Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉದ್ಯಮ ಶೀಲತೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಇಲ್ಲಿ ಒಬ್ಬ ಉದ್ಯಮಿಯು ಪ್ರಾಯೋಗಿಕ ಚಿಂತನೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಕೆಲವು ಉದ್ಯಮಿಗಳ ಯಶಸ್ಸಿನ ಗುಟ್ಟನ್ನು ಅರಿವುದರ ಜೊತೆಗೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ ಎಂದು ಸೈಂಟ್ ಮೇರಿಸ್ ಕಾಲೇಜು, ಶಿರ್ವ ಇದರ ವಾಣಿಜ್ಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಗಣೇಶ್ ಭಟ್ ಎಸ್. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ಇವರು ಕಾಲೇಜಿನ ಸಂಶೋಧನಾ ಮತ್ತು ಉದ್ಯಮಶೀಲತಾಭಿವೃದ್ದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಘಟಕದ ಸಂಯೋಜಕಿ ಅನ್ವಿತಾ, ವಾಣಿಜ್ಯ ವಿಭಾಗದ ಮೂಖ್ಯಸ್ಥರಾದ ರಾಜೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಯನ ಸ್ವಾಗತಿಸಿದರು. ವಿದ್ಯಾರ್ಥಿನಿ ಶೈಲಜಾ ಉದ್ಘಾಟಕರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸರಸ್ವತಿ ವಂದಿಸಿದರು. ವಿದ್ಯಾರ್ಥಿನಿ ಶ್ರೀವಿಭಾ ಕಾರ್ಯಕ್ರಮವನ್ನು ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯ ತಿಥಿ ಆರಾಧನಾ ಮಹೋತ್ಸವ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಜರಗಿತು. ಮಹೋತ್ಸವದ ಅಂಗವಾಗಿ ಶ್ರೀದೇವರ ಸನ್ನಿಧಿಯಲ್ಲಿ ಶ್ಲೋಕ ಪಠಣ, ವಿಶೇಷ ಪೂಜೆ, ಪುನಸ್ಕಾರಗಳು ನಡೆದವು. ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪುರೋಹಿತರಾದ ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ ಹಾಗೂ ದೇವಳದ ಆಡಳಿತ ಮಂಡಳಿಯ ಡಾ.ಕಾಶೀನಾಥ ಪೈ ಅವರು ಶ್ರೀಗಳ ಗುಣಗಾನ ಮಾಡಿದರು. ಊರಿನ ವೈದಿಕರು, ದೇವಳದ ಆಡಳಿತ ಮಂಡಳಿ ಸದಸ್ಯರು, ಊರಿನ ಹತ್ತು ಸಮಸ್ತರು, ಜಿಎಸ್‌ಬಿ ಸಮಾಜ ಬಾಂಧವರು ಮಹೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಮ್ಮ ಕುಟುಂಬಕ್ಕಿಂತ ಸಮಾಜದ ಹಿತವನ್ನೇ ಅನುಗಾಲವೂ ಬಯಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಜಿಲ್ಲೆಯ ಜನತೆಯ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಅವರಿಗೆ ಸರಿಯಾದ ರೀತಿ ಮಾರ್ಗದರ್ಶನ ನೀಡುತ್ತಾ ಕೇವಲ ಅಲ್ಪಕಾಲ ಬಾಳಿದ ಸಂಜೀವರಾಯರು ಒರ್ವ ವ್ಯಕ್ತಿಯಾಗಿರದೇ ತಮ್ಮ ವ್ಯಕ್ತಿತ್ವದ ಮೂಲಕ ಒಂದು ಅದ್ಭುತ ಶಕ್ತಿಯಾಗಿದ್ದರು ಎಂದು ೯೧ರ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು. ನಾಗೂರಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆದ, ಖಂಬದಕೋಣೆ ಪರಿಸರದ ಅಭಿವೃದ್ಧಿಯ ಹರಿಕಾರ, ಬಹುಮುಖೀ ಸಾಧಕ ಖಂಬದಕೋಣೆ ದಿ. ಆರ್. ಕೆ. ಸಂಜೀವ ರಾವ್ ಜನ್ಮಶತಾಬ್ದಿ ಆಚರಣೆ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಂಸ್ಕೃತಿಕ ಸಂಪನ್ನ ಕೌಟುಂಬಿಕ ಹಿನ್ನೆಲೆಯ ಸಂಜೀವ ರಾವ್ ಇವರು ತಮ್ಮ ಹುಟ್ಟೂರು ಖಂಬದಕೋಣೆಯನ್ನು ಕೇಂದ್ರವಾಗಿರಿಸಿಕೊಂಡು ಗ್ರಾಮೀಣ ಪ್ರದೇಶದ ಅಭಿವೃದ್ಧಿಯತ್ತ ಅವರು ದೃಢ ಹೆಜ್ಜೆಗಳನ್ನಿರಿಸಿದ್ದರು. ಶಿಕ್ಷಣ, ಸಂಪರ್ಕ ಸೌಲಭ್ಯ ಸೃಷ್ಟಿಸುವಲ್ಲಿ ಅವರದು ಗಣನೀಯ ಸಾಧನೆ. ಭೂದಾನದ ಮೂಲಕ ಔದಾರ್ಯ ಮೆರೆದಿದ್ದರಲ್ಲದೇ ಸಂಗೀತ, ಸಾಹಿತ್ಯ, ನಾಟಕ, ಯಕ್ಷಗಾನ ಕ್ಷೇತ್ರಗಳಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮುಂದಿನ ದಿನಗಳಲ್ಲಿ ನಗದು ವ್ಯವಹಾರ ಬಹುತೇಕ ಕೊನೆಗೊಳ್ಳುವ ಸಾಧ್ಯತೆಗಳಿದ್ದು ಎಲ್ಲರೂ ನಗದು ರಹಿತ ವ್ಯವಹಾರ ನಡೆಸಲು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಎಲ್ಲಾ ಬ್ಯಾಂಕುಗಳಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಅನೇಕ ಆಪ್ ಸಿದ್ಧಪಡಿಸಿದ್ದು, ಇಂತಹ ಆಪ್‌ಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇದರ ತಮ್ಮ ದೈನಂದಿನ ವ್ಯವಹಾರಗಳನ್ನು ನಡೆಸಬಹುದಾಗಿದೆ ಎಂದು ಕೆನರಾ ಬ್ಯಾಂಕಿನ ಉಡುಪಿ ರೀಜಿನಲ್ ಕಛೇರಿಯ ಅಧಿಕಾರಿ ಮನಿಷ್ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್‌ನ ವತಿಯಿಂದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಗದು ರಹಿತ ವ್ಯವಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಗದು ರಹಿತ ವ್ಯವಹಾರದ ಬಗ್ಗೆ ಅನೇಕರಿಗೆ ಗೊಂದಲ ಸಂದೇಹಗಳಿವೆ. ನಗದು ರಹಿತ ವ್ಯವಹಾರ ಸುರಕ್ಷಿತವಾಗಿದ್ದು, ಮಾಹಿತಿ ಕೊರತೆಯಿಂದ ಜನರು ನಗದು ರಹಿತ ವ್ಯವಹಾರದ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿಲ್ಲ. ಭ್ರಷ್ಟಾಚಾರ ರಹಿತ ಸಮಾಜ ನಿರ್ಮಿಸಲು ನಗದು ರಹಿತ ವ್ಯವಹಾರ ಸಹಕಾರಿಯಾಗಲಿದೆ ಎಂದು ಹೇಳಿದ ಅವರು, ರಿಸರ್ವ್ ಬ್ಯಾಂಕ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಳೆದ ಒಬತ್ತು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೋರ್ವಳು ವಿಷ ಸೇವಿಸಿ, ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಆಜ್ರಿ ಹನೆಬಚ್ಚಲು ನಿವಾಸಿ ಜ್ಯೋತಿ ಪೂಜಾರಿ(೨೬) ಮೃತ ದುರ್ದೈವಿ. ನಾಲ್ಕು ವರ್ಷಗಳಿಂದ ಪ್ರೀತಿಸಿದ ಉಮೇಶ್ ಎಂಬ ಯುವಕನೊಂದಿಗೆ ಮನೆಯವರ ಒಪ್ಪಿಸಿ ಒಂಬತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ದಳು. ಬಳ್ಕೂರು ಉಗ್ರಣಿಬೆಟ್ಟವಿನವಳಾದ ಜ್ಯೋತಿ, ಆಜ್ರಿಯ ಗಂಡನ ಮನೆಯಲ್ಲಿ ಅತ್ತೆ, ಮಾವ, ನಾದಿನಿ ಮತ್ತು ಇಬ್ಬರು ಮೈದುನರೊಂದಿಗೆ ನೆಲೆಸಿದ್ದರು. ಪತಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಜೀವನದಲ್ಲಿ ಜಿಗುಪ್ಸೆಗೊಂಡ ಅವಿವಾಹಿತನೊರ್ವ ನೇಣಿಗೆ ಶರಣಾದ ಘಟನೆ ಎಲ್ಲೂರಿನಲ್ಲಿ ವರದಿಯಾಗಿದೆ. ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಎಲ್ಲೂರಿನ ನಿವಾಸಿ ರಾಮಕೃಷ್ಣ ಶೆಟ್ಟಿ (೨೮) ಮೃತಪಟ್ಟ ಯುವಕ. ಖಾಸಗಿ ಬಸ್ಸಿನಲ್ಲಿ ಕ್ಲೀನರ್ ಅಗಿ ಕೆಲಸ ಮಾಡಿಕೊಂಡಿದ್ದ ರಾಮಕೃಷ್ಣ, ಇತ್ತೀಚಿಗೆ ಮನಸಿಕ ಖಿನ್ನತೆಗೆ ವಿಪರೀತ ಮದ್ಯವ್ಯಸನಿಯಾಗಿದ್ದ ಎನ್ನಲಾಗಿದೆ. ಶನಿವಾರ ಕೆಲಸಕ್ಕೆ ತೆರಳದೇ ಮನೆಯಲ್ಲಿಯೇ ಇದ್ದ ಎನ್ನಲಾಗಿದೆ. ರಾತ್ರಿ ಕಾಣದಾದಾಗ ಮನೆಯವರು ಹುಡುಕುದಾಗ ಪಕ್ಕದ ಗೇರುಹಾಡಿಯಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ. ಅದನ್ನು ನೋಡಿದವರು ಆತನನ್ನು ಮರದಿಂದ ಇಳಿಸಿದಾಗ ಸ್ವಲ್ಪ ಉಸಿರಾಟವಿರುವುದನ್ನು ಗಮನಿಸಿ ತಕ್ಷಣ ಬೈಂದೂರು ಅಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಕೃಷಿ ಬದುಕಿನ ಜೀವನಾಡಿ ಎಂಬ ಉಕ್ತಿಯನ್ನು ಪಾಲಿಸುತ್ತಾ, ಕೃಷಿ ಕಾಯಕದಲ್ಲಿ ಅವಿರತವಾಗಿ ತೊಡಗಿಕೊಳ್ಳುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನ ನೇರ ನಡೆ ನುಡಿ, ಸೀದಾ ಸಾದ ವ್ಯಕ್ತಿತ್ವ ಹಾಗೂ ಕಾರ್ಯದ ಮೂಲಕ ಜನಮೆಚ್ಚಿದ ನಾಯಕನಾಗಿ ಗುರುತಿಸಿಕೊಂಡವರು ವೆಂಕಟ ಪೂಜಾರಿ ಸಸಿಹಿತ್ಲು. ಬೈಂದೂರಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಂಬಳ ಹಾಗೂ ಕ್ರೀಡಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ವೆಂಕಟ ಪೂಜಾರಿ ಅವರು ಕಳವಾಡಿಯ ಸಸಿಹಿತ್ಲು ಎಂಬ ದೊಡ್ಡ ಕುಟುಂಬದವರು. ಆಧುನಿಕತೆಯ ವಿಭಕ್ತ ಕುಟುಂಬ ಭರಾಟೆಯ ನಡುವೆಯೂ ಇಂದಿಗೂ ಅವಿಭಕ್ತ ಕುಟುಂಬದಲ್ಲಿದ್ದು ಉದ್ಯಮದ ನಡುವೆಯೂ ಕೃಷಿಕಾರ್ಯವನ್ನು ಇಂದಿಗೂ ಪ್ರೀತಿಯಿಂದಲೇ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂಬುದು ಅವರ ಕೃಷಿಯ ಬಗೆಗಿನ ಅವರ ಪ್ರೀತಿ ಹಾಗೂ ಅವರ ಯಜಮಾನಿಕೆಯ ಬಗೆಗೆ ಅವರ ಕುಟುಂಬಿಕರಿಗಿರುವ ಪ್ರೀತಿ ಎರಡನ್ನೂ ಸೂಚಿಸುತ್ತದೆ. ಆ ಸಂಮೃದ್ಧತೆಯನ್ನು ಅವರ ಮನೆಯ ಮುಂದಿನ ಭತ್ತದ ತಿರಿಯೇ ಸೂಚಿಸುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ. ಸಾಮಾಜಿಕ – ಸಹಕಾರಿ ರಂಗ: ಯವಕರಾಗಿರವಾಗಲೇ ಸಾಮಾಜಿಕ ರಂಗದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ ಚಿಕ್ಕಮ್ಮನಸಾಲು ರಸ್ತೆ ಕುಂದಾಪುರ ಇಲ್ಲಿನ ದೇವಸ್ಥಾನದ ವಠಾರ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಭಾಸ್ಕರ ಎಸ್ ಪುತ್ರನ್, ದೇವಳದ ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಭಾಗವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿವರ್ತನ ಪುನರ್ ವಸತಿ ಕೇಂದ್ರ ಮತ್ತು ಮನಸ್ಮಿತಾ ಫೌಂಡೇಶನ್, ಕೋಟ ಇವರ ಆಶ್ರಯದಲ್ಲಿ ಕೋಟದ ಪರಿವರ್ತನ ಪುನರ್ ವಸತಿ ಕೇಂದ್ರದಲ್ಲಿ ೧೫ನೇ ಉಚಿತ ಮಾನಸಿಕ ಆರೋಗ್ಯ ತಪಾಸಣಿ ಮತ್ತು ಔಷಧ ವಿತರಣಿ ಶಿಬಿರ ನಡೆಯಿತು. ಜನತಾ ಫಿಶ್ ಮಿಲ್ ಇದರ ನಿರ್ದೇಶಕರಾದ ರಕ್ಷಿತ್ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾನಸಿಕ ರೋಗವು ಒಂದು ಸಾಮಾಜಿಕ ಕಳಂಕವೆಂದು ಭಾವಿಸದೇ ಮನೋ ವೈದ್ಯರ ಚಿಕಿತ್ಸೆಯನ್ನು ಪಡೆಯುವ ಪ್ರವೃತ್ತಿ ಇಂದು ಜನರಲ್ಲಿ ಹೆಚ್ಚುತ್ತಿದೆ ಹಾಗೂ ಅವರಿಗೂ ಮತ್ತು ಅವರ ಕುಟುಂಬದವರಿಗೂ ಮಾನಸಿಕ ನೆಮ್ಮದಿ ಸಿಗುವಂತಾಗುತ್ತಿದೆ ಹಾಗೆಯೇ ಈ ಪರಿಸರದ ಜನರು ಶಿಬಿರದ ಪ್ರಯೋಜನವನ್ನು ಇನ್ನು ಹೆಚ್ಚು ಪಡೆಯುವಂತಾಗಲಿ ಎಂದು ಹಾರೈಸಿದರು ಹಾಗೂ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಕೆ. ಹರೀಶ್ ಕುಮಾರ್ (ಇಂಜಿನಿಯರ್ ಉಡುಪಿ) ಅವರು ಮಾತನಾಡಿ ಮಾನಸಿಕ ಸಮಸ್ಯೆಗಳನ್ನು ಮುಚ್ಚಿಡದೆ ಆದಷ್ಟು ಶ್ರೀಘ್ರದಲ್ಲಿ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು. ಪರಿವರ್ತನ ಕೇಂದ್ರದ ವೈದ್ಯಕೀಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಅಂಗವಾಗಿ ಬೈಂದೂರಿನಲ್ಲಿ  ಜ.28ರಂದು ನಡೆಯಲಿರುವ ’ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭದ ಕರಪತ್ರ, ವಿವೇಕ್ ಬ್ಯಾಂಡ್ ಹಾಗೂ ಭಿತ್ತಿ ಪತ್ರವನ್ನು ನಾಗೂರು ಸಂದೀಪನ್ ಆಂಗ್ಲ ಮಾದ್ಯಮ ಶಾಲೆಯ ರಂಗಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು. ಸಂದೀಪನ್ ಶಾಲೆಯ ಅಧ್ಯಕ್ಷರಾದ ಪ್ರಕಾಶ್ ರಾವ್ ಬಿಡುಗಡೆಗೊಳಿಸಿದರು. ಸಮರ್ಥ ಭಾರತ ಬೈಂದೂರು ವಿಭಾಗದ ಗೌರವಾದ್ಯಕ್ಷ ವಿಶ್ವೇಶ್ವರ ಅಡಿಗ, ಕಾರ್ಯಾದ್ಯಕ್ಷ ಜಯಾನಂದ್ ಹೋಬಳಿದಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಂಚಾಲಕ ಶ್ರೀಧರ ಬಿಜೂರು, ಸಹ ಸಂಚಾಲಕ ಭೀಮೇಶ್, ಖಜಾಂಚಿ ಬಾಲಕೃಷ್ಣ ಬೈಂದೂರು, ಉದ್ಯಮಿಗಳಾದ ಗೋಪಾಲಕೃಷ್ಣ, ಪ್ರಕಾಶ್ ಭಟ್, ಗಿರೀಶ್ ಬೈಂದೂರು, ಲಿಂಗಯ್ಯ, ಶಿಕ್ಷಕರಾದ ಎ. ವೆಂಕಟೇಶ್, ರಾಜೇಶ್, ಗಣಪತಿ ಹೋಬಳಿದಾರ್, ಮಹೇಶ್ ಮಂಜೇಶ್ವರ, ಅನಿಲ್ ಕುಮಾರ್ ಟಿ. ಎನ್. ಸುರೇಶ್ ಮಲ್ಲಯ್ಯ ಮೊದಲಾದವರು ಜೊತೆಗಿದ್ದರು.

Read More