Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಶ್ರೀರಾಮನ ಜೀವನಾದರ್ಶ ಸಮಾಜಕ್ಕೆ ಎಂದಿಗೂ ಅನುಕರಣೀಯ: ಶ್ರೀ ಗಂಗಾಧರೇಂದ್ರ ಸ್ವಾಮೀಜಿ
    ಊರ್ಮನೆ ಸಮಾಚಾರ

    ಶ್ರೀರಾಮನ ಜೀವನಾದರ್ಶ ಸಮಾಜಕ್ಕೆ ಎಂದಿಗೂ ಅನುಕರಣೀಯ: ಶ್ರೀ ಗಂಗಾಧರೇಂದ್ರ ಸ್ವಾಮೀಜಿ

    Updated:28/06/2018No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಬೈಂದೂರು: ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ವೇದಮೂರ್ತಿ ಕಟ್ಟೆ ಶಂಕರ ಭಟ್ ಹಾಗೂ ಕುಲ ಪುರೋಹಿತ ಸುಬ್ರಹ್ಮಣ್ಯ ಭಟ್ ಬಾಡ ಇವರ ನೇತೃತ್ವದಲ್ಲಿ ನಡೆಯಿತು.

    Click Here

    Call us

    Click Here

    ರಾಮಕ್ಷತ್ರಿಯ ಸಮಾಜದ 13ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಮಠಾಧೀಶ ಶ್ರೀ ಗಂಗಾಧರೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ವಿವಾಹ ಹಾಗೂ ಜೀವನ ಆದರ್ಶಮಯವಾಗಿದ್ದು, ಇತರರಿಗೆ ಅನುಕರಣೀಯವಾಗಿದೆ. ಪತಿ-ಪತ್ನಿಯರ ಪರಸ್ಪರ ನಿಷ್ಠೆ ಮತ್ತು ಅನ್ಯೊನತೆ ಸುಖಮಯ ಜೀವನದ ಮೊದಲ ಸೂತ್ರ ಎಂದು ಹೇಳಿದರು.

    ಭಗವಂತನ ಕಲ್ಯಾಣೋತ್ಸದಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದರೂ, ಸಮಾಜ ಸುಭೀಕ್ಷೆಯಾಗುತ್ತದೆ. ಅದರಿಂದ ನಾವು ನಮ್ಮ ಜೀವನದಲ್ಲಿ ಆದರ್ಶ, ತತ್ವ ಹಾಗೂ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇದೊಂದು ಪುಣ್ಯದ ಕಾರ್ಯವಾಗಿದ್ದರಿಂದ ಮಂಗಳಕಾರ್ಯ, ಶುಭವಿವಾಹವೆಂದು ಸಂಭೋಧಿಸುತ್ತಾರೆ. ವಿವಾಹವೆಂಬುದು ಧರ್ಮ, ಅರ್ಥ, ಕಾಮಗಳನ್ನು ಅತಿಕ್ರಮಿಸಿ ಹೊಗುವುದಿಲ್ಲ ಎಂಬ ನೆಲೆಯಲ್ಲಿ ಸಂದೇಶ ಸಾರುವ ಪವಿತ್ರಬಂಧನವಾಗಿದೆ. ಆದರೆ ಇತ್ತೀಚಿಗೆ ಸಮಸ್ತ ಹಿಂದು ಸಮಾಜ ನಾಲ್ಕು ಅಂಶಗಳಲ್ಲಿ ತಪ್ಪು ಹೆಜ್ಜೆ ಇಡುತ್ತಿದೆ. ಸೂಕ್ತ ವಯಸ್ಸಿನಲ್ಲಿ ವಿವಾಹ ಆಗದಿರುವುದು, ವಿಚ್ಛೇದನ ಹೆಚ್ಚುತ್ತಿರುವುದು, ಭ್ರೂಣಹತ್ಯೆಯಂತಹ ಮಹಾಪಾಪದ ಕೆಲಸಕ್ಕೆ ಮನ ಮಾಡುತ್ತಿರುವುದು ಹಾಗೂ ಸಂತತಿ ನಿಯಂತ್ರಣಕ್ಕೆ ಆದ್ಯತೆ ನೀಡುತ್ತಿರುವುದು ಧರ್ಮವಲ್ಲ. ಪ್ರಕೃತಿ ಸಹಜ ಸೃಷ್ಠಿಯಲ್ಲಿ ತಂದೆ, ತಾಯಿ, ಮಗುವಿನ ಪವಿತ್ರ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬಾರದು ಎಂದರು.

    ಸಮರ್ಪಣಾ ಮನೋಭಾವದಿಂದ ಕಾರ್ಯತತ್ವರಾಗುವುದು ಧಾರ್ಮಿಕ ಮನೋಭಾವದ ಮೊದಲ ಹೆಜ್ಜೆಯಾಗಿದೆ. ಭಗವದ್ಗೀತೆ ವೇದಗಳ ಸಾರವಾಗಿದ್ದು ದಿನನಿತ್ಯದ ಸಮಸ್ಯೆಗಳಿಗೂ ಸಮಾಧಾನ ಸ್ಫುರಿಸುತ್ತದೆ. ಒಬ್ಬೊಬ್ಬ ವ್ಯಕ್ತಿಗೆ ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯಲ್ಲಿ ದಾರಿ ದೀಪವಾಗಬಲ್ಲುದು. ರಾಮತಾರಕ ಮಂತ್ರ, ಭಗವದ್ಗೀತೆ ಪಠಣ ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಿರಬೇಕು ಎಂದರು.

    ವಿಶ್ವ ರಾಮಕ್ಷತ್ರೀಯ ಸಂಘದ ಅಧ್ಯಕ್ಷ, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಅಧ್ಯಕ್ಷತೆವಹಿಸಿದ್ದರು. ಬೈಂದೂರು ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಬಿ. ಗೋಪಾಲ ನಾಯಕ್, ಕುಂದಾಪುರ ರಕ್ಷಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಚಂದ್ರಶೇಖರ ಕೆ. ಕಲ್ಪತರು, ಮಾತೃಮಂಡಲಿ ಅಧ್ಯಕ್ಷೆ ಶಾಲಿನಿ ನಾಗೇಶ್, ಕಟ್ಟೆ ಶಂಕರ ಭಟ್, ಸೇವಾಕರ್ತರಾದ ಭಾಗೀರಥಿ ಮತ್ತು ಹೆಚ್. ಆರ್. ಶಶಿಧರ ನಾಯ್ಕ್ ಹಾಗೂ ನಾಗರಾಜ ಮತ್ತು ಅನುಪಮಾ ಉಪಸ್ಥಿತರಿದ್ದರು.

    Click here

    Click here

    Click here

    Call us

    Call us

    ಭಗವದ್ಗೀತಾ ಅಭಿಯಾನ ಜಿಲ್ಲಾ ಸಂಚಾಲಕ ಬಿಜೂರು ರಾಮಕೃಷ್ಣ ಶೇರುಗಾರ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ಗಣಪತಿ ಹೋಬಳಿದಾರ್ ನಿರೂಪಿಸಿ, ಗಣಪತಿ ಎಸ್. ವಂದಿಸಿದರು.

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ

    20/12/2025

    ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ

    20/12/2025

    ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ

    20/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಕೊರಗ ಕಾಲೋನಿಯ 8 ಹೊಸ ಮನೆ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ಚೆಕ್ ವಿತರಣೆ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂಬಲಪಾಡಿ ನಾರಾಯಣಾಚಾರ್ಯ ಅವರಿಗೆ ಶ್ರದ್ಧಾಂಜಲಿ ಸಭೆ
    • ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ದೇಶದ ಭದ್ರತೆಗೆ ಅಪಾಯ: ಕೆ. ವಿಕಾಸ್‌ ಹೆಗ್ಡೆ
    • ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆಯ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ
    • ಕುಂದಾಪುರದ ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.