ಯಾಮರ ಆನ್ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಗುರು ಕುಂದಾಪುರ್ ಹಾಗೂ 360’ ತಂಡದ ಸದಸ್ಯರಾದ ಸಚಿನ್ ಬಿ ಶೇರುಗಾರ್, ಲೋಕೇಶ್ ಪೂಜಾರಿ, ಅಭಿಷೇಕ್ ಶೇರುಗಾರ್, ನವೀನ್ ಕ್ಷತ್ರಿಯ, ಪ್ರವಿಣ್, ಗಣೇಶ, ರಾಜೇಶ್ ಆಚಾರ್ಯ, ಲಕ್ಷ್ಮೀ ಕಾಂತ್ ಬಿಜೂರು ಮೊದಲಾದವರು ಜೊತೆಗಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಬಿದ್ಕಲ್ ಕಟ್ಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕುಂದಾಪುರ ತಾಲೂಕು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾವು ಪಡೆದ ಟ್ರೋಫಿಯೊಂದಿಗೆ. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಉಪಸ್ಥಿತರಿದ್ದಾರೆ. ಇಲ್ಲಿನ ಐದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ ವತಿಯಿಂದ ಹೋಟೇಲ್ ಪಾರಿಜಾತದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ ಖ್ಯಾತ ಗಾಯಕ ಶ್ರೀಪಾದ ಹೆಗಡೆ ಕಂಪ್ಲಿ ಅವರ ಶಾಸ್ತ್ರೀಯ ಸಂಗೀತ ಶ್ರೋತ್ರವರ್ಗದ ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಆರಂಭದಲ್ಲಿ ಶ್ರೀಪಾದ ಹೆಗಡೆ ಕಂಪ್ಲಿಯವರು ಕಾರ್ಯಕ್ರಮವನ್ನು ನಂದಾದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಗೀತಭಾರತಿ ಟ್ರಸ್ಟ್‌ನ ನಿರ್ದೇಶಕ ಯು.ಎಸ್.ಶೆಣೈ ಸ್ವಾಗತಿಸಿದರು. ಹಿರಿಯ ನಿರ್ದೇಶಕ ಬಿ.ವಿ. ಬಿಳಿಯ ಕಲಾವಿದರನ್ನು ಗೌರವಿಸಿದರು. ಶ್ರೀಪಾದ ಹೆಗಡೆಯವರಿಗೆ ತಬಲಾದಲ್ಲಿ ಹಿರಿಯ ಕಲಾವಿದ ಗೋಪಾಲಕೃಷ್ಣ ಹೆಗಡೆ, ಹಾರ್ಮೋನಿಯಂನಲ್ಲಿ ಶ್ರೀಪಾದ ಹೆಗಡೆಯವರ ಧರ್ಮಪತ್ನಿ ನಾಗವೇಣಿ ಹೆಗಡೆ, ಸಹಕಲಾವಿದರಾಗಿ ಶ್ರೀಪಾದ ಹೆಗಡೆಯವರ ಪುತ್ರ ವಿಶಾಲ ಹೆಗಡೆ, ತರುಣಗಾಯಕ ಅನಘ, ಹಾಗೂ ನೇಹಾ ಹೊಳ್ಳ ಸಹಕರಿಸಿದ್ದರು. ಸಂಗೀತ ಭಾರತಿ ಕಾರ್ಯದರ್ಶಿ ನಾರಾಯಣ ಕೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ನಿರ್ದೇಶಕ ಎ. ಭಾಸ್ಕರ ಹೆಬ್ಬಾರ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಂಘಟನೆಗಳು ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಭವಿಷ್ಯ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಉಪ್ಪುಂದ ಜೇಸಿಐ ಸಪ್ತಾಹದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಪ್ರೇಕ್ಷಕರಲ್ಲಿ ಹೊಸ ಅಭಿರುಚಿ ಮೂಡಿಸುವ ಜತೆಗೆ ಹೆಚ್ಚುಕಾಲ ನೆನಪಿನಲ್ಲಿ ಉಳಿಯುತ್ತದೆ ಎಂದು ಜಿಪಂ ಮಾಜಿ ಸದಸ್ಯ ಎಸ್. ಮದನ್ ಕುಮಾರ್ ಹೇಳಿದರು. ಉಪ್ಪುಂದ ಜೇಸಿಐ ಘಟಕದ ’ಸ್ನೇಹಜೀವಿ-೨೦೧೭’ರ ಸಪ್ತಾಹದ ಐದನೇ ದಿನದ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜೇಸಿಐನಿಂದ ಗ್ರಾಮೀಣ ಪ್ರದೇಶದ ಯುವಜನರಲ್ಲಿ ಆತ್ಮವಿಶ್ವಾಸದ ಜತೆಗೆ ಸೇವಾ ಮನೋಭಾವ ಮೂಡಿಸುವ ಕೆಲಸವಾಗುತ್ತಿದೆ. ದೇಶದ ಉನ್ನತೀಕರಣಕ್ಕೆ ಸಂಸ್ಥೆ ಮುನ್ನುಡಿ ಬರೆಯುತ್ತಿದ್ದು, ಯುವಪೀಳಿಗೆಯನ್ನು ಸಮಜದಲ್ಲಿ ಸುದೃಢವಾಗಿಸಲು ಅವರಿಗೆ ತರಬೆತಿಗಳನ್ನು ನೀಡುವ ಮೂಲಕ ತಯಾರುಗೊಳಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಪ್ಪುಂದ ಘಟಕದ ಅಧ್ಯಕ್ಷ ಮಂಜುನಾಥ ದೇವಾಡಿಗ ಸ್ವಾಗತಿಸಿದರು. ಈ ಸಂದರ್ಭ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಎಂ. ಮತ್ತು ಕರಾಟೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ವಿಶ್ವನಾಥ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ನಿವೃತ್ತ…

Read More