Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ನೃತ್ಯ ವಸಂತ ನಾಟ್ಯಾಲಯದ ನಿರ್ದೇಶಕಿ, ವಿದುಷಿ ಪ್ರವಿತಾ ಅಶೋಕ್ ಅವರಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ನೃತ್ಯ ವಸಂತ ನಾಟ್ಯಾಲಯವನ್ನು ಹುಟ್ಟುಹಾಕಿ ಕಳೆದ 14 ವರ್ಷಗಳಿಂದ ನೂರಾರು ನೃತ್ಯಾಸಕ್ತರಿಗೆ ತರಬೇತಿ ನೀಡುತ್ತಿರುವ ಅವರು ಶಾಸ್ತ್ರೀಯ ನೃತ್ಯ ಮಾರ್ಗದರ್ಶಕಿಯಾಗಿ ಲಘು ಶಾಸ್ತ್ರೀಯ ನೃತ್ಯ ಸಂಯೋಜಿಸಿ ಅನೇಕರಿಗೆ ತರಬೇತಿ ನೀಡಿದ್ದಾರೆ. ಅವರಿಗೆ ಈವರೆಗೆ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದೆ. p

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನ ಭಾಗವತ ಹೆರಂಜಾಲು ಗೋಪಾಲ ಗಾಣಿಗರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ೧೯೮೪ರಲ್ಲಿ ಯಕ್ಷಗಾನ ವೃತ್ತಿಪರ ಮೇಳದಲ್ಲಿ ಕಲಾವಿದರಾಗಿ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡ ಹೆರಂಜಾಲು ಗೋಪಾಲ ಗಾಣಿಗರು ಖ್ಯಾತ ಯಕ್ಷಗಾನ ಕಲಾವಿದ ದಿ. ಹೆರಂಜಾಲು ವೆಂಕಟರಮಣ ಗಾಣಿಗ ಪುತ್ರ. ನಾಲ್ಕನೇ ತರಗತಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಕಲಾ ಸೇವೆಯಲ್ಲಿ ತೊಡಗಿಸಿಕೊಂಡವರು. ಹೆರಂಜಾಲಿನಲ್ಲಿ ಯಕ್ಷಗಾನ ಪ್ರತಿಷ್ಠಾನವನ್ನು ಸ್ಥಾಪಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ತರಭೇತಿ ನೀಡುತ್ತಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯಕ್ಷಗಾನ ಕಲೆಯ ಸಿಡಿಲ ಮರಿ ಎಂದೇ ಖ್ಯಾತರಾಗಿರುವ ತೀರ್ಥಹಳ್ಳಿ ಗೋಪಾಲ ಆಚಾರ್ಯ ಅವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿಯೇ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಗೋಪಾಲ ಆಚಾರ್ಯ ಅವರು ಕರಾವಳಿಯ ವಿವಿಧ ಮೇಳಗಳಲ್ಲಿ ವೇಷಕಟ್ಟಿ ಕುಣಿದಿದ್ದಾರೆ. ತಮ್ಮ ೬೩ನೇ ವಯಸ್ಸಿನಲ್ಲಿಯೂ ಅತಿಥಿ ಕಲಾವಿದರಾಗಿ ಕಲಾ ಸೇವೆಯಲ್ಲಿ ಸಕ್ರೀಯರಾಗಿದ್ದಾರೆ. ನಾಗೂರಿನಲ್ಲಿ ಪ್ರತಿವರ್ಷ ಒಂದು ವಾರಗಳ ಕಾಲ ಯಕ್ಷಗಾನ ತಾಳಮದ್ದಳೆಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ. ಮಲೆನಾಡಿನವರಾದ ಅವರು ಪ್ರಸ್ತುತ ನಾಯ್ಕನಕಟ್ಟೆಯಲ್ಲಿ ನೆಲೆಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಸಂಗಕರ್ತ, ಯಕ್ಷಗಾನ ಭಾಗವತ ಎಂ. ಎಚ್. ಪ್ರಸಾದ್ ಮೊಗೆಬೆಟ್ಟು ಅವರಿಗೆ ಈ ಭಾರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಮೊಗೆಬೆಟ್ಟು ಅವರು ಕಳೆದ 25 ವರ್ಷಗಳಿಂದ ಯಕ್ಷಗಾನ ಕಲಾಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯ, ಹೊರರಾಜ್ಯ, ಅಲ್ಲದೇ ವಿದೇಶದಲ್ಲಿಯೂ ಸಹ ಯಕ್ಷಗಾನ ಕಾರ್ಯಕ್ರಮಗನ್ನು ನೀಡಿರುವ ಹೆಗ್ಗಳಿಕೆ ಅವರದ್ದು. ಈವರೆಗೆ 23 ಯಕ್ಷಗಾನ ಪ್ರಸಂಗವನ್ನು ರಚಿಸಿ ಖ್ಯಾತಿಗಳಿಸಿದ್ದಾರೆ. 2003ರಲ್ಲಿ ಸಾಂಪ್ರದಾಯಿಕ ಭಾಗವತಿಕೆ ಕಲಿಕೆಗೆ ಕೇಂದ್ರ ಸರಕಾರದಿಂದ ಸಂಸ್ಕೃತಿ ಅಕಾಡೆಮಿಯ ಸ್ಕಾಲರ್‌ಶಿಪ್ ಪಡೆದಿದ್ದಾರೆ. 50ಕ್ಕೂ ಹೆಚ್ಚು ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನೀಡಿ ಎ ಗ್ರೇಡ್ ಮಾನ್ಯತೆಯನ್ನು ಪಡೆದಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪತ್ರಿಕೋದ್ಯಮ, ಸಂಘಟನೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡ ಕ್ರೀಯಾಶೀಲ ವ್ಯಕ್ತಿತ್ವದ ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅವರಿಗೆ ಈ ಭಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಮುಂಬೈ ಯುನಿವರ್ನಿಟಿಯಲ್ಲಿ ಕನ್ನಡ ಎಂ.ಎನಲ್ಲಿ ಚಿನ್ನದ ಪದಕ ಪಡೆದುಕೊಂಡ ಅವರು ಕುಂದಾಪುರದಲ್ಲಿ ತಮ್ಮ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದರು. ಕುಂದಾಪುರ, ಮುಂಬೈ, ಬೆಂಗಳೂರು, ಮೂಡುಬಿದಿರೆಯಲ್ಲಿ ಕುಂದಪ್ರಭ, ಕರ್ನಾಟಕ ಮಲ್ಲ, ಕನ್ನಡಪ್ರಭ ಸೇರಿದಂತೆ ವಿವಿಧೆಡೆ ದಿನಪತ್ರಿಕೆ, ವೆಬ್ ಪೋರ್ಟೆಲ್‌ಗಳಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಅಜೆಕಾರನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಸಂಘಟನಾತ್ಮವಾಗಿಯೂ ತೊಡಗಿಸಿಕೊಂಡಿದ್ದ ಅವರು ಮುಂಬಯಿ ಪೊವಾ ಕನ್ನಡ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿ ಹೊರನಾಡಿನಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ಸಕ್ರೀಯರಾಗಿದ್ದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಆದಿ ಗ್ರಾಮೋತ್ಸವ, ಮಿನಿ ಚಲನಚಿತ್ರೋತ್ಸವ, ಕವಿಗೋಷ್ಠಿ ಮುಂತಾದ ಸಮ್ಮೇಳನ, ಕಾರ್ಯಕ್ರಮಗಳ ಮೂಲಕ ನೂರಾರು ಸಾಧಕರು ಹಾಗೂ ಎಲೆಮರೆಯ ಕಾಯಿಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಹೆಗ್ಗಳಿಕೆ ಅವರದ್ದು. ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳೆಲ್ಲಾ ಸೇರಿ ಡಿಸೆಂಬರ್ 9 ರಂದು ಪೂನಾದ ವಿಮಾನನಗರದ “ನೋವೋಟೆಲ್ ಹೋಟೆಲ್”ನಲ್ಲಿ ೨ನೇ ಅಂತರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇನ್ಫೋಸಿಸ್ ಫೌಂಡೇಶನ್ ಚೇರ್‌ಮನ್ ಡಾ. ಸುಧಾಮೂರ್ತಿ, ಎಐಸಿಟಿಇ ಯ ಚೇರ್‌ಮನ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿಯವರು ಆಗಮಿಸಲಿದ್ದಾರೆ. ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ ಈ ಹಿಂದೆ ಬಿ. ವಿ. ಭೂಮರೆಡ್ಡಿ ತಾಂತ್ರಿಕ ವಿಶ್ವವಿದ್ಯಾಲಯ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿ ಕಲಿತ ಹಲವಾರು ಹಳೆ ವಿದ್ಯಾರ್ಥಿಗಳು ಇಂದು ವಿಶ್ವದ ಪ್ರಸಿದ್ಧ ಸಂಸ್ಥೆಗಳಲ್ಲಿ, ದೇಶಗಳಲ್ಲಿ ಹೆಸರು ಗಳಿಸಿದ್ದಾರೆ. ಆ ಪೈಕಿ ಇನ್ಫೋಸಿಸ್ ಫೌಂಡೇಶನ್‌ನ ಡಾ. ಸುಧಾಮೂರ್ತಿ, ವಿವೇಕ್ ಕುಲಕರ್ಣಿ, ಎಸ್.ಆರ್. ಹಿರೇಮಠ ಮೊದಲಾದವರು ಪ್ರಮುಖರು. ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇತ್ತಿಚಿನ ಬೆಳವಣಿಗೆಯೊಂದರಲ್ಲಿ ಬೈಂದೂರು ಪಿಎಸ್‌ಐ ವರ್ಗಾವಣೆಯನ್ನು ರದ್ದುಗೊಂಡಿದ್ದು, ಅವರು ಮರಳಿ ಬೈಂದೂರು ಠಾಣೆಯಲ್ಲಿಯೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರು ಇತ್ತಿಚಿಗೆ ಬೈಂದೂರು ಠಾಣಾಧಿಕಾರಿ ಸೇರಿದಂತೆ ನಾಲ್ವರು ಪಿಎಸ್‌ಐಗಳ ವರ್ಗಾವಣೆ ಆದೇಶ ನೀಡಿದ್ದರು. ಆದರೆ ಈ ಪೈಕಿ ಮೂವರು ಅಧಿಕಾರಿಗಳ ವರ್ಗಾವಣೆ ಆದೇಶ ರದ್ದುಗೊಳಿಸಿರುವುದರಿಂದ ಮರಳಿ ಅವರು ಬೈಂದೂರಿನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೈಂದೂರು ಠಾಣೆಗೆ ಪ್ರಕರಣವೊಂದರ ಇತ್ಯರ್ತಕ್ಕೆಂದು ಬಂದಿದ್ದ ಜಿ.ಪಂ ಸದಸ್ಯರೊಬ್ಬರನ್ನು ನಿಂದಿಸಿ, ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಬೈಂದೂರು ಬಿಜೆಪಿ ಪ್ರತಿಭಟನೆ ನಡೆಸಿ ವರ್ಗಾವಣೆಗಾಗಿ ಪಟ್ಟು ಹಿಡಿದಿತ್ತು. ಇದರ ಬೆನ್ನಲ್ಲೆ ವರ್ಗಾವಣೆಯ ಸುದ್ದಿಯೂ ಹೊರಬಿದ್ದಿತ್ತು. ಆದರೆ ಇದೊಂದು ವೃತ್ತಿಸಹಜ ವರ್ಗಾವಣೆ ಎಂದು ಹೇಳಲಾಗಿತ್ತು. ಪಿಎಸ್‌ಐ ವರ್ಗಾವಣೆಯನ್ನು ಕೆಲವು ಸಾರ್ವಜನಿಕರೂ ವಿರೋಧಿಸಿ, ತಿಮ್ಮೆಶ್ ಅವರ ಪರವಾಗಿ ನಿಂತಿದ್ದರು. ಈ ಪ್ರಕರಣ ರಾಜಕೀಯ ಪ್ರತಿಷ್ಠೆಯಾಗಿ ಮಾರ್ಪಟ್ಟಿತ್ತು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮಲ್ಲೇಶ್ವರಂನ ಗಾಂಧಿ ಸಾಹಿತ್ಯ ಸಂಘದ ಸಭಾಭವನದಲ್ಲಿ ಹೆಗ್ಗದ್ದೆ ಪ್ರಕಾಶನದ ೫ನೇ ಕೃತಿ, ಕವಿ ಶಂಕರ್ ಶೆಟ್ಟಿ ಕೊತ್ತಾಡಿಯವರು ಬರೆದ ’ಪದಕೊಂಡಿ’ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಆಧ್ಯಾತ್ಮ ಚಿಂತಕರು ಶ್ರೀ ವಿಶ್ವನಾಥ ಗುರೂಜಿ ವಹಿಸಿದ್ದರು. ಸಿನಿ ಸಾಹಿತಿ ಡಾ| ವಿ. ನಾಗೇಂದ್ರ ಪ್ರಸಾದ್ ಕೃತಿ ಬಿಡುಗಡೆಗೊಳಿಸಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕವಿ ಇರುತ್ತಾನೆ, ಹಲವರು ಪುಸ್ತಕದಲ್ಲಿ ಬರೆದರೆ, ಇನ್ನೂ ಹಲವರು ಮುಖ ಪುಸ್ತಕದಲ್ಲಿ ಬರೆಯುತ್ತಾರೆ. ಮೊದಲು ಪುಟದಲ್ಲಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ, ’ನಿನ್ನ ಅಂಗಿಯ ಬೆವರಿನಲ್ಲಿ ನಮ್ಮ ಅನ್ನ ಅಡಗಿದೆ’ ಎಂಬ ಉತ್ತಮ ಸಂದೇಶ ಭರಿತ ಸಂಕಲನದಲ್ಲಿ ಪ್ರೀತಿ, ನೋವು, ಹಾರೈಕೆ ಎಲ್ಲವೂ ಇದೆ, ಈ ರೀತಿಯ ಚುಟುಕುಗಳು ಇನ್ನೂ ಬರಲಿ. ಶಂಕರ್ ಶೆಟ್ಟಿಯವರ ಈ ಕೊಡುಗೆ ಇನ್ನಷ್ಟು ಹೆಚ್ಚಲಿ ಎಂದು ಹಾರೈಸಿದರು. ಸಭೆಯ ಮಧ್ಯೆ ಸಹಕಾರ ನೀಡಿದವರಿಗೆ ಗೌರವಾರ್ಪಣೆ ಮಾಡಿದ ಸಾಹಿತಿ, ಪತ್ರಕರ್ತ ಜೋಗಿ ಮಾತನಾಡಿ, ಕವಿಯು ತನ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಪತಂಜಲಿ ಚಿಕಿತ್ಸಾಲಯಕ್ಕೆ ಆರಂಭಿಸಲು ನೊಂದಾವಣಿಗಾಗಿ ಅರ್ಜಿ ಕುಂದಾಪುರದ ಮಹಿಳೆಯೊಬ್ಬರು 7.75ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. ಕೋಟೇಶ್ವರದ ಪ್ರಶಾಂತಿ ನಿಕೇತನದ ನಿವಾಸಿ ಅನುರಾಧ ಹೊಳ್ಳ (39) ವಂಚನೆಗೊಳಗಾದ ಮಹಿಳೆ. ಅನುರಾಧ ಅವರು ಪತಂಜಲಿ ಚಿಕಿತ್ಸಾಲಯ ಉದ್ಯಮ ಆರಂಭಿಸಲು ಆಗಸ್ಟ್ 9 ರಂದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಇದಾದ ಎರಡು ದಿನಗಳ ನಂತರ ಅವರಿಗೊಂದು ಕರೆ ಬಂದಿದ್ದು, ಆ ಕರೆಯಲ್ಲಿ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಮುಂತಾದ ಪ್ರಮುಖ ದಾಖಲೆಗಳನ್ನು ಹಾಗೂ ಭಾವಚಿತ್ರದ ಪ್ರತಿಯನ್ನು ವಾಟ್ಸಪ್ ಮುಖಾಂತರ ಕಳುಹಿಸಲು ತಿಳಿಸಲಾಯಿತು. ನೊಂದಣಿಗಾಗಿ 50,000 ರೂ. ಹಣವನ್ನು ಪಾವತಿಸುವಂತೆ ತಿಳಿಸಲಾಯಿತು. ಅಗಸ್ಟ್ 23ರಂದು ಅನುರಾಧ ತಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಪಾವತಿಸಿದ್ದಾರೆ. ಸೆಪ್ಟೆಂಬರ್ 1 ರಂದು ಪುನಃ ಎರಡು ಲಕ್ಷದ ಮೂವತ್ತು ಸಾವಿರ ಹಣವನ್ನು ಕಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಇಷ್ಟೇ ಅಲ್ಲದೇ ಆಯುರ್ವೇದ ಉತ್ಪನ್ನಗಳನ್ನು ಖರೀದಿಸಲು 2.5 ಲಕ್ಷ ಹಣವನ್ನು ವಂಚಕರು ಕೇಳಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ರಾಜ್ಯ ಸರಕಾರದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರಸ್ತಾಪಿತ ಬಂದೂರು ಹೊಸ ಬಸ್ ನಿಲ್ದಾಣದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ನಿಲ್ದಾಣದ ರೂಪುರೇಷಗಳನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ರೈತರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲವು ಮಾರ್ಪಾಡುಗಳ ಮೂಲಕ ಸಾರ್ವಜನಿಕರಿಗೆ ತಕ್ಕಂತೆ ಬಸ್ ನಿಲ್ದಾಣ ರೂಪಿಸಲಾಗುವುದು. ತಾಲೂಕು ಕೇಂದ್ರವಾದ ಕಾರಣ ಹಾಗೂ ಗ್ರಾಮೀಣ ಭಾಗಗಳು ಹೆಚ್ಚಿರುವುದರಿಂದ ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ನಿರ್ಮಿಸುವ ಕುರಿತು ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದ ಅವರು, ಸಂಸ್ಥೆಯಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ ಸೋರುವಿಕೆಯನ್ನು ತಡೆಗಟ್ಟಿ ಆದಾಯ ಹೆಚ್ಚಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದರು. ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್, ವಿಭಾಗೀಯ ಸಂಚಲನ ಅಧಿಕಾರಿ ಜಯಶಾಂತ ಕುಮಾರ್, ವಿಭಾಗೀಯ ತಾಂತ್ರಿಕ ಶಿಲ್ಪಿ ವಿಲ್ಸ್‌ನ್ ಲೋಬೋ, ಇಂಜಿನೀಯರ್ ರಾಜಶೇಖರ್ ಗುಡಿಗಾರ್, ಸಿವಿಲ್ ಇಂಜಿನೀಯರ್ ಜಗದೀಶ್‌ಚಂದ್ರ, ಮುಖಂಡರಾದ…

Read More