Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಕರ್ನಾಟಕ ಸಂಘ ಕತಾರ್‌ನ 2018-19ನೇ ಸಾಲಿಕ ಅಧ್ಯಕ್ಷ ಸ್ಥಾನದ ಹಾಗು ಹೊಸ ಸಮಿತಿಯ ಚುನಾವಣೆ ಐಸಿಸಿಯಲ್ಲಿ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವೆಂಕಟ ರಾವ್ ಅವರು, ನಾಗೇಶ್ ರಾವ್ ವಿರುದ್ಧ ಹೆಚ್ಚು ಮತ ಪಡೆದು ಮುಂದಿನ 2 ವರ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ಅಧ್ಯಕ್ಷ ಸ್ಥಾನಕ್ಕೆ 2 ಅಭ್ಯರ್ಥಿಗಳ ಹೆಸರು ನೋಂದಾವಣೆ ಗೊಂಡಿದ್ದು, ಹಾಗೇನೇ ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಒಟ್ಟು ೧೫ ಸ್ಪರ್ದಿಗಳ ಹೆಸರು ಚುನಾವಣೆಗೆ ನಾಮಾಂಕಿತ ಗೊಂಡಿತ್ತು. ಕಾರ್ಯಕಾರಿ ಸಮಿತಿ ಅಭ್ಯರ್ಥಿಗಳ ಪಟ್ಟಿಗೆ 10 ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಮತ ಮುಖಾಂತರ ಕಾರ್ಯಕಾರಿ ಸಮಿತಿಗೆ ರವಿ ಶೆಟ್ಟಿ, ದಿನೇಶ್ ಗೌಡ, ಸಂದೀಪ್ ರೆಡ್ಡಿ, ಮುರಳೀಧರ್ ರಮಾನಾಥ್ ರಾವ್, ಅನಿಲ್ ಕುಮಾರ್ ಬೋಳೂರ್, ಮಣಿಹಳ್ಳ ಯೋಗೀಶ್ ಪೈ, ಅಶ್ವಿನ್ ಪ್ರಸನ್ನ ಕುಮಾರ್, ಶಶಿಧರ್ ಹೆಬ್ಬಾಳ್ ಚುನಾಯಿತರಾದರು. ಇಬ್ಬರು ಮಹಿಳಾ ಅಭ್ಯರ್ಥಿಗಳಾದ ಆಶಾ ನಂಜಪ್ಪ ಹಾಗು ರಶ್ಮಿ ಜಯರಾಮ್ ಅವಿರೋಧವಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆದರ್ಶ ಪುರುಷರಾದ ಕೋಟಿ ಚೆನ್ನಯರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಮಾಜದ ಏಳಿಗೆಗಾಗಿ ಎಲ್ಲೆಡೆಯೂ ಬಿಲ್ಲವ ಸಂಘಟನೆಗಳು ನಿರಂತರವಾಗಿ ಶ್ರಮಿಸುತ್ತಿದೆ. ಸಮುದಾಯದ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರುವ ಮೂಲಕ ಸಮಾಜಕ್ಕೆ ಒಂದು ಸಂದೇಶ ನೀಡುತ್ತಿದೆ. ಇದು ನಿರಂತರವಾಗಿ ಮುಂದುವರಿಯಬೇಕು ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬಿಲ್ಲವ ಸಮಾಜ ಸೇವಾ ಸಂಘ ಯಡ್ತರೆ ಇದರ ವಿಂಶತಿ ವರ್ಷಾಚರಣೆಯ ಅಂಗವಾಗಿ ಶನಿವಾರ ಯಡ್ತರೆ ಬೈಪಾಸ್ ಬಳಿ ಆಯೋಜಿಸಲಾದ ಬಿಲ್ಲವ ಸಮ್ಮಿಲನ ೨೦೧೮ ’ಕೋಟಿ ಚೆನ್ನಯ್ಯ ಟ್ರೋಫಿ’ ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಬೈಂದೂರು ತಾಲೂಕು ಕೇಂದ್ರವಾಗಿ ರೂಪುಗೊಳ್ಳುವುದರೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸದ್ಯದಲ್ಲೇ ಕೋರ್ಟ್, ತಾಲೂಕು ಪಂಚಾಯತ್ ಹಾಗೂ ಇತರೆ ಕಛೇರಿಗಳ ಕಾರ್ಯರಂಭ ಮಾಡಲಿವೆ. ಕೆಎಸ್‌ಆರ್‌ಟಿಸಿ ಡಿಪೋ ಕೂಡ ಮಂಜೂರಾಗಿದ್ದು ಜನರಿಗೆ ಅನುಕೂಲವಾಗಲಿದೆ. ಬಿಲ್ಲವ ಸಂಘಟನೆ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸುವುದಲ್ಲದೇ, ವೈಯಕ್ತಿಯವಾಗಿ ನೆರವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಗೀತ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಮೂಲಕ ಕರಾವಳಿಯಲ್ಲಿನ ಉದಯೋನ್ಮುಖ ಪ್ರತಿಭೆ ಗಳಿಗೆ ಅವಕಾಶ ನೀಡುವ ಕಾರ್ಯ ವಾಗಬೇಕು ಎಂದು ನಾಡೋಜಾ ಡಾ. ಜಿ. ಶಂಕರ್ ಹೇಳಿದರು. ಮನಸ್ಮಿತ ಫೌಂಡೇಶನ್ ಕೋಟ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ಕೋಟೇಶ್ವರದ ಯುವ ಮೆರಿಡಿಯನ್ ಒಪೆರಾ ಪಾರ್ಕ್‌ನಲ್ಲಿ ಶನಿವಾರ ರಾತ್ರಿ ಹಮ್ಮಿಕೊಳ್ಳಲಾದ ಡಾ. ಎಸ್. ಜಾನಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಗಾನಕೋಗಿಲೆ ಬಿರುದಿಗೆ ಪಾತ್ರರಾದ ಎಸ್. ಜಾನಕಿ ಹೆಸರಿನಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಮಿತ ಭಾಷಿ, ಸಹೃದಯಿಯಾಗಿರುವ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಅವರಿಗೆ ಲಭಿಸಿರುವುದು ನಿಜಕ್ಕೂ ಶ್ಲಾಘನೀಯ ವಾಗಿದ್ದು ಇದು ಜಾನಕಿ ಅಮ್ಮನಿಗೂ ತೃಪ್ತಿದಾಯಕ ವಿಚಾರ ಎಂದರು. ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಗಾಯಕ ರಾಜೇಶ್ ಕೃಷ್ಣನ್, ಹಲವಾರು ಪ್ರಶಸ್ತಿಗಳು ಈ ಹಿಂದೆ ಸಿಕ್ಕಿದ್ದರೂ ಕೂಡ ಈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದ ವರ್ಧಂತಿ, ಶತಚಂಡಿಕಾಯಾಗದ ಧಾರ್ಮಿಕ ಕಾರ್ಯಗಳು ಆನಗಳ್ಳಿ ಚೆನ್ನಕೇಶವ ಗಾಯತ್ರಿ ಭಟ್ಟರ ನೇತೃತ್ವದಲ್ಲಿ ಪ್ರಾರಂಭಗೊಂಡಿತು. ಅಷ್ಟೋತ್ತರ ಶತಕಲಶ ಸ್ಥಾಪನೆ, ವಾಸ್ತುಪೂಜೆ, ಶತಕಲಾಭಿಷೇಕ, ಯಾಗದ ಪೂರ್ವಾಂಗ, ಸಾಮೂಹಿಕ ಕುಂಕುಮಾರ್ಚನೆ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಿತು. ಶುಕ್ರವಾರ ನಾಗಮಂಡಲೋತ್ಸವದ ವರ್ಧಂತಿಯ ಪ್ರಯುಕ್ತ ಮೂಲ ನಾಗಬನದಲ್ಲಿ ಕಲಾತತ್ವಹೋಮ ಹಾಗೂ ನಾಗದೇವರಿಗೆ ಕಲಶಾಭಿಷೇಕ ನಡೆಯಿತು. ನಂತರ ಶ್ರೀಕ್ಷೇತ್ರ ಪೆರ್ಡೂರಿನ ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಕಲ್ಲಂಗಳ ಇವರಿಂದ ನಾಗಸಂದರ್ಶನ ಜರುಗಿತು. ಮಧ್ಯಾಹ್ನ ನಡೆದ ಮಹಾಅನ್ನಸಂತರ್ಪಣೆಯಲ್ಲಿ ಕರಾವಳಿ ಮೂರು ಜಿಲ್ಲೆಯ ಸುಮಾರು ಐದು ಸಹಸ್ರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಕೊಂಡದಕುಳಿ ಪೂರ್ಣಚಂದ್ರ ಯಕ್ಷಗಾನ ಮೇಳ ಕುಂಭಾಶಿ ಇವರಿಂದ ಯಕ್ಷಗಾನ ಪ್ರದರ್ಶನಗೊಂಡಿತು. ದೇವಳದ ಪ್ರಧಾನ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಸೇವಾಸಮಿತಿ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ಶ್ರೀನಿವಾಸ ಕುಮಾರ್, ಮಂಜುನಾಥ ಆಚಾರ್ಯ, ಬಿ. ಮಾಧವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಕ್ತಿಯು ದೇವಸ್ಥಾನಕ್ಕೆ ಮಾತ್ರ ಸೀಮಿತವಾಗದೇ ಪ್ರತಿಯೊಂದು ಜೀವರಾಶಿಯಲ್ಲಿಯೂ ದೇವರನ್ನು ಕಾಣುವಂತಾಗಬೇಕು. ಮನುಷ್ಯ ಮೌಢ್ಯಗಳಿಗೆ ಒಳಗಾಗದೇ, ಭಕ್ತಿ, ಶೃದ್ಧೆಯಿಂದ ನಿರಂತರವಾಗಿ ಸಾಧನೆ ಮಾಡಿದಾಗ ಭಗವಂತನನ್ನು ಕಾಣಬಹುದಾಗಿದೆ ಎಂದು ಭಾರತೀಯ ಸೇನಾ ಶಿಕ್ಷಣ ಕೋರ್‌ನ ನಿವೃತ್ತ ಉಪನ್ಯಾಸಕ ಬೈಂದೂರು ಚಂದ್ರಶೇಖರ ನಾವಡ ಹೇಳಿದರು. ಬೈಂದೂರು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಪ್ರತಿಷ್ಠಾ ವರ್ಧಂತಿ ಹಾಗೂ ಶತಚಂಡಿಕಾಯಾಗದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಭಕ್ತಿ ನಿಷ್ಠೆಯಿಂದ ಭಗವಂತನನ್ನು ಧ್ಯಾನಿಸಿದಾಗ ಆತ್ಮದ ಎಲ್ಲಾ ನ್ಯೂನ್ಯತೆಗಳನ್ನು ಹೋಗಲಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಧರ್ಮ ಜೀವನದ ಒಂದು ಭಾಗ. ಸಮಜದಲ್ಲಿ ಇದನ್ನು ಬೇರೆ ಭಾವನೆಗಳಿಂದ ನೋಡುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧರ್ಮದ ಬಗ್ಗೆ ಮಾತನಾಡುವುದು ತಪ್ಪು ಎಂಬ ವಾತಾವರಣ ನಿರ್ಮಾಣವಾಗಿದೆ. ಧರ್ಮದ ಮೇಲಿನ ಶೃದ್ಧೆಯನ್ನು ಕಡಿಮೆ ಮಾಡುವ ವ್ಯವಸ್ಥಿತ ಸಂಚು ತೆರೆಮರೆಯಲ್ಲಿ ನಡೆಯುತ್ತಿದೆ ಎಂದರು. ನಮ್ಮ ಉತ್ತಮ ಕಾರ್ಯಗಳಿಗೆ ದೈವ ಪ್ರೇರಣೆಯೇ ಬಲ ನೀಡುತ್ತದೆ. ಹಾಗೆಯೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೊಗವೀರ ಯುವ ಸಂಘಟನೆ ಬೈಂದೂರು ಶಿರೂರು ಘಟಕದ ೨೦೧೮-೨೦ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ್ ಬಿ. ತಗ್ಗರ್ಸೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಚಂದನ್ ಕಳವಾಡಿ ಆಯ್ಕೆಯಾಗಿದ್ದಾರೆ. ವಸಂತ ಅವರು ಈ ಹಿಂದೆ ಮೊಗವೀರ ಸಂಘಟನೆ ಕಾರ್ಯದರ್ಶಿ ಹಾಗೂ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ವಿವಿಧ ಸಂಘಟನೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಾಯುಮಾಲೀನ್ಯ, ಪರಿಸರ ರಕ್ಷಣೆ, ಸ್ವಚ್ಛತೆಯ ಬಗ್ಗೆ ಕೇವಲ ಮಾತನಾಡಿದರೆ ಅದು ಪ್ರಯೋಜನವಾಗದು. ಇದರಲ್ಲಿ ಮೊದಲು ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಂತರ ನಮ್ಮ ಕುಟುಂಬ ಸದಸ್ಯರ ಒಗ್ಗೂಡುವಿಕೆಯಲ್ಲಿ ಕೈಜೋಡಿಸಿದಾಗ ಮಾತ್ರ ಬದಲಾವಣೆ ತರಬಹುದು. ಸಾಮರಸ್ಯದಿಂದ ಒಟ್ಟಾಗಿ ಮಾಡುವ ಸಮಾಜ ಸೇವೆಯಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ರೋಟರಿ ವಲಯ ೪ರ ಸಹಾಯಕ ಗವರ್ನರ್ ಬಾಲಕೃಷ್ಣ ಮದ್ದೋಡಿ ಹೇಳಿದರು. ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ರೋಟರಿ ಜಾಗತಿಕ ತಿಳುವಳಿಕೆ (ವರ್ಡ್ ಅಂಡರ್‌ಸ್ಟ್ಯಾಂಡಿಗ್ ಡೇ) ದಿನಾಚರಣೆ ಅಂಗವಾಗಿ ನಡೆದ ಕುಟುಂಬ ಸ್ನೇಹ ಸಮ್ಮಿಲನ, ಶಾಂತಿ, ಸೇವೆ, ಸಾಂಗತ್ಯ ಮತ್ತು ಸಾಮರಸ್ಯಗಳಿಗಾಗಿ ರೋಟರಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಬೃಹತ್ ಗಾತ್ರದ ನಮ್ಮ ಜನಸಂಖ್ಯೆ ವಾತಾವರಣದಿಂದ ಉಷ್ಣತೆ ಅತ್ಯಂತ ವೇಗವಾಗಿ ಹೆಚ್ಚಿಸುತ್ತಿದೆ ಎಂಬ ಸತ್ಯ ನಮಗೆ ಇನ್ನೂ ಕೂಡಾ ಅರಿವಾಗಲಿಲ್ಲ. ಪ್ರಕೃತಿಯಲ್ಲಾಗುತ್ತಿರುವ ಸೂಕ್ಷ್ಮ ಪರಿವರ್ತನೆ ಅರ್ಥಮಾಡಿಕೊಳ್ಳುವ ವೈಚಾರಿಕತೆ ನಮ್ಮಲ್ಲಿ ಬೆಳೆಯಬೇಕಾಗಿದೆ ಜಾಗತಿಕ ಸಿಹಿ ನೀರಿನ ಮೂಲಗಳನ್ನು ಸಂರಕ್ಷಿಸಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಅಂಚಿನ ಜಗನ್ನಾಥ ಶೆಟ್ಟಿ ಅವರ ವ್ಯವಹಾರ ಸಂಕೀರ್ಣದಲ್ಲಿ ಆರಂಭವಾದ ಕರ್ನಾಟಕ ಬ್ಯಾಂಕ್‌ನ ೭೯೫ನೆ ಶಾಖೆಯನ್ನು ಬ್ಯಾಂಕ್‌ನ ಮಾಜಿ ನಿರ್ದೇಶಕ ಎ. ಜಿ. ಕೊಡ್ಗಿ ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು ೧೯೨೪ರಲ್ಲಿ ಸ್ಥಾಪನೆಯಾದ ಕರ್ನಾಟಕ ಬ್ಯಾಂಕ್ ಶೀಘ್ರವೇ ೮೦೦ ಶಾಖೆಗಳನ್ನು ಹೊಂದಲಿದೆ. ಅದು ಸಾಧನೆಯ ಮೂಲಕ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಸೇವೆ ಸಲ್ಲಿಸುವ ಮೂಲಕ ಸ್ಥಾಪಕರ ಆಶಯವನ್ನು ಈಡೇರಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಮಹಾ ಪ್ರಬಂಧಕ ವೈ. ವಿ. ಬಾಲಚಂದ್ರ ಮಾತನಾಡಿ ಕರ್ನಾಟಕ ಬ್ಯಾಂಕನ್ನು ಸಾಮಾನ್ಯ ಜನರು ರೂ. ೧೧,೫೮೨ರ ಬಂಡವಾಳದೊಂದಿಗೆ ಸ್ಥಾಪಿಸಿದರು. ಅದು ಸಾಮಾನ್ಯರಿಗೆ ಆರ್ಥಿಕ ನೆರವು ನೀಡಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ೯೫ನೆಯ ವರ್ಷ ತಲಪಿರುವ ಬ್ಯಾಂಕ್ ರೂ. ೫೪೦೦ ಕೋಟಿ ಬಂಡವಾಳ ಹೊಂದಿದೆ. ಉತ್ತಮ ಲಾಭ ಗಳಿಸುವ ಮೂಲಕ ೧.೬೮ ಲಕ್ಷ ಪಾಲುದಾರರಿಗೆ ಗರಿಷ್ಠ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಮಣಿಪಾಲ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಬುಡಕಟ್ಟುಗಳು ಮತ್ತು ವರ್ತಮಾನ ಎಂಬ ವಿಷಯದ ಕುರಿತು ಎರಡು ದಿನಗಳ ಬುಡಕಟ್ಟು ಸಮ್ಮೇಳನ ಹಾಗೂ ವಿಚಾರ ಸಂರ್ಕೀಣ ಭಂಡಾರ್ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಫೆ.26 ಹಾಗೂ 27ರಂದು ಜರುಗಲಿದೆ ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಅವರು ಹೇಳಿದರು. ಅವರು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ , ಬುಡಕಟ್ಟು ಜನಾಂಗದ ಸಂಸ್ಕೃತಿ, ಆಚರಣೆಯನ್ನು ತಿಳಿದುಕೊಳ್ಳುವುದಕ್ಕಾಗಿ ಕಾರ್ಯಕ್ರಮದ ಮೂಲಕ ವೇದಿಕೆ ನಿರ್ಮಿಸಿದ್ದು, ಬುಡಕಟ್ಟು ಸಮುದಾಯದ ಜನರ ಸಮಸ್ಯೆಗಳ ಪರಿಹಾರಕ್ಕೆ ದಾರಿ ಕಂಡುಕೊಳ್ಳುವ ಜೊತೆಗೆ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಅಮೃತ ಮಹೋತ್ಸವ ಹಾಗೂ ಮಣಿಪಾಲ್ ಅಕಾಡೆಮಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶದ ಪ್ರಧಾನಿ ಪ್ರತಿಯೊಬ್ಬ ಪ್ರಜೆಗೂ 15 ಲಕ್ಷ ಹಣ ಕೊಡುತ್ತೇನೆ ಎಂದರು. ಕೋಟಿ ಲೆಕ್ಕದಲ್ಲಿ ಉದ್ಯೋಗ ಕೊಡುವ ಭರವಸೆ ನೀಡಿದರು, ಆದರೆ ಪದವೀಧರ ಬೋಂಡಾ, ಎಂಬಿಬಿಎಸ್ ಬೋಂಡ, ಎಂಬಿಎ ಬೋಂಡ, ಬಿಕಾಂ ಬೋಂಡ ಮಾರುವಂತೆ ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ‍್ಯದರ್ಶಿ ವಿಷ್ಣುನಾಥನ್ ಟೀಕಿಸಿದರು. ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಭೂತ್ ಮಟ್ಟದ ಕಾಂಗ್ರೆಸ್ ಕಾರ‍್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ರೂಢಿಯಲಿ ಆಡದೇ ಮಾಡುವವನು ಉತ್ತಮನು, ಆಡಿಯೂ ಮಾಡದವನು ಮಧ್ಯಮನು, ಆಡಿಯೂ ಮಾಡದವರು ರೂಢಿಯೊಳು ಅಧಮರು! ಸಿದ್ದರಾಮಯ್ಯ ಆಡದೇ ಮಾಡುವ ಮೂಲಕ ಉತ್ತಮರಾದರೆ, ನರೇಂದ್ರ ಮೋದಿ ಆಡಿಯೂ ಮಾಡದೆ ರೂಢಿಯಲಿ..? ಎಂದು ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದರು. ರಾಜ್ಯದಲ್ಲಿ 53 ಸಾವಿರ ಭೂತಮಟ್ಟದ ಕಮಿಟಿ ರಚಿಸಿ, ಮನೆ ಮನೆಗೆ ಕಾಂಗ್ರೆಸ್ ಕಾರ‍್ಯಕ್ರಮ ಯಶಸ್ವಿಗೊಳಿಸಿದೆ. ಭೂತಮಟ್ಟದಲ್ಲಿ ಪಕ್ಷ ಗಟ್ಟಿಯಾದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯವಿದ್ದು, ಪ್ರತಿ ಮನೆಯ ಜೊತೆ ಲಿಂಕ್ ಬೆಳೆಸುವ ಮೂಲಕ…

Read More