೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಕುಂದಾಪ್ರ ಡಾಟ್ ಕಾಂ ಸುದ್ದಿ. ಮುದ್ರಾಡಿ: ಕರ್ನಾಟಕದ ಎಲ್ಲಾ ಕನ್ನಡ ಶಾಲೆಗಳು ಮುಂದಿನ ೫ ವರ್ಷದಲ್ಲಿ ಮುಚ್ಚುವ ಭೀತಿಯಲ್ಲಿದ್ದು ಸರ್ಕಾರ ೧ನೇ ತರಗತಿಯಿಂದಲೇ ಆಂಗ್ಲ ಭಾಷೆ ಕಡ್ಡಾಯ ಮಾಡಿ ಆಂಗ್ಲ ಶಿಕ್ಷಕರನ್ನು ನೇಮಿಸಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳ ಭವಿಷ್ಯವನ್ನು ಉಳಿಸಿ ಎಂದು ೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಸರ್ಕಾರವನ್ನು ಒತ್ತಾಯಿಸಿದರು. ಅವರು ಮುದ್ರಾಡಿ ನಾಟ್ಕದೂರಿನಲ್ಲಿ ಡಜನ್ ನಾರಾಯಣ ಶೆಟ್ಟಿ ದ್ವಾರ ನಾಟ್ಕದೂರು ಬಯಲು ರಂಗಮಂದಿರದ ಎಂ.ಕೆ.ರವೀಂದ್ರ ನಾಥ ವೇದಿಕೆಯಲ್ಲಿ ಶನಿವಾರ ಶ್ರೀ ವಿದ್ಯಾ ಸಂಸ್ಥೆ ಅರ್ಪಿಸಿ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕನ್ನಡ ಸಾಹಿತ್ಯ ಅಜೆಕಾರು ಹೋಬಳಿ, ನಮ ತುಳುವೆರ್ ಕಲಾ ಸಂಘಟನೆ, ನಾಟ್ಕದೂರು ಮುದ್ರಾಡಿ ಸರ್ವರ ಸಹಕಾರದೊಂದಿಗೆ ನಡೆದ ೮ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವ ಮಾಧ್ಯಮದಲ್ಲಾದರೂ ಕಲಿಸಿರಿ ಕನ್ನಡ ಭಾಷೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಗ್ರಾಮ ಪಂಚಾಯತ್ ಸ್ವಚ್ಛ ಭಾರತ್ ಮಿಶನ್‌ನ ರೂ. ೧೬. ೭೫ ಲಕ್ಷ ಅನುದಾನ ಬಳಸಿಕೊಂಡು ಗಾಂಧಿನಗರದಲ್ಲಿ ನಿರ್ಮಿಸಿರುವ ಜಿಲ್ಲೆಯ ಮೊದಲ ಗ್ರಾಮೀಣ ತ್ಯಾಜ್ಯ ನಿರ್ವಹಣಾ ಘಟಕವನ್ನು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಗುರುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿರ್ವಹಣಾ ಘಟಕ ನಿರ್ಮಿಸುವುದಕ್ಕಿಂತ ಆ ಬಳಿಕ ತ್ಯಾಜ್ಯ ನಿರ್ವಹಣೆ ಮಾಡುವುದು ನಿಜವಾದ ಸವಾಲಿನ ಕೆಲಸ. ಅದಕ್ಕೆ ಸಾರ್ವಜನಿಕರ ನೆರವು ಅತಿ ಅಗತ್ಯ. ಅವರಿಗೆ ಗ್ರಾಮ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಿ ಗ್ರಾಮ ಪಂಚಾಯತ್‌ನ ಕೆಲಸದಲ್ಲಿ ಕೈಜೋಡಿಸುವಂತೆ ಮಾಡಬೇಕು. ಸಂಗ್ರಹವಾದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿಮಾಡುವುದಕ್ಕೆ ಆದ್ಯತೆ ನೀಡಬೇಕು. ಹಲವು ವಿಷಯಗಳಲ್ಲಿ ಪ್ರಥಮ ಸ್ಥಾನದಲ್ಲಿರುವ ಮರವಂತೆ ಇದರಲ್ಲೂ ಮೊದಲಿನದೆನಿಸಿ, ಜಿಲ್ಲೆಯ ಅನ್ಯ ಗ್ರಾಮ ಪಂಚಾಯತ್‌ಳಿಗೆ ಮಾದರಿಯಾಗಲಿ ಎಂದು ಹಾರೈಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿಅಧಿಕಾರಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ರಾ.ಹೆ. ಪ್ರಾಧಿಕಾರವು ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಿಸಿದ್ದು, ಟೋಲ್‌ಸಂಗ್ರಹದ ಅಧಿಕ ವೆಚ್ಚ ಹಾಗೂ ತೈಲ ದರ ಹಾಗೂ ಬಿಡಿಭಾಗಗಳ ದರ ಹೆಚ್ಚಳದಿಂದಾಗಿ ಕುಂದಾಪುರ ಖಾಸಗಿ ಸರ್ವಿಸ್ ಬಸ್ಸುಗಳ ದರ ಪರಿಷ್ಕರಿಸಲಾಗಿದೆ ಎಂದು ಕುಂದಾಪುರ ತಾಲೂಕ್ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ತಿಳಿಸಿದ್ದಾರೆ. ಫೆ.17ರಿಂದ ಕನಿಷ್ಠದರ 8 ರೂ ಮತ್ತು 20 ರೂ. ವರಗಿನ ಸ್ಟೇಜ್ ಮೇಲೆ 1ರೂ ಮತ್ತು 40 ರೂ.ವರೆಗಿನ ಸ್ಟೇಜ್ ಮೇಲೆ ರೂ.2 ಎರಿಸಲಾಗುತ್ತಿದೆ. ಟೋಲ್ ದಾಟುವ ಬಸ್ಸುಗಳಿಗೆ ರೂ.3 ದರ ಹೆಚ್ಚಿಸಿ ನಿಗದಿ ಮಾಡಲಾಗಿದ್ದು, ಎಲ್ಲಾ ಬಸ್ಸು ಮಾಲಕರಿಗೆ ದರ ಹೆಚ್ಚಿಸಲು ಸೂಚಿಸಲಾಗಿದೆ. ಈ ದರ ಪಟ್ಟಿ ಕೆನರಾ ಬಸ್ಸು ಮಾಲಕರ ಸಂಘದ ನಿಬಂಧನೆಗೆ ಒಳ ಪಟ್ಟಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ವಿಜಯ ಕುಮಾರ್ ಶೆಟ್ಟಿ ಜಡ್ಡಾಡಿ, ಸುಪ್ರೀತ್ ಚಾತ್ರ, ರಾಘವೇಂದ್ರ, ಸದಸ್ಯರಾದ ನಾಗೇಶ್,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜೀವನದಲ್ಲಿ ಎನ್ನೆಸ್ಸೆಸ್‌ನಲ್ಲಿ ಕಲಿತ ಉತ್ತಮ ವಿಚಾರಗಳನ್ನು ಆಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.ನಮ್ಮ ಬೆಳವಣಿಗೆಯಿಂದ ಉಳಿದವರು ಸ್ಫೂರ್ತಿ ಪಡೆಯುವಂತಾಗಬೇಕು. ಅದೇ ನಿಜವಾದ ಸಾಧನೆ ಎಂದು ರಸಾಯನ ಶಾಸ್ತ್ರ ಪ್ರಾಧ್ಯಾಪಕ ಆರ್. ಎನ್ ರೇವಣ್ ಕರ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ ಮಾತನಾಡಿ ಎನ್ನೆಸ್ಸೆಸ್ ಬದುಕಿಗೆ ಬೇಕಾದ ವಿಶ್ವಾಸವನ್ನು ಮೂಡಿಸುವಲ್ಲಿ ಸಹಕಾರಿಯಾಗುತ್ತದೆ. ಇಲ್ಲಿ ಕಲಿತ ವಿಚಾರಗಳನ್ನು ಸದಾ ಸ್ಮರಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಆಶಾ ಸ್ವಾಗತಿಸಿದರು.ರಜತ್ ಅತಿಥಿಗಳನ್ನು ಪರಿಚಯಿಸಿದರು. ಸ್ವಾತಿ ಕಾರ‍್ಯಕ್ರಮ ನಿರೂಪಿಸಿದರು. ನಾಗಲಕ್ಷ್ಮಿ ಧನ್ಯವಾದ ಅರ್ಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಶರತ್‌ಕುಮಾರ್ ಶೆಟ್ಟಿ ಉಪಾಧ್ಯಕ್ಷರಾಗಿ ಗಣೇಶ್ ಶೇರಿಗಾರ್ ಆಯ್ಕಗೊಂಡಿದ್ದಾರೆ. ಕುಂದಾಪುರ ಎಪಿಎಂಸಿಯಲ್ಲಿ ಒಟ್ಟು 13ಕ್ಷೇತ್ರಗಳ ಪೈಕಿ 11 ಕೃಷಿಕರ ಕ್ಷೇತ್ರ, ತಲಾ ಒಂದು ಟಿಎಪಿಸಿಎಂ ಹಾಗೂ ಮಾರಾಟ ಪ್ರತಿನಿಧಿಗಳ ಕ್ಷೇತ್ರವಿದೆ. ಉಳಿದಂತೆ ಮೂವರು ನಾಮನಿರ್ದೇಶಿತ ಸದಸ್ಯರು ಇರಲಿದ್ದಾರೆ. ಎಪಿಎಂಸಿ ಸದಸ್ಯರುಗಳು: ಸ್ವರ್ಧಿಸಿದವರು: ವೆಂಕಟ ಪೂಜಾರಿ (ಬಿಜೆಪಿ, ಶಿರೂರು ಕೃಷಿಕರ ಕ್ಷೇತ್ರ) ಮಂಜು ದೇವಾಡಿಗ (ಬಿಜೆಪಿ, ಕಿರಿಮಂಜೇಶ್ವರ ಕೃಷಿಕರ ಕ್ಷೇತ್ರ) ವಸಂತ ಶೆಟ್ಟಿ(ಕಾಂಗ್ರೆಸ್, ಕಂಬದಕೋಣೆ ಕೃಷಿಕರ ಕ್ಷೇತ್ರ) ಸಂಜೀವ ಪೂಜಾರಿ (ಕಾಂಗ್ರೆಸ್ ವಂಡ್ಸೆ ಕೃಷಿಕರ ಕ್ಷೇತ್ರ), ಶರತ್ ಕುಮಾರ್ ಶೆಟ್ಟಿ(ಕಾಂಗ್ರೆಸ್ ತ್ರಾಸಿ ಕೃಷಿಕರ ಕ್ಷೇತ್ರ) ವರ್ತಕರ ಪ್ರತಿನಿಧಿ-ರಾಮರಾಯ ಕಾಮತ್ (ಬಿಜೆಪಿ) ಅವಿರೋಧವಾಗಿ ಆಯ್ಕೆಗೊಂಡವರು: ಎಸ್.ರಾಜು ಪೂಜಾರಿ (ಕಾಂಗ್ರೆಸ್ – ಸಹಕಾರಿ ಮಾರುಕಟ್ಟೆ ಪ್ರತಿನಿಧಿ ಕ್ಷೇತ್ರ) ಕೃಷ್ಣಾವತಿ ಶೆಡ್ತಿ (ಕಾಂಗ್ರೆಸ್- ಅಂಪಾರು ಕೃಷಿಕರ ಕ್ಷೇತ್ರ) ಕೆ.ರಾಮ ನಾಯ್ಕ್ (ಬಿಜೆಪಿ-ಸಿದ್ದಾಪುರ ಕೃಷಿಕರ ಕ್ಷೇತ) ಗಣೇಶ್ ಶೇರಿಗಾರ್ (ಕಾಂಗ್ರೆಸ್- ಕುಂದಾಪುರ ಕೃಷಿಕರ ಕ್ಷೇತ್ರ) ಹೆಚ್.ವಸಂತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆ, ಗೊಂದಲ, ಒತ್ತಡ ಎದುರಿಸಬೇಕಾಗಿ ಬರಬಹುದು. ತಮ್ಮ ಉಪನ್ಯಾಸಕರ, ಪೋಷಕರ ನೆರವು ಪಡೆದು ಇಂತಹ ಸಂದರ್ಭ ಎದೆಗುಂದದೆ ಎದುರಿಸಬೇಕೆಂದು ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮತ್ತು ವಿ.ಕೆ.ಆರ್. ಆಚಾರ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಾಂಶುಪಾಲೆ ಚಿಂತನಾ ರಾಜೇಶ್ ಹೇಳಿದರು. ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಸಹಾಯ ಘಟಕ ಉದ್ಘಾಟಿಸಿ ಮಾತನಾಡಿದರು. ಕಾಲೇಜ್ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕಿ ನಂದಾ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಭಿನಯ ಸ್ವಾಗತಿಸಿ, ಪ್ರಗತಿ ಶೆಟ್ಟಿ ಅತಿಥಿಗಳ ಪರಿಚಯಿಸಿದರು, ಚೈತ್ರ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಭಂಡಾರ್‌ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜ್ ಯೂತ್ ರೆಡ್ ಕ್ರಾಸ್ ಘಟಕ ಮತ್ತು ರಾ.ಸೇ.ಯೋ ಆಶ್ರಯದಲ್ಲಿ ಅಗ್ನಿ ಸುರಕ್ಷತಾ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಸ್ಯ ಸಂತೋಷ ಪೀಟರ್ ಡಿಸೋಜ ಸಂಪನ್ಮೂಲ ವ್ಯಕ್ತಿಯಾಗಿ, ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಮುನ್ನೆಚ್ಚರಿಕಾ ಕ್ರಮ ಮತ್ತು ಅಗ್ನಿ ಅನಾಹುತ ಸಂಭವಿಸಿದಾಗ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಾರಾಯಣ ತಂತ್ರಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ನಿತಿನ್ ಮಂಗಳೂರು, ಎನ್.ಎಸ್.ಎಸ್. ಅಧಿಕಾರಿ ಅರುಣ ಮತ್ತು ರಾಮಚಂದ್ರ ಆಚಾರಿ ಉಪಸ್ಥಿತರಿದ್ದರು. ಸಂಯೋಜಕ ಪ್ರೊ. ಸತ್ಯನಾರಾಯಣ ಸ್ವಾಗತಿಸಿ, ಎನ್.ಎಸ್.ಎಸ್. ವಿದ್ಯಾರ್ಥಿ ಸಚಿನ್ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರಿಗೆ ಹೆಮ್ಮಾಡಿಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ನೇತೃತ್ವದಲ್ಲಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರ ಭಾವಚಿತ್ರವನ್ನಿಟ್ಟು ಪುಷ್ಪ ನಮನ ಸಲ್ಲಿಸಿ ಮೊಂಬತ್ತಿ ಬೆಳಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಶಿಕ್ಷಕ ಹಾಗೂ ಕುಂದಾಪುರ ಸಮುದಾಯ ಸಂಘಟನೆಯ ಕಾರ್ಯದರ್ಶಿ ಸದಾನಂದ ಬೈಂದೂರು ಮಾತನಾಡಿ, ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರು ತಾವೂ ಬೆಳೆಯುವುದರೊಂದಿಗೆ ಎಲ್ಲರೂ ಬೆಳೆಯಬೇಕು, ಬದುಕನ್ನು ಪ್ರೀತಿಸಬೇಕು ಎಂಬ ಆಶಯವನ್ನಿಟ್ಟುಕೊಂಡವರು. ತಾವು ತರಗತಿಗಳಿಗೆ ಹೊರಡುವ ಮೊದಲು ಚಿತ್ರಕಲೆಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ಐದು ನಿಮಿಷದ ಮೊದಲು ತಮ್ಮ ಮೇಜಿನ ಎದುರಿಟ್ಟು ತಯಾರಾಗುತ್ತಿದ್ದರು. ಶಿಸ್ತುಬದ್ದ ಜೀವನ ನಡೆಸಿದ ಭೋಜು ಹಾಂಡರು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು ಎಂದು ಹೇಳಿದರು. ಅದೆಷ್ಟೊ ವಿದ್ಯಾರ್ಥಿಗಳು ಇವರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲಿಯೂ ಸಹ ತಾನೊಬ್ಬ ದೊಡ್ಡ ಕಲೆಗಾರನಾಬೇಕೆಂದು ಕನಸು ಕೂಡ ಕಂಡವರಲ್ಲ. ತಾನು ಕಲಿತದ್ದನ್ನು ಮಕ್ಕಳಿಗೂ ತಲುಪಿಸಬೇಕು ಆ ಮೂಲಕ ವಿದ್ಯಾರ್ಥಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರಾ.ಹೆ.66ರ ಬೈಪಾಸ್ ಬಳಿ ತಡರಾತ್ರಿ ನಿಲ್ಲಿಸಿದ ಎರಡು ಲಾರಿಗಳಿಗೆ ಭಟ್ಕಳ ಕಡೆಗೆ ಮೀನು ತುಂಬಿಸಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಮೂರೂ ವಾಹನಗಳ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಎರಡೂ ಲಾರಿಯ ಚಾಲಕರಿಗೆ ಗಾಯಗಳಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಹಾಗೂ ಸರಕು ಸಾಗಾಣಿಕೆ ಲಾರಿಯ ಚಾಲಕರು ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಮಾತನಾಡುತ್ತಿರುವಾಗ ಕುಂದಾಪುರದ ಕಡೆಯಿಂದ ಭಟ್ಕಳದ ಕಡೆಗೆ ಮೀನು ತುಂಬಿಸಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ಚಾಲಕ ಬೇರೊಂದು ವಾಹನವನ್ನು ಓವರ್‌ಟೇಕ್ ಮಾಡಿಕೊಂಡು ಬರುವ ಭರದಲ್ಲಿ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿದ್ದರಿಂದ ಮಾತನಾಡುತ್ತಾ ನಿಂತಿದ್ದ ಚಾಲಕ ಸನ್ನಿ ಡಯಾಸ್ ಮತ್ತು ಗಣೇಶ ಅವರಿಗೆ ಢಿಕ್ಕಿಯಾಗಿ ಬಳಿಕ ಲಾರಿಗಳಿಗೆ ಗುದ್ದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಸ್ಥಾನದ ಹಾಲು ಹಬ್ಬ ಹಾಗೂ ಗೆಂಡಸೇವೆ ವಿಶೇಷವಾಗಿ ಜರುಗಿದವು. ದೈವಸ್ಥಾನಕ್ಕೆ ಆಗಮಿಸಿದ್ದ ಉದ್ಯಮಿ ವಿ. ಕೆ. ಮೋಹನ್ ಅವರೊಂದಿಗೆ ಬಿಗ್‌ಬಾಸ್ ಸೀಜನ್-೪ ವಿಜೇತ ಪ್ರಥಮ್ ಹಾಗೂ ಬಿಗ್‌ಬಾಸ್‌ನ ಇತರೇ ಸ್ವರ್ಧಿಗಳಾಗಿದ್ದ ಮೋಹನ್, ಭುವನ್, ರೇಖಾ, ಕಾವ್ಯ ಶಾಸ್ತ್ರಿ, ಕಿರುತೆರೆ ನಟರಾದ ಸೂರ್ಯ, ವಿರಾಟ್ ಮೊದಲಾದವರು ಕುಂದಾಪುರಕ್ಕೆ ಆಗಮಿಸಿದ್ದರು. ನಟರನ್ನು ನೋಡಲು ಜನರು ಮುಗಿಬಿಳುತ್ತಿದ್ದುದು ಕಂಡುಬಂತು.
