ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಭಂಡಾರ್‌ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜ್ ಯೂತ್ ರೆಡ್ ಕ್ರಾಸ್ ಘಟಕ ಮತ್ತು ರಾ.ಸೇ.ಯೋ ಆಶ್ರಯದಲ್ಲಿ ಅಗ್ನಿ ಸುರಕ್ಷತಾ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಂಗಳೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸದಸ್ಯ ಸಂತೋಷ ಪೀಟರ್ ಡಿಸೋಜ ಸಂಪನ್ಮೂಲ ವ್ಯಕ್ತಿಯಾಗಿ, ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಮುನ್ನೆಚ್ಚರಿಕಾ ಕ್ರಮ ಮತ್ತು ಅಗ್ನಿ ಅನಾಹುತ ಸಂಭವಿಸಿದಾಗ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಮಾಹಿತಿ ನೀಡಿದರು. ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಾರಾಯಣ ತಂತ್ರಿ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ನಿತಿನ್ ಮಂಗಳೂರು, ಎನ್.ಎಸ್.ಎಸ್. ಅಧಿಕಾರಿ ಅರುಣ ಮತ್ತು ರಾಮಚಂದ್ರ ಆಚಾರಿ ಉಪಸ್ಥಿತರಿದ್ದರು. ಸಂಯೋಜಕ ಪ್ರೊ. ಸತ್ಯನಾರಾಯಣ ಸ್ವಾಗತಿಸಿ, ಎನ್.ಎಸ್.ಎಸ್. ವಿದ್ಯಾರ್ಥಿ ಸಚಿನ್ ವಂದಿಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರಿಗೆ ಹೆಮ್ಮಾಡಿಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್‌ಐ) ನೇತೃತ್ವದಲ್ಲಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಅವರ ಭಾವಚಿತ್ರವನ್ನಿಟ್ಟು ಪುಷ್ಪ ನಮನ ಸಲ್ಲಿಸಿ ಮೊಂಬತ್ತಿ ಬೆಳಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಶಿಕ್ಷಕ ಹಾಗೂ ಕುಂದಾಪುರ ಸಮುದಾಯ ಸಂಘಟನೆಯ ಕಾರ್ಯದರ್ಶಿ ಸದಾನಂದ ಬೈಂದೂರು ಮಾತನಾಡಿ, ಚಿತ್ರಕಲಾ ಶಿಕ್ಷಕ ಭೋಜು ಹಾಂಡ ಅವರು ತಾವೂ ಬೆಳೆಯುವುದರೊಂದಿಗೆ ಎಲ್ಲರೂ ಬೆಳೆಯಬೇಕು, ಬದುಕನ್ನು ಪ್ರೀತಿಸಬೇಕು ಎಂಬ ಆಶಯವನ್ನಿಟ್ಟುಕೊಂಡವರು. ತಾವು ತರಗತಿಗಳಿಗೆ ಹೊರಡುವ ಮೊದಲು ಚಿತ್ರಕಲೆಗೆ ಬೇಕಾಗುವ ಎಲ್ಲ ಸಲಕರಣೆಗಳನ್ನು ಐದು ನಿಮಿಷದ ಮೊದಲು ತಮ್ಮ ಮೇಜಿನ ಎದುರಿಟ್ಟು ತಯಾರಾಗುತ್ತಿದ್ದರು. ಶಿಸ್ತುಬದ್ದ ಜೀವನ ನಡೆಸಿದ ಭೋಜು ಹಾಂಡರು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು ಎಂದು ಹೇಳಿದರು. ಅದೆಷ್ಟೊ ವಿದ್ಯಾರ್ಥಿಗಳು ಇವರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಎಲ್ಲಿಯೂ ಸಹ ತಾನೊಬ್ಬ ದೊಡ್ಡ ಕಲೆಗಾರನಾಬೇಕೆಂದು ಕನಸು ಕೂಡ ಕಂಡವರಲ್ಲ. ತಾನು ಕಲಿತದ್ದನ್ನು ಮಕ್ಕಳಿಗೂ ತಲುಪಿಸಬೇಕು ಆ ಮೂಲಕ ವಿದ್ಯಾರ್ಥಿಗಳ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ರಾ.ಹೆ.66ರ ಬೈಪಾಸ್ ಬಳಿ ತಡರಾತ್ರಿ ನಿಲ್ಲಿಸಿದ ಎರಡು ಲಾರಿಗಳಿಗೆ ಭಟ್ಕಳ ಕಡೆಗೆ ಮೀನು ತುಂಬಿಸಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಮೂರೂ ವಾಹನಗಳ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಎರಡೂ ಲಾರಿಯ ಚಾಲಕರಿಗೆ ಗಾಯಗಳಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟಿಪ್ಪರ್ ಹಾಗೂ ಸರಕು ಸಾಗಾಣಿಕೆ ಲಾರಿಯ ಚಾಲಕರು ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಮಾತನಾಡುತ್ತಿರುವಾಗ ಕುಂದಾಪುರದ ಕಡೆಯಿಂದ ಭಟ್ಕಳದ ಕಡೆಗೆ ಮೀನು ತುಂಬಿಸಿಕೊಂಡು ಹೋಗುತ್ತಿದ್ದ ಇನ್ಸುಲೇಟರ್ ಚಾಲಕ ಬೇರೊಂದು ವಾಹನವನ್ನು ಓವರ್‌ಟೇಕ್ ಮಾಡಿಕೊಂಡು ಬರುವ ಭರದಲ್ಲಿ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿದ್ದರಿಂದ ಮಾತನಾಡುತ್ತಾ ನಿಂತಿದ್ದ ಚಾಲಕ ಸನ್ನಿ ಡಯಾಸ್ ಮತ್ತು ಗಣೇಶ ಅವರಿಗೆ ಢಿಕ್ಕಿಯಾಗಿ ಬಳಿಕ ಲಾರಿಗಳಿಗೆ ಗುದ್ದಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಸ್ಥಾನದ ಹಾಲು ಹಬ್ಬ ಹಾಗೂ ಗೆಂಡಸೇವೆ ವಿಶೇಷವಾಗಿ ಜರುಗಿದವು. ದೈವಸ್ಥಾನಕ್ಕೆ ಆಗಮಿಸಿದ್ದ ಉದ್ಯಮಿ ವಿ. ಕೆ. ಮೋಹನ್ ಅವರೊಂದಿಗೆ ಬಿಗ್‌ಬಾಸ್ ಸೀಜನ್-೪ ವಿಜೇತ ಪ್ರಥಮ್ ಹಾಗೂ ಬಿಗ್‌ಬಾಸ್‌ನ ಇತರೇ ಸ್ವರ್ಧಿಗಳಾಗಿದ್ದ ಮೋಹನ್, ಭುವನ್, ರೇಖಾ, ಕಾವ್ಯ ಶಾಸ್ತ್ರಿ, ಕಿರುತೆರೆ ನಟರಾದ ಸೂರ್ಯ, ವಿರಾಟ್ ಮೊದಲಾದವರು ಕುಂದಾಪುರಕ್ಕೆ ಆಗಮಿಸಿದ್ದರು. ನಟರನ್ನು ನೋಡಲು ಜನರು ಮುಗಿಬಿಳುತ್ತಿದ್ದುದು ಕಂಡುಬಂತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಧವಳ ಕಾಲೇಜು, ಮೂಡುಬಿದರೆಯ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಅಂತರ್-ಕಾಲೇಜು ಮಟ್ಟದ ಪುರುಷರ ನೆಟ್‌ಬಾಲ್ ಪಂದ್ಯಾಟದಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್.ರವರು ಮತ್ತು ವಾಣಿಜ್ಯ ಉಪನ್ಯಾಸಕ ಹರೀಶ್ ಬಿ. ಅಭಿನಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಉಳ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮನ್ಮಹಾರಥೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತ ರವಿ ಕೋಟಾರಗಸ್ತಿ, ಉಳ್ಳೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಉಳ್ತೂರು ಮೋಹನದಾಸ ಶೆಟ್ಟಿ ಕಟ್ಟೆಮನೆ, ಜೀಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ಸುರೇಶ್ ಎ. ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಂದ್ರ ಹೆಗ್ಡೆ, ಪ್ರಧಾನ ಅರ್ಚಕ ಸೀತಾರಾಮ ಅಡಿಗ, ಚನ್ನಕೇಶವ ಅಡಿಗ, ಜೀಣೋದ್ಧಾರ ಸಮಿತಿ ಗೌರವ ಕಾರ್ಯಧ್ಯಕ್ಷ ಹೆಬ್ರಿಬೀಡು ದೇವಪ್ಪ ಮಲ್ಲಿ, ಸಹಕಾಯಾಧ್ಯಕ್ಷ ಬಿ. ಚಂದ್ರಕಾಂತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯು. ಭೋಜರಾಜ ಶೆಟ್ಟಿ, ಉಳ್ತೂರು ಕೋಶಾಧಿಕಾರಿಗಳು ಸೀತಾರಾಮ ಶೆಟ್ಟಿ ಕಟ್ಟೆಮನೆ, ಎಂ. ಶ್ರೀಧರ ಶೆಟ್ಟಿ ಮಲ್ಯಾಡಿ, ಉಪಾಧ್ಯಕ್ಷರಾದ ಎಂ. ಜಯಶೀಲ ಶೆಟ್ಟಿ, ಸುಧಾಕರ ಶೆಟ್ಟಿ ಸಾವಂತರ ಮನೆ ವ್ಯವಸ್ಥಾಪನಾ ಸಮಿತಿ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಪಾನಿನ ಪ್ರೊಫೆಸರ್ ಸುಮಿಯೋ ಮೊರಿಜಿರಿಯವರು ದಂಪತಿ ಸಮೇತರಾಗಿ ಇತ್ತೀಚೆಗೆ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಗೆ ಭೇಟಿ ನೀಡಿದರು. ಅವರು ಗೊಂಬೆಯಾಟದ ಬಗ್ಗೆ ಹಲವು ವಿಷಯಗಳನ್ನು ಭಾಸ್ಕರ್ ಕೊಗ್ಗ ಕಾಮತ್ ರವರ ಜೊತೆ ಚರ್ಚಿಸಿದರು. ಸರಕಾರ ಹಾಗೂ ಇತರ ಯಾವುದೇ ಅಕಾಡೆಮಿಗಳ ಧನ ಸಹಾಯ ಪಡೆಯದೆ ಗೊಂಬೆಯಾಟ ಅಕಾಡೆಮಿಯಲ್ಲಿ ನಿರಂತರ ನಡೆಯುತ್ತಿರುವ ತರಬೇತಿ, ತಿಂಗಳ ಕಾರ್ಯಕ್ರಮ, ಗೊಂಬೆ ಮ್ಯೂಜಿಯಂ, ಗೊಂಬೆಯಾಟ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳ ವೀಡಿಯೋ ವೀಕ್ಷಿಸಿದ್ದಲ್ಲದೆ ಸದಾ ಚಟುವಟಿಕೆಯಲ್ಲಿರುವುದನ್ನು ಕಂಡು ಖುಷಿಗೊಂಡರು. ಉಪ್ಪಿನಕುದ್ರು ಗೊಂಬೆಯಾಟ ತಂಡದ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಯನ್ನು ಜಪಾನಿನಲ್ಲಿ ನೋಡಿರುವ ನೆನಪನ್ನು ಮೆಲುಕು ಹಾಕಿಕೊಂಡು ಸಂತೋಷ ಪಟ್ಟರು. ಮೊರಿಜಿರಿಯವರು ಗೊಂಬೆಯಾಟ ಅಕಾಡೆಮಿಯ ಕಾಮಗಾರಿ ನಡೆಯುತ್ತಿದ್ದ ವೇಳೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಭವಿಷ್ಯತ್ತಿನಲ್ಲಿ ಗೊಂಬೆಯಾಟ ಅಕಾಡೆಮಿಯೊಂದಿಗೆ ಜಪಾನ್ ನ ಸಹಯೋಗ ನೀಡುವುದರ ಬಗ್ಗೆ ಮಾತುಕತೆ ನಡೆಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮೀಪದ ಕಾರಣಿಕ ಕ್ಷೇತ್ರ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪ್ರತಿಷ್ಠಾ ವರ್ಧಂತಿಯ ಅಂಗವಾಗಿ ನಡೆದ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾ ಗಣಯಾಗ(೧೦೦೮ ತೆಂಗಿನಕಾಯಿ) ನವಚಂಡಿ ಹವನ ಮತ್ತು ಸಂಕಷ್ಟಹರ ಚತುರ್ಥಿ(ಅಂಗಾರಿಕಾ) ಮಹಾಪೂಜೆ ಸಕಲ ಧಾರ್ಮಿಕ ವಿಧಿ ವಿಧಾನದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಋತ್ವಿಜರ ವೇದಮಂತ್ರ ಘೋಷದೊಂದಿಗೆ ಸಾಂಗವಾಗಿ ನೆರವೇರಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರೀದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಹಸ್ರ ನಾಳಿಕೇರ ಮಹಾ ಗಣಯಾಗ, ನವಚಂಡಿ ಹವನ, ಸಂಕಷ್ಟಹರ ಚತುರ್ಥಿ ಪೂಜೆಯಲ್ಲಿ ಪಾಲ್ಗೊಂಡು ಕೃಥಾರ್ತರಾದರು. ಧಾರ್ಮಿಕ ಮಹೋತ್ಸವದ ಅಂಗವಾಗಿ ನವಗ್ರಹ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮತ್ತು ಹವನ, ಧನ್ವಂತರಿ ಹವನ, ನವಾಕ್ಷರೀ ಮಂತ್ರಜಪ ಹಾಗೂ ಹವನ, ರುದ್ರಪಾರಾಯಣ ಹಾಗೂ ರುದ್ರ ಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ, ಅಧಿವಾಸ ಹವನ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶ್ರೀ ಧವಳ ಕಾಲೇಜು, ಮೂಡುಬಿದರೆಯ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಅಂತರ್-ಕಾಲೇಜು ಮಟ್ಟದ ಮಹಿಳೆಯರ ನೆಟ್‌ಬಾಲ್ ಪಂದ್ಯಾಟದಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದುಕೊಂಡಿದೆ. ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಪ್ರೊ. ದೋಮ ಚಂದ್ರಶೇಖರ್, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್.ರವರು ಮತ್ತು ವಾಣಿಜ್ಯ ಉಪನ್ಯಾಸಕ ಹರೀಶ್ ಬಿ. ಅಭಿನಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಮೀಪದ ನೇರಂಬಳ್ಳಿ ಮಠದಲ್ಲಿ ವೇದಮೂರ್ತಿ ಪ್ರಾಣೇಶ ತಂತ್ರಿ ಹಾಗೂ ಶ್ರೀಮತಿ ಸೌಮ್ಯ ಪ್ರಾಣೇಶ್ ತಂತ್ರಿಯವರ ದಾಂಪತ್ಯ ಜೀವನದ ದಶಮಾನೋತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ದಾಸ ಸಾಹಿತ್ಯ ಶೈಲಿಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಕಲ ವೈಭವದೊಂದಿಗೆ ಸಂಭ್ರಮ ಸಡಗರದಲ್ಲಿ ಜರುಗಿತು. ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟ್‌ನ ನಿವೃತ್ತ ವಿಶೇಷಾಧಿಕಾರಿ ಅಪ್ಪಣ್ಣಾಚಾರ್ಯ ಅವರು ಕಲ್ಯಾಣೋತ್ಸವದ ನೇತ್ರತ್ವ ವಹಿಸಿ, ಬಹಳ ಸುಂದರವಾಗಿ ಭಕ್ತ ಜನರಲ್ಲಿ ಭಕ್ತಿ ಭಾವ ಮೇಳೈಸುವಂತೆ ಜಗದೊಡೆಯ ಶ್ರೀನಿವಾಸ ಮತ್ತು ಪದ್ಮಾವತಿಯರ ಅಮ್ಮನವರ ವಿವಾಹ ಮಹೋತ್ಸವವನ್ನು ನೆರವೇರಿಸಿದರು. ನೂಕು ನುಗ್ಗಲುವಿಲ್ಲದೇ ಅತ್ಯಂತ ಶಿಸ್ತುಬದ್ದವಾಗಿ ಕಾರ್ಯಕ್ರಮ ಆಯೋಜಿಸಲ್ಪಟ್ಟಿದ್ದು ಸುಮಾರು ೮ ಸಾವಿರ ಮಂದಿ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡು ಕೃತಾರ್ಥರಾದರು. ಉಡುಪಿ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಭಗವಂತನ ಅನಂತ ಲೀಲೆಗಳಲ್ಲಿ ಕಲ್ಯಾಣೋತ್ಸವ ಒಂದಾಗಿದೆ. ಭಗವದಾರಾಧನೆಯ ಚಿಂತನೆಯನ್ನು ಭಕ್ತಿಯೋಗದ ಮೂಲಕ ನಾವೆಲ್ಲರೂ ಮಾಡುವ ಅಗತ್ಯವಿದೆ. ಆರಾಧನೆ ಕೇವಲ ಬಿಂಬದಲ್ಲಿ ಮಾತ್ರವಾಗದೇ ನಮ್ಮ ಜೀವನ ಶೈಲಿಯು…
