ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಅಮಾಸೆಬೈಲು: ಅಂಧತ್ವ ಅನ್ನೋದು ಕಣ್ಣಿಗೆ ಹೊರತು ಒಳಗಣ್ಣಿಗಲ್ಲ. ಬದುಕುವ ಛಲವಿದ್ದರೆ, ಎಂಥಹ ಸಂದರ್ಭವನ್ನೂ ಎದುರಿಸುವ ತಾಕತ್ತಿದ್ದರೇ ತನ್ನಲ್ಲಿನ ವಿಕಲತೆ ಅಡ್ಡಿಯಾಗದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ತೊಂಬಟ್ಟಿನ ಅಂಧ ದಂಪತಿಗಳು. ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ಸ್ಥಳೀಯ ಗ್ರಾಮ ಪಂಚಾಯತ್‌ನೊಂದಿಗೆ ಸೆಣಸುತ್ತಾ, ತಮ್ಮ ಹಕ್ಕಿಗಾಗಿ ಹೋರಾಡುತ್ತಲೇ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ. ಅಮಾಸೆಬೈಲು ಗ್ರಾಮ ತೊಂಬಟ್ಟು ಭಟ್ರಪಾಲು ನಿವಾಸಿ ನಾರಾಯಣ ಪೂಜಾರಿ ರಾಧಾ ಪೂಜಾರಿ ನಾಲ್ವರ ಮಕ್ಕಳಲ್ಲಿ ಕೊನೆಯವರಾದ ಗಣಪತಿ ಪೂಜಾರಿ ಅವರು ಹುಟ್ಟೂ ಅಂಧರು. ಅವರ ಪತ್ನಿ ಸುಶೀಲಾ ಪೂಜಾರಿ ಕೂಡಾ ಒಂದು ಕಣ್ಣು ದೃಷ್ಠಿ ಕೊಂಡಿದ್ದಾರೆ. ಆದರೇನಂತೆ ಬದುಕಿನಲ್ಲಿ ಒಂದಿಷ್ಟೂ ಧೈರ್ಯಗುಂದದೇ ಸಾಮಾನ್ಯರೂ ನಾಚಿಸುವಂತೆ ಬದುಕಿ ತೋರಿಸುತ್ತಿದ್ದಾರೆ ದಂಪತಿಗಳು. ಆದರೆ ಈ ದಂಪತಿಗಳ ಛಲದ ಬದುಕಿಗೆ ಅಮಾಸೆಬೈಲು ಗ್ರಾ.ಪಂ ಎಳ್ಳುನೀರು ಬಿಡುತ್ತಿದೆ. ವೈಯಕ್ತಿಕ ಮರ್ಚಿಗೆ ಅಂಧರೊಂದಿಗೆ ಸೆಣಸಾಡುತ್ತಿರುವ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಣ್ಣತನ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ೫೦೫ ಕಲಶಗಳ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಭಾನುವಾರ ಗಂಗೊಳ್ಳಿಯ ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್, ಹಿಂಜಾವೇ ಉಡುಪಿ ಜಿಲ್ಲಾ ಸಹಸಂಚಾಲಕ ಟಿ.ವಾಸುದೇವ ದೇವಾಡಿಗ, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಮಡಿವಾಳ, ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಸೇವಾದಾರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಛಿದ್ರವಾಗುತ್ತಿರುವ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಯು ಕಾರ್ಯ ದೊಡ್ಡದು. ಒಕ್ಕೂಟ ವ್ಯವಸ್ಥೆಯಲ್ಲಿ ಸಾಮರಸ್ಯದ ಬದುಕು ಕಂಡುಕೊಳ್ಳಬೇಕಿದ್ದರೆ, ಪರಸ್ಪರರ ಚಿಂತನೆಯನ್ನು ಗೌರವಿಸಿ ಎಲ್ಲರನ್ನೂ ಸಮಾನವಾಗಿ ಕಾಣುವಂತವರಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ಧರಾಮಯ್ಯ ಹೇಳಿದರು. ಅವರು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಗುಲ್ವಾಡಿ ತೋಟದಮನೆ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 2016ನೇ ಸಾಲಿನ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಸ್ವಾರಕ ಗೌರವ ಪುರಸ್ಕಾರವನ್ನು ಪತ್ರಕರ್ತ ಕೆ.ಪಿ ಮಂಜುನಾಥ ಸಾಗರ್ ಅವರಿಗೆ ಪ್ರದಾನಿಸಿ ಮಾತನಾಡಿದರು. ಸಂತೋಷ್‌ಕುಮಾರ್ ಗುಲ್ವಾಡಿ ಪತ್ರಿಕೋದ್ಯಮ, ಶಿಕ್ಷಣ ಹಾಗೂ ಜಾನಪದ ಕ್ಷೇತ್ರದಲ್ಲಿ ಸಲ್ಲಿಸಿದೆ ಸೇವೆ ಅಪಾರವಾದುದು. ಅವರ ಗರಡಿಯಲ್ಲಿ ಬೆಳೆದು ಎತ್ತರಕ್ಕೇರಿದವರ ಸಂಖ್ಯೆ ದೊಡ್ಡದಿದೆ. ಗುಲ್ವಾಡಿ ಅವರ ಹುಟ್ಟೂರಿನಲ್ಲಿ ಅವರನ್ನು ಸ್ಮರಿಸುವ ಕಾರ್ಯವಾಗುತ್ತಿರುವುದು ಶ್ಲಾಘನೀಯ ಎಂದ ಅವರು ಯಾಕೂಬ್ ಖಾದರ್ ಗುಲ್ವಾಡಿ ಅವರು ಸಂತೋಷ್‌ಕುಮಾರ್ ಗುಲ್ವಾಡಿ ಅವರನ್ನು ಏಕಲವ್ಯನಂತೆ ಅನುಸರಿಸಿದವರು. ಗುಜರಿಯಂಗಡಿಯಲ್ಲಿದ್ದುಕೊಂಡು ಓದು, ಬರವಣಿಗೆಯ ಬಗೆಗೆ…
ತಾಲೂಕು ರಚನೆಯಲ್ಲಿ ಅನುಮಾನ ಬೇಡ. ಅಭಿವೃದ್ಧಿಗೆ ಮೊದಲ ಆದ್ಯತೆ: ಶಾಸಕ ಕೆ. ಗೋಪಾಲ ಪೂಜಾರಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಜನರ ಬಹುಕಾಲದ ಬೇಡಿಕೆಯಾಗಿದ್ದ ತಾಲೂಕು ರಚನೆಯ ಕನಸು ಈಡೇರಿದ್ದು, ತಾಲೂಕು ಕೇಂದ್ರವಾಗಲು ಅಗತ್ಯವಿರುವ ಕಛೇರಿಗಳನ್ನು ಶೀಘ್ರ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಲಾಗುವುದು. ಬೈಂದೂರು ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರವಾಗಿ ಶ್ರಮಿಸಿದ್ದು ಮಾದರಿ ತಾಲೂಕನ್ನಾಗಿ ರೂಪಿಸುವಲ್ಲಿ ಎಲ್ಲರೂ ಶ್ರಮವಹಿಸಬೇಕಿದೆ ಎಂದು ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ತಾಲೂಕು ರಚನೆ, ಅನುಷ್ಠಾನ ಮತ್ತು ಅಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕರು ಆಯೋಜಿಸಿದ್ದ ನೂತನ ತಾಲೂಕು ರಚನೆಯ ಸಂಭ್ರಮಾಚರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬೈಂದೂರಿನ ಹಲವು ನಾಯಕರ ನಿರಂತರ ಹೋರಾಟ ತಾಲೂಕಾಗುವಲ್ಲಿ ಪ್ರಮುಖ ಪಾತ್ರವಹಿಸಿದೆ. ಘೋಷಿತ ತಾಲೂಕು ಅನುಷ್ಠಾನದ ಬಗ್ಗೆ ಯಾರಿಗೂ ಸಂದೇಹ ಬೇಡ. ಈಗಾಗಲೇ ಬೈಂದೂರಿನಲ್ಲಿ ತಾಲೂಕು ಕೇಂದ್ರಕ್ಕೆ ಅಗತ್ಯವಾದ ಬಹುತೇಕ ಕಛೇರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಜೆ.ಸಿ.ಐ ಕುಂದಾಪುರ ಚೆರಿಷ್ಮಾ ಮತ್ತು ಜೆ.ಸಿ.ಐ ಕುಂದಾಪುರದ ಆಶ್ರಯದಲ್ಲಿ ರೋಟರಿ, ಲಯನ್ಸ್ ಹಾಗೂ ಜೇಸಿ ಸದಸ್ಯರಿಗಾಗಿ ನೆಹರೂ ಪೇವಿಲಿಯನ್‌ನಲ್ಲಿ ನಡೆದ ಶೆಟ್ಲ ಬ್ಯಾಡ್ಮಿಂಟನ್ ಪಂದ್ಯಾಕೂಟದ ೪೦ ವಯೋಮಾನ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ರೋಟರಿ ಕ್ಲಬ್ ಕುಂದಾಪುರದ ಸತೀಶ್ ಕೋಟ್ಯಾನ್ ಮತ್ತು ರಾಜೇಶ್ ನಾಯರ್ ಪ್ರಥಮ ಸ್ಥಾನ ಪಡೆದರು. ರೋಟರಿ ಕ್ಲಬ್ ಕುಂದಾಪುರ ಸೌತ್‌ನ ಸುಪ್ರೀತ್ ಚಾತ್ರಾ ಮತ್ತು ಪ್ರಸಾದ್ ದ್ವೀತಿಯ ಸ್ಥಾನ, 40 ವಯೋಮಾನದೊಳಗಿನ ಪುರುಷರ ವಿಭಾಗದಲ್ಲಿ ರೋಟರಿ ಕ್ಲಬ್ ಕುಂದಾಪುರ ಸೌತ್‌ನ ವಿನಾಯಕ್ ಪೈ ಮತ್ತು ಸಂತೋಷ ಕಾಮತ್ ಪ್ರಥಮ, ಜೆಸಿಐ ಕುಂದಾಪುರದ ಚಂದನ್ ಮತ್ತು ಶಂಕರ್ ನಾರಾಯಣ ದ್ವಿತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಜೆಸಿಐ ಕುಂದಾಪುರ ಚರಿಷ್ಮಾದ ಗೀತಾಂಜಲಿ ಆರ್. ನಾಯ್ಕ್ ಮತ್ತು ರೋಶನಿ ಪ್ರಥಮ, ಜ್ಯೂನಿಯರ್ ಜೇಸಿ ಕುಂದಾಪುರದ ಸ್ಪಂದನಾ ಮತ್ತು ನಕ್ಷಾ ದ್ವಿತೀಯ ಸ್ಥಾನ ಪಡೆದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಹಂಗಳೂರಿನ ಸೂಪರ್ ಗ್ರೇಡ್ ಇಲೆಕ್ಟ್ರೀಕಲ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’, ಮಂಗಳೂರು ವಿಶ್ವವಿದ್ಯಾನಿಲಯ ಆಯೋಜಿಸಿದ 2015-16ನೇ ಸಾಲಿನ ಅಂತರ್‌ಕಾಲೇಜು ವಾರ್ಷಿಕ ಸಂಚಿಕೆ ಸ್ವರ್ಧೆಯ ವರ್ಗ-1ರಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಗ್ರಾಮೀಣ ಸೊಗಡು, ವಿಶಿಷ್ಟ ಸಮುದಾಯಗಳ ಪರಿಚಯ, ಬಹುಭಾಷಾ ವೈವಿಧ್ಯ, ಕಥೆ, ಕವನ ಸೇರಿದಂತೆ ಹತ್ತಾರು ವಿಭಾಗಗಳನ್ನೊಳಗೊಂಡ ಸಂಚಿಕೆ ಶಿಖರ ಅಂದದ ಮುಖಪುಟದೊಂದಿಗೆ ಮೂಡಿಬಂದಿತ್ತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೋಮ ವಾರ್ಷಿಕ ಸಂಚಿಕೆಯ ಗೌರವ ಸಂಪಾದಕರಾಗಿದ್ದರೇ, ಕನ್ನಡ ವಿಭಾಗದ ಮುಖ್ಯಸ್ಥ ಚೇತನ್ ಶೆಟ್ಟಿ ಕೋವಾಡಿ ನಿರ್ವಾಹಕ ಸಂಪಾದಕರಾಗಿದ್ದಾರೆ. ಕಳೆದ ಸಾಲಿನಲ್ಲಿಯೂ ಶಿಖರ ಪ್ರಥಮ ಸ್ಥಾನ ಪಡೆದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾರ್ಷಿಕ ಸಂಚಿಕೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲು ಕಾರಣೀಕರ್ತರಾದ ಸಂಪಾದಕೀಯ ಮಂಡಳಿ ಹಾಗೂ ವಿದ್ಯಾರ್ಥಿಗಳನ್ನು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ವಲಯ ೧೫ರ ಜೇಸಿಐ ಕುಂದಾಪುರ ಘಟಕ ಹಾಗೂ ಜೇಸಿಐ ಕುಂದಾಪುರ ಚರಿಷ್ಮಾ ಘಟಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಕುಂದಾಪುರ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಬಲೀಕರಣ ಮಾಹಿತಿ ಕಾರ್ಯಗಾರ ಆಯೋಜಿಸಲಾಯಿತು. ರಾಷ್ಟ್ರೀಯ ನಿರ್ದೇಶಕರು ಜೆಸಿರೇಟ್ ಹಾಗೂ ಲೇಡಿಲೋಮ್ ಜೇಸಿ ವಿಭಾಗ ಜೇಸಿ ರೂಪಶ್ರೀ ರತ್ನಾಕರ ಇಂದ್ರಾಳಿ ಮಹಿಳಾ ಸಬಲೀಕರಣ ಮಾಹಿತಿ ಕಾರ್ಯಗಾರ ಉದ್ಘಾಟಿಸಿದರು. ಜೇಸಿಐ ಕುಂದಾಪುರ ಚರೀಷ್ಮಾ ಅಧ್ಯಕ್ಷೆ ಗೀತಾಂಜಲಿ ಆರ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಲಯ ಅದಿಕಾರಿ ಜೆ.ಎಫ್.ಪಿ ವಿಷ್ಣು ಕೆ. ಬಿ, ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೆ.ಎಫ್.ಪಿ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು. ಸಭೆಯಲ್ಲಿ ಜೇಸಿರೇಟ್ ಅಧ್ಯಕ್ಷೆ ಜೇಸಿ ನಾಗರತ್ನ ಹೇರ್ಳೆ ಜೇಸಿರೇಟ್ ಸಂಯೋಜಕಿ ನಾಗರತ್ನ ಚಂದ್ರಶೇಖರ್, ಜೇಸಿರೇಟ್ ನ ನಿಕಟ ಪೂರ್ವಧ್ಯಕ್ಷೆ ಮಾಲತಿ ವಿಷ್ಣು ಜೇಸಿರೇಟ್ ಪೂರ್ವಧ್ಯಕ್ಷೆ ಗುಣರತ್ನ ಮಾಲಿನಿ ಸತೀಶ್ ಜೇಸಿಐ ಜ್ಯೂನಿಯರ್ ಜೇಸಿ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ ಗುಲ್ವಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯದಲ್ಲಿ ಏಕರೂಪ ಮರಳು ನೀತಿ ಜಾರಿಗೆ ತರುವುದರಿಂದ ಮಾತ್ರ ಮರಳು ಸಮಸ್ಯೆ ನಿವಾರಣೆ ಸಾಧ್ಯವಿದೆ. ಸಿಆರ್‌ಝಡ್, ನಾನ್ ಸಿಆರ್‌ಝಡ್ ಬೇರೆ ಬೇರೆ ನೀತಿಯಿಂದ ರಾಜ್ಯದಲ್ಲಿ ಮರಳು ಸಮಸ್ಯೆ ಉದ್ಭವಿಸಲು ಮೂಲ ಕಾರಣ. ತಕ್ಷಣ ಸರಕಾರ ಏಕರೂಪ ಮರಳು ನೀತಿ ಜಾರಿಗೆ ತರುವ ಮೂಲಕ ಮರಳು ಸಮಸ್ಯೆಗೆ ಮುಕ್ತಿ ಕೊಡಲು ಮುಂದಾಗಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಆಗ್ರಹಿಸಿದ್ದಾರೆ. ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಈಗ ಸಮಿತಿ ರಚಿಸಿ ಮರಳು ನೀತಿಗೆ ಮುಂದಾಗುತ್ತಿದೆ. ಈಗ ಸಾಧ್ಯವಾಗುವುದಾದರೆ ನಾಲ್ಕುವರ್ಷದ ಹಿಂದೆಯೇ ಏಕರೂಪ ಮರಳು ನೀತಿ ಜಾರಿಗೆ ತರಲು ಏಕೆ ಸಾಧ್ಯವಾಗಿರಲಿಲ್ಲ ಎಂದ ಅವರು, ಏಕರೂಪ ಮರಳುನೀತಿಯನ್ನು ಜಾರಿಗೆ ತಂದು ಸಾಂಪ್ರದಾಯಿಕ ಮರಳುಗಾರಿಕೆಗೆ ಅವಕಾಶ ಮಾಡಿಕೊಡಬೇಕು. ಮರಳು ದಿಬ್ಬ ತೆರವಿನಿಂದ ಮೀನುಗಾರರಿಗೂ ನೆರವಾಗಲಿದೆ. ಶೀಘ್ರ ಮರಳುನೀತಿಯನ್ನು ಜಾರಿಗೆ ತರುವುರಿಂದ ಆಶ್ರಯ ಮನೆಯಂತಹ ಅನೇಕ ಸರಕಾರದ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಅನುಕೂಲವಾಗಲಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎರಡು ದಿನದ ಹಿಂದೆ ಅಂಗಡಿಗೆ ತೆರಳಿದ್ದ ಬಾಲಕಿಯನ್ನು ಪುಸಲಾಯಿಸಿ, ಅತ್ಯಾಚಾರ ನಡೆಸಿದ ಘಟನೆ ತಾಲೂಕಿನ ಬಿದ್ದಲ್‌ಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ತೀರ್ವ ಅಸ್ವಸ್ಥಗೊಂಡಿರುವ ಎಂಟು ವರ್ಷದ ಬಾಲಕಿಯನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನ ಬಿದ್ಕಲ್‌ಕಟ್ಟೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ರಾಮದಾಸ ಪ್ರಭು (53) ಅತ್ಯಾಚಾರ ನಡೆಸಿದ ಕಾಮುಕ. ಮೂಲತಃ ಉತ್ತರಕನ್ನಡದವರಾದ ಬಾಲಕಿಯ ಪೋಷಕರು ಬಿದ್ಕಲ್‌ಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಏಕಾಂಗಿಯಾಗಿ ಅಂಗಡಿಗೆ ತೆರಳಿದ್ದ ಬಾಲಕಿಗೆ ಆಪಾದಿತ ರಾಮದಾಸ ಪುಸಲಾಯಿಸಿ ಅಮಾನುಷ ಕೃತ್ಯ ನಡೆಸಿದ್ದು, ಎರಡು ದಿನಗಳಿಂದ ಬಾಲಕಿ ಅಸ್ವಸ್ಥಗೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದಾಗ ಅತ್ಯಾಚಾರ ನಡೆದಿರುವುದು ದೃಢಪಟ್ಟಿದ್ದು, ತೀರ್ವ ಅಸ್ವಸ್ಥಗೊಂಡಿರುವುದರಿಂದ ಮಣಿಪಾಲಕ್ಕೆ ಕರೆದೊಯ್ಯಲಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ ಪೊಲೀಸರು ತನಿಕೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಪಾದಿತನನ್ನು ಬಂಧಿಸಲಾಗಿದೆ. ಈ ಹೇಯ ಕೃತ್ಯವನ್ನು ಕುಂದಾಪುರದ ನಾಗರಿಕರು ಖಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಸೊಗಡು, ಕುಂದಗನ್ನಡದ ಕಂಪಿನೊಂದಿಗೆ ಜಾತಿ ಹಾಗೂ ಮೀಸಲಾತಿ ಹಿಂದಿನ ತಲ್ಲಣಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟ ’ರಿಸರ್ವೇಶನ್’ ಚಿತ್ರಕ್ಕೆ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಗಿದ್ದು, ಅತ್ಯುತ್ತಮ ಕನ್ನಡ (ಪ್ರಾದೇಶಿಕ) ಚಿತ್ರ ಪ್ರಶಸ್ತಿ ದೊರೆತಿದೆ. ಜಾತಿ ಹಾಗೂ ಮೀಸಲಾತಿ ವ್ಯವಸ್ಥೆಯು ಮಧ್ಯಮ ವರ್ಗದ ಕುಟುಂಬದ ಮೇಲೆ ಬೀರಬಹುದಾದ ಪ್ರಭಾವ – ತಲ್ಲಣಗಳು ಹಾಗೂ ಅದರಾಚೆಗಿನ ಪರಿಣಾಮವನ್ನು ಕಥಾವಸ್ತುವಾಗಿಸಿಕೊಂಡ ’ರಿಸರ್ವೆಶನ್’ ಕಲಾತ್ಮಕ ಚಿತ್ರವನ್ನು ಖ್ಯಾತ ನಿರ್ದೇಶಕ ನಿಖಿಲ್ ಮಂಜು ನಿರ್ದೇಶಿಸಿದ್ದರು. ಗುಲ್ವಾಡಿ ಟಾಕೀಸ್ ಬ್ಯಾನರ್‌ನಲ್ಲಿ ನಟ, ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ ಚಿತ್ರ ನಿರ್ಮಾಣ ಮಾಡಿದ್ದರು. ಶ್ರೀಲಲಿತೆ ಅವರ ಕಥೆಯನ್ನಾಧರಿಸಿದ ಚಿತ್ರಕ್ಕೆ ಬಿ. ಶಿವಾನಂದ್ ಸಂಭಾಷಣೆ ಬರೆದಿದ್ದರೇ, ಪ್ರದೀಪ್ ಶೆಟ್ಟಿ ಕೆಂಚನೂರು, ನಿಖಿಲ್ ಮಂಜು ಹಾಗೂ ಬಿ. ಶಿವಾನಂದ ಚಿತ್ರಕಥೆ ಬರೆದಿದಾರೆ. ಪಿವಿಆರ್ ಸ್ವಾಮಿ ಅವರ ಛಾಯಾಗ್ರಹಣ, ಸಮೀರ್ ಅವರ ಸಂಗೀತದಲ್ಲಿ ಮಾನಸಿ ಸುಧೀರ್ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಚಿತ್ರಕ್ಕೆ ರಾಷ್ಟ್ರ…
