ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕುಂದಾಪುರ-ಗಂಗೊಳ್ಳಿ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ಸಿಬ್ಬಂದಿಗಳಿಗೆ ಕುಂದಾಪುರದಲ್ಲಿ ಕೆಲ ಖಾಸಗಿ ಬಸ್ ಏಜೆಂಟರು ಬೆದರಿಕೆ ಹಾಕುತ್ತಿರುವ ಘಟನೆಯನ್ನು ಗಂಗೊಳ್ಳಿ ನಾಗರಿಕ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದ್ದು, ಖಾಸಗಿ ಬಸ್ ಏಜೆಂಟರ ಅಮಾನವೀಯ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಹೋರಾಟ ಸಮಿತಿ ತಿಳಿಸಿದೆ. ಕಳೆದ ಎಂಟು ವರ್ಷಗಳಿಂದ ಕುಂದಾಪುರ-ಗಂಗೊಳ್ಳಿ ನಡುವೆ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಖಾಸಗಿ ಬಸ್‌ಗಳು ನೀಡುತ್ತಿರುವ ತೊಂದರೆ ಇನ್ನೂ ಮುಂದುವರಿದ್ದು, ಅನಗತ್ಯ ತೊಂದರೆ ನೀಡುತ್ತಿರುವ ಹಾಗೂ ಸಂಘರ್ಷ ಮತ್ತು ಪೈಪೋಟಿಗೆ ಕಾರಣವಾಗುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಪ್ರಾದೇಶಿಕ ಪ್ರಾಧಿಕಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆರ್‌ಟಿಓ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಾನೂನು ರೀತ್ಯಾ ಕ್ರಮಕೈಗೊಳ್ಳದಿರುವುದರಿಂದ ಇದೀಗ ಪುನ: ಕೆಲವು ಖಾಸಗಿ ಬಸ್ಸುಗಳು ಕುಂದಾಪುರ-ಗಂಗೊಳ್ಳಿ ನಡುವೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಗರಿಗೆದರಿರುವ ಕಾಂಗ್ರೆಸ್ ಹಾಗೂ ಸರ್ಕಾರದ ಚಟುವಟಿಕೆಗಳಿಂದ ಜರ್ಜರಿತಗೊಂಡಿರುವ ಬಿಜೆಪಿ ಪಕ್ಷ ತನ್ನ ಹೇಡಿತನವನ್ನು ಪ್ರದರ್ಶಿಸಲು ಮುಂದಾಗಿದ್ದು, ಕೇಂದ್ರದ ಮೋದಿ ಸರ್ಕಾರ ಕರ್ನಾಟಕದ ಸಚಿವರ ಮೇಲೆ ಐಟಿ ದಾಳಿ ಮಾಡಿಸುವ ಮೂಲಕ ದ್ವೇಷದ ರಾಜಕೀಯವನ್ನು ಕರ್ನಾಟಕದಲ್ಲಿ ಮುಂದುವರೆಸಿದೆ ಎಂದು ಉಡುಪಿ ಜಿಲ್ಲಾ ಅಧ್ಯಕ್ಷರು ಮಾಹಿತಿ ತಂತ್ರಜ್ಞಾನ ವಿಭಾಗ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಹೇಳಿದ್ದಾರೆ. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್‌ರನ್ನು ಸೋಲಿಸಲು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ಲೆಕ್ಕವಿಲ್ಲದಷ್ಟು ಕೋಟಿಗಟ್ಟಲೇ ಹಣ ನೀಡಿ ಖರೀದಿಸಲು ಹೊರಟಿತ್ತು. ಆದರೆ ಇದನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಮೇಲೆ ಐಟಿ ದಾಳಿ ನಡೆಸಿ ಹೆದರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇಡೀ ದೇಶದಲ್ಲಿ ಬಿಜೆಪಿ ಲೋಕಸಭಾ ನಂತರ ಎದುರಿಸಿರುವ ಪ್ರತಿಯೊಂದು ಸೋಲಿಗೆ, ಹಾಗೂ ಕಾಂಗ್ರೆಸ್‌ನ ಪ್ರತಿ ಗೆಲುವಿಗೆ ಪ್ರಮುಖ ಕಾರಣಗಳಲ್ಲಿ ಒಂದಾದ ಡಿ.ಕೆ. ಶಿವಕುಮಾರ್ರನ್ನು ರಾಜಕೀಯವಾಗಿ ಮುಗಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ, ಕ್ರೀಡಾಪಟು ಕಾವ್ಯಾ ಪೂಜಾರಿ ಸಾವಿನ ಕುರಿತು ಸಮಗ್ರ ತನಿಕೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಂದಾಪುರದ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭನೆ ಜರುಗಿತು. ಎಬಿವಿಪಿ ಪ್ರಮಖ ವಿಶ್ವನಾಥ ಮಾತನಾಡಿ ಕಾವ್ಯ ಸಾವಿನ ಸುತ್ತ ಹಲವು ಅನುಮಾನಗಳಿದ್ದು ಸಾವಿನ ಕುರಿತಾಗಿ ಪೊಲೀಸ್ ಇಲಾಖೆ ವಸ್ತುನಿಷ್ಠ ತನಿಕೆ ನಡೆಸಬೇಕಿದೆ. ಒಬ್ಬ ಕ್ರೀಡಾಪಟು ಮೃತಪಟ್ಟ ರೀತಿ ಹಾಗೂ ಆಕೆಯ ಸಾವಿನ ಬಳಿಕ ಕಾಲೇಜು ಮೃತದೇಹವನ್ನು ಕೂಡಲೇ ಶವಾಗಾರದಲ್ಲಿ ಇರಿಸಿದ್ದು ಹಾಗೂ ಆ ಬಳಿಕದ ಘಟನೆಗಳು ಸಹಜವಾಗಿ ಗೊಂದಕ್ಕೆ ಎಡೆಮಾಡಿಕೊಡುತ್ತಿವೆ. ಹಾಗಾಗಿ ಸೂಕ್ತ ತನಿಕೆ ಮಾಡುವುದರೊಂದಿಗೆ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕಿದೆ. ತನಿಕೆಯ ಮೂಲಕ ಜನರಲ್ಲಿ ವ್ಯಕ್ತವಾಗುತ್ತಿರುವ ಆತಂಕ ಹಾಗೂ ಗೊಂದಲವನ್ನು ನೀವಾರಿಸಬೇಕಿದೆ. ಸೂಕ್ತ ತನಿಕೆ ನಡೆಯದಿದ್ದರೆ ಎಬಿವಿಪಿ ಮತ್ತೆ ಪ್ರತಿಭಟಿಸಲಿದೆ ಎಂದು ಎಚ್ಚರಿಸಿದರು. ಕುಂದಾಪುರ ಶಾಸ್ತ್ರೀವೃತ್ತದಿಂದ ಮಿನಿವಿಧಾನಸೌದದ ತನಕ ಪ್ರತಿಭಟನಾ ರ‍್ಯಾಲಿ ನಡೆಸಿದ ವಿದ್ಯಾರ್ಥಿಗಳು ಬಳಿಕ ತಹಶೀಲ್ದಾರ್ ಬೋರ್ಕರ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪ್ರತಿ ಬೂತ್ ಮಟ್ಟದಲ್ಲಿಯೂ ಕಾಂಗ್ರೆಸ್ ಕಾರ್ಯಪಡೆಯನ್ನು ಸಿದ್ಧಗೊಳಿಸಿ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ನಾಗರಿಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಶ್ರಮಿಸಬೇಕಿದೆ. ರಾಜ್ಯದ ಜನರಿಗೆ ವಿವಿಧ ಭಾಗ್ಯಗಳು ಹಾಗೂ ರೈತರ ಸಾಲಮನ್ನಾದಂತಹ ಅತ್ಯುತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ಸರಕಾರದ ಸಾಧನೆಯನ್ನು ನೇರವಾಗಿ ಜನರ ಮುಂದಿಡುವ ಕೆಲಸವಾಗಬೇಕಿದ್ದು ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಎಐಸಿಸಿ ವೀಕ್ಷಕ ಪಿ.ಸಿ ವಿಷ್ಣುನಾದನ್ ಕರೆ ನೀಡಿದರು. ಅವರು ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಾಗೂ ವಿವಿಧ ಘಟಕಗಳ ಪದಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದಾಗಿನಿಂದಲೂ ಸುಳ್ಳಿನ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತಿದ್ದಾರೆ. ಅವರು ಆಡಳಿತಕ್ಕೆ ಬರುವ ಮೊದಲು ನೀಡಿದ ಭರವಸೆಗಳನ್ನು ಈಡೇರಿಸದೇ ಮೂರು ವರ್ಷ ಕಳೆದಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಪ್ರನಾಳಿಕೆಯಲ್ಲಿ ತಿಳಿಸಿದ್ದ ಶೇ.೯೫ರಷ್ಟು ಭರವಸೆಗಳನ್ನು ಈಡೇರಿಸಿದೆ. ರಾಜ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ವಲಯದ ಅರಣ್ಯ ಇಲಾಖೆಯ ವತಿಯಿಂದ ನಲವತ್ತು ವರುಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಉಪ ವಲಯ ಅರಣ್ಯಾಧಿಕಾರಿ ಬೈಂದೂರು ನಿವಾಸಿ ಸುಬ್ರಾಯ ಅಲಿಯಾಸ್ ನಾಗೇಶ ಇವರನ್ನು ಕುಂದಾಪುರದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಬಿಳ್ಕೋಡಲಾಯಿತು. ಕಾರ್ಯದಕ್ಷತೆ,ಸಮಯ ಪಾಲನೆಗೆ ಹೆಸರು ವಾಸಿಯಾದ ಉತ್ತಮ ವ್ಯಕ್ತಿತ್ವ ಹೊಂದಿದ ಅನುಭವಿ ಹಿರಿಯ ಅಧಿಕಾರಿಯಾದ ಸುಬ್ರಾಯ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ಹಾರೈಸಿದರು. ಮಾತನಾಡಿದ ಅವರು ಸರ್ಕಾರಿ ಅಧಿಕಾರಿಗೆ ನಿವೃತ್ತಿಯು ಅನಿವಾರ್ಯ ಆದರೆ ಪ್ರಾಮಾಣಿಕ ಅಧಿಕಾರಿಯನ್ನು ಬಿಳ್ಕೋಡುವುದು ಅಷ್ಟೇ ಬೇಸರದ ಸಂಗತಿ ಎಂದರು. ಉಪ ವಲಯ ಅರಣ್ಯಾಧಿಕಾರಿ ನವೀನ್ ಡಿಸೋಜಾ ಮಾತನಾಡಿ, ಮಹಾ ಭಾರತದ ಆ ಭೀಷ್ಮನಂತೆ ಅರಣ್ಯ ಇಲಾಖೆಯ ಈ ಭೀಷ್ಮನಿಗಿಂದು ಗೌರವಿಸುವ ಸಮಯ. ಇಲಾಖೆಯ ಕಾನೂನು ವಿಚಾರ, ಕರ್ತವ್ಯ ನಿರ್ವಹಣೆಯ ಛಲವನ್ನು ನಾವು ಇವರಿಂದ ಕಲಿಯ ಬೇಕಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಬೈಂದೂರು ವಲಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀನಿವಾಸ ಕಲಾ ನಿಲಯ ಬೆಂಗಳೂರು ಇವರು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯ ಜ್ಯೂನಿಯರ್ ವಿಭಾಗದಲ್ಲಿ ಬಿ. ಸುನಿಧಿ ಉಡುಪ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈಕೆ ಕುಂದಾಪುರದ ಎಚ್‌ಎಮ್‌ಎಮ್ ಆಂಗ್ಲ ಮಾಧ್ಯಮ ಶಾಲೆಯ ೬ನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದು ಕುಂದಾಪುರದ ನೃತ್ಯ ವಸಂತ ನಾಟ್ಯಾಲಯ (ರಿ.)ದ ವಿದುಷಿ ಪ್ರವಿತಾ ಅಶೋಕರವರ ಶಿಷ್ಯೆಯಾಗಿದ್ದು ಬಳ್ಕೂರಿನ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪರ ಪುತ್ರಿಯಾಗಿರುತ್ತಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಶಂಕರನಾರಾಯಣ: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟು, 10ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಘೂಡ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆಗೆ ಆಗ್ರಹಿಸಿ ಎನ್ ಎಸ್ ಯು ಐ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶಂಕರನಾರಾಯಣ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ, ಪೋಲಿಸ್ ದಾಖಲೆಗಳ ಪ್ರಕಾರ ಕಾವ್ಯ ಹಿಂದಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುದರ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಲಾಗಿದೆ. ಆದರೆ ಕಾವ್ಯಾಳ ಹೆತ್ತವರು, ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಳ ಸಾವಿನ ಹಿಂದೆ ಷಡ್ಯಂತ್ರ ಅಡಗಿದೆ ಎನ್ನಲಾಗುತ್ತಿದೆ. ಕಾವ್ಯ ತನ್ನ ಹಾಸ್ಟೆಲ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಹಪಾಠಿ ವಿದ್ಯಾರ್ಥಿನಿಯರು ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಾಗಿ ಹೈಸ್ಕೂಲ್ ವಿದ್ಯಾರ್ಥಿನಿಯರು ಮೃತದೇಹಗಳನ್ನು ನೋಡುವಾಗ ಹೆದರುವುದು ಸರ್ವೆ ಸಾಮಾನ್ಯ ಹಾಗಿರುವಾಗಿ ವಿದ್ಯಾರ್ಥಿನಿಯರು ಹೇಗೆ ಹಾಸ್ಟೆಲಿನ ಯಾವುದೇ ಸಿಬ್ಭಂಧಿಗಳಿಗೆ ತಿಳಿಸದೆ ಮೃತದೇಹವನ್ನು ಇಳಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ನಿಡುತ್ತಿರುತ್ತಿರುವ ಸಾಹಿತ್ಯ ಪ್ರಶಸ್ತಿ ಈ ವರ್ಷ ಶಾಂತಿ ಕೆ. ಅಪ್ಪಣ್ಣ ಅವರ ’ ಮನಸು ಅಭಿಸಾರಿಕೆ’ ಸಣ್ಣಕಥೆಗಳ ಸಂಕಲನಕ್ಕೆ ದೊರೆತಿದೆ. ಮೂಲತಃ ಕೊಡಗಿನವರಾದ ಶಾಂತಿ. ಕೆ. ಅಪ್ಪಣ್ಣ ನೌಕರಿ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದಾರೆ. ಇವರ ಕಥೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಪ್ರಜವಾಣಿ ಮತ್ತು ವರ್ತಮಾನ ಡಾಟ್ ಕಾಂ ನಡೆಸುವ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ. ಕಥಾಸಂಕಲನಕ್ಕೆ ಈಗಾಗಲೇ ಛಂದ ಪುಸ್ತಕ ಬಹುಮಾನ, ಕೊಡಗಿನ ಗೌರಮ್ಮ ಪ್ರಶಸ್ತಿಗಳಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ವರ್ಷದ ಯುವ ಪುರಸ್ಕಾರ ಬಂದಿದೆ. ತೀರ್ಪುಗಾರರಾಗಿ ಡಾ. ವಿಕ್ರಮ ವಿಸಾಜಿ, ಗುಲ್ಬರ್ಗಾ, ಡಾ. ವಿನಯಾ ಒಕ್ಕುಂದ, ಧಾರವಾಡ, ನರೇಂದ್ರ ಪೈ, ಮಂಗಳೂರು ಸಹಕರಿಸಿರುತ್ತಾರೆ. ಅ.14 ರಂದು ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿಯು ೧೫ಸಾವಿರ ರೂಪಾಯಿಯೊಂದಿಗೆ ಬೆಳ್ಳಿ ಫಲಕವನ್ನೊಳಗೊಂಡಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಯಾವುದೇ ಫಲಾಪೇಕ್ಷೆ ಇಲ್ಲದೆ ಎಲೆ ಮರೆಯ ಕಾಯಿಯಂತೆ ಕಳೆದ ಸುಮಾರು ೨೫ ವರ್ಷಗಳಿಂದ ಗಂಗೊಳ್ಳಿಯ ಮಲ್ಯರಮಠ ಶ್ರೀ ರಥೋತ್ಸವದ ಸಂದರ್ಭ ರಥ ಕಟ್ಟುವ ಕಾಯಕದಲ್ಲಿ ತನ್ನನ್ನು ನಿಸ್ವಾರ್ಥವಾಗಿ ತೊಡಗಿಸಿಕೊಂಡು ಶ್ರೀದೇವರ ಸೇವೆ ಸಲ್ಲಿಸುತ್ತಿರುವ ಗಂಗೊಳ್ಳಿಯ ಕುಷ್ಟ ದೇವಾಡಿಗ ಎಲ್ಲರಿಗೂ ಮಾದರಿಯಾಗಿದ್ದಾರೆ. ಯುವಪೀಳಿಗೆ ಇವರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಪ್ರಯತ್ನ ನಡೆಸಬೇಕು ಎಂದು ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ.ವಿಠಲ ಭಾಸ್ಕರ ಶೆಣೈ ಹೇಳಿದರು. ಅವರು ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಂಘದ ’ಎಲೆ ಮರೆಯ ಕಾಯಿ’ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಸಮಾಜ ಸೇವಕ ಕುಷ್ಟ ದೇವಾಡಿಗ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷರಾದ ಕೃಷ್ಣಾನಂದ ಮಡಿವಾಳ, ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ರಾಮನಾಥ ಚಿತ್ತಾಲ್, ಬಿ.ರಾಘವೇಂದ್ರ ಪೈ ಮತ್ತು ಕೆ.ರಾಮನಾಥ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೇಸಿಸ್ ನ ವಲಯ ೧೫ ರ ನೂತನ ಘಟಕ ಜೇಸಿಐ ಕುಂದಾಪುರ ಚರಿಷ್ಮಾ ಘಟಕಕ್ಕೆ ವಲಯಾಧ್ಯಕ್ಷ ಜೆ.ಎಫ್.ಪಿ. ಸಂತೋಷ ಜಿ ಅಧಿಕೃತ ಬೇಟಿ ನೀಡಿ ವಿವಿಧ ಶಾಶ್ವತ ಯೋಜನೆಗಳಾದ ಬುಕ್ ಬ್ಯಾಂಕನ್ನು ಬಿ.ಬಿ.ಹೆಗ್ಡೆ ಪದವಿ ಕಾಲೇಜಿಗೆ ಹಾಗೂ ಪಂಪ್ ಸೆಟ್ ಅನ್ನು ಅಂಗನವಾಡಿ ಕೇಂದ್ರಕ್ಕೆ ,ಕೋಣಿ ಮಾನಸ ಜ್ಯೋತಿ ಮಕ್ಕಳಿಗೆ ಮಧ್ಯಾನದ ಭೋಜನ ವ್ಯವಸ್ಥೆಯನ್ನು ಮಾಡಿದರು ಸಂಜೆ ನೆಡೆದ ಸಭಾ ಕಾರ್ಯಕ್ರಮದಲ್ಲಿ ಜೇಸಿಐ ಕುಂದಾಪುರ ಚರಿಷ್ಮಾ ಅಧ್ಯಕ್ಷೆ ಜೇಸಿ ಸೆನೆಟರ್ ಗೀತಾಂಜಲಿ ಆರ್ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು ಭಾರತೀಯ ಜೇಸಿಸ್‌ಗೆ ದೇಣಿಗೆಯನ್ನು ಘಟಕ ಅಧ್ಯಕ್ಷರು ನೀಡಿದರು ಸಭಾ ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರಾದ ಜೆ.ಎಫ್.ಎಮ್ ಮರಿಯಪ್ಪ ವಲಯಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಶ್ರೀನಿವಾಸ್ ಜಿ ಉಪಸ್ಥಿತರಿದ್ದರು ವಲಯಾಧ್ಯಕ್ಷ ದಂಪತಿಗಳನ್ನು ಘಟಕ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪರವಾಗಿ ಜೇಸಿಐ ಕುಂದಾಪುರದ ಸ್ಥಾಪಕಾಧ್ಯಕ್ಷ ಜೇಸಿ ಎ.ಎಸ್.ಎನ್ ಹೆಬ್ಬಾರ್ ,ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಸದಾನಂದ…
