Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಕಾಲೇಜಿನ ಮಾನವ ಹಕ್ಕು ಘಟಕ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಕ್ಟೋಬರ್ 10ರ ಪ್ರಯುಕ್ತ ಮಾನಸಿಕ ಅರೋಗ್ಯ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮನೋವೈದರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ ಇದರ ವೈದ್ಯಾಧಿಕಾರಿ ಡಾ. ಶಶಾಂತ್ ಎಸ್. ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದಷ್ಟೇ ಮಹತದಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ , ಪರೀಕ್ಷಾ ಭಯ, ಭವಿಷ್ಯ ಚಿಂತೆ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸುವ ರೀತಿ ಮತ್ತು ಧನಾತ್ಮಕ ಚಿಂತನೆ ಸಮಯ ನಿರ್ವಹಣೆ, ಧ್ಯಾನ ವಿಶ್ರಾಂತಿ ಹಾಗೂ ವಿದ್ಯಾರ್ಥಿಗಳು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುವಾಗ ಅವುಗಳನ್ನು ಮುಚ್ಚಿಡದೇ ಪೋಷಕರಿಗೆ, ಶಿಕ್ಷಕರಿಗೆ, ಆರೋಗ್ಯ ತಜ್ಞರೊಂದಿಗೆ ಮುಕ್ತವಾಗಿ ಚರ್ಚಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ ಮೇಲ್ವಿಚಾರಣಾಧಿಕಾರಿಗಳಾದ ಹೆಚ್.. ನಾಯ್ಕರ್, ಜಿಲ್ಲಾ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ, ಅ.09: ಸ್ಥಳೀಯ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನ ಆಡಿಟೋರಿಯಂನಲ್ಲಿ ಇಂದು ‘ಐಡಿಯಾಸ್ ಟುಡೇ, ಇಂಪ್ಯಾಕ್ಟ್ ಟುಮಾರೋ’ ಎಂಬ ಧ್ಯೇಯವಾಕ್ಯದೊಂದಿಗೆ ‘MITK AI VISION 24H’ 24-ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕಾಮ್ವಾಲ್ಟ್ ಸಂಸ್ಥೆಯ ಡಾಟಾ ಇವಾಂಜೆಲಿಸ್ಟ್ ಪ್ರಶಾಂತ್ ಜಯರಾಮ್ ಉದ್ಘಾಟಿಸಿ ಮಾತನಾಡುತ್ತಾ, “ಪ್ರಸ್ತುತ ಕೈಗಾರಿಕಾ ಕ್ಷೇತ್ರದಲ್ಲಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ ಕ್ರಾಂತಿಕಾರಿ ಬದಲಾವಣೆ ತರುತ್ತಿವೆ. ವಿದ್ಯಾರ್ಥಿ ಸಮೂಹವು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪ್ರಾಜೆಕ್ಟ್ ಆಧಾರಿತ ಕಲಿಕೆಗೆ ಒತ್ತು ನೀಡಬೇಕು. AI ತಂತ್ರಜ್ಞಾನವನ್ನು ಸಮಾಜಮುಖಿ ಪರಿಹಾರಗಳಿಗೆ ಬಳಸಿಕೊಳ್ಳಲು ಇಂತಹ ಹ್ಯಾಕಥಾನ್‌ಗಳು ಉತ್ತಮ ವೇದಿಕೆ” ಎಂದು ತಿಳಿಸಿದರು. ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ಟಿಯರ್-1 ತಂತ್ರಜ್ಞಾನ ಸಂಸ್ಥೆಯ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಗುರುಮೂರ್ತಿ ಎಸ್. ಬಿ. ಅವರು ಮಾತನಾಡಿ, “ಸಮಸ್ಯೆಗಳನ್ನು ನಿಖರವಾಗಿ ಗುರುತಿಸಿ, ಅದಕ್ಕೆ ದಕ್ಷ ಕೋಡಿಂಗ್ ಮತ್ತು AI ಪರಿಕರಗಳ ಮೂಲಕ ಪರಿಹಾರ ರೂಪಿಸುವುದು ಇಂದಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ. ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ, ಸಾಲಿಗ್ರಾಮ ಇದರ ಮುಂದಿನ ಐದು ವರ್ಷಗಳ ಅವಧಿಗೆ ಸೆ.28ರಂದು ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಈ ಕೆಳಗಿನ ಸದಸ್ಯರುಗಳು ಅವಿರೋಧವಾಗಿ ಆಯ್ಕೆಗೊಂಡರು. ಅಧ್ಯಕ್ಷರಾಗಿ ಆನಂದ್ ಸಿ. ಕುಂದರ್ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಸಂಜೀವ ಜಿ., ನಿರ್ದೇಶಕರುಗಳಾಗಿ ಮಂಜುನಾಥ್ ಎಸ್.ಕೆ, ಶಂಕರ ಬಂಗೇರ, ವಸಂತ ಶೆಟ್ಟಿ, ವೈ. ಕೃಷ್ಣಮೂರ್ತಿ ಐತಾಳ್, ಕೃಷ್ಣಪ್ಪ ಮರಕಾಲ, ಸುಂದರ, ವೈ. ಗೋಪಾಲ ಭಟ್ಟ, ಶಾಂತಾ ಭಟ್ಟ, ನಾಗರತ್ನ ಬಾಯರಿ, ಸವಿತಾ ಪೂಜಾರಿ ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾ ಪ್ರಕ್ರಿಯೆಯನ್ನು ಉಡುಪಿಯ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಸಹಕಾರಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಜಯಂತಿ ಎಸ್. ಅವರು ನಡೆಸಿಕೊಟ್ಟರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಮೂಡುಬಿದಿರೆ: ಕೃತಕ ಬುದ್ಧಿಮತ್ತೆ ಒದಗಿಸುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವಿವೇಚನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಹೇಳಿದರು. ಅವರು ಆಳ್ವಾಸ್ ಕಾನೂನು ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ “ಜ್ಯೂರಿಸ್ ಓಡಿಸ್ಸಿ –ದ ಜರ್ನಿ ಇನ್‌ಟು ಲಾ” ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕೃತಕ ಬುದ್ದಿಮತ್ತೆಯ ಮೂಲಕ ದೊರೆಯುವ ಮಾಹಿತಿಯನ್ನು ವಿಮರ್ಶಿಸದೆ ಒಪ್ಪಿಕೊಳ್ಳಬಾರದು. ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ಅಧಿಕೃತ ಮೂಲಗಳೊಂದಿಗೆ ಹೋಲಿಕೆ ಮಾಡಿ, ಸರಿ–ತಪ್ಪುಗಳನ್ನು ವಿಶ್ಲೇಷಿಸುವ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಎಐಯನ್ನು ಜ್ಞಾನಾರ್ಜನೆಗೆ ಪೂರಕ ಸಾಧನವಾಗಿ ಬಳಸಬೇಕೇ ಹೊರತು, ಸ್ವಂತ ಆಲೋಚನೆ ಮತ್ತು ವಿವೇಚನೆಗೆ ಪರ್ಯಾಯವಾಗಿ ಪರಿಗಣಿಸಬಾರದು. ತಂತ್ರಜ್ಞಾನ ವೇಗವಾಗಿ ಮಾಹಿತಿಯನ್ನು ನೀಡಬಲ್ಲದು, ಆದರೆ ಆಳವಾದ ಜ್ಞಾನ ಮತ್ತು ಚಿಂತನೆಯ ಸಾಮರ್ಥ್ಯವನ್ನು ಬೆಳೆಸುವಲ್ಲಿ ಪುಸ್ತಕಗಳ ಪಾತ್ರ ಸದಾ ಮಹತ್ವದ್ದಾಗಿದೆ ಎಂದರು. ವೈದ್ಯಕೀಯ ಕ್ಷೇತ್ರದಂತೆ ಕಾನೂನು ಕೂಡ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ “ಸಂಸ್ಕಾರ – ಸಿಂಚನ – ಹೆತ್ತವರ ಪಾದಗಳಿಗೆ ನಮನ”- ವಿಶೇಷ ಉಪನ್ಯಾಸ ಹಾಗೂ ಮಾತೃ ಪಿತೃಗಳ ಪಾದ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಎನ್ ಆರ್ ದಾಮೋದರ ಶರ್ಮ ರವರು ಮಾತನಾಡುತ್ತಾ – ಭಾರತೀಯ ಸಂಸ್ಕೃತಿಯಲ್ಲಿ ತಂದೆ ತಾಯಿಯರಿಗೆ ಪೂಜನೀಯ ಸ್ಥಾನವಿದೆ. ಇವರನ್ನು ಪ್ರತ್ಯಕ್ಷ ದೇವರೆಂದೇ ಒಪ್ಪಿ ಆಧರಿಸಿ ಗೌರವಿಸುವ ಪರಂಪರೆ ನಮ್ಮದು. ತಾಯಿಯನ್ನು ಅತ್ಯಂತ ಪ್ರೀತಿ ಕಾಳಜಿಯಿಂದ ನೋಡುವುದರ ಜೊತೆಗೆ ತಂದೆಯನ್ನು ಅತ್ಯಂತ ಗೌರವದಿಂದ ಕಾಣಬೇಕು.. ಹೆತ್ತ ತಾಯಿಯ ಋಣ ಹಾಗೂ ಹೊತ್ತ ನೆಲದ ಋಣ ತೀರಿಸಲಾಗದ ಸಂಪತ್ತಾಗಿದೆ. ಮಕ್ಕಳು ಸಂಸ್ಕಾರಯುತರಾಗಿ ಬೆಳೆದಾಗ ಸಮಾಜದಲ್ಲಿನ ಉನ್ನತ ಸ್ಥಾನಮಾನಗಳು ಹಾಗೂ ಗೌರವ ದೊರಕಿ ಬದುಕು ಪಾವನವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಅವರವರ ತಂದೆ ತಾಯಿಯಂದಿರ ಪಾದ ಪೂಜೆ ಮಾಡಿಸಲಾಯಿತು. ಬಾಂಡ್ಯ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ವಂಡ್ಸೆ ವಲಯದ ಆತ್ರಾಡಿ ಅಂಗನವಾಡಿ ಕೇಂದ್ರದಲ್ಲಿ  ಫೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಅಂಗನವಾಡಿ ಮೇಲ್ವಿಚಾರಕಿ ಭಾಗ್ಯವತಿ ಉದ್ಘಾಟಿಸಿ, ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಅಪೌಷ್ಠಕತೆ ನಿವಾರಣೆಗೆ ತಗೆದುಕೊಳ್ಳಬೇಕಾದ ಆಹಾರ ಪದ್ದತಿ ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿಗಳ ಬಳಕೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗರ್ಬಿಣಿಯರಿಗೆ ಸೀಮಂತ ಮತ್ತು ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಾಧಿಕಾರಿ ಶ್ರುತಿ, ಎಂ.ಆರ್.ಡಬ್ಲ್ಯೂ ಜಾಕ್ಲಿನ್ ವೆನಿಶಾ ಡಿಮೆಲ್ಲೊ, ಎಲ್.ಸಿ.ಆರ್.ಪಿ ನಿರ್ಮಲ ವಂಡ್ಸೆ, ಆಶಾ ಕಾರ್ಯಕರ್ತೆ ವನಿತಾ ಹಾಗೂ ತಾಯಂದಿರು, ಸ್ತ್ರೀಶಕ್ತಿ ಸದಸ್ಯರು ಉಪಸ್ಥಿತರಿದ್ದರು. ಜ್ಯೋತಿ ಹೊಲಾಡು ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ಜಲಜ ವಂದಿಸಿದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಮಾನಸಿಕ ಆರೋಗ್ಯದ ಜೊತೆಗೆ ಆರ್ಥಿಕ ಸಬಲತೆ ಇದ್ದಾಗ ನಿವೃತ್ತಿ ಜೀವನ ಯಶಸ್ವಿಯಾಗುತ್ತದೆ ಎಂದು ಧರ್ಮಸ್ಥಳ ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಗಿರಿಧರ ಕಂಠಿ ಹೇಳಿದರು. ಅವರು ಅಕ್ಸೆಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪಾರ್ಟ್ನರ್ ಚಾನೆಲ್‌ ಸಹಯೋಗದಲ್ಲಿ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತರಾದ ನಂತರ ಮನೆ ಸೇರುವುದನ್ನು ಬಿಟ್ಟು ಜನಜಾಗ್ರತಿ, ಜನರ ಸೇವೆ ಮಾಡಿದಾಗ ಸಮಾಜಕ್ಕೆ ಒಳಿತಾಗುತ್ತದೆ. ಜನರೊಂದಿಗೆ ಬೆರೆತಾಗ ಮನಸ್ಸು ಶುದ್ದಿ ಯಾಗುತ್ತದೆ ಎಂದರು. ಈ ಶುಭ ಸಂದರ್ಭದಲ್ಲಿ ಡಾಕ್ಟರ್ ಶರೀಫ್, ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಏಜೆನ್ಸಿ ಪಾರ್ಟ್ನರ್ ಚಾನಲ್ ನ ಚಂದ್ರಕಾಂತ್ ಭಟ್, ವಿಶ್ವನಾಥ್ ಭಟ್, ಜಯದೀಪ್ ದೇವಾಡಿಗ, ಸುಬ್ರಮಣ್ಯ ಉಡುಪ, ಶ್ರೀಪತಿ ಉಪಾಧ್ಯಾಯ,ಪ್ರಕಾಶ್, ಮಧುಸೂದನ್ ಹೆಗಡೆ ಮತ್ತು ರಕ್ಷಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕುಂದಾಪುರ: ಏಷಿಯಾಟೆಕ್ ಕಾಲೇಜು, ಕುಂದಾಪುರದಲ್ಲಿ 2027ನೇ ಶೈಕ್ಷಣಿಕ ವರ್ಷದ ಪ್ರವೇಶಾತಿ ಆರಂಭವಾಗಿದೆ. ಉದ್ಯೋಗಾಧಾರಿತ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯಗಳನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ಒಂದು ವರ್ಷದ ವಿವಿಧ ವೃತ್ತಿಪರ ಕೋರ್ಸ್‌ಗಳನ್ನು ನೀಡುತ್ತಿದ್ದು ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಲಭ್ಯವಿರುವ 1 ವರ್ಷದ ಕೋರ್ಸ್‌ಗಳು:* ಡಿಪ್ಲೊಮಾ ಇನ್ ಲಾಜಿಸ್ಟಿಕ್ಸ್ ಅಂಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ * ಡಿಪ್ಲೊಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ * ಫೈರ್ ಅಂಡ್ ಸೇಫ್ಟಿ ಎಂಜಿನಿಯರಿಂಗ್* ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI)* ಸೈಬರ್ ಕ್ರೈಮ್ ಅಂಡ್ ಸೈಬರ್ ಲಾ * ಟ್ರಾವೆಲ್ ಅಂಡ್ ಟೂರಿಸಂ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು:100% ಉದ್ಯೋಗ ನಿಯೋಜನೆ ಸಹಾಯ (Placement Assistance)ಸರ್ಕಾರಿ ಶಿಕ್ಷಣ ಸಾಲದ ಸೌಲಭ್ಯಕ್ಕೆ ಸಹಾಯ (ಅರ್ಹತೆ ಮತ್ತು ನಿಯಮಗಳಿಗೆ ಒಳಪಟ್ಟಂತೆ)ವೃತ್ತಿಪರ ಕೌಶಲ್ಯ ತರಬೇತಿಉದ್ಯೋಗಾವಕಾಶಗಳಿಗೆ ಮಾರ್ಗದರ್ಶನ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಂಡು ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕುಂದಾಪುರ ಏಷಿಯಾಟೆಕ್ ಕಾಲೇಜು ಪ್ರವೇಶಾತಿ…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಹೆಬ್ರಿ ತಾಲೂಕು ಸಂತೆಕಟ್ಟೆ ನಿವಾಸಿ ಕಾಲೇಜು ವಿಧ್ಯಾರ್ಥಿನಿ ಸಮ್ರದ್ಧಿ ನಾಯ್ಕ್ ಅವರ ಶ್ರವಣ ದೋಷಕ್ಕೆ ತಕ್ಷಣ ಸ್ಪಂದಿಸಿದ ಕೋಟ ಬ್ರಿಗೇಡ್ ರೋಟರಿ ಸಂಸ್ಥೆ ಸುಮಾರು 25,000 ಮೌಲ್ಯದ ಆಧುನಿಕ ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಯಿತು. ನಿಯೋಜಿತ ಜಿಲ್ಲಾ ಗವರ್ನರ್ ಅಲೆನ್ ವಿನಯ್ ಲೂಯಿಸ್ ಅವರು ಸಾಧನವನ್ನು ವಿಧ್ಯಾರ್ಥಿನಿಗೆ ಹಸ್ಥಾಂತರಿಸಿ, ಮುಂದಿನ ವಿಧ್ಯಾಭ್ಯಾಸ ಹಾಗು ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ಹಾಗೂ ಕೋಟ ಬ್ರಿಗೇಡ್ ರೋಟರಿ ಸಂಸ್ಥೆಯ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ವಲಯ ಎರಡರ ಮಾಜಿ ಸಹಾಯಕ ಗವರ್ನರ್ ಹಾಗು ಕ್ಲಬ್ ಸಲಹೆಗಾರ ಚಂದ್ರಶೇಖರ್ ಮೆಂಡನ್, ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬನ್ನಾಡಿ, ವಲಯ ಸೇನಾನಿ ದಯನಂದ ಆಚಾರ್, ಮಾಜಿ ಅಧ್ಯಕ್ಷರುಗಳಾದ ಸುರೇಶ್ ಆಚಾರ್, ಡಾ. ಗಣೇಶ್, ಪ್ರಕಾಶ್ ಹಂದಟ್ಟು, ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ. ಮೆಂಡನ್, ಸದಸ್ಯರಾದ ಅರುಣ್ ಬಿ.ಕೆ.ಎಸ್. ಗುಂಡ್ಮಿ, ಮತ್ತು ಫಲಾನುಭವಿ ತಾಯಿ ಮುಂತಾದವರು ಉಪಸ್ಥಿತರಿದ್ದರು. ಇದನ್ನೂ ಓದಿ ►…

Read More

ಕುಂದಾಪ್ರ ಡಾಟ್‌ ಕಾಂ ಸುದ್ದಿ.ಕೋಟ: ಕೋಡಿ ಗ್ರಾಮ ಪಂಚಾಯತ್ ಸಮನ್ವಯ ಸಂಜೀವಿನಿ ಒಕ್ಕೂಟ ಇದರ 2025-26ರ ವಾರ್ಷಿಕ ಮಹಾಸಭೆ ಒಕ್ಕೂಟದ ಅಧ್ಯಕ್ಷೆ ಶಾಂತ ಸಿ. ಮೆಂಡನ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಜರಗಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ದೀಪ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ತಿಳಿಸಿ ಜೆಂಡರ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಜಿಲ್ಲಾ ಕಾನೂನು ಅಭಿರಕ್ಷಕರಾದ ರಜನಿ ಅವರು ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯಗಳ ತಡೆ ಹಾಗೂ ಸ್ವಯಂ ರಕ್ಷಣೆ ಮಾಡಿಕೊಳ್ಳುವ ವಿಧಾನಗಳ ಕುರಿತು ಜಾಗೃತಿ ಮೂಡಿಸಿದರು. ಬ್ರಹ್ಮಾವರ ತಾಲೂಕು ವಲಯ ಮೇಲ್ವಿಚಾರಕರಾದ ಸ್ವಾತಿ ಅವರು ಸಂಜೀವಿನಿ ಯೋಜನೆಯ ಕಾರ್ಯಕ್ರಮಗಳು ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಸಂಜೀವಿನಿ ಯೋಜನೆಯ ಮಹತ್ವದ ಕುರಿತು ತಿಳಿಸಿದರು. ಪಂಚಾಯತ್ ಕಾರ್ಯದರ್ಶಿ ಉಮೇಶ್, ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭಾಕರ ಮೆಂಡನ್, ಮಾಜಿ ಸದಸ್ಯ ಕೃಷ್ಣ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್ಥಿಕ ಸಮಾಲೋಚಕರಾದ ಮೀರಾ,…

Read More