ಸೀದಾ ಸಾದ ವ್ಯಕ್ತಿತ್ವದ ಜನನಾಯಕ ವೆಂಕಟ ಪೂಜಾರಿ ಸಸಿಹಿತ್ಲು

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಕೃಷಿ ಬದುಕಿನ ಜೀವನಾಡಿ ಎಂಬ ಉಕ್ತಿಯನ್ನು ಪಾಲಿಸುತ್ತಾ, ಕೃಷಿ ಕಾಯಕದಲ್ಲಿ ಅವಿರತವಾಗಿ ತೊಡಗಿಕೊಳ್ಳುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತನ್ನ ನೇರ ನಡೆ ನುಡಿ, ಸೀದಾ ಸಾದ ವ್ಯಕ್ತಿತ್ವ ಹಾಗೂ ಕಾರ್ಯದ ಮೂಲಕ ಜನಮೆಚ್ಚಿದ ನಾಯಕನಾಗಿ ಗುರುತಿಸಿಕೊಂಡವರು ವೆಂಕಟ ಪೂಜಾರಿ ಸಸಿಹಿತ್ಲು.

Call us

Click Here

ಬೈಂದೂರಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕಂಬಳ ಹಾಗೂ ಕ್ರೀಡಾ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ವೆಂಕಟ ಪೂಜಾರಿ ಅವರು ಕಳವಾಡಿಯ ಸಸಿಹಿತ್ಲು ಎಂಬ ದೊಡ್ಡ ಕುಟುಂಬದವರು. ಆಧುನಿಕತೆಯ ವಿಭಕ್ತ ಕುಟುಂಬ ಭರಾಟೆಯ ನಡುವೆಯೂ ಇಂದಿಗೂ ಅವಿಭಕ್ತ ಕುಟುಂಬದಲ್ಲಿದ್ದು ಉದ್ಯಮದ ನಡುವೆಯೂ ಕೃಷಿಕಾರ್ಯವನ್ನು ಇಂದಿಗೂ ಪ್ರೀತಿಯಿಂದಲೇ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂಬುದು ಅವರ ಕೃಷಿಯ ಬಗೆಗಿನ ಅವರ ಪ್ರೀತಿ ಹಾಗೂ ಅವರ ಯಜಮಾನಿಕೆಯ ಬಗೆಗೆ ಅವರ ಕುಟುಂಬಿಕರಿಗಿರುವ ಪ್ರೀತಿ ಎರಡನ್ನೂ ಸೂಚಿಸುತ್ತದೆ. ಆ ಸಂಮೃದ್ಧತೆಯನ್ನು ಅವರ ಮನೆಯ ಮುಂದಿನ ಭತ್ತದ ತಿರಿಯೇ ಸೂಚಿಸುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ.

ಸಾಮಾಜಿಕ – ಸಹಕಾರಿ ರಂಗ:
ಯವಕರಾಗಿರವಾಗಲೇ ಸಾಮಾಜಿಕ ರಂಗದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದ ವೆಂಕಟ ಪೂಜಾರಿ ಅವರು ಹಲವು ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ಸಿಯಾಗಿ ನಿಭಾಯಿಸಿದವರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಬೈಂದೂರಿನಲ್ಲಿ ನಡೆಸಿದ ೨೧೭ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷರಾಗಿ, ಬೈಂದೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ, ಹೀಗೆ ಹತ್ತಾರು ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ೨೦ವರ್ಷಗಳಿಂದ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರೈತರು ಹಾಗೂ ಗ್ರಾಮಸ್ಥರಿಗೆ ಕಸ್ತೂರಿ ರಂಗನ್ ವಿರುದ್ದದ ಹೋರಾಟದಲ್ಲಿ ಮುಂದಾಳತ್ವ ವಹಿಸಿದ್ದರು.

ರಾಜಕೀಯ ರಂಗ:
ಜನಸೇವೆಗಾಗಿ ರಾಜಕೀಯದತ್ತ ಧುಮಿಕಿದ ಅವರು ಬೈಂದೂರು ಭಾಗದ ಶುದ್ಧಹಸ್ತ ರಾಜಕಾರಣಿಗಳ ಪೈಕಿ ಪ್ರಮುಖವಾಗಿ ಗುರುತಿಸಿಕೊಂಡವರು. ಅಂದಿನಿಂದ ಇಂದಿನ ತನಕವೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಅಧಿಕಾರಕ್ಕೆ ಹಂಬಲ ಪಡದೇ ಪಕ್ಷನಿಷ್ಠ ಕಾರ್ಯಕರ್ತನಾಗಿ ದುಡಿದವರು.  ಮೊದಲ ಭಾರಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ವರ್ಧಿಸಿದ್ದರು. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅತೀ ಕಡಿಮೆ ಅಂತರ (126 ಮತಗಳಿಂದ) ಸೋಲು ಕಂಡಿದ್ದರು. ಆ ಬಳಿಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ವರ್ಧಿಸಿ ಎರಡು ಭಾರಿ ಬೈಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು.

ಧಾರ್ಮಿಕ ರಂಗ:
ಧಾರ್ಮಿಕ ಮುಂದಾಳುವಾಗಿ ವಿವಿಧ ದೇವಸ್ಥಾನಗಳ ಜೀಣೋದ್ಧಾರ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು ಗೋಳಿಹೊಳೆ ಕೊಡಿಯಾಳಕೇರಿ ಈಶ್ವರ ದೇವಸ್ಥಾನ, ಕಳವಾಡಿ ಮಾರಿಕಾಂಬ ದೇವಸ್ಥಾನ ಭಜನಾ ಮಂಡಳಿಯ ಬೆಳ್ಳಿಹಬ್ಬ ವರ್ಷದ ಅಧ್ಯಕ್ಷರಾಗಿ, ಬೈಂದೂರು ಸೇನೇಶ್ವರ ದೇವಳ ಶಾರದೋತ್ಸವ ಸಮಿತಿ ಬೆಳ್ಳಿ ಹಬ್ಬದ ಅಧ್ಯಕ್ಷರಾಗಿ ವಿವಿಧ ಧಾರ್ಮಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು. ಕುಂದಾಪ್ರ ಡಾಟ್ ಕಾಂ.

Click here

Click here

Click here

Click Here

Call us

Call us

ಕಂಬಳ – ಕ್ರೀಡಾ ಪ್ರೀತಿ:
ಬೈಂದೂರು ಭಾಗದಲ್ಲಿ ಕಂಬಳ ಕ್ರೀಡೆಯಲ್ಲಿ ವೆಂಕಟ ಪೂಜಾರಿ ಅವರಿಗೆ ಸರಿಸಾಟಿ ತೊಡಗಿಸಿಕೊಂಡವರಿಲ್ಲ. ಅವರ ಪ್ರೀತಿಯ ಕೋಣಗಳು ಸ್ವರ್ಧೆಗಿಳಿಸಿದರೇ ಗೆಲುವು ಸಾಧಿಸದೇ ಕಂಬಳಗದ್ದೆಯ ಅಂಚು ತಲುಪಿದ್ದು ಅಪರೂಪ. ಬಾರ್ಕೂರು ಕಂಬಳದಲ್ಲಿ ಚಿನ್ನಗೆದ್ದ ಹೆಗ್ಗಳಿಕೆ, ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಹಲವು ಸಾಂಪ್ರದಾಯಿಕ ಹಾಗೂ ಕ್ರೀಡಾ ಕಂಬಳಗಳಲ್ಲಿ ಭಾಗವಹಿಸಿದ ಹಿರಿಮೆ ಇವರದ್ದು. ಸ್ವತಃ ಕ್ರೀಡಾಪಟುವಾದ ಪೂಜಾರಿ ಅವರು ಕಬಡ್ಡಿ ಪಂದ್ಯಾಟದಲ್ಲಿಯೂ ಮೇಲುಗೈ ಸಾಧಿಸಿದವರು. ಕುಂದಾಪ್ರ ಡಾಟ್ ಕಾಂ ವರದಿ.

ಹೀಗೆ ವ್ಯವಸಾಯ, ತೋಟಗಾರಿಕೆ, ಹೈನುಗಾರಿಕೆ, ಉದ್ಯಮದ ಜೊತೆಯಲ್ಲಿಯೇ ಬೈಂದೂರು ಭಾಗದ ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಂದಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನರ ನಡುವೆಯೇ ಜನಸಾಮಾನ್ಯನಂತೆ ಬೆರೆತು ಅವರ ಸುಖದುಖಃಗಳಲ್ಲಿ ಭಾಗಿಯಾಗಿ, ತನ್ನೆಲ್ಲಾ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ನಾಯಕ ವೆಂಕಟ ಪೂಜಾರಿ.

Leave a Reply