ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ), ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಹಾಗೂ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯು ನಾಗರಾಜ್ ಭಟ್, ಮಲ್ಪೆ ಇವರ ಪ್ರಾಯೋಜಕತ್ವದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗಡಿನಾಡ ತಿರುಗಾಟ ಶಾಲೆಯೆಡೆಗೆ ಗೊಂಬೆ ನಡಿಗೆ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಗೊಂಬೆಯಾಟ ಟ್ರಸ್ಟ್ ಅಸ್ತಿತ್ವ ಕಂಡು 22 ವರ್ಷಗಳ ಸವಿನೆನಪಲ್ಲಿ ಸೆಪ್ಟೆಂಬರ್ 1ರಿಂದ 15ರವರೆಗೆ ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು ತಾಲೂಕಿನ ಒಟ್ಟು 22 ಶಾಲೆಗಳಲ್ಲಿ ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಲಿದೆ. ಕರಾವಳಿ ತೀರದ 350 ವರ್ಷಗಳ 6 ನೇ ತಲಾಂತರದ ವಿಶಿಷ್ಟ, ವಿಶೇಷ ಕಲಾ ಪರಂಪರೆಯ ಉಳಿವಿಗಾಗಿ ಹಗಲಿರುಳೆನ್ನದೆ ಹೋರಾಟ ಮಾಡುತ್ತಾ ಬಂದಿರುವ ಸಂಸ್ಥೆಯು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡದಲ್ಲಿ ಕಳೆದ ೩ ವರ್ಷಗಳಿಂದ ನಿರಂತರ ತಿಂಗಳ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಂಡು ಬರುತ್ತಿದೆ. ಸರಕಾರದ ಯಾವುದೇ ಧನ ಸಹಾಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯುವಶಕ್ತಿ ಮನಸ್ಸು ಮಾಡಿದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಿದೆ. ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಛಲ ಯುವಕರಲ್ಲಿದೆ. ಆದರೆ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ, ನಿರ್ದಿಷ್ಟ ಗುರಿಯಡೆಗೆ ಅವರ ಮನಸ್ಸುನ್ನು ಕೇಂದ್ರೀಕರಿಸುವ ಕೆಲಸ ಮಾತ್ರ ನಿರಂತರವಾಗಿ ನಡೆಯಬೇಕಿದೆ. ಹಾಗಿದ್ದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಹೇಳಿದರು. ಅವರು ಬೈಂದೂರು ಎಸ್ಆರ್ಆರ್ ಕಲಾಮಂದಿರದಲ್ಲಿ ಜರುಗಿದ ನೆಹರು ಯುವ ಕೇಂದ್ರ ಉಡುಪಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಕಳವಾಡಿ ಮಾರಿಕಾಂಬ ಯುತ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜರುಗಿದ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯದಲ್ಲಿ ಭ್ರಷ್ಟಾಚಾರವಿದೆ ಎಂದು ಯುವಕರು ದೂರವೇ ಉಳಿಯುತ್ತಾರೆ. ಆದರೆ ನಾವೇ ದೂರ ಉಳಿದರೆ ರಾಜಕೀಯವನ್ನು ಸರಿದಾರಿಯಲ್ಲಿ ಕೊಂಡ್ಯೊಯ್ಯವವರ್ಯಾರು. ಬದಲಾವಣೆಗೆ ಯುವಕರೇ ಮುನ್ನುಡಿ ಬರೆಯದೇ ಏನು ಸಾಧ್ಯವಿಲ್ಲ. ಚುನಾವಣೆ ಬಂದಾಗ ಹಣದ ಆಮಿಷಕ್ಕೆ ಬಲಿಯಾಗದೆ ಸಮರ್ಥರನ್ನು ಆರಿಸುವ ಬದ್ಧತೆಯನ್ನು ಪ್ರತಿಯೊಬ್ಬರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರು-ಕೊಡೇರಿ ರಸ್ತೆಯ ಅಂಚಿನಲ್ಲಿರುವ ಕಟ್ಟಡಕ್ಕೆ ಹೆದ್ದಾರಿ ಬದಿಯಲ್ಲಿದ್ದ ಬಾರ್ ಸ್ಥಳಾಂತರಗೊಂಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಸಾರ್ವಜನಿಕರ ಪ್ರತಿಭಟನೆ ಮುಂದುವರಿಯಿತು. ನೂರಾರು ಪುರುಷರು ಹಾಗೂ ಮಹಿಳೆಯರು ಸೇರಿ ಕಟ್ಟಡದ ಎದುರು ಬಾರ್ಗೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ಧಿಕ್ಕಾರ್ ಕೂಗುತ್ತಾ ಪ್ರತಿಭಟನೆ ಮಾಡಿದರು. ಬುಧವಾರ ಸ್ಥಳೀಯ ಗ್ರಾಪಂ ಅನುಮತಿ ನೀಡಿಲ್ಲ ಎಂಬ ಪತ್ರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಬಾರ್ಗೆ ತಮ್ಮ ವಿರೋಧದ ಬಗ್ಗೆ ಸಕಾರಣವನ್ನು ವಿವರಿಸಿದ್ದರು. ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅಬಕಾರಿ ಅಧಿಕಾರಿಗಳನ್ನು ಹಾಗೂ ಪೋಲಿಸರನ್ನು ಸಂಪರ್ಕಿಸಿ ಜನರ ವಿರೋಧದ ಕಾರಣಗಳ ಸತ್ಯಾಸತ್ಯತೆ ಪರಿಶೀಲಿಸುವ ತನಕ ಬಾರ್ ಮುಚ್ಚಬೇಕೆಂದು ನಿರ್ದೇಶಿಸಿದ್ದು, ಅದರಂತೆ ಬಾರ್ ಕಟ್ಟಡಕ್ಕೆ ಬೀಗ ಜಡಿಯಲಾಯಿತು. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆದುಕೊಂಡ ಜನರು ಗುರುವಾರ ಬೆಳಿಗ್ಗೆ ಬಾರ್ ಮುಂದೆ ಮತ್ತೆ ಜಮಾಯಿಸಿದರು. ನಾಗೂರು ಪೇಟೆಯಲ್ಲಿಯೂ ಕೂಡಾ ವ್ಯಾಪರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜಿಲ್ಲಾಧಿಕಾರಿ ನೀಡಿದ್ದ ಭರವಸೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಶಿರೂರು, ಗೋಳಿಹೊಳೆ, ನಾವುಂದ ಗಂಗೊಳ್ಳಿ ಮುಂತಾದ ಭಾಗಗಳಲ್ಲಿ ಅಕ್ರಮ ಗೋಸಾಟ, ಗೋಕಳ್ಳತನ ಹಾಗೂ ಮನೆಗಳನ್ನೇ ಕಸಾಯಿಖಾನೆಗಳನ್ನಾಗಿಸಿಕೊಂಡು ಗೋ ಮಾಂಸ ದಂದೆಯನ್ನು ನಿರಾಳವಾಗಿ ನಡೆಸುತ್ತಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಶೀಘ್ರವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡ ಆಗ್ರಹಿಸಿದೆ. ಕೊಟ್ಟಿಗೆಯಲ್ಲಿದ್ದ ಹಾಗೂ ಮೇಯಲು ಬಿಟ್ಟ ದನಗಳನ್ನು ಕದ್ದು, ಕತ್ತರಿಸಿ ಗೋಮಾಂಸ ಭಕ್ಷಕರಿಗೆ ಹಂಚುವ ಜಾಲ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿದೆ. ಇತ್ತಿಚಿಗೆ ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಐದು ದನವನ್ನು ಕದ್ದೊಯ್ದು ಒಂದು ಕರುವನ್ನೂ ಕೊಂದು ಹೋಗಿದ್ದಾರೆ. ದಿನದಿಂದ ದಿನಕ್ಕೆ ಗೋಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ರಾಜಾರೋಷವಾಗಿ ಇಂತಹ ಹೀನ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಶೀಘ್ರವೇ ತನಿಖೆ ಕೈಗೊಂಡು ಗೋಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ತಾಲೂಕಿನಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಬೈಂದೂರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿಂದೂತ್ವ ಹಾಗೂ ಹಿಂದೂತ್ವವಾದಿಗಳನ್ನು ನಿರಂತರವಾಗಿ ದಮನಿಸುವ ಕಾರ್ಯ ರಾಜಕೀಯ ಶಕ್ತಿ ಹಾಗೂ ಬುದ್ಧಿಜೀವಿಗಳಿಂದಾಗುತ್ತಿದೆ. ಹಿಂದೂ ಸಮಾಜದ ಅಸ್ಮಿತೆಯನ್ನು ಅಲುಗಾಡಿಸುವ ಆಂತರಿಕ ದಾಳಿ ಹಾಗೂ ದೇಶದ ಸುಸ್ಥಿರ ಪ್ರಗತಿಗೆ ತೊಡಕನ್ನುಂಟುಮಾಡುವ ಬಾಹ್ಯ ದಾಳಿಗಳು ಹಲವು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಈ ಎಲ್ಲಾ ಬಗೆಯ ದಾಳಿಯನ್ನೂ ಸಮರ್ಥವಾಗಿ ಎದುರಿಸಲು ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಕರ್ನಾಟಕ ಪ್ರಾಂತದ ಸಹಪ್ರಾಂತ ಸಂಪರ್ಕ ಪ್ರಮುಖ್ ಪ್ರಕಾಶ್ ಪಿ. ಎಸ್ ಹೇಳಿದರು. ಅವರು ಯಡ್ತರೆ ಜೆಎನ್ಆರ್ ಕಲಾಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ಜರುಗಿದ ಬೈಂದೂರು ತಾಲೂಕಿನ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಧರ್ಮ ಜಾಗರಣೆ, ಸಾಮರಸ್ಯ, ಗ್ರಾಮ ವಿಕಾಸ, ಕುಟುಂಬ ಪ್ರಭೋದನೆಯಂತಹ ಅಂಶಗಳನ್ನು ಪ್ರತಿ ಗ್ರಾಮದಲ್ಲಿಯೂ ಹಿಂದೂಪರ ಕಾರ್ಯಕರ್ತರು ಅಳವಡಿಸಿಕೊಂಡು ಹಿಂದೂ ಧರ್ಮಿಯರನ್ನು ಸಂಘಟಿಸಿವುದಲ್ಲದೇ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕೆಲಸವಾಗಬೇಕು ಎಂದರು. ನೆರೆಯ ವೈರಿ ರಾಷ್ಟ್ರ ಚೀನಾ ದೇಶದ ಮೇಲೆ ನೇರವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ದ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಕುಟುಂಬ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಸಚಿವರನ್ನು ದೇವಳದ ಆಡಳಿತ ಧರ್ಮದರ್ಶಿ ಹೆಚ್.ರಾಮಚಂದ್ರ ಭಟ್ ಸ್ವಾಗತಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ದೇವಳದ ಪ್ರದಾನ ಅರ್ಚಕ ಬಾಲಚಂದ್ರ ಭಟ್, ಬಿಜೆಪಿ ಮುಖಂಡ ಸುಕುಮಾರ್ ಶೆಟ್ಟಿ, ಉದ್ಯಮಿ ಅಶೋಕ ರೈ ಮಂಗಳೂರು, ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಹಟ್ಟಿಯಂಗಡಿ ಗ್ರಾ. ಪಂ. ಅಧ್ಯಕ್ಷ ರಾಜೀವ ಶೆಟ್ಟಿ, ಕರುಣಾ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ತ್ರಾಸಿ ಘಟಕದಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಪಂಜಿನ ಮೆರವಣಿಗೆ ನಡೆಯಿತು. ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಜರುಗಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ತ್ರಾಸಿ ಘಟಕದ ಉದ್ಘಾಟನಾ ಸಮಾರಂಭದ ಹಾಗೂ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಧ್ಯಕ್ಷತೆಯನ್ನು ಅತ್ತಾವರ ಕೆಎಂಸಿಯ ಎಂ. ಸಿ ಅಪ್ಪಣ್ಣ ವಹಿಸಿದ್ದರು. ಬಜರಂಗದಳದ ಪ್ರಾಂತ ಸಹ ಸಂಯೋಜಕ ರಘುಜೀ ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗದಳ ಮಂಗಳೂರು ವಿಭಾಗ ಸಹ ಸಂಚಾಲಕ ಸುನಿಲ್ ಕೆ.ಆರ್, ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಸಹ ಸಂಚಾಲಕ ಗಿರೀಶ್ ಕುಂದಾಪುರ, ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು, ಸಂಚಾಲಕ ನಿತ್ಯಾನಂದ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು. ತ್ರಾಸಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಎಂ. ಆರ್. ಕೇಶವ ತ್ರಾಸಿ ಸ್ವಾಗತಿಸಿ, ಸಂಚಾಲಕ ಸುನಿಲ್ ವಂದಿಸಿದರು. ತ್ರಾಸಿ…
ಬಡವರಿಗೆ ಹಕ್ಕುಪತ್ರ, ರೇಷನ್ ಕಾರ್ಡ್ ನೀಡಲು ರಾಜ್ಯ ಸರಕಾರ ವಿಫಲ: ಶ್ರೀನಿವಾಸ ಪೂಜಾರಿ ಮಲೇಷಿಯಾದ ಮರಳು ತರಿಸಿ ಜನರೊಂದಿಗೆ ಸರಕಾರ ವ್ಯವಹಾರಕ್ಕಿಳಿದಿದೆ: ಜೆಪಿ ಹೆಗ್ಡೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಕ್ಕುಪತ್ರ ನೀಡುತ್ತೇವೆ ಎಂದು ರಾಜ್ಯ ಸರಕಾರ ಭರವಸೆಯನ್ನಷ್ಟೇ ನೀಡುತ್ತಿದೆ. ಆದರೆ ಆ ಬಗ್ಗೆ ಸಮರ್ಪಕ ನಿಲುವು ತಳೆದಿಲ್ಲ. ಕುಂದಾಪುರ ತಾಲೂಕಿನಲ್ಲಿ ಹನ್ನೆರಡು ಸಾವಿರ ಜನರಿಗೆ ಹಕ್ಕುಪತ್ರ ನೀಡಲು ಬಾಕಿಯಿದ್ದು, ಕೆಲವು ತಿಂಗಳ ಹಿಂದೆ 600 ಜನರಿಗೆ ಮಾತ್ರ ನೀಡಲಾಗಿತ್ತು. ಬಿಜೆಪಿ ಪ್ರತಿಭಟನೆ ಕೈಗೊಂಡ ಬಳಿಕ 1500 ಜನರಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಉಳಿದವರಿಗೆ ಹಕ್ಕುಪತ್ರ ನೀಡದೇ ಸತಾಯಿಸುತ್ತಿರುವುದು ಯಾವ ನ್ಯಾಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಜಿಲ್ಲಾ ಬಿಜೆಪಿ ಹಿಂದೂಳಿದ ಮೋರ್ಚಾದ ನೇತೃತ್ವದಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದ ಬಳಿ ಹಕ್ಕುಪತ್ರ, ಮರಳುಗಾರಿಕೆ ಹಾಗೂ ಪಡಿತರ ಚೀಟಿ ವಿಚಾರದಲ್ಲಿ ರಾಜ್ಯ ಸರಕಾರ ಬಡವರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ಮಾಬುಕಳದಿಂದ ಕುಂದಾಪುರದ ತನಕ ಹಮ್ಮಿಕೊಂಡಿದ್ದ ಪಾದಯಾತ್ರೆ ಸಮಾರೋಪ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೂರಿನ ಹೆದ್ದಾರಿ ಬದಿಯಲ್ಲಿದ್ದ ಬಾರ್ ಎಂಡ್ ರೆಸ್ಟೋರಂಟನ್ನು ನಾಗೂರು-ಕೊಡೇರಿ ರಸ್ತೆಯ ನಿವೇಶನಕ್ಕೆ ಸ್ಥಳಾಂತರಿಸಿರುವುದನ್ನು ವಿರೋಧಿಸಿ ಗ್ರಾಮದ ಗಂಗೆಬೈಲು, ಕೊಡೇರಿ, ಆದ್ರಗೋಳಿ, ನಾಗೂರು ಪರಿಸರದ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಕೊಡೇರಿ ರಸ್ತೆಯ ಹಾಡಿಸ್ಥಳ ಎಂಬಲ್ಲಿ ಸೇರಿ, ಬಾರ್ ವಿರೋಧಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ನೂರಾರು ಪುರುಷರು ಮತ್ತು ಮಹಿಳೆಯರು ಮೆರವಣಿಗೆಯಲ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಸಾಗಿದರು. ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಾಂತರಕ್ಕೆ ಗ್ರಾಮ ಪಂಚಾಯತ್ ಅನುಮೋದನೆ ನೀಡಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಬಳಿಕ ಪಂಚಾಯತ್ ತಕ್ಷಣ ಬಾರ್ ಬಂದ್ ಮಾಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ದೇವಾಡಿಗ, ಪ್ರಮುಖರಾದ ಈಶ್ವರ ದೇವಾಡಿಗ, ಕೃಷ್ಣ ಖಾರ್ವಿ, ತಬ್ರೆಜ್, ವಿಜಯ ಪೂಜಾರಿ, ವಿನೋದಾ ಪೂಜಾರಿ ಬಾರ್ ಆರಂಭವಾದ ಸ್ಥಳದ ಸಮೀಪ ಕೇರಿಸ್ಥಳ ದೈವಸ್ಥಾನವಿದೆ. ಬಾರ್ಗೆ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ. ಇದರಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯಕ್ಷಗಾನ (ಬಡಗು, ಬಡಾ ಬಡಗು) ಮ್ಯೂಸಿಯಂ ಲೋಕಾರ್ಪಣೆಗೊಂಡಿತು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳಾದ ಡಾ.ಹೆಚ್.ಎಸ್.ಬಲ್ಲಾಳ್ ಮಾತನಾಡಿಯಕ್ಷಗಾನ ವೆನ್ನುವುದು ನಮ್ಮ ಕರಾವಳಿ ಭಾಗದ ವಿಶಿಷ್ಟ ಕಲೆಯಾಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಯಕ್ಷಗಾನ ವಸ್ತು ಸಂಗ್ರಹಾಲಯ ನಿರ್ಮಿಸಿರುವುದು ಬಹಳ ಒಳ್ಳೆಯ ಕೇಲಸವಾಗಿದೆ. ಹಾಗೆಯೆ ಕರಾವಳಿಯ ಭಾಗವಾದ ಕುಂದಾಪುರದಲ್ಲಿ ಯಕ್ಷಗಾನ ಕಲೆಯ ಕುರಿತಂತೆ ಸಾಕಷ್ಟು ಕೆಲಸಗಳಾಗಿವೆ. ಇದೊಂದು ವಿಶಿಷ್ಟ ಪ್ರಯತ್ನವೆ ಸರಿ. ಅಲ್ಲದೇ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಅಧ್ಯಯನ ನಡೆಸಲು ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಇದೊಂದು ಒಳ್ಳೆಯ ಅವಕಾಶವನ್ನು ಮಾಡಿಕೊಟ್ಟಿದೆ. ವಿದೇಶಗಳಿಂದ ಬರುವ ವಿದ್ಯಾರ್ಥಿಗಳನ್ನು ಇಲ್ಲಿಗೆ ಅಧ್ಯಯನಕ್ಕೆ ಕಳುಹಿಸಲು ಅನುಕೂಲವಾಗಲಿದೆ ಎಂದು ಹೇಳಿದರು. ಡಾ.ಹೆಚ್. ಶಾಂತಾರಾಮ್ ಅವರ ೯೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಯಕ್ಷಗಾನ (ಬಡಗು, ಬಡಾ ಬಡಗು) ಮ್ಯೂಸಿಯಂ ಉದ್ಘಾಟನೆಯಾಗಿರುವುದು ಇನ್ನೂ ಸಂತೋಷದಾಯಕ. ಏಕೆಂದರೆ ಯಕ್ಷಗಾನ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ ಈ ಎಲ್ಲಾ…
