ಕುಂದಾಪ್ರ ಡಾಟ್ ಕಾಂ ಸುದ್ದಿ. ಕೇಂದ್ರ ಸರಕಾರ ಕೈಗೊಂಡ ಆರ್ಥಿಕ ಸುಧಾರಣೆಯ ಮುಂದಿನ ಭಾಗವಾಗಿ ಬ್ಯಾಂಕ್ ಹಾಗೂ ಇತರ ಹಣಕಾಸು ಕ್ಷೇತ್ರದಲ್ಲಿ ನಗದು ರಹಿತವಾದ ವ್ಯವಹಾರಗಳನ್ನು ದೈನಿಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉಡುಪಿ ಜಿಲ್ಲಾ ಅಗ್ರಿಣಿ ಬ್ಯಾಂಕಿನ ಮುಖ್ಯಪ್ರಬಂಧಕ ಫ್ರಾನ್ಸಿಸ್ ಬೋರ್ಗೆ ಹೇಳಿದರು. ಗೋಳಿಹೊಳೆ ಗ್ರಾಮ ಪಂಚಾಯತ್, ಸ್ಥಳೀಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನಬಾರ್ಡ್ ಮತ್ತು ಜ್ಞಾನಜ್ಯೋತಿ ಆರ್ಥಿಕ ಸಲಹಾ ಕೇಂದ್ರ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ, ನಗದು ರಹಿತ ವ್ಯವಹಾರದ ಕುರಿತಾಗಿ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಎಸ್. ಜಿ. ಗಚ್ಚಿನ ಮಠ್ ಇವರು ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆಯ ಫಲಾನುಭವಿಗಳಿಗೆ ತಲಾ ರೂ. ೨ ಲಕ್ಷದ ಪರಿಹಾರ ಧನ ವಿತರಿಸಿದರು. ಶರತ್ ಕುಮಾರ್ ಮತ್ತು ಜಿ. ಜಿ. ಹೆಗ್ಡೆ ನಗದು ರಹಿತ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸಮೀಪ ಹರವರಿಯಲ್ಲಿ ವಿಜಯನಗರ ಕಾಲದ ಕನ್ನಡ ಶಾಸನ ಪತ್ತೆಯಾಗಿದ್ದು, ಶಾಸನ ಆರಂಭಿಕ ಬರಹ ಸಂಪೂರ್ಣವಾಗಿ ಅಳಿಸಿ ಹೋಗಿದೆ. ಶಾಸನದ ಕೆಳಗಿನ ೧೨ ಸಾಲುಗಳು ಮಾತ್ರ ಸ್ಪಷ್ಟವಾಗಿದ್ದು, ಶಾಸನ ಬರಹದ ಪ್ರಕಾರ ಹರವರಿಯ ಭೂಮಿ ಶ್ರೀ ತಿಂಮಂಣ ಗುರುರಾಯರಿಗೆ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಲೆಂದು ದೇವರಾಯಪುರದ ಮಹಾಜನಂಗಳಿಗೆ ನೀರನೆರೆದು ದಾನವಾಗಿ ನೀಡಲಾಯಿತೆಂದು ಹೇಳಲಾಗಿದೆ. ಪುರಾತತ್ವ ವಿದ್ವಾಂಸ ಪ್ರೊ.ಟಿ.ಮುರುಗೇಶಿ ಪತ್ತೆಮಾಡಿದ್ದಾರೆ. ಆಯತಾಕಾರದ ಸುಮಾರು ೧೧೦ ಸೆ.ಮೀ ಉದ್ದದ ಕಲ್ಲು ಚಪ್ಪಡಿ ಮೇಲ್ಭಾಗ ಕುದುರೆ ಲಾಳಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮೇಲಿನ ಪಟ್ಟಿಕಯಲ್ಲಿ ಸೂರ್ಯ-ಚಂದ್ರ, ಶಿವಲಿಂಗ, ದೀಪದ ಕಂಭ ಮತ್ತು ರಾಜ ಶಾಸನ ಎಂಬುದರ ಪ್ರತೀಕವಾಗಿ ಚಿತ್ರಿಸಿರುವ ಖಡ್ಗವಿದೆ. ಶಾಸನ ಬರಹದ ಪ್ರಕಾರ ಹರವರಿಯ ಭೂಮಿ ಶ್ರೀ ತಿಂಮಂಣ ಗುರುರಾಯರಿಗೆ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಲೆಂದು ದೇವರಾಯಪುರದ ಮಹಾಜನಂಗಳಿಗೆ ನೀರನೆರೆದು ದಾನವಾಗಿ ನೀಡಲಾಯಿತೆಂದು ಹೇಳಲಾಗಿದೆ. ಈ ದಾನ ಶಾಸನಕ್ಕೆ ಸಾಕ್ಷಿಗಳು ತಿಮ್ಮಂಣಗಳು, ಅವಧಾನಿ ನಾಗಂಣಗಳು ಎಂದು ಹೇಳಲಾಗಿದೆ. ಶಾಸನದ ಮೇಲಿನ ಬರಹ ಪೂರ್ತಿಯಾಗಿ ಅಳಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಿಮೂರ್ತಿಗಳಲ್ಲಿ ಪರಶಿವ ಅಪಾರ ಕರುಣಾಮಯಿ. ಭಕ್ತರಿಗಾಗಿ ತಾನು ಎಂತಹ ಕಷ್ಟ ಅನುಭವಿಸಲೂ ಸಿದ್ಧ. ಶಿವನಿಗೆ ಅರ್ಪಿಸಬೇಕಾಗಿರುವುದು ಶುದ್ಧ ಭಕ್ತಿ ಮಾತ್ರ. ಅಭಿಷೇಕ ಪ್ರಿಯನಾದ ಶಿವ ಒಂದು ಬಿಂದಿಗೆ ನೀರು. ಒಂದು ಬಿಲ್ವ ಪತ್ರೆಗೆ ಒಲಿದು ಬಿಡುವ. ರಾವಣನ ಭಕ್ತಿಗೆ ಮೆಚ್ಚಿದ ಆತ ಆತ್ಮಲಿಂಗಗಳನ್ನೇ ನೀಡಿದ. ಅರಿವಿಲ್ಲದೇ ಬಿಲ್ವ ಪತ್ರೆ ಸೇವೆ ನಡೆಸಿದ ಕಣ್ಣಪ್ಪನಿಗೆ ಒಲಿದ, ಸಮುದ್ರ ಮಥನದ ಕಾಲದಲ್ಲಿ ಅಳುಕದೇ ವಿಷ ನುಂಗಿ ಭಕ್ತರನ್ನು ರಕ್ಷಿಸಿದ ಇಂತಹ ಶಿವ ಯೋಗಿ,ತ್ಯಾಗಿ, ಭೋಗಿ ಎಲ್ಲವೂ ಹೌದು. ಶಿವಾಲಯಕ್ಕೆ ಭೇಟಿ ನೀಡಿ ಸದಾಶಿವನ ಧ್ಯಾನಗಳಿಂದ ನಾವು ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ ಎಂದು ಸರಕಾರಿ ಪ್ರೌಡಶಾಲೆ ಮಣುರೂ ಪಡುಕೆರೆಯ ಶ್ರೀಧರ ಶಾಸ್ತ್ರಿ ಗುಂಡ್ಮಿ ಹೇಳಿದರು. ಅವರು ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ೧೭ ನೇ ವರ್ಧಂತ್ಯೋತ್ಸವ ಹಾಗೂ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಕುಂದಾಪುರ ವ್ಯಾಸರಾಜ ಮಠದಲ್ಲಿ ನವೀಕೃತಗೊಂಡ ಶ್ರೀ ಶ್ರೀ ರಾಮಚಂದ್ರತೀರ್ಥ ಶ್ರೀ ಪಾದಂಗಳರವರ ಮತ್ತು ಶ್ರೀ ಶ್ರೀ ಹಯಗ್ರೀವ ತೀರ್ಥ ಶ್ರೀ ಪಾದಂಗಳರವರ ವೃಂದಾವನಗಳ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಸ್ತೀ ಪಾರ್ಕ್ನಿಂದ ಮಠದ ತನಕ ಪೂಜ್ಯ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀ ಪಾದಂಗಳರವರನ್ನು ವೈಭವದ ಪುರಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಪುರಮೆರವಣಿಗೆಯಲ್ಲಿ ಕಳಸ ಹಿಡಿದ ಮಹಿಳೆಯರು ಸೇರಿದಂತೆ ಪಂಚವಾದ್ಯಗಳೊಂದಿಗೆ, ಚಂಡೆ, ಕೀಲುಕುದುರೆ, ತಟ್ಟಿರಾಯ, ಸಾವಿರಾರೂ ಭಕ್ತರು ಪುರಮೆರವಣಿಗೆಗೆ ಸಾಕ್ಷಿಯಾದರು. ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಸಮಾಜದ ಹಿರಿಯ ಮುಖಂಡರಾದ ಸುದೀರ್ ಪಂಡಿತ್, ಗೋಪಾಲ ರಾವ್ ಉಡುಪಿ, ದಾನಿಗಳಾದ ಕೆ.ಎಮ್.ಶೇಖರ್ ಮತ್ತು ಕೆ.ಎಮ್.ಲಕ್ಷ್ಮಣ, ಜಿ.ಆರ್. ಚಂದ್ರಯ್ಯ, ಬಿ.ಎಸ್.ಮಂಜುನಾಥ್, ಗೋಪಾಲ ಚೆಲ್ಲಿಮಕ್ಕಿ, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷ ದಿನೇಶ್ ಗಾಣಿಗ, ಬೆಂಗಳೂರು, ಮುಂಬೈ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರಿನ ಜನತೆಯ ಸಂಘಟಿತ ಒಗ್ಗೂಡುವಿಕೆಯಿಂದ ಕೊಲ್ಲೂರು ಅಷ್ಟಪವಿತ್ರ ನಾಗಮಂಡಲೋತ್ಸವ ಅತ್ಯಂತ ಯಶಸ್ವಿಯಾಗಿ ಜರಗಿದೆ. ರಮೇಶ ಗಾಣಿಗರ ಸಾರ್ವಜನಿಕ ಸೇವೆಯ ಪ್ರತಿರೂಪವಾಗಿ ಈ ನಾಗಮಂಡಲೋತ್ಸವ ಅದ್ದೂರಿಯಾಗಿ, ನಿರ್ವಿಘ್ನವಾಗಿ ಯಶಸ್ಸುಗೊಂಡಿದೆ. ಇದರ ಯಶಸ್ಸಿನಿಂದ ಕೊಲ್ಲೂರು ಅಭಿವೃದ್ಧಿಗೆ, ಕೊಲ್ಲೂರಿನಲ್ಲಿ ಜನತೆಯ ಒಗ್ಗಟ್ಟಿಗೆ ಇದು ದಿಕ್ಸೂಚಿಯಾಗಲಿ ಎಂದು ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. ಕೊಲ್ಲೂರು ಶ್ರೀಮತಿ ನಯನಾ ರಮೇಶ ಗಾಣಿಗ ಮತ್ತು ಮಕ್ಕಳು ನಂಬಿರುವ ಮೂಲ ನಾಗಬನದಲ್ಲಿ ಮಾ.೧೦ರಂದು ನಡೆದ ಅಷ್ಟಪವಿತ್ರ ನಾಗಮಂಡಲದ ಯಶಸ್ಸಿಗೆ ದುಡಿದ ಸ್ವಯಂಸೇವಕರ ’ಉಪಕಾರ ಸ್ಮರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಷ್ಟಪವಿತ್ರ ನಾಗಮಂಡಲದ ಯಶಸ್ಸಿಗೆ ದುಡಿದ ಸಾವಿರಾರು ಸ್ವಯಂಸೇವಕರ ಸೇವೆಯನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಲಾಯಿತು. ಎಲ್ಲ ಸ್ವಯಂಸೇವಕರ ಪರವಾಗಿ ಕೃತಜ್ಞತಾ ಪತ್ರವನ್ನು ಕೊಲ್ಲೂರು ಗ್ರಾಮ ಪಂಚಾಯತ್ಗೆ ಹಸ್ತಾಂತರಿಸಲಾಯಿತು. ಸಭೆಯಲ್ಲಿ ಶುಭಶಂಸನೆಗೈದ ವೇ.ಮೂ.ಕೃಷ್ಣ ಭಟ್ ನೂಜಾಡಿ, ಇಂಥಹ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಲು ಯೋಗ ಬೇಕು. ನಾನು ಈ ಬಾರಿ ಮೂರು ನಾಗಮಂಡಲ ಪೌರೋಹಿತ್ಯ ಮಾಡಿದ್ದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಹೆಗ್ಗಳಿಕೆ ಉಡುಪಿ ಜಿಲ್ಲೆಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಉತ್ತಮ ಫಲಿತಾಂಶ ಪಡೆಯುವಲ್ಲಿ ನಮ್ಮ ಶಿಕ್ಷಕರ ಶ್ರಮ ಶ್ಲಾಘನೀಯವಾದುದು. ಈ ಭಾರಿಯು ಉಡುಪಿ ಜಿಲ್ಲೆಯ ವಿದಾರ್ಥಿಗಳು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯನ್ನು ಲೋಪಾರ್ಪಣೆಗೊಳಿಸಿದ ಬಳಿಕ ಮಾತನಾಡಿ ಶಿಕ್ಷಣಾಧಿಕಾರಿಗಳ ಕಛೇರಿಯ ಮೂಲಕ ಶಿಕ್ಷಕರಿಗೆ ಸರಕಾರದಿಂದ ಆಗಬೇಕಾದ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಿಕೊಡುವ ಕೆಲಸವಾಗಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಉತ್ತಮ ಸವಲತ್ತು ಸೌಲಭ್ಯ ಸಿಗುವಂತಾಗಬೇಕು. ಬೈಂದೂರಿನಲ್ಲಿ ಗುರುಭವನ ನಿರ್ಮಾಣದ ಮನವಿಯನ್ನು ಪುನರ್ಪರಿಶೀಲಿಸಿ ಶೀಘ್ರವೇ ಜಾಗ ಗುರುತಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದರು. ಬೈಂದೂರು ತಾಲೂಕು ರಚನೆಗೆ ಪೂರಕವಾಗಿ ಇನ್ನು ಇಪ್ಪತ್ತು ಸರಕಾರಿ ಕಛೇರಿಗಳು ಬೈಂದೂರು ಭಾಗದಲ್ಲಿ ಆಗಬೇಕಾಗಿದೆ. ಎಪ್ರಿಲ್ ಅಂತ್ಯದೊಳಗೆ ಎಲ್ಲಾ ಸರಕಾರಿ ಕಛೇರಿಗಳು ಬೈಂದೂರು ತಾಲೂಕಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗ್ರಾಮದ ಸಮಸ್ಯೆಗಳ ನಿವಾರಣೆ, ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒಂದಷ್ಟು ಚರ್ಚೆಗಳು, ಬೇಡಿಕೆಗಳು ಶುಕ್ರವಾರ ಗುಜ್ಜಾಡಿಯ ರಾಮಮಂದಿರದಲ್ಲಿ ನಡೆದ ಗುಜ್ಜಾಡಿ ಗ್ರಾ.ಪಂ.ನ 2ನೇ ಸುತ್ತಿನ ಗ್ರಾಮಸಭೆಯಲ್ಲಿ ಕೇಳಿಬಂದವು. ಗ್ರಾ.ಪಂ. ಅಧ್ಯಕ್ಷ ಹರೀಶ್ ಮೇಸ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಕೆಲವು ನ್ಯೂನತೆಗಳು ಹಾಗೂ ಸಮಸ್ಯೆಗಳನ್ನು ನಿವಾರಿಸಲು ಬೇಡಿಕೆಗಳನ್ನು ಇಟ್ಟರು. ಕಳೆದ ಹಲವಾರು ಸಭೆಗಳಲ್ಲಿ ಅಧಿಕಾರಿಗಳ ಗೈರು ಹಾಜರಿಯನ್ನು ಕಂಡಿದ್ದ ಈ ಗ್ರಾಮಸಭೆಯಲ್ಲಿ ಇಂದು ಹೆಚ್ಚಿನ ಅಧಿಕಾರಿಗಳು ಭಾಗವಹಿಸಿದ್ದರು. ಗುಜ್ಜಾಡಿಯಲ್ಲಿ ಶ್ಮಶಾನ ನಿರ್ಮಾಣವಾಗಬೇಕು ಎಂದು ಗ್ರಾಮಸ್ಥರೊಬ್ಬರು ಬೇಡಿಕೆಯನ್ನಿಟ್ಟರು. ಜನತಾ ಕಾಲನಿಯ ನಿವಾಸಿಗಳ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿದ್ದ ಬಾವಿಯಿಂದ ಇತರರು ವಾಣಿಜ್ಯ ಕೆಲಸಗಳಿಗೆ ಉಪಯೋಗಿಸಲು ಕೊಂಡೊಯ್ಯುವು ದರಲ್ಲಿ ಪರಿಸರವನ್ನು ಗಲೀಜು ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆಗ್ರಹಿಸಿದರು. ನಾಯಕವಾಡಿ -ಗುಜ್ಜಾಡಿ ರಾಮಂದಿರದ ರಸ್ತೆಯಲ್ಲಿ ಅಪಘಾತ ವಲಯದಲ್ಲಿ ದಾರಿದೀಪ ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯೆ ಶೋಭಾ ಜಿ. ಪುತ್ರನ್ ಅವರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರಕಾರಿ ನಿವೇಶನ ಸ್ಥಳ ಜನತಾ ಕಾಲೋನಿಯಲ್ಲಿ ಭೂಮಿ ಪಡೆದುಕೊಂಡು ಇನ್ನು ಮನೆ ಕಟ್ಟದೆ ಸ್ಥಳ ಖಾಲಿ ಬಿಟ್ಟು ಅಥವಾ ಇತರರಿಗೆ ವಹಿಸಿಕೊಟ್ಟ ಪ್ರಕರಣ ಇದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ವಾಸ ಇರುವವರಿಗೆ ಭೂಮಿಯನ್ನು ಹಸ್ತಾಂತರಿಸಲು ಕ್ರಮವಹಿಸಬೇಕು. ಭೂಮಿ ನೀಡಿದ ಎರಡು ವರ್ಷದೊಳಗೆ ಮನೆ ಕಟ್ಟಿಕೊಳ್ಳಬೇಕು ಎಂಬ ಷರತ್ತು ಇದೆ. ಅದನ್ನು ಮೀರಿ ಇತರರಿಗೆ ವಹಿಸಿಕೊಟ್ಟಿಲ್ಲ. ಅವರಿಗೆ ಹಸ್ತಾಂತರಿಸಬೇಕು ಎಂದು ಶಿರೂರಿನ ನಿವೇಶನ ರಹಿತರ ಹೋರಾಟ ಸಮಿತಿಯ ಮುಖಂಡ ಶೋಯೆಬ್ ಅರೆಹೊಳೆ ಹೇಳಿದರು. ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತ ಹಾಗೂ 94ಸಿ ಅರ್ಜಿದಾರರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಮಾತನಾಡುತ್ತಾ ಶಿರೂರು ಗ್ರಾಮದ ಮೊದೀನತಾರ ಮತ್ತು ನ್ಯೂಕಾಲಿನಿಯಲ್ಲಿ ಸರಕಾರಿ ಜಾಗದ ನಿವಾಸಿಗಳಿಗೆ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಏಪ್ರಿಲ್ 18 ರಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸೌಹಾರ್ದ ಸಹಕಾರಿಗಳ ಅಭಿವೃದ್ಧಿಗೆ ಪೂರಕವಾಗುವ ಹಾಗೂ ಪ್ರತಿನಿಧಿಗಳ ದಕ್ಷತೆ ಹೆಚ್ಚಿಸುವ, ಸೌಹಾರ್ದ ಸಹಕಾರಿಗಳಲ್ಲಿ ವೃತ್ತಿಪರತೆ, ಶಾಖಾವಾರು ಲಾಭದಾಯಕವಾಗಿ ಕಾರ್ಯನಿರ್ವಹಣೆ, ಬದಲಾಗುತ್ತಿರುವ ಜಗತ್ತಿನಲ್ಲಿ ನಗದು ರಹಿತ ವ್ಯವಹಾರದ ತಂತ್ರಜ್ಞಾನದ ತಿಳುವಳಿಕೆಯ ಕೌಶಲ್ಯ ವೃದ್ಧಿ ವಿಷಯಗಳ ಕುರಿತಾದ ಕಾರ್ಯಾಗಾರವು ಅತ್ಯವಶ್ಯಕವಾಗಿದೆ ಎಂದು ಸಹಕಾರಿ ಧುರೀಣ ರಾಜು ಪೂಜಾರಿ ಹೇಳಿದರು. ಅವರು ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿ. ಕಚೇರಿಯಲ್ಲಿ ನಡೆದ ಜಿಲ್ಲಾ ಸೌಹಾರ್ದ ಸಹಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಮಯುಕ್ತ ಸಹಕಾರಿ ನಿ. ಬೆಂಗಳೂರಿನ ನಿರ್ದೇಶಕ ಬಿ. ಭಾಸ್ಕರ ಕಾಮತ್, ಸಂಪನ್ಮೂಲ ವ್ಯಕ್ತಿ, ಶಿವಮೊಗ್ಗದ ಸನ್ಮತಿ ಪ್ರತಿಷ್ಠಾನದ ಬಿ. ಎ. ಮಹದೇವಪ್ಪ, ಗಂಗೊಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆನಂದ ಬಿಲ್ಲವ, ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ)ಯ ಉಪಾಧ್ಯಕ್ಷ ಸುಧಾಕರ ಖಾರ್ವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ನಮ್ಮ ದೇಶದಲ್ಲಿ ನಾವು ಸುರಕ್ಷಿತವಾಗಿವಾಗಿರಬೇಕಿದ್ದರೆ ನಮ್ಮ ದೇಶದ ಗಡಿಯನ್ನು ಕಾಯುತ್ತಿರುವ ಯೋಧರು ಮುಖ್ಯ ಕಾರಣ. ಕೊರೆವ ಚಳಿ, ಮೈಸುಡುವ ಬಿಸಿಲನ್ನು ಲೆಕ್ಕಿಸದೆ ದೇಶದ ಗಡಿಯಲ್ಲಿ ನಿಂತು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವ ಯೋಧರನ್ನು ನಾವು ಪ್ರತಿನಿತ್ಯ ಸ್ಮರಿಸಿಕೊಳ್ಳಬೇಕು. ದೇಶದ ಆಂತರಿಕ ಹಾಗೂ ಹೊರಗಿನ ದೇಶವಿರೋಧಿ ಶಕ್ತಿಯನ್ನು ದಮನಿಸುತ್ತಾ ದೇಶವನ್ನು ಕಾಯುವ ನಮ್ಮ ದೇಶದ ಯೋಧರ ಕಾರ್ಯ ಪ್ರಶಂಸನೀಯ. ಇತ್ತೀಚಿಗೆ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ದೇಶ ಸೇವೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ ಎಂದು ಉಡುಪಿ ಜಿಲ್ಲಾ ಹಿಂದು ಜಾಗರಣ ವೇದಿಕೆ ಸಂಚಾಲಕ ಅರವಿಂದ ಕೋಟೇಶ್ವರ ಹೇಳಿದರು. ಅವರು ಗಂಗೊಳ್ಳಿಯ ಸ್ಫೂರ್ತಿ ಮಹಿಳಾ ಘಟಕದ ಆಶ್ರಯದಲ್ಲಿ ಗಂಗೊಳ್ಳಿ ದೊಡ್ಡಹಿತ್ಲು ವಠಾರದಲ್ಲಿ ಜರಗಿದ ಸಂದೀಪ್ ಉನ್ನಿಕೃಷ್ಣನ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸಲು ಮಾತೆಯರು ಮುಂದಾಗಬೇಕು. ಹೆಣ್ಣು ಮಕ್ಕಳಿಗೆ ಬಾಲ್ಯದಲ್ಲಿ ನಮ್ಮ ಹಿಂದು ಸಂಸ್ಕೃತಿ, ಆಚಾರ ವಿಚಾರಗಳನ್ನು…
