Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನೆನ್ನೆಯಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಸಮೀಪದ ಒತ್ತಿನಣೆ ಗುಡ್ಡ ಮತ್ತೆ ಕುಸಿದಿದ್ದ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬ್ಲಾಕ್ ಆಗಿದೆ. ಶನಿವಾರ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಗುಡ್ಡ ಜರಿದಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಸುಮಾರು ಒಂದೂವರೆ ಕಿ.ಮೀ ತನಕ ಸಾಲುಗಟ್ಟಿ ನಿಂತಿವೆ. ಬೆಳಿಗ್ಗೆಯಿಂದಲೇ ಮಣ್ಣು ತೆರವು ಕಾರ್ಯಾಚರಣೆ ಆರಂಭಗೊಂಡಿದ್ದರೂ, ಭಾರಿ ಮಳೆಯಿಂದಾಗಿ ಅಡ್ಡಿಯುಂಟಾಗುತ್ತಿದೆ. ರಸ್ತೆಯಲ್ಲಿಯೇ ಗುಡ್ಡದ ನೀರು ಹರಿದು ಬರುತ್ತಿದ್ದು ಕಾರ್ಯಾಚರಣೆಗೆ ತೊಡಕು ಉಂಟು ಮಾಡುತ್ತಿದೆ. ಬೈಂದೂರು ದೊಂಬೆ ಮೂಲಕ ಹಾಗೂ ಶಿರೂರು ಪೇಟೆಯಿಂದ ಮದ್ದೋಡಿ ರಸ್ತೆಯಲ್ಲಿ ಲಘು ವಾಹನಗಳಿಗೆ ಏಕಮುಖ ಸಂಚಾರದ ವ್ಯವಸ್ಥೆ ಮಾಡಲಾಗಿದ್ದರೂ ರಸ್ತೆ ಕಿರಿದಾಗಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಎರಡು ದಿನಗಳ ಹಿಂದಷ್ಟೇ ಕುಸಿದಿತ್ತು: ಮೊದಲ ಮಳೆಗೆ ಗುಡ್ಡ ಕುಸಿತ ಆರಂಭವಾಗಿದ್ದು ಎರಡು ದಿನಗಳ ಹಿಂದಷ್ಟೇ ಹೆದ್ದಾರಿ ಬ್ಲಾಕ್ ಆಗಿತ್ತು. ಸತತವಾಗಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಐಆರ್‌ಬಿ ಕಂಪೆನಿಯ ಮೇಲೆಯೂ ಕೇಸ್ ದಾಖಲಿಸಲಾಗಿತ್ತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆದ್ದಾರಿ ಕಾಮಗಾರಿ; ಸರಕಾರಿ ಆಸ್ಪತ್ರೆ ಅವಾಂತರ, ಹೊಸ ಸರಕಾರಿ ಬಸ್ಸು ಹಾಕಿಸಲು, ಬಸ್ಸು ನಿಲಗಡೆ ಮಾಡಲು ಒತ್ತಾಯ, ಶಿಕ್ಷಣ ಇಲಾಖೆಯೊಂದಿಗೆ ಮುಂದುವರಿದ ಗೊಂದಲ, ಸರಕಾರಿ ಕಾರ್ಯಕ್ರಮಗಳಲ್ಲಿ ಸಂಘ ಸಂಸ್ಥೆಗಳು ಸಹಯೋಗದ ಬಗೆಗೆ ಚರ್ಚೆ, ಕಂದಾಯ ಇಲಾಖೆ, ಆಧಾರ್ ಕಾರ್ಡ್ ರೇಷನ್ ಕಾಡ್ ಗೊಂದಲ, ಮರಳು ಅಲಭ್ಯತೆ, ಎಂಡೋಸಲ್ಪಾನ್ ಪೀಡಿತರಿಗೆ ನೀಡುತ್ತಿರುವ ಪರಿಹಾರದಲ್ಲಿ ತಾರತಮ್ಮ, ಅಧ್ಯಕ್ಷರು ಹಾಗೂ ಅವರದೇ ಪಕ್ಷದ ಸದಸ್ಯರ ನಡುವಿನ ಮಾತಿನ ಚಕಮಕಿ ಇವೇ ಮುಂತಾದ ಚರ್ಚೆ, ಗೊಂದಲ, ವಿವಾದ, ವಾದ ಪ್ರತಿವಾದಗಳಿಗೆ ಕುಂದಾಪುರ ತಾಲೂಕು ಪಂಚಾಯತ್ ಸಮಾನ್ಯ ಸಭೆ ಸಾಕ್ಷಿಯಾಯಿತು. ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆರಂಭವಾಗುತ್ತಿದ್ದಂತೆ ತಾಲೂಕು ಪಂಚಾಯತ್‌ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಹದಿಮೂರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಆಯ್ಕೆಮಾಡಿರುವ ಬಗೆಗೆ ಸದಸ್ಯೆ ಜ್ಯೋತಿ ಪುತ್ರನ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕೆಲವು ಸದಸ್ಯರುಗಳು ಧ್ವನಿಗೂಡಿಸಿದಾಗ ಕಾರ್ಯನಿರ್ವಹಣಾಧಿಕಾರಿಗಳು ಮರು ಆಯ್ಕೆಗೆ ಸಲಹೆ ನೀಡಿದರು. ಬಸ್ ಸೌಲಭ್ಯ ಬೇಕು: ಉಪ್ಪುಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ. ಕೋಟೇಶ್ವರದ ಕಾಮತ್ ಪೆಟ್ರೋಲ್ ಬಂಕ್ ಬಳಿ ಬೆಳಿಗ್ಗೆ ಛಿದ್ರಗೊಂಡು ಗುರುತು ಹಿಡಿಯದ ಸ್ಥಿತಿಯಲ್ಲಿ ಬಿದ್ದಿದ್ದ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ವ್ಯಕ್ತಿಯ ಕೈಯಲ್ಲಿದ್ದ ಕೆಂಪು ಬಣ್ಣದ ನೂಲು ಹೊರತು ಪಡಿಸಿ ಬೇರಾವುದೇ ಗುರುತು ಸಿಗದ ರೀತಿಯಲ್ಲಿ ಅಪಘಾತ ನಡೆದಿದೆ. ರಾತ್ರಿ ವೇಳೆ ಸಂದರ್ಭದಲ್ಲಿ ಯಾವುದೋ ವಾಹನ ಹರಿದು ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗುರುತು ಪತ್ತೆಗೆ ಕೋರಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮೇ ತಿಂಗಳು ಮುಗಿಯುತ್ತಿದಂತೆ ಯಕ್ಷಗಾನ ಮೇಳಗಳಿಗೆ ಒಂದು ವಿರಾಮ. ಗೆಜ್ಜೆಗಳನ್ನೆಲ್ಲ ಕಟ್ಟಿ ಪೆಟ್ಟಿಗೆಯಲಿಟ್ಟು ಅಟ್ಟ ಸೇರಿಸಿಬಿಡುತ್ತವೆ. ಸತತ ಆರು ತಿಂಗಳಿಂದ ದುಡಿದು ದಣಿದ ದೇಹಕ್ಕೆ ವಿಶ್ರಾಂತಿ. ಜೂನ್ ಆರಂಭ ಕೆಲವರು ತಮ್ಮಲ್ಲಿಯೆ ಒಂದು ತಂಡಕಟ್ಟಿಕೊಂಡು ಮುಂಬೈ, ಬೆಂಗಳೂರು, ಹೈದರಾಬಾದ್ ನಂತಹ ಕರಾವಳಿಯ ಜನರು ಹೆಚ್ಚು ಇರುವ ಕಡೆ ಪ್ರದರ್ಶನ ನೀಡುತ್ತಾರೆ. ಅಲ್ಲಿ ವೃತ್ತಿಜೀವನದ ಒತ್ತಡದೊಂದಿಗೆ ತಮ್ಮ ಇಷ್ಟದ ಯಕ್ಷಗಾನವನ್ನು ನೋಡುವಲ್ಲಿ ಬಹುತೇಕ ಕರಾವಳಿಗರು ಹಾತೊರೆಯುತ್ತಾರೆ. ಪೌರಾಣಿಕ, ಸಾಮಾಜಿಕ ಎರಡು ರೀತಿಯ ಪ್ರಸಂಗಗಳನ್ನು ಜನರು ಇಷ್ಟಪಡುತ್ತಾರೆ. ಈ ಬಾರಿ ಮೇ ತಿಂಗಳ ಕೊನೆಯಿಂದಲೇ ಕಲಾಕ್ಷೇತ್ರದಲ್ಲಿ ಚಂಡೆ ಮದ್ದಳೆಯ ಕಲರವ ಸದ್ದು ಪ್ರಾರಂಭವಾಗಿದೆ. ಇದೇ ಶನಿವಾರ ಜೂನ್ 10 ರಂದು ರಾತ್ರಿ ಪೌರಾಣಿಕ ಪ್ರೀಯರ ನೆಚ್ಚಿನ ಅದ್ದೂರಿ ತ್ರಿವಳಿ ಅಖ್ಯಾನಗಳ “ಯಕ್ಷ ಸಂಕ್ರಾಂತಿ”ಗೆ ಕಲಾಕ್ಷೇತ್ರ ಅಣಿಯಾಗುತ್ತಿದೆ . ಕಲಾಧರ ಬಳಗ ಜಲವಳ್ಳಿ ಮತ್ತು ಅತಿಥಿ ದಿಗ್ಗಜರ ಸಮಾಗಮದಲ್ಲಿ ನಾಗರಾಜ್ ಶೆಟ್ಟಿ ನೈಕಂಬ್ಳಿ ಸಂಯೋಜನೆಯಲ್ಲಿ “ರಾಮ ನಿರ್ಯಾಣ -…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಶೇಡಿಮನೆ ಗ್ರಾಮದ ಯುವತಿಗೆ ನಿರಂತರ ಕಿರುಕುಳ ನೀಡಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ವಿರುದ್ಧ ಪೋಸ್ಕೋ ಪ್ರಕರಣ ದಾಖಲಾಗಿದ್ದು, ಮೂವರ ಪೂಕಿ ಓರ್ವ ವಿನಯ ಶೆಟ್ಟಿ ಎಂಬುವವನನ್ನು ಬಂಧಿಸಿರುವ ಪೊಲೀಸರು, ಕುಂದಾಪುರ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸಹೋದರನ ಜತೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿನಯ್್ ಶೆಟ್ಟಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ ಕರೆತಂದಿದ್ದಾರೆ. ಆತನಿಗೆ 15 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳ ಬಂಧನಕ್ಕಾಗಿ ನಮ್ಮ ವಿಶೇಷ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಕಿರುಕುಳದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ. ► ಶೇಡಿಮನೆ: ಕಿರುಕುಳಕ್ಕೆ ಹೆದರಿ ಯುವತಿ ಆತ್ಮಹತ್ಯೆಗೆ ಯತ್ನ, ಆಸ್ಪತ್ರೆಗೆ ದಾಖಲು  – http://kundapraa.com/?p=23381 

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ದಾಖಲೆ ಒಂದು ಭಾಗವಾಗಿದ್ದು, ವಿದ್ಯಾರ್ಥಿಗಳು ಪಾಠೇತರ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯುವ ಮೂಲಕ ಸಮಾಜಕ್ಕೆ ದಾರಿದೀಪಗಳಾಬೇಕು. ಹಗಲೆಲ್ಲ ಬೆಳಕು ಚೆಲ್ಲುವಂತಾಗಬೇಕು ಎಂದು ಸೇವಾ ಸಂಗಮದ ವಿಶ್ವಸ್ಥ ಕೇಶವರಾಯ ಪ್ರಭು ಹೇಳಿದರು. ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇವರ ಆಶ್ರಯದಲ್ಲಿ ಜರಗಿದ ೨೦೧೬-೧೭ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸ್ಥಾನಗಳಿಸಿ ಗಂಗೊಳ್ಳಿ ನಿವೇದಿತಾ ಶಿಶು ಮಂದಿರದ ಪ್ರಾಕ್ತನ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಶಿಶು ಮಂದಿರದಲ್ಲಿ ಮಾತಾಜಿಯವರು ಮಕ್ಕಳ ಮಟ್ಟಕ್ಕೆ ಇಳಿದು ನೀಡಿದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತಾಗಿದೆ. ಮಾತಾಜಿಯವರ ಪ್ರರಿಶ್ರಮದ ಫಲ ಹಾಗೂ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ತೋರಿದ ಆಸಕ್ತಿಯಿಂದ ಶಿಶು ಮಂದಿರದ ಪ್ರಾಕ್ತನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಶುಭ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮೀಪದ ಒತ್ತಿನಣೆ ಗುಡ್ಡ ಜರಿದು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಬ್ಲಾಕ್ ಆಗಿರುವ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಗುಡ್ಡ ಜರಿದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಜರಿದಿದ್ದು ಸುಮಾರು ಒಂದು ಕಿ.ಮೀ. ತನಕ ಎರಡೂ ಬದಿಗಳಲ್ಲಿ ವಾಹನಗಳು ಬ್ಲಾಕ್ ಆಗಿದ್ದವು. ಜೆಸಿಬಿ ಮೂಲಕ ಕುಸಿದಿರುವ ಮಣ್ಣು ತೆರವು ಕಾರ್ಯಾಚರಣೆ ನಡೆಸಿ ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಒತ್ತಿನಣೆಯಲ್ಲಿ ಹೆದ್ದಾರಿ ಕಾಮಗಾರಿ ಸಲುವಾಗಿ ಗುಡ್ಡವನ್ನು ಆಳವಾಗಿ ಕಡಿದು ರಸ್ತೆ ನಿರ್ಮಿಸಲಾಗಿತ್ತು. ಗುಡ್ಡದ ತಳಭಾದಲ್ಲಿ ಜೇಡಿ ಮಣಿರುವುದರಿಂದ ಅದು ಕುಸಿಯುವ ಮನ್ಸೂಚನೆಯನ್ನೂ ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಆಗಾಗ್ಗೆ ನೀಡಿದ್ದರು. ಆದಾಗ್ಯೂ ಎಚ್ಚೆತ್ತುಕೊಳ್ಳದ ಕಾಮಗಾರಿ ಹೊಣೆಹೊತ್ತ ಇಂಜಿನಿಯರ್‌ಗಳು ತಟಸ್ಥ ನಿಲುವು ಅನುಸರಿಸಿದ್ದರು. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಕುಸಿಯುವ ಮೂನ್ಸೂಚನೆ ಸಿಕ್ಕ  ಕೂಡಲೇ ಅಧಿಕಾರಿಗಳು ಪಕ್ಕದಲ್ಲಿಯೇ ತರಾತುರಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ರಸ್ತೆ ನಿರ್ಮಿಸಿದ್ದರು. ಇದೀಗ ಆ ರಸ್ತೆಯಲ್ಲಿ ಬಿದ್ದರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿ ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಲು, ಮಕ್ಕಳು ತಾವೇ ತಂದ ಗಿಡಗಳನ್ನು ಶಾಲಾ ಪರಿಸರದಲ್ಲಿ ನೆಟ್ಟು ಆನಂದಿಸಿದರು. ಬಾಂಡ್ಯ ಎಜ್ಯುಕೇಶನ್ ಟ್ರಸ್ಟಿನ ಜಂಟಿ ಕಾರ‍್ಯನಿರ್ವಹಕ ನಿರ್ದೇಶಕರುಗಳಾದ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ ಎಸ್ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರಾದ ಶಾಯಿಜು ಕೆ. ಆರ್. ನಾಯರ್, ಉಪಪ್ರಾಂಶುಪಾಲೆ ಸುನಂದ ಪಾಟೀಲ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜನರು ಕಾಲಕಾಲಕ್ಕೆ ಕಣ್ಣಿನ ತಪಾಸಣೆಯನ್ನು ಮಾಡಿಕೊಳ್ಳುತ್ತಿರಬೇಕು. ಕಣ್ಣಿನ ಬಗ್ಗೆ ಅಸಡ್ಡೆ ತೋರದೆ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕಣ್ಣಿನ ದೋಷದ ಬಗ್ಗೆ ಅಗತ್ಯ ಚಿಕಿತ್ಸೆ ಪಡೆದುಕೊಂಡು ಸ್ವಸ್ಥ ಸಮಾಜ ನಿರ್ಮಿಸಲು ಜನರು ಮುಂದಾಗಬೇಕು ಎಂದರು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಹೇಳಿದರು. ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರಗಿದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಟ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಲಯನ್ಸ್ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರೂಪಶ್ರೀ, ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ಕಾರ್ಯದರ್ಶಿ ನಾರಾಯಣ ನಾಯ್ಕ್, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಬಿ.ಸದಾನಂದ ಶೆಣೈ, ನಾಗಮ್ಮ ಮತ್ತಿತರರು ಉಪಸ್ಥಿತರಿದ್ದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಜ್ವಲಾ ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ವೇತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಿರಿಯ ಮಹಿಳಾ ಆರೋಗ್ಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಶ್ವ ಪರಿಸರ ದಿನದ ಅಂಗವಾಗಿ ಪಡುವರಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಮೀಪದ ಸ.ಹಿ.ಪ್ರಾ.ಶಾಲೆ ಕೋಟೆಬಾಗಿಲು ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಪಡುವರಿ ಗ್ರಾ ಪಂ ಅಧ್ಯಕ್ಷೆ ದೀಪಾ ಶೆಟ್ಟಿ ಹಾಗೂ ಉಪಾಧ್ಯಕ್ಷ ಸದಾಶಿವ ಡಿ ಪಡುವರಿ ಹಾಗೂ ಗೀಡಗಳನ್ನು ನೆಟ್ಟರು. ಕೋಟೆಬಾಗಿಲು ಶಾಲೆ ಮುಖ್ಯೋಪಾಧ್ಯಾಯ ಸುರೇಶ, ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಗಣೇಶ್ ಹೆಬ್ಬಾರ್, ದ್ವೀತಿಯ ದರ್ಜೆ ಲೆಕ್ಕ ಪರಿಶೋದಕ ಸಹಾಯಕಿ ಜಯಲಕ್ಷ್ಮೀ ಸಿ ವಿ, ಗ್ರಾ ಪಂ ಸಿಬ್ಬಂದಿಗಳು ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

Read More