ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವ್ಯವಸ್ಥೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ಕಾವ್ಯ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ವಿನಃ ಕಾರಣ ಸಂಸ್ಥೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ಕೊಲೆ ಪ್ರಕರಣ ಹಿಂದೆ ಎಂದಿಗೂ ನಡೆದಿಲ್ಲ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಮಾಧ್ಯಮ ಅಥವಾ ವೈಯಕ್ತಿಕವಾಗಿ ಯಾರೇ ತನಿಖೆ ಮುಂದಾದರೂ ಯಾವುದೇ ತನಿಖೆ ನಾವು ಸಿದ್ಧರಿದ್ದೇವೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರತಿಕ್ರಿಯಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ. ಜುಲೈ 20ರಂದು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಡುತ್ತಿರುವ ವದಂತಿಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಅಪರಾಧ ನಡೆದರೆ ಅದು ಪೊಲೀಸ್ ತನಿಖೆಯಾಗಬೇಕು. ಆದರೆ ಸಮಾಜದಲ್ಲಿ ಗೊಂದಲ ಸೃಷ್ಠಿಸಿ, ಜವಾಬ್ದಾರಿಯು ಸ್ಥಾನದಲ್ಲಿರುವ ನನ್ನನು ಹಾಗೂ ಕಳೆದ ಎರಡುವರೆ ದಶಕಗಳಿಂದ ಪಾರದರ್ಶಕವಾಗಿ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಸಂಸ್ಥೆಯನ್ನು ಟಾರ್ಗೆಟ್ ಮಾಡುವುದರ ಮೂಲಕ ನಮಗೆ ಮಾನಸಿಕ ಹಿಂಸೆ ನೀಡುತ್ತಿರುವುದು ಸರಿಯಲ್ಲ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಕಾಂಗ್ರೆಸ್ ಮಾಹಿತಿ ತಂತ್ರಜ್ಞಾನ ವಿಭಾಗದ ನೂತನ ಅಧ್ಯಕ್ಷರಾಗಿ ಯುವ ನಾಯಕ ತಾಲೂಕಿನ ಮಡಾಮಕ್ಕಿ ವಿಶ್ವಾಸ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಶಿಪಾರಸ್ಸಿನ ಮೇರೆಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ ಅವರು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ. ಈ ನೂತನ ಅಧ್ಯಕ್ಷರನ್ನು ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಹಾಗೂ ಶಾಸಕ ಕೆ. ಗೋಪಾಲ ಪೂಜಾರಿ ಅವರು ಅಭಿನಂದಿಸಿದ್ದಾರೆ. ಯುವ ಉದ್ಯಮಿಯಾಗಿರುವ ವಿಶ್ವಾಸ್ ಶೆಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಪಕ್ಷ ಸಂಘಟನೆಗೆ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ೨೦೧೭ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ಯಡ್ತರೆ ಹಾಗೂ ಕಾರ್ಯದರ್ಶಿಯಾಗಿ ಚಂದ್ರ ಪೂಜಾರಿ ಯಡ್ತರೆ ಮರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಹೆರಿಯ ದೇವಾಡಿಗ, ಗುರುಪ್ರಕಾಶ್, ಜೊತೆ ಕಾರ್ಯದರ್ಶಿಯಾಗಿ ನಾಗರಾಜ ಪಿ. ಯಡ್ತರೆ, ಶಿವ, ಸುಬ್ರಹ್ಮಣ್ಯ ಶೆಟ್ಟಿ, ಗೌರವ ಲೆಕ್ಕ ಪರಿಶೋಧಕರಾಗಿ ಸುರೇಶ ಬಟ್ವಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಶಾಂ ಶೇಟ್, ರವೀಂದ್ರ ಜೆ, ರವೀಂದ್ರ ಶಾನುಭೋಗ್, ಕಾರ್ಯಕ್ರಮ ಉಸ್ತುವಾರಿಯಾಗಿ ಬಿ. ಅಣ್ಣಪ್ಪಯ್ಯ ಕಾರಂತ್, ಸಂಜಯ ಬೈಂದೂರು, ಶಂಕರ ಮೊಗವೀರ, ಸುಶಾಂತ್ ಆಚಾರ್ಯ ಆಯ್ಕೆಯಾಗಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. shortcode ► ಬೈಂದೂರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸುಧಾಕರ ದೇವಾಡಿಗ ► ಕುಂದಾಪ್ರ ಡಾಟ್ ಕಾಂ ಸುದ್ದಿ – http://kundapraa.com/?p=16345 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿಜಯ ಬ್ಯಾಂಕಿನ ನಿವೃತ್ತ ಅಧಿಕಾರಿಗಳ ಸಂಘದ 12ನೇ ವಾರ್ಷಿಕ ಸಮಾವೇಶವು ಬ್ರಹ್ಮಾವರ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಎ. ನಾರಾಯಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಮುಂದಿನ ಎರಡು ವರ್ಷಗಳಿಗೆ ನೂತನ ಅಧ್ಯಕ್ಷರಾಗಿ ಹೆಚ್. ವಸಂತ ಹೆಗ್ಡೆ, ಉಪಾಧ್ಯಕ್ಷರಾಗಿ ಎಸ್. ಅಣ್ಣಪ್ಪ ಶೆಟ್ಟಿ, ಕಾರ್ಯದರ್ಶಿಯಾಗಿ ಸಿ. ಸಚ್ಚಿದಾನಂದ ಶೆಟ್ಟಿ, ಕೋಶಾಧಿಕಾರಿಯಾಗಿ ಕೆ. ಜಯಕುಮಾರ್, ಜೊತೆ ಕಾರ್ಯದರ್ಶಿಯಾಗಿ ವೇಣುಗೋಪಾಲ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಿ. ಟಿ. ಹೆಗ್ಡೆ, ಎನ್ ಜಯರಾಮ ಶೆಟ್ಟಿ, ಕೆ. ರವೀಂದ್ರನಾಥ ಶೆಟ್ಟಿ, ಶ್ರೀಮತಿ ಮಾಲಿನಿ ಶೆಟ್ಟಿ, ಎ. ಭುಜಂಗ ಶೆಟ್ಟಿ, ಕೆ. ಸದಾನಂದ ಹೆಗ್ಡೆ, ಎ. ಜಯಕರ ಶೆಟ್ಟಿ, ಎಸ್ ಜಯರಾಮ ಹೆಗ್ಡೆ ಮತ್ತು ಯು. ಪ್ರಭಾಕರ ಶೆಟ್ಟಿಯವರು ಅಯ್ಕೆಯಾದರು. ಸಂಸ್ಥೆಯ ಕಳೆದ ಎರಡು ವರ್ಷಗಳ ಸೇವಾ, ಸೌಹಾರ್ದ ಚಟುವಟಿಕೆಗಳು, ಮನೋರಂಜನಾ ಕಾರ್ಯಕ್ರಮಗಳು, ಆರೋಗ್ಯ ಮಾಹಿತಿ ಗೋಷ್ಠಿಗಳ ಬಗ್ಗೆ ಮತ್ತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಾರಾಹಿ ಯೋಜನೆ ಸಂತ್ರಸ್ಥರಿಗೆ ಒಂದು ವಾರದೊಳಗೆ ಪರಿಹಾರ ನೀಡಿ, ವಾರಾಹಿ ಯೋಜನೆ ಸಂಬಂಧ ಇದುವರೆಗೂ ಬಾಕಿ ಇರುವ ಪ್ರಕರಣ ಮತ್ತು ಇಂದು ಸ್ವೀಕರಿಸಿರುವ ದೂರುಗಳ ಅ.೨೮ ರೊಳಗೆ ಮುಕ್ತಾಯಗೊಳಿಸಿ ವರದಿ ನೀಡುವಂತೆ ಜಿಲ್ಲಾ ಉಸ್ತವಾರಿ ಸಚಿವ ಪ್ರಮೋದ್ ಮಧ್ವಾರಜ್ ತಾಕೀತು ಮಾಡಿದ್ದಾರೆ. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಾರಾಹಿ ಯೋಜನಾ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಕ್ಕುಂಜೆ ಗ್ರಾಮದ ಸಾದಮ್ಮ ಶೆಡ್ತಿ 24 ಸೆಂಟ್ಸ್ ಜಮೀನು ಈ ಹಿಂದೆ ಭೂ ಸ್ವಾಧೀನದಿಂದ ಕೈಬಿಡಲಾಗಿದ್ದರೂ ಪ್ರಸ್ತುತ ಅವರಿಗೆ ಯಾವುದೇ ಮಾಹಿತಿ ನೀಡದೆ ಅವರ ಜಮೀನಿನಲ್ಲಿ ಕಾಮಗಾರಿ ನೆಡೆಯುತ್ತಿದೆ. ವಾರಾಹಿ ಮುಖ್ಯ ಇಂಜಿನಿಯರರು ಪರಿಶೀಲನೆ ನೆಡಸಿ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಂಡು ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು. ವಾರಾಹಿ ಯೋಜನೆಗೆ ಸಂಬಂದಪಟ್ಟ ಸಾರ್ವಜನಿಕರ ವಿವಿಧ ದೂರು, ಸೂಕ್ತ ಪರಿಹಾರ ನೀಡುವ ಕುರಿತಂತೆ ಎಲ್ಲಾ ಪ್ರಕರಣ ಒಂದು ವಾರದೊಳಗೆ ಇತ್ಯರ್ಥ ಪಡಿಸುವಂತೆ ಹಾಗೂ ಅಧಿಕಾರಿಗಳಿಗೆ ಬಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ವಡೇರಹೋಬಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ ೧೪-೭-೨೦೧೭ ನೇ ಬುಧವಾರದಂದು ಹೋಟೆಲ್ ನಿಸರ್ಗದ ಆರ್.ಸಿ ಕನ್‌ವೆನ್ಸ್‌ನ್ ಹಾಲ್ ಹಟ್ಟಿಯಂಗಡಿ ಕ್ರಾಸಿನಲ್ಲಿ ನೆರವೇರಿಸಲಾತು. ಇದರ ಪದಗ್ರಹಣವನ್ನು ಲಯನ್ ವಿ.ಜಿ.ಶೆಟ್ಟಿ ಎಂ.ಜೆ.ಎಫ್.೨ನೇ ಉಪ ಜಿಲ್ಲಾ ಗವರ್ನರ್ ರವರು ನೆರವೇರಿಸಿರಿತ್ತಾರೆ. ನೂತನ ಅಧ್ಯಕ್ಷರಾಗಿ ಲಯನ್ ಜಯಂತ್ ಶಟ್ಟಿ, ಕಾರ್ಯದರ್ಶಿಯಾಗಿ ಲಯನ್ ಜಗದೀಶ ಶೇರೆಗಾರ ಹಾಗೂ ಖಜಾಂಚಿಯಾಗಿ ಲಯನ್ ಶಾಂತಿ ಸಾಗರ್ ಶೆಟ್ಟಿಯವರನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ಲಯನ್ ಅರುಣ ಕುಮಾರ್ ಹೆಗ್ಡೆ ಹಾಗೂ ಪ್ರಾಂತೀಯ ಅಧ್ಯಕ್ಷರಾದ ಲಯನ್ ಬಿ.ಎಸ್.ಪ್ರತಾಪ್‌ಚಂದ್ರ ಶೆಟ್ಟಿಯವರು ಹಾಜರಿರುತ್ತಾರೆ. ಅತಿಥಿಗಳಿಂದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಆಗಮಿಸಿದಂತಹ ಅತಿಥಿಗಳನ್ನು ಲಯನ್ನ್‌ನ ಅಧ್ಯಕ್ಷರು ಸ್ವಾಗತಿಸಿ, ಕಾರ್ಯದರ್ಶಿಯವರು ಧನ್ಯವಾದವನ್ನು ಮಂಡಿಸಿರುತ್ತಾರೆ ಹಾಗೂ ಲಯನ್ ರಂಜನ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಪ್ರತಿಶ್ಟಿತ ಮುಕಾಂಬಿಕಾ ರೈಲು ನಿಲ್ದಾಣವನ್ನು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಿ ಹೆರಿಟೇಜ್ ನಿಲ್ದಾಣವಾಗಿ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ. ಎಸ್ ಯಡಿಯೂರಪ್ಪ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದಾರೆ. ಅವರು ದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಈ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಮಂಗಳ ಮತ್ತು ಪೂರ್ಣ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಕೂಡ ಸಚಿವರನ್ನು ಆಗ್ರಹಿಸಿದರು. ಈ ಸಂದರ್ಭ ಬೈಂದೂರಿನ ಮೂಕಾಂಬಿಕ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಮತ್ತು ಉದ್ಯಮಿ ಗೋಪಾಲಕೃಷ್ಣ ಉಪಸ್ಥಿತರಿದ್ದರು
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಮರವಂತೆ, ನಾವುಂದ, ಬಡಾಕೆರೆ, ಹೇರೂರು ಗ್ರಾಮಗಳ ದೇವಾಡಿಗ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರವು ಶನಿವಾರ ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆಯಿತು. ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ತಿಮ್ಮ ದೇವಾಡಿಗ ಅಧ್ಯಕ್ಷತೆಯಲ್ಲಿ ಉದ್ಯಮಿ ಎನ್. ರಮೇಶ ದೇವಾಡಿಗ ಉದ್ಘಾಟಿಸಿದರು. ಉದ್ಯಮಿ ಕುದ್ರುಕೋಡು ಪ್ರಕಾಶ ದೇವಾಡಿಗ, ಬಡಾಕೆರೆ ಜನಾರ್ದನ ಎಂ. ದೇವಾಡಿಗ, ಕೊಲ್ಲೂರು ಡಾಟ್ ಕಾಂ ಸಂಯೋಜಕಿ ಪ್ರಿಯದರ್ಶಿನ ದೇವಾಡಿಗ ಪುಸ್ತಕ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ದೇವಾಡಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ, ಮರವಂತೆ ಗೋಪಾಲ ದೇವಾಡಿಗ ಅತಿಥಿಗಳಾಗಿದ್ದರು. ವಾದ್ಯ ಕಲಾವಿದರಾದ ಹೆಮ್ಮಾಡಿ ರಾಘವೇಂದ್ರ ದೇವಾಡಿಗ, ಕುಂದಾಪುರದ ನಿತ್ಯಾನಂದ ದೇವಾಡಿಗ, ಕುಂಭಾಶಿಯ ಕೌಶಿಕ್ ದೇವಾಡಿಗ, ಕೋಣಿಯ ಸತೀಶ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಜೆ. ಪಿ. ಬಡಾಕೆರೆ ಸ್ವಾಗತಿಸಿದರು. ತಲ್ಲೂರು ರವಿ ದೇವಾಡಿಗ ನಿರೂಪಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಣಯಿಸುವುದು ವ್ಯಕ್ತಿಯ ಮನಸ್ಥಿತಿ ಇಂತಹ ಮನಸ್ಥಿತಿಯನ್ನು ಉತ್ತಮ ಹಾದಿಗೆ ಕರೆದೊಯ್ಯುವುದು ರಾಷ್ಡ್ರೀಯ ಸೇವೆ ಎನ್ನುವ ಮನೋಭಾವನೆ ಇದಕ್ಕೆ ತಕ್ಕ ವೇದಿಕೆಯೇ ಈ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿದ್ಯಾರ್ಥಿಗಳು ಇಂದಿನ ಸಮಾಜದ ನೈಜ ಚಿತ್ರಣವನ್ನು ತಿಳಿದುಕೊಳ್ಳಬೇಕು. ನಮ್ಮದು ಭಾರತ ಮಾತೆ ಎಂದು ಕರೆಯಲ್ಪಡುವ ರಾಷ್ಟ್ರ ಇಲ್ಲಿ ಅನೇಕ ಧರ್ಮ ಜಾತಿಯಿಂದ ಕೊಡಿದೆ. ನಮ್ಮಲ್ಲಿ ಜಾತಿ ಬೇಧವಿಲ್ಲದೇ ಒಗ್ಗೂಡಿ ರಾಷ್ಟ್ರದ ಅಭಿವೃಧ್ದಿಗೆ ಶ್ರಮಿಸಬೇಕು. ನಮ್ಮ ರಾಷ್ಟ್ರೀಯಾ ಸೇವಾ ಯೋಜನೆಯಂತಹ ಘಟಕಗಳನ್ನು ಉಪಯೋಗಿಸಿ ಕೊಂಡು ಸಾಕಷ್ಟು ಸೇವಾ ಮನೋಭವದಿಂದ ಸೇವೆ ಸಲ್ಲಿಸಿ ದೇಶದ ಅಭಿವೃದ್ದಿಯ ಕಡೆ ಗಮನ ಹರಿಸಿ ಎಂದು ಬ್ಯಾರೀಸ್ ಕಾಲೇಜಿನ ರಾಷ್ಟ್ರೀಯಾ ಸೇವಾ ಯೋಜನಾ ಘಟಕವನ್ನು ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಸಲಹ ಸಮಿತಿಯ ಸದಸ್ಯ, ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣದ ಪ್ರಾಂಶುಪಾಳ ಡಾ. ಉದಯ್ ಕುಮಾರ್ ಶೆಟ್ಟಿ ಹೇಳಿದರು. ಅವರು ಗಿಡಕ್ಕೆ ನೀರುಣಿಸುವುದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳ ಮೇಲಿನ ದೌರ್ಜನ್ಯಕ್ಕೆ ನಿಮ್ಮ ಮುಂದೆ ನಿಂತ ನಾನೇ ಸಾಕ್ಷಿ! ಭೂಮಿ ಒಡಲು ಬಗೆದು ಕಲ್ಲು ತೆಗೆದು ಹಣಮಾಡಿಕೊಂಡು, ಹೊಂಡ ಮಾತ್ರಾ ಹಾಗೆ ಬಿಟ್ಟು ಮಕ್ಕಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಆಜುಬಾಜು ಬರುವ ಶಾಲಾ ಮಕ್ಕಳು ರಸ್ತೆ ದಾಟುವುದು ಒಂದು ಸಾಹಸ. ಭೂಮಿ ಬಗೆದು ಗಣಿಗಾರಿಕೆ ನಡೆಸಿರೋದು ಯಾರೋ, ಅಪಾಯಕಾರಿ ಹೊಂಡ ಮುಚ್ಚಲು ಸರಕಾರಿ ದುಡ್ಡು! ಇದು ಜಿಲ್ಲಾಡಳಿತ, ತಾಲೂಕ್ ಪಂಚಾಯತ್, ಸಿಡಬ್ಲ್ಯೂಸಿ ಸಂಸ್ಥೆ, ಮಕ್ಕಳ ಸಂಘ, ಮಕ್ಕಳ ಹಾಗೂ ಮಹಿಳಾ ಮಿತ್ರರು ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಕ್ಕಳು ಮತ್ತು ಮಹಿಳಾ ಹಕ್ಕು ಹಾಗೂ ರಕ್ಷಣೆ ಕುರಿತು ನಡೆದ ಸಂವಹನದಲ್ಲಿ ಮಕ್ಕಳು ಸಮಸ್ಯೆಗಳ ಅನಾವರಣ ಮಾಡಿದ ಪರಿ. ಮಕ್ಕಳ ಮಿತ್ರ ಪ್ರತಿನಿಧಿ ಪವನ್‌ಕುಮಾರ್ ಮಾತನಾಡಿ, ತಾಲೂಕಿನಾದ್ಯಂತ ಇರುವ ಅಪಾಯಕಾರಿ ಕಲ್ಲುಕ್ವಾರೆ ಹೊಂಡಗಳು ಮಕ್ಕಳ ಪಾಲಿನ ಯಮಧೂತನಂತಿವೆ. ಕಲ್ಲು ಕಡಿದು ಹಣ ಮಾಡಿಕೊಳ್ಳುವುದು ಯಾರೋ. ಬಲಿಯಾಗುವುದು ಮಕ್ಕಳು. ಅಪಾಯಕಾರಿ ಕಲ್ಲುಕೋರೆ…
