ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಉದ್ಯಮ, ಸಾಮಾಜಿಕ , ಶೈಕ್ಷಣಿಕ ವಲಯದಲ್ಲಿ ಮಾಡಿದ ಸಾಧನೆಗಾಗಿ ಜೆಸಿಐ ಶಿರೂರು ಘಟಕದ ಸ್ಥಾಪಕ ಅಧ್ಯಕ್ಷ ಮೋಹನ್ ರೇವಣ್ಕರ್ ಅವರಿಗೆ ಪುತ್ತೂರಿನಲ್ಲಿ ನಡೆದ ವಲಯ ಹದಿನೈದರ ವ್ಯವಹಾರ ಪ್ರಗತಿ ಸಮ್ಮೇಳನದಲ್ಲಿ ಉದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷ ರಾಕೇಶ ಕುಂಜೂರು , ವಲಯ ಪೂರ್ವ ಅಧ್ಯಕ್ಷ ರಾಘವೇಂದ್ರ ಪ್ರಭು , ನಿಕಟಪೂರ್ವ ಅಧ್ಯಕ್ಷ ಸಂತೋಷ ಪೂಜಾರಿ, ಜೆಸಿಐ ಶಿರೂರು ಘಟಕದ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಪ್ರಸಾದ ಪ್ರಭು, ಗಿರೀಶ ಮೇಸ್ತ, ಕೃಷ್ಣಮೂರ್ತಿ ಶೇಟ್, ಮಾದೇವ ಪೂಜಾರಿ, ವಿನೋದ ಮೇಸ್ತ, ಕೃಷ್ಣ ಪೂಜಾರಿ ಇತರರು ಉಪಸ್ಥಿತರಿದ್ದರು.