ಮರವಂತೆ ವಿಶ್ವಕರ್ಮ ಸಮಾಜ ಸೇವಾ ಸಂಘ: ವಿವಿಧ ಮಾಹಿತಿ ಶಿಬಿರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ವಿಶ್ವಕರ್ಮ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ತೆರಿಗೆ ಕಾನೂನು, ನಗದು ರಹಿತ ಬ್ಯಾಂಕಿಂಗ್ ವ್ಯವಹಾರ ಮತ್ತು ಸ್ವೋದ್ಯೋಗ ಕುರಿತು ಮಾಹಿತಿ ಶಿಬಿರವು ಅಲ್ಲಿನ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಂಗಣದಲ್ಲಿ ನಡೆಯಿತು.

Call us

Click Here

ಶಿಬಿರವನ್ನು ಉದ್ಘಾಟಿಸಿದ ಕುಂದಾಪುರದ ಚಾರ್ಟರ್ಡ್ ಅಕೌಂಟಂಟ್ ಟಿ. ಎನ್. ಪ್ರಭು ಆದಾಯ ಎಂದರೇನು, ಅವುಗಳ ವಿಧಗಳು ಯಾವುವು, ಯಾರಿಗೆ ಮತ್ತು ಎಷ್ಟು ಅನ್ವಯವಾಗುತ್ತದೆ ಇತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು. ಕಿರಿಮಂಜೇಶ್ವರ ಕರ್ನಾಟಕ ಬ್ಯಾಂಕ್ ಶಾಖಾಧಿಕಾರಿ ಹರೀಶ್ ನಗದು ರಹಿತ ವ್ಯವಹಾರದ ಕುರಿತು ಮಾತನಾಡಿ ಅದರ ಮಹತ್ವ, ಅನುಕೂಲತೆ ಮತ್ತು ಮಿತಿಗಳನ್ನು ವಿವರಿಸಿದರು. ಬ್ರಹ್ಮಾವರದ ಗ್ರಾಮೀಣಾಭಿವೃದ್ಧಿ ಮತ್ತು ಸ್ಯೋದ್ಯೋಗ ತರಬೇತಿ ಕೇಂದ್ರದ ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಸ್ವ-ಉದ್ಯೋಗ ನಡೆಸಬೇಕಾದ ಅನಿವಾರ್ಯತೆ, ಅದಕ್ಕೆ ಸಿಗುವ ವಿವಿಧ ಸೌಲಭ್ಯಗಳು ಮತ್ತು ಬ್ರಹ್ಮಾವರದಲ್ಲಿ ದೊರೆಯುವ ತರಬೇತಿಗಳ ವಿಸ್ತೃತ ಮಾಹಿತಿ ನೀಡಿದರು

ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಶುಭ ಹಾರೈಸಿದರು. ರವಿ ಎಂ. ಎನ್ ಸ್ವಾಗತಿಸಿದರು. ರಾಘವೇಂದ್ರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ್ ಆಚಾರ್ಯ ವಂದಿಸಿದರು. ಕರುಣಾಕರ ಆಚಾರ್ಯ ನಿರೂಪಿಸಿದರು.

Leave a Reply