ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಒಬ್ಬರು ಮಾತ್ರ ಅಂಬೆಗಾಲಿಟ್ಟು ನಡೆಯಬಹುದಾದ ಹಾದಿ, ಅದರ ಅಂತ್ಯದಲ್ಲೇ ಒಂದಿಷ್ಟು ಮಂದಿ ಕುಳಿತುಕೊಳ್ಳಬಹುದಾದ ಜಾಗ. ಅಲ್ಲಿಂದ ಬಲಕ್ಕೆ ಸಾಗಿದರೆ ಎದಿರುಗೊಳ್ಳುವ ಶಿವಲಿಂಗ. ಶಿವರಾತ್ರಿಯಂದು ಗುಹಾಂತರನಾದ ಈಶ್ವರನ್ನು ಕಾಣುವ ಕೊಡಪಾಡಿಯ ಗುಹೇಶ್ವರ ದೇವಾಲಯದಲ್ಲೊಂದು ಅಪೂರ್ವ ಅವಕಾಶವಿದೆ. ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. ೨೦ ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ. ಕುಂದಾಪ್ರ ಡಾಟ್ ಕಾಂ ವರದಿ ದೇವರ ದರ್ಶನಕ್ಕೆ ಸಹಸ್ರ ಜನ: ಶಿವರಾತ್ರಿ ದಿನದಂದು ಮಾತ್ರ ಗುಹೆಯೊಳಗಿನ ಶ್ರೀ ಗುಹೇಶ್ವರನ ದರ್ಶನ ಭಾಗ್ಯವಿರುವುದರಿಂದ ಕರಾವಳಿ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಭೇದ ಭಾವವಿಲ್ಲದೇ ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿಯೇ ಗುಹೆಯೊಳಕ್ಕೆ ಪ್ರವೇಶಿಸಿ ದೇವರಿಗೆ ನಮಿಸುತ್ತಾರೆ. ವರ್ಷಕ್ಕೊಮ್ಮೆ ಒದಗಿ ಬರುವ ಅವಕಾಶದಿಂದ ಪುನೀತರಾಗುತ್ತಾರೆ. ಕುಂದಾಪ್ರ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಲೇಖನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಜರುತ್ತಲಿದೆ. ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಮಾರ್ಚ್ 7ರಂದು ಬೆಳಿಗ್ಗೆ 8 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮಾರ್ಚ್ 8ರಂದು ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಯಕ್ಷಗಾನ ಬಯಲಾಟ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪ್ರ ಡಾಟ್ ಕಾಂ ಲೇಖನ ಹಲವು ಗಣ್ಯ ಮಹನೀಯರು ಮಹಾಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಅಣ್ಣಪ್ಪ ಶೆಟ್ಟಿ ಯಡ್ತರೆ, ಡಾ. ಮಿಥುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ ಮೊದಲಾದವರು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಬೈಂದೂರು ಪೋಲಿಸರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಮುದ್ರವೇ ದೇವರು ಎಂಬ ನಂಬಿಕೆ ಹಾಗೂ ವಿಶ್ವಾಸದೊಂದಿಗೆ ನಿತ್ಯ ಹೋರಾಟ ನಡೆಸುವ ಮೀನುಗಾರರ ಅಗತ್ಯತೆಗಳನ್ನು ಪೂರೈಸುವುದು ಸರಕಾರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಮೀನುಗಾರಿಕೆಗೆ ತೊಡಕಾಗುತ್ತಿರವ ಸೀಮೆಎಣ್ಣೆ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಸಂಸದರ ಮೂಲಕ ಕೇಂದ್ರ ಸರಕಾರದ ಗಮನಕ್ಕೆ ತರಲಾಗುವುದು ಎಂದು ಶಿಕಾರಿಪುರ ಕ್ಷೇತ್ರದ ಶಾಸಕ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಬಿ. ವೈ ರಾಘವೇಂದ್ರ ಹೇಳಿದರು. ಅವರು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಕೊಡೇರಿ ಬಂದರು ಬಳಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಮೀನುಗಾರರ ಧ್ವನಿಯಾಗಿ, ಶಕ್ತಿಯಾಗಿ ೨೫ ವರ್ಷಗಳನ್ನು ಪೂರೈಸಿದೆ. ಸಂಘದ ಕಾರ್ಯವ್ಯಾಪ್ತಿಯನ್ನು ಒಂದು ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸದೇ ರಾಜ್ಯದ ಮೀನುಗಾರರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದವರು ಶ್ಲಾಫಿಸಿದರು. ಜೀವರಕ್ಷಕ ಪ್ರಶಸ್ತಿ ವಿತರಿಸಿದ ಬೈಂದೂರು ಕ್ಷೇತ್ರದ ಶಾಸಕ, ಕೆಎಸ್ಆರ್ಟಿಸಿ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಕಿಂಡರ್ ಗಾರ್ಟನ್ನಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಯ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿ ಸುನೀತ ಉದಯ ಕುಮಾರ ಪುಟಾಣಿಗಳಗೆ ಬಹುಮಾನ ವಿತರಿಸಿ ಮಾತನಾಡಿ ನಿಜಕ್ಕೂ ಇಂತಹ ಕಾರ್ಯಕ್ರಮ ಪ್ರಶಂಸನೀಯ ಈ ಎಳೆವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು, ಆ ಮೂಲಕ ತಮ್ಮ ಪ್ರತಿಭೆಯನ್ನು ಹೊರಸೂಸಿ ಬಹುಮಾನ ಪಡೆಯುತ್ತಿರುವುದರ ಹಿಂದೆ ಶಾಲಾ ಶಿಕ್ಷಕರ ಮತ್ತು ಹೆತ್ತವರ ಪರಿಶ್ರಮ ಕಾಣಬಹುದು. ಶಾಲೆ ಎಂದರೆ ಕೇವಲ ಪಠ್ಯವನ್ನು ಬೋಧಿಸುವುದಲ್ಲ. ಜೊತೆಜೊತೆಗೆ ಮಗುವಿನ ಸರ್ವಾಂಗೀಣ ಅಭಿವೃದ್ದಿಗೆ ಬೇಕಾದ ಪಠ್ಯೇತರ ಚಟುವಟಿಕೆಗಳನ್ನು ಪ್ರತಿ ಹಂತದಲ್ಲೂ ಆಯೋಜಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಗುರುಕುಲ ಶಾಲೆ ಮಕ್ಕಳ ಬೆಳವಣಿಗೆಗೆ ಬೇಕಾದ ಎಲ್ಲಾ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ಸಹಕಾರಿಯಾಗುತ್ತಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ. ವಿಜೇತರಿಗೆ ಬಹುಮಾನ ನೀಡುವುದರ ಜೊತೆಗೆ ಭಾಗವಹಿಸಿದ ಪ್ರತಿ ಮಗುವನ್ನು ಗುರುತಿಸಿ ಬಹುಮಾನ ನೀಡುತ್ತಿರುವುದು ಶ್ಲಾಘನೀಯವಾದುದು ಎಂದು ತಮ್ಮ ಅತಿಥಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ವಲಯ ನಾಡದೋಣಿ ಮೀನುಗಾರರ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಬೃಹತ್ ಸಮಾವೇಶ ಫೆ. 10 ರಂದು ಬೆಳಗ್ಗೆ 10 ಗಂಟೆಗೆ ಉಪ್ಪುಂದ ಕೊಡೇರಿ ಬಂದರು ಬಳಿ ನಡೆಯಲಿದೆ ಎಂದು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಶೋಮಶೇಖರ ಕೆ. ಎಂ ತಿಳಿಸಿದ್ದಾರೆ. ಉಪ್ಪುಂದದ ನಾಡದೋಣಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮವನ್ನು ಸಂಸದ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಸೋಮಶೇಖರ ಕೆ.ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಪರಿಹಾರ ನಿಧಿ ಯೋಜನೆಯನ್ನು, ಮೀನುಗಾರಿಕಾ ಸಚಿವ ಪ್ರಮೋದ ಮಧ್ವರಾಜ್ ಮೀನುಗಾರಿಕಾ ಮಾಹಿತಿ ಕೇಂದ್ರವನ್ನು, ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ. ಖಾದರ ಸಂಘದ ಸದಸ್ಯರ ವೈಬ್ಸೈಟ್ನ್ನು ಅನಾವರಣಗೊಳಿಸಲಿದ್ದು, ಶಾಸಕ ಕೆ. ಗೋಪಾಲ ಪೂಜಾರಿ ಜೀವರಕ್ಷಕ ಪ್ರಶಸ್ತಿ ವಿತರಿಸಲಿದ್ದಾರೆ. ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ಕುಮಾರ ಶೆಟ್ಟಿ, ಆಸ್ಕರ ಫೆರ್ನಾಂಡಿಸ್, ಶಾಸಕರಾದ ಹಾಲಾಡಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತೊಂಬತ್ತರ ದಶಕದಲ್ಲಿ ಕುಂದಾಪುರದ ನಾಗರಿಕರು ಮೊದಲ ಭಾರಿಗೆ ಕಂಡಲ್ಲಿ ಗುಂಡು, ಕರ್ಪ್ಯೂನಂತಹ ಸನ್ನಿವೇಶವನ್ನು ಎದುರಿಸಲು ಕಾರಣವಾಗಿದ್ದ ಭಿನ್ನಕೋಮಿನ ಜೋಡಿಗಳ ಪ್ರೇಮ ಪ್ರಕರಣದ ಪ್ರೀಯತಮ, ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬಗೆಯ ನಿವಾಸಿ ಭಾಸ್ಕರ್ ಕೊಠಾರಿ (47) ಇಂದು ಆತ್ಮಹತ್ಯೆಗೆ ಶರಣಾದ ಖೇದಕರ ಘಟನೆ ನಡೆದಿದೆ. ಮೃತ ಭಾಸ್ಕರ್ ಕೊಠಾರಿ ಅವರ ಸಹೋದರನ ಮನೆಯ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದ ಅವರು ಬಳಿಕ ನಾಪತ್ತೆಯಾಗಿದ್ದರು. ಬಳಿಕ ಮನೆಯ ಬಳಿ ಹುಡುಕಾಟ ನಡೆಸುತ್ತಿದ್ದಾಗ, ಬಾವಿಯ ನೀರೆತ್ತುವ ಪೈಪ್ನ ಹಗ್ಗ ತುಂಡಾಗಿರುವುದನ್ನು ಗಮನಿಸಿ ಅನುಮಾನಗೊಂಡು ಪರಿಶೀಲಿಸಿದಾಗ ಭಾಸ್ಕರ್ ಕೊಠಾರಿಯ ಶವ ಬಾವಿಯೊಳಕ್ಕೆ ಪತ್ತೆಯಾಗಿತ್ತು. ವಿಪರಿತ ಕುಡಿತದ ಚಟ ಹೊಂದಿದ್ದ ಅವರು ಇತ್ತಿಚಿಗಷ್ಟೇ ಕುಡಿತ ನಿಲ್ಲಿಸಿದ್ದರು. ಆ ಕಾರಣಕ್ಕೆ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಶಂಕಿಸಲಾಗಿದೆ. ತಮ್ಮನ ಮನೆಯ ಗೃಹ ಪ್ರವೇಶದ ಬಳಿಕ ಮೃತರ ಮಡದಿ ಹಾಗೂ ಕುಟುಂಬಿಕರಿಗೆ ವಿಷಯ ತಿಳಿಸಲಾಗಿತ್ತು. ಶಂಕರನಾರಾಯಣ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಸುದ್ದಿಯಾಗಿದ್ದ…
ಕುಂದಾಪ್ರ ಡಾಟ್ ಕಾಂ ಲೇಖನ. ಮೊರೆತು ನಿಲುವೆ ಏಕ ಮಾವ ಅಳಿಯನಲ್ಲವೇ.. ಉರಿವುದೊಂದೇ ದೀಪವಾದರೂ.. ಎರಡಾಗುತ..ಮೂರಾಗುತ.. ಕರೆಸಿ ಕೊಲುವೆ ಏಕೆ ಮಾವ ಅಳಿಯನಲ್ಲವೇ ಎಂಬ ಪದ್ಯಗಳಿಗೆ ಹಾಲುಗಲ್ಲದ ಮಕ್ಕಳ ನೃತ್ಯಾಭಿನಯಕ್ಕೆ ತಲೆ ದೂಗದವರಿಲ್ಲ.. ಕಂಡೆನೊಂದು ಕನಸಿನ ಪದ್ಯಕ್ಕೆ ಕಂಸ ವೇಷಧಾರಿ ಅಭಿನಯ ಅಲ್ಲಲ್ಲಿ ಚಿಟ್ಟಾಣಿ ನೆನಪು ಮೂಡಿಸಿದ್ದು ಸುಳ್ಳಲ್ಲ.. ಧೂರ್ವಾಸ ಮುನಿಯ ಶಾಪಕ್ಕೆ ಒಳಗಾಗುವ ಗಂಧರ್ವನ ಪಾತ್ರ ನಿರ್ವಹಸಿದ ಪುಣಾಣಿ ಬಾಲಕಿಯ ನೃತ್ಯ ಕೌಶಲ್ಯ ತರಬೇತುದಾರರ ಪರಿಶ್ರಮಕ್ಕೆ ಸಿಕ್ಕ ಫಲ. ರಾಜಾರಜಕ, ಆಸ್ತಿ ಪಾಸ್ತಿ ಹೀಗೆ ಪಾತ್ರಗಳಲ್ಲಿ ಕಾಣಿಸಿಕೊಂಡವರೆಲ್ಲಾ.. ನಾಲ್ಕನೇ ತರಗತಿ ಒಳಗಿನ ಮಕ್ಕಳು..! ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಾಗಿ ರಂಗದಲ್ಲಿ ಮೂರು ಗಂಟೆ ಕಾಲ ವೀಕ್ಷಕರ ಸೆರೆ ಹಿಡಿದು ಕೂರಿಸಿದ ಮಕ್ಕಳ ಯಕ್ಷಗಾನ ಕಸರತ್ತು.. ಯಾಕ್ಷಗಾನಕ್ಕೆ ಉಳಿಗಾಲವಿಲ್ಲ ಎಂದು ಬೊಬ್ಬೆಯಿಡುವವರಿಗೆ ಉತ್ತರವೂ ಹೌದು. ೩೦ಕ್ಕೂ ಮಿಕ್ಕ ಮಕ್ಕಳ ಸಿದ್ದ ಪಡಿಸಿ, ಮಕ್ಕಳ ರಂಗದಲ್ಲಿ ತರುವ ಕೆಲಸ ಸುಲಭ ಸಾಧ್ಯವೂ ಅಲ್ಲ. ಎಲ್ಲವೂ ಸಾಧ್ಯವಾಗಿದ್ದು ಮರವಂತೆ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಕಳೆದ ವಾರ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ವಿಶ್ವ ಯೋಗಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೂರನೆಯ ಸ್ಥಾನ ಗಳಿಸಿ ಕಂಚಿನ ಪದಕದಿಂದ ಪುರಸ್ಕೃತರಾಗಿರುವ ಕುಶ ಪೂಜಾರಿ ಶುಕ್ರವಾರ ಮರವಂತೆಗೆ ಬರುತ್ತಿದ್ದಂತೆ ಅವರಿಗೆ ಅದ್ದೂರಿಯ ಸ್ವಾಗತ ಕೋರಿ ಅಭಿನಂದಿಸಲಾಯಿತು. ಗ್ರಾಮದ ದಕ್ಷಿಣ ಗಡಿಯಾದ ಮಾರಸ್ವಾಮಿಯಲ್ಲಿ ಕಾದಿದ್ದ ನಾಗರಿಕರ ಪರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಹಾರಾರ್ಪಣೆಗೈದರು. ಬಳಿಕ ಅವರನ್ನು ತೆರೆದ ವಾಹನದಲ್ಲಿ ಡಿಜೆ ಸಂಗೀತ, ಸಿಡಿಮದ್ದಿನ ಸದ್ದಿನೊಂದಿಗೆ ಊರಿನ ಪ್ರಮುಖ ಮಾರ್ಗಗಳಲ್ಲಿ ವಾಹನಗಳ ಮೆರವಣಿಗೆಯ ಮೂಲಕ ಅವರು ಪ್ರಾಥಮಿಕ ಶಿಕ್ಷಣ ಮತ್ತು ಯೋಗದ ಆರಂಭಿಕ ಪಾಠ ಕಲಿತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನಾ ಮಂಟಪಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಜಯಘೋಷದ ನಡುವೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಜನಾರ್ದನ ಅವರನ್ನು ಸನ್ಮಾನಿಸಿದರು. ಮಾತನಾಡಿದ ಅವರು ಎಳವೆಯಲ್ಲೇ ಯೋಗದತ್ತ ಆಕರ್ಷಿತರಾದ ಕುಶ ತಮ್ಮ ಶಿಕ್ಷಣದುದ್ದಕ್ಕೂ ಸತತ ಪರಿಶ್ರಮದಿಂದ ಅದರಲ್ಲಿ ಹಂತಹಂತವಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಆಶ್ರಯದಲ್ಲಿ ಕೇರಳದ ತ್ರಿಶೂರ್ನಲ್ಲಿ ಜರಗಿದ ೧೩ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಎಂಡ್ ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆ ಮತ್ತು ೯ನೇ ರಾಷ್ಟೀಯ ಮಟ್ಟದ ಸ್ಪೀಡ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಪ್ರಸನ್ನಾ ಪೈ ಅವರು ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಜ್ಯ ಮಟ್ಟದ ಅಬಾಕಸ್ ಎಂಡ್ ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಈಕೆ ಗಂಗೊಳ್ಳಿಯ ಪತ್ರಕರ್ತ ಬಿ.ರಾಘವೇಂದ್ರ ಪೈ ಮತ್ತು ರಾಧಿಕಾ ಆರ್.ಪೈ ದಂಪತಿ ಪುತ್ರಿ. ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಕುಂದಾಪುರ ವಿಭಾಗದ ಪ್ರಸನ್ನ ಕೆ.ಬಿ. ಮತ್ತು ಮಹಾಲಕ್ಷ್ಮೀ ಪ್ರಸನ್ನ ತರಬೇತಿ ನೀಡಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ತುಳು ಸಂಸ್ಕೃತಿಯು ಕೃಷಿ ಸಂಸ್ಕೃತಿಯ ಭಾಗವಾಗಿದೆ. ಯುವ ಜನತೆಗೆ ತುಳು ಸಂಸ್ಕೃತಿಯನ್ನು ಕಲಿಸುವುದು ದೊಡ್ಡ ಸವಾಲಾಗಿದೆ. ತುಳು ಭಾಷೆಯನ್ನು ಸಂವಿಧಾನದ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಇಲ್ಲಿನ ರಾಜಕಾರಣಿಗಳ ಅನಾಧರವೇ ಇದಕ್ಕೆ ಕಾರಣವಾಗಿದೆ. ತುಳುವಿನ ಉಳಿವಿಗೆ ಇಚ್ಛಾಶಕ್ತಿ ಬರಲಿ ಎಂದು ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟರು. ಶ್ರೀ ವಿದ್ಯಾಸಂಸ್ಥೆ, ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಜಂಟಿ ಸಹಯೋಗದಲ್ಲಿ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಯಲು ರಂಗಮಂದಿರದ ಪಳಕಳ ಸೀತಾರಾಮ ಭಟ್ ವೇದಿಕೆಯಲ್ಲಿ ಬುಧವಾರ ರಾತ್ರಿ ನಡೆದ ೯ನೇ ವರ್ಷದ ಅಖಿಲ ಕರ್ನಾಟಕ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಬೈ ಉದ್ಯಮಿ ಕಡಂದಲೆ ಸುರೇಶ್ ಭಂಡಾರಿ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಸಂಪತ್ತನ್ನು ಸತ್ಕಾರ್ಯಗಳಿಗೆ ವಿನಿಯೋಗಿಸಬೇಕು. ಸಾಹಿತ್ಯ ಸಂಸ್ಕೃತಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಅವುಗಳ ಬೆಳವಣಿಗೆಗೆ…
