ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮೀಪದ ಕಾರಣಿಕ ಹಾಗೂ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾ ಗಣಯಾಗ(೧೦೦೮ ತೆಂಗಿನಕಾಯಿ) ನವಚಂಡಿ ಹವನ ಮತ್ತು ಸಂಕಷ್ಟಹರ ಚತುರ್ಥಿ ಮಹಾಪೂಜೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಸಾಂಗವಾಗಿ ನೆರವೇರಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಹಸ್ರ ನಾಳಿಕೇರ ಮಹಾ ಗಣಯಾಗ, ನವಚಂಡಿ ಹವನ, ಸಂಕಷ್ಟಹರ ಚತುರ್ಥಿ ಪೂಜೆಯಲ್ಲಿ ಪಾಲ್ಗೊಂಡು ಕೃಥಾರ್ತರಾದರು. ಕಿಕ್ಕಿರಿದು ಸೇರಿದ ಜನಸಂದಣಿಯ ನಡುವೆಯು ಆಡಳಿತ ಮಂಡಳಿ ಭಕ್ತರಿಗೆ ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದು, ಸಾಂಗವಾಗಿ ಸಾವಿರಾರು ಭಕ್ತಸಮೂಹ ದೇವರ ದರ್ಶನ ಪಡೆದರು. ಧಾರ್ಮಿಕ ಮಹೋತ್ಸವದ ಅಂಗವಾಗಿ ನವಗ್ರಹ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮತ್ತು ಹವನ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎರಡು ದಿನಗಳ ಹಿಂದಷ್ಟೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಕುಂದಾಪುರ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಲಾಡಿ ಅವರಿಗೆ ಶಾಲು ಹಾಕಿ, ಪಕ್ಷದ ಬಾವುಟ ನೀಡಿ ಸ್ವಾಗಿತಿಸಿಕೊಂಡರು. ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಮುಖಂಡರಾದ ಆರ್. ಅಶೋಕ್, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಮೊದಲಾದವರು ಈ ಸಂದರ್ಭ ಇದ್ದರು. ಕುಂದಾಪುರದಿಂದ ತೆರಳಿದ್ದ ಹಲವಾರು ಹಾಲಾಡಿ ಅವರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಲಾಡಿ ಅವರು ಬಿಜೆಪಿ ಪಕ್ಷದ ಟಾಲ್ ನಂಬರ್‌ಗೆ ಮಿಸ್ ಕಾಲ್ ನೀಡಿ ಸದಸ್ಯತ್ವ ಪಡೆದುಕೊಂಡದ್ದು ವಿಶೇಷವಾಗಿತ್ತು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಸ್ಥಾನ ನೀಡದೇ ಅವಮಾನಿಸಿದ್ದಾರೆಂಬ ಬೇಸರಕ್ಕೆ ಹಾಲಾಡಿ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಕಳೆದ 2017ರ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ಒಟ್ಟು 5 ರ‍್ಯಾಂಕ್ ಬಂದಿವೆ. ಬಿ.ಎಸ್ಸಿ ಪದವಿ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿ ಅಂಚೆ ಇಲಾಖೆ ಉದ್ಯೋಗಿಗಳಾಗಿರುವ ಉಪ್ಪುಂದದ ಶಿವಾನಂದ ಭಟ್ ಮತ್ತು ಶಾರದಾ ಭಟ್ ದಂಪತಿಯ ಪುತ್ರಿ ಶಾಂಭವಿ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಕುಂದಾಪುರದ ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು.ಎಸ್.ಶೆಣೈ ಮತ್ತು ಸಾಧನಾ ಶೆಣೈ ದಂಪತಿಯ ಪುತ್ರಿ ಯು. ಸಂಗೀತಾ ಶೆಣೈ ಎಂಟನೇ ರ‍್ಯಾಂಕ್ ಪಡೆದಿದ್ದಾರೆ. ಬಿ.ಸಿ.ಎ ಪದವಿ ವಿಭಾಗದಲ್ಲಿ ಹೊಸಾಡು ಗ್ರಾಮದ ಗುಜ್ಜಾಡಿಯ ರಾಮ ಪೂಜಾರಿ ಮತ್ತು ರುಕ್ಮಿಣಿ ದಂಪತಿಯ ಪುತ್ರಿ ಸಂಧ್ಯಾ ಐದನೇ ರ‍್ಯಾಂಕ್ ಪಡೆದಿದ್ದಾರೆ. ಮಣಿಪಾಲದ ನಾಗೇಂದ್ರ ಕಾಮತ್ ಅವರ ಪುತ್ರ ಕಾರ್ತಿಕ್ ಎನ್.ಕಾಮತ್ ಹತ್ತನೇ ರ‍್ಯಾಂಕ್ ಪಡೆದಿದ್ದಾರೆ. ಬಿ.ಎ ಪದವಿ ವಿಭಾಗದಲ್ಲಿ ಕುಂದಾಪುರದ ಟಿ . ಬಿ ನಗರದ ಶಂಕರ್ ಮತ್ತು ಜಾನಕಿಯವರ ಪುತ್ರಿ ರಜನಿ ಒಂಬತ್ತನೇ ರ‍್ಯಾಂಕ್ ಪಡೆದಿದ್ದಾರೆ. ಕಾಲೇಜಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕತಾರ್: ಇಲ್ಲಿನ ಕುಂದಾಪುರ ತಾಲೂಕು ಕ್ರಿಕೆಟರ‍್ಸ್ ಆಯೋಜಿಸಿದ್ದ ಎರಡನೇ ಆವೃತ್ತಿಯ ‘ಕುಂದಾಪುರ ಟ್ರೋಫಿ’ ಕ್ರಿಕೆಟ್ ಪಂದ್ಯಾಟದ ಫೈನಲ್‌ನಲ್ಲಿ ಅಲಿಯನ್ಸ್ ಕತಾರ್ ತಂಡವನ್ನು ಮಣಿಸಿದ ಗಲ್ಹಿನ್ನ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಕೆ. ಜಯಪ್ರಕಾಶ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಟ್ರೋಫಿ ವಿತರಿಸಿದರು. ಐಎಸ್‌ಸಿನ ಅಧ್ಯಕ್ಷರಾದ ಅಜೀಮ್ ಅಬ್ಬಾರ್ ಅವರನ್ನು ವಿಶೇಷವಾಗಿ ಸ್ವಾಗತಿಸಿಕೊಳ್ಳಲಾಯಿತು. ಕೆಟಿಸಿ ಅಧ್ಯಕ್ಷ ಇಕ್ಬಾಲ್ ನಾವುಂದ, ಕತಾರ್ ಪ್ರೀಲ್ಯಾನ್ಸ್ ಗ್ರೂಫ್‌ನ ಇಮ್ರಾನ್ ನಾವುಂದ, ಕೆಟಿಸಿಯ ಮಾಜಿ ಅಧ್ಯಕ್ಷ ಅಕ್ಬರ್ ಗಂಗೊಳ್ಳಿ, ಕನ್ನಡ ಸಂಘ ಕತಾರ್‌ನ ಅಧ್ಯಕ್ಷ ಹೆಚ್. ಕೆ. ಮಧು, ತುಳುಕೂಟದ ಅಧ್ಯಕ್ಷ ಅಸ್ಮತ್ ಅಲಿ, ಕೆಎಂಸಿಎ ಅಧ್ಯಕ್ಷ ಅಬ್ದುಲ್ಲ ಮೋನು, ಎಂಸಿಸಿ ಅಧ್ಯಕ್ಷ ಪ್ರಕಾಶ್ ನೋರೋನಾ, ಎಸ್‌ಕೆಎಂಡಬ್ಲ್ಯೂಎ ಅಧ್ಯಕ್ಷ ಅಬ್ದುಲ್ ಮಜೀದ್, ತುಳುಕೂಟದ ಪೋಷಕ ತುಫೈಲ್ ಮಥೀನ್ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ತಾಲೂಕು ಟ್ರಿಕೆಟರ‍್ಸ್‌ನ ಉಪಾಧ್ಯಕ್ಷ ಮುಬಾರಕ್ ಕೋಡಿ ಸ್ವಾಗತಿಸಿದರು. ಕೆಟಿಸಿ ಸಂಘಟನಾ ಸಮಿತಿ ಸದಸ್ಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಜೆಟ್ ಮಂಡನೆಯ ಮಹತ್ವದ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರಕ್ಕೆ ಅಗತ್ಯದ ಅನುದಾನ ಮಂಜೂರು ಮಾಡಿಸುವ ಮತ್ತು ಕ್ಷೇತ್ರದ ಹಲವಾರು ಜ್ವಲಂತ ಸಮಸ್ಯೆ ಇತ್ಯರ್ಥ ಪಡಿಸುವ ಅಪೂರ್ವ ಅವಕಾಶ ಇದ್ದರೂ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕ್ಷೇತ್ರ ಅನಾಥಗೊಳಿಸಿದ್ದಾರೆ. ೨೨೪ ಶಾಸಕರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿವೃದ್ದಿ ಕೆಲಸಗಳಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ ಎಂದು ರಾಜ್ಯ ಇಂಟೆಕ್ ಅಧ್ಯಕ್ಷ ರಾಕೇಶ್ ಮಲ್ಲಿ ಆರೋಪಿದ್ದಾರೆ. ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಅವಧಿಗೂ ಮುನ್ನ ರಾಜಿನಾಮೆ ಸಲ್ಲಿಸಿದ ಕುಂದಾಪುರ ನಿಕಟಪೂರ್ವ ಶಾಸಕರ ನಿಲವು ಖಂಡಿಸಿ ಕುಂದಾಪುರ, ಕೋಟ, ಹಾಗೂ ವಿವಿಧ ಮಹಿಲಾ ಮೋರ್ಚಾ, ಯುವ ಕಾಂಗ್ರೆಸ್ ಕಾರ‍್ಯಕರ್ತರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಕ್ಷೇತ್ರದ ಅಭಿವೃದ್ದಿಗಳ ಶಂಕುಸ್ಥಾಪನೆ, ವಿವಿಧಯೋಜನೆ, ಅಗತ್ಯವಿರುವ ದೊಡ್ಡ ದೊಡ್ಡ ಕಾನೂನುಗಳ ಅನುಷ್ಠಾನವಿರಬಹುದು ಇದರಲ್ಲಿ ಯಾವುದನ್ನೂ ಕುಂದಾಪುರ ಶಾಸಕರು ಮಾಡಿಲ್ಲ. ಕುಂದಾಪುರ ಶಾಸಕರ ಚಟುವಟಿಕೆಗಳು ಕಾಣಸಿಗುವುದಿಲ್ಲ ಎಂದು ಅವರು ಟೀಕಿಸಿದರು. ಯುವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರೋಟರಿ ಕ್ಲಬ್ ಕುಟುಂಬ ಸದಸ್ಯರ ದುಬೈ ಪ್ರವಾಸದ ಸಂದರ್ಭದಲ್ಲಿ ನಮ್ಮ ಕುಂದಾಪ್ರ ಕನ್ನಡ ಬಳಗ ದುಬೈ ಸಂಸ್ಥೆಯು ಬರ್‌ದಯಬೈನ ರಿಜೆಂಟ್ ಪ್ಯಾಲೆಸ್ ಹೋಟೆಲ್‌ನಲ್ಲಿ ಸಹಮಿಲನ, ಸನ್ಮಾನ ಹಾಗೂ ವಿಶೇಷ ಔತಣಕೂಟವನ್ನು ಏರ್ಪಡಿಸಿತ್ತು. ಸಹಮಿಲನ ಕಾರ್ಯಕ್ರಮದಲ್ಲಿ ಕುಂದಾಪುರ ರೋಟರಿ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ ಅವರ ನೂತನ ವೆಬ್ಸೈಟನ್ನು ದಿನೇಶ್ ದೇವಾಡಿಗ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ರೋಟರಿ ಕ್ಲಬ್‌ನಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕ್ರೀಯಾಶೀಲ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಬೈಂದೂರು ರೋಟರಿ ಕ್ಲಬ್‌ನ ಅಧ್ಯಕ್ಷ ಹುಂಚನಿ ಕೃಷ್ಣಪ್ಪ ಶೆಟ್ಟಿ (ಅಪ್ಪು ಮಾಸ್ತರ್) ದಂಪತಿಗಳನ್ನು ನ್ಮಾನಿಸಲಾಯಿತು. ಬೈಂದೂರಿನ ಹಿರಿಯ ರೋಟರಿ ಸದಸ್ಯರಾದ ಡಾ. ಎಮ್.ಎಸ್. ಶೆಟ್ಟಿ ಹಾಗೂ ಚಂದ್ರಕಲಾ ದಂಪತಿಗಳನ್ನು ಗೌರವಿಸಲಾಯಿತು. ಈ ಸಂದರ್ಭ ನಮ್ಮ ಕುಂದಾಪ್ರ ಕನ್ನಡ ಬಳಗದ ಅಧ್ಯಕ್ಷ ಸಾಧನ್ ದಾಸ್, ಉಪಾಧ್ಯಕ್ಷ ದಿನೇಶ್ ದೇವಾಡಿಗ, ಕಾರ್ಯದರ್ಶಿ ಸುಧಾಕರ ಪೂಜಾರಿ ಮತ್ತು ಚಂದ್ರಶೇಖರ್, ದುಬೈನಲ್ಲಿ ನೆಲೆಸಿರುವ ಕರುಣಾಕರ ಶೆಟ್ಟಿ, ರಿತೇಶ್ ಶೆಟ್ಟಿ, ವಾಸು ದೇವಾಡಿಗ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅನುಮಾನದ ದೃಷ್ಟಿಯೇ ಅಶಾಂತಿಗೆ ಕಾರಣವಾಗುತ್ತಿದೆ. ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಒಂದೇ ರಾಗದಿಂದ ಹಾಡುವ ಕಾಲ ಬರಬೇಕು. ಎಲ್ಲರನ್ನೂ ಗೌರವದೃಷ್ಟಿಯಲ್ಲಿ ನೋಡಬೇಕು, ಮಾನವ ಗುಣ ಕಾಣಬೇಕು. ಈ ಎಲ್ಲಾ ಬದಲಾವಣೆಯಿಂದ ರಾಗದ್ವೇಷವಿಲ್ಲದ ಬದುಕು ಸಾಧ್ಯ. ಎಲ್ಲರೂ ವಿಶ್ವ ಮಾನವರಾಗೋಣ ಎಂದು ಕನ್ನಡದ ಖ್ಯಾತ ಸಾಹಿತಿ ವೈದೇಹಿ ಹೇಳಿದರು. ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ವಿವಿಧ ಸಂಘಟನೆ ಆಶ್ರಯದಲ್ಲಿ ಮಂಗಳವಾರ ನಡೆದ ಸೌಹಾರ್ದತೆಗಾಗಿ ಮಾನವ ಸರಪಳಿ ಕಾರ‍್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿ, ಮಹಾತ್ಮ ಗಾಂಧಿ ಕೂಡಾ ಎಲ್ಲರಲ್ಲೂ ಮಾನವೀಯ ಗುಣ ಕಂಡಿದ್ದರಿಂದ ಮಹಾತ್ಮರಾದರು. ಹಂತಕರ ಗುಂಡಿಗೆ ಬಲಿಯಾದ ದಿನ ಮಾನವ ಸರಪಳಿ ಮೂಲಕ ಗಾಂಧಿ ಆಶಯ ಈಡೇರಿಸಬೇಕಾಗಿದೆ ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಎಸ್.ಎನ್.ಹೆಬ್ಬಾರ್, ಮುಖಂಡರಾದ ವಿನೋದ್ ಕ್ರಾಸ್ತಾ, ಸುರೇಶ್ ಕಲ್ಲಾಗರ, ವಿ.ನರಸಿಂಹ, ಪುರಸಭೆ ಸದಸ್ಯೆ ಕಲಾವತಿ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ವಿ.ನರಸಿಂಹ, ಹಿರಿಯ ಕಾಂಗ್ರೆಸಿಗ ಮಾಣಿ ಗೋಪಾಲ, ಕಾಂಗ್ರೆಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುವುದು ನಿಚ್ಚಳವಾಗಿದ್ದು ಸ್ಪೀಕರ್ ಕೆ. ಬಿ. ಕೋಳಿವಾಡ ಅವರನ್ನು ರಾಣಿಬೆನ್ನೂರಿನಲ್ಲಿ ಭೇಟಿಯಾಗಿ ರಾಜಿನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷಕ್ಕೆ ಮರುಸೇರ್ಪಡೆಗೊಂಡು ಮುಂದಿನ ವಿಧಾನಸಭಾ ಚುವಾವಣೆಯಲ್ಲಿ ಮತ್ತೆ ಸ್ವರ್ಧಿಸುವ ಆಕಾಂಕ್ಷೆ ಹೊಂದಿದ್ದ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಪಕ್ಷಾಂತರ ನಿಷೇಧ ಕಾಯ್ದೆಯಿಂದಾಗಿ ಬಿಜೆಪಿ ಸೇರ್ಪಡೆಯಿಂದ ಈ ತನಕ ದೂರ ಉಳಿಸಿದ್ದರು. ಈ ಚುನಾವಣೆ ಸಮೀಪಿಸಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ವರ್ಷದ ಹಿಂದೆ ಬಿಜೆಪಿ ಸಭೆಯಲ್ಲಿ ಸಭಿಕರ ಸಾಲಿನಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದ ಪಕ್ಷೇತರ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಮತ್ತೆ ಬಿಜೆಪಿಗೆ ಮರಳುವ ಸೂಚನೆ ನೀಡಿದ್ದರಾದರೂ ತಾಂತ್ರಿಕ ಕಾರಣಗಳಿಂದಾಗಿ ಸುಮ್ಮನುಳಿದಿದ್ದರು. ಬಿಜೆಪಿ ಪರಿವರ್ತನಾ ಯಾತ್ರೆಯ ವೇಳೆ ಹಾಲಾಡಿ ಬಣ ಹಾಗೂ ಮೂಲ ಬಿಜೆಪಿಗರ ಬಣದ ನಡುವೆ ಜಟಾಪಟಿ ಉಂಟಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶ್ರೀನಿಧಿ ಟ್ರಸ್ಟ್ ಕೆರ್ಗಾಲು, ಕರ್ನಾಟಕ ಕಾರ್ಮಿಕ ವೇದಿಕೆ ಉಪ್ಪುಂದ, ಅಂಜಲಿ ಆಸ್ಪತ್ರೆ ಬಂದೂರು ಇವರ ಸಹಯೋಗದೊಂದಿಗೆ ಉಪ್ಪುಂದ ಸಪಪೂ ಕಾಲೇಜಿನಲ್ಲಿ ನಡೆದ ಉಚಿತ ಅಂಬ್ಯುಲೆನ್ಸ್ ಸೇವೆ ಲೋಕಾರ್ಪಣೆ ಮತ್ತು ಸಂಪೂರ್ಣ ಉಚಿತ ಕಣ್ಣು ಮತ್ತು ದಂತ ಹಾಗೂ ಆರೋಗ್ಯ ತಪಾಸಣೆ ಶಿಬಿರ ಜರುಗಿತು. ಶಿಬಿರವನ್ನು ಉದ್ಘಾಟಿಸಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ ಪ್ರತಿಯೊಂದು ಜೀವಗಳು ಅಮೂಲ್ಯವಾಗಿದ್ದು, ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆ ಅತೀ ಮುಖ್ಯವಾಗಿರುತ್ತದೆ. ತತ್‌ಕ್ಷಣ ಅಂಬ್ಯುಲೆನ್ಸ್ ಸೇವೆ ಲಭ್ಯವಾದರೆ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಲು ಸಾಧ್ಯವಾಗುತ್ತದೆ. ನಾನು ಮತ್ತು ನನ್ನ ಸಂಸಾರ ಎಂಬ ತತ್ವವನ್ನು ಬಿಟ್ಟು ಪರರ ಸುಖ, ಕಷ್ಟಗಳಿಗೂ ಸ್ಪಂದಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಾನು ದುಡಿದ ಸ್ವಲ್ಪ ಭಾಗವನ್ನು ಇಂತಹ ಸಾಮಾಜಿಕ ಸೇವೆಗೆ ಮಿನಿಯೋಗಿಸಿದಾಗ ಮನುಷ್ಯ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ನಿಸ್ವಾರ್ಥ ಹಾಗೂ ಮಾನವೀಯತೆಯಿಂದ ಇಂತಹ ಮಹತ್ಕಾರ್ಯಗಳನ್ನು ಮಾಡುವುದರಿಂದ ದೇವರು ಕೂಡಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ಎಸ್‌ಜಿಎಸ್ ಇಂಟರ್‌ನ್ಯಾಶನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರವು ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ಆಯೋಜಿಸಿದ್ದ ೬ನೇ ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಯಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಿದ್ದ ಮರವಂತೆಯ ಯೋಗಪಟು ಕುಶ ಪೂಜಾರಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಬಾಲ್ಯದಿಂದಲೇ ಯೋಗ ತರಬೇತಿ ಪಡೆದು ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವಾಗ ನಡೆದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದ ಸಾಧನೆ ಕುಶ ಅವರದು. ಬಿ. ಕಾಂ ಪದವಿ ಮುಗಿಸಿರುವ ಅವರು ಪ್ರಸಕ್ತ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಯೋಗವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಅಧ್ಯಯನ ನಡೆಸುತ್ತಿದ್ದಾರೆ. ಕುಶ ಪೂಜಾರಿ ಮರವಂತೆ ಗುಳದಾಳಿಬೆಟ್ಟು ರಾಮಚಂದ್ರ ಪೂಜಾರಿ, ಲೀಲಾವತಿ ಪೂಜಾರಿ ದಂಪತಿಯ Also read: ► ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಗೆ ಕುಶ ಪೂಜಾರಿ – http://kundapraa.com/?p=27277
