Author: ನ್ಯೂಸ್ ಬ್ಯೂರೋ

ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಮೇ 2015ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಬಿ.ಸಿ.ಎ ವಿಭಾಗದ ವಿದ್ಯಾರ್ಥಿಗಳಾದ ಸ್ವಾತಿ.ಆರ್.ಆಚಾರ್ಯ ಪ್ರಥಮ ರ‍್ಯಾಂಕ್, ಅಶ್ಮಿತಾ ಕಾಮತ್ ಏಳನೇ ರ‍್ಯಾಂಕ್, ಸುಕನ್ಯಾ ಹತ್ತನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯು ಅಭಿನಂದಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಗುರುವರ್ಯರ ದೇವರ ಕೋಣೆ ಹಾಗೂ ವರದೇಂದ್ರ ಸಭಾಗೃಹ ಸಮರ್ಪಣಾ ಕಾರ್ಯಕ್ರಮ ಕಾಶೀ ಮಠಾದೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಿತು. ಸಭಾ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಬಿ.ಎನ್.ಪ್ರಭು ಸ್ವಾಗತಿಸಿದರು ಹಾಗೂ ಬಸ್ರೂರು ಶಾಖಾ ಮಠದ ಮುಖ್ಯಸ್ಥರಾದ ಶ್ರೀಧರ ವಿಠ್ಠಲ ಕಾಮತರವರು ಪ್ರಸ್ಥಾವನೆಗೈದರು. ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚಿಸುತ್ತಾ ಶ್ರೀ ಕಾಶೀ ಮಠದ ಪರಂಪರೆಯಲ್ಲಿ ವಾರಣಾಸಿಯ ಮೂಲ ಮಠದ ನಂತರ ಎರಡನೇ ಮಠ ಹಾಗೂ ದಕ್ಷಿಣ ಭಾರತದ ಮೊದಲ ಶಾಖಾ ಮಠವಾಗಿ ಬಸ್ರೂರಿನಲ್ಲಿ ಸ್ಥಾಪನೆಗೊಂಡಿತು. ಗುರುಪರಂಪರೆಯ ಎಲ್ಲಾ ಯತಿಗಳು ಇಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಲ್ಲದೇ ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನದ ಬಗ್ಗೆ ಕೂಡ ಅವರು ಉಲ್ಲೇಖಿಸಿದರು. ಶ್ರೀ ಹರಿ ಗುರು ಸೇವಾ ಪ್ರತಿಷ್ಟಾನದ ಕುಂದಾಪುರ ಶ್ರೀನಿವಾಸ ಪ್ರಭು ಹಾಗೂ ಎನ್. ಗಣೇಶ…

Read More

ಬೈಂದೂರು: ಕಾಲೇಜಿಗೆಂದು ತೆರಳಿದ ಯುವತಿಯೋರ್ವಳು ಮನೆಗೆ ಹಿಂತಿರುಗಿ ಬಾರದೇ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಬೈಂದೂರು ನಿವಾಸಿ, ಕೋಟಾದ ಆಶ್ರೀತಾ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ನಿಧಿ (21) ನಾಪತ್ತೆಯಾದ ಯುವತಿ. ಮೈಸೂರು ಮೂಲದವಳಾದ ನಿಧಿ, ಬೈಂದೂರಿನ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದು, ಕೋಟಾದ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಎಂದಿನಂತೆ ಕಾಲೇಜಿಗೆ ಹೋಗಿದ್ದವಳು ಹಿಂತಿರುಗಿ ಮನೆಗೆ ಬಂದಿರಲಿಲ್ಲ. ತಕ್ಷಣ ಸಂಭಂಧಿಕರ ಮನೆಗಳಲ್ಲಿ ವಿಚಾರಿಸಿದಾಗ ಅಲ್ಲಿಗೂ ಹೋಗದಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತುಸು ಎಣ್ಣೆಗಪ್ಪು ಮೈಬಣ್ಣದ ಈಕೆ ನೀಲಿ ಬಣ್ಣದ ಚೂಡಿದಾರ ಧರಿಸಿದ್ದಾರೆ. ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುವ ಇವರನ್ನು ಯಾರಾದರೂ ಗುರುತಿಸಿದರು ಬೈಂದೂರು ಠಾಣೆಗೆ ಮಾಹಿತಿ ನೀಡುವಂತೆ (08254 251033) ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ವರದಿ. ‘ಕಾರ್ಟೂನ್ ತೋರ‍್ಸದ್ ಹೊರ‍್ತು ನಮ್ ಎಮ್ಮಿ ಹಾಲ್ ಕೊಡುದಿಲ್ಲೇ’ ಎಂದು ಲಾಲುವನ್ನು ಛೇಡಿಸಿದ ಸ್ವಾಗತ ‘ಬಂಗ್ಡಿ ಮಿಡಕ್ತಾ ಅಂದ್ಹೇಳಿ ನಮ್ಮನಿಯವ್ಳಿಗೆ ವಾಟ್ಸಪಂಗೆ ಕಾಣ್ಕೆ ಅಬ್ರ್ ಮಾರಾಯ್ತಿ’ ಎಂದು ಮೀನು ಕೊಳ್ಳುವವನು ಹೇಳಿದ್ದಕ್ಕೆ ‘ಅದು ವಿಡ್ಕುದ್ ಹನಿಸಿಂಗ್ ಪದ್ಯ ಹಾಕಿದಾಗ’ ಎಂದು ಜಾಡಿಸುವ ಉತ್ತರ. ಇದು ಕುಂದಾಪುರ ಕಲಾಮಂದಿರದಲ್ಲಿ ಆಯೋಜಿಸಲಾದ ನಾಲ್ಕು ದಿನಗಳ ‘ಕಾರ್ಟೂನು ಹಬ್ಬ’ದಲ್ಲಿ ಕಂಡ ಕಾರ್ಟೂನ್ ಡೈಲಾಗ್‌ಗಳು. ಕಾರ್ಟೂನು ವೀಕ್ಷಣೆಗೆ ಬಂದ ವೀಕ್ಷಕರ ತುಡಿಯಂಚಿನಲ್ಲೂ ಪದೇ ಪದೇ ಮಾತುಗಳು ಹೊರಳುತ್ತಿದ್ದವು. [quote bgcolor=”#ffffff” arrow=”yes” align=”right”]ಕುಂದಾಪುರದಲ್ಲಿ ಸಾಕಷ್ಟು ವ್ಯಂಗ್ಯಚಿತ್ರಕಾರರ ದೊಡ್ಡ ತಂಡವೇ ಇದ್ದು, ಅವರು ಸಾಗಿಬಂದ ದಾರಿಯ ಸಿಂಹಾವಲೋಕನ ಮಾಡುವುದರೊಂದಿಗೆ, ಯುವಜನರಲ್ಲಿ ವ್ಯಂಗ್ಯಚಿತ್ರದತ್ತ ಒಲವು ಮೂಡಿಸುವ ಮತ್ತು ಅವರಿಗೊಂದು ಪ್ರೇರಣೆ ನೀಡುವ ಉದ್ದೇಶದಿಂದ ಕಾರ್ಟೂನು ಹಬ್ಬವನ್ನು ಆಯೋಜಿಸಲಾಗಿದೆ. -ಸತೀಶ್ ಆಚಾರ‍್ಯ, ಕಾರ್ಟೂನಿಷ್ಠ್[/quote] ಯಮ ಅಂಕಲ್ ನಾನೇ ಫಸ್ಟ್, ವೇಗ ಕೊಲ್ಲುತ್ತೆ, ನಮ್ ಮನಿ ಗಂಡ್ ಎಷ್ಟ್ ಚಂದ ಕಾರ್ ಓಡ್ಸತ್ ಕಾಣಿ, ನಮ್ಮ ಹಾಗೂ ನಮ್ಮ…

Read More

ಕುಂದಾಪುರ: ಕಾರ್ಟೂನ್ ಮೂಲಕ ರಂಜನೆಗಷ್ಟೇ ಪ್ರಾಮುಖ್ಯತೆ ನೀಡದೇ ಕಾರ್ಟೂನು ಹಬ್ಬವನ್ನು ಆಯೋಜಿಸಿ ಕ್ಯಾರಿಕೇಚರ್ ಬಿಡಿಸಿ ಶಾಲೆಗೆ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನಾರ್ಹ  ನ್ಯೂ ಮೆಡಿಕಲ್ ಸೆಂಟರ್ ನ ಹೃದಯ ತಜ್ಞ ಡಾ. ರಂಜನ್ ಶೆಟ್ಟಿ ಹೇಳಿದರು. ಅವರು ಕಾರ್ಟೂನ್ ಕುಂದಾಪ್ರದ ಆಶ್ರಯದಲ್ಲಿ, ರೋಟರಿ ಕುಂದಾಪುರದ ಸಹಯೋಗದೊಂದಿಗೆ ಕಾರ್ಟೂನಿಷ್ಠ ಸತೀಶ್ ಆಚಾರ‍್ಯ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ’ಕಾರ್ಟೂನು ಹಬ್ಬ’ದ ಎರಡನೇ ದಿನ ಮೊದಲ ಕ್ಯಾರಿಕೇಚರ್ ಬಿಡಿಸಿಕೊಳ್ಳುವ ಮೂಲಕ ಚಿತ್ರನಿಧಿ ಉದ್ಘಾಟಿಸಿ ಮಾತನಾಡಿದರು. ಹಿರಿಯ ಪತ್ರಕರ್ತ ಜಾನ್ ಡಿಸೋಜ, ಆರ್ಬ್ ಎನರ್ಜಿ ಜನರಲ್ ಮ್ಯಾನೆಜರ್ ತೆಕ್ಕಟ್ಟೆ ಸುಧೀಂದ್ರ ಶೆಟ್ಟಿ, ರೋಟರಿ ಕುಂದಾಪುರದ ಅಧ್ಯಕ್ಷ ಪ್ರಶಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಕೋಣಿ ಉಪಸ್ಥಿತರಿದ್ದರು. ಲೈವ್ ಕ್ಯಾರಿಕೇಚರ್‌ನಿಂದ ಬರುವ ಹಣವನ್ನು ವಂಡ್ಸೆ ಸರಕಾರಿ ಶಾಲೆಗೆ ದೇಣಿಗೆಯಾಗಿ ನೀಡಲಾಗುತ್ತಿದೆ.  

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ನಗರದ ಇತಿಹಾಸ ಪ್ರಸಿದ್ಧ ಕುಂದೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಬಹುಳ ಅಮಾವಾಸ್ಯೆಯಂದು ನಡೆಯುವ ಲಕ್ಷದೀಪೋತ್ಸವಕ್ಕೆ ಗುರುವಾರ ಅದ್ದೂರಿಯ ಚಾಲನೆ ದೊರಕಿತು. ದೇವಳದಲ್ಲಿ ಶ್ರೀ ಕುಂದೇಶ್ವರನಿಗೆ ವಿಶೇಷ ಪೂಜೆ, ಭಕ್ತರಿಂದ ಭಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು ನಡದರೇ ಸಂಜೆ ಲಕ್ಷದೀಪೋತ್ಸವ ಪ್ರಯುಕ್ತ ನೆರೆದಿದ್ದ ಅಸಂಖ್ಯ ಭಕ್ತರು ಕುಂದೇಶ್ವರ ದೇವರಿಗೆ ಹಣತೆ ದೀಪ ಬೆಳಗಿ ದೇವರ ದರ್ಶನ ಪಡೆದರು. ಊರಿಗೆ ಊರೇ ಪಾಲ್ಗೊಳ್ಳುವ ಈ ಲಕ್ಷ ದೀಪೋತ್ಸವ ಅಕ್ಷರಶಃ ಒಂದು ಸಾರ್ವಜನಿಕ ಉತ್ಸವ. ದೇವಳದ ಪುಷ್ಪ ರಥೋತ್ಸವಕ್ಕೆ ಹಾಗೂ ಶ್ರೀ ದೇವರ ಕಟ್ಟೆಪೂಜೆ ಚಾಲನೆ ನೀಡಲಾಯಿತು. ಕುಂದಾಪುರ ನಗರ ದೀಪಾಲಂಕಾರದಿಂದ ಶೋಭಾಯಮಾನವಾಗಿತ್ತು. ವಿವಿಧ ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮ ದೀಪೋತ್ಸವದ ಮೆರಗು ಹೆಚ್ಚಿಸಿತ್ತು. ಬೆಳಗ್ಗೆ ಶ್ರೀ ಕುಂದೇಶ್ವರನ ಸನ್ನಿಧಿಯಲ್ಲಿ ಶತರುದ್ರಾಭಿಷೇಕ; ಮಹಾಪೂಜೆ; ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆದರೆ, ರಾತ್ರಿ ರಂಗಪೂಜೆ ಮತ್ತು ಮಹಾಮಂಗಳಾರತಿ ನಡೆದು ಶ್ರೀ ದೇವರ ಉತ್ಸವಮೂರ್ತಿ ಗರ್ಭಗುಡಿಯಿಂದ ಹೊರಬರುತ್ತದೆ.…

Read More

ಬೈಂದೂರು: ಅಪ್ರಾಪ್ತರು ಅಪರಾಧ ಮಾಡಿದರೂ ಕೂಡಾ ಅವರಿಗೆ ಎಲ್ಲಾ ರೀತಿ ಕಾನೂನು ಅನ್ವಯಿಸುತ್ತದೆ. ಅಪಘಾತವಾಗುವುದು ಆಕಸ್ಮಿಕವಾದರೂ ಅದು ಕೂಡಾ ಅಪರಾಧದ ಒಂದು ಭಾಗವೇ ಆಗಿದೆ. ಮುಂಜಾಗೃತೆಯಿಂದ ಅಪರಾಧ ತಡೆಯುವ ಪ್ರಯತ್ನ ಮಾಡಬಹುದು. ವಿದ್ಯಾರ್ಥಿಗಳು ಮುಂದೆ ಹೆಜ್ಜೆಯಿಡುವ ಮೊದಲು ಸರಿಯಾಗಿ ಯೋಚಿಸಿ ನಿರ್ಧರಿಸಿ ಎಂದು ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮುದ್ರಾಡಿ ಹೇಳಿದರು. ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಬೈಂದೂರು ಆರಕ್ಷಕ ಠಾಣೆ ವತಿಯಿಂದ ನಡೆದ ಅಪರಾಧ ತಡೆ ಮಾಸಾಚರಣೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದರು. ವಿಶ್ವದಲ್ಲಿ ಸಮಾನ ಮನಸ್ಕರಿದ್ದರೆ ಅಪರಾಧ ಪ್ರಕರಣಗಳು ನಡೆಯುತ್ತಿರಲಿಲ್ಲ. ಗೊತ್ತಿಲ್ಲದೇ ಮಾಡುವ ಅಪರಾಧವೂ ಕೂಡಾ ಶಿಕ್ಷರ್ಹವೆ. ವಿದ್ಯಾರ್ಥಿಗಳಿಗೆ ಕನಿಷ್ಟಪಕ್ಷ ಕಾನೂನಿನ ಬಗ್ಗೆ ಜ್ಞಾನವಿರಬೇಕು ಎಂದರು. ವೇಶ್ಯಾವಾಟಿಕೆ, ಮಾದಕವಸ್ತು ಮಾರಾಟಕ್ಕಾಗಿ ಬಳಸಿಕೊಳ್ಳಲು ದೊಡ್ಡ ನೌಕರಿ ಹೆಚ್ಚು ಸಂಬಳದ ಆಸೆ ತೋರಿಸಿ ಯುವಕ-ಯುವತಿಯರನ್ನು ಹೊರರಾಜ್ಯಕ್ಕೆ ಕಳುಹಿಸುವ ಮಾನವ ಕಳ್ಳ ಸಾಗಾಣಿಕೆ ಹೆಚ್ಚು ನಡೆಯುತ್ತಿದೆ. ಇದರಿಂದ ಕೆಲವರು ಮಾರಕ ರೋಗಗಳಿಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡರೆ…

Read More

ಕುಂದಾಪುರ: ದಿನನಿತ್ಯದ ಜಂಜಾಟದ ಬದುಕಿನ ನಡುವೆ ಕಾರ್ಟೂನ್ ಎಂತವರಲ್ಲೂ ಒಂದು ಕ್ಷಣ ಮಂದಹಾಸ ಮೂಡಿಸಿ ಲವಲವಿಕೆಯಿಂದಿರುವಂತೆ ಮಾಡುತ್ತದೆ ಎಂದು ಮತ್ಸ್ಯೋದ್ಯಮಿ ಆನಂದ ಸಿ. ಕುಂದರ್ ಹೇಳಿದರು. ಅವರು ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಕಾರ್ಟೂನಿಷ್ಠ ಸತೀಶ್ ಆಚಾರ‍್ಯ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ’ಕಾರ್ಟೂನು ಹಬ್ಬ’ವನ್ನು ಕಾರ್ಟೂನು ಬಿಡಿಸಿ ಉದ್ಘಾಟಿಸಿ ಮಾತನಾಡಿ ದೇಶಕ್ಕೆ ಹಲವಡೆ ನೆಲೆಸಿರುವ ಕುಂದಾಪುರ ಮೂಲದ ವ್ಯಂಗ್ಯಚಿತ್ರಕಾರರು ಮತ್ತಷ್ಟು ಹೆಸರು ಮಾಡಲಿ ಎಂದು ಹಾರೈಸಿದರು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಕಾರ್ಟೂನು ಡೈಲಾಗ್ ಬರೆಯುವ ಸಾರ್ವಜನಿಕ ಸ್ವರ್ಧೆಯನ್ನು ಉದ್ಘಾಟಿಸಿದ ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಗಣೇಶ್ ಶೆಟ್ಟಿ ಮೊಳಹಳ್ಳಿ ಮಾತನಾಡಿ ಪ್ರಪಂಚದ ೨೦ ಶ್ರೇಷ್ಠ ವ್ಯಂಗ್ಯಚಿತ್ರಕಾರರ ಪೈಕಿ ನಮ್ಮೂರಿನ ಸತೀಶ್ ಆಚಾರ್ಯ ಅವರ ಹೆಸರಿರುವುದು ಹೆಮ್ಮೆಯ ವಿಚಾರ. ಹುಟ್ಟೂರಿನಲ್ಲಿದ್ದುಕೊಂಡೇ ಕಾರ್ಟೂನ್ ಲೋಕದಲ್ಲಿ ತೊಡಗಿಸಿಕೊಂಡು, ಇತರರಿಗೂ ಕಾರ್ಟೂನು ಪ್ರಜ್ಞೆ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಕುಂದಾಪುರ ಟ್ರಾಫಿಕ್ ಎಎಸ್‌ಐ ಸುದರ್ಶನ್ ಸೆಲ್ಫಿ ಕಾರ್ನರ್ ಉದ್ಘಾಟಿಸಿದರು. ಉದ್ಯಮಿ ಕೆ. ಆರ್. ನಾಯ್ಕ್, ಸ.ಪ.ಪೂ.…

Read More

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದ್ದ ಉತ್ತಮ ಫಲಿತಾಂಶವನ್ನು ಪಡೆದ ಸರಕಾರಿ ಕಾಲೇಜುಗಳಲ್ಲಿ ಪ್ರಥಮ ಸ್ಥಾನವನ್ನು ಕುಂದಾಪುರ ಸರಕಾರಿ ಪ.ಪೂ.ಕಾಲೇಜು ಪಡೆದಿದ್ದು ಕಾಲೇಜನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಹಾಗೂ ನಾಡುನುಡಿಯ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕನ್ನಡ ನಾಡು ನುಡಿ, ಸಂಸ್ಕೃತಿಯು ಪ್ರತಿಯೊಬ್ಬ ಕನ್ನಡಿಗನ ಬದುಕಿನಲ್ಲಿ ಒಂದು ನಿಶ್ಚಿತ ಪ್ರಜ್ಞೆಯಾಗಿ ಆವರಿಸಿಕೊಳ್ಳಬೇಕು ಎಂದು ಅಂಕಣಕಾರ ಕೋ.ಶಿವಾನಂದ ಕಾರಂತರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಸರಕಾರಿ ಪ.ಪೂ.ಕಾಲೇಕು ಕುಂದಾಪುರ ನಾಡು-ನುಡಿ ಚಿಂತನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕುಂದಪ್ರಭ ಪತ್ರಿಕೆಯ ಸಂಪಾದಕರಾದ ಯು.ಎಸ್.ಶೆಣೈಯವರು ಕನ್ನಡ ಸಾಹಿತ್ಯಕ್ಕೆ ಕುಂದಾಪುರದ ಕೊಡುಗೆಗಳೇನು? ಮತ್ತು ಆ ಮೂಲಕ ಹಿರಿಯರು ಕನ್ನಡವನ್ನು ಕಟ್ಟುವ ಎಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿದರು. ಕನ್ನಡ ನಾಡು ನುಡಿಯ ಬಗ್ಗೆ ಅತೀವ ಕಾಳಜಿ ಹೊಂದಿದ ಹೆಬ್ರಿಯ ಗಂಗಾಧರ ಅತಿಥಿಗಳಾಗಿ ಆಗಮಿಸಿ ಸ.ಪ.ಪೂ. ಕಾಲೇಜಿನಲ್ಲಿ ಉಡುಪಿ ಜಿಲ್ಲೆಯಲ್ಲೇ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿದ್ದು ಶೇ 97.76 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ…

Read More

ಕುಂದಾಪುರ: ಸಾಧನೆ ಪ್ರತಿಭೆಯ ಪ್ರತಿಬಿಂಬವಲ್ಲ. ಗೆಲುವೇ ಸಾಧನೆಯ ಮಾನದಂಡವಲ್ಲ ಎಂಬ ಸೂಕ್ಷ್ಮವನ್ನರಿತು ವಿದ್ಯಾರ್ಥಿಗಳಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಬೇಕೆಂದು ಡಾ. ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ. ಮಹಾಬಲೇಶ್ವರ ರಾವ್ ಕರೆ ನೀಡಿದರು. ಅವರು ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮಾತನಾಡಿ ಇಂದು ವಿದ್ಯಾರ್ಥಿಗಳು ಸರ್ವಾಂಗೀಣ ಬೆಳವಣಿಗೆಗೆ ಪ್ರಯತ್ನಿಸುತ್ತಾ ಪ್ರಶ್ನಿಸುವ ಮನೋಭಾವದ ಮೂಲಕ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಭಿನ್ನವಾದ ರೀತಿಯಲ್ಲಿ ಯೋಚಿಸುವುದರೊಂದಿಗೆ ಸೃಜನಾತ್ಮಕವಾದ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ರಕ್ಷಕರು ತಮ್ಮ ಮಕ್ಕಳನ್ನು ಬೌದ್ಧಿಕ ಕೂಲಿಗಳನ್ನಾಗಿ ರೂಪಿಸುವ ಚಿಂತನೆಯಿಂದ ಹೊರಬಂದು ಅವರಲ್ಲಿನ ಪ್ರತಿಭೆ ದಕ್ಷತೆ ಮತ್ತು ಬದ್ಧತೆಗಳ ಬೆಳಸಿಗೆ ಸಾರ, ನೀರೆರೆದು ಪೋಷಿಸಬೇಕೆಂದು ಅಭಿಪ್ರಾಯ ಪಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಮೋಹನ್ ಕಾಮತ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಕಲ್ಪಿಸಲಾದ ಮೂಲಭೂತ ಸೌಕರ್ಯಗಳು ಹಾಗೂ ಶೈಕ್ಷಣಿಕ ಮಾರ್ಗದರ್ಶನದ ತರಬೇತಿಯನ್ನು ಹೆಚ್ಚಿನ ವಿದ್ಯಾರ್ಥಿಗಳು ಪಡೆಯುವಂತಾಗಬೇಕೆಂದು ಆಶಿಸಿದರು. ಸಂಸ್ಥೆಯ ಆಡಳಿತ ಮಂಡಳಿಯ…

Read More