ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ದಾಪುರ: ಹುಟ್ಟಿದ ಪ್ರತಿಯೊಬ್ಬರಿಗೂ ಸಾಮಾಜಿಕ ಋಣಗಳು ಇರುತ್ತವೆ. ಒಬ್ಬೋಬರು ಒಂದೊಂದು ರೀತಿಯಲ್ಲಿ ಋಣಗಳನ್ನು ತೀರಿಸುತ್ತಾರೆ. ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ. ಸಮಾಜದಿಂದ ಪಡೆದುದರಲ್ಲಿ ಸ್ವಲ್ಪವಾದರು ಸಮಾಜಕ್ಕೆ ಕೊಡಬೇಕು. ಕೊಡುವುದರಲ್ಲಿ ಇರುವ ಸುಖ ಪಡೆಯುದರಲ್ಲಿ ಇಲ್ಲ ಎಂದು ಎಂದು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಬಿ. ಸತೀಶ್ ಕಿಣಿ ಬೆಳ್ವೆ ಅವರು ಹೇಳಿದರು. ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ.) ಬೆಳ್ವೆ, ಲಯನ್ಸ್ ಕ್ಲಬ್ ಸಂತೆಕಟ್ಟೆ, ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಫೌಂಡೇಶನ್ ಸಭಾಂಗಣದಲ್ಲಿ ಸೆ.೧೦ರಂದು ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಘ-ಸಂಸ್ಥೆಗಳು ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಮಹತ್ವವನ್ನು ಪಡೆಯುತ್ತವೆ. ಜನತೆ ಇಂತಹ ಕಾರ್ಯಕ್ರಮಗಳಲ್ಲಿ ದೊರೆಯುವ ಸೌಲಭ್ಯಗಳ ಸದುಪಯೋಗ ಪಡೆಯ ಬೇಕು. ಉಚಿತವಾಗಿ ನೀಡುವ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ಸೇವೆಗಳ ಬಗ್ಗೆ ಜನತೆ ಕೀಳರಿಮೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೆದೂರಿನ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ನಿರಂಜನ ಶೆಟ್ಟಿಗೆ ವೈದ್ಯಕೀಯ ಶಿಕ್ಷಣಕ್ಕೋಸ್ಕರ ರೂ ೧ ಲಕ್ಷವನ್ನು ಕುಂದಾಪುರ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ವತಿಯಿಂದ ನೀಡಲಾಯಿತು. ಚೆಕನ್ನು ಹಿರಿಯ ವೈದ್ಯ ಹಾಗೂ ಹಿರಿಯ ಸದಸ್ಯ ಲಯನ್ ಡಾ| ಎಂ. ವಿ. ಕುಲಾಲ ಹಸ್ತಾಂತರಿಸಿದರು. ಸಮಾರಂಭದಲ್ಲಿ ಅತಿಥಿ ಡಾ| ಆದರ್ಶ ಹೆಬ್ಬಾರ್, ಕ್ಲಬಿನ ಅಧ್ಯಕ್ಷ ಲಯನ್ ಎ.ಮೋಹನ ಶೆಟ್ಟಿ, ಕಾರ್ಯದರ್ಶಿ ನವೀನ ಕುಮಾರ ಶೆಟ್ಟಿ, ಕೋಶಾಧಿಕಾರಿ ಪ್ರಜ್ಞೇಶ್ ಪ್ರಭು, ಲಯನಸ್ ಕ್ಲಬ್ನ ಅಧ್ಯಕ್ಷೆ ಭವಾನಿ ಶೆಟ್ಟಿ, ಕಾರ್ಯದರ್ಶಿ ವಿಜಯಲಕ್ಷ್ಮಿ ಎನ್. ಶೆಟ್ಟಿ, ಕೋಶಾಧಿಕಾರಿ ವಿನಯ ಪ್ರಭುರವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣ ಕ್ಷೇತ್ರದಲ್ಲಿ ತನ್ನ ವೈಶಿಷ್ಟ್ಯತೆಯೊಂದಿಗೆ ಜಾಗತಿಕ ಮನ್ನಣೆಗೆ ಪಾತ್ರವಾದ ಮೊಂಟೆಸ್ಸೋರಿ ಶಿಕ್ಷಣದ ತಜ್ಞೆ ಮೊಂಟೆಸ್ಸೋರಿ ಯುನೈಟೆಡ್ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ ಸಾವಿರಾರು ಮೊಂಟೆಸ್ಸೋರಿ ಶಿಕ್ಷಕಿಯರನ್ನು ರೂಪಿಸುತ್ತಿರುವ ಸಾಧಕಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಶಿಕ್ಷಕಿ, ಬೆಂಗಳೂರಿನ ಮುನಿರಾ ಅಕ್ತರ್ ಅವರನ್ನು ಕೋಣಿಯ ಮಾತಾ ಮೊಂಟೆಸ್ಸೋರಿಯ ಆವರಣದಲ್ಲಿ ಪುಟಾಣಿಗಳು ಪುಷ್ಪ ಪಥದೊಂದಿಗೆ ಸ್ವಾಗತಿಸಿದರು. ಮಾತಾ ಮೊಂಟೆಸ್ಸೋರಿ ನಡೆಸುತ್ತಿರುವ ಮೊಂಟೆಸ್ಸೋರಿ ಸರ್ಟಿಫೀಕೆಟ್ ಕೋರ್ಸ್ನ ಪ್ರಯೋಗ ಪರೀಕ್ಷೆಯ ಪರಿವೀಕ್ಷಕರಾಗಿ ಆಗಮಿಸಿರುವ ಮುನಿರಾ ಅಕ್ತರ್ರವರ ಸಾಧನೆಯನ್ನು ಮನಗಂಡು ಶಾಲೆಯವತಿಯಿಂದ ಗೌರವ ಸನ್ಮಾನ ನೀಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅತ್ಯಂತ ಪ್ರಭಾವಿ ಶಿಕ್ಷಣ ಶೈಲಿ ಎಂದೇ ಖ್ಯಾತವಾಗಿರುವ ಡಾ| ಮರೀಯಾ ಮಾಂಟೆಸ್ಸೋರಿಯವರ ಆವಿಷ್ಕಾರದ ಮೊಂಟೆಸ್ಸೋರಿ ಶಿಕ್ಷಣ ಪದ್ಧತಿ ಇತ್ತೀಚಿನ ದಿನಗಳಲ್ಲಿ ಭಾರತದ ನಗರಗಳಲ್ಲಿ ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಆದರೆ ಕೋಣಿಯಂತಹ ಗ್ರಾಮೀಣ ಭಾಗದಲ್ಲೂ ಸಂಸ್ಥೆಯನ್ನು ಹುಟ್ಟುಹಾಕಿ ಈ ಪರಿಸರದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಮಾತಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ಹಾಗೂ ಮಕ್ಕಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯೋಜಿಸಲಾಗುತ್ತಿರುವ ಮುದ್ದು ಕೃಷ್ಣ ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದ ಮೂಲಕ ಅನೇಕ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ವೇದಿಕೆ ದೊರೆತಂತಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಮತ್ತು ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಾರ್ಯ ನಡೆಸಬೇಕು ಎಂದು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಸದಸ್ಯ ಜಿ.ವೆಂಕಟೇಶ ನಾಯಕ್ ಹೇಳಿದರು. ಅವರು ಪೇಜಾವರ ಶ್ರೀ ಅಧೋಕ್ಷಜ ಮಠ ಶ್ರೀ ಕೃಷ್ಣ ಮಠ ಉಡುಪಿ ಮತ್ತು ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಜರಗಿದ ಮುದ್ದು ಕೃಷ್ಣ ಸ್ಪರ್ಧೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ, ಸಮಿತಿಯ ಸದಸ್ಯ ರಾಘವೇಂದ್ರ ದೇವಾಡಿಗ ಶುಭ ಹಾರೈಸಿದರು. ಕೀರ್ತನಾ ಎಸ್.ನಾಯಕ್, ಸವಿತಾ ಯು.ದೇವಾಡಿಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂದಿನ ದಿನಗಳಲ್ಲಿ ಡಾಟಾ ಮೈನಿಂಗ್ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಬೆಂಗಳೂರಿನ ಹೆಚ್ ಪಿಯಲ್ಲಿ ಜ್ಯೂನಿಯರ್ ಡಾಟಾ ವಿಜ್ನಾನಿ ಚೈತನ್ಯ ಹೊಳ್ಳ ಅವರು ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಭೌತಶಾಸ್ತ್ರ ಹಾಗೂ ಕೆರಿಯರ್ ಗೈಡೆನ್ಸ್ ಸೆಲ್ ಇದರ ಸಹಯೋಗದಲ್ಲಿ ನಡೆದ ಉಪಾನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತದ ದಿನಗಳಲ್ಲಿ ಡಾಟಾ ಮೈನಿಂಗ್ ಕ್ಷೇತ್ರವು ಸಾಕಷ್ಟು ಬೆಳೆಯುತ್ತಿದೆ. ಮುಂದಿನ ದಿನಗಳಲ್ಲೂ ಸಹ ಇದೇ ಕ್ಷೇತ್ರದಲ್ಲಿ ಉದ್ಯೋಗವೆಂಬುದನ್ನು ಅರಸಿಕೊಳ್ಳಬಹುದು. ಕೃತಕ ಬುದ್ಧಿವಂತಿಕೆ ಮತ್ತು ಯಂತ್ರಭಾಷೆಯನ್ನು ಕುರಿತು ಇಲ್ಲಿ ಹೆಚ್ಚಿನ ಮಹತ್ವವಿದೆ. ಅದಕ್ಕೆ ಪೂರಕವಾಗಿ ಆರ್ ಮತ್ತ್ ಪೈಥೋನ್ ಸಾಪ್ಟ್ ವೇರ್ ಗಳ ಕಲಿಯುವಿಕ್ವ್ ಅಗತ್ಯವಾಗಿ ಬೇಕಾಗಿರುತ್ತದೆ. ಇದಕ್ಕೆ ಯಾವುದೇ ವಾಣಿಜ್ಯ್ ಮತ್ತು ವಿಜ್ನಾನ ಪದವಿಗಳನ್ನು ಅಭ್ಯಸಿಸಿದರೆ ಅನೂಕೂಲಕರವಾಗಿರುತ್ತದೆ. ಅದರಲ್ಲೂ ಸಂಖ್ಯಾಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳ ಅಧ್ಯಯನ ಈ ಕ್ಷೇತ್ರದಲ್ಲಿ ಜ್ನಾನ ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ವಿಶೇಷ ಕೌಶಲವನ್ನು ಬೆಳೆಸಿಕೊಂಡಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕು ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಗಳ ನೇತೃತ್ವದಲ್ಲಿ ಶಿರೂರು ಗ್ರಾಮದ ಬಡ ನಿವೇಶನ ರಹಿತರು ನಿವೇಶನ ಸ್ಥಳ ಮಂಜೂರು ಮಾಡಲು ಒತ್ತಾಯಿಸಿ ಶಿರೂರು ಗ್ರಾಮ ಪಂಚಾಯತ್ ಕಛೇರಿ ಮುತ್ತಿಗೆ ಹೋರಾಟ ಕಾರ್ಯಕ್ರಮ ಗುರುವಾರ ನಡೆಯಿತು. ಸ್ವಂತ ಮನೆ, ಭೂಮಿ ಇಲ್ಲದ, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಒಂದೇ ಮನೆಯ ಸೂರಿನಡಿಯಲ್ಲಿ ೨-೩ ಕುಟುಂಬ ಅನಿವಾರ್ಯ ಪರಿಸ್ಥಿತಿಯಲ್ಲಿ ವಾಸವಾಗಿರುವ ಬಡ ನಿವೇಶನ ರಹಿತ ೧೧೬೦ ಅರ್ಜಿದಾರರು ನಿವೇಶನ ಕೋರಿ ಸಲ್ಲಿಸಿದ ಅರ್ಜಿಗಳನ್ನು ಈ ಕೂಡಲೇ ಅರ್ಹ ನಿವೇಶನ ರಹಿತರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ, ಅದಕ್ಕನುಗುಣವಾಗಿ ಎಷ್ಟು ಸರಕಾರಿ ಜಮೀನು ನಿವೇಶನಕ್ಕಾಗಿ ಮಂಜೂರು ಮಾಡಲು ಬೇಕು ಎಂಬುದಕ್ಕೆ ಬೈಂದೂರು ತಹಶೀಲ್ದಾರರವರಿಗೆ ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಪ್ರಸ್ಥಾವನೆಯನ್ನು ಸಲ್ಲಿಸಲು ಕ್ರಮ ವಹಿಸಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಡಿನ ರಕ್ಷಣೆ, ಮೂಡನಂಬಿಕೆಯ ಬಗೆಗಿನ ಜಾಗೃತಿ ಮೂಡಿಸುವ ಸುಂದರ ಕಥಾಹಂದರವಿರುವ ಕಿರುಚಿತ್ರ ‘ಕಾಡು ದಾರಿ’ ಸೆಪ್ಟೆಂಬರ್ 13ರ ಸಂಜೆ ಬಿಡುಗಡೆಗೊಳ್ಳಲಿದೆ. ಯುವ ತಂಡ ಒಟ್ಟಾಗಿ ನಿರ್ಮಿಸಿರುವ ಕಿರುಚಿತ್ರ ಒಂದಿಷ್ಟು ಕುತೂಹಲ ಮೂಡಿಸಿದೆ. ಅರಣ್ಯಾಧಿಕಾರಿ ಹಾಗೂ ಕಾಡುಗಳ್ಳರ ಸುತ್ತ ನಡೆಯುವ ಕಾಡು ದಾರಿಕಿರುಚಿತ್ರಕ್ಕೆ ಕಾಡುವ ದಾರಿ ಎಂಬ ಟ್ಯಾಗ್ಲೈನ್ ನೀಡಲಾಗಿದೆ. ಸ್ನೇಹಜೀವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಕಿರುಚಿತ್ರ ಯುವ ನಿರ್ದೇಶಕ ಅಮಿತ್ ಶೆಟ್ಟಿ ಆವರ್ಸೆ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಈ ಕಿರುಚಿತ್ರಕ್ಕೆ ಶರತ್ ಅಡಿಗ, ಶ್ರೀಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೀಧರ ಪೂಜಾರಿ ಆವರ್ಸೆ ಕಥೆ ಚಿತ್ರಕಥೆ ಬರೆದಿದ್ದು ಸಂಪತ್ ವಂಡಾರು ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ರಾಜ್, ಮನು ಹಂದಾಡಿ ಸಂಗೀತ ನೀಡಿದ್ದು, ಹರೀಶ್ ಕಿರಣ್ ತುಂಗ ಸಾಸ್ತಾನ ಸಂಕಲನ ಮಾಡಿದ್ದಾರೆ. ನಿರ್ದೇಶಕರಾದಿಯಾಗಿ ಸ್ಥಳೀಯರೇ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಯುವಕರ ಈ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸುವ ಕೆಲಸವನ್ನು ಪ್ರೇಕ್ಷಕ ಪ್ರಭುಗಳು ಮಾಡಬೇಕಿದೆ. ಚಿತ್ರದ ಟ್ರೇಲರ್ ಇಲ್ಲಿದೆ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಕಾಲೇಜಿನ ಕಟ್ಟಡವೋ ಭೋದಕ ಸಿಬ್ಬಂದಿಯೋ ಮಾತ್ರ ಕಾರಣವಾಗೋದಿಲ್ಲ. ಯಶಸ್ಸಿಗಾಗಿ ಕನಸನ್ನು ಬಿತ್ತುವ ಹೆತ್ತವರೂ ಪ್ರಮುಖ ಕಾರಣರಾಗುತ್ತಾರೆ. ಅಪ್ಪ ಅಮ್ಮ ಬೀರುವ ಪ್ರಭಾವ ಇನ್ನೊಬ್ಬರಿಂದ ಅಸಾಧ್ಯ ಹೀಗಾಗಿ ಮಕ್ಕಳು ಪರೀಕ್ಷಾ ಅಂಕಗಳಿಗಷ್ಟೇ ಸೀಮಿತವಾಗದೆ ಪ್ರಜ್ಞಾವಂತ ನಾಗರಿಕರಾಗಿ ಬದುಕಿನಲ್ಲೂ ಉತ್ತಮ ಅಂಕಗಳಿಸುವಂತೆ ಹುರಿದುಂಬಿಸುವ ಪೋಷಕರು ನಾವಾಗುವ ಬೇಕು ಎಂದು ಅಂತರ್ರಾಷ್ಟೀಯ ಜಾದೂಗಾರ ಲೇಖಕ ಓಂಗಣೇಶ್ ಉಪ್ಪುಂದ ಹೇಳಿದರು. ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜಿನ ರಕ್ಷಕ ಶಿಕ್ಷಕರ ಮಹಾ ಸಭೆಯಲ್ಲಿ ವಿದ್ಯಾಥಿಗಳ ಹೆತ್ತವರ ಹೊಣೆಗಾರಿಕೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ ಶಾಂತಾರಾಮ್ ಪ್ರಸ್ತಾವಿಕ ಮಾತನಾಡುತ್ತಾ ಶಿಕ್ಷಣಸಂಸ್ಥೆಗಳಿಗೆ ಪೋಷಕರ ನಿರಂತರ ಸಂಪರ್ಕದಿಂದ ವಿದ್ಯಾರ್ಥಿಗಳಿಗೂ ಉಪನ್ಯಾಸಕರಿಗೂ ಸ್ಪೂರ್ತಿ ಹೆಚ್ಚುತ್ತದೆ ಹಾಗೂ ಜವಾಬ್ದಾರಿ ಬೆಳೆಯುತ್ತದೆ ಇದೇ ಉದ್ದೇಶಕ್ಕಾಗಿ ಇಂದು ಸಭೆ ಹಮ್ಮಿಕೊಂಡಿದ್ದೇವೆ ಎಂದರು. ಕಾಲೇಜಿನ ಪ್ರಧಾನ ಸಂಚಾಲಕ ಸಿಲ್ವೆಸ್ಟರ್ ಡಿ ಅಲ್ಮೇಡಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಪರಿಶೃಮವನ್ನು ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಮ್ಮ ಅಗತ್ಯಕ್ಕಿಂತ ಹೆಚ್ಚು ಸಮಯ ಆಸಕ್ತಿಗಳನ್ನು ತಂತ್ರಜ್ಞಾನದ ಬಳಕೆಗೆ ಮೀಸಲಾಗಿಟ್ಟರೆ, ಯುವ ವಿದ್ಯಾರ್ಥಿಗಳು ಬೌದ್ಧಿಕ ಬೆಳವಣಿಗೆಗೆ ಬೇಕಾದ ಸಮಯ ಮತ್ತು ಸಂಯಮವನ್ನು ಕಳೆದುಕೊಳ್ಳಬೇಕಾಗುತ್ತದೆ. ಬದಲಾಗಿ ಯುವ ಜನತೆಯು ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಇತರರೊಂದಿಗೆ ಸಹನೆಯಿಂದ ಬಾಳಲು ಕಲಿಯಬೇಕು ಎಂದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಕನ್ನಡಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ ವಿ ಬನ್ನಾಡಿ ಹೇಳಿದರು. ಅವರು ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷರಾದ ಕಾಲೇಜಿನ ಸಂಚಾಲಕರಾದ ಬಿ.ಎಂ ಸುಕುಮಾರ ಶೆಟ್ಟಿ ವಿದ್ಯಾರ್ಥಿಗಳು ಮನೋಸ್ಥೈರ್ಯವನ್ನು ವೃದ್ಧಿಸಿಕೊಳ್ಳಬೇಕೆಂಬ ಕಿವಿಮಾತು ಹೇಳಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಯವರಾದ ಸೀತಾರಾಮ ನಕ್ಕತ್ತಾಯರವರು ವಿದ್ಯಾರ್ಥಿಗಳ ಸ್ಪರ್ಧೆಗೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಆಂಗ್ಲಭಾಷಾ ಪ್ರಾದ್ಯಾಪಕಿ ಸುಮತಿ ಶೆಣೈಯವರು ಉದ್ಘಾಟಕರ ಪರಿಚಯ ಮಾಡಿದರು. ಆಂಗ್ಲಭಾಷಾ ಪ್ರಾಧ್ಯಾಪಕಿ ಲೋನಾ ಲೂಯಿಸ್ರವರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಡುಪಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ಕಟ್ಟೆ ಆಶ್ರಯದಲ್ಲಿ ಬಿದ್ಕಲ್ಕಟ್ಟೆಯಲ್ಲಿ ಜರುಗಿದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜು ಬಾಲಕಿಯರು ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಗಳೊಂದಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಉಪನ್ಯಾಸಕ ರಾಮ್ ನಾಯ್ಕ್ ಮತ್ತು ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ ಇದ್ದರು.
