ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ಇದರ ಪರಿಣಾಮವಾಗಿ ೨೫೦ಕೋಟಿ ನಷ್ಟದ ನಿರೀಕ್ಷೆ ಮೀರಿ ಫೆಬ್ರವರಿ ಅಂತ್ಯಕ್ಕೆ ೧೦ ಕೋಟಿ ಲಾಭ ಗಳಿಸುವಂತಾಗಿದೆ. ಕಳೆದೊಂದು ವರ್ಷದಲ್ಲಿ ಸಂಸ್ಥೆಯ ೨೦೮ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ೨ನೇ ಅತ್ಯುತ್ತಮ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್. ಉಮಾಶಂಕರ್ ಹೇಳಿದರು. ಅವರು ಬೈಂದೂರು ಯಡ್ತರೆಯಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆಗೈದು ಬಳಿಕ ಮಾತನಾಡಿ ಸಂಸ್ಥೆಯಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ ಆದಾಯ ಹೆಚ್ಚಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಕೆಎಸ್‌ಆರ್‌ಟಿಸಿಯ ಪ್ರತಿ ಡಿಪೋ ಬಸ್ ನಿಲ್ದಾಣಗಳಿಗೆ ನಿಗಮದ ಅಧ್ಯಕ್ಷರು ಹಾಗೂ ತಾನು ಭೇಟಿ ನೀಡಿ ಖುದ್ದಾಗಿ ಅಲ್ಲಿನ ಸಮಸ್ಯೆಗಳನ್ನು ಅರಿತು ಬಗೆಹರಿಸಲು ಕೆಲಸ ಮಾಡಲಾಗಿದೆ. ಪರಿಣಾಮವಾಗಿ ಸಂಸ್ಥೆ ಲಾಭದ ಹಾದಿಯಲ್ಲಿದೆ ಎಂದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹುಲಿಕುಣಿತದ ಮೂಲಕ ಮನೆಮಾತಾಗಿ ಹುಲಿ ನಾಗೇಶ್ ಅಣ್ಣ ಎಂದೇ ಖ್ಯಾತರಾದ ನಾಗೇಶ್ (75) ಅಸೌಖ್ಯದಿಂದ ಕುಂದಾಪುರ ಸ್ವಗೃಹದಲ್ಲಿ ನಿಧನರಾದರು. ಚಾಲಕ ವೃತ್ತಿಮಾಡಿಕೊಂಡಿದ್ದ ಅವರು ಹವ್ಯಾಸವಾಗಿ ನವರಾತ್ರಿ ಸಮಯದಲ್ಲಿ ಹುಲಿ ಕುಣಿತ ನಡೆಸುತ್ತಿದ್ದರು. ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ಎದುರು ಮುಖ್ಯರಸ್ತೆ ಪಕ್ಕದಲ್ಲಿ ಕಳೆದ ಮೂರು ದಶಕಕ್ಕೂ ಮಿಕ್ಕ ನವರಾತ್ರಿಯಲ್ಲಿ ಶಾರದಾಮೂರ್ತಿ ಕೂರಿಸಿ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದರು. ಇವರ ಹುಲಿ ವೇಷಕ್ಕೆ ವಿಶೇಷ ಆಕರ್ಷಣೆಯಿದ್ದು, ಕಳೆದ ನವರಾತ್ರಿ ಸಮಯದಲ್ಲಿ ಕಲಾಕ್ಷೇತ್ರ ಕುಂದಾಪುರ ವೇಷರಹಿತ ಹುಲಿ ಕುಣಿತ ನಡೆಸಿ ಸನ್ಮಾನಿಸಿದ್ದರು.ಮೃತರು ಪತ್ನಿ, ಮೂವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳ ಅಗಲಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು : ಗ್ರಾಮಸಭೆಯಲ್ಲಿ ಸಾರ್ವಜನಿಕರು ಮಂಡಿಸುವ ನಿರ್ಣಯ ಮತ್ತು ಕೇಳುವ ಪ್ರಶ್ನೆಗಳನ್ನು ಏಳು ದಿನ ಮೊದಲು ಲಿಖಿತವಾಗಿ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಕರಪತ್ರದಲ್ಲಿ ಮುದ್ರಿಸಿದ ಸೂಚನೆಗೆ ಮಂಗಳವಾರ ನಡೆದ ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಮಾಜಿ ಅಧ್ಯಕ್ಷ ಎಸ್. ಜನಾರ್ದನ ಈ ವಿಷಯ ಎತ್ತಿದಾಗ ಶೇಖರ ಕುಂದರ್ ಇದು ಜನರ ಬಾಯಿ ಮುಚ್ಚಿಸುವ ಯತ್ನ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ನಿಯಮದಂತೆ ವಸತಿ, ವಾರ್ಡ್‌ಸಭೆಗಳನ್ನು ಗ್ರಾಮಸಭೆಗಿಂತ ತಿಂಗಳು ಮೊದಲು ನಡೆಸಬೇಕು, ವಿಶೇಷ ಆಯವ್ಯಯ ಗ್ರಾಮಸಭೆ ನಡೆಸಬೇಕು, ಎಲ್ಲ ವಾಣಿಜ್ಯ ಸ್ಥಾವರಗಳು ಅನುಮತಿ ಪಡೆದುಕೊಳ್ಳಬೇಕು, ನಿಯಮದಂತೆ ತೆರಿಗೆ ದರ ಹೊರಿಸಬೇಕು, ಫ್ಲೆಕ್ಸ್‌ಗಳ ಬಳಕೆ ತಡೆಗಟ್ಟಬೇಕು, ಪ್ರಚಾರ ಫಲಕಗಳ ಮೇಲೆ ಶುಲ್ಕ ವಿಧಿಸಬೇಕು, ಗ್ರಾಮವನ್ನು ಪ್ಲಾಸ್ಟಿಕ್‌ಮುಕ್ತಗೊಳಿಸಬೇಕು ಎಂಬ ಸಲಹೆಗಳಿಗೆ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಂದ ಮೌನ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ವರ್ಷಗಳ ಹಿಂದೆ ಅಳವಡಿಸಿದ್ದ ಶುದ್ಧ ಕುಡಿಯುವ ನೀರು ಘಟಕ ಎಂದೋ ಕೆಟ್ಟು ಹೋಗಿದ್ದರೂ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಉಪ್ಪುಂದ ವಲಯದ ಆಶ್ರಯದಲ್ಲಿ ನಾಗೂರು ಶ್ರೀ ಕೃಷ್ಣ ಲಲಿತಾ ಕಲಾಮಂದಿರದಲ್ಲಿ ಪಂಚಾಂಗ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮ ಆದಿತ್ಯವಾರ ದಿನ ಜರಗಿತು. ಪಂಚಾಂಗ ಪಠಣ ಮಾಡಿ ಧಾರ್ಮಿಕ ಉಪನ್ಯಾಸ ನೀಡಿದ ವೇದಮೂರ್ತಿ ವಾಸುದೇವ ಐತಾಳ್ ಕೆಳಮಠ ಮಾತನಾಡಿ ಜ್ಯೋತಿಷ್ಯ ಶಾಸ್ತ್ರವು ವೈಜ್ಞಾನಿಕತೆಯಿಂದ ಕೂಡಿದು ಸತ್ಯವಾಗಿರುತ್ತದೆ. ಜ್ಯೋತಿಷಿ ಶಾಸ್ತ್ರ ಹೆಚ್ಚಿನ ವಿಜ್ಞಾನಿಗಳು ಸಹ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಪಂಚಾಗವು ಸಹ ಸಂಪೂರ್ಣ ಗಣಿತದ ಲೆಕ್ಕ ಚಾರದಿಂದ ರಚಿತವಾಗಿರುತ್ತದೆ. ಧಾರ್ಮಿಕವಾಗಿ ಪಂಚಾಂಗ ಶೃವಣ ಮಾಡುವುದರಿಂದ ಪುಣ್ಯಾಂಶ ಲಭಿಸುತ್ತದೆ. ಎಂದು ಶಾಸ್ತ್ರಕಾರರು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದರು. ಉಪ್ಪುಂದ ವಲಯದ ಅಧ್ಯಕ್ಷರಾದ ಬಿ. ವಿಶ್ವೇಶ್ವರ ಅಡಿಗ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಘದ ಪ್ರಮುಖರಾದ ಉದ್ಯಮಿ ಉಮೇಶ ಶ್ಯಾನುಬೋಗ್ ಗೌರವಧ್ಯಕ್ಷ ಮಂಜುನಾಥ್ ಉಡುಪ, ದೀಟಿ ಸೀತರಾಮ ಮಯ್ಯ, ವಾಸು ದೇವ ನಾವುಡ, ಪ್ರಕಾಶ ಐತಾಳ್, ವಾಸುದೇವ ಕಾರಂತ, ರಮೇಶ ವೈದ್ಯ, ಗಣೇಶ ಕಾರಂತ, ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹೊಸಾಡು ಗ್ರಾಪಂ ವ್ಯಾಪ್ತಿಯ ಹೊಸಾಡು-ಬಂಟ್ವಾಡಿ ಸಂಪರ್ಕ ಸೇತುವೆ ಸಮೀಪ ಕೆಲವರು ಚಟ್ಲಿಕೆರೆ ನಿರ್ಮಾಣಕ್ಕಾಗಿ ಹೊಳೆ ಪರಂಬೋಕು ಜಾಗ ಅತಿಕ್ರಮಿಸಿ ರಸ್ತೆ ನಿರ್ಮಿಸುತ್ತಿದ್ದು, ಹೊಳೆಬದಿಯಲ್ಲಿನ ಅಪಾರ ಕಾಂಡ್ಲಾ ವೃಕ್ಷಗಳನ್ನು ನಾಶಪಡಿಸಿದ್ದಾರೆ. ಸಾರ್ವಜನಿಕರ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದರೂ ರಸ್ತೆ ನಿರ್ಮಾಣ ಮತ್ತು ಕಾಂಡ್ಲಾ ಗಿಡಗಳ ಮಾರಣಹೋಮ ಮುಂದುವರಿದಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಟ್ವಾಡಿ ಸೇತುವೆ ಪೂರ್ವಭಾಗದಲ್ಲಿ ಸೌಪರ್ಣಿಕಾ ನದಿ ತೀರದಲ್ಲಿ ಚಟ್ಲಿ ಉದ್ಯಮಕ್ಕಾಗಿ ಖಾಸಗಿ ವ್ಯಕ್ತಿಗಳು ನದಿತೀರ ಬಗೆದು ರಸ್ತೆ ನಿರ್ಮಿಸುತ್ತಿದ್ದು, ನದಿತೀರದಲ್ಲಿ ತೀರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಬೆಳೆಸಿದ್ದ ನೂರಾರು ಕಾಂಡ್ಲಾ ವೃಕ್ಷಗಳನ್ನು ನಾಶ ಪಡಿಸಲಾಗಿದೆ. ನದಿತೀರ ಬಗೆದು ಮಣ್ಣು ತುಂಬಿಸುವ ಸಂದರ್ಭದಲ್ಲಿ ಇಲ್ಲಿನ ಕಾಂಡ್ಲಾ ವೃಕ್ಷಗಳು ಸಮಾಧಿಯಾಗಿರುವುದು ಕಂಡುಬಂದಿದೆ. ಈ ಹಿಂದೆ ಇದೇ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗಿದ್ದು, ನಿರಂತರವಾಗಿ ಕಾಂಡ್ಲಾ ನಾಶ ನಡೆದಿದೆ. ಹೊಸಾಡು-ಬಂಟ್ವಾಡಿ ನದಿಯ ಇಕ್ಕೆಲದಲ್ಲಿ ಸೊಂಪಾಗಿ ಬೆಳೆದಿದ್ದ ಕಾಂಡ್ಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೋಮವಾರ ತಾಲೂಕು ಪಂಚಾಯತ್ ಅನುದಾನದಡಿಯಲ್ಲಿ ಬೈಂದೂರು ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ. ಅವರ ಕಾರ್ಯವ್ಯಾಪ್ತಿಯ ಬೈಂದೂರು ಗ್ರಾಮ ಪಂಚಾಯತ್‌ನ ವಿವಿಧೆಡೆಗಳಲ್ಲಿ ಅಳವಡಿಸಲಾದ ಸೋಲಾರ್ ದೀಪಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ಬೈಂದೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಭಾಸ್ಕರ ನಾಯ್ಕ್, ಬಾಲಕೃಷ್ಣ ಶೆಟ್ಟಿ, ಭಾಗೀರಥಿ ಮೊದಲಾದವರು ಉಪಸ್ಥಿತರಿದ್ದರು.
ಡಾ. ಪಾರ್ವತಿ ಜಿ.ಐತಾಳ್ | ಕುಂದಾಪ್ರ ಡಾಟ್ ಕಾಂ ಲೇಖನ ಭಾರತೀಯ ಸಂಗೀತ ಕಲಾ ಪರಂಪರೆಗೆ ಜಗತ್ತಿನಲ್ಲಿ ಅದರದ್ದೇ ಆದ ಅನನ್ಯತೆಯಿದೆ. ಭಾವಪೂರ್ಣ ಸೊಬಗನ್ನು ಹೊಂದಿದ ಅದು ಕೇಳುಗನನ್ನು ದೈವೀಕವಾದ ಆತ್ಮಾನಂದದತ್ತ ಕರೆದೊಯ್ಯುವ ಶಕ್ತಿಯನ್ನು ಹೊಂದಿದೆ. ಅದನ್ನು ಕೇಳಿ ಆನಂದಿಸಬೇಕಾದರೆ ಸುಸಂಸ್ಕೃತವಾದ ಒಂದು ಮನಸ್ಸು ಬೇಕು. ಆದರೆ ಇಂದಿನ ವೇಗದ ಯುಗದಲ್ಲಿ ನಮ್ಮ ಈ ಶ್ರೀಮಂತ ಪರಂಪರೆಯ ಬಗ್ಗೆ ಗಮನ ಹರಿಸದೆ, ಮನಸ್ಸನ್ನು ಉದ್ರೇಕಗೊಳಿಸುವ ಉನ್ಮಾದಪೂರ್ಣ ಪಾಶ್ಚಾತ್ಯ ಜನಪ್ರಿಯ ಸಂಗೀತವನ್ನು ಅಳವಡಿಸಿಕೊಂಡ ಗೀತೆಗಳನ್ನು ಕೇಳುವ ಹುಚ್ಚನ್ನು ಬೆಳೆಸಿಕೊಂಡ ಜನರನ್ನು ನಾವು ನೋಡುತ್ತೇವೆ. ಕುಂದಾಪುರದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ಬಗ್ಗೆ ಒಲವುಳ್ಳ ವಾತಾವರಣ ಇಲ್ಲದಿರುವುದನ್ನು ಮನಗಂಡ ಅನೇಕ ಸಂಸ್ಥೆಗಳು ಅದನ್ನು ಪ್ರೋತ್ಸಾಹಿಸಲು ಈ ಹಿಂದೆಯೂ ಪ್ರಯತ್ನಿಸಿದ್ದಿದೆಯಾದರೂ ಇನ್ನೂ ಅದು ಸಾಕಷ್ಟು ಪುಷ್ಟಿಗೊಂಡಿಲ್ಲವೆಂಬ ಕಾರಣಕ್ಕೆ ಕೋಟೇಶ್ವರದ ಶಾಂತಿಧಾಮ ಟ್ರಸ್ಟ್(ರಿ) ಇವರು ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್,(ರಿ), ಸಾಧನಾ ಕಲಾ ಸಂಗಮ (ರಿ), ಕಲಾಕ್ಷೇತ್ರ ಮತ್ತು ನಾಟ್ಯಚಂದ್ರಿಕಾ ಎಂಬ ಇತರ ನಾಲ್ಕು ಸಂಸ್ಥೆಗಳ ಸಹಯೋಗದೊಂದಿಗೆ ಶಾಂತಿಧಾಮ…
ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಉಡುಪಿ ಜಿಲ್ಲಾ ಉತ್ತಮ ಆಶಾ ಕಾರ್ಯಕರ್ತೆ ಪ್ರಶಸ್ತಿ ವಿಜೇತ ಗಂಗೊಳ್ಳಿಯ ಕಲ್ಪನಾ ಯಾನೆ ಜ್ಯೋತಿ ಶೇರುಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಗುರುವಾರ ಜರಗಿದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯಲ್ಲಿ ಅವರನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್ ಸನ್ಮಾನಿಸಿ ಗೌರವಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೀತಾರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅಂಜಲಿ ಹುಂಡೇಕರ್, ಗ್ರಾಪಂ ಸದಸ್ಯ, ಮಕ್ಕಳ ಮಿತ್ರ ಬಿ.ಲಕ್ಷ್ಮೀಕಾಂತ ಮಡಿವಾಳ, ಅಂಗನವಾಡಿ ಕಾರ್ಯಕರ್ತೆ ಹಾಗೂ ಮಹಿಳಾ ಮಿತ್ರ ಫಿಲೋಮಿನಾ ಫೆರ್ನಾಂಡಿಸ್, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಆರೋಗ್ಯ ಇಲಾಖೆಯ ಕಿರಿಯ ಸಹಾಯಕಿ ಅರ್ಪಿತಾ, ಗ್ರಾಪಂ ಸದಸ್ಯರಾದ ಅಬ್ದುಲ್ ಹಾದಿ, ಸರೋಜಿನಿ ಕೋಡಿಕಾರ್, ಶಾರದಾ ಶೇರುಗಾರ್, ರೋಜಿ ಫೆರ್ನಾಂಡಿಸ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ, ನಮ್ಮ ಭೂಮಿ ಸಂಸ್ಥೆಯ ಶಾರದಾ,…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸರ್ವರಿಗೂ ಸಮಬಾಳು, ಸಮಪಾಲು ಸಿದ್ದಾಂತದ ಸಂವಿಧಾನವನ್ನು ನೀಡುವ ಮೂಲಕ ದೇಶದ ಜನರ ಜೀವನಮಟ್ಟವನ್ನು ಉನ್ನತಿಗೇರಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಇಂದಿರಾಜಿಯವರ ೨೦ ಅಂಶದ ಕಾರ್ಯಕ್ರಮದ ಮೂಲಕ ಶಿಕ್ಷಣ, ಆರೋಗ್ಯ, ವಿಜ್ಞಾನ, ಬ್ಯಾಂಕಿಂಗ್, ಕೃಷಿ ಮುಂತಾದ ಕ್ಷೇತ್ರಗಳಿಗೆ ಪ್ರಾಧಾನ್ಯತೆ ನೀಡುವ ಮೂಲಕ ವಿಶ್ವದ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ಭಾರತ ದೇಶವು ಮುಂಚೂಣಿಯ ಸ್ಥಾನಕ್ಕೇರಲು ಸಾಧ್ಯವಾಯಿತು. ಕಾಂಗ್ರೆಸ್ ಎಂದರೆ ಅದು ಕೇವಲ ಪಕ್ಷವಲ್ಲ. ಅದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ. ಅವರು ಶನಿವಾರ ಸಂಜೆ ಬಳ್ಕೂರಿನಲ್ಲಿ ನಡೆದ ಬಸ್ರೂರು ತಾ.ಪಂ.ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿದ್ದು ಪಕ್ಷದ ನಾಯಕರುಗಳ ನಿರ್ದೇಶನದ ಮೇರೆಗೆ ಕ್ಷೇತ್ರದಾದ್ಯಂತ ಪಕ್ಷದ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಆ ಮೂಲಕ ಈ ಕ್ಷೇತ್ರದ ರೈತರ ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಅರಿತಿದ್ದೇನೆ. ದಯವಿಟ್ಟು ಈ ಬಾರಿ ನನ್ನನ್ನು ಬೆಂಬಲಿಸುವ ಮೂಲಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಧುಮೇಹದಂತಹ ರೋಗ ಉಲ್ಬಣದಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಸ್‌ಸಿಡಿ ಚಿಕಿತ್ಸಾಲಯವು ಕಾರ್ಯೋನ್ಮಕವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಮುಂದಾಗಬಹುದಾದ ಅಪಾಯದಿಂದ ಪಾರಾಗಬಹುದಾಗಿದೆ ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ. ಪ್ರಶಾಂತ್ ಭಟ್ ಹೇಳಿದರು. ಶನಿವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣ ಘಟಕ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಬೈಂದೂರು, ಎಸ್.ಸಿ.ಡಿ ಚಿಕಿತ್ಸಾಲಯ ಬೈಂದೂರು, ವಿಶ್ವ ಮಧುಮೇಹ ಪ್ರತಿಷ್ಠಾನ ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಮಧುಮೇಹ ರಕ್ತ ಪರೀಕ್ಷೆ, ರಕ್ತದೋತ್ತಡ ಮತ್ತು ಮಧುಮೇಹಿಗಳಿಗೆ ಪಾದಗಳ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿದರು. ಸಾಂಕ್ರಾಮಿಕವಲ್ಲದ ಕಾಯಿಲೆಯನ್ನು ಶೀಘ್ರ ಪತ್ತೆಮಾಡಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಮುಖರನ್ನಾಗಿಸುವ ಉದ್ದೇಶದಿಂದ ಬೈಂದೂರು ಭಾಗದಲ್ಲಿ ಎರಡನೇ ಭಾರಿಗೆ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದರು. ಬೈಂದೂರು ರೋಟರಿ…
