Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಭಾರತ ಅಂಡರ್-19 ತಂಡಕ್ಕೆ ರಚಿತಾ ಹತ್ವಾರ್ ಆಯ್ಕೆ, ಕುಂದಾಪುರದ ಹುಡುಗಿಗೆ ಇಂಡಿಯಾ ಕ್ಯಾಪ್
    ಊರ್ಮನೆ ಸಮಾಚಾರ

    ಭಾರತ ಅಂಡರ್-19 ತಂಡಕ್ಕೆ ರಚಿತಾ ಹತ್ವಾರ್ ಆಯ್ಕೆ, ಕುಂದಾಪುರದ ಹುಡುಗಿಗೆ ಇಂಡಿಯಾ ಕ್ಯಾಪ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ವರದಿ.
    ಕುಂದಾಪುರ:
    ಡಿ.13ರಿಂದ 21ರ ವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ಬಿಸಿಸಿಐ ಆಯೋಜಿತ 19 ವರ್ಷದೊಳಗಿನ ಮಹಿಳೆಯರ ಏಕದಿನ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದ ನಾಯಕಿಯಾಗಿ ಕುಂದಾಪುರದ ರಚಿತಾ ಹತ್ವಾರ್ ಆಯ್ಕೆಯಾಗಿದ್ದಾರೆ. ಮಂಗಳೂರು ವಲಯದಿಂದ ‘ಇಂಡಿಯಾ ಕ್ಯಾಪ್’ ಧರಿಸಿದ ಮೊದಲ ಬಾಲಕಿ ಎಂಬ ಹೆಗ್ಗಳಿಕೆಗೆ ರಚಿತಾ ಪಾತ್ರರಾಗುವ ಮೂಲಕ ಕರಾವಳಿಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ.

    Call us

    Click Here

    ಉತ್ತಮ ವಿಕೆಟ್ ಕೀಪರ್ ಹಾಗೂ ಬ್ಯಾಟ‌ರ್ ಆಗಿರುವ ರಚಿತಾ, 19 ವರ್ಷದೊಳಗಿನ ಕರ್ನಾಟಕ ಮಹಿಳಾ ಏಕದಿನ ತಂಡದ ನಾಯಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. 15 ವರ್ಷದೊಳಗಿನ ಮಹಿಳಾ ತಂಡ, 19 ವರ್ಷದೊಳಗಿನ ಟಿ-20 ಹಾಗೂ 23 ವರ್ಷದೊಳಗಿನ ವಿಭಾಗಗಳಲ್ಲೂ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಕರ್ನಾಟಕದ ಹಿರಿಯರ ಸಂಭಾವ್ಯ ಆಟಗಾರ್ತಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದು, ಮಹಾರಾಣಿ ಟ್ರೋಫಿಯಂತಹ ಪ್ರಮುಖ ದೇಶೀಯ ಕ್ರಿಕೆಟ್ ಸ್ಪರ್ಧೆಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿದ್ದ ಮಹಿಳೆಯರ ಅಂಡರ್-19 ಟಿ20 ತ್ರಿಕೋನ ಸರಣಿಗಾಗಿ ಪ್ರಕಟಿಸಲಾದ ಭಾರತ ಅಂಡರ್-19 ‘ಬಿ’ ತಂಡದಲ್ಲಿ ರಚಿತಾ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದರು. ನವೆಂಬರ್ 10ರಿಂದ 22ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಈ ಟೂರ್ನಿ ನಡೆದಿದ್ದು, ಭಾರತ ಅಂಡರ್-19 ‘ಎ’, ಭಾರತ ಅಂಡರ್-19 ‘ಬಿ’ ಹಾಗೂ ನೇಪಾಳ ಅಂಡರ್-19 ತಂಡಗಳು ಭಾಗವಹಿಸಿದ್ದವು. ಈ ಸರಣಿಯು 2027ರ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ತಂಡದ ಸಿದ್ಧತೆಯ ಭಾಗವಾಗಿತ್ತು.

    ಹೀಗೆ ಕರ್ನಾಟಕದ ನಾನಾ ವಯೋಮಾನದ ತಂಡಗಳನ್ನು ಪ್ರತಿನಿಧಿಸಿ ಗಮನ ಸೆಳೆದಿರುವ ರಚಿತಾ, ಭಾರತ ತಂಡದ ವಯೋಮಿತಿ ವಿಭಾಗಕ್ಕೂ ಆಯ್ಕೆಯಾಗಿರುವುದು ಪ್ರತಿಭೆಗೆ ಸಾಕ್ಷಿ. ಸತತ ಪರಿಶ್ರಮ, ಶಿಸ್ತು ಮತ್ತು ಬದ್ಧತೆಯಿಂದ ರಾಜ್ಯಮಟ್ಟದ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. 19 ವರ್ಷದೊಳಗಿನ ಮಹಿಳೆಯರ ಏಕದಿನ ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವುದು ಆಕೆ ಭವಿಷ್ಯದ ಭರವಸೆಯ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

    ಕುಂದಾಪುರದ ವಕೀಲ ದಂಪತಿ ರಮೇಶ್ ಹತ್ವಾರ್ ಮತ್ತು ಸರಿತಾ ಹತ್ವಾರ್ ಅವರ ಕಿರಿಯ ಪುತ್ರಿ ರಚಿತಾಗೆ ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ. ಕೋವಿಡ್ ಲಾಕ್‌ಡೌನ್ ಸಂದರ್ಭ ಟಿವಿಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದರು. ಮಗಳ ಕ್ರಿಕೆಟ್ ಆಸಕ್ತಿ ಗುರುತಿಸಿದ ಹೆತ್ತವರು ಆಕೆಯ ಕನಸಿಗೆ ಬೆನ್ನೆಲುಬಾಗಿ ನಿಂತರು. ಮನೆಯಲ್ಲಿಯೇ ಎರಡು ಕ್ರಿಕೆಟ್ ನೆಟ್ ನಿರ್ಮಿಸಿಕೊಟ್ಟು ಅಭ್ಯಾಸಕ್ಕೆ ಅವಕಾಶ ಕಲ್ಪಿಸಿದರು. ಆರಂಭದಲ್ಲಿ ಚಕ್ರವರ್ತಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆದ ರಚಿತಾ, ಬಳಿಕ ಬೆಂಗಳೂರಿಗೆ ಸ್ಥಳಾಂತರಗೊಂಡರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್‌ನ ನಿರ್ದೇಶಕ ಹಾಗೂ ಪ್ರಧಾನ ಕೋಚ್ ಇರ್ಫಾನ್ ಸೇರ್ ಮಾರ್ಗದರ್ಶನದಲ್ಲಿ ಕೌಶಲವನ್ನು ಅಭಿವೃದ್ಧಿಪಡಿಸಿದರು. ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಪರಿಣತಿ ಸಾಧಿಸಿದರು.

    Click here

    Click here

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳು ವಲಯಮಟ್ಟಕ್ಕೆ ಆಯ್ಕೆ

    25/11/2026

    ಕುಂಭಾಸಿ: ಮಿನಿ ಬಸ್ಸಿಗೆ ಟ್ಯಾಂಕರ್ ಡಿಕ್ಕಿ – 30ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಸಣ್ಣಪುಟ್ಟ ಗಾಯ

    25/11/2026

    ಡಿ.27ರಂದು ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆ

    25/11/2026
    Leave A Reply Cancel Reply

    twenty − nineteen =

    Call us

    Click Here

    Call us

    Call us

    Call us
    Highest Viewed Recently
    • ಭಾರತ ಅಂಡರ್-19 ತಂಡಕ್ಕೆ ರಚಿತಾ ಹತ್ವಾರ್ ಆಯ್ಕೆ, ಕುಂದಾಪುರದ ಹುಡುಗಿಗೆ ಇಂಡಿಯಾ ಕ್ಯಾಪ್
    • ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿಗಳು ವಲಯಮಟ್ಟಕ್ಕೆ ಆಯ್ಕೆ
    • ಕುಂಭಾಸಿ: ಮಿನಿ ಬಸ್ಸಿಗೆ ಟ್ಯಾಂಕರ್ ಡಿಕ್ಕಿ – 30ಕ್ಕೂ ಅಧಿಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಸಣ್ಣಪುಟ್ಟ ಗಾಯ
    • ಡಿ.27ರಂದು ಶ್ರೀ ಶೃಂಗೇರಿ ಶಂಕರ ಮಠ ಕುಂಭಕಾಶಿ ವತಿಯಿಂದ ತಾಲೂಕು ಮಟ್ಟದ ಸ್ಪರ್ಧೆ
    • ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್: ಎರಡು ವಿಭಾಗದಲ್ಲಿ ಮೊಹಮ್ಮದ್ ಅಝಾನ್‌ ಪ್ರಥಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.