Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮಸಭೆಯಲ್ಲಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು. ಅವರು ಜಾಗೃತರಾಗಿದ್ದರೆ ಊರಿನಲ್ಲಿ ನಡೆಯುವ ಕಳಪೆ ಕಾಮಗಾರಿ, ಅವ್ಯವಹಾರಕ್ಕೆ ತಡೆಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಮರವಂತೆ ಗ್ರಾಮ ಪಂಚಾಯತ್ ಸುವರ್ಣ ಸೌಧದ ಅಟಲ್‌ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ನಡೆದ ಎರಡನೆ ಸುತ್ತಿನ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ಪ್ರಥಮ ಸುತ್ತಿನ ಗ್ರಾಮಸಭೆಯ ವರದಿ ಮಂಡಿಸಿದರು. ಕರಸಂಗ್ರಾಹಕ ಶೇಖರ್ ಮರವಂತೆ ವಾರ್ಡ್‌ಸಭೆಯ ನಡಾವಳಿ, ಪ್ರಸಕ್ತ ಸಾಲಿನ ಕ್ರಿಯಾಯೋಜನೆ ಹಾಗೂ ಪ್ರಗತಿಯ ವಿವರ ನೀಡಿದರು. ಪಶು ವೈದ್ಯಾಧಿಕಾರಿ ಡಾ. ಅರುಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸನ್ಮಾನ್ ಶೆಟ್ಟಿ ಗ್ರಾಮಸಭೆಯಲ್ಲಿ ಮಾತನಾಡುವಾಗ ಜನರು ಸಂಯಮ ವಹಿಸಿದರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಯೇ ವಿಶೇಷವಾಗಿ ಗುರುತಿಸಿಕೊಂಡ ಸಂಸ್ಥೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತಿರುವ ಈ ಸಂಸ್ಥೆ ಮುಂದಿನ ದಿನಗಳಲ್ಲಿ ಯಶಸ್ಸನ್ನು ಸಾಧಿಸಲಿ ಮತ್ತು ಸಂಸ್ಥೆಯ ಅಭಿವೃದ್ಧಿಗೆ ವೈಯಕ್ತಿಕ ನೆಲೆಯಲ್ಲೂ ನಾನು ಸಹಕರಿಸುತ್ತೇನೆ ಎಂದು ನಂದಿನಿ ಗ್ರೂಫ್ ಆಫ್ ಹೋಟೆಲಿನ ಮಾಲಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೇರಂಬಳ್ಳಿ ರಾಘವೇಂದ್ರ ರಾವ್ ಹೇಳಿದರು. ಅವರು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಸೀತರಾಮ ನಕ್ಕತ್ತಾಯ, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಅನಿಲ್ ಚಾತ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್‌ರವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಕಾಲೇಜಿನ ವಾಣಿಜ್ಯ ಉಪನ್ಯಾಸಕರಾದ ವಿಘ್ನೇಶ್ವರ್ ರಾವ್ ಸ್ವಾಗತಿಸಿದರು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಕರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕರಾವಳಿ ಭಾಗದಿಂದ ಪ್ರತಿನಿತ್ಯ ಬೆಂಗಳೂರಿಗೆ ತೆರಳುವ ನೂರಾರು ಜನರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಗಂಗೊಳ್ಳಿ-ಬೆಂಗಳೂರು ನಡುವೆ ಸ್ಕ್ಯಾನಿಯಾ ಹವಾನಿಯಂತ್ರಿತ ಬಸ್ ಸೇವೆ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಗಂಗೊಳ್ಳಿ-ಬೆಂಗಳೂರು ನಡುವೆ ಆರಂಭಿಸಿದ ನೂತನ ಸ್ಕ್ಯಾನಿಯಾ ಬಸ್ಸುಗಳಿಗೆ ಗಂಗೊಳ್ಳಿಯ ರಥಬೀದಿ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು. ಬೈಂದೂರು-ಬೆಂಗಳೂರು ಮತ್ತು ಗಂಗೊಳ್ಳಿ-ಬೆಂಗಳೂರು ನಡುವೆ ಪ್ರತಿನಿತ್ಯ ಈ ಬಸ್ಸುಗಳು ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್ಸುಗಳನ್ನು ಈ ಮಾರ್ಗದಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ. ಪ್ರಯಾಣಿಕರ ಅಗತ್ಯತೆ ಹಾಗೂ ನಾಗರಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಐಶರಾಮಿ ಬಸ್ಸುಗಳನ್ನು ಓಡಿಸಲು ಸರಕಾರ ಬದ್ಧವಾಗಿದೆ ಎಂದರು. ಗಂಗೊಳ್ಳಿ-ಕುಂದಾಪುರ ನಡುವೆ ಮಂಜೂರಾಗಿರುವ ಎರಡು ಸರಕಾರಿ ಬಸ್ಸುಗಳನ್ನು ಓಡಿಸಲು ಕ್ರಮಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಹಾಗೂ ಗಂಗೊಳ್ಳಿಯಿಂದ ಕುಂದಾಪುರ, ಉಡುಪಿ ಮಂಗಳೂರು ಮಾರ್ಗವಾಗಿ ಬೆಂಗಳೂರು ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೊಸತಾಗಿ ಎರಡು ಸ್ಕ್ಯಾನಿಯಾ ಐರಾವತ್ ಬಸ್ಸುಗಳನ್ನು ಬಿಡಲಾಗಿದ್ದು, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ಇಂದು ಬೈಂದೂರು ಹಾಗೂ ಗಂಗೊಳ್ಳಿಯಲ್ಲಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಹೊಸ ಬಸ್ಸುಗಳನ್ನು ಹಾಕಲಾಗುತ್ತಿದ್ದು, ಬೈಂದೂರು ಹಾಗೂ ಗಂಗೊಳ್ಳಿ ಜನರ ಬೇಡಿಕೆಯಂತೆ ಈ ಭಾಗಕ್ಕೂ ಎರಡು ಐಶಾರಾಮಿ ಬಸ್ಸುಗಳನ್ನು ಹಾಕಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ನಿಗಮದಿಂದ ನೂತನವಾಗಿ ಮಿನಿ ಬಸ್ಸುಗಳನ್ನು ಬಿಡುವ ಯೋಜನೆ ಇದ್ದು ಶೀಘ್ರದಲ್ಲಿಯೇ ಬೇಡಿಕೆಗನುಗುಣವಾಗಿ ಅನುಷ್ಠಾನಗೊಳ್ಳಲಿದೆ ಎಂದರು. ತಾಲೂಕು ಕೇಂದ್ರವಾಗಲಿರುವ ಬೈಂದೂರು ಪಟ್ಟಣಕ್ಕೆ  ಅಗತ್ಯ ಸೌಕರ್ಯಗಳನ್ನು ಪೂರೈಸಲಾಗುವುದು. ಬೈಂದೂರಿನಲ್ಲಿ ನಿಗದಿಪಡಿಸಲಾಗಿರುವ ಜಾಗದ ಆರ್.ಟಿ.ಸಿ ನಿಗಮಕ್ಕೆ ವರ್ಗಾವಣೆ ಆದ ತಕ್ಷಣವೇ ಡಿಪೋ ಹಾಗೂ ಬಸ್ ನಿಲ್ದಾಣಕ್ಕೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದ ಅವರು ಬೈಂದೂರು ಹೋಬಳಿಯನ್ನು ಮಾತ್ರವೇ ತಾಲೂಕು ಕೇಂದ್ರವಾಗಿ ಮಾಡಲಾಗುತ್ತಿದ್ದು,…

Read More

ಕುಂದಾಪುರ  ದಿಗ್ವಿಜಯ ಚಾನೆಲ್ ಕಚೇರಿ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾಧ್ಯಮಕ್ಕೆ ಭಾಷೆ ಮೇಲಿನ ಹಿಡಿತ ಬಹುಮುಖ್ಯವಾದುದು. ಉತ್ತಮ ಭಾಷೆ ಬಳಕೆ ಹಾಗೂ ಅದರ ಸಮರ್ಪಕ ಪ್ರಯೋಗ, ಓದುಗರ ಆಕರ್ಷಿಸುವ ಹೆಡ್ಡಿಂಗ್, ನೋಡುಗರಿಗೆ ಹಿತ ನೀಡುವ ದೃಶ್ಯಗಳ ವೀಕ್ಷಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಮಾಧ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು. ಟಿಆರ್‌ಪಿ ಹೆಚ್ಚಿಸುವ ಉದ್ದೇಶಕ್ಕಾಗಿ ಸತ್ಯಕ್ಕೆ ದೂರವಾದ, ವೈಯಕ್ತಿಕ ತೇಜೋವಧೆಗೆ ಹೆಚ್ಚು ಒತ್ತುಕೊಡದೆ, ನೈಜ ಸುದ್ದಿಗಳಿಗೆ ಆದ್ಯತೆ ನೀಡಿದರೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು. ಕುಂದಾಪುರ ಆರ್.ಎನ್. ಶೆಟ್ಟಿ ಸಭಾಭವನ ಮಿನಿ ಸಭಾಂಗಣದಲ್ಲಿ ನಡೆದ ದಿಗ್ವಿಜಯ 24×7 ಚಾನೆಲ್ ಕಚೇರಿ ಉದ್ಘಾಟಿಸಿ, ಮಾಧ್ಯಮ ಕೇತ್ರದಿಂದ ಆರಂಭವಾದ ವಿಜಯ ಸಂಕೇಶ್ವರ ಅವರ ವಿಜಯಯಾತ್ರೆ ದೃಶ್ಯ ಮಾಧ್ಯಮಕ್ಕೂ ವಿಸ್ತರಿಸಿದ್ದು, ದಿಗ್ವಿಜಯ ಟಿವಿ ಚಾಲನ್ ದಶದಿಕ್ಕುಗಳಲ್ಲಿ ದಿಗ್ವಿಜಯದ ದುಂದುಬಿ ಮೊಳಗಿಸಲಿ ಎಂದು ಆಶಿಸಿದರು. ಜವಾಬ್ದಾರಿಯುತ ಓದುಗರ ಹಾಗೂ ನೋಡುಗರ ಸೃಷ್ಟಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದ್ದು, ಜವಾಬ್ದಾರಿಯುತ ಓದುಗರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಲಸೆ ಕಾರ್ಮಿಕ‌ರು ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಹಾಗೂ ಜಾಗೃತಿ ವಹಿಸಬೇಕು. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ನೈರ್ಮಲ್ಯದ ಸಮಸ್ಯೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳಿಂದ ಮಲೇರಿಯಾ, ಫೈಲೇರಿಯಾ, ಡೆಂಗ್ಯೂ ಮೊದಲಾದ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದು, ಈ ಬಗ್ಗೆ ಜನರು ಎಚ್ಚರ ವಹಿಸಬೇಕು ಮುಖ್ಯವಾಗಿ ಸ್ವತ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಕಾರ್ಮಿಕರು ರೋಗ ವಾಹಕ ಆಶ್ರಿತ ರೋಗಗಳ ಬಗ್ಗೆ ಅರಿವು ಪಡೆದಿರಬೇಕಾದ ಆವಶ್ಯಕತೆ ಇದೆ ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್‌ ಶಿಲ್ಪಾ ನಾಗ್‌ ಹೇಳಿದರು. ಅವರು ಕುಂದಾಪುರ ನೆಹರೂ ಮೈದಾನದಲ್ಲಿ ಜಿ.ಪಂ. ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಉಡುಪಿ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಕುಂದಾಪುರ, ಪೊಲೀಸ್‌ ಇಲಾಖೆ ಕುಂದಾಪುರ, ಜೆಸಿಐ ಕುಂದಾಪುರ ಸಿಟಿ, ಭಂಡಾರ್‌ಕಾರ್ಸ್‌ ಕಾಲೇಜು ಕುಂದಾಪುರ ಇವರ ಸಹಭಾಗಿತ್ವದಲ್ಲಿ ವಲಸೆ ಕಾರ್ಮಿಕರಿಗೆ ರೋಗವಾಹಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಾರದ ಹಿಂದೆ ಒಡೆದು ಹೋಗಿದ್ದ ವಾರಾಹಿ ಕಾಲುವೆಯ ದುರಸ್ತಿ ಸಂದರ್ಭ ಅನಿರೀಕ್ಷಿತವಾಗಿ ಕಾಲುವೆಯಲ್ಲಿ ನೀರು ಹರಿದುಬಂದ ಕಾರಣ ಮತ್ತೂಮ್ಮೆ ಕೃಷಿ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನೀರು ಪೋಲಾಗಿದೆ. ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೊಯ್ಕಡಿ ಕೆಳಹೆಬ್ಟಾಗಿಲು ಬಳಿ ಡಿ. 17ರಂದು ವಾರಾಹಿ ಎಡದಂಡೆಯ ಕಾಲುವೆಯ ತಳಭಾಗ ಒಡೆದು ನೀರು ಪರಿಸರದ ಕೃಷಿ ಭೂಮಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿತ್ತು. ವಾರಾಹಿ ಎಡದಂಡೆಯ 26ನೇ ಕಿ.ಮೀ.ಯಲ್ಲಿ ಒಡೆದ ಕಾಲುವೆಯ ದುರಸ್ತಿ ಕಾಮಗಾರಿ ಹಾಗೂ 23ನೇ ಕಿ.ಮೀ. ಕಾಲುವೆಯ ಬಾಕಿ ಉಳಿದ ಕಾಮಗಾರಿಗಾಗಿ ನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ಕಾಲುವೆ ಯಲ್ಲಿ ನೀರು ನಿಲುಗಡೆಗೊಳಿಸಲು 22ನೇ ಕಿ.ಮೀ.ಯಲ್ಲಿ ಬಂಡನ್ನು (ತಾತ್ಕಾಲಿಕ ತಡೆಗೋಡೆ) ಹಾಕಲಾಗಿತ್ತು. ಆದರೆ ಗುರುವಾರ ರಾತ್ರಿ ಬಂಡು ಒಡೆದು ಕಾಲುವೆಯಲ್ಲಿ ನೀರು ನುಗ್ಗಿತು.ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ವಾರಾಹಿ ಎಂಜಿನಿಯರುಗಳಿಗೆ ಕರೆ ಮಾಡಿ ನೀರು ನಿಲ್ಲಿಸುವಂತೆ ತಿಳಿಸಿದ ಅನಂತರ ಕಾಲುವೆಯಲ್ಲಿ ಹರಿಸುವುದನ್ನು ನಿಲ್ಲಿಸಲಾಗಿತ್ತು. ಜಮೀನಿನಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಚತುಷ್ಪಥ ಹೆದ್ದಾರಿ ಅಂಡರ್‌ ಪಾಸ್‌ಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಅದರ ಕುರಿತು ಪರ-ವಿರೋಧ ಅಭಿಪ್ರಾಯ ಮೂಡಿಬಂದ ಕಾರಣ ಶುಕ್ರವಾರ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಜನರ ಅಹವಾಲು ಆಲಿಸಿದರು. ಈ ಸಂದರ್ಭ ಸೇರಿದ್ದ ನೂರಾರು ಜನರು ಪದ್ಮಾವತಿ ದೇವಸ್ಥಾನದ ಎದುರು ಅಂಡರ್‌ ಪಾಸ್‌ ಬದಲು ಯು ಟರ್ನ್ ನೀಡಬೇಕು ಎಂದು ಆಗ್ರಹಿಸಿದರು. ಸಂಸದ ಬಿ.ಎಸ್‌. ಯಡಿಯೂರಪ್ಪ ಅವರ ಖಾಸಗಿ ಕಾರ್ಯದರ್ಶಿ ಪುರುಷೋತ್ತಮ ಎರಡು ವ್ಯವಸ್ಥೆಗಳ ಸಾಧಕ ಬಾಧಕ ವಿವರಿಸಿ ಜನರು ತಮ್ಮ ತೀರ್ಮಾನ ತಿಳಿಸಬೇಕು ಎಂದರು. ತಾ. ಪಂ. ಸದಸ್ಯೆ ಶ್ಯಾಮಲಾ ಎಸ್‌. ಕುಂದರ್‌, ಗ್ರಾ. ಪಂ. ಅಧ್ಯಕ್ಷ ಎನ್‌. ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಪುತ್ರನ್‌, ಸ್ಥಳೀಯ ಮುಖಂಡರು ಮತ್ತು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಯು ಟರ್ನ್ ಪರ ಏಕಾಭಿಪ್ರಾಯ ಮುಂದಿಟ್ಟರು. ಪುರುಷೋತ್ತಮ ಜನರ ತೀರ್ಮಾನಕ್ಕೆ ಸಮ್ಮತಿ ಸೂಚಿಸಿ ವಿವಾದಕ್ಕೆ ತೆರೆ ಎಳೆದರು. ಕುಂದಾಪುರ ಉಪವಿಭಾಗಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಶ್ವವ್ಯಾಪಿಯಾದ ಸಂಸ್ಕೃತ ನಮ್ಮ ನೆಲದ ಅತ್ಯಂತ ಪ್ರಾಚೀನ ಭಾಷೆ. ಸಹಸ್ರಾರು ವರ್ಷಗಳು ಸಂದರೂ ಒಂದು ಶಬ್ದವೂ ಅಪಭ್ರಂಶಗೊಳ್ಳದೆ, ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿರುವುದು ಇದರ ವೈಶಿಷ್ಟ್ಯ. ಕನ್ನಡ ಮೊದಲಾದ ರಾಜ್ಯ ಭಾಷೆಗಳ ಮೇಲೆ ಸಂಸ್ಕೃತ ಗಾಢವಾದ ಪ್ರಭಾವ ಬೀರಿದೆ. ವೇದಗಳಿಂದ ಮೊದಲ್ಗೊಂಡು ಜಾನಪದ ಸಾಹಿತ್ಯದವರೆಗೆ ವಿಪುಲವಾದ ಸಾಹಿತ್ಯವನ್ನು ಹೊಂದಿದ ಸಂಸ್ಕೃತ ತ್ರಿಕಾಲಾಭಾಧಿತವಾದ ಸುಂದರ ಸೂಕ್ತಿಗಳ ಸಾಗರ. ಅಂತಹ ಸೂಕ್ತಿಗಳಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಉಪಯುಕ್ತ ಸೂಕ್ತಿಗಳನ್ನು ಸಂಗ್ರಹಿಸಿ, ಸರಳ ಕನ್ನಡ ಅನುವಾದದೊಂದಿಗೆ ಪ್ರಕಟಿಸಲಾದ ಈ ಕೃತಿ ಸಾಹಿತ್ಯ ಲೋಕಕ್ಕೊಂದು ವಿಶಿಷ್ಟ ಕೊಡುಗೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಾಹಿತಿ ಶ್ರೀ ನೀಲಾವರ ಸುರೇಂದ್ರ ಅಡಿಗರು ಹೇಳಿದರು. ಅವರು ಇಲ್ಲಿನ ರೋಟರಿ ಭವನದಲ್ಲಿ ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ| ಎಚ್.ವಿ. ನರಸಿಂಹಮೂರ್ತಿಯವರ ’ಸಂಸ್ಕೃತ ಸೂಕ್ತಿಗಳು’ ಎಂಬ ಪುಸ್ತಕವನ್ನು ಅನಾವರಣಗೊಳಿಸಿ ಮಾತನಾಡಿದರು. ಕುಂದಾಪುರ ರೋಟರಿ ಅಧ್ಯಕ್ಷ ರೊ| ಉದಯಕುಮಾರ ಶೆಟ್ಟಿ ಅಧ್ಯಕ್ಷತೆ…

Read More

ದೋಹಾ ಕತಾರ್‌ನಲ್ಲಿ ‘ವಿಜನ್ ಇವೆಂಟ್ಸ್’ ಸಂಸ್ಥೆ ಲೋಕಾರ್ಪಣೆ ಕುಂದಾಪ್ರ ಡಾಟ್ ಕಾಂ ಸುದ್ದಿ. ದೋಹಾ: ನೂತನವಾಗಿ ಆರಂಭಗೊಂಡ ವಿಜನ್ ಇವೆಂಟ್ಸ್ ಸಂಸ್ಥೆಯು ಇಲ್ಲಿನ ಎಂಇಎಸ್ ಸ್ಕೂಲ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ’ಮೂರು ಮುತ್ತುಗಳು’ ನಾಟಕ ಪ್ರದರ್ಶನ ನೆರೆದಿದ್ದ ನೂರಾರು ಪ್ರೇಕ್ಷಕರ ಮನಸೂರೆಗೊಳಿಸಿತು. ಕತಾರ್‌ನಲ್ಲಿ ನೆಲೆಸಿರುವ ರಾಮಚಂದ್ರ ಶೆಟ್ಟಿ, ದೀಪಕ್ ಶೆಟ್ಟಿ ಹಾಗೂ ಸಮಾನ ಮನಸ್ಕ ಕನ್ನಡಿಗರು ಒಟ್ಟು ಸೇರಿ ಕಲೆ, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಆಯೋಜನೆಗಾಗಿ ಹುಟ್ಟುಹಾಕಿರುವ ಸಂಸ್ಥೆ ವಿಜನ್ ಇವೆಂಟ್ಸ್‌ನ ಉದ್ಘಾಟನಾ ಸಮಾರಂಭ ಹಾಗೂ ಬಳಿಕ ನಾಟಕ ಪ್ರದರ್ಶನ ಯಶಸ್ವಿಯಾಗಿ ಸಮಾಪನಗೊಂಡವು. ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡಿಯನ್ ಕಲ್ಚರಲ್ ಸೆಂಟರ್ ಅಧ್ಯಕ್ಷರಾದ ಮಿಲಾನ್ ಅರುಣ್ ಮುಖ್ಯ ಅತಿಥಿಗಳಾಗಿದ್ದರು. ದುಬೈ ಫಾರ್ಚೂನ್ ಗ್ರೂಫ್ ಹೋಟೆಲ್ಸ್‌ನ ಮಾಲಕ ಪ್ರವೀಣಕುಮಾರ್ ಶೆಟ್ಟಿ, ಅಲ್-ಝಮಾನ್ ಎಕ್ಸ್‌ಚೆಂಚ್‌ನ ಬಿಜಿನೆಸ್ ಡೆವೆಲಪ್‌ಮೆಂಟ್ ಮ್ಯಾನೆಜರ್ ಫಯಾಝ್ ಸಿ.ಕೆ, ಅಡ್ವಾಸ್ ಟೆಕ್ನಿಕಲ್ ಸರ್ವಿಸ್ ಎಂ.ಡಿ. ರವಿ ಶೆಟ್ಟಿ, ಅಲ್-ಮುಫ್ತಾಹ್ ಜನರಲ್ ಮ್ಯಾನೆಜರ್ ವೀರೇಶ್ ಮಾನಂಗಿ ಮೊದಲಾದವರು ಅತಿಥಿಗಳಾಗಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ.…

Read More