ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಮ್ಮಾಡಿಯ ಆಧ್ಯಾತ್ಮಿಕ ಯೋಗ ಕಲಿಕಾ ಕೇಂದ್ರದ ಯೋಗ ಬಂಧುಗಳಿಂದ ಹೆಮ್ಮಾಡಿ ಪೇಟೆ ಪರಿಸರದಲ್ಲಿ ಸಾರ್ವಜನಿಕರಲ್ಲಿ ಯೋಗದ ಅರಿವನ್ನು ಮೂಡಿಸುವ ಸಲುವಾಗಿ ಯೋಗ ನಡಿಗೆ ಕಾರ್ಯಕ್ರಮವನ್ನು ನಡೆಸಿ ಎಲ್ಲರ ಗಮನ ಸೆಳೆದರು. ಸಂಘದ ಎಲ್ಲಾ ಯೋಗ ಬಂಧುಗಳು ಯೋಗದ ಮಹತ್ವವನ್ನು ಸಾರುವ ಭಿತ್ತಿ ಪತ್ರಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಸಂಘದ ವಾರ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು. ಹೆಮ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹರೀಶ ಉದ್ಘಾಟಿಸಿದರು. ಸಂಘದ ಎಲ್ಲಾ ಯೋಗ ಬಂಧುಗಳು ವಿವಿಧ ರೀತಿಯ ಯೋಗಾಸನಗಳನ್ನು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ತೋರಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಕನರಾಡಿ ವಾದಿರಾಜ್ ಭಟ್ ಮಾತನಾಡಿ ನಿತ್ಯ ಜೀವನದಲ್ಲಿ ಯೋಗ ಅಳವಡಿಕೆ ಮತ್ತು ಆತ್ಮ ಸಾಕ್ಷಾತ್ಕಾರವೇ ಯೋಗಿಯ ಪರಮ ಧ್ಯೇಯವಾಗಿರಬೇಕು ಎಂದರು. ವಿವಿಧ ಗ್ರಾಮಗಳಲ್ಲಿ ಯೋಗ ತರಬೇತಿಯನ್ನು ನಡೆಸುತ್ತಿರುವ ಹುಣ್ಸೆಮಕ್ಕಿ ಯೋಗ ಸಂಘದ ಅನಿಲ್‌ಕುಮಾರ್ ಶೆಟ್ಟಿ, ಬಸ್ರೂರಿನ ಪ್ರಭಾಕರ ಐತಾಳ್, ಉಪ್ಪಿನಕುದ್ರುವಿನ ಶ್ರೀಧರ ರಾವ್, ಕಟ್‌ಬೆಲ್ತೂರಿನ ನಂದಿ ದೇವಾಡಿಗ ಇವರು ವೇದಿಕೆಯಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವವು ವಿದ್ವಾನ್ ಕೋಟ ಲಕ್ಷ್ಮೀನಾರಾಯಣ ಸೋಮಯಾಜಿ ಅವರ ಆಚಾರ್ಯತ್ವದಲ್ಲಿ ಜರುಗಿತು. ದೇವಸ್ಥಾನದ ಅನುವಂಶಿಯ ಅರ್ಚಕ ವೆಂಕಟೇಶ ಮಂಜ ವಿಷ್ಣುಮೂರ್ತಿ ದೇವಸ್ಥಾನದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಬಿ. ಅರುಣಕುಮಾರ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇವಸ್ಥಾನಗಳು ಜೀವನ ಪ್ರೀತಿಯನ್ನು ಕಲಿಸಿಕೊಡುವ ತಾಣಗಳು. ದೇವಸ್ಥಾನಗಳಿಂದಾಗಿ ಇಡೀ ಊರು ಒಟ್ಟುಗೂಡುವುದಲ್ಲದೇ ಸೌಹಾರ್ದಯುವತಾಗಿ ಬಾಳುವಂತೆ ಮಾಡುತ್ತದೆ. ಜೀವನ ಪ್ರೀತಿಗೆ ಬಡವ ಬಲ್ಲಿದನೆಂಬ ಭೇದವಿಲ್ಲ. ಅಲ್ಲಿ ಎಲ್ಲವನ್ನೂ ಸಮಾನವಾಗಿ ಕಾಣಲಾಗುತ್ತದೆ ಎಂದು ವಾಸ್ತುತಜ್ಞ ವೇ.ಮೂ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಹೇಳಿದರು. ಅವರು ಸೇನಾಪುರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ಶಿಲಾದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನವಿತ್ತರು. ಹಿಂದಿನ ಕಾಲದ ದುಸ್ತರ ಬದುಕಿನ ನಡುವೆಯೂ ಊರಿನಲ್ಲೊಂದು ಸುಂದರ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಿದ್ದವು. ಆ ಕಾಲದಲ್ಲಿ ಹಸಿವು ನೀಗಿಸಿಕೊಳ್ಳಲು ಪ್ರತಿಫಲವನ್ನು ಬಯಸುತ್ತಿದ್ದರೇ ಹೊರತು ಹಣ ಮಾಡುವ ಉದ್ದೇಶ ಹೊಂದಿರಲಿಲ್ಲ. ಪ್ರತಿಫಲಾಪೇಕ್ಷೆ ಇಲ್ಲದ ನಮ್ಮ ಪೂರ್ವಜರುಗಳ ಕಾರ್ಯವೈಖರಿಯನ್ನು ಹಿಂದಿನ ಕಾಲದ ದೇವಸ್ಥಾನಗಳಲ್ಲಿ ನೋಡಿದರೆ ತಿಳಿಯುವುದು ಎಂದರು. ನಿವೃತ್ತ ಉಪನ್ಯಾಸಕ ಡಾ. ಬಿ. ಮಂಜುನಾಥ ಸೋಮಯಾಜಿ ಮಾತನಾಡಿ ದೇವಸ್ಥಾನದಲ್ಲಿ ದೇವರು…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಸ್ಥಳೀಯರಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು ಎನ್ನುವ ಸಾರ್ವಜನಿಕರ ಹೋರಾಟದ ಕಾವು ತೀವ್ರಗೊಂಡಿದೆ. ಶನಿವಾರ ಸಾಸ್ತಾನದ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಪ್ರತಿಭಟನ ನಿರತರು ಶುಲ್ಕ ಸಂಗ್ರಹಕ್ಕೆ ಅವಕಾಶ ನೀಡಿದ ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅನಂತರ ಟೋಲ್‌ಗೇಟಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿ ಪೊಲೀಸರಿಂದ ಬಂಧನಕ್ಕೊಳಗಾದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲಾಧಿಕಾರಿಗಳು ಟೋಲ್ ವಿಚಾರದಲ್ಲಿ ಅವಸರದ ತೀರ್ಮಾನ ಕೈಗೊಂಡಿದ್ದಾರೆ. ಏಕಾಏಕಿ ಟೋಲ್‌ಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದರು. ಸಾಮಾಜಿಕ ಹೋರಾಟಗಾರ ಕಿಶೋರ ಕುಮಾರ್ ಮಾತನಾಡಿ, ಉಡುಪಿ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆಯಲ್ಲಿ ಬಿಹಾರದ ಕಾನೂನನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸಾರ್ವಜನಿಕರ ಬೇಡಿಕೆಗಳಿಗೆ ಬೆಲೆ ನೀಡುವ ಬದಲು ಬಂಡವಾಳಶಾಹಿಗಳ ಪರ ನಿಂತಿದ್ದಾರೆ ಎಂದರು. ಇಂದಿನ ಪೊಲೀಸ್ ಬಂದೋಬಸ್ತ್, ಪ್ರತಿಭಟನೆ ಯನ್ನು ಹತ್ತಿಕ್ಕಲು ಮಾಡುತ್ತಿರುವ ಪ್ರಯತ್ನಗಳನ್ನು ನೋಡಿದರೆ ಸ್ವಾತಂತ್ರÂ ಪೂರ್ವದ ದಿನಗಳು ನೆನಪಾಗುತ್ತಿವೆ ಎಂದು ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ…
ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಧಾರ್ಮಿಕ ಸಭಾ ಕಾರ್ಯಕ್ರಮ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಮನುಷ್ಯ ದ್ವೇಷಿಗಳನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ಜಾತಿ, ಧರ್ಮ, ಭಾಷೆ, ಪಂಥವನ್ನು ಮೀರಿ ಮನುಷ್ಯಕೋಟಿಯನ್ನು ಪ್ರೀತಿಸುವುದನ್ನು ಕಲಿತರೆ ಮಾತ್ರವೇ ಜಗತ್ತನ್ನು ಗೆಲ್ಲಬಹುದೇ ಹೊರತು ದ್ವೇಷದಿಂದಲ್ಲ. ನಿಶ್ಕಲ್ಮಶ ಮನಸ್ಸಿನಲ್ಲಿ ದೇವರ ಸ್ಮರಣೆಯಿಂದ ಸಾಕ್ಷಾತ್ಕಾರ ಸಾಧ್ಯವಿದೆ. ದೇವಳದ ಬ್ರಹ್ಮಕಲಶೋತ್ಸವದೊಂದಿಗೆ ಆತ್ಮಶುದ್ಧಿಯಾದಾಗ ಮಾತ್ರ ಪ್ರೀತಿ ಸಾಮರಸ್ಯದ ಸುಂದರ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನವೀಕೃತ ಶಿಲಾಮಯ ದೇವಾಲಯದ ಪುನರ್ ಪ್ರತಿಷ್ಠಾಬಂಧ ಬ್ರಹ್ಮಕಲಶೋತ್ಸವದಲ್ಲಿ ಶಿಲಾಮಯ ಗರ್ಭಗುಡಿ ಉದ್ಘಾಟಿಸಿ ಮಾತನಾಡಿದರು. ರಾಜಾಶ್ರಯದಲ್ಲಿ ನಡೆಸಲಾಗುತ್ತಿದ್ದ ದೇವಾಲಯಗಳು ಕಾಲಕ್ರಮೇಣ ಕೆಲವೇ ಕುಟುಂಬದ ಒಡೆತನದಲ್ಲಿ ನಡೆಯುತ್ತಿತ್ತು. ಆದರೀಗ ಬಹುಪಾಲು ದೇವಾಲಯಗಳು ಜನಾಶ್ರಯದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಊರಿನ ಅಭಿವೃದ್ಧಿಯ ಸಂಕೇತದ ಸೂಚಕವಾಗಿದೆ. ಇದರಿಂದ ಊರಿನ ಶಕ್ತಿ ಹೆಚ್ಚುತ್ತದೆ. ಆಧುನಿಕ ಕಾಲಘಟ್ಟದಲ್ಲಿ ಯುವ ಜನಾಂಗಕ್ಕೆ ಧಾರ್ಮಿಕ ಆಚರಣೆಗಳ…
ನಟ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ ಭಾಗಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಕ, ಕುಂದಾಪುರ ಕೆರಾಡಿಯ ರಿಶಬ್ ಶೆಟ್ಟಿ ಅವರ ವಿವಾಹವು ಮಂದರ್ತಿ ಮೂಲದ ಪ್ರಗತಿ ಶೆಟ್ಟಿ ಅವರೊಂದಿಗೆ ಕೋಟೇಶ್ವರ ಸಹನಾ ಕನ್ವೇನ್ಯನ್ ಹಾಲ್‌ನಲ್ಲಿ ನಡೆಯಿತು. ಹಿಂದೂ ಸಂಪ್ರದಾಯದಂತೆ ಈರ್ವರ ಕುಟುಂಬಿಕರು ಸ್ನೇಹಿತರು ಹಾಗೂ ಕನ್ನಡ ಚತ್ರರಂಗದ ಹಲವು ನಟರುಗಳ ಸಮ್ಮುಖದಲ್ಲಿ ರಿಶಬ್ ಶೆಟ್ಟಿ ಪ್ರಗತಿ ಶೆಟ್ಟಿ ಅವರನ್ನು ವರಿಸಿದರು. ನಟ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಶೀತಲ್ ಶೆಟ್ಟಿ, ಯಜ್ಞ ಶೆಟ್ಟಿ, ಮೇಗನಾ ಗಾಂವ್ಕರ್, ರಶ್ಮಿಕಾ ಮನಾರ್, ಸಂಯುಕ್ತಾ ಹೆಗ್ಡೆ ಸೇರಿದಂತೆ ಹಲವು ನಟರು ವಿವಾಹಕ್ಕೆ ಸಾಕ್ಷಿಯಾದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಂದರ್ತಿ ಮೂಲದ ಪ್ರಗತಿ ಶೆಟ್ಟಿ ಶಿವಮೊಗ್ಗದ್ದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ ಬೆಂಗಳೂರಿನ ಐಬಿಎಂ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರೊಂದಿಗೆ ಉಳಿದವರು ಕಂಡಂತೆ ಸಿನೆಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಿಶಬ್ ಶೆಟ್ಟಿ ಅವರು ಆ ಬಳಿ ರಿಕ್ಕಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೇಸಿಸ್ ನ ಜೇಸಿಐ ಕುಂದಾಪುರ ಘಟಕ ಇzರ ಪದಗ್ರಹಣ ಸಮಾರಂಭವು ಇತ್ತೀಚೆಗೆ ವೆಂಕಟಲಕ್ಷ್ಮೀ ಹಾಲಿನಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಅಧ್ಯಕ್ಷ ಜೆ.ಎಫ್.ಪಿ ವಿಷ್ಣು ಕೆ.ಬಿ, ವಹಿಸಿದರು. ಮುಖ್ಯ ಅತಿಥಿಯಾಗಿ ಜೇಸಿ ವೈ. ಸುಕುಮಾರ್ ಡೈರೆಕ್ಟರ್ ,ಜೆಸಿಐ ಇಂಡಿಯಾ ಜೆ.ಎಫ್.ಪಿ ಸಂತೋಷ.ಜಿ ವಲಯ ಅಧ್ಯಕ್ಷರು ವಿವೇಕ್.ಜಿ.ಸುವರ್ಣ ಸಿಇಒ ವಿಕ್ಕಿ ಮೊಬೈಲ್ ಉಡುಪಿ. ಜೆ.ಎಫ್.ಎಂ ಮರಿಯಪ್ಪ. ವಲಯ ಉಪಾಧ್ಯಾಕ್ಷರು ಭಾಗವಹಿಸಿದ್ದರು. ಜೆ.ಎಫ್.ಪಿ ವಿಷ್ಣು ಕೆ.ಬಿ, ನೂತನ ಅಧ್ಯಕ್ಷೆ ಜೆ.ಎಫ್.ಪಿ ಅಕ್ಷತಾ ಗಿರೀಶ್ ಯವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯದರ್ಶಿ ಜೇಸಿ ಪ್ರವೀಣ್ ಎಮ್ ನೂತನ ಕಾರ್ಯದರ್ಶಿ ಜೇಸಿ ರಾಘು ವಿಠಲವಾಡಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಜೆಜೆಸಿ ವಿಭಾಗದ ಅಧ್ಯಕ್ಷೆ ಜೆಜೆಸಿ ದೀಕ್ಷಿತಾ ಗೋಡೆ ನೂತನ ಅಧ್ಯಕ್ಷ ಜೆಜೆಸಿ ಸುಬ್ರಹ್ಮಣ್ಯ ಆಚಾರ್ ಗುಲ್ವಾಡಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು ನಿಕಟ ಪೂರ್ವ ಅಧ್ಯಕ್ಷ ಜೇಸಿ ಚಂದ್ರ ಇಂಬಾಳಿ, ಜೇಸಿರೆಟ್ ವಿಭಾಗದ ಅಧ್ಯಕ್ಷೆ ಜೇಸಿರೆಟ್ ಮಾಲತಿ ವಿಷ್ಣು ಜೆಜೆಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಬಗಳಾಂಬ ತಾಯಿ ದೇವಸ್ಥಾನದ ೧೫ನೇ ವರ್ಷದ ಪ್ರತಿಷ್ಠಾ ವರ್ಧಂತಿಮಹೋತ್ಸವ, ಚಂಡಿಕಾಯಾಗ ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು. ಶ್ರೀ ಗುರುಪರಾಶಕ್ತಿ ಮಠ, ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿಗಳವರ ಅನುಗ್ರಹದೊಂದಿಗೆ ವೇದಮೂರ್ತಿ ಕೆ. ಚಂದ್ರಶೇಖರ ಸೋಮಯಾಜಿಯವರ ನೇತೃತ್ವದಲ್ಲಿ ಗಣಯಾಗ, ಸತ್ಯನಾರಾಯಣ ಪೂಜೆ, ಗುರು ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ಪರಿವಾರ ದೇವರಿಗೆ ಕಲಶಾಭಿಷೇಕ, ಬ್ರಹ್ಮಕಲಶ ಸ್ಥಾಪನೆ, ಕಲಾಭಿವೃದ್ಧಿ ಹೋಮ, ಅಧಿವಾಸ ಹೋಮ ಫೆ.೦೬ರಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ, ಚಂಡಿಕಾಯಾಗ ಪೂರ್ಣಾಹುತಿ, ಮಹಾಪೂಜೆ, ಅನ್ನ ಸಂತರ್ಪಣೆ ಸಾಂಗವಾಗಿ ನಡೆಯಿತು. ಪ್ರತಿಷ್ಠಾ ವರ್ಧಂತಿಮಹೋತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಪೂಜೆ, ಪುಷ್ಪಲಂಕಾರ ಸೇವೆಗಳು ನೆರವೇರಿತು. ಸಾವಿರಾರು ಭಕ್ತರು ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಪ್ರದಾನ ಅರ್ಚಕ ಗಣಪತಿ ಸುವರ್ಣ, ಉತ್ಸವ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕೆ.ಬಿ., ಗೌರವಾಧ್ಯಕ್ಷರಾದ ಸೀತಾರಾಮ ಹೇರಿಕುದ್ರು, ಕಾರ್ಯದರ್ಶಿ ರಮೇಶ್ ಮಕ್ಕಿ, ಜಲಜ ಗಣಪತಿ, ಅಣ್ಣಯ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲಾ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ನೇತ್ರತ್ವದಲ್ಲಿ ಫೆ.೨೫ರಂದು ಉಡುಪಿಗೆ ಆಗಮಿಸಲಿರುವ ಸದ್ಗುರು ಮಾತಾ ಶ್ರೀ ಅಮೃತಾನಂದ ಮಯಿಯವರ ಕಾರ್ಯಕ್ರಮದ ಹಿನ್ನಲೆಯಲ್ಲಿ ಕುಂದಾಪುರದ ಹೋಟೆಲ್ ಹರಿಪ್ರಸಾದ್ ಸಭಾಂಗಣದಲ್ಲಿ ಕುಂದಾಪುರ ತಾಲೂಕು ಮಟ್ಟದ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಸುವ್ಯವಸ್ಥೆಯಿಂದ ನಡೆಯುವಂತಾಗಲು ತಯಾರಿಯ ದೃಷ್ಠಿಯಿಂದ ಕುಂದಾಪುರ ತಾಲೂಕು ಮಟ್ಟದಲ್ಲಿ ಶ್ರೀ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯನ್ನು ರಚಿಸಲಾಯಿತು. ಬಸ್ರೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಅವರು ಗೌರವಾಧ್ಯಕ್ಷರಾಗಿರುವ ಸಮಿತಿಯ ಅಧ್ಯಕ್ಷರಾಗಿ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯೆ ಶ್ರೀಮತಿ ಕಲ್ಪನಾ ಭಾಸ್ಕರ್ ಆಯ್ಕೆಯಾದರು. ಆರ್ಥಿಕ ಸಮಿತಿ ಸಂಚಾಲಕರಾಗಿ ಕೃಷ್ಣಪ್ರಸಾದ ಅಡ್ಯಂತಾಯ, ಪ್ರಚಾರ ಸಮಿತಿ ಸಂಚಾಲಕರಾಗಿ ಪುಂಡಲೀಕ ಬಂಗೇರ, ಬೀಜಾಡಿ, ಉಪಾಧ್ಯಕ್ಷರಾಗಿ ಹೆರಿಯಣ್ಣ ಬೀಜಾಡಿ, ಕೆ.ಕೆ. ಕಾಂಚನ್, ಕಿಶೋರ್ ಶೆಟ್ಟಿ ಮಂದಾರ್ತಿ, ಬಿ. ಚಂದ್ರಶೇಖರ, ಶ್ರೀಮತಿ ಆಶಾ ಎಸ್. ಶೆಟ್ಟಿ, ಪ್ರಧಾನ…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಬಾನಲ್ಲಿ ಬಣ್ಣದ ಗಾಳಿಪಟ ಚಿಟ್ಟೆಗಳ ಹಾರಾಟ, ಚಾರ್ಲಿ ಚಾಪ್ಲಿನಿಂದ ಹಿಡಿದು, ಮಿಕಿಮೌಸ್ ವರೆಗೆ, ಯಕ್ಷಗಾನ ಬಣ್ಣದ ಒಡ್ಡೋಲಗ ಮೊದಲ್ಗೊಂಡು ಪುಟಾಣಿ ಗಾಳಿಪಟಗಳು ಬಾನೆತ್ತರದಲ್ಲಿ ವೈಯ್ಯಾರದಲ್ಲಿ ವಾಲಿ, ಅಕ್ಕಪಕ್ಕ ತೇಲಿ, ಒಮ್ಮೆ ಕೆಳಕ್ಕೆ ಬಂದು ಮತ್ತೆ ಸರಕ್ಕಂತ ಮೇಲಕ್ಕೇರುವ ಮೂಲಕ ಕೋಡಿಯಲ್ಲಿ ಗಾಳಿಪಟ ಮಾಡಿದ ಮೋಡಿ ಅವರ್ಣಿನೀಯ. ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆ ಕೋಟೇಶ್ವರ ಕಿನಾರೆಯಲ್ಲಿ ಮೂರನೇ ಬಾರಿಗೆ ಆಯೋಜಿಸಿದ್ದ ಗಾಳಿಪಟ ಉತ್ಸವ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.. ಟೀಮ್ ಮಂಗಳೂರು ಮತ್ತು ಒನ್ ಇಂಡಿಯಾ ಕೈಟ್ ಟೀಮ್ ಕೇರಳ ಉತ್ಸವದಲ್ಲಿ ಪಾಲ್ಗೊಂಡಿತ್ತು. ಕಡಲಬ್ಬರದ ಅಲೆಗಳ ಜೋರಿಗೆ ಗಾಳಿ ಪಟ ಹಾರಿಸುವ ಉಮೇದು ಜೋರಾಗಿಯೇ ನಡೆದಿತ್ತು. ಕಿರಿಕ್ ಪಾರ್ಟಿ ಸಿನೇಮಾ ನಿರ್ದೇಶಕ ರಿಶಬ್ ಶೆಟ್ಟಿ ಹಾಗೂ ಅವರ ಉತ್ಸವದ ಮೆರಗು ಹೆಚ್ಚಿಸಿದ್ದವು. ಒಂದು ಕಡೆ ಗಾಳಿಪಟದೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರೆ, ಮತ್ತಷ್ಟು ಜನ ಸಿನೇಮಾ ಮಂದಿಯೊಟ್ಟಿಗೆ ಸೆಲ್ಫಿ ಕ್ರೇಜಿಗೆ ಬಿದ್ದಿದ್ದರು. ಅಲ್ಲೆ ಅರಳಿದ ಮರಳು ಶಿಲ್ಪ ಕಲೆ ಸಮುದ್ರ ತೀರಕ್ಕೊಂದು…
