ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆರೋಗ್ಯಯುವ ಜೀವನಕ್ಕೆ ಆಯುರ್ವೇದದ ದಿನಚರಿಗಳು ಹಾಗೂ ಆಹಾರ ಪದ್ಧತಿಗಳನ್ನು ಪಾಲಿಸಬೇಕು. ಆಯುರ್ವೇದ, ಮನೆಮದ್ದಿನ ಅರಿವು ಮೂಡಿಸಲು ಪ್ರಯತ್ನಿಸಬೇಕು. ವಿವಿಧ ಪ್ರದೇಶಗಳಲ್ಲಿ ಆಯುರ್ವೇದದ ಬಗ್ಗೆ ಕಾರ್ಯಾಗಾರ ನಡೆಸಿ ಜನರಿಗೆ ಆಯುರ್ವೇದದ ಬಗ್ಗೆ ನಂಬಿಕೆ, ವಿಶ್ವಾಸ ಮೂಡಿಸಲು ಮುಂದಾಗಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆಯುಷ್ ಇಲಾಖೆ ಉಡುಪಿ, ಹಾಗೂ ಸರಕಾರಿ ಆಯುಷ್ ಚಿಕಿತ್ಸಾಲಯ ಕಾಲ್ತೋಡು ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ಹೊಟೇಲ್ ಶೆರೋನ್ ಸಭಾಂಗಣದಲ್ಲಿ ಜರಗಿದ ಒಂದು ದಿನದ ತಾಲೂಕು ಮಟ್ಟದ ಆಯುಷ್ ಸೆಮಿನಾರ್/ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಎಸ್.ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯರಾದ ನಾರಾಯಣ ಕೆ.ಗುಜ್ಜಾಡಿ, ರಾಜು ದೇವಾಡಿಗ ತ್ರಾಸಿ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ಆಶ್ರಯದಲ್ಲಿ ಕರ್ನಾಟಕದಲ್ಲಿ 33 ವರ್ಷದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆದ 17ನೇ ರಾಷ್ಟ್ರೀಯ ಜಾಂಬೋರಿ ಸಮ್ಮೇಳನದಲ್ಲಿ ಭಾಗವಹಿಸಿದ ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಹಾಗೂ ಸ್ಕೌಟ್ ಲೀಡರ್ ರವಿಚಂದ್ರ ಅವರಿಗೆ ಸಮ್ಮೇಳನದಲ್ಲಿ ಅತ್ಯುತ್ತಮ ವಯರ್‌ಲೆಸ್ ಕಮ್ಯೂನಿಕೇಶನ್ ಸೇವೆಗೆ ಇಂಡಿಯನ್ ಇನ್ಸಿಟ್ಯೂಟ್ ಆಫ್ ಹಾಮ್ಸ್ ಸಂಸ್ಥೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಾಟಕಗಳು ಮನೋರಂಜನೆಯ ಜತೆಗೆ ಸಮಾಜಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತವೆ. ದೃಶ್ಯ ಮಾಧ್ಯಮದ ಕಡೆಗೆ ಆಕರ್ಷಿತರಾಗಿರುವ ಜನರನ್ನು ರಂಗಭೂಮಿ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳತ್ತ ಸೆಳೆಯಲು ಗುಣಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಬೈಂದೂರಿನ ರಂಗಾಸಕ್ತರು, ಯಳಜಿತದ ಸಮ್ಮಿಲನ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ, ನಾಯ್ಕನಕಟ್ಟೆಯ ಸಂವೇದನಾ ಟ್ರಸ್ಟ್ ಮತ್ತು ಮರವಂತೆಯ ’ಸಾಧನಾ’ ಸಂಯುಕ್ತ ಆಶ್ರಯದಲ್ಲಿ ಸಾಧನಾ ಸಮದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕಾರಿಪುರ ಗುಡಿ ರಂಗ ಪಯಣದ ನಾಟಕ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು. ಸಮ್ಮಿಲನದ ನಿರ್ದೇಶಕ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ರಂಗಕರ‍್ಮಿ ಸತ್ಯನಾ ಕೊಡೇರಿ ವಂದಿಸಿದರು. ಸಮ್ಮಿಲನದ ಅಧ್ಯಕ್ಷ ರಂಗ ಮರಾಠಿ, ಗ್ರಾಮ ಪಂಚಾಯತ್ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪುರಸಭೆ ನಾಲ್ಕು ಲಕ್ಷ ಎಸ್ಸಿಎಸ್ಟಿ ಫಲಾನುಭವಿಗೆ ಪ್ರಯೋಜನೆಕ್ಕೆ ಬರಲಿ ಅಂತ ಹಣಕಟ್ಟಿದರೆ, ಜೀವವಿಮಾ ಕಂಪೆನಿ ಒಂದಿಬ್ಬರು ಫಲಾನುಭವಿಗೆ ಹಣ ನೀಡಿದೆ. ಯುಜಿಡಿ ಕಾಮಗಾರಿ ಚರ್ಚೆಗಷ್ಟೇ ಸೀಮಿತ, ಪ್ರಗತಿ ಶೂನ್ಯ. ಕೆಲಸ ಸರಿಯಾಗಿ ಮಾಡೋದಾದರೆ ಮಾಡಿ, ಆಗದಿದ್ದರೆ ನಮ್ಮ ವಾರ್ಡಿಗೆ ಬರಲೇ ಬೇಡಿ. ಹೆದ್ದಾರಿ ಕಾಮಗಾರಿ ಸಂಪೂರ್ಣವಾಗದೆ ಟೂಲ್ ಫ್ರೀ ವಸೂಲಿ ಬಗ್ಗೆ ಖಂಡನಾ ನಿರ್ಣಯ. ಇದು ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಪುರಸಭೆ ಸಾಮನ್ಯ ಸಭೆಯ ಹೈಲೈಟ್. ಕುಂದಾಪುರ ಪುರಸಭೆ ಎಸ್ಸಿಎಸ್ಟಿ ಜನರ ಅನುಕೂಲ ಕಲ್ಪಿಸಲು ಹಿಂದಿನ ಆಡಳಿತ ಜೀವಿವಿಮಾ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ನಾಲ್ಕು ಲಕ್ಷ ರೂ. ಕಂತು ಪಾವತಿಸಿತ್ತು. ಕಂಪನಿ ಕೂಡಾ ಫಲಾನುಭವಿಗಳ ಆಯ್ಕೆ ಮಾಡಿ, ಕಾರ್ಡ್ ಕೂಡಾ ಸರಿಯಾಗಿ ವಿತರಿಸಿಲ್ಲ. ಅದರ ಪ್ರಯೋಜನ ಒಂದಿಬ್ಬರಿಗೆ ಸಿಕ್ಕಿದ್ದು ಬಿಟ್ಟರೆ ಮತ್ತಾರಿಗೂ ಸಿಗಲಿಲ್ಲ. ಇದು ಜೀವವಿಮಾ ಕಂಪನಿ ಅಧಿಕಾರಿಗಳ ಬೇಜವಾಬ್ದಾರಿಯಾಗಿದ್ದು, ಕಂಪನಿ ಅಧಿಕಾರಿಗಳ ವಿರುದ್ಧ ಪುರಸಭೆ ತನಿಖೆ ಕ್ರಮಕ್ಕೆ ಮುಂದಾಗಬೇಕು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಜಿಲ್ಲಾ 3182 ಜಿಲ್ಲಾ ಗವರ್ನರ್ ಡಿ. ಎಸ್. ರವಿ ಅವರು ಇತ್ತೀಚೆಗೆ ವಲಯ ಒಂದರ ರೋಟರಿ ಸನ್‌ರೈಸ್ ಕುಂದಾಪುರ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದರು. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ.ನರಸಿಂಹ ಹೊಳ್ಳ ಅವರು ರೋಟರಿ ಜಿಲ್ಲಾ ಗವರ್ನರ್‌ರನ್ನು ಸ್ವಾಗತಿಸಿ ಕ್ಲಬ್ ಅಸೆಂಬ್ಲಿಯಲ್ಲಿ ಕಳೆದ ಆರು ತಿಂಗಳಲ್ಲಿ ಕ್ಲಬ್ ನಡೆದು ಬಂದ ಹಾದಿಯನ್ನು ವಿವರಿಸಿದರು. ರೋಟರಿಯ ಎಲ್ಲಾ ೫ ಸೇವೆಗಳ ನಿರ್ದೇಶಕರುಗಳಾದ ಬಿ.ಎಂ. ಚಂದ್ರಶೇಖರ, ಶಿವಾನಂದ ಎಂ.ಪಿ, ದಿನೇಶ ಗೋಡೆ, ಉಲ್ಲಾಸ್ ಕ್ರಾಸ್ತಾ ಮತ್ತು ರಾಜು ಪೂಜಾರಿಯವರು ತಮ್ಮ ಸೇವೆಯಡಿ ನಡೆಸಿದ ೮೦ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ವಿವರಿಸಿದರು. ಸಂಜೆ ಅಕ್ಷತಾ ಹಾಲ್‌ನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವೈಟ್ ಲಿಫ್ಟರ್ ವಿಶ್ವನಾಥ ಗಾಣಿಗ, ಡ್ರಾಮಾ ಜೂನಿಯರ್ ಆರ್ಟಿಸ್ಟ್ ಅರವಿಂದ ಕೊತ್ವಾಲ್ ಮತ್ತು ಉಡುಪಿ ಜಿಲ್ಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷರಾಗಿ ಅವಿರೋದ ಆಯ್ಕೆ ಆದ ಕ್ಲಬಿನ ಸ್ಥಾಪಕಾಧ್ಯಕ್ಷರಾದ ದಿನಕರ ಆರ್. ಶೆಟ್ಟಿಯವರನ್ನು ಗೌರವಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ತೆರಿಗೆ ಕಾನೂನು, ನಗದು ರಹಿತ ಬ್ಯಾಂಕಿಂಗ್ ವ್ಯವಹಾರ ಮತ್ತು ಸ್ವೋದ್ಯೋಗ ಕುರಿತು ಮಾಹಿತಿ ಶಿಬಿರವು ಅಲ್ಲಿನ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಂಗಣದಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಕುಂದಾಪುರದ ಚಾರ್ಟರ್ಡ್ ಅಕೌಂಟಂಟ್ ಟಿ. ಎನ್. ಪ್ರಭು ಆದಾಯ ಎಂದರೇನು, ಅವುಗಳ ವಿಧಗಳು ಯಾವುವು, ಯಾರಿಗೆ ಮತ್ತು ಎಷ್ಟು ಅನ್ವಯವಾಗುತ್ತದೆ ಇತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು. ಕಿರಿಮಂಜೇಶ್ವರ ಕರ್ನಾಟಕ ಬ್ಯಾಂಕ್ ಶಾಖಾಧಿಕಾರಿ ಹರೀಶ್ ನಗದು ರಹಿತ ವ್ಯವಹಾರದ ಕುರಿತು ಮಾತನಾಡಿ ಅದರ ಮಹತ್ವ, ಅನುಕೂಲತೆ ಮತ್ತು ಮಿತಿಗಳನ್ನು ವಿವರಿಸಿದರು. ಬ್ರಹ್ಮಾವರದ ಗ್ರಾಮೀಣಾಭಿವೃದ್ಧಿ ಮತ್ತು ಸ್ಯೋದ್ಯೋಗ ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಸ್ವ-ಉದ್ಯೋಗ ನಡೆಸಬೇಕಾದ ಅನಿವಾರ್ಯತೆ, ಅದಕ್ಕೆ ಸಿಗುವ ವಿವಿಧ ಸೌಲಭ್ಯಗಳು ಮತ್ತು ಬ್ರಹ್ಮಾವರದಲ್ಲಿ ದೊರೆಯುವ ತರಬೇತಿಗಳ ವಿಸ್ತೃತ ಮಾಹಿತಿ ನೀಡಿದರು ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು 15ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಫೆ. 23ರಂದು ಕಿರಿಮಂಜೇಶ್ವರದಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಅಂಕಣಕಾರ, ಸಾಹಿತಿ ಸತೀಶ ಚಪ್ಪರಿಕೆ ಆಯ್ಕೆಯಾಗಿದ್ದಾರೆ. ಮೂಲತ: ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಚಪ್ಪರಿಕೆ ಎನ್ನುವ ಅತ್ಯಂತ ಗ್ರಾಮೀಣ ಪ್ರದೇಶದವರಾದರೂ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಪತ್ರಕರ್ತರಾಗಿದ್ದಾರೆ. ಪದವಿಪೂರ್ವ ಶಿಕ್ಷಣದ ವರೆಗೆ ತಾಲೂಕಿನಲ್ಲೇ ಓದಿ ಅನಂತರ ಬೆಂಗಳೂರು ವಿವಿ.ಯಲ್ಲಿ ಬಿ.ಎಸ್ಸಿ. ಪದವಿ ಪಡೆದು ಅಣ್ಣಾಮಲೈ ವಿ.ವಿ.ಯಲ್ಲಿ ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುತ್ತಾರೆ. ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿ.ವಿ.ಯಲ್ಲಿಯೂ ಅಧ್ಯಯನ ಮಾಡಿರುವ ಹೆಗ್ಗಳಿಕೆ ಇವರದ್ದು. ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಿಟಿಷ್ ಚೆವೆನ್ನಿಂಗ್ ಸ್ಕಾಲರ್ ಆಗಿರುವ ಸತೀಶರವರು ಸುಮಾರು 25 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಹಾಗೂ ಪ್ರಜಾವಾಣಿಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಚಪ್ಪರಿಕೆಯವರು ಹಲವು ವರ್ಷಗಳ ಕಾಲ ಕ್ರೀಡಾ ವರದಿಗಾರರಾಗಿ ದುಡಿದಿದ್ದಾರೆ. ದಿ ಸಂಡೆ ಇಂಡಿಯನ್ – ಕನ್ನಡ ಪತ್ರಿಕೆಯ ಹಿರಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಭಾಗದ ನಾಗರಿಕರ ಬಹುಕಾಲದ ಬೇಡಿಕೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಡಿಪೋ ನಿರ್ಮಾಣದ ಸ್ಥಳ ವೀಕ್ಷಣೆಗಾಗಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ ಭೇಟಿ ನೀಡಿದರು. ಬಳಿಕ ಬೈಂದೂರು ಶಾಸಕರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಸ್ಥಳೀಯ ಮುಖಂಡರೊಡನೆ ಸಮಾಲೋಚನೆ ನಡೆಸಿದ ಅವರು, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರ ಶಿಪಾರಸ್ಸಿನಂತೆ ಸ್ಥಳ ಪರಿಶೀಲನೆ ಹಾಗೂ ಇಲ್ಲಿನ ಸ್ಥಿತಿಗತಿಗಳ ಬಗೆಗೆ ಅವಲೋಕನ ಮಾಡಲು ಇಲ್ಲಿಗೆ ಆಗಮಿಸಿದ್ದು, ಸರಕಾರಿ ಸ್ಥಳ ದೊರೆತ ಪ್ರದೇಶದಲ್ಲಿ ಬಸ್ಸು ನಿಲ್ದಾಣ ಹಾಗೂ ಡಿಪೋ ನಿರ್ಮಿಸಲಾಗುವುದು. ಅಧಿಕಾರಿಗಳಿಂದ ಸರ್ವೆ ಕಾರ್ಯ ನಡೆಸಿದ ಬಳಿಕ ಬಸ್ಸು ನಿಲ್ದಾಣ, ಬೆಂಗಳೂರು ಮತ್ತು ಬೈಂದೂರು ಸುತ್ತಲಿನ ಗ್ರಾಮೀಣ ಪ್ರದೇಶಕ್ಕೆ ಹೊಸ ಬಸ್ ರೂಟ್ ಮಾಡುವುದು ಮುಂತಾದವುಗಳ ಬಗೆಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ಮೂಕಾಂಬಿಕಾ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ವೆಂಕಟೇಶ್ ಕಿಣಿ ಸಲಹೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಸ. ಹಿ. ಪ್ರಾ ಶಾಲೆ ತಗ್ಗರ್ಸೆಯಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕಾರ್ಯಕ್ರಮ ಜರುಗಿತು. ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಭಾಕರ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯೆ ಭವಾನಿ ಗಾಣಿಗ, ಸಿಆರ್‌ಪಿ ದಿನಕರ್, ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಧ್ಯಾಯ ತಿಮ್ಮಪ್ಪ ಗಾಣಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ನೋಡೆಲ್ ಶಿಕ್ಷಕಿ ಸಂಗೀತ ಸ್ವಾಗತಿಸಿ, ಸಾರಿಕಾ ವಂದಿಸಿದರು. ಸಹಶಿಕ್ಷಕಿ ಜ್ಯೋತಿ ಎಚ್ ನಿರೂಪಿಸಿದರು. ಸಹಶಿಕ್ಷಕಿಯರಾದ ಭಾಗೀರಥಿ ಎಲ್ ಹಾಗೂ ಅಂಬಾಬಾಯಿ, ಗೌರವ ಶಿಕ್ಷಕಿ ಸರಸ್ವತಿ ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಶಿರೂರು: ಜೆ.ಸಿ.ಐ ಶಿರೂರು ಇದರ ವತಿಯಿಂದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ ಸಂಸ್ಥಾನ್ ಅಕ್ಯೂಪ್ರೆಶರ್ ಪೈನಿಂಗ್ ಮತ್ತು ರೀಸರ್ಚ್ ಸೆಂಟರ್ ರಾಜಸ್ಥಾನ ಸಂಸ್ಥೆಯ ಸಹಭಾಗಿತ್ವದಲ್ಲಿ ಉಚಿತ ಅಕ್ಯೂಪ್ರಶರ್ ಮತ್ತು ಸುಜೋಕ್ ತೆರಪಿ ಚಿಕಿತ್ಸಾ ಶಿಬಿರ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಉದ್ಯಮಿ ನಾಗಶ್ರೀ ಧತ್ತಿನಿದಿ ಪ್ರತಿಷ್ಠಾನ ಟ್ರಸ್ಟಿ ಮಂಜುನಾಥ ಬಿಲ್ಲವ ಮುಂಬ್ಯೆ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ ಜೆ.ಸಿ.ಐ ಸಂಸ್ಥೆ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಇಂತಹ ಉತ್ತಮ ಕಾರ್ಯಗಳು ನಿರಂತರವಾಗಿ ನಡೆಯಲಿ ಸಾರ್ವಜನಿಕರು ಇದರ ಉಪಯೋಗ ಪಡೆಯುವಂತಾಗಲಿ ಎಂದರು. ಶಿರೂರು ಜೆ.ಸಿ.ಐ ಅಧ್ಯಕ್ಷ ಅರುಣ ಕುಮಾರ್ ಶಿರೂರು ಅಧ್ಯಕ್ಷತೆ ವಹಿಸಿದ್ದರು.ಈ ಸಂಧರ್ಭದಲ್ಲಿ ಪ್ರಧಾನ ಪ್ರಾಯೋಜಕರಾದ ಗುತ್ತಿಗೆದಾರ ಕ್ಲೆಮೆಂಟ್ ರೋಡ್ರಿಗಸ್‌ರವರನ್ನು ಸಮ್ಮಾನಿಸಲಾಯಿತು.
