ಕುಂದಾಪುರ: ಕಾರ್ಟೂನ್ ಮೂಲಕ ರಂಜನೆಗಷ್ಟೇ ಪ್ರಾಮುಖ್ಯತೆ ನೀಡದೇ ಕಾರ್ಟೂನು ಹಬ್ಬವನ್ನು ಆಯೋಜಿಸಿ ಕ್ಯಾರಿಕೇಚರ್ ಬಿಡಿಸಿ ಶಾಲೆಗೆ ದೇಣಿಗೆ ನೀಡುವ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನಾರ್ಹ ನ್ಯೂ ಮೆಡಿಕಲ್ ಸೆಂಟರ್ ನ ಹೃದಯ ತಜ್ಞ ಡಾ. ರಂಜನ್ ಶೆಟ್ಟಿ ಹೇಳಿದರು.
ಅವರು ಕಾರ್ಟೂನ್ ಕುಂದಾಪ್ರದ ಆಶ್ರಯದಲ್ಲಿ, ರೋಟರಿ ಕುಂದಾಪುರದ ಸಹಯೋಗದೊಂದಿಗೆ ಕಾರ್ಟೂನಿಷ್ಠ ಸತೀಶ್ ಆಚಾರ‍್ಯ ಅವರ ಸಾರಥ್ಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ’ಕಾರ್ಟೂನು ಹಬ್ಬ’ದ ಎರಡನೇ ದಿನ ಮೊದಲ ಕ್ಯಾರಿಕೇಚರ್ ಬಿಡಿಸಿಕೊಳ್ಳುವ ಮೂಲಕ ಚಿತ್ರನಿಧಿ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ಜಾನ್ ಡಿಸೋಜ, ಆರ್ಬ್ ಎನರ್ಜಿ ಜನರಲ್ ಮ್ಯಾನೆಜರ್ ತೆಕ್ಕಟ್ಟೆ ಸುಧೀಂದ್ರ ಶೆಟ್ಟಿ, ರೋಟರಿ ಕುಂದಾಪುರದ ಅಧ್ಯಕ್ಷ ಪ್ರಶಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ್ ಕೋಣಿ ಉಪಸ್ಥಿತರಿದ್ದರು. ಲೈವ್ ಕ್ಯಾರಿಕೇಚರ್‌ನಿಂದ ಬರುವ ಹಣವನ್ನು ವಂಡ್ಸೆ ಸರಕಾರಿ ಶಾಲೆಗೆ ದೇಣಿಗೆಯಾಗಿ ನೀಡಲಾಗುತ್ತಿದೆ.