ವಕ್ವಾಡಿ: ಗುರುಕುಲ ಶಾಲೆಯಲ್ಲಿ ಪುಟಾಣಿಗಳ ಮೊದಲ ದಿನದ ಸಂಭ್ರಮ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯಲ್ಲಿ ಪೂರ್ವ ಪ್ರಾರ್ಥಮಿಕ ಮಕ್ಕಳ ಮೊದಲ ದಿನದ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.

Call us

Click Here

ಪುಟಾಣಿಗಳೆಲ್ಲರೂ ಬೇಸಿಗೆಯ ರಜೆಯನ್ನು ಕಳೆದು ತಮ್ಮ ಪುಟ್ಟ-ಪುಟ್ಟ ಹೆಜ್ಜೆಯೊಂದಿಗೆ ಶಾಲೆಯತ್ತಾ ಬರಲಾರಂಭಿಸಿದ್ದರು. ಆದರೆ ಕೆಲವು ಮಕ್ಕಳು ನಗುತ್ತಿದ್ದರೆ, ಇನ್ನು ಕೆಲವರು ತಮ್ಮ ಅಮ್ಮನ ತೋಳಿನಿಂದ ಕೆಳಗಿಳಿಯಲು ಅಳುತ್ತಿದ್ದರು. ಅವರನೆಲ್ಲ ಸಮಾಧಾನಿಸಿ ಮೊಂಟೆಸ್ಸರಿ ಬಳಿ ಕರೆತಂದಾಗ ಒಮ್ಮಗೆ ಎಲ್ಲರೂ ಸ್ತಬ್ಧರಾಗಿ ನಿಂತುಕೊಂಡು ಶಾಲಾ ಕಟ್ಟಡವನ್ನು ನೋಡಲಾರಂಭಿಸಿದರು. ಕಾರಣ ಇಷ್ಟೇ, ಅವರೆಲ್ಲರನ್ನು ಸ್ವಾಗತಿಸಲು ಶಾಲಾ ಕಟ್ಟಡವನ್ನು ರಂಗು-ರಂಗಿನ ಬಣ್ಣಗಳಿಂದ ಅಲಂಕೃತಗೊಳಿಸಲಾಗಿತ್ತು. ನಗುಮುಖದ ಶಿಕ್ಷಕಿಯರು ಪುಟಾಣಿಗಳನ್ನು ಪ್ರೀತಿಯಿಂದ ಒಳಗಡೆ ಬರಮಾಡಿಕೊಡರು. ಪುಟಾಣಿಗಳು ಒಳಾವರಣ ಪ್ರವೇಶಿಸುತ್ತಿದ್ದಂತೆ ಸುಮಧುರ ಶಿಶುಗೀತೆಗಳ ಸಂಗೀತದ ಸಿಂಚನದ ಜೊತೆಗೆ ಸುಂದರವಾಗಿ ಜೋಡಿಸಲಾಗಿದ್ದ ಆಟಿಕೆಗಳನ್ನು ನೋಡುತ್ತಿದ್ದಂತೆ ತಮ್ಮ ಅಳುವನ್ನು ನಿಲ್ಲಿಸಿ ಆಟದಲ್ಲಿ ತಲ್ಲೀನರಾದರು. ಅದೇ ಸಮಯಕ್ಕೆ ಶಾಲಾ ವತಿಯಿಂದ ಪುಟಾಣಿಗಳಿಗೆ ಸಿಹಿತಿನಿಸು ಹಂಚಲಾಯಿತು, ಹಾಗೂ ಶಿಕ್ಷಕಿಯರು ಮಕ್ಕಳೊಂದಿಗೆ ಸೇರಿ ಹಾಡುತ್ತಾ, ನೃತ್ಯ ಮಾಡುತ್ತಾ ಮೊದಲ ದಿನದ ಸಂಭ್ರಮವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಗುರುಕುಲ ವಿದ್ಯಾಸಂಸ್ಥೆಯ ಜಂಟಿಕಾರ‍್ಯನಿರ್ವಾಹಕರಾದ ಸುಭಾಶ್ ಚಂದ್ರ ಶೆಟ್ಟಿ, ಅನುಪಮ ಎಸ್ ಶೆಟ್ಟಿ, ಪ್ರಾಂಶುಪಾಲರಾದ ಶಾಯಿಜು ಕೆ ಆರ್ ನಾಯರ್, ಮುಖ್ಯಶಿಕ್ಷಕಿ ವಿಶಾಲಾ ಶೆಟ್ಟಿ ಹಾಗೂ ಎಲ್ಲ ಶಿಕ್ಷಕಿಯರು ಉಪಸ್ಥಿತರಿದ್ದರು.

 

Leave a Reply