Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ಆಗಮಿಸಿದ್ದ ಅವರು ಕುಂದಾಪುರ ಸಮೀಪದ ವಕ್ವಾಡಿ ನಿವಾಸಿ, ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್‌ ಅವರ ಕುಟುಂಬ ಸದಸ್ಯ ವಿ.ಕೆ. ಹರೀಶ್‌ ನಿವಾಸಕ್ಕೆ ಭೇಟಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತುಳು ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಬೆಳೆಯುತ್ತಿದೆ. ಚಾಲಿ ಪೋಲಿಲು ಚಿತ್ರ ಹಿಟ್‌ ಆಗಿದೆ. ಚಿತ್ರ ತಂಡವನ್ನು ಭೇಟಿ ಮಾಡಿ ಸಂತಸ ಹಂಚಿಕೊಂಡಿದ್ದೇನೆ. ಚಿತ್ರದ ಹಾಡುಗಳು ಸಖತ್ತಾಗಿವೆ. ಅವಕಾಶ ಸಿಕ್ಕಲ್ಲಿ ಕೋಸ್ಟಲ್‌ವುಡ್‌ನಲ್ಲಿ ನಟಿಸುವಾಸೆ ಇದೆ. ತುಳು ಹಾಡುಗಳು ನನಗೆ ಇಷ್ಟ. ತುಳು ಸಂಗೀತ ಕೇಳುವ ಹವ್ಯಾಸ ಇಟ್ಟುಕೊಂಡಿದ್ದೇನೆ. ಅವಕಾಶ ಸಿಕ್ಕರೆ ತುಳು ಹಾಡು ಹಾಡಬೇಕೆಂಬ ಅಸೆ ಎಂದು ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ತಿಳಿಸಿದ್ದಾರೆ. ಕರಾವಳಿಗೂ, ನಮ್ಮ ಕುಟುಂಬಕ್ಕೂ ದೊಡ್ಡ ನಂಟಿದೆ. ತಂದೆಯವರು ಕರಾವಳಿ ಜನರ ಪ್ರೀತಿಗೆ ಪಾತ್ರರಾದವರು. ಚಿಕ್ಕವನಿದ್ದಾಗ ಅವರೊಂದಿಗೆ ಈ ಭಾಗದಲ್ಲಿ ಶೂಟಿಂಗ್‌ ವೇಳೆ ಭಾಗವಹಿಸಿದ್ದೆ. ವಕ್ವಾಡಿ ವಿ.ಕೆ. ಮೋಹನ್‌ ಕುಟುಂಬ ನಮಗೆ ಮನೆಯಿದ್ದಂತೆ. ಒಂದು ಮುತ್ತಿನ…

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಅದೊಂದು ಪಕ್ಕಾ ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ನೆನಪಿಸುವ ಸನ್ನಿವೇಶ. ಕಿಂಡಿ ಅಣೆಕಟ್ಟಿನ ಹಿನ್ನೀರ ಪಕ್ಕದಲ್ಲೇ ಅಡಿಕೆ ಹಿಂಗಾರದ ಘಮ, ಕೆಂಪಡರಿದ ಅಡಿಕೆಗೊನೆ, ಎತ್ತರಕ್ಕೆ ಬೆಳೆದು ನಿಂತ ಕಾಳು ಮೆಣಸು ಬಳ್ಳಿ, ತೆಂಗು. ಅದರ ಕೆಳಗೇ ವಿಚಾರಕ್ಕೊಂದು ವೇದಿಕೆ. ಅಲ್ಲಿ ವೇದಿಕೆ, ಚಪ್ಪರದಿಂದ ಹಿಡಿದು ಕುಟೀರ ಊಟದ ವರೆಗೆ ಎಲ್ಲವೂ ಹಸಿರು ಸ್ನೇಹಿ. ಬಸ್ರೂರು ಬಿ. ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಹಾಗೂ ಕುಂದಾಪುರ ತಾಲೂಕು ಪ್ರಗತಿಪರ ಕೃಷಿಕರ ವೇದಿಕೆ ಭಾಂಡ್ಯ ಇಂದ್ರಪ್ರಸ್ತದಲ್ಲಿ ಆಯೋಜಿಸಿದ ನೆಲ, ಜಲ, ಕೃಷಿ ಉಳಿಸೋಣ ಬನ್ನಿ ಹಸಿರು ಗೋಷ್ಠಿ ಇಂತಹದ್ದೊಂದು ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದುದಲ್ಲದೇ ರೈತನ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲುತ್ತಾ ವಿಷಯ ತಜ್ಞರಿಂದ ಪರಿಹಾರವನ್ನೂ ಸೂಚಿಸುತ್ತಾ ಸಾರ್ಥಕ್ಯ ಕಂಡುಕೊಂಡಿತು. ಕೃಷಿ ಕಾರ್ಮಿಕರ ಕೊರತೆಯಿಂದ ಹಡಿಲು ಬೀಳುತ್ತಿರುವ ಭತ್ತ ಕೃಷಿ, ಮಾರುಕಟ್ಟೆಯಲ್ಲಿ ಧಾರಣೆಗಳ ಏರಿಳಿತ ತೊಳಲಾಟದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬ ಜಿಜ್ಞಾಸೆ, ಹೆಚ್ಚುತ್ತಿರುವ ನೀರಿನ ಸಮಸ್ಯೆ, ಬರ, ಬಹು ಕೃಷಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾರ್ಕಳ ತಾಲೂಕಿನ ಅಜೆಕಾರು ಎಣ್ಣೆಹೊಳೆಯಲ್ಲಿ ಜನವರಿ ೨೫ರಂದು ನಡೆಯುವ ಪ್ರಪ್ರಥಮ ಹೋಬಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಸಾಹಿತಿ, ಪ್ರಕಾಶಕ, ಸಂಘಟಕ ಮುನಿಯಾಲು ಗಣೇಶ ಶೆಣೈ ಅವರನ್ನು ಅವರ ಕಚೇರಿ ನಲಂದಾಕ್ಕೆ ತೆರಳಿ ಆಹ್ವಾನಿಸಲಾಯಿತು. ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಆಹ್ವಾನ ಪತ್ರಿಕೆ ನೀಡಿ ಮತ್ತು ಕನ್ನಡದ ಶಾಲು ಹಾಕಿ ಅವರನ್ನು ಆಹ್ವಾನಿಸಿದರು. ಮುನಿಯಾಲು ಗಣೇಶ ಶೆಣೈ ಅವರು ಸದ್ದಿಲ್ಲದೆ ಸಾಹಿತ್ಯ ರಚನೆ ಮತ್ತು ಸೇವೆ ಮಾಡುತ್ತಾ ಬಂದಿದ್ದಾರೆ ಅವರು ಸಮ್ಮೇಳಾಧ್ಯಕ್ಷತೆ ವಹಿಸಿ ಕೊಂಡಿರುವುದು ನಮಗೆ ಬಹಳ ಸಂತೋಷ ತಂದಿದೆ. ಅವರಿಂದ ಇನ್ನಷ್ಟು ಸೇವೆ ಸಲ್ಲಲಿ ಎಂದು ಹಾರೈಸಿದರು. ನಾನಿನ್ನು ಸಾಹಿತ್ಯ ವಿದ್ಯಾರ್ಥಿ, ನಾಲ್ಕಾರು ದೇಶ ಸುತ್ತಿದ ಮೇಲೆ ನಮ್ಮ ದೇಶದ ಆದಿವಾಸಿಗಳ ಪಾರಂಪರಿಕ ಜ್ಞಾನ ನೋಡಿ ಚಕಿತನಾಗಿ ಅವುಗಳ ಕುರಿತು ಅಧ್ಯಯನ ನಡೆಸುತ್ತಿದ್ದೇನೆ. ವೇದಿಕೆ ಹಂಚಿಕೊಳ್ಳುವುದು, ಪ್ರಶಸ್ತಿ ಪುರಸ್ಕಾರ ಗೌರವಗಳಿಗಿಂತ ಭಿನ್ನವಾದ ಸಂತೋಷವನ್ನು ನಾನು ಕೊಂಡಿದ್ದೇನೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬಾಳೆಮನೆ ಕುಟುಂಬಸ್ಥರು ನಡೆಸಲಿರುವ ಚತುಷ್ಪಪವಿತ್ರ ನಾಗಮಂಡಲ ಸೇವೆಗೆ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಣಪತಿ ಪೂಜೆ ನಂತರ ಚಪ್ಪರ ಮುಹೂರ್ತ ನಡೆಯಿತು. ಕುಂದಬಾರಂದಾಡಿ ವೇ.ಮೂ.ಚೆನ್ನಕೇಶವ ಉಪಾಧ್ಯ ಹಾಗೂ ಪುರೋಹಿತ ವರ್ಗ ಬೆಳಗ್ಗೆ ಗಣಹೋಮ, ದೇವತಾ ಕಾರ‍್ಯ, ಬಾಳೆಮನೆ ನಾಗದೇವರ ಬನದಲ್ಲಿ ವಿಶೇಷ ಪೂಜೆ, ಮಂಗಳಾರತಿ ಸಲ್ಲಿಸಿದ ನಂತರ ಚಪ್ಪರ ಮುಹೂರ್ತ ನಡೆಸಲಾಯಿತು. ನಾಗದರ್ಶನ ಮಂಟಪ, ಪಾಕಶಾಲೆ, ಯಜ್ಞಶಾಲೆ, ಹಿಂಗಾರ ಸಂಗ್ರಹ ಗೋಡಾನ್, ಹೊರೆ ಕಾಣಿಗೆ ಹಾಗೂ ಹಸಿರುವಾಣಿ ಸಂಗ್ರಹಲಾಯಕ್ಕೆ ಭೂಮಿ ಪೂಜೆ ನೆರವೇರಿಸಿ, ಕಂಬ ನೆಡುವ ಮೂಲಕ ಚಪ್ಪರ ಮಹೂರ್ತ ಸಂಪನ್ನಗೊಂಡಿತು. ಬಾಳೆಮನೆ ಹಿರಿಯ ಕುಟುಂಬಸ್ಥ ದೀಕ್ಷೆ ಹಿಡಿದ ಬಾಳೆಮನೆ ನರಸಿಂಹ ಶೆಟ್ಟಿ ಹಾಗೂ ಪತ್ನಿ ದೇವಕಿ ಶೆಟ್ಟಿ ಚಪ್ಪರ ಮೂಹೂರ್ತ ಧಾರ್ಮಿಕ ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಗತಿಪರ ಕೃಷಿಕ ಸಬ್ಲಾಡಿ ಮಂಜಯ್ಯ ಶೆಟ್ಟಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮಾಜಿ ಆಡಳಿತ ಧರ್ಮದರ್ಶಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಳವಾಡಿ ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನದ ವಾರ್ಷಿಕ ಗೆಂಡಸೇವೆ ಹಾಗೂ ಹಾಲುಹಬ್ಬದ ಸಂದರ್ಭದಲ್ಲಿ ನಡೆದ ಅನ್ನಸಂತರ್ಪಣೆಯ ಸೇವಾರ್ಥಿಗಳಾದ ಬಾಬು ಪೂಜಾರಿ ಕಿರುಕಿ ಏಳಜಿತ ಹಾಗೂ ಗುರುರಾಜ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು. ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಿಷಾಸುರ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರದ ಸಂದರ್ಭದಲ್ಲಿ ಸಮಾಜದ ಮುಖವಾಣಿಯಾಗಿ ಪತ್ರಿಕೆ ಇರಬೇಕು ಎನ್ನುವ ನೆಲೆಯಲ್ಲಿ ಮಹಿಷಾಮರ್ದಿನಿ ಪತ್ರಿಕೆಯನ್ನು ಆರಂಬಿಸಲಾಯಿತು. ಸಮಾಜದ ಅಭಿವೃದ್ದಿಯಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾಗಿದ್ದು, ಸಮಾಜದಲ್ಲಿ ಸಾಕಷ್ಟು ಸಂಖ್ಯೆಯ ಪ್ರತಿಭಾನ್ವಿತರು, ಬರಹಗಾರರು ಇದ್ದಾರೆ. ಅವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮಹಿಷಾಮರ್ದಿನಿ ನಿರಂತರವಾಗಿ ಸಮಾಜದ ವಿಚಾರಗಳನ್ನು ಬಿಂಬಿಸುತ್ತಿರಲಿ ಎಂದು ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ) ಹೋಬಳಿಯ ಗೌರವಾಧ್ಯಕ್ಷರಾದ ಕಟ್ಟೆ ಗೋಪಾಲಕೃಷ್ಣ ರಾವ್ (ಬೋಜಣ್ಣ) ಅಭಿಪ್ರಾಯ ಪಟ್ಟರು. ಬಗ್ವಾಡಿಯ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ  ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಬಗ್ವಾಡಿ ಇದರ ‘ಮಹಿಷಾಸುರ ಮರ್ದಿನಿ’ ಮಾಸ ಪತ್ರಿಕೆಯ ನೂತನ ಸಂಪಾದಕ ಮಂಡಳಿಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ) ಹೋಬಳಿಯ ಅಧ್ಯಕ್ಷರಾದ ಕೆ.ಕೆ ಕಾಂಚನ್ ಮಾತನಾಡಿ, ಸಮಾಜದ ಆಗುಹೋಗುಗಳನ್ನು ಸಮಾಜದ ಬೇರೆ ಬೇರೆ ಪ್ರದೇಶದ ಜನರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಪತ್ರಿಕೆ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಸುಪ್ತವಾಗಿರುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ಕರಾವಳಿ ಭಾಗದ ಸಂಸ್ಕೃತಿ, ಜನಪದ ಆಚರಣೆ, ಕ್ರೀಡೆ, ಜೀವನ ಶೈಲಿಯ ಶ್ರೀಮಂತಿಕೆ ಮತ್ತು ಕರಾವಳಿಯ ಖಾದ್ಯಗಳ ವೈವಿಧ್ಯತೆಯನ್ನು ಬೆಂಗಳೂರಿಗರಿಗೆ ಪರಿಚಯಿಸುವುದರ ಜೊತೆಗೆ ಇಲ್ಲಿ ನೆಲೆಸಿರುವ ಕರಾವಳಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಮಹದಾಸೆಯೊಂದಿಗೆ ಬೆಂಗಳೂರಿನಲ್ಲಿ ಆಯೋಜಿಸುತ್ತಿರುವ ‘ನಮ್ಮೂರ ಹಬ್ಬ 2017’ಕ್ಕೆ ಸಕಲ ಸಿದ್ಧತೆ ನಡೆದಿದೆ. [quote font_size=”15″ bgcolor=”#ffffff” bcolor=”#dd3333″ arrow=”yes” align=”right”]ಜನವರಿ 21-22 ಶನಿವಾರ ಹಾಗು ಭಾನುವಾರ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರಿನ ಜಯನಗರದ 5ನೇ ಹಂತದಲ್ಲಿರುವ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ (ಶಾಲಿನಿ ಗ್ರೌಂಡ್) ನಮ್ಮೂರ ಹಬ್ಬ ನಡೆಯಲಿದೆ.[/quote] ಹದಿನೈದು ಲಕ್ಷದಷ್ಟು ಕರಾವಳಿಯ ಮಂದಿ ಬದುಕು ಅರಸಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರೂ ಕರಾವಳಿಯ ತಾಯಿಬೇರಿನ ಜೊತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶದಿಂದ ಸತತವಾಗಿ ನಮ್ಮೂರ ಹಬ್ಬ ಆಯೋಜಿಸಲಾಗುತ್ತಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆ.ಸಿ.ಐ ಕುಂದಾಪುರದ ಜ್ಯೂನಿಯರ್ ಜೆ.ಸಿ.ಐ 2017 ರ ಸಾಲಿನ ಅಧ್ಯಕ್ಷರಾಗಿ ಸುಬ್ರಮಣ್ಯ ಆಚಾರ್ ಗುಲ್ವಾಡಿ ಆಯ್ಕೆಯಾಗಿದ್ದಾರೆ ಯಕ್ಷಗಾನ, ನಾಟಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸುಬ್ರಹಣ್ಯ ಅವರು ಜ್ಯೂನಿಯರ್ ಜೆಸಿ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದಾರೆ. ನಿರ್ಣಾಯಕ ಮಂಡಳಿ ಸಭೆಯಲ್ಲಿ ಜೆ.ಸಿ.ಐ ೨೦೧೭ರ ಚುನಾಯಿತ ಅದ್ಯಕ್ಷರಾಗಿರುವ ಅಕ್ಷತಾ ಗಿರೀಶ್, ನಿಕಟಪೂರ್ವ ಅದ್ಯಕ್ಷ ವಿಷ್ಣು.ಕೆ.ಬಿ. ಹಾಗೂ ಕಾರ್ಯದರ್ಶಿ ರಾಘು ವಿಠಲವಾಡಿ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.

Read More

ಕುಂದಾಪ್ರ ಡಾಟ್ ಕಾಂ ಲೇಖನ ಕುಂದಾಪುರ: ಮೂರು ವರ್ಷಗಳ ಹಿಂದೆ ಸಮಾನ ಮನಸ್ಕರೆಲ್ಲರು ಸೇರಿ ಸಾಮಾಜಿಕ ಕಳಕಳಿಯೊಂದಿಗೆ ಹುಟ್ಟುಹಾಕಿದ ಸಂಸ್ಥೆ ಪ್ರೇರಣಾ ಯುವ ವೇದಿಕೆ ನೈಕಂಬ್ಳಿ ಚಿತ್ತೂರು. ಗ್ರಾಮೀಣ ಪ್ರದೇಶದ ಜನರ ಅಗತ್ಯಗಳಿಗೆ ಅನುಗುಣವಾಗಿ ಯಶಸ್ವಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಸುತ್ತಲಿನ ಪರಿಸರದಲ್ಲಿ ಜನಮನ್ನಣೆ ಗಳಿಸಿದ ನಮ್ಮ ಹೆಮ್ಮೆ ಸಂಸ್ಥೆಯದ್ದು. ಸಂಸ್ಥೆಯ ಕಾರ್ಯಕ್ರಮಗಳು: ಸಾವಯವ ಕೃಷಿಯ ಕುರಿತು ಸಮಗ್ರ ಮಾಹಿತಿ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಮಾರಕವಾದ ಕೆಂಪುಮೂತಿಯ ಹುಳಗಳಿಗೆ ಉಚಿತ ಮೋಹಕ ಬಲೆ ವಿತರಣೆ, ಕಿಸಾನ್ ಕಾರ್ಡ್ ನೋಂದಣಿ. ಆಧಾರ್ ಕಾರ್ಡ್ ನೋಂದಣಿ ಮತ್ತು ವಿತರಣೆ. ಉಚಿತ ಹೃದಯ ಸಂಬಂಧಿತ ತಪಾಸಣೆ ಮತ್ತು ಉಚಿತ ವೈದ್ಯಕೀಯ ನೆರವು ಔದ್ಯೋಗಿಕ ಪ್ರಪಂಚದಲ್ಲಿ ಇಂಗ್ಲಿಷ್ ಅಗತ್ಯತೆ ಅರಿತು ಹತ್ತಿರದ ನೈಕಂಬ್ಳಿ ಸರ್ಕಾರಿ ಶಾಲೆಗೆ ಇಂಗ್ಲಿಷ್ ಟೀಚರ್ ನಿಯೋಜಿಸಿ ವೇದಿಕೆ ವತಿಯಿಂದ ಸಂಬಳ ನೀಡುತ್ತಿದ್ದೇವೆ. ಮತ್ತು ಕಂಪೌಂಡ್ ಗೇಟ್, ಶಾಲಾ ಮಕ್ಕಳಿಗೆ ಉಚಿತ ನೋಟ್, ನೀರಿನ ಫಿಲ್ಟರ್, ಐಡಿ ಕಾರ್ಡ್ ವಿತರಣೆ. ಕೃಷಿ ಆರೋಗ್ಯ ಸಮಸ್ಯೆಯಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್‌ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಯೂತ್‌ರೆಡ್‌ಕ್ರಾಸ್, ಎನ್.ಎಸ್.ಎಸ್, ಎನ್.ಸಿ.ಸಿ, ರೇಂಜರ್ಸ್ ಮತ್ತುರೋವರ್ಸ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕಾಲೇಜಿನಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಮೂಳೆ ಮತ್ತು ಕೀಲು ತಜ್ಞರಾದ ಡಾ. ದಿನೇಶ್‌ಕುಮಾರ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಒಂದು ಯೂನಿಟ್ ರಕ್ತದಿಂದ ಮೂರು ಜನರ ಜೀವವನ್ನು ಉಳಿಸಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್‌ಇವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಮಾರಂಭದಲ್ಲಿ ಪದವಿಪೂರ್ವಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಗೊಂಡ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಸ್. ಜಯಕರ ಶೆಟ್ಟಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯ ಡಾ. ಮನೀಷ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ಡಾ. ಹೆಚ್.ಎಸ್. ಮಲ್ಲಿ,…

Read More