Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಲ್ಲೂರಿನಿಂದ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಸ್ತುವಾರಿಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಆಗುತ್ತಿರುವ ಅವಘಡಗಳು ಹಾಗೂ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೀವ್ರ ಸ್ವರೂಪದ ತೊಂದರೆಗಳಿಗೆ ಈ ಭಾಗದ ಸಂಸದರ ನಿರ್ಲಕ್ಷವೇ ಕಾರಣ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದ್ದಾರೆ. ಬೈಂದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ಚತುಷ್ಪಥ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಐಆರ್‌ಬಿ ಕಂಪೆನಿಯು ಕೆಲಸದ ಗುಣಮಟ್ಟ ಅಪೇಕ್ಷಿತ ಮಟ್ಟದಲ್ಲಿ ಇಲ್ಲ. ಸ್ಥಳೀಯರ ಅಗತ್ಯಕ್ಕೆ ತಕ್ಕಂತೆ ಯು ಟರ್ನ್, ಅಂಡರ್ ಪಾಸ್ ನಿರ್ಮಿಸುತ್ತಿಲ್ಲ. ಚರಂಡಿ ನಿರ್ಮಿಸದೇ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು, ಎಲ್ಲೆಂದರಲ್ಲಿ ಮಣ್ಣು ಸುರಿದಿರುವುದು ಮಳೆಗಾಲದಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಒತ್ತಿನೆಣೆ ಉಂಟಾಗಿರುವ ಗುಡ್ಡ ಕುಸಿತ ಮತ್ತು ಮಾರಸ್ವಾಮಿಯಲ್ಲಿ ಹಾಗೂ ಇತರೆಡೆಗಳಲ್ಲಾದ ರಸ್ತೆ ಜರಿತ ಗಂಭೀರ ಸ್ವರೂಪದ ಅಪಾಯ ಮತ್ತು ಆತಂಕ ಉಂಟುಮಾಡಿದೆ. ಮಳೆಗಾಲ ಅವಾಂತರದ ಬಗೆಗೆ ಹಲವು ಭಾರಿ ಎಚ್ಚರಿಸಿದ್ದರೂ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಲ್ಲ. ಇದು ರಾಷ್ಟ್ರೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಜೂ. 18ರಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕೊಲ್ಲೂರು ಕ್ಷೇತ್ರಕ್ಕೆ ಸಂದರ್ಶನ ಮಾಡಲಿರುವುದರಿಂದ ವಿಶೇಷ ಭದ್ರತೆ ಒದಗಿಸುವ ಸಲುವಾಗಿ ಪೊಲೀಸ್ ಉನ್ನತ ಅಧಿಕಾರಿಗಳ ಸಭೆ ನಡೆದಿದ್ದು, ದೇಗುಲದ ಪರಿಸರದ ಪರಿಶೀಲನೆ ನಡೆಸಲಾಗಿದೆ. ರಾಷ್ಟ್ರಪತಿ ಕೊಲ್ಲೂರಿಗೆ ಆಗಮಿಸುವುದು ಬಹುತೇಕ ಖಚಿತವಾಗಿದ್ದು, ಈ ದಿಸೆಯಲ್ಲಿ ಅರೆಶಿರೂರಿನಲ್ಲಿ ಪ್ರಸ್ತುತ ಇರುವ ಹೆಲಿಪ್ಯಾಡ್ ಅಲ್ಲದೇ ಪ್ರತ್ಯೇಕ 2 ಹೆಲಿಪ್ಯಾಡ್ ನಿರ್ಮಿಸುವ ಸಲುವಾಗಿ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಚಂದ್ರಶೇಖರ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ದಿಲ್ಲಿ ವಿಶೇಷ ಪೊಲೀಸ್ ತಂಡ ಕೊಲ್ಲೂರಿಗೆ ಆಗಮಿಸಿದ್ದು, ಇಲ್ಲಿನ ಪರಿಸರದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಎನ್ಎಸ್ಜಿ ಕಮಾಂಡೋಗಳು ಕೊಡಚಾದ್ರಿ ಬೆಟ್ಟ ಸಮೇತ ಈ ಭಾಗದ ಬಗ್ಗೆ ವಿವರಣೆ ಕೇಳಿದ್ದು, ಅದಕ್ಕೆ ಪೂರಕವಾಗಿ ವಿಶೇಷ ಭದ್ರತೆ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ದೇಗುಲದ ಅರ್ಚಕರು ಹಾಗೂ ಸಿಬಂದಿ ಸಹಿತ ಪ್ರತಿಯೋರ್ವರ ವಿವರಣೆ ಕೇಳಿರುವ ವಿಶೇಷ ಪೊಲೀಸ್ ಪಡೆ, ಪೂರ್ಣ ಮಾಹಿತಿ ಸಂಗ್ರಹಿಸುತ್ತಿದೆ. ಜೂ. 18ರಂದು ಮಧ್ಯಾಹ್ನದ ಅನಂತರ ಕೊಲ್ಲೂರಿಗೆ ಆಗಮಿಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋವುಗಳನ್ನು ಪ್ರೀತಿಸಿ ಮನುಷ್ಯರನ್ನು ಕೊಲ್ಲುವ ಗೋ ಭಯೋತ್ಪಾದಕ ಪಡೆ ಇಂದು ಹುಟ್ಟಿಕೊಂಡಿದೆ. ಅವರುಗಳ ದಬ್ಬಾಳಿಕೆಗೆ ಹೆದರದೇ ಐಕ್ಯತೆಯಿಂದ ಮುನ್ನಡೆಯುವ ನಮ್ಮ ನಡೆಯಿಂದ ಅಮಾಯಕರ ಮೇಲೆ ಹಲ್ಲೆ ನಡೆಸಿದವರ ಎದೆ ನಡುಗಬೇಕು. ಈ ದೇಶದ ಮೂಲ ನಿವಾಸಿ ಜನಾಂಗದ ಮಹಿಳೆಯ ಮೇಲೆ ದೌರ್ಜನ್ಯ ಎಸಗಿರುವವರನ್ನು ಬಂಧಿಸುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ. ಎಲ್. ಅಶೋಕ್ ಹೇಳಿದರು. ಅವರು ಕುಂದಾಪುರದ ಶಾಸ್ತ್ರೀ ಸರ್ಕಲ್ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾ ಒಕ್ಕೂಟ, ಕರ್ನಾಟಕ ದಲಿತ ಹಿಂದುಳಿತ ಮತ್ತು ಅಲ್ಪಸಂತ್ಯಾತ ಸಂಘಟನೆಗಳ ಒಕ್ಕೂಟ, ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೊವಾಡಿ ಚಲೋ ಜಾಥಾ ಮತ್ತು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರಾವಳಿಯಲ್ಲಿ ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಬದುಕಬಾರದು ಎಂದು ಬ್ರಾಹ್ಮಣ್ಯವನ್ನು ಉಸಿರಾಗಿಸಿಕೊಂಡಿರುವ ಸಂಘ ಪರಿವಾರ ನಿರ್ಧರಿಸಿವೆ. ಆಹಾರ ಕ್ರಮದಲ್ಲಿ ಶ್ರೇಷ್ಠ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಮೊವಾಡಿ ಗೋಹತ್ಯೆ ಪ್ರಕರಣದಲ್ಲಿ ಕೊರಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ಹಾಗೂ ಹಲ್ಲೆ ಖಂಡನೀಯ. ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ದಲಿತರನ್ನು ದಲಿತರ ವಿರುದ್ಧ ಎತ್ತಿಕಟ್ಟುವ ಪೈಶಾಶಿಕ ಕೃತ್ಯ ನಡೆಸಲಾಗುತ್ತಿದೆ. ಮೊವಾಡಿ ಘಟನೆಯನ್ನು ಬಳಸಿಕೊಂಡು ಸಮಾಜದ ಶಾಂತಿಯನ್ನು ಕೆಡಿಸುವ ಹಾಗೂ ಪರಿಸರದಲ್ಲಿ ಅನಗತ್ಯವಾಗಿ ಭಯಭೀತಿ ಸೃಷ್ಟಿ ಮಾಡುತ್ತಿರುವ ಕ್ರೂರ, ಕ್ರೌರ್ಯ ಮನಸ್ಸಿನ ಸಮಾಜಘಾತುಕ ಶಕ್ತಿಗಳ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರಗತಿಪರ ಚಿಂತಕ ಮತ್ತು ದಲಿತ ಸಂಘರ್ಷ ಸಮಿತಿಯ ಹೋರಾಟಗಾರ ಜಯನ್ ಮಲ್ಪೆ ಹೇಳಿದರು. ಅವರು ಮೊವಾಡಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೊವಾಡಿ ಗ್ರಾಮ ಶಾಖೆ ಆಶ್ರಯದಲ್ಲಿ ಜರಗಿದ ಮೊವಾಡಿ ಸ್ವಾಭಿಮಾನಿ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಶಾಂತಿ ಮತ್ತು ಸೌಹಾರ್ದತೆಯ ನೆಲೆಬೀಡಾಗಿದ್ದ ಮೊವಾಡಿಯಲ್ಲಿ ಜನರು ಜಾತಿ ಮತ ಭೇದ ಮರೆತು ಸಹಬಾಳ್ವೆಯ ಜೀವನ ನಡೆಸುತ್ತಿದ್ದರು. ಅಂಬೇಡ್ಕರ್ ಅವರ ಚಿಂತನೆ ಸ್ವಾಭಿಮಾನದ ಬಗ್ಗೆ ತಿಳುವಳಿಕೆ ಇಲ್ಲದ ಜನರು ತಮ್ಮ ಬೇಳೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೃಷಿ ಕೆಲಸ ಮುಗಿಸಿ ಮನೆಗೆ ಹಿಂದಿರುತ್ತಿದ್ದ ಯುವಕ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿ ನಾಪತ್ತೆಯಾದ ಘಟನೆ ಭಾನುವಾರ ಕಾಲ್ತೋಡಿನಲ್ಲಿ ನಡೆದಿದೆ. ಇಲ್ಲಿನ ಯಡೇರಿ ಹೊಸಮನೆ ನಿವಾಸಿ ಹರೀಶ ದೇವಾಡಿಗ (೩೪) ಕಲ್ಸಂಕ ಹಳ್ಳವನ್ನು ದಾಟಲು ಪ್ರಯತ್ನಿಸುತ್ತಿದ್ದಾಗ ನೀರಿನ ರಭಸಕ್ಕೆ ಕಾಲು ಜಾರಿ ಸೆಳೆದೊಯ್ಯಲ್ಪಟ್ಟರು. ಸೋಮವಾರವೂ ಸ್ಥಳೀಯರು ಮತ್ತು ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಅವರಿಗಾಗಿ ಶೋಧ ನಡೆಸಿದರು. ಸಂಜೆಯ ತನಕ ಅವರು ಪತ್ತೆಯಾಗಿಲ್ಲ. ಘಟನೆ ಬಗ್ಗೆ ಅವರ ಭಾವ ರಘುರಾಮ ದೇವಾಡಿಗ ಬೈಂದೂರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಯುವಕನಿಗೆ ಪತ್ನಿ, ಶಾಲೆಗೆ ಹೋಗುತ್ತಿರುವ ಇಬ್ಬರು ಗಂಡು ಮಕ್ಕಳಿದ್ದಾರೆ. ಶಾಸಕರ ಭೇಟಿ: ಸುದ್ದಿ ತಿಳಿದ ಶಾಸಕ ಕೆ. ಗೋಪಾಲ ಪೂಜಾರಿ ಸೋಮವಾರ ಹುಡುಕಾಟ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿನೀಡಿ ಬಂಧುಗಳು ಮತ್ತು ಸ್ಥಳೀಯರಿಂದ ಘಟನೆ ಮತ್ತು ಹುಡುಕಾಟದ ವಿವರ ಪಡೆದು ಅವರಲ್ಲಿ ಧೈರ್ಯ ತುಂಬಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರಾವಳಿಯಲ್ಲಿ ಆರಂಭಗೊಂಡಿರುವ ಮುಂಗಾರು ಮಳೆಗೆ ಹೆದ್ದಾರಿ ಕಾಮಗಾರಿಗಾಗಿ ಅವ್ಶೆಜ್ಞಾನಿಕವಾಗಿ ಕೊರೆದಿರುವ ಒತ್ತಿನೆಣೆ ಗುಡ್ಡವು ಸತತವಾಗಿ ಕುಸಿಯುತ್ತಿದೆ. ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ದಿನವೂ ವ್ಯತ್ಯಯಗೊಳ್ಳುತ್ತಿದೆ. ದೊಂಬೆ ಹಾಗೂ ಮದ್ದೋಡಿ ಮಾರ್ಗದಲ್ಲಿ ಬದಲಿ ವವಸ್ಥೆ ಕಲ್ಪಿಸಿದರೂ, ಅಲ್ಲಿನ ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ತೊಡಕುಂಟುಮಾಡಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ಒತ್ತಿನೆಣೆ ಗುಡ್ಡ ಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ್ ಮೇರಿ ಪ್ರಾನ್ಸಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚತುಷ್ಪತ ಹೆದ್ದಾರಿಯ ಅಸಮರ್ಪಕ ಕಾಮಗಾರಿಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವ ಬಗ್ಗೆ ಗುತ್ತಿಗೆದಾರ ಕಂಪನಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಒತ್ತಿನೆಣೆ ಗುಡ್ಡ ಇಬ್ಬಾಗ ಮಾಡುವಾಗ ಸಂಬಂಧಿತ ಗುತ್ತಿಗೆದಾರ ಕಂಪೆನೆ ಮುಂಜಾಗೃತ ಕ್ರಮ ಕೈಗೊಳ್ಳದ ಹಿನ್ನೆಯಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತೊಡಕ್ಕಾಗಿದೆ, ಈ ಬಗ್ಗೆ ಈಗಾಗಲೇ ಸಂಬಂಧಿತ ಕಂಪೆನಿಯ ವಿರುದ್ಧ ಕ್ರಿಮಿನಲ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶಿಕ್ಷಣ ಕ್ಷೇತ್ರ ವಿಶಾಲವಾಗಿದ್ದು ಶಿಕ್ಷಣದ ಅರ್ಥವನ್ನು ಇಂದಿನ ಮಕ್ಕಳು ತಿಳಿದುಕೊಂಡು ತಮ್ಮ ಗುರಿಯನ್ನು ಅರಿತುಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮುಖ್ಯವಲ್ಲ. ಎಳೆಯ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿರ್ಧರಿಸಿಕೊಂಡು ತಮ್ಮ ಮುಂದಿನ ಸಾಧನೆಗಳ ಬಗ್ಗೆ ಸಿದ್ಧತೆ ನಡೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಾಮಾನ್ಯಜ್ಞಾನ ಬೆಳೆದು ಬರಬೇಕು. ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ಹೊರಹೊಮ್ಮಬೇಕು. ಸೀಮಿತ ಪರೀಕ್ಷೆಗಳಿಂದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿಲ್ಲ. ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಎಸ್‌ವಿಎಸ್ ಅಸೋಸಿಯೇಶನ್ ಆಶ್ರಯದಲ್ಲಿ ಜರಗಿದ ಸರಸ್ವತಿ ವಿದ್ಯಾಲಯ ಸಮೂಹ ವಿದ್ಯಾಸಂಸ್ಥೆಗಳ ಪಿಯುಸಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳ ಹವ್ಯಾಸ ಆಸಕ್ತಿಯನ್ನು ಗಮನಿಸದೆ ಪೋಷಕರು ಆರ್ಥಿಕ ವ್ಯಾಮೋಹದಿಂದ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮೇಲೆ ಹಾಕುವ ಒತ್ತಾಯ ಒತ್ತಡದಿಂದ ವಿದ್ಯಾರ್ಥಿಗಳ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಗಳಿವೆ. ಆದ್ದರಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಒತ್ತಿನಣೆ ಗುಡ್ಡ ಕುಸಿತ ಮುಂದುವರಿದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತ್ತು, ಏಕಮುಖ ಸಂಚಾರ, ದೊಂಬೆ ಹಾಗೂ ಮದ್ದೋಡಿ ಮಾರ್ಗದಲ್ಲಿ ಬದಲಿ ವವಸ್ಥೆ ಕಲ್ಪಿಸಿದರೂ, ಅಲ್ಲಿನ ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ತೊಡಕ್ಕಾಗಿತ್ತು. ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ದೊಂಬೆ ಕರಾವಳಿ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಕರಾವಳಿ ಪಡಿಯಾರಹಿತ್ಲು ವೀರಮಹಾಸತಿ ದೇವಳದ ಬಳಿ ಸರಕು ತುಂಬಿದ ಲಾರಿಯೊಂದು ರಸ್ತೆಯ ಇಕ್ಕೆಲದಲ್ಲಿ ಕುಸಿದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿಯೂ ಸುಮಾರು ಒಂದು ತಾಸು ಸಂಚಾರ ವ್ಯತ್ಯಯಗೊಂಡು ವಾಹನ ಸವಾರರು ಪರದಾಡುವಂತಾಯಿತು. ಸುರಕ್ಷತೆಗೆ ಶಾಸಕರ ಸೂಚನೆ: ವತ್ತಿನಣೆಯಲ್ಲಿನ ಸಂಭಾವ್ಯ ಅಪಾಯದ ಹಿನ್ನೆಲೆಯಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಕೆ. ಗೋಪಾಲ ಪೂಜಾರಿ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಇಲ್ಲಿಗೆ ಭೇಟಿನೀಡಿದ ಅವರು ವಾಹನ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯುಕ್ತಿಗೊಳಿಸಬೇಕು. ಆತಂಕ ದೂರಾಗುವ ವರೆಗೆ ಅಗ್ನಿಶಾಮಕ ವಾಹನ ಮತ್ತು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಮರವಂತೆ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ ಚಥುಷ್ಪತ ಕಾಮಗಾರಿಗಾಗಿ ನೂತವಾಗಿ ನಿರ್ಮಿಸಲಾಗಿದ್ದ ಸೇತುವೆ ಬಳಿಯ ರಸ್ತೆ ಕುಸಿದ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆಗೆ ರಸ್ತೆಯ ಒಂದು ಭಾಗ ಕುಸಿದಿದ್ದು ಅಪಾಯಕಾರಿಯಾಗಿ ಪರಿಣಮಿಸಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸತತ ಮಳೆಯಿಂದಾಗಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಒತ್ತಿನಣೆ ಗುಡ್ಡ ಜರಿದು ಹೆದ್ದಾರಿ ತಡೆಯುಂಟಾದ ಪ್ರದೇಶಕ್ಕೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ಭೇಟಿ ನೀಡಿ ವೀಕ್ಷಿಸಿದರು. ಇಲಾಖೆ ಹಾಗೂ ಗುತ್ತಿಗೆ ಪಡೆದ ಕಂಪೆನಿಯ ಅಭಿಯಂತರರಿಗೆ ಸತತವಾಗಿ ಮುನ್ನೆಚ್ಚರಿಕೆ ನೀಡಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನಾ ನಿರ್ದೇಶಕರು ಹಾಗೂ ಅರಣ್ಯ ಇಲಾಖೆಯ ಡಿಎಫ್‌ಓ ಅವರಿಗೆ ಕರೆಮಾಡಿದ ಶಾಸಕರು, ಕಳೆದ ಆರು ತಿಂಗಳುಗಳಿಂದ ಕಾಮಗಾರಿಯಿಂದ ಎದುರಾಗಬಹುದಾದ ಅಪಾಯದ ಮನ್ಸೂಚನ್ನೆಯನ್ನು ನೀಡಲಾಗಿತ್ತು. ಆದಾಗ್ಯೂ ಯಾರೋಬ್ಬರೂ ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ಧೋರಣೆ ತಳೆದಿದ್ದೀರಿ. ಪ್ರತಿನಿತ್ಯ ಸಾವಿರಾರು ವಾಹನಗಳು ತಿರುಗಾಡುವ ಹೆದ್ದಾರಿಯಲ್ಲಿ ಗುಡ್ಡ ಕುಸಿತದಿಂದ ಆಗುವ ಅನಾಹುತಗಳಿಗೆ ಹೊಣೆ ಯಾರು ಎಂದು ಪ್ರಶ್ನಿಸಿದರು. ನಿಮ್ಮ ನಿರ್ಲಕ್ಷ್ಯ ಅಮಾಯಕರ ಸಮಯ ಹಾಗೂ ಬದುಕಿನೊಂದಿಗೆ ಚಲ್ಲಾಟವಾಡುವಂತಿರಬಾರದು. ಕೂಡಲೇ ಎಲ್ಲರೂ ಸ್ಥಳ ಪರಿಶೀಲನೆ ನಡೆಸಿ…

Read More