ಕುಂದಾಪ್ರಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ) ಅಧ್ಯಕ್ಷ ರಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ನೇಮಕಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಬಂಗಾರಪ್ಪ ನೇತೃತ್ವದ ಕರ್ನಾಟಕ ಕ್ರಾಂತಿರಂಗ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಗೋಪಾಲ ಪೂಜಾರಿ ಅವರು ಬಳಿಕ ಕಾಂಗ್ರೆಸ್ ಪಕ್ಷ ಕ್ಕೆ ಸೇರ್ಪಡೆಗೊಂಡು ಬೈಂದೂರು ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದರು. ಬಂಗಾರಪ್ಪನವರ ಕರ್ನಾಟಕ ಕ್ರಾಂತಿರಂಗದ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಅವರು 1996ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕ್ಕೆ ಸೇರ್ಪಡೆಗೊಂಡು ಜಯ ಗಳಿಸಿದ್ದರು. ನಂತರ 1998, 2003ರಲ್ಲಿ ವಿಜಯಿಯಾಗಿದ್ದರು. 2008ರಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೀನಾರಾಯಣ ವಿರುದ್ಧ ಸೋತಿದ್ದ ಪೂಜಾರಿ 2014ರಲ್ಲಿ ಅವರ ವಿರುದ್ಧ 33 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಗಿಯೂ ಜಿಲ್ಲೆಯಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಿದ್ದ ಅವರು ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಮಂತ್ರಿ ಪದವಿ ಪಡೆಯುವರು ಎಂಬ ನಂಬಿಕೆ ಕಾರ್ಯಕರ್ತರಲ್ಲಿ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಡ್ತರೆ ನಾಕಟ್ಟೆಯಲ್ಲಿ ಕೋಟಿ ಚೆನ್ನಯ ಪಂಜುರ್ಲಿ ಗರಡಿಯ ಜೀಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸೋಮವಾರ ದೇವಳದ ಶಿಲಾ ಮುಹೂರ್ತ ಜರುಗಿತು. ಶಿಲ್ಪಿ ಕೃಷ್ಣ ನಾಯ್ಕ್ ಶಿಲಾ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನವನ್ನು ನಂಬಿದ ಭಕ್ತರಾದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ಗ್ರಾಮ ಪಂಚಾಯತ್ ಸದಸ್ಯ ವೆಂಕ್ಟ ಪೂಜಾರಿ, ಗರಡಿಯ ಅರ್ಚಕ ಕುಟುಂಬದ ಮಂಜುನಾಥ ಪೂಜಾರಿ ಮೇಲ್ಹಿತ್ಲು, ಸ್ಥಳೀಯರಾದ ಜಗನ್ನಾಥ ಶೆಟ್ಟಿ ನಾಕಟ್ಟೆ, ಮಂಜಯ್ಯ ಪೂಜಾರಿ, ರಘುರಾಮ ಪೂಜಾರಿ ಶಿರೂರು, ಮಂಜುನಾಥ ಪೂಜಾರಿ ಮುಂಬೈ, ಕೋಟಿ ಪೂಜಾರಿ, ಚಂದ್ರ ಪೂಜಾರಿ ಕುದ್ರಿತ್ಲು, ಐ.ಆರ್.ಬಿ ಅಧಿಕಾರಿ ಯೋಗೇಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮಹಿಳೆಯರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಿದೆ. ಆಕೆ ಎಚ್ಚೆತ್ತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಬಹುದು. ಹಾಗಾಗಿ ಮಹಿಳೆಯರು ರಾಜಕೀಯವಾಗಿ ಗುರುತಿಸಿಕೊಳ್ಳವಂತಾಗಬೇಕು ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು. ನಾಗೂರು ಶ್ರೀ ಕೃಷ್ಣಲಲಿತಾ ಕಲಾ ಮಂದಿರದಲ್ಲಿ ನಡೆದ ಬೈಂದೂರು ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮಗು ಜನಿಸಿದಾಗ ಅದರ ಮುಖ ನೋಡಿ ಪಡುವ ಖುಷಿಯಲ್ಲಿ ಹೆರಿಗೆ ಸಮಯದಲ್ಲಿ ಅನುಭವಿಸುವ ವೇದನೆಯನ್ನು ಮರೆಯುತ್ತೇವೆ. ಹಾಗೆಯೇ ದೇಶಕ್ಕೆ ಸ್ವಾತಂತ್ರ್ಯವೂ ಒಂದೇ ದಿನದಲ್ಲಿ ಸಿಗಲಿಲ್ಲಾ. ನೋಟು ರದ್ದತಿಯಿಂದ ಈಗ ಸ್ವಲ್ಪ ತೊಂದರೆಯಾದರೂ ಕೂಡಾ ಮುಂದಿನ ದಿನಗಳು ಸಂತೋಷದಾಯಕವಾಗಲಿದೆ ಎಂದು ನೆರೆಯ ದೇಶಗಳಿಂದ ಹರಿದು ಬರುವ ಸುಮಾರು ೫೦ ಸಾವಿರ ಕೋಟಿ ರೂ. ಕಪ್ಪು ಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ದಿಢೀರನೆ ೫೦೦ ಹಾಗೂ ೧೦೦೦ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕ್ರಮವನ್ನು ಸಮರ್ಥಿಸಿಕೊಂಡರು. ರಾಜ್ಯದಲ್ಲಿ ಬಿಜೆಪಿ ಸರ್ಕಾರಾವಧಿಯಲ್ಲಿ ಜಾರಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಆರ್ಥಿಕ ಸಂಸ್ಥೆಯು ಲಾಭದ ಕಡೆ ಹೆಚ್ಚು ಗಮನ ನೀಡಿದೆ, ಲಾಭದಲ್ಲಿ ಹೆಚ್ಚಿನ ಹಣವನ್ನು ಮಕ್ಕಳ ವಿದ್ಯಾಭ್ಯಾಸ ಮೊದಲಾದ ಸಾಮಾಜಿಕ ಕಳಕಳಿಯ ಕಾರ್ಯಕ್ರಮಕ್ಕೆ ವಿನಿಯೋಗಿಸಬೇಕಿದೆ. ಮನ್ನಣೆಯ ದಾಹ ಕಡಿಮೆಯಿರುವ ಸಂಸ್ಥೆಗಳಿಗೆ ಅವನತಿ ಇಲ್ಲ ಹಾಗೂ ಇವುಗಳ ಬೆಳವಣಿಗೆಗೆ ಯಾವುದೂ ಅಡ್ಡಿಯಾಗುವುದಿಲ್ಲ. ಆರ್ಥಿಕ ಸಂಸ್ಥೆಗಳು ಆಧುನಿಕತೆಗೆ ತೆರದುಕೊಳ್ಳುವ ಮೂಲಕ ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸಬೇಕಿದೆ. ಸಂಸ್ಥೆಯ ಸಂಸ್ಥಾಪಕರನ್ನು ಸ್ಮರಿಸುವ ಹಾಗೂ ಅವರ ಆದರ್ಶ, ಚಿಂತನೆಗಳನ್ನು ಆರ್ಥಿಕ ಸಂಸ್ಥೆಗಳಲ್ಲಿ ಅಳವಡಿಸಿಕೊಂಡು ಮಾದರಿ ಸಂಸ್ಥೆಯನ್ನಾಗಿ ಬೆಳೆಸಬೇಕಿದೆ ಎಂದು ಅಂಕಣಕಾರ ಓಂಗಣೇಶ ಉಪ್ಪುಂದ ಅಭಿಪ್ರಾಯಪಟ್ಟರು. ಅವರು ಆದಿತ್ಯವಾರ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಸದೃಢ ಆರ್ಥಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಹಕಾರಿಯು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿರುವುದರ ಜೊತೆಗೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತದ ಶ್ರೇಷ್ಠತೆಯನ್ನು, ಸನಾತನ ಧರ್ಮದ ಔನತ್ಯವನ್ನು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಸಂತ ಸ್ವಾಮಿ ವಿವೇಕಾನಂದರನ್ನು ಸದಾ ಸ್ಮರಿಸುವುದರೊಂದಿಗೆ ಅವರ ತತ್ವ, ಆದರ್ಶಗಳನ್ನು ನಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಸ್ವಾರ್ಥ, ದ್ವೇಷ ಮರೆತು ಎಲ್ಲರಿಗೂ ಉಪಕಾರಿಯಾಗಿ ಸತ್ಪ್ರಜೆಗಳಾಗಿ ಬದುಕಬೇಕಿದೆ ಎಂದು ಭಗವದ್ಗೀತಾ ಅಭಿಯಾನ ಸಮಿತಿ ಜಿಲ್ಲಾಧ್ಯಕ್ಷ ಬಿಜೂರು ರಾಮಕೃಷ್ಣ ಶೇರುಗಾರ್ ಹೇಳಿದರು. ಉಪ್ಪುಂದ ಜೇಸಿಐ ಘಟಕ ಹಾಗೂ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರ ಯಳಜಿತ್ ಇವರ ಜಂಟಿ ಆಶ್ರಯದಲ್ಲಿ ಮಾತೃಶ್ರೀ ಸಭಾಭವನದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಮತ್ತು ಸಂತ ವೈ. ಮಂಗೇಶ್ ಶೆಣೈ ರಚಿಸಿದ ’ಭರತಭೂಮಿ-ಪುಣ್ಯಭೂಮಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಜೇಸಿಐನಂತಹ ಸಂಘಸಂಸ್ಥೆಗಳು ಗ್ರಾಮ ಮಟ್ಟದಿಂದ ಹೆಚ್ಚು ಹೆಚ್ಚು ಕ್ರಿಯಾಯೋಜನೆಗಳಲ್ಲಿ ಕ್ರಿಯಾತ್ಮಕವಾಗಿ, ಸಮಾಜಮುಖಿ ಕಾರ್ಯಪ್ರವೃತ್ತಿಯನ್ನು ಬೆಳೆಸಿಕೊಂಡಲ್ಲಿ ಆ ಗ್ರಾಮವು ಆದರ್ಶ ಗ್ರಾಮವಾಗಲಿದೆ. ಅಲ್ಲದೇ ಸ್ವಸ್ಥ ಸಮಾಜ ನಿರ್ಮಾಣ ಪ್ರಜ್ಞಾವಂತ, ಕ್ರಿಯಾಶೀಲ, ನಾಗರಿಕರನ್ನು ರೂಪಿಸುವ ಜವಾಬ್ದಾರಿಯೂ ಕೂಡಾ ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು. ಜೇಸಿಐ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಪುರಾಣ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜ. 14ರಂದು ಮಕರ ಸಂಕ್ರಮಣ ಉತ್ಸವ ಸಂಭ್ರಮದಿಂದ ಜರುಗಿತು. ಮಾರಣಕಟ್ಟೆ ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ಕ್ಷೇತ್ರದ ಅರ್ಚಕರು, ದರ್ಶನ ಪಾತ್ರಿಗಳು, ಚಿತ್ತೂರು ಗುಡಿಕೇರಿ ಮನೆಯವರು ಉತ್ಸವದಲ್ಲಿ ಪಾಲ್ಗೊಂಡರು. ಜ. 14ರಿಂದ ಜ. 16ರ ವರೆಗೆ ಮಾರಣಕಟ್ಟೆ ಕ್ಷೇತ್ರದಲ್ಲಿ ಮಹಾ ಮಂಗಳಾರತಿ ಅನಂತರ ಮಂಡಲ ಸೇವೆ ಜರಗಲಿದೆ. ಉಡುಪಿ ಹಾಗೂ ಕುಂದಾಪುರ ತಾಲೂಕಿನಿಂದ ಆಗಮಿಸಿದ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ತರು ಹೆಚ್ಚಿನ ಕಾಳಜಿ ವಹಿಸಿ ಪೊಲೀಸರೊಡನೆ ಸಹಕರಿಸಿದರು. ಸಿಂಗಾರ ಮತ್ತು ಸೇವಂತಿಗೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯ ವಾದುದರಿಂದ ಬುಟ್ಟಿಯಲ್ಲಿ ಅವುಗಳನ್ನು ಹೊತ್ತು ಭಕ್ತರು ಸರದಿಯಲ್ಲಿ ಕಾಣಿಕೆ ಸಲ್ಲಿಸಿದರು. ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ಕುಂದಾಪುರ ಹಾಗೂ ಉಡುಪಿ ತಾಲೂಕಿನಿಂದ 50 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ವಿಶೇಷ ಬಸ್ ಸೌಕರ್ಯವಿತ್ತು. ಬೈಂದೂರು ಶಾಸಕ ಕೆ.…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಈ ಭಾರಿ ಬಿಜೆಪಿ ಅಧಿಕಾರ ಕೈತಪ್ಪಿದ್ದು ಕಾಂಗ್ರೆಸ್ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇಂದು ಮಿನಿ ವಿಧಾನಸೌಧದಲ್ಲಿ 6 ಕ್ಷೇತ್ರಗಳಿಗೆ ನಡೆದ ಚುನಾವಣೆಗೆ ಮತ ಎಣಿಕೆ ನಡೆದಿದ್ದು, 3ಕಾಂಗ್ರೆಸ್ 3 ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸಿದ್ದಾರೆ. ಉಳಿದ ಏಳು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ 3 ಹಾಗೂ ಬಿಜೆಪಿ ಬೆಂಬಲಿತ 4 ಅಭ್ಯರ್ಥಿಗಳು ಆಯ್ಕೆಗೊಂಡಿದ್ದರು. ಒಟ್ಟು ಹದಿಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 6 ಸ್ಥಾನ ಪಡೆದುಕೊಂಡರೆ, ಬಿಜೆಪಿ ಪಕ್ಷ 7 ಸ್ಥಾನ ಪಡೆದು ಬಹುಮತ ಸಾಧಿಸಿದ್ದರೂ ಮೂವರು ನಾಮ ನಿರ್ದೇಶಿತ ಸದಸ್ಯರಿಂದಾಗಿ ಅಧಿಕಾರ ಕೈತಪ್ಪಲಿದೆ. ಎಪಿಎಂಸಿ ಆರು ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ವರ್ತಕ ಕ್ಷೇತ್ರ, ಶಿರೂರು ಹಾಗೂ ಕಿರಿಮಂಜೇಶ್ವರದಲ್ಲಿ ಬಿಜೆಪಿ ಬೆಂಲಿತರು ಜಯ ಸಾಧಿಸಿದರೆ, ಕಂಬದಕೋಣೆ, ತ್ರಾಸಿ, ವಂಡ್ಸೆ ಕೃಷಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿಗರು ವಿಜಯ ಗಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ. ರೈತ…
ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ದೇಶದ ಕರಾವಳಿಯ ರಕ್ಷಣೆಯ ಮಹತ್ವದ ಅರಿವಾಗಿದೆ. ಸೈನಿಕ ಪಡೆ ಬಾಹ್ಯ ದಾಳಿಯ ವಿರುದ್ಧ ನೀಡುವ ರಕ್ಷಣೆಯ ಜತೆಗೆ ಆಂತರಿಕ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ ಬೇಕು ಎನ್ನುವುದರ ಅರಿವಾಗಿದೆ. ಅದಕ್ಕಾಗಿ ಕರಾವಳಿ ಕಾವಲು ಪೊಲೀಸ್ ಪಡೆಯನ್ನು ಹುಟ್ಟುಹಾಕಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಗಂಗೊಳ್ಳಿ ಮೀನುಗಾರಿಗಾ ಬಂದರು ಪ್ರದೇಶಲ್ಲಿ ರೂ ೪೮ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಾವಲು ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿ ಪೊಲೀಸ್ ಪಡೆಗೆ ಹಲವು ಜವಾಬ್ದಾರಿಗಳಿವೆ. ಕಡಲಿನಲ್ಲಿ ಅಪಾಯಕ್ಕೆ ಈಡಾಗುವ ಮೀನುಗಾರರ ಮತ್ತು ಬೋಟ್ಗಳ ರಕ್ಷಣೆ, ನುಸುಳಿ ಬರುವ ಭಯೋತ್ಪಾದಕರ, ಕಳ್ಳ ಸಾಗಣೆದಾರರ ಪತ್ತೆ ಮತ್ತು ಸಮುದ್ರ ಹಾಗೂ ಕರಾವಳಿ ಅಂಚಿನಲ್ಲಿ ನಡೆಯುವ ಕಾನೂನು ಬಾಹಿರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಮೈಸೂರು ಪ್ರಗತಿಪರ ಪ್ರಕಾಶನ ಹಾಗೂ ಗ್ರಾಮಾಂತರ ಬುದ್ದಿಜೀವಿಗಳ ಬಳಗ ನೀಡುವ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗೆ ಉಪನ್ಯಾಸಕ ಅಂಪಾರು ನಿತ್ಯಾನಂದ ಶೆಟ್ಟ ಆಯ್ಕೆ ಆಗಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜ್ ಕನ್ನಡ ಉಪನ್ಯಾಸಕ ನಿತ್ಯಾನಂದ ಶೆಟ್ಟಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ, ನವದೆಹಲಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಕುಂದಾಪುರ ತಾಲೂಕ್ ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ, ವೈದೇಹಿ ಕತೆಗಳಲ್ಲಿ ಪ್ರಾದೇಶಿಕ ಸಂಸ್ಕೃತಿ ಇವರ ಪ್ರಕಟಿತ ಕೃತಿ. ಜನವರಿ ಅಂತ್ಯದ ವೇಳೆಗೆ ಮೈಸೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಂಘಟನೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕಾಲೇಜಿನ ಎಲ್ಲಾ ಹಳೆ ವಿದ್ಯಾರ್ಥಿಗಳು ಒಗ್ಗೂಡಿ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕೆಂದು ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಎಮ್. ಸುಕುಮಾರ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ತಮ್ಮ ಕಾಲೇಜು ದಿನಗಳ ಮಧುರ ಕ್ಷಣಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಳೆ ವಿದ್ಯಾರ್ಥಿ ಸಂಘದ ಸಂಯೋಜಕರಾದ ರಾಜೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ತಿಲಕಲಕ್ಷ್ಮೀ ಸ್ವಾಗತಿಸಿದರು, ವೀಣಾ ಭಟ್ ವಂದಿಸಿದರು, ವಿಘ್ನೇಶ್ವರ್ ರಾವ್ ಕಾರ್ಯಕ್ರಮ ನಿರೂಪಿಸಿದರು.
