Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದದ ಶ್ರೀ ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಅನಂತಪದ್ಮನಾಭ ನಾರಿ ಇವರನ್ನು ಸಹಕಾರಿ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ಸುಧಾಕರ ಪೂಜಾರಿ, ನಿರ್ದೇಶಕರಾದ ರಾಘವೇಂದ್ರ ಪೂಜಾರಿ, ನರಸಿಂಹ ಬಿ. ನಾಯಕ್, ಮಾಲತಿ ಪೂಜಾರಿ, ಶಾಖಾ ವ್ಯವಸ್ಥಾಪಕ ನಾಗರಾಜ, ಸಿಬ್ಬಂದಿಗಳಾದ ಉದಯ್, ಅಶ್ವಿನಿ ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: 2016-17ನೇ ಸಾಲಿನ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಬೈಂದೂರು ಸೈಂಟ್ ಥೋಮಸ್ ರೆಸಿಡೆನ್ಸಿಯಲ್ ಸ್ಕೂಲ್‌ನ ವಿದ್ಯಾರ್ಥಿ ರಾಹುಲ್ ಪೂಜಾರಿ 10 ಸಿ.ಜಿ.ಪಿ.ಎ ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈತ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ ಹಾಗೂ ರತಿ ದಂಪತಿಗಳು ಪ್ರಥಮ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುವಕರ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿರುವ ಆಕೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಸೆಸೆಲ್ಸಿ ಓದಿನ ಬಳಿ ಹೆಬ್ರಿಯಲ್ಲಿ ಹೊಲಿಗೆ ತರಬೇತಿಗೆ ಹೋಗುತ್ತಿದ್ದ ಯುವತಿಗೆ ಮೊಬೈಲ್ ಕರೆಯಲ್ಲಿ ಹಾಗೂ ಎದುರಿನಲ್ಲಿ ಸಿಕ್ಕಾಗ ಕಳೆದ ಮೂರು ತಿಂಗಳಿನಿಂದ ಈ ಮೂವರು ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದರು. ಆಕೆಯನ್ನು ತಾವು ಹೇಳಿದ ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದರು ಎನ್ನುವ ಎಂದು ಯುವತಿ ಆರೋಪಿಸಿದ್ದಾಳೆ. ಈ ಬಗ್ಗೆ ಶೇಡಿಮನೆಯ ಪ್ರಸಾದ್ ಹೆಗ್ಡೆ, ಪ್ರಶಾಂತ್ ಹೆಗ್ಡೆ ಮತ್ತು ವಿನಯ ಶೆಟ್ಟಿ ವಿರುದ್ಧ ಪೋಕೊÕà ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯುವಕರ ಬೆದರಿಕೆಯಿಂದ ಹೆದರಿದ ಯುವತಿ ಅದೇ ದಿನ ಮನೆಯಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಗೊಂಡ ಯುವತಿಯನ್ನು ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಆಕೆಗೆ ಚಿಕಿತ್ಸೆ ಮುಂದುವರಿದಿದೆ. ಆಸ್ಪತ್ರೆಗೆ ತೆರಳಿರುವ ಅಮಾಸೆಬೈಲು ಪೊಲೀಸರು ಯುವತಿಯಿಂದ ಹೇಳಿಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಕ್ವಾಡಿಯ ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಶಾಲೆ ಸತತ 7ನೇ ಬಾರಿಗೆ ಸಿಬಿಎಸ್‌ಇ ಪಠ್ಯಕ್ರಮದ 10ನೇ ತರಗತಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. 2016-17ನೇ ಸಾಲಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದ 10ನೇ ತರಗತಿ ಪರೀಕ್ಷೆಗೆ ಹಾಜರಾದ 62 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ( 10 ಸಿ.ಜಿ.ಪಿ.ಎ) 3 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ( 9.8ಸಿ.ಜಿ.ಪಿ.ಎ ) ಅಲ್ಲದೇ 12 ವಿದ್ಯಾರ್ಥಿಗಳು ( 9ಕ್ಕಿಂತ ಹೆಚ್ಚು ಸಿ.ಜಿ.ಪಿ.ಎ) ಪಡೆದು ಪಾಲಕರು ಮತ್ತು ಸಂಸ್ಥೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪರೀಕ್ಷೆ ಬರೆದ ಇತರೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಸಂಸ್ಥೆಯು ದಾಖಲೆಯ ಫಲಿತಾಂಶವನ್ನು ಕಂಡಿದೆ. ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಬಾಂಡ್ಯ ಎಜುಕೇಶನ್ ಟ್ರಸ್ಟ್ ಆಡಳಿತಕ್ಕೊಳಪಟ್ಟಿರುವ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪಿಯು ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಬದುಕಿಗೆ ಪೂರಕವಾದ ವಾತಾವರಣವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಕೇಂದ್ರದಲ್ಲಿ ಅಂತರಾಷ್ಟ್ರೀಯ ಐಕಾನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಡವರ ಕಲ್ಯಾಣ ಕಾರ್ಯಕ್ರಮಗಳ ಹಾಗೂ ದೇಶದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದು, ಯಶಸ್ವೀಯಾಗಿ ಮೂರು ವರ್ಷ ಪೂರೈಸಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಹೇಳಿದರು. ದಂಪತಿ ಸಮೇತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರದಲ್ಲಿರುವ ಸರಕಾರ ಕರ್ನಾಟಕದಲ್ಲಿಯೂ ಬೇಕೆಂದು ರಾಜ್ಯದ ಜನತೆ ತೀರ್ಮಾನಿಸಿದ್ದಾರೆ. ರಾಜ್ಯದ ಎಲ್ಲಾ ನಾಯಕರು ಏಕತೆ ಮತ್ತು ಸಕ್ರೀಯತೆಯ ಮನೋಭಾವನೆಯೊಂದಿಗೆ ಕೆಲಸ ಮಾಡಲಿದ್ದೇವೆ. ಬೇರೆ ಕಡೆಗಳಲ್ಲಿ ಬಿಕ್ಕಟ್ಟು ಹಾಗೂ ಇಕ್ಕಟ್ಟಿದ್ದರೆ, ಬಿಜೆಪಿ ನಾಯಕರಲ್ಲಿ ಹಾಗೂ ಪಕ್ಷದಲ್ಲಿ ಒಗ್ಗಟ್ಟಿದೆ. ಒಗ್ಗಟ್ಟಿನ ಪಕ್ಷವಾಗಿ ಮುನ್ನಡೆಯುವ ಮೂಲಕ ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡುವುದನ್ನೇ ನಾವು ನಿರೀಕ್ಷಿಸುತ್ತಿದ್ದೇವೆ ಎಂದರು. ದೇಶೀಯ ಗೋಸಂತತಿ ಉಳಿಸುವುದಕ್ಕೆ ಭಾರತ ಸರ್ಕಾರ ಬದ್ದವಾಗಿದೆ. ಆದರೆ…

Read More

ಬೈಂದೂರು/ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಒಂದೇ ದಿನದಲ್ಲಿ ಸುಮಾರು 2,201.20ಲಕ್ಷ ರೂಪಾಯಿ ಕಾಮಗಾರಿಗೆ ಬೈಂದೂರು ಕ್ಷೇತ್ರದ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಗುದ್ದಲಿ ಪೂಜೆ ನೆರವೇರಿಸಿದರು. ಕಟ್‌ಬೆಲ್ತೂರು: ಕಟ್‌ಬೆಲ್ತೂರು ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಅಂದಾಜು 130.50ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್‌ಬೆಲ್ತೂರು ಹರಗೋಡು ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಜಿಲ್ಲಾ ಕೆಡಿಪಿ ಸದಸ್ಯ ಎಸ್.ರಾಜು ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ದೇವಾಡಿಗ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ್‌ಕುಮಾರ ಶೆಟ್ಟಿ ಮುನಿಯಾಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಮದನ್‌ಕುಮಾರ ಉಪ್ಪುಂದ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಿ ದೇವಾಡಿಗ, ಜಿಲ್ಲಾ ಕಟ್‌ಬೆಲ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಸೂಯ ಆಚಾರ್, ಪಕ್ಷದ ಪ್ರಮುಖರಾದ ಎಚ್.ಮಂಜಯ್ಯ ಶೆಟ್ಟಿ, ಇಲಾಖಾ ಅಧಿಕಾರಿಗಳಾದ ಸತೀಶ್ ಹಾಗೂ ದುರ್ಗಾದಾಸ್ ಮೊದಲಾದವರು ಇದ್ದರು. ಹಟ್ಟಿಯಂಗಡಿ: ಹಟ್ಟಿಯಂಗಡಿ ಗ್ರಾಮದಲ್ಲಿ ನಮ್ಮ ಗ್ರಾಮ ನಮ್ಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮ ಪಂಚಾಯತಿನ ಸದಸ್ಯರು ಸಕ್ರೀಯರಾದಾಗ ಮಾತ್ರ ಗ್ರಾಮದ ಅಭಿವೃದ್ಧಿ ಕಾರ್ಯ ಚುರುಕುಗೊಳಿಸಲು ಸಾಧ್ಯವಾಗುತ್ತದೆ. ಈ ಬಾರಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ರಸ್ತೆ, ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಒದಗಿಸಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ತೃಪ್ತಿಯಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಆರ್.ಐ.ಡಿ.ಎಫ್ -೧೭ ಯೋಜನೆಯಡಿ ಕೆ.ಆರ್.ಐ. ಡಿ.ಎಲ್ ಸಂಸ್ಥೆಯಿಂದ ನಿರ್ಮಿಸಿದ ಕೆರ್ಗಾಲ್ ಗ್ರಾಮ ಪಂಚಾಯಿತಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರ ಮೀಸಲಾತಿ ಪದ್ದತಿ ಜಾರಿಗೊಳಿಸಿರುವುದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿ ಅಧಿಕಾರ ನಡೆಸುವಂತಾಗಿದೆ. ಗ್ರಾಮ ಪಂಚಾಯತ್ ಗ್ರಾಮಸ್ಥರ ಮನೆಯಾಗಿದ್ದು, ಗ್ರಾಮಸಭೆಯಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಂಡಾಗ ಗ್ರಾಮದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಸೋಮು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಜಗದೀಶ ದೇವಾಡಿಗ, ತ್ರಾಸಿ ರಾಜು ದೇವಾಡಿಗ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಾನವೀಯ ಹಾಗೂ ಭಾವನಾತ್ಮಕ ಸಂಬಂಧಗಳ ಕೊರತೆಯ ನಡುವೆ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಕೌಟುಂಬಿಕ ವ್ಯವಸ್ಥೆಗಳ ಅರಿವು ಮೂಡಿಸುವ ಜತೆಗೆ ಸಂಘಟನೆಯನ್ನು ಬಲಪಡಿಸುವ ಅನಿವಾರ್ಯತೆಯಿದೆ. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಲಾವಣ್ಯ ಕಲಾಕುಟುಂಬದ ಹಿರಿಯ ಕಲಾವಿದ ಬಿ. ಮಾಧವ ರಾವ್ ಹೇಳಿದರು. ಬೈಂದೂರು ದೇವಾಡಿಗರ ಒಕ್ಕೂಟ ಇವರ ವತಿಯಿಂದ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅತೀ ಮುಖ್ಯವಾಗಿದ್ದು, ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಸಂಘದ ಅಧ್ಯಕ್ಷ ಕೆ. ಜೆ. ಸುಬ್ಬ ದೇವಾಡಿಗ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ನಿದೇರ್ಶಕ ಮಂಜು ದೇವಾಡಿಗ, ನಾರಾಯಣ ದೇವಾಡಿಗ ಕೂಡ್ಲು, ದುರ್ಗಾ ದೇವಾಡಿಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಇದರ ಶ್ರೀರಾಮ ಗೃಹ ನಿರ್ಮಾಣ ಯೋಜನೆಯ ಐದನೇ ಮನೆಯನ್ನು ಬೈಂದೂರು-ಬಾಡ ನಿವಾಸಿ ಗಿರಿಜಾ ಸುಬ್ರಾಯ ಶೇರೆಗಾರ್ ಇವರಿಗೆ ಆಡಳಿತ ಟ್ರಸ್ಟಿ ಬಿ ರಾಮಕೃಷ್ಣ ಶೇರೆಗಾರ್ ಭಾನುವಾರ ಹಸ್ತಾಂತರಿಸಿದರು. ಈ ಸಂದರ್ಭ ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಬಿ. ಗೋಪಾಲ ನಾಯ್ಕ್, ಟ್ರಸ್ಟಿಗಳಾದ ಜಯಾನಂದ ಹೋಬಳಿದಾರ್, ಕೆ. ಜಿ. ನಾಗಪ್ಪ ಶೇರುಗಾರ್, ಅಶೋಕ ಕುಮಾರ್ ಬಾಡ, ಬಿ. ಶ್ರೀಧರ್, ಶಶಿಧರ ನಾಯಕ್, ವೆಂಕಟರಮಣ ಬಿಜೂರು, ನಾಗರಾಜ ಬಿ., ಸೀತಾ ಶ್ರೀನಿವಾಸ, ಬಿ. ಶ್ರೀನಿವಾಸ ಶೇರುಗಾರ್, ಎನ್. ವಿಶ್ವೇಶ್ವರ, ಸುಧಾಕರ ಹೊಸಾಡು, ಸಂಚಾಲಕರಾದ ಆನಂದ ಮದ್ದೋಡಿ, ಕೇಶವ ನಾಯಕ್ ಬಿಜೂರು, ವೆಂಕಟರಮಣ ಟಿ., ಕುಂದಾಪುರ ಶ್ರೀರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ರಾಧಾಕೃಷ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯಲ್ಲಿ ಪೂರ್ವ ಪ್ರಾರ್ಥಮಿಕ ಮಕ್ಕಳ ಮೊದಲ ದಿನದ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಪುಟಾಣಿಗಳೆಲ್ಲರೂ ಬೇಸಿಗೆಯ ರಜೆಯನ್ನು ಕಳೆದು ತಮ್ಮ ಪುಟ್ಟ-ಪುಟ್ಟ ಹೆಜ್ಜೆಯೊಂದಿಗೆ ಶಾಲೆಯತ್ತಾ ಬರಲಾರಂಭಿಸಿದ್ದರು. ಆದರೆ ಕೆಲವು ಮಕ್ಕಳು ನಗುತ್ತಿದ್ದರೆ, ಇನ್ನು ಕೆಲವರು ತಮ್ಮ ಅಮ್ಮನ ತೋಳಿನಿಂದ ಕೆಳಗಿಳಿಯಲು ಅಳುತ್ತಿದ್ದರು. ಅವರನೆಲ್ಲ ಸಮಾಧಾನಿಸಿ ಮೊಂಟೆಸ್ಸರಿ ಬಳಿ ಕರೆತಂದಾಗ ಒಮ್ಮಗೆ ಎಲ್ಲರೂ ಸ್ತಬ್ಧರಾಗಿ ನಿಂತುಕೊಂಡು ಶಾಲಾ ಕಟ್ಟಡವನ್ನು ನೋಡಲಾರಂಭಿಸಿದರು. ಕಾರಣ ಇಷ್ಟೇ, ಅವರೆಲ್ಲರನ್ನು ಸ್ವಾಗತಿಸಲು ಶಾಲಾ ಕಟ್ಟಡವನ್ನು ರಂಗು-ರಂಗಿನ ಬಣ್ಣಗಳಿಂದ ಅಲಂಕೃತಗೊಳಿಸಲಾಗಿತ್ತು. ನಗುಮುಖದ ಶಿಕ್ಷಕಿಯರು ಪುಟಾಣಿಗಳನ್ನು ಪ್ರೀತಿಯಿಂದ ಒಳಗಡೆ ಬರಮಾಡಿಕೊಡರು. ಪುಟಾಣಿಗಳು ಒಳಾವರಣ ಪ್ರವೇಶಿಸುತ್ತಿದ್ದಂತೆ ಸುಮಧುರ ಶಿಶುಗೀತೆಗಳ ಸಂಗೀತದ ಸಿಂಚನದ ಜೊತೆಗೆ ಸುಂದರವಾಗಿ ಜೋಡಿಸಲಾಗಿದ್ದ ಆಟಿಕೆಗಳನ್ನು ನೋಡುತ್ತಿದ್ದಂತೆ ತಮ್ಮ ಅಳುವನ್ನು ನಿಲ್ಲಿಸಿ ಆಟದಲ್ಲಿ ತಲ್ಲೀನರಾದರು. ಅದೇ ಸಮಯಕ್ಕೆ ಶಾಲಾ ವತಿಯಿಂದ ಪುಟಾಣಿಗಳಿಗೆ ಸಿಹಿತಿನಿಸು ಹಂಚಲಾಯಿತು, ಹಾಗೂ ಶಿಕ್ಷಕಿಯರು ಮಕ್ಕಳೊಂದಿಗೆ ಸೇರಿ ಹಾಡುತ್ತಾ, ನೃತ್ಯ ಮಾಡುತ್ತಾ ಮೊದಲ ದಿನದ ಸಂಭ್ರಮವನ್ನು ಆಚರಿಸಿದರು. ಈ ಸಂದರ್ಭದಲ್ಲಿ…

Read More