Author: ನ್ಯೂಸ್ ಬ್ಯೂರೋ

ಕುಂದಾಪುರ: ದೆಹಲಿಯಲ್ಲಿ ನಡೆದ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ನ್ಯೂಡೆಲ್ಲಿ ಚುನಾವಣೆಯಲ್ಲಿ ಡಾ. ಜಯಕರ್ ಶೆಟ್ಟಿ ಎಮ್. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಸೇವೆಸಲ್ಲಿಸಿದ ಇವರು ಪ್ರಸ್ತುತ ಬೋರ್ಡ್ ಆಫ್ ಸ್ಟಡೀಸ್ ಛೇರ್‌ಮ್ಯಾನ್ ಆಗಿ ಸೇವೆಸಲ್ಲಿಸುತ್ತಿದ್ದಾರೆ.ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕ್ ಗ್ರಾಮೀಣ ಪ್ರದೇಶದವರು. ಪ್ರೋಸ್ಟೋಡೊಂಟಿಕ್ಸನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಸರಕಾರಿ ಡೆಂಟಲ್ ಕಾಲೇಜ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಪಡೆದಿರುವ ಇವರು ಎಇಸಿಎಸ್ ಬೆಂಗಳೂರಿನ ಮಾರುತಿ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಪ್ರಾಧ್ಯಾಪಕ ಮತ್ತು ಉಪಪ್ರಾಂಶುಪಾಲರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರು ತೆಕ್ಕಟ್ಟೆ ವಿಶ್ವವಿನಾಯಕ ಸಿಬಿಎಸ್‌ಇ ಸ್ಕೂಲ್ ಟ್ರಸ್ಟಿಯಾಗಿರುತ್ತಾರೆ.

Read More

ಗಂಗೊಳ್ಳಿ: ನಮಗೆ ನಮ್ಮ ದೇಶದ ಬಗ್ಗೆ ಪ್ರೀತಿ ಅಭಿಮಾನ ಇದ್ದಂತೆ ನಮ್ಮ ದೇವರು, ದೇವಸ್ಥಾನ ಹಾಗೂ ಗುರುಪೀಠದ ಬಗ್ಗೆ ಅಭಿಮಾನ ಬೆಳೆಯಬೇಕು. ಇತರ ಸಮಾಜಗಳಿಗೆ ಹೋಲಿಸಿದರೆ ಗೌಡ ಸಾರಸ್ವತ ಸಮಾಜದವರಿಗೆ ಈ ಬಗ್ಗೆ ಹೆಚ್ಚಿನ ಅಭಿಮಾನ ಒಲವು ಇದೆ. ಇದನ್ನು ನಮ್ಮ ಯುವಪೀಳಿಗೆ ಮುಂದುವರಿಸಿಕೊಂಡು ಹೋಗುವಂತಾಗಬೇಕು ಎಂದು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟಶಿಷ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ನುಡಿದರು. ಅವರು ಗಂಗೊಳ್ಳಿಯ ರಾಮ ಪೈ ಮಠ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಚಿತ್ತೈಸಿ ಆಶೀರ್ವಚನ ನೀಡಿ ಮಾತನಾಡಿದರು. ಕಲಿಯುಗದಲ್ಲಿ ದೇವರ ನಾಮಸ್ಮರಣೆಗೆ ಹೆಚ್ಚು ಮಹತ್ವವಿದೆ ಮತ್ತು ಶ್ರೀ ವಿಷ್ಣು ಸಹಸ್ರನಾಮ ಪಠಣ ಶ್ರೇಷ್ಠವಾದುದು. ಆದುದರಿಂದ ಪ್ರತಿನಿತ್ಯ ಶ್ರೀ ವಿಷ್ಣು ಸಹಸ್ರನಾಮ ಪಠಣ ಹಾಗೂ ಭಜನೆ ಸಂಕೀರ್ತನೆ ಮಾಡುತ್ತಾ ದೇವರ ಪ್ರೀತಿಗೆ ಪಾತ್ರರಾಗಲು ಪ್ರಯತ್ನಿಸಬೇಕು. ದೇವರನ್ನು ಭಕ್ತಿಯಿಂದ ಆರಾಧಿಸಿ ಪೂಜಿಸಿದರೆ ನಮ್ಮೆಲ್ಲ ಕಷ್ಟಗಳು ದೂರವಾಗಿ ಜೀವನದಲ್ಲಿ ಸುಖಶಾಂತಿ ನೆಮ್ಮದಿ ನೆಲೆಸುತ್ತದೆ. ಮೇಲ್‌ಗಂಗೊಳ್ಳಿ ಪೈ ಕುಟುಂಬದ ಈ ದೇವಸ್ಥಾನದಲ್ಲಿ ನಡೆಯುತ್ತಿರುವ…

Read More

ಕುಂದಾಪುರ: ಶಾಸಕರ ಮಾ.ಹಿ.ಪ್ರಾ. ಶಾಲೆ, ವಡೇರಹೋಬಳಿ ಇಲ್ಲಿನ ವಾರ್ಷಿಕೋತ್ಸವ ಸಮಾರಂಭದ ಬೆಳಗ್ಗಿನ ಧ್ವಜಾರೋಹಣವನ್ನು ಹೋಟೆಲ್ ಹರಿಪ್ರಸಾದ್ ಇದರ ಮಾಲೀಕರಾದ ಶ್ರೀಯುತ ಅಭಿನಂದನ್ ಶೆಟ್ಟಿ ಇವರು ನೆರವೇರಿಸುವುದರ ಮೂಲಕ ಪ್ರಾರಂಭಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಕೆ. ಸೀತಾರಾಮ ಶೆಟ್ಟಿ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ, ಕುಂದಾಪುರ ಇವರು ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಚಂದ್ರಶೇಖರ ಶೆಟ್ಟಿ, ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ ವಡೇರಹೋಬಳಿ ಹಾಗೂ ಶ್ರೀಮತಿ ದೇವಿಕುಮಾರಿ ಉಪಸ್ಥಿತರಿದ್ದರು. ಪದವೀಧರ ಮುಖ್ಯ ಶಿಕ್ಷಕರಾದ ಶ್ರೀ ಬಿ. ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ವಯಲ್ಲಾ ಮಿರಾಂಡ ವಂದಿಸಿದರು. ಮದ್ಯಾಹ್ನದ ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಹೆಚ್. ಶೋಭಾ ಶೆಟ್ಟಿಯವರು ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಕರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಅಲ್ಲದೆ ಇಲಾಖೆಯ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವುದನ್ನು ಸ್ಮರಿಸಿದರು. ಶ್ರೀ ದತ್ತಾನಂದ, ಗಂಗೊಳ್ಳಿ ಇವರು ಬಹುಮಾನ ವಿತರಣೆ ಮಾಡಿ ಇಲ್ಲಾ ವಿದ್ಯಾರ್ಥಿಗಳಿಗೂ ಬಹುಮಾನ ನೀಡುತ್ತಿರುವುದು ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ…

Read More

ಕೊಲ್ಲೂರು: ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಸಹಬಾಗಿತ್ವದಲ್ಲಿ ವೈದ್ಯಕೀಯ ಶಿಬಿರ ಶ್ರೀ ಮೂಕಾಂಬಿಕಾ ದೇವಳದ ಸಭಾ ಭವನದಲ್ಲಿ ನೆರವೇರಿತು. ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಕಾರ್ಯಕ್ರಮದ ಉದ್ಘಾಟಿಸಿದರು. ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ, ಅಧೀಕ್ಷಕ ಕೆ. ರಾಮ ಕೃಷ್ಣ ಅಡಿಗ ಶ್ರೀ ಮೂಕಾಂಬಿಕಾ ದೇವಳದ ನೌಕರರ ಸಂಘದ ಕಾರ್ಯದರ್ಶಿ ಮುರಳಿಧರ ಹೆಗಡೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ ಶೆಟ್ಟಿ, ಖಜಾಂಚಿ ಸೀತರಾಮ ಶೆಟ್ಟಿ, ಕೆ.ಎಂ.ಸಿ ಆಸ್ಪತ್ರೆಯ ಮಣಿಪಾಲದ ತಜ್ಞ ವೈದ್ಯರಾದ ಡಾ| ಸುದೀರ್ ನಾಯಕ್, ಡಾ| ಶೈಲಜಾ ಹಾಗೂ ಡಾ| ಶ್ರೀ ವಿದ್ಯಾ ಉಪಸ್ಥಿತರಿದ್ದರು.

Read More

ಗಂಗೊಳ್ಳಿ: ನಮ್ಮ ಸಮಾಜದ ಹೀನ ಸ್ಥಿತಿಯನ್ನು ತೊಳೆಯಬೇಕು. ಸಮಾಜಕ್ಕಾಗಿ ನಮ್ಮ ಜೀವನವನ್ನು ಪಣ ಇಡಬೇಕು. ಸೇವೆಯ ಮೂಲಕ ತಮ್ಮ ಜೀವನವನ್ನು ಧನ್ಯವಾಗಿರಿಸಬೇಕು ಎಂದು ಉಡುಪಿ ಜಿಲ್ಲೆಯ ಜಿಲ್ಲಾ ಸೇವಾ ಪ್ರಮುಖ್ ಜಯಂತ್ ಮಲ್ಪೆ ಹೇಳಿದರು. ಅವರು ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಹಾಗೂ ಶ್ರೀ ಮಹಾಕಾಳಿ ಸೇವಾ ಸಮಿತಿ ಶ್ರೀ ಮಹಾಂಕಾಳಿ ಮಠ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಖಾರ್ವಿಕೇರಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿದ ಸೇವಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಉಡುಪಿಯ ಇನ್ಯೂರೆನ್ಸ್ ಸರ್ವೇಯರ್ ಜ್ಞಾನದಾಸ ಕಾನೋಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ದೇವರಾಯ ಕಾನೋಜಿ ಗಂಗೊಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಮತಿ, ಶಿಶು ಮಂದಿರದ ಸದಸ್ಯರಾದ ಜಿ.ಗಣಪತಿ ಶಿಪಾ, ಬಿ.ರಾಘವೇಂದ್ರ ಪೈ, ವಸಂತಿ ಎನ್.ಖಾರ್ವಿ, ಮಾತಾಜಿ ಸುಮನಾ, ಮಾತಾಜಿ ಶೈಲಾ ಉಪಸ್ಥಿತರಿದ್ದರು. ಶಿಶು ಮಂದಿರದ ಅಧ್ಯಕ್ಷ…

Read More

ಕುಂದಾಪುರ: ಭಾಷೆ ಮತ್ತು ಸಂಸ್ಕೃತಿ ನಡುವೆ ಅವಿನಾಭಾವ ಸಂದಭವಿದೆ. ಭಾಷೆ ಬೆಳೆದಂತೆಲ್ಲಾ ಮಕ್ಕಳು ಸಾಂಸ್ಕೃತಿಕವಾಗಿ ಗಟ್ಟಿಯಾಗುತ್ತಾರೆ. ಪಠ್ಯಪುಸ್ತಕವೊಂದೇ ಸರ್ವಾಂಗೀಣ ಅಭಿವೃದ್ಧಿಗೆ ಕಾಣರವಲ್ಲ. ಪಠ್ಯದ ಜೊತೆ ಸಂಸ್ಕೃತಿ ತಿರುಳೂ ಮಕ್ಕಳಿಗೆ ಕಲಿಸುವ ಮೂಲಕ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮೂಡಬಿದ್ರೆ ಆಳ್ವಾಸ್ ಸಮುಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವಾ ಅಭಿಪ್ರಾಯಪಟ್ಟಿದ್ದಾರೆ. ಕುಂದಾಪುರ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದು ಕೋಟಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದ, ಅದರಲ್ಲಿ ೫೦ ಲಕ್ಷ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ ಎಂದು ಹೇಳಿದರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸಾಂಶ್ಕೃತಿ ವೈವಿಧ್ಯದ ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ಅಲ್ಲಲ್ಲಿ ಕಾರ‍್ಯಕ್ರಮ ಕೊಡುವ ಮೂಲಕ ಕನ್ನಡ ಮಾದ್ಯಮ ಗಟ್ಟಿಉ ಮಾಡುವ ಕೆಲಸ ಮಾಡಲಾಗುತ್ತಿದೆ. ಕನ್ನಡ ಮಾಧ್ಯಮ ಕೀಳು, ಇಂಗ್ಲೀಷ್ ಮಾಧ್ಯಮ ಶ್ರೇಷ್ಠ ಎಂಬ ತಾರತಮ್ಯ ಮೇಡ ಕನ್ನಡ ಮಾಧ್ಯಮ…

Read More

ಬೈಂದೂರು: ಇತ್ತೀಚಿಗೆ ಅಕಾಲ ಮರಣಕ್ಕೆ ತುತ್ತಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಯು. ಕೇಶವ ಪ್ರಭು ಅವರಿಗೆ ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದಲ್ಲಿ ನುಡಿನಮನ ಸಲ್ಲಿಸಲಾಯಿತು. ಕರ್ನಾಟಕ ಬ್ಯಾಂಕಿನ ಉದ್ಯೋಗಿಯಾಗಿದ್ದ ಕೇಶವ ಪ್ರಭು ನಿವೃತ್ತಿಯ ನಂತರ ಉಪ್ಪುಂದ ಗ್ರಾಮವಿಕಾಸ ಸಮಿತಿಯ ಗೌರವಾಧ್ಯಕ್ಷರಾಗಿ ಮತ್ತು ಸೇವಾ ಸಂಗಮ ಶಿಶುಮಂದಿರದ ವ್ಯವಸ್ಥಾಪಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನಿಯೂ ಆಗಿರುವ ಇವರಿಗೆ ಊರಿನ ಅಭಿಮಾನಿಗಳು ಸಂಘದ ಕಾರ್ಯಕರ್ತರು ಸಾಮೂಹಿಕವಾಗಿ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತೆಕ್ಕಟ್ಟೆ ಸೇವಾಸಂಗಮ ಶಿಶುಮಂದಿರದ ವಿಶ್ವಸ್ಥ ಕೇಶವರಾಯ ಪ್ರಭು, ಉಪ್ಪುಂದ ಶ್ರೀ ಮೂಡುಗಣಪತಿ ಶಿಶುಮಂದಿರದ ಅಧ್ಯಕ್ಷ ಬಿ.ಎ.ಮಂಜು ದೇವಾಡಿಗ, ಗೌರವಾಧ್ಯಕ್ಷ ಯು. ರಾಜೀವ ಭಟ್, ಗ್ರಾಮವಿಕಾಸ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಐತಾಳ್, ಕೋಟೇಶ್ವರ ಪೂರ್ವ ಗುರುಕುಲದ ವಿಶ್ವಸ್ಥ ಕೃಷ್ಣರಾಯ ಶ್ಯಾನುಭಾಗ್, ಸಹೋದರ ಯು. ಸದಾನಂದ ಪ್ರಭು ಇವರು ಪ್ರಭುಗಳ ಸಮಾಜ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡರು. ಪ್ರಾರಂಭದಲ್ಲಿ ಒಂದು ನಿಮಿಷಗಳ ಮೌನ…

Read More

ಕುಂದಾಪುರ: ಇಲ್ಲಿನ ಚಕ್ರವರ್ತಿ ಕ್ರಿಕೆಟ್ ಕ್ಲಬ್ ವತಿಯಿಂದ ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿ. 24ರಿಂದ 27ರವರೆಗೆ ನಡೆದ 5ನೇ ರಾಷ್ಟ್ರೀಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಕೂಟವನ್ನು ಆಯೋಜಿಸಿ, ಯಶಸ್ವಿಯಾಗಿ ನಿರ್ವಹಿಸಿದ ಪ್ರಮುಖ ರೂವಾರಿ ಶ್ರೀಪಾದ ಉಪಾಧ್ಯ ಅವರನ್ನು ಕ್ರಿಕೆಟ್ ಅಭಿಮಾನಿಗಳು, ಚಕ್ರವರ್ತಿ ಕ್ರಿಕೆಟ್ ಕ್ಲಬ್ ಸದಸ್ಯರು, ಹಿತೈಷಿಗಳು ಸನ್ಮಾನಿಸಿದರು. ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಜಂಟಿ ಕಾರ್ಯದರ್ಶಿ ಪಿ.ವಿ ಶೆಟ್ಟಿ, ಉದ್ಯಮಿ ವಿ. ಕೆ. ಮೋಹನ್, ಶ್ರೀನಾಥ ಉಡುಪ, ಸೋಮಶೇಖರ ಉಡುಪ, ಕುಂದಾಪುರ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ವಿ. ಶ್ರೀಧರ್ ಆಚಾರ್ಯ, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಗುತ್ತಿಗೆದಾರರಾದ ಕೆ.ಆರ್. ನಾಯ್ಕ್, ಉದ್ಯಮಿಗಳಾದ ಸುರೇಂದ್ರ ಶೆಟ್ಟಿ, ಆರ್. ಫೆಲಿಕ್ಸ್ ಡಿಸೋಜಾ, ಕರ್ನಿರೆ ವಿಶ್ವನಾಥ ಶೆಟ್ಟಿ, ಉಲ್ತೂರು ಮೋಹನದಾಸ ಶೆಟ್ಟಿ, ಜಗದೀಶ ಶೆಟ್ಟಿ ಅತಿಥಿಗಳಾಗಿದ್ದರು. ಗೌರವಾಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಸಂಚಾಲಕ ಅಭಿನಂದನ ಶೆಟ್ಟಿ, ಉಪಾಧ್ಯಕ್ಷರಾದ ಸತೀಶ್ ಕೋಟ್ಯಾನ್, ಮರತ್ತೂರು ಸುರೇಶ್ ಶೆಟ್ಟಿ, ಕಾರ್ಯದರ್ಶಿ ಪ್ರದೀಪ್ ವಾಜ್, ಖಜಾಂಚಿ ರಂಜಿತ್…

Read More

ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣವನ್ನು ಕೋಡಿಯ ಕೌನ್ಸಿಲರ್ ಪ್ರಭಾಕರ್ ಶೇರೆಗಾರ್ ರವರು ನೆರವೇರಿಸಿ, ’ಸ್ವರ್ಧೆಗಳಲ್ಲಿ ಸೋಲು ಗೆಲುವು ಸಹಜ ಗೆಲುವಿಗಾಗಿ ನಿರಂತರ ಶ್ರಮಿಸುವುದೇ ವಿದ್ಯಾರ್ಥಿಗಳ ಗುರಿಯಾಗಬೇಕೆಂದರು’. ಕ್ರೀಡಾಜ್ಯೋತಿಯನ್ನು ಉದ್ಘಾಟಿಸಿದ ಹಾಜಿ ಕೆ. ಮೊಹಿದ್ದೀನ್ ಬ್ಯಾರಿ ಸ್ಮಾರಕ ಅನುದಾನಿತ ಪ್ರೌಢ ಶಾಲೆಯ ಕಾರ್ಯದರ್ಶಿಯಾದಂತಹ ಅಬ್ದುಲ್ಲಾರವರು -’ಕ್ರೀಡೆ ಆಧುನಿಕ ಜಗತ್ತಿನಲ್ಲಿ ಬಹು ಪ್ರಾಮುಖ್ಯತೆಯನ್ನು ಹೊಂದುತ್ತಿದೆ. ಕ್ರೀಡೆಯು ನಮ್ಮ ಜೀವನೋಪಾಯಕ್ಕು ಅಗತ್ಯವಾದಂತೆ ಆರೋಗ್ಯದ ಸುಸ್ಥಿತಿಗೂ ಅತೀ ಮುಖ್ಯವಾಗಿದೆ ಎಂದರು’. ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ತೌಸಿಫ್ ಪ್ರತಿಜ್ಞಾ ವಿಧಿ ಬೋಧಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸರ್ವರಿಗೂ ಶುಭಕೋರಿದರು. ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಪ್ರೊ. ಚಂದ್ರಶೇಖರ್ ದೋಮ ಪ್ರಾಸ್ತಾವಿಕ ಮಾತನ್ನಾಡಿ ಸರ್ವರನ್ನು ಸ್ವಾಗತಿಸಿದರು. ಡಾ. ಕೃಷ್ಣರಾಜ ಕರಬ ಕಾರ್ಯಕ್ರಮ ನಿರ್ವಹಿಸಿ, ದೈಹಿಕ ಶಿಕ್ಷಕರಾದ ಶ್ರೀ ಇಲಿಯಾಸ್ ವಂದಿಸಿದರು.

Read More

ಕುಂದಾಪುರ: ಕುಂಭಾಶಿ ದೇವಸ್ಥಾನದ ಮುಖಮಂಟಪದ ಬಳಿ ರಾ.ಹೆ.66ರಲ್ಲಿ ಇಂದು ಸಂಜೆ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಬೀಜಾಡಿ ಗ್ರಾ.ಪಂ ಮಾಜಿ ಸದಸ್ಯ ವಾಸು (55) ಅವರ ಅಳಿಯ ಸಂದೇಶ್(25) ಗಾಯಾಳು ಕೊರವಡಿ ಕ್ರಾಸ್ ನಿಂದ ತೆಕ್ಕಟ್ಟೆ ಕಡೆಗೆ ತೆರಳುವವರಿದ್ದರು. ಡಿವೈಡರ್ ಬಳಿ ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಟ್ಯಾಂಕರ್ ಬೈಕ್ ಸವಾರರಿಗೆ ಗುದ್ದಿತ್ತು. ಅಪಘಾತದ ರಭಸಕ್ಕೆ ಬೈಕ್ ಸವಾರರ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿ ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More