ಕುಂದಾಪ್ರ ಡಾಟ್ ಕಾಂ ಸುದ್ದಿ. ಶಂಕರನಾರಾಯಣ: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಕ್ರೀಡಾಪಟು, 10ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಪೂಜಾರಿಯ ನಿಘೂಡ ಸಾವಿನ ಕುರಿತು ನಿಷ್ಪಕ್ಷಪಾತವಾದ ತನಿಖೆಗೆ ಆಗ್ರಹಿಸಿ ಎನ್ ಎಸ್ ಯು ಐ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶಂಕರನಾರಾಯಣ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ, ಪೋಲಿಸ್ ದಾಖಲೆಗಳ ಪ್ರಕಾರ ಕಾವ್ಯ ಹಿಂದಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುದರ ಪರಿಣಾಮವಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಲಾಗಿದೆ. ಆದರೆ ಕಾವ್ಯಾಳ ಹೆತ್ತವರು, ಸಾಮಾಜಿಕ ಜಾಲತಾಣಗಳಲ್ಲಿ ಕಾವ್ಯಳ ಸಾವಿನ ಹಿಂದೆ ಷಡ್ಯಂತ್ರ ಅಡಗಿದೆ ಎನ್ನಲಾಗುತ್ತಿದೆ. ಕಾವ್ಯ ತನ್ನ ಹಾಸ್ಟೆಲ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಹಪಾಠಿ ವಿದ್ಯಾರ್ಥಿನಿಯರು ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಾಗಿ ಹೈಸ್ಕೂಲ್ ವಿದ್ಯಾರ್ಥಿನಿಯರು ಮೃತದೇಹಗಳನ್ನು ನೋಡುವಾಗ ಹೆದರುವುದು ಸರ್ವೆ ಸಾಮಾನ್ಯ ಹಾಗಿರುವಾಗಿ ವಿದ್ಯಾರ್ಥಿನಿಯರು ಹೇಗೆ ಹಾಸ್ಟೆಲಿನ ಯಾವುದೇ ಸಿಬ್ಭಂಧಿಗಳಿಗೆ ತಿಳಿಸದೆ ಮೃತದೇಹವನ್ನು ಇಳಿಸಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ನಿಡುತ್ತಿರುತ್ತಿರುವ ಸಾಹಿತ್ಯ ಪ್ರಶಸ್ತಿ ಈ ವರ್ಷ ಶಾಂತಿ ಕೆ. ಅಪ್ಪಣ್ಣ ಅವರ ’ ಮನಸು ಅಭಿಸಾರಿಕೆ’ ಸಣ್ಣಕಥೆಗಳ ಸಂಕಲನಕ್ಕೆ ದೊರೆತಿದೆ. ಮೂಲತಃ ಕೊಡಗಿನವರಾದ ಶಾಂತಿ. ಕೆ. ಅಪ್ಪಣ್ಣ ನೌಕರಿ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದಾರೆ. ಇವರ ಕಥೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಪ್ರಜವಾಣಿ ಮತ್ತು ವರ್ತಮಾನ ಡಾಟ್ ಕಾಂ ನಡೆಸುವ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ. ಕಥಾಸಂಕಲನಕ್ಕೆ ಈಗಾಗಲೇ ಛಂದ ಪುಸ್ತಕ ಬಹುಮಾನ, ಕೊಡಗಿನ ಗೌರಮ್ಮ ಪ್ರಶಸ್ತಿಗಳಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ವರ್ಷದ ಯುವ ಪುರಸ್ಕಾರ ಬಂದಿದೆ. ತೀರ್ಪುಗಾರರಾಗಿ ಡಾ. ವಿಕ್ರಮ ವಿಸಾಜಿ, ಗುಲ್ಬರ್ಗಾ, ಡಾ. ವಿನಯಾ ಒಕ್ಕುಂದ, ಧಾರವಾಡ, ನರೇಂದ್ರ ಪೈ, ಮಂಗಳೂರು ಸಹಕರಿಸಿರುತ್ತಾರೆ. ಅ.14 ರಂದು ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿಯು ೧೫ಸಾವಿರ ರೂಪಾಯಿಯೊಂದಿಗೆ ಬೆಳ್ಳಿ ಫಲಕವನ್ನೊಳಗೊಂಡಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಯಾವುದೇ ಫಲಾಪೇಕ್ಷೆ ಇಲ್ಲದೆ ಎಲೆ ಮರೆಯ ಕಾಯಿಯಂತೆ ಕಳೆದ ಸುಮಾರು ೨೫ ವರ್ಷಗಳಿಂದ ಗಂಗೊಳ್ಳಿಯ ಮಲ್ಯರಮಠ ಶ್ರೀ ರಥೋತ್ಸವದ ಸಂದರ್ಭ ರಥ ಕಟ್ಟುವ ಕಾಯಕದಲ್ಲಿ ತನ್ನನ್ನು ನಿಸ್ವಾರ್ಥವಾಗಿ ತೊಡಗಿಸಿಕೊಂಡು ಶ್ರೀದೇವರ ಸೇವೆ ಸಲ್ಲಿಸುತ್ತಿರುವ ಗಂಗೊಳ್ಳಿಯ ಕುಷ್ಟ ದೇವಾಡಿಗ ಎಲ್ಲರಿಗೂ ಮಾದರಿಯಾಗಿದ್ದಾರೆ. ಯುವಪೀಳಿಗೆ ಇವರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಪ್ರಯತ್ನ ನಡೆಸಬೇಕು ಎಂದು ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ.ವಿಠಲ ಭಾಸ್ಕರ ಶೆಣೈ ಹೇಳಿದರು. ಅವರು ಗಂಗೊಳ್ಳಿ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಂಘದ ’ಎಲೆ ಮರೆಯ ಕಾಯಿ’ ಕಾರ್ಯಕ್ರಮದ ಅಂಗವಾಗಿ ಗಂಗೊಳ್ಳಿಯ ಸಮಾಜ ಸೇವಕ ಕುಷ್ಟ ದೇವಾಡಿಗ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದರು. ಸಂಘದ ಮಾಜಿ ಅಧ್ಯಕ್ಷರಾದ ಕೃಷ್ಣಾನಂದ ಮಡಿವಾಳ, ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ರಾಮನಾಥ ಚಿತ್ತಾಲ್, ಬಿ.ರಾಘವೇಂದ್ರ ಪೈ ಮತ್ತು ಕೆ.ರಾಮನಾಥ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೇಸಿಸ್ ನ ವಲಯ ೧೫ ರ ನೂತನ ಘಟಕ ಜೇಸಿಐ ಕುಂದಾಪುರ ಚರಿಷ್ಮಾ ಘಟಕಕ್ಕೆ ವಲಯಾಧ್ಯಕ್ಷ ಜೆ.ಎಫ್.ಪಿ. ಸಂತೋಷ ಜಿ ಅಧಿಕೃತ ಬೇಟಿ ನೀಡಿ ವಿವಿಧ ಶಾಶ್ವತ ಯೋಜನೆಗಳಾದ ಬುಕ್ ಬ್ಯಾಂಕನ್ನು ಬಿ.ಬಿ.ಹೆಗ್ಡೆ ಪದವಿ ಕಾಲೇಜಿಗೆ ಹಾಗೂ ಪಂಪ್ ಸೆಟ್ ಅನ್ನು ಅಂಗನವಾಡಿ ಕೇಂದ್ರಕ್ಕೆ ,ಕೋಣಿ ಮಾನಸ ಜ್ಯೋತಿ ಮಕ್ಕಳಿಗೆ ಮಧ್ಯಾನದ ಭೋಜನ ವ್ಯವಸ್ಥೆಯನ್ನು ಮಾಡಿದರು ಸಂಜೆ ನೆಡೆದ ಸಭಾ ಕಾರ್ಯಕ್ರಮದಲ್ಲಿ ಜೇಸಿಐ ಕುಂದಾಪುರ ಚರಿಷ್ಮಾ ಅಧ್ಯಕ್ಷೆ ಜೇಸಿ ಸೆನೆಟರ್ ಗೀತಾಂಜಲಿ ಆರ್ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದರು ಭಾರತೀಯ ಜೇಸಿಸ್‌ಗೆ ದೇಣಿಗೆಯನ್ನು ಘಟಕ ಅಧ್ಯಕ್ಷರು ನೀಡಿದರು ಸಭಾ ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷರಾದ ಜೆ.ಎಫ್.ಎಮ್ ಮರಿಯಪ್ಪ ವಲಯಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿ ಶ್ರೀನಿವಾಸ್ ಜಿ ಉಪಸ್ಥಿತರಿದ್ದರು ವಲಯಾಧ್ಯಕ್ಷ ದಂಪತಿಗಳನ್ನು ಘಟಕ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪರವಾಗಿ ಜೇಸಿಐ ಕುಂದಾಪುರದ ಸ್ಥಾಪಕಾಧ್ಯಕ್ಷ ಜೇಸಿ ಎ.ಎಸ್.ಎನ್ ಹೆಬ್ಬಾರ್ ,ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ ಸೆನೆಟರ್ ಸದಾನಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳೆದ ಶತಮಾನದ ಆದಿಯಲ್ಲಿ ಸ್ವಪ್ರಯತ್ನ ಮತ್ತು ಪ್ರತಿಭೆಯಿಂದ ಅಖಿಲ ಭಾರತ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಾರತ ಸರ್ಕಾರದ ಪ್ರಥಮ ಎಮ್.ಆರ್.ಟಿ.ಪಿ ಕಮಿಷನರ್ ಆಗಿ ಉತ್ತಮ ಸೇವೆಗೈದ ಹಾಗೂ ತಾವು ಸೇವೆ ಸಲ್ಲಿಸಿದ ಎಲ್ಲಾ ಊರುಗಳಲ್ಲಿಯೂ ಕನ್ನಡ ಕರ್ನಾಟಕದ ಸಾಂಸ್ಕ್ರತಿಕ ಸಂಘಟನೆಗಳ ಮಂಚೂಣೆ ಸಂಘಟಕರಾಗಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ನಾರಾಯಣ ಪರಮೇಶ್ವರ ಭಟ್ಟರದು ಆದರ್ಶ ವ್ಯಕ್ತಿತ್ವ. ಎಂಭತ್ತೇಳನೇಯ ವಯಸ್ಸಿನಲ್ಲಿಯೂ ಧಾರವಾಡದಲ್ಲಿ ’ಅವನಿ’ ಸಾಂಸ್ಕ್ರತಿಕ ಸಂಸ್ಥೆ, ಹೆರಿಟೇಜ್ ಮ್ಯೂಸಿಯಂ, ಇನಾಟ್ಯಾಕ್ ಸಂಸ್ಥೆ, ಗ್ರಾಹಕ ಜಾಗೃತಿ ಸಂಘಟನೆಗಳ ಪ್ರೇರಕ ಶಕ್ತಿಯಾಗಿರುವ ಭಟ್ಟರು ಉಪ್ಪುಂದ ಮೂಲದವರು ಎಂಬುದು ಹೆಮ್ಮೆಯ ವಿಚಾರ ಎಂದು ಬೆಂಗಳೂರಿನ ಮಾಧ್ಯಮ ಭಾರತಿಯ ನಿರ್ದೇಶಕ ಎಂ ಜಯರಾಮ ಅಡಿಗರು ನುಡಿದರು. ಉಪ್ಪುಂದ ಚಂದ್ರಶೇಖರ ಹೊಳ್ಳರು ಕಾಂತಾವರದ ನಾಡಿಗೆ ನಮಸ್ಕಾರ ಮಾಲಿಕೆಗಾಗಿ ಬರೆದ ಪುಸ್ತಕವನ್ನು ಭಟ್ಟರ ಹುಟ್ಟೂರಿನಲ್ಲಿ ಬಿಡುಗಡೆ ಮಾಡಿ ಸುವಿಚಾರ ವೇದಿಕೆಯ ಬಳಗದವರಿಗೆ ಉಚಿತ ಪುಸ್ತಕ ನೀಡುವ ಕಾರ್ಯಕ್ರಮದಲ್ಲಿ ಪುಸ್ತಕವು ಉತ್ತಮ ದಾಖಲೆಯಾಗಿ ಮೂಡಿ…
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೇ ಜನತಾ ಪ್ರೌಡಶಾಲೆ ವಿಚಾರದಲ್ಲಿ ವೃಥಾ ಆರೋಪ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜಕೀಯದಿಂದ ಹೊರತಾಗಿರುವ ಹೆಮ್ಮಾಡಿ ಜನತಾ ಪ್ರೌಢಶಾಲೆಯನ್ನು ಮಾರಾಟ ಮಾಡಿದ್ದಾರೆ ಎಂಬ ಕಟು ಆಪಾದನೆಯನ್ನು ನನ್ನ ಮೇಲೆ ಹೊರಿಸಿ ಬಿಜೆಪಿಗರು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದುದು. ದೀಪಕ್‌ಕುಮಾರ್ ಶೆಟ್ಟಿ ಹೊರಿಸಿರುವ ಆರೋಪ ಸಾಕ್ಷ ಸಮೇತ ಸಾಬೀತು ಮಾಡಿದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ. ಆದರೆ ಅವರು ಹೇಳಿರುವುದು ಸುಳ್ಳಾದರೆ ನೈತಿಕ ಹೊಣೆ ಹೊತ್ತು ರಾಜಕೀಯದಿಂದ ಹಿಂದೆ ಸರಿಯಲಿ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಸವಾಲು ಹಾಕಿದ್ದಾರೆ. ಕಟ್‌ಬೆಲ್ತೂರು ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅಭಿವೃದ್ಧಿಗಾಗಿ ಬಹಳಷ್ಟು ಕೆಲಸ ನಡೆಯುತ್ತಿದ್ದು ಜನರೇ ಶ್ಲಾಘೀಸುತ್ತಿರುವ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಬೈಂದೂರು ಕ್ಷೇತ್ರದಲ್ಲಿ ಸಂಜೆಯ ಹೊತ್ತಿಗೆ ಸಭೆ ಮಾಡಿ ನನ್ನ ವಿರುದ್ಧ ಸುಳ್ಳಿನ ಕಂತೆಯನ್ನು ಹೊರಿಸಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದು ಖಂಡನಾರ್ಹ ಎಂದರು. ಕುಂದಾಪ್ರ ಡಾಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆ ಕೊಲ್ಲೂರು ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜು ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸುಪರ್ಣಾ ಸೇವಾ ಟ್ರಸ್ಟ್ ವತಿಯಿಂದ ಮಾಸ್ಕಿಟೊ ಕಿಟ್ ವಿತರಿಸಲಾಯಿತು. ಸುಪರ್ಣಾ ಸೇವಾ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಕೊಲ್ಲೂರು ರಮೇಶ್ ಗಾಣಿಗ ಕೊಡುಗೆಯಾಗಿ ನೀಡಿದ ಕಿಟ್‌ನ್ನು ಶ್ರೀ ಮೂಕಾಂಬಿಕಾ ದೇವಳದ ಕಾರ್ಯನಿರ್ವಹಣಾಧಿಕಾರಿ ಜನಾರ್ಧನ ಅವರು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಗ್ರೀಷ್ಮಾ ಗಿರಿಧರ ಭಿಡೆ, ಕೊಲ್ಲೂರಿನ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ ಹಾಗೂ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ, ನಾಗರಾಜ್ ಅಡಿಗ, ಪ್ರೌಢ ಶಾಲೆಯ ಹಿರಿಯ ಶಿಕ್ಷಕ ಕೃಷ್ಣ ಮತ್ತು ಸುಪರ್ಣಾ ಸೇವಾ ಟ್ರಸ್ಟ್ ಸದಸ್ಯ ರಂಗ ನಾಯ್ಕ್, ವಿನಾಯಕ ಆಚಾರ್ಯ ಮೊದಲಾದವರು ಉಪಸ್ಥಿರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಭಾರತ ದೇಶದ ಶೇ.೧೬ ರಷ್ಟು ಜನರು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಹೀಗಾಗಿ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆಯುವಲ್ಲಿ ಪೋಷಕರು ಸಹಕರಿಸಬೇಕು. ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದು ಸಮೃದ್ಧ ದೇಶ ಕಟ್ಟುವಲ್ಲಿ ಕೈಜೋಡಿಸಬೇಕು. ಸತತ ೧೩ ವರ್ಷಗಳಿಂದ ಮಕ್ಕಳಿಗೆ ವಿದ್ಯಾರ್ಥಿವೇತನದ ಮೂಲಕ ವಿದ್ಯಾಭ್ಯಾಸಕ್ಕೆ ನೆರವು ನೀಡುತ್ತಿರುವ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆ ಕಾರ್ಯ ಪ್ರಶಂಸನೀಯ ಎಂದು ಭೂದಾಖಲೆಗಳ ನಿವೃತ್ತ ಸಹಾಯಕ ನಿರ್ದೇಶಕ ಕೃಷ್ಣ ತಾಂಡೇಲ ಕುಮಟಾ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವಿಜಯ ವಿಠಲ ಮಂಟಪದಲ್ಲಿ ಜರಗಿದ ಪಂಚಗಂಗಾವಳಿ ಬಳಗ ಗಂಗೊಳ್ಳಿ ಪ್ರಾಯೋಜಿತ ಪಂಚಗಂಗಾವಳಿ ವಿದ್ಯಾನಿಧಿ ಯೋಜನೆಯ ೧೩ನೇ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್, ನಿಟ್ಟೆಯ ಎನ್‌ಎಂಎಎಚ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಅಸಿಸ್ಟೆಂಟ್ ಪ್ರೋಫೆಸರ್ ಸಂದೀಪ ಖಾರ್ವಿ ಗಂಗೊಳ್ಳಿ ಶುಭ ಹಾರೈಸಿದರು. ಬಸ್ರೂರು ಸರಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾಜಿಕ ಬದುಕಿನ ಸಮನ್ವಯತೆಯ ಸೂತ್ರವನ್ನು ತಮ್ಮ ಕಾವ್ಯದ ಮೂಲಕ ಸಾಧಿಸಿ ತೋರಿಸಿದವರು ಕವಿ ನಿಸಾರ್ ಅಹಮ್ಮದ್ ಅವರು. ಜೀವನದಲ್ಲಿ ಕಾಣುವ ಒಳಿತು-ಕೆಡುಕುಗಳನ್ನು ತಮ್ಮದೇ ಆದ ಕಾವ್ಯಭಾಷೆಯ ಮೂಲP, ಮಾಂತ್ರಿಕ ಶಕ್ತಿಯುಳ್ಳ ಸುಂದರ ಪದಪುಂಜಗಳ ಮೂಲಕ, ಪ್ರಾಸಾನುಪ್ರಾಸಯುಕ್ತ ಪದವಿನ್ಯಾಸದ ಮೂಲಕ, ಹೊಸ ಹೊಸ ಪದಗಳನ್ನು ಟಂಕಿಸಿ ಕನ್ನಡ ಸಾಹಿತ್ಯಕ್ಕೆ ಕೊಡುವ ಮೂಲಕ ಒದಗಿಸಿ ಕೊಟ್ಟವರು ಎಂದು ಡಾ. ಪಾರ್ವತಿ ಜಿ.ಐತಾಳ ಹೇಳಿದರು. ಅವರು ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದಲಿ ನಡೆದ ನಿಸಾರ್ ಅಹಮದ್-ಬದುಕು ಬರಹದ ಕುರಿತು ನಡೆದ ಒಂದು ದಿನದ ವಿಚಾರ ಸಂಕಿರಣzಲ್ಲಿ ’ನಿಸಾರ್ ಕಾವ್ಯದಲಿ ವ್ಯಕ್ತವಾಗುವ ಜೀವನ ದರ್ಶನ’ ಎಂಬ ವಿಷಯದ ಕುರಿತು ಮಾತನಾಡಿದರು. ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಅವನ ಬದುಕು ಒಳಗೊಳ್ಳುವ ನೂರಾರು ಸನ್ನಿವೇಶಗಳನ್ನು ನೆಪವಾಗಿಸಿಕೊಂಡು ಅಲ್ಲಿ ಕಾಣುವ ಸೌಖ್ಯ ಸೌಂದರ್ಯಗಳಿಗೆ, ಲೋ-ದೋಷಗಳಿಗೆ ಪ್ರತಿಮೆ ರೂಪಕಗಳ ಮೂಲಕ ಸಮಾಂತರಗಳನ್ನು ಸೃಷ್ಟಿಸಿ ಜೀವನದ ಸಮಗ್ರ ದರ್ಶನವನ್ನು ನಿಸಾರರು ತಮ್ಮ ಕವಿತೆಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನೆಯ್ದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಲವು ವರ್ಷಗಳಿಂದ ಕಾಲ್ನಡಿಗೆಯಲ್ಲಿ ಪಾದ ಯಾತ್ರೆಯನ್ನು ಹಮ್ಮಿಕೊಳ್ಳುತ್ತಿರುವ ಉದ್ಯಮಿ ಹಾಗೂ ಶ್ರೀ ವೆಂಕಟೇಶ್ವರ ಸ್ವೀಟ್ ನ ಮಾಲೀಕ ಲಕ್ಷ್ಮೀ ನಾರಾಯಣ ರಾವ್ ಮತ್ತು ಶ್ರೀಧರ ಪಿ. ಎಸ್. ಅವರ ನೇತೃತ್ವದಲ್ಲಿ ಸುಮಾರು ನೂರಕ್ಕೂ ಮಿಕ್ಕಿದ ಭಕ್ತರ ತಂಡ ಕಾಲ್ಮಡಿಗೆಯಲ್ಲಿ ತಿರುಪತಿ ಯಾತ್ರೆಗೆ ಸಾಲಿಗ್ರಾಮದಿಂದ ಹೊರಟಿದೆ. ದಿನವೊಂದರ ಸುಮಾರು ೪೦ರಿಂದ ೫೦ ಕಿ.ಮಿ. ಸಂಚರಿಸುವ ಈ ತಂಡದಲ್ಲಿ ಕುಮಟಾ, ಅಂಕೋಲ, ಹೊನ್ನಾವರ ಸೇರಿದಂತೆ ಕೊಲ್ಲೂರಿನ ಭಕ್ತಾಧಿಗಳು ಬಾಗವಹಿಸುತ್ತಿದ್ದು, ಸುಮಾರು ಹದಿನೆಂಟು ದಿನಗಳಲ್ಲಿ ತಿರುಪತಿಯನ್ನು ತಲುಪುವ ಗುರಿಯನ್ನಿರಿಸಿಕೊಳ್ಳಲಾಗಿದೆಯೆಂದು ಯಾತ್ರಿಗಳು ತಿಳಿಸಿದ್ದಾರೆ.
