ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ, ಫೆ.20: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತಾಲೂಕಿನ ಪಡುಗೋಪಾಡಿಯ ಗರ್ಭಿಣಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ ಪ್ರಶಾಂತ ಮೊಗವೀರ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಯು ಮನೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿದ್ದಕ್ಕಾಗಿ 448 ಸೆಕ್ಷನ್ನಲ್ಲಿ ಒಂದು ವರ್ಷ ಕಠಿಣ ಸಜೆ, ಅಪರಣ ಮಾಡುವ ಉದ್ದೇಶದಿಂದ ಮನೆಯೊಳಕ್ಕೆ ಪ್ರವೇಶಿಸಿದ್ದಕ್ಕಾಗಿ 4 ವರ್ಷ ಕಠಿಣ ಸಜೆ, ಕರಿಮಣಿ ಸರ ಅಪಹರಿಸಿದಕ್ಕಾಗಿ 10 ವರ್ಷ ಕಠಿಣ ಸಜೆ, ಅತ್ಯಾಚಾರ ಮಾಡಿದ್ದಕ್ಕಾಗಿ 10 ವರ್ಷ ಕಠಿಣ ಸಜೆ ಹಾಗೂ ಮಹಿಳೆಯ ಕೊಲೆ ಹಾಗೂ ಭ್ರೂಣ ಹತ್ಯೆ ಮಾಡಿರುವುದಕ್ಕಾಗಿ 302 ಸೆಕ್ಷನ್ ಅಡಿಯಲ್ಲಿ ಮರಣ ದಂಡಣೆ ಶಿಕ್ಷೆ ವಿಧಿಸಲಾಗಿದೆ. ಮೃತ ಮಹಿಳೆಯ ಕುಟುಂಬದ ಪರ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು. ಪ್ರಕರಣದ ವಿವರ: ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿಯ ಸಮುದ್ರ ಕಿನಾರೆ ಸಮೀಪದ ನಿವಾಸಿಯಾಗಿದ್ದ ಗರ್ಭಿಣಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಅನೇಕ ಮಂದಿ ಸಾಧಕರಿದ್ದು, ಬ್ಯಾಂಕಿಂಗ್, ಶೈಕ್ಷಣಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ನಮ್ಮ ಸಮಾಜದವರಿಗೆ ಉತ್ತಮ ಸ್ಥಾನಮಾನ ಗೌರವ ಇದೆ. ಈ ಗೌರವವನ್ನು ಕಾಪಾಡಿಕೊಂಡು ಹೋಗಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಹಿರಿಯರನ್ನು ಗೌರವಿಸುವುದು, ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದು ಕುಂದಾಪುರ ಪುರಸಭೆಯ ಮಾಜಿ ಅಧ್ಯಕ್ಷ ಕೆ. ಮೋಹನದಾಸ ಶೆಣೈ ಹೇಳಿದರು. ಅವರು ಗಂಗೊಳ್ಳಿಯ ವೇದಮೂರ್ತಿ ಕೃಷ್ಣಾನಂದ ವಿಶ್ವನಾಥ ಆಚಾರ್ಯ ಸ್ಮಾರಕ ದತ್ತಿನಿಧಿ ವತಿಯಿಂದ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದಿ.ಕೃಷ್ಣಾನಂದ ವಿಶ್ವನಾಥ ಆಚಾರ್ಯ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು. ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಅನೇಕ ಉತ್ತಮ ಕೆಲಸ ಕಾರ್ಯಗಳು ನಡೆದಿದ್ದು, ಅವರ ನೆನಪಿನಲ್ಲಿ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು. ಇದೇ ಸಂದರ್ಭ ವೇದಮೂರ್ತಿ ಜಗದೀಶ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಅಡಿಗರು ಕೇವಲ ಕನ್ನಡದ ಕವಿಯಲ್ಲ ವಿಶ್ವದ ಶ್ರೇಷ್ಟ ಕವಿಗಳಲ್ಲಿ ಒರ್ವರು. ಅವರ ಕಾವ್ಯದಲ್ಲಿ ಎಲ್ಲವೂ ಸರಳ. ಅವು ಆಳವಾದ ಬೌದ್ಧಿಕ ಅಂಶಗಳನ್ನು ಒಳಗೊಂಡಿದೆ. ಹಾಗೂ ಕಾವ್ಯಗಳಲ್ಲಿ ಅಗಾಧ ಧ್ವನಿ ಪೂರ್ಣತೆಯನ್ನು ಒಳಗೊಂಡಿದೆ ಎಂದು ಸಾಹಿತಿ ಬಿ.ವಿ. ಕೆದಿಲಾಯ ಬೆಂಗಳೂರು ಹೇಳಿದರು. ಕುಂದ ಅಧ್ಯಯನ ಕೇಂದ್ರ ಹಾಗೂ ಸುವಿಚಾರ ಬಳಗ ಟ್ರಸ್ಟ್ ಆಶ್ರಯದಲ್ಲಿ ಉಪ್ಪುಂದ ಶಂಕರ ಕಲಾಮಂದಿರದ ಸಮೃದ್ಧ ಸಭಾಭವನದಲ್ಲಿ ರವಿವಾರ ಜರುಗಿದ ಎಂ. ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಎಂ.ಗೋಪಾಲಕೃಷ್ಣ ಅಡಿಗ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಅಡಿಗರು ಕಾವ್ಯವನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡಿದ್ದರು. ಅವರ ಕಾವ್ಯದ ಸಮಗ್ರ ಮೌಲ್ಯಮಾಪನ ನಡೆಯಲಿಲ್ಲ. ಜಾಗತೀಕರಣಕ್ಕಿಂತ ಮೊದಲು ಆ ಕುರಿತು ದಾರ್ಶನಿಕ ಚಿಂತನೆ ನಡೆಸಿದ್ದ ಅಡಿಗರ ಕಾವ್ಯದ ಮೂಲದ್ರವ್ಯದ ಶೋಧನೆ ನಡೆಯಬೇಕು ಎಂದರು. ಹಿರಿಯ ಪತ್ರಕರ್ತ ಜಾನ್ ಡಿ‘ಸೋಜಾ ರಾಮಕೃಷ್ಣ ಶೇರುಗಾರ ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಪತ್ರಕರ್ತ ಜಾನ್ ಡಿ‘ಸೋಜಾ, ಜಾನಪದ ತಜ್ಞರಾದ ಪ್ರೋ.ಎ.ವಿ. ನಾವಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಭಿನ್ನವಾದ ಕಥಾ ಹಂದರದ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಉತ್ತಮ ಚಿತ್ರಕಥೆ, ನಿರ್ದೇಶನ ಹಾಗೂ ಛಾಯಾಗ್ರಹಣದಂತೆ ಸಿನೆಮಾದಲ್ಲಿ ಉತ್ತಮ ಸಂಗೀತ ಇದ್ದಾಗಲೇ ಅದು ಯಶಸ್ವಿ ಚಿತ್ರವಾಗಿ ಮೂಡಿಬರುತ್ತದೆ ಎಂದು ಕನ್ನಡದ ಖ್ಯಾತ ಗಾಯಕಿ ಬಿ. ಕೆ ಸುಮಿತ್ರ ಹೇಳಿದರು. ಅವರು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಆಯೋಜಿಸಿದ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನೆಮಾ ’ಕತ್ತಲೆಕೋಣೆ’ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಕತ್ತಲೆಕೋಣೆ ಚಲನಚಿತ್ರದ ಹಾಡಿನ ಸಾಹಿತ್ಯ ಹಾಗು ಸಂಗೀತ ಮನಮುಟ್ಟುವಂತಿದ್ದು, ಜನರ ಮನಸ್ಸನ್ನು ತಟ್ಟಲಿದೆ. ಸಂಗೀತದೊಂದಿಗೆ ಚಿತ್ರವೂ ಯಶಸ್ಸು ಕಾಣಲಿದೆ ಎಂದರು. ಮಲೆನಾಡಿನ ಮಡಿಲಲ್ಲಿರುವ ಶಿವಮೊಗ್ಗದಲ್ಲಿ ಯಾವುದಾದರೂ ಕಾರ್ಯಕ್ರಮ ಯಶಸ್ವಿಗೊಂಡರೇ ಅದು ಇಡಿ ರಾಜ್ಯದಲ್ಲೇ ಯಶಸ್ವಿಯಾಗುತ್ತದೆ ಎಂದು ನಿರ್ಧರಿಸಿಬಿಡಬಹುದು. ಇಲ್ಲಿನ ಜನರ ಕಲಾಸಕ್ತಿ ಅಂತಹದ್ದು ಎಂದ ಅವರು ಕತ್ತಲೆಕೋಣೆ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ಯಶಸ್ವಿಗೊಂಡಿದೆ. ಚಿತ್ರವೂ ಯಶಸ್ವಿಯಾಗುತ್ತದೆ ಎಂಬುದರಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನಮೆಚ್ಚಿದ ಶಿಕ್ಷಕರಾಗಿದ್ದ ಭೋಜು ಹಾಂಡರು ನಮ್ಮನ್ನಗಲಿ ವರುಷ ಸಂದರೂ ಅವರ ನೆನಪು ಇನ್ನೂ ಹಸಿರಾಗಿದೆ. ಇಂದು ಭೋಜು ಹಾಂಡರ ನೆನಪಲ್ಲೇ ನಾವು ಬಣ್ಣದ ನೆನಪು ಮಾಡಿಕೊಳ್ಳಬೇಕಾಗಿದೆ. ಭಾವಕ್ಕೆ ಬಣ್ಣದ ಲೇಪನ ಮಾಡಿದವರು ಭೋಜ ಹಾಂಡರು. ಈ ಬಣ್ಣದ ಬೆಸುಗೆ ನಿರಂತರವಾಗಿ ಮುನ್ನಡೆಯಲಿ ಎಂದು ಸಮುದಾಯ ಕುಂದಾಪುರ ಕಾರ್ಯದರ್ಶಿ, ಶಿಕ್ಷಕ ಸದಾನಂದ ಬೈಂದೂರು ನುಡಿದರು. ಜ್ಞಾನ ಯುವಜನ ಹೆಮ್ಮಾಡಿ ಇದರ ಆಶ್ರಯದಲ್ಲಿ ಪ್ರಾಥಮಿಕ ಶಾಲೆ ಹೆಮ್ಮಾಡಿ ಇದರ ಸಭಾಂಗಣದಲ್ಲಿ ನಡೆದ ಬಣ್ಣದ ಲೋಕದ ಗಾರುಡಿಗ ದಿವಂಗತ ಭೋಜು ಹಾಂಡರ ನೆನಪಿನ ಕಾರ್ಯಕ್ರಮ ಚಿತ್ರಕಲಾ ಸ್ಪರ್ಧೆ ’ಬಣ್ಣದ ಬೆಸುಗೆ-2018’ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭೋಜ ಹಾಂಡರು ವೃತ್ತಿಯನ್ನೇ ತನ್ನ ಪ್ರವೃತ್ತಿಯನ್ನಾಗಿಸಿಕೊಂಡವರು. ಅವರ ವೃತ್ತಿಯೇ ಅವರಿಗೆ ಇಂದು ಇಷ್ಟೊಂದು ಜನ ಗೌರವ ಕೊಡಲು ಸಾಧ್ಯವಾಯಿತು. ಒಂದೊಳ್ಳೆ ಶಿಕ್ಷಕನಿಗಿರಬೇಕಾದ ಎಲ್ಲಾ ಗುಣಗಳು ಭೋಜ ಹಾಂಡರಲ್ಲಿದ್ದವು. ಬಣ್ಣದ ಹುಡುಕಾಟದಲ್ಲಿ ಏನೋ ಒಂದು ಅವ್ಯಕ್ತವಾದ ಸಂತೋಷ ಅಡಗಿದೆ ಎನ್ನುವುದನ್ನು ತಮ್ಮ ಶಿಷ್ಯಂದಿರಿಗೆ ಮನವರಿಕೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಉಡುಪಿಗೆ ಆಗಮಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಮುಂದೆ ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ 10 ಪ್ರಶ್ನೆಗಳನ್ನಿಟ್ಟಿದ್ದು, ಅವುಗಳಿಗೆ ಉತ್ತರಿಸುವಂತೆ ಕೇಳಿಕೊಂಡಿದ್ದಾರೆ. ಉಡುಪಿ ಪ್ರೆಸ್ ಕ್ಲಬ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಮಿತ್ ಷಾ ಅವರ ಪುತ್ರ ಜೈ ಷಾ ಅಕ್ರಮ ಆಸ್ತಿಯ ಗಳಿಕೆ ತನಿಕೆ ಯಾವಾಗ, ನೀರವ್ ಮೋದಿ 11,000 ಕೋಟಿ ರೂ. ಭಷ್ಟಾಚಾರದ ಬಗ್ಗೆ ತಮ್ಮ ನಿಲುವೇನು, ವಿಜಯ ಮಲ್ಯನ 9,000 ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ನಿಲುವೇನು, ಲೋಕಸಭಾ ಚುನಾವಣೆ ವೇಳೆ ತಾವೇ ನೀಡಿದ ಆಶ್ವಾಸನೆಯಂತೆ 2 ಲಕ್ಷ ಯುವಕರಿಗೆ ಉದ್ಯೋಗ ನೀಡುವ ಭರವಸೆ ಏನಾಯಿತು, ಗಡಿ ಹಾಗೂ ಸೈನಿಕರ ಸಮಸ್ಯೆಯ ಬಗ್ಗೆ ನೀಡಿರುವ ಆಶ್ವಾಸನೆ ಏನಾಯಿತು, ಲೋಕಪಾಲ್ ಬಿಲ್ ಅನುಷ್ಠಾನ ಮಾಡುವಲ್ಲಿ ವಿಫಲವಾದದ್ದೇಕೆ, ಉಡುಪಿ ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗ್ಗೆ ನಿಲುವೇನು, ಮಂಗಳೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ ವಿಳಂಬಕ್ಕೆ ಏನು ಹೇಳುತ್ತೀರಿ, ಉಡುಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೋಣಿ ರಾಜ್ಯ ಹೆದ್ದಾರಿಯಲ್ಲಿ ಫೆ. 14ರ ತಡರಾತ್ರಿ ಬೈಕ್ಗೆ ಖಾಸಗಿ ಬಸ್ ಢಿಕ್ಕಿ ಹೊಡೆದ ದುರ್ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ (ಎಂಐಟಿ) ಪ್ರಥಮ ವರ್ಷದ ವಿದ್ಯಾರ್ಥಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ತೆಕ್ಕಟ್ಟೆ ಸಮೀಪದ ಕೆದೂರಿನ ಧರ್ಮರಾಜ್ ಮುದ ಲಿಯಾರ್ ಅವರ ಪುತ್ರ ಭರತ್ರಾಜ್ ಮುದಲಿಯಾರ್ (20) ಮೃತ ಯುವಕ. ಉಳೂ¤ರಿನಲ್ಲಿ ನಡೆದ ಯಕ್ಷಗಾನವನ್ನು ಮುಗಿಸಿ, ಜತೆಗಿದ್ದ ತನ್ನ ಸ್ನೇಹಿತನನ್ನು ಅಂಪಾರಿನ ಮನೆಗೆ ಬಿಟ್ಟು ವಾಪಸಾಗುತ್ತಿದ್ದ ವೇಳೆ ಫೆ. 14ರ ರಾತ್ರಿ 12.15 ಸುಮಾರಿಗೆ ಶಿವಮೊಗ್ಗ- ಕುಂದಾಪುರ ರಾಜ್ಯ ಹೆದ್ದಾರಿಯ ಕೋಣಿಯಲ್ಲಿ ಖಾಸಗಿ ಬಸ್ ಢಿಕ್ಕಿಯಾಗಿ ಈ ಅವಘಡ ಸಂಭವಿಸಿತ್ತು. ಗಂಭೀರ ಗಾಯಗೊಂಡ ಭರತ್ರಾಜ್ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆಗೆ ಗಂಭೀರ ಗಾಯಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಫೆ. 15ರ ರಾತ್ರಿ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಪಘಾತದ ರಭಸಕ್ಕೆ ಭರತ್ರಾಜ್ ಧರಿಸಿದ್ದ ಹೆಲ್ಮೆಟ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಚಿತ್ರರಂಗದಲ್ಲಿ ಕೌತುಕವನ್ನು ಹುಟ್ಟುಹಾಕಿರುವ ಬಹುನಿರೀಕ್ಷಿತ ‘ಕತ್ತಲೆಕೋಣೆ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಫೆ.18ರ ಸಂಜೆ 4:30ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಪತ್ರಕರ್ತ ಡಾ. ಶಶಿಧರ್ ಭಟ್, ಸಂಗೀತಕಾರರಾದ ಬಿ.ಕೆ ಸುಮಿತ್ರ, ವಿ. ಮನೋಹರ್, ಡಾ. ಜಯಲಕ್ಷ್ಮಿ ಆಡಿಯೋ ಬಿಡಗಡೆ ಮಾಡಲಿದ್ದಾರೆ. ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಟೀಸರ್ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕತ್ತಲೆಕೋಣೆ ಚಿತ್ರದ ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ, ನಿರ್ಮಾಪಕ ಪುರುಷೋತ್ತಮ್ ಅಮೀನ್, ಸಹ ನಿರ್ಮಾಪಕ ಎಂ.ಎನ್. ಶ್ರೀನಿವಾಸ್ ಮೂರ್ತಿ ಶಿವಮೊಗ್ಗ, ಕಾರ್ಯಕಾರಿ ನಿರ್ಮಾಪಕ ರಾಘವೇಂದ್ರ ಎ. ಶೆಟ್ಟಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ರಾಜೀವ ಕೊಠಾರಿ, ಉದ್ಯಮಿ ರಾಜೇಂದ್ರ ಶೆಟ್ಟಿ, ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಂಕರ್ ಸುಗದೆ, ವಕೀಲರಾದ ರವಿಕಿರಣ್ ಮುರ್ಡೇಶ್ವರ್, ಮಂಜುನಾಥ ಸಾಲಿಯಾನ್ ತ್ರಾಸಿ…
ಕುಂದಾಪ್ರ ಡಾಟ್ ಕಾಂ ವರದಿ. ಅಮಾಸೆಬೈಲು ಸಂಪೂರ್ಣ ಸೋಲಾರ್ ಅವಳಸಿಕೊಂಡ ರಾಜ್ಯದ ಮೊದಲ ಗ್ರಾಮವಾದರೆ, ಮರವಂತೆ ಗ್ರಾಮ ಪಂಚಾಯಿತಿ ಕಚೇರಿಗೆ ಪರಿಪೂರ್ಣ ಸೋಲಾರ್ ಅಳವಡಿಸಿಕೊಂಡ ರಾಜ್ಯದ ನಾಲ್ಕನೇ ಹಾಗೂ ದ.ಕ, ಉಡುಪಿ ಜಿಲ್ಲೆ ಪ್ರಥಮ ಗ್ರಾಮ ಪಂಚಾಯಿತಿ! ದಕ ಸಂಸದ ನಳಿನ್ ಕುಮಾರ್ಕಟೀಲ್ ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿರುವ ಬೆಳ್ಪ ಗ್ರಾಮ ಪಂಚಾಯಿತಿ ಸಂಪೂರ್ಣ ಸೋಲಾರ್ ಅಳವಡಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮರವಂತೆ ಗ್ರಾಮ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕಚೇರಿಗೆ ಸಂಪೂರ್ಣ ಸೋಲಾರ್ ಅಳವಡಿಸಿಕೊಂಡಿದೆ. ಸೋಲಾರ್ ಹೊಷ ವರ್ಷದ ಹೊಸ ಕೊಡುಗೆ. ಮರವಂತೆಗ್ರಾಮ ಪಂಚಾಯಿತಿದಾನಿ ಡಾ.ದಯಾನಂದ ಪೈ ಕೊಡುಗೆ ಮೂಲಕ ಕಚೇರಿ, ಹಾಗೂ ಸುವರ್ಣ ಸೌಧ ಸಭಾಭವನನಿರ್ಮಿಸಿಕೊಂಡಿದೆ.ಕಟ್ಟಡಮಾಡಿನ ಮೇಲೆ ಸೋಲಾರ್ ಪ್ಲೇಟ್ಗಳ ಅಳವಡಿಸಿಕೊಂಡಿದೆ.ಸೋಲಾರ್ರೂಪ್ಟಾಪ್ಹೆಸರಲ್ಲಿ೧೦ ವೋಲ್ಟ್ ಕೆವಿ ನಾಲ್ಕು ಪ್ಲೇಟ್ ಅಳವಡಿಸಿ ೨೫೦ ವ್ಯಾಟ್ಪೀರ್ (ಡಬ್ಲ್ಯೂಪಿ) ಶಕ್ತಿ ಪಡೆಯಲಾಗುತ್ತದೆ.ಕಚೇರಿ ಫ್ಯಾನ್, ಲೈಟ್ಕಂಪ್ಯೂಟರ್ ಸಿಸ್ಟಮ್ ಎಲ್ಲವೂ ಸೋಲಾರ್ ಮೂಲಕ ನಡೆಯುತ್ತದೆ.ಕಚೇರಿಗೆಕತ್ತಲೆಂಬುದೇಇಲ್ಲಾ! ಮರವಂತೆಗ್ರಾಮ ಪಂಚಾಯಿತಿ ೧೪ನೇ ಹಣಕಾಸುಯೋಜನೆಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿದ್ದು, ಅದಕ್ಕೆ ೧,೪,೮೦೦ ಲಕ್ಷಖರ್ಚು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಪಂ ಆಸ್ತಿ ಪರಬಾರೆ.. ಇಒ ಕರ್ತವ್ಯ ಲೋಪ.. ಆಡಳಿತ ಪಕ್ಷ ಸದಸ್ಯರ ನಡುವೆಯೇ ಪರ,ವಿರೋಧ. ಅಜೆಂಡದಲ್ಲಿ ಕಾಣೆಯಾದ ಲೋಕಾಯುಕ್ತ ತನಿಖೆ ಸರ್ವಾನುಮತ ನಿರ್ಣಯ. ಮಂಡಿಸಿದ ನಿರ್ಣಯ ಅಂಗೀಕರಿಸದಿದ್ದರೆ ಬಾವಿಗಿಳಿದ ಪ್ರತಿಭಟನೆ, ಒಂದೇ ವಿಷಯ ಹಿಡಿದುಕೊಂಡ ಬೇರೆ ವಿಷಯ ಚರ್ಚೆಗೆ ಅವಕಾಶ ಕೊಡದಿದ್ದರೆ ಪ್ರತಭಟನೆ ಮಾಡುವವರ ವಿರುದ್ಧವೇ ಪ್ರತಿಭಟನೆ ಎಚ್ಚರಿಕೆ! ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಂಡುಬಂದ ಪ್ರಮುಖ ವಿಷಯ. ಕಳೆದ ಸಾಮಾನ್ಯ ಸಭೆಯಲ್ಲಿ ಹೊಟೇಲ್ ಒಂದರ ಬಾಡಿಗೆ ಹಾಗೂ ಜಾಗದ ಒತ್ತುವರಿ ಬಗ್ಗೆ ಲೋಕಾಯುಕ್ತ ತನಿಖೆಗೆ ಸರ್ವಾನುಮತದ ನಿರ್ಣಯ ಮಾಡಲಾಗಿತ್ತು. ಆದರೆ ಅಜೆಂಡಾದಲ್ಲಿ ವಿಷಯವೇ ಇಲ್ಲ. ತಾಪಂ ಆಸ್ತಿ ಪರಬಾರೆ ಮಾಡಲು ಹೊಟೇಲ್ ಜೊತೆ ಅಧಿಕಾರಿಗಳು ಶ್ಯಾಮೀಲಾಗಿದ್ದಾರೆ. ಒತ್ತುವರಿ ಜಾಗ ಹಿಂದಕ್ಕೆ ಪಡೆಯಬೇಕು. ಹೊಟೇಲ್ ಬಾಡಿಗೆ ಸ್ಥಳ ಒತ್ತುವರಿ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಒತ್ತಾಯಿಸಿದರು. ಹೊಟೇಲ್ ಜಾಗ ಒತ್ತುವರಿ…
