ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಧವಳ ಕಾಲೇಜು, ಮೂಡುಬಿದರೆಯ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಅಂತರ್-ಕಾಲೇಜು ಮಟ್ಟದ ಪುರುಷರ ನೆಟ್ಬಾಲ್ ಪಂದ್ಯಾಟದಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್.ರವರು ಮತ್ತು ವಾಣಿಜ್ಯ ಉಪನ್ಯಾಸಕ ಹರೀಶ್ ಬಿ. ಅಭಿನಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ರವಿ ಕೋಟಾರಗಸ್ತಿ, ಉಳ್ಳೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಉಳ್ತೂರು ಮೋಹನದಾಸ ಶೆಟ್ಟಿ ಕಟ್ಟೆಮನೆ, ಜೀಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ಸುರೇಶ್ ಎ. ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಹೆಗ್ಡೆ, ಪ್ರಧಾನ ಅರ್ಚಕ ಸೀತಾರಾಮ ಅಡಿಗ, ಚನ್ನಕೇಶವ ಅಡಿಗ, ಜೀಣೋದ್ಧಾರ ಸಮಿತಿ ಗೌರವ ಕಾರ್ಯಧ್ಯಕ್ಷ ಹೆಬ್ರಿಬೀಡು ದೇವಪ್ಪ ಮಲ್ಲಿ, ಸಹಕಾಯಾಧ್ಯಕ್ಷ ಬಿ. ಚಂದ್ರಕಾಂತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯು. ಭೋಜರಾಜ ಶೆಟ್ಟಿ, ಉಳ್ತೂರು ಕೋಶಾಧಿಕಾರಿಗಳು ಸೀತಾರಾಮ ಶೆಟ್ಟಿ ಕಟ್ಟೆಮನೆ, ಎಂ. ಶ್ರೀಧರ ಶೆಟ್ಟಿ ಮಲ್ಯಾಡಿ, ಉಪಾಧ್ಯಕ್ಷರಾದ ಎಂ. ಜಯಶೀಲ ಶೆಟ್ಟಿ, ಸುಧಾಕರ ಶೆಟ್ಟಿ ಸಾವಂತರ ಮನೆ ವ್ಯವಸ್ಥಾಪನಾ ಸಮಿತಿ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಪಾನಿನ ಪ್ರೊಫೆಸರ್ ಸುಮಿಯೋ ಮೊರಿಜಿರಿಯವರು ದಂಪತಿ ಸಮೇತರಾಗಿ ಇತ್ತೀಚೆಗೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಭೇಟಿ ನೀಡಿದರು. ಅವರು ಗೊಂಬೆಯಾಟದ ಬಗ್ಗೆ ಹಲವು ವಿಷಯಗಳನ್ನು ಭಾಸ್ಕರ್ ಕೊಗ್ಗ ಕಾಮತ್ ರವರ ಜೊತೆ ಚರ್ಚಿಸಿದರು. ಸರಕಾರ ಹಾಗೂ ಇತರ ಯಾವುದೇ ಅಕಾಡೆಮಿಗಳ ಧನ ಸಹಾಯ ಪಡೆಯದೆ ಗೊಂಬೆಯಾಟ ಅಕಾಡೆಮಿಯಲ್ಲಿ ನಿರಂತರ ನಡೆಯುತ್ತಿರುವ ತರಬೇತಿ, ತಿಂಗಳ ಕಾರ್ಯಕ್ರಮ, ಗೊಂಬೆ ಮ್ಯೂಜಿಯಂ, ಗೊಂಬೆಯಾಟ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳ ವೀಡಿಯೋ ವೀಕ್ಷಿಸಿದ್ದಲ್ಲದೆ ಸದಾ ಚಟುವಟಿಕೆಯಲ್ಲಿರುವುದನ್ನು ಕಂಡು ಖುಷಿಗೊಂಡರು. ಉಪ್ಪಿನಕುದ್ರು ಗೊಂಬೆಯಾಟ ತಂಡದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ಜಪಾನಿನಲ್ಲಿ ನೋಡಿರುವ ನೆನಪನ್ನು ಮೆಲುಕು ಹಾಕಿಕೊಂಡು ಸಂತೋಷ ಪಟ್ಟರು. ಮೊರಿಜಿರಿಯವರು ಗೊಂಬೆಯಾಟ ಅಕಾಡೆಮಿಯ ಕಾಮಗಾರಿ ನಡೆಯುತ್ತಿದ್ದ ವೇಳೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಭವಿಷ್ಯತ್ತಿನಲ್ಲಿ ಗೊಂಬೆಯಾಟ ಅಕಾಡೆಮಿಯೊಂದಿಗೆ ಜಪಾನ್ ನ ಸಹಯೋಗ ನೀಡುವುದರ ಬಗ್ಗೆ ಮಾತುಕತೆ ನಡೆಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮೀಪದ ಕಾರಣಿಕ ಕ್ಷೇತ್ರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾ ಗಣಯಾಗ(೧೦೦೮ ತೆಂಗಿನಕಾಯಿ) ನವಚಂಡಿ ಹವನ ಮತ್ತು ಸಂಕಷ್ಟಹರ ಚತುರ್ಥಿ(ಅಂಗಾರಿಕಾ) ಮಹಾಪೂಜೆ ಸಕಲ ಧಾರ್ಮಿಕ ವಿಧಿ ವಿಧಾನದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಸಾಂಗವಾಗಿ ನೆರವೇರಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಹಸ್ರ ನಾಳಿಕೇರ ಮಹಾ ಗಣಯಾಗ, ನವಚಂಡಿ ಹವನ, ಸಂಕಷ್ಟಹರ ಚತುರ್ಥಿ ಪೂಜೆಯಲ್ಲಿ ಪಾಲ್ಗೊಂಡು ಕೃಥಾರ್ತರಾದರು. ಧಾರ್ಮಿಕ ಮಹೋತ್ಸವದ ಅಂಗವಾಗಿ ನವಗ್ರಹ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮತ್ತು ಹವನ, ಧನ್ವಂತರಿ ಹವನ, ನವಾಕ್ಷರೀ ಮಂತ್ರಜಪ ಹಾಗೂ ಹವನ, ರುದ್ರಪಾರಾಯಣ ಹಾಗೂ ರುದ್ರ ಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ, ಅಧಿವಾಸ ಹವನ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಧವಳ ಕಾಲೇಜು, ಮೂಡುಬಿದರೆಯ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಅಂತರ್-ಕಾಲೇಜು ಮಟ್ಟದ ಮಹಿಳೆಯರ ನೆಟ್ಬಾಲ್ ಪಂದ್ಯಾಟದಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್.ರವರು ಮತ್ತು ವಾಣಿಜ್ಯ ಉಪನ್ಯಾಸಕ ಹರೀಶ್ ಬಿ. ಅಭಿನಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮೀಪದ ನೇರಂಬಳ್ಳಿ ಮಠದಲ್ಲಿ ವೇದಮೂರ್ತಿ ಪ್ರಾಣೇಶ ತಂತ್ರಿ ಹಾಗೂ ಶ್ರೀಮತಿ ಸೌಮ್ಯ ಪ್ರಾಣೇಶ್ ತಂತ್ರಿಯವರ ದಾಂಪತ್ಯ ಜೀವನದ ದಶಮಾನೋತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ದಾಸ ಸಾಹಿತ್ಯ ಶೈಲಿಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಕಲ ವೈಭವದೊಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು. ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್ನ ನಿವೃತ್ತ ವಿಶೇಷಾಧಿಕಾರಿ ಅಪ್ಪಣ್ಣಾಚಾರ್ಯ ಅವರು ಕಲ್ಯಾಣೋತ್ಸವದ ನೇತ್ರತ್ವ ವಹಿಸಿ, ಬಹಳ ಸುಂದರವಾಗಿ ಭಕ್ತ ಜನರಲ್ಲಿ ಭಕ್ತಿ ಭಾವ ಮೇಳೈಸುವಂತೆ ಜಗದೊಡೆಯ ಶ್ರೀನಿವಾಸ ಮತ್ತು ಪದ್ಮಾವತಿಯರ ಅಮ್ಮನವರ ವಿವಾಹ ಮಹೋತ್ಸವವನ್ನು ನೆರವೇರಿಸಿದರು. ನೂಕು ನುಗ್ಗಲುವಿಲ್ಲದೇ ಅತ್ಯಂತ ಶಿಸ್ತುಬದ್ದವಾಗಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿದ್ದು ಸುಮಾರು ೮ ಸಾವಿರ ಮಂದಿ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡು ಕೃತಾರ್ಥರಾದರು. ಉಡುಪಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಭಗವಂತನ ಅನಂತ ಲೀಲೆಗಳಲ್ಲಿ ಕಲ್ಯಾಣೋತ್ಸವ ಒಂದಾಗಿದೆ. ಭಗವದಾರಾಧನೆಯ ಚಿಂತನೆಯನ್ನು ಭಕ್ತಿಯೋಗದ ಮೂಲಕ ನಾವೆಲ್ಲರೂ ಮಾಡುವ ಅಗತ್ಯವಿದೆ. ಆರಾಧನೆ ಕೇವಲ ಬಿಂಬದಲ್ಲಿ ಮಾತ್ರವಾಗದೇ ನಮ್ಮ ಜೀವನ ಶೈಲಿಯು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ರಿಟೀಷರು ಬರೆದ ತಿರುಚಿದ ಇತಿಹಾಸ ನಮ್ಮ ದೇಶದ ಪಠ್ಯಕ್ರಮವಾಗಿದೆ. ಆದರೆ ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ನಮ್ಮ ದೇಶದವರೇ ಬರೆದ ಭವ್ಯ ಇತಿಹಾಸ ನಮ್ಮ ಶಿಕ್ಷಣದಲ್ಲಿ ಪಠ್ಯವಾಗುವ ವಿಶ್ವಾಸವಿದೆ. ಭಾರತೀಯರು ಒಂದು ಕಾಲದಲ್ಲಿ ಬ್ರಿಟೀಷರಿಗೆ ಗುಲಾಮರಾಗಿದ್ದರೂ ಸ್ವಾಭಿಮಾನವನ್ನು ಮರೆತಿರಲಿಲ್ಲ. ಸ್ವಾತಂತ್ರ್ಯ ಬಳಿಕ ಹಿಂದೂಸ್ಥಾನಿಯರು ತಮ್ಮ ತಾಕತ್ತನ್ನು ಮರೆತುಬಿಟ್ಟಿದ್ದಾರೆ. ಇಂದು ಅದನ್ನು ಎಚ್ಚರಿಸುವ ಅಗತ್ಯವಿದೆ ಎಂದು ಅಖಿಲ ಭಾರತ ಇತಿಹಾಸ ಸಂಕಲನ ಯೋಜನೆ ನವದೆಹಲಿಯ ಹರಿಬಾಉ ವಝೆ ಹೇಳಿದರು. ಅವರು ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಬಸ್ರೂರು ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಬಸ್ರೂರು ತಿರುಮಲ ವೆಂಕಟರಮಣ ದೇವಸ್ಥಾನದ ಆಜಾದ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಬಸ್ರೂರು ಇತಿಹಾಸ ದಿನದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ದೇಶದ ಸಂಸ್ಕೃತಿ ಪ್ರಪಂಚದ ಇತರೇ ದೇಶದ ಸಂಸ್ಕೃತಿಗಿಂತ ಭಿನ್ನವಾದುದು. ಭಾರತ ದೇಶದ ಮೇಲೆ ಇತರರು ದಾಳಿ ಮಾಡಿದ ದಾಖಲೆಗಳಿವೆಯೇ ಹೊರತು, ಭಾರತೀಯರು ಎಂದಿಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಟೋಲ್ ಹಣ ಸಂಗ್ರಹ ವಿರುದ್ಧ ವಿವಿಧ ಸಂಘಟನೆ ಹಾಗೂ ಪಕ್ಷಾತೀತ ಉಡುಪಿ ಜಿಲ್ಲೆ ಬಂದ್ ಕರೆಗೆ ಕುಂದಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆಯಿತು. ಸಾಸ್ತಾನದ ಟೋಲ್ ಬಳಿ, ಕೋಟ ತೆಕ್ಕಟ್ಟೆ ಕುಂದಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆತರೇ ಗ್ರಾಮೀಣ ಪ್ರದೇಶದಲ್ಲಿ ಎಂದಿನಂತೆ ಜನಸಂಚಾರವಿತ್ತು. ಖಾಸಗಿ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿದ್ದರೇ, ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದವು. ಶೇ.೫ರಷ್ಟು ಮುಚ್ಚಿದ ಅಂಗಡಿ-ಮುಂಗಟ್ಟು. ಶಾಲಾ ಕಾಲೇಜ್ ರಜೆ ಘೋಷಣೆ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಆಟೋ ಸೇವೆಗೆ ಯಾವುದೇ ಅಡಚಣೆ ಆಗಿಲಿಲ್ಲ. ಕುಂದಾಪುರ ನಗರದಲ್ಲಿ ಖಾಸಗಿ ಬಸ್ ಸಂಚಾರ ಇಲ್ಲದ ಕಾರಣ ಗ್ರಾಮೀಣ ಪ್ರದೇಶ ಜನಸಂಚಾರ ಕಡಿಮೆಯಿತ್ತು. ಕುಂದಾಪುರದ ಬ್ಯಾಂಕ್ ಹಾಗೂ ಕಚೇರಿಗಳ ಜನಸಂಖ್ಯೆ ಕಡಿಮೆಯಿದ್ದರೇ; ಕೆಲವು ಹೋಟೆಲ್, ಅಂಗಡಿ ಬಂದ್ ಆಗಿದ್ದವು. ಮತ್ತೆಲ್ಲಾ ಮಾಮೂಲಿನಂತ ಕಾರ್ಯ ನಿರ್ವಹಿಸಿತು. ಬಸ್ ಸಂಚಾರವಿಲ್ಲದ್ದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಬರಲಾಗಲಿಲ್ಲ. ಹಾಜರಾತಿ ಕಮ್ಮಿ ಇದ್ದರಿಂದ ರಜೆ ಘೋಷಣೆ ಮಾಡಲಾಯಿತು. ಬೇರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ರಾಜಕೀಯದಲ್ಲಿ ತಾಳ್ಮೆ ಹಾಗೂ ನಿಷ್ಠೆಗಳು ಇದ್ದಾಗ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಅವಕಾಶಗಳು ದೊರಕಿದಾಗ ಅಧಿಕಾರದ ವ್ಯಾಪ್ತಿಯಲ್ಲಿ ಜನರ ನಿರೀಕ್ಷೆಗಳನ್ನು ಪೂರೈಸುವವನೆ ನಿಜವಾದ ಜನಪ್ರತಿನಿಧಿಯಾಗುತ್ತಾನೆ ಎನ್ನುವುದನ್ನು ನನ್ನ ಅನುಭವದ ಮಾತುಗಳು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಇಲ್ಲಿಗೆ ಸಮೀಪದ ಕಟ್ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಸ್ಥಾನದ ಮುಂಭಾಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಅವರಿಗೆ ಗ್ರಾಮಸ್ಥರು ನೀಡಿದ ’ಹುಟ್ಟೂರ ಸನ್ಮಾನ’ ಸ್ವೀಕರಿಸಿ ಮಾತನಾಡಿದರು. ಆಕಸ್ಮಿಕವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ತನಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಆಸ್ಕರ್ ಫೆರ್ನಾಂಡಿಸ್, ಕೆ.ಪ್ರತಾಪ್ಚಂದ್ರ ಶೆಟ್ಟಿ, ವೀರಪ್ಪ ಮೊಯಿಲಿ ಮುಂತಾದವರಿಂದ ದೊರಕಿದ ಮಾರ್ಗದರ್ಶನಗಳಿಂದಾಗಿ ರಾಜಕೀಯದಲ್ಲಿ ಈ ಮಟ್ಟದವರೆಗೂ ಬೆಳೆಯಲು ಸಾಧ್ಯವಾಯಿತು. ೪ ಬಾರಿ ಶಾಸಕರನ್ನಾಗಿಸಿದ ಬೈಂದೂರು ಕ್ಷೇತ್ರದ ಮತದಾರರ ಪೂರ್ತಿ ಋಣವನ್ನು ತನ್ನಿಂದ ಖಂಡಿತಾ ತೀರಿಸಲು ಸಾಧ್ಯವಾಗಿಲ್ಲ ಎನ್ನುವ ನೋವು ನನಗಿದೆ. ಶಾಸಕತ್ವದ ಹಿರಿತನದಲ್ಲಿ ಸಚಿವನಾಗಬೇಕು ಎನ್ನುವ ನಿರೀಕ್ಷೆಗಳು ನನ್ನ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸಾರ್ವಜನಿಕ ಬೇಡಿಕೆಗಳನ್ನು ಈಡೇರಿಸದೆ ಕಾಮಗಾರಿ ಅಪೂರ್ಣವಿರುವಾಗಲೇ ಟೋಲ್ ಸಂಗ್ರಹ ಆರಂಭಿಸಿದ್ದಕ್ಕೆ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಜನವಿರೋಧಿ ನೀತಿಯನ್ನು ಖಂಡಿಸಿ ನಾನಾ ಸಂಘಟನೆಗಳು ಇಂದು ( ಜ. 13) ಕರೆದಿರುವ ಉಡುಪಿ ಜಿಲ್ಲಾ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಾಲು, ಪತ್ರಿಕೆ, ಆ್ಯಂಬುಲೆನ್ಸ್, ವೈದ್ಯಕೀಯ ಸೇವೆಗಳಿಗೆ ಬಂದ್ನಿಂದ ವಿನಾಯಿತಿ ನೀಡಲಾಗಿದೆ. ಹೋರಾಟಗಾರರು ಬಂದ್ಗೆ ಬೆಂಬಲ ನೀಡುವಂತೆ ಅಂಗಡಿಯವರಿಗೆ ತಿಳಿಸಿದ್ದಾರೆ. ಜಿಲ್ಲಾಡಳಿತ ಸೋಮವಾರ ಶಾಲೆಗಳಿಗೆ ರಜೆ ನೀಡಿಲ್ಲ. ಪರಿಸ್ಥಿತಿ ನೋಡಿಧಿಕೊಂಡು ರಜೆ ಕೊಡುವ ಅಧಿಕಾರವನ್ನು ಮುಖ್ಯ ಶಿಕ್ಷಕರಿಗೆ ನೀಡಲಾಗಿದೆ. [quote bgcolor=”#ffffff” bcolor=”#dd3333″ arrow=”yes” align=”right”]ಸರಕಾರಿ ಬಸ್ ಇದೆ ಬೆಳಗ್ಗಿನ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯಗಳು ನಡೆಯುವುಧಿದಿಲ್ಲ. ಬಂದ್ ಹಿನ್ನೆಲೆಯಲ್ಲಿ ಸಂಚಾರ ನಿಲ್ಲಿಸಬೇಕಾದ ಅಗತ್ಯ ಉಂಟಾದಲ್ಲಿ ಅಲ್ಲಿನ ಡಿಪೋ, ಇಲಾಖಾಧಿಕಾರಿ, ಪೊಲೀಸರನ್ನು ಸಂಪರ್ಕಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ವಿವೇಕಾನಂದ ಹೆಗಡೆ ವಿಭಾಗೀಯ ನಿಯಂತ್ರಕ, ಕೆಎಸ್ಆರ್ಟಿಸಿ, ಮಂಗಳೂರು[/quote] 144 ಸೆಕ್ಷನ್ ಜಾರಿ ಹೆಜಮಾಡಿ ಮತ್ತು ಸಾಸ್ತಾನ ಟೋಲ್ಗೇಟ್ ಪ್ರದೇಶದಲ್ಲಿ…
