ಮೂಡುಬಿದಿರೆ: ಅಭಿವೃದ್ಧಿಯ ನೆಪದಲ್ಲಿ, ಅಭಿವೃದ್ಧಿಯ ಜಪದಲ್ಲಿ ನದಿ ಮೂಲ ಬಡವಾಗುತ್ತಿದೆ. ಜಲಮೂಲ ಬರಿದಾಗುತ್ತಿದೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಧ್ಯಯನಕ್ಕೊಳಪಟ್ಟ ನೀರು ಇಂದು ನಿರ್ಲಕ್ಷ್ಯದ ವಸ್ತುವಾಗಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಹೊಳ್ಳ ವಿಷಾದ ವ್ಯಕ್ತಪಡಿಸಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ನೇತ್ರಾವತಿ ನದಿ ತಿರುವಿನ ಆತಂಕಗಳ ಕುರಿತು ಮಾತನಾಡಿದರು. ಹೊಳೆಯ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುವುದು ಎಂಬ ಮಾತೇ ಅರ್ಥಹೀನ. ನದಿ ಸಮುದ್ರ ಸೇರುವುದು ನೈಸರ್ಗಿಕ ವ್ಯವಸ್ಥೆ. ಈ ನೀರನ್ನು ತಿರುಗಿಸುತ್ತೇವೆ ಎನ್ನುವುದರಲ್ಲಿ ನಿಸರ್ಗದ ಮೇಲಿನ ಸವಾರಿಯಷ್ಟೇ. ಬಯಲುಸೀಮೆಯವರಿಗೆ ನೀರು ಕೊಡಲು ನಮ್ಮ ವಿರೋಧವಿಲ್ಲ. ಆದರೆ ನಮಗೇ ಸಾಲದಷ್ಟು ನೀರನ್ನು ಇತರರಿಗೆ ನೀಡುವುದಾದರೂ ಹೇಗೆ? 15ವರ್ಷದ ಹಿಂದಿನ ವರದಿಯನ್ನಿಟ್ಟುಕೊಂಡು ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ದುಡ್ಡಿನ ರಾಜಕೀಯಕ್ಕೆ ತೋರಿಸುತ್ತದೆ. ನದಿಮೂಲಕ್ಕೆ ತೊಂದರೆ ಮಾಡಿದರೇ ಮುಂದೊಂದು ದಿನ ಯಾರಿಗೂ ನೀರಿಲ್ಲದ ಸ್ಥಿತಿ ಬರಲಿದೆ ಎಂದವರು ಹೇಳಿದರು.
Author: ನ್ಯೂಸ್ ಬ್ಯೂರೋ
ಮೂಡುಬಿದಿರೆ: ಕರ್ನಾಟಕದ ಬಹುಭಾಗ ಒಂದೊಂದು ಹನಿಗೂ ಪರಿತಪಿಸುವ ಸ್ಥಿತಿ ಇದೆ. ಸಮೃದ್ಧ ಬದುಕನ್ನು ಉಂಡ ಕೋಲಾರ ಜಿಲ್ಲೆಯಲ್ಲಿ ಎರಡು ಸಾವಿರ ಅಡಿ ಕೆಳಗೆ ಹೋದರೂ ನೀರು ಸಿಗುತ್ತಿಲ್ಲ. ಸಮುದ್ರಕ್ಕೆ ಸೇರುವ ನೀರಿನ್ನು ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಕೆ. ಸಿ. ಬಸವರಾಜು ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಕಾವೇರಿ ನದಿಯ ಕುರಿತು ಮಾತನಾಡಿದರು. ಪ್ರತಿಭಾರಿಗೂ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕ್ಕೆ ಅನ್ಯಾಯವಾಗುತಿದೆ. ರಾಜಕಾರಣಿಗಳು ನಮ್ಮ ಬದುಕನ್ನೇ ನಾಶಮಾಡುತ್ತಿದ್ದಾರೆ. ನ್ಯಾಯಾಧಿಕರಣ ಕೂಡ ನೈಸರ್ಗಿಕ ತೀರ್ಪಿನ ವಿರುದ್ದ ಹಂಚಿಕೆ ಮಾಡಿದೆ ಎಂದವರು ಹೇಳಿದರು.
ಮೂಡುಬಿದಿರೆ: ಎಲ್ಲರೂ ಕಪ್ಪು ಎಂದು ಅಶುಭದ ಸಂಕೇತವೆಂದು ಭಾವಿಸುತ್ತಾರೆ ಆದರೆ ನಮ್ಮ ಜನ ಕಪ್ಪು ಮೋಡವಾಗಿ ಯಾವಾಗ ಆಗುತ್ತದೆ ಎಂದು ಕಾಯುತ್ತಾರೆ. ನೀರಿನ ಸಮಸ್ಯೆ ದಿನವೂ ನಮ್ಮನ್ನು ಕಾಡುತ್ತಿದೆ. ಕುಡಿಯಲು, ಸ್ನಾನಕ್ಕೆ ನೀರಿಲ್ಲ. ನಮ್ಮೂರಿನವರಿಗೆ ಹೆಣ್ಣು ಕೊಡಲ್ಲ. ಸರಕಾರಿ ನೌಕರರು ಇಲ್ಲಿ ಉಳಿಯೋಲ್ಲ. ಇಂತಹ ದುಸ್ಥರ ಬದುಕು ನಮ್ಮದು. ಮಹದಾಯಿಯ ಅಗತ್ಯತೆಯನ್ನು ವಿಕಾಸ್ ಸೊಪ್ಪಿನ್ ನರಗುಂದ ವಿವರಿಸಿದ್ದು ಹೀಗೆ. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ನೀರಿನ ಬಳಕೆ ಮತ್ತು ಹಂಚಿಕೆ ಎಂಬ ವಿಚಾರಗೋಷ್ಠಿಯಲ್ಲಿ ಮಹದಾಯಿ ಯೋಜನೆಯ ಕುರಿತು ಮಾತನಾಡುತ್ತಾ ಕರ್ನಟದಲ್ಲಿ ಬಳಕೆಯಾಗದೇ ಉಳಿಯುತ್ತಿದ್ದ ನೀರನ್ನು ಡ್ಯಾಂ ಮುಖಾಂತರ ನಾಲ್ಕು ಜಿಲ್ಲೆಗಳಿಗೆ ತಲುಪಿಸಲು ಮಲಪ್ರಭಾ ಡ್ಯಾಂ ಕಟ್ಟಲಾಯಿತು. ಆದರೆ ಆ ಡ್ಯಾಂ ತುಂಬಿತ್ತಿಲ್ಲ ಎಂಬ ಕಾರಣಕ್ಕೆ ಹತ್ತಿರದಲ್ಲೇ ಇದ್ದ ಮಹದಾಯಿಯನ್ನು ಮಲಪ್ರಭೆಗೆ ಸೇರಿಸುವ ಪ್ರಯತ್ನ ನಡೆಯಿತು. ಆದರೆ ಗೋವಾ ಇದಕ್ಕೆ ತಗಾದೆ ತೆಗೆಯಿತು. ಅದು ಇಂದಿಗೂ ಮುಂದುವರಿದಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಎಲ್ಲಾ ಸರಕಾರಗಳೂ ನೀರಿನ ಮೇಲೆ ನಮ್ಮ…
ಕುಂದಾಪುರ: ಮರವಂತೆಯ ಸಾಧಕಿ ಜ್ಯೋತಿ ಎಸ್. ದೇವಾಡಿಗ ಅವರಿಗೆ ‘ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ ದೊರೆತಿದೆ. ಶಯದೇವಿಸುತೆ ಬಿರುದಾಂಕಿತ ಜ್ಯೋತಿ ಎಸ್. ಅವರು ಮೈಸೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಕವನ ಸ್ವರ್ಧೆಯಲ್ಲಿ ವಿಜೇತರಾಗಿದ್ದು ಅವರ ಕವನಕ್ಕೆ ಈ ಪುರಸ್ಕಾರ ದೊರೆತಿದೆ. ಮೈಸೂರಿನಲ್ಲಿ ನಡೆದ ವಿಶ್ವಕವಿ ಕುವೆಂಪುರವರ 111ನೇ ಜನ್ಮದಿನ ಹಾಗೂ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಅಂಗವಾಗಿ ವರಕವಿ ದ.ರಾ. ಬೇಂದ್ರೆ ಸವಿನೆನಪಿನ ರಾಜ್ಯಮಟ್ಟದ ಅದ್ಧೂರಿ ಸಾಹಿತ್ಯೋತ್ಸವ ಸಂಭ್ರಮದಲ್ಲಿ ಹೆಸರಾಂತ ಕವಿ ಹಾಗೂ ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಅವರಿಗೆ ಈ ಪುರಸ್ಕಾರ ಪ್ರದಾನಿಸಲಾಯಿತು. (ಕುಂದಾಪ್ರ ಡಾಟ್ ಕಾಂ ಸುದ್ದಿ) ಮೇರು ಪ್ರತಿಭೆಯ ಲೇಖಕರೂ, ಕಲಾರಾಧಕರೂ ಆದ ಜ್ಯೋತಿ ಅವರಿಗೆ ಈ ಹಿಂದೆ ಕಲೆ ಮತ್ತು ಯಕ್ಷಗಾನ, ಸಾಹಿತ್ಯ ಕ್ಷೇತ್ರದಲ್ಲಿನ ಅಪೂರ್ವ ಸಾಧನೆಗಾಗಿ, “ರಂಗಸ್ಠಳ ರತ್ನ ಪ್ರಶಸ್ತಿ” ಹಾಗೂ, “ವರ್ಷದ ಕನ್ನಡ ಬರಹಗಾರ ಪ್ರಶಸ್ತಿ -2015ನ್ನು ಪಡೆದಿದ್ದರು.
ಮೂಡುಬಿದಿರೆ: ಕೃಷಿ ವಿಶ್ವವಿದ್ಯಾನಿಲಯಗಳು ರೈತರ ಬದುಕನ್ನು ಹಾಳುಮಾಡಿ, ಕೈಗಾರಿಕರಣವನ್ನು ಪರೋಕ್ಷವಾಗಿ ಉತ್ತೇಜಿಸುತ್ತಿದೆ. ಈ ವ್ಯವಸ್ಥಿತ ಶಡ್ಯಂತ್ರದಿಂದ ರೈತನ ಬದುಕು ದುಸ್ಥಿರವಾಗುತ್ತಿದೆ. ದುಡ್ಡು ಮಾಡುವ ದಂಧೆಗಿಳಿದು ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ದಿನದಿಂದ ದಿನಕ್ಕೆ ಆರೋಗ್ಯ ನೆಮ್ಮದಿ ಕುಸಿಯುತ್ತಿದೆ ಎಂದು ರೈತ ವರ್ತೂರು ನಾರಾಯಣ ರೆಡ್ಡಿ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯ ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ‘ಕೃಷಿ: ಹೊಸತನದ ಹುಡುಕಾಟ’ ಎಂಬ ವಿಷಯದಲ್ಲಿ ಮಾತನಾಡಿದರು. ವ್ಯವಸಾಯದಲ್ಲಿ ಮರಗಿಡ, ದನಕರು, ತಿಪ್ಪೆಗುಂಡಿ ಎಲ್ಲವೂ ಬೇಕೆಬೇಕು. ಉತ್ತಮ ಕೃಷಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಇಲ್ಲವೇ ಇಲ್ಲ. ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳನ್ನು ಉಳಿಸಿಕೊಂಡರೆ ಸಾಕು. ಎಕರೆಗೆ ಕನಿಷ್ಠ ೨೫ ವಿವಿಧ ಜಾತಿ ಮರ, ಒಂದು ದನವಿದ್ದರೇ ಅವರಷ್ಟು ಶ್ರೀಮಂತ ಮತ್ತೊಬ್ಬರಿಲ್ಲ. ಕಬ್ಬಿನ ಸೋಗೆ, ಅಡಿಕೆ ಸಿಪ್ಪೆಯನ್ನು ಸುಡುವ ಬದಲಿಗೆ ಅದನ್ನೇ ಗೊಬ್ಬರವಾಗಿ ಬಳಸಿಕೊಂಡರೇ ರೈತ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು. ಸತ್ತ ದನಗಳನ್ನು ನಮ್ಮ ಮಣ್ಣಿನಲ್ಲಿಯ ಹೂತರೆ ೨೦ವರ್ಷಕ್ಕೆ ಬೇಕಾದ ಗೊಬ್ಬರ ಪಡೆಯಬಹುದು. ಮೀನಿನ ತ್ಯಾಜ್ಯವನ್ನು ರಸಗೊಬ್ಬರವನ್ನಾಗಿಸಿಕೊಳ್ಳಬಹುದು. ಆದರೆ ನಮ್ಮ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ನವಂಬರ್ ತಿಂಗಳ 26, 27, 28 ಮತ್ತು 29 ರಂದು ಮೂಡುಬಿದಿರೆಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ಈ ವರ್ಷವೂ ಕನ್ನಡ ನಾಡು ನುಡಿ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷ ಸಾಧನೆಗಳನ್ನು ಮಾಡಿದ ಹತ್ತು ಮಂದಿ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ ವೇದ ಸಾಹಿತ್ಯ, ಉಪನಿಷತ್ತು, ಮಹಾಭಾರತ, ಪುರಾಣ, ಭಾರತೀಯ ತತ್ತ್ವ ಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದು, ತಾರ್ಕಿಕವಾಗಿ ಹಾಗೂ ಜನಸಾಮಾನ್ಯರು ಸುಲಭವಾಗಿ ಅರ್ಥೈಸುವಂತೆ ತಿಳಿಯ ಹೇಳುವ ಪ್ರವಚನಕಾರರಿವರು. ಸ್ವತ: ಸಾಹಿತಿಯಾಗಿ ಅನೇಕ ಕೃತಿಗಳನ್ನು ರಚಿಸಿ, ಸಂಸ್ಕೃತದ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ…
ಡಾ. ಮೋಹನ್ ಆಳ್ವರೇ ಹೇಳುವಂತೆ ನುಡಿಸಿರಿಯಲ್ಲಿ ಕಾಣದ ಸಾವಿರಾರು ಕೈಗಳ ಪರಿಶ್ರಮವಿದೆ. ನಾಡಿನ ಮೂಲೆಮೂಲೆಗಳಿಂದ ಈ ಸಾಹಿತ್ಯ ಜಾತ್ರಗೆ ಆಗಮಿಸುವ ಸಾಹಿತ್ಯಾಭಿಮಾನಿಗಳೆಲ್ಲರೂ ಇಲ್ಲಿನ ಯಾವುದೇ ಅಚ್ಚುಕಟ್ಟಾದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿಯೇ ಹೋಗುತ್ತಾರೆ. ಇದಕ್ಕೆ ಮೂಲ ಕಾರಣವೊಂದೇ ತಮಗೆ ವಹಿಸಿದ ಕೆಲಸವನ್ನು ಒಂದಿನಿತೂ ಲೋಪವಾಗದ ರೀತಿಯಲ್ಲಿ ಚಾಚೂ ತಪ್ಪದೆ ಪಾಲಿಸುತ್ತಿರುವವರು ಇಲ್ಲಿರುವ ಸ್ವಯಂಸೇವಕರು. ಒಂದರ್ಥದಲ್ಲಿ ಇವರೇ ನುಡಿಸಿರಿಯ ನಿಜವಾದ ರೂವಾರಿಗಳು ಎಂದರೂ ತಪ್ಪಾಗದು. ದಿನಂಪ್ರತಿ ನಡೆಯುವ ಸಭಾ ಕಾರ್ಯಕ್ರಮಗಳ ಆಸನ ವ್ಯವಸ್ಥೆ, ನೋಂದಣಿ, ವೇದಿಕೆ ಸಿದ್ಧತೆಗೆ ಸಹಕಾರ, ಮಾಧ್ಯಮ ಪ್ರತಿನಿಧಿಗಳಿಗೆ ಸಹಕಾರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟ, ಉಪಾಹಾರವನ್ನು ಬಡಿಸುವ, ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಅಲ್ಲಲ್ಲಿ ಜನಸಂದಣಿ ನಿರ್ವಹಣೆ ಹೀಗೆ ಕೆಲವು ಮಹತ್ತರವಾದ ಜವಾಬ್ಧಾರಿಗಳನ್ನು ಈ ನಮ್ಮ ಸ್ವಯಂಸೇವಕರು ಬಹಳ ನಿಷ್ಠೆಯಿಂದ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ವಹಿಸುತ್ತಿದ್ದಾರೆ. ಆಳ್ವಾಸ್‌ನ ವಿವಿಧ ಕಾಲೇಜುಗಳ ಎನ್.ಎಸ್.ಎಸ್, ಎನ್‌ಸಿಸಿ, ರೋವರ್‍ಸ್-ರೇಂಜರ್‍ಸ್ ವಿದ್ಯಾರ್ಥಿಗಳೂ ಸೇರಿದಂತೆ ಮಂಗಳೂರು, ಪುತ್ತೂರು, ಸುಳ್ಯ,…
ಕುಂದಾಪುರ: ಇಲ್ಲಿನ ಯುವ ಸಾಹಿತಿ, ಸಿರಿ ಸೌಂದರ್ಯ ಪತ್ರಿಕೆಯ ಸಂಪಾದಕ ಸಂದೀಪ್ ಶೆಟ್ಟಿ ಹೆಗ್ಗದ್ದೆ ಕುಂದಾಪ್ರ ಕನ್ನಡದಲ್ಲಿ ವಿಶಷ್ಟ ಹಾಡುಗಳ ಆಲ್ಬಮ್ ಹೊರತರು ಅಣಿಯಾಗಿದ್ದು ಇತ್ತೀಚೆಗೆ ಬೆಂಗಳೂರಿನ ‘ಸಿರಿ ಸೌಂದರ್ಯ’ ಕನ್ನಡ ಮಾಸ ಪತ್ರ್ರಿಕೆಯ ಕಛೇರಿಯಲ್ಲಿ ಆಲ್ಬಂ ಟೈಟಲ್ ಬಿಡುಗಡೆಗೊಂಡಿತು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಟೈಟಲ್ ಬಿಡುಗಡೆಗೊಳಿಸಿ ಮಾತನಾಡಿ, ‘ಯುವ ಉತ್ಸಾಹಿ ಯುವಕರಾದ ಸಂದೀಪ್ ಶೆಟ್ಟಿ ಹೆಗ್ಗದ್ದೆ ಹಾಗೂ ಅಭಿನಯ್ ಶೆಟ್ಟಿ ತಮ್ಮ ಹುಟ್ಟೂರ ಭಾಷೆಯಲ್ಲಿ ಹಾಡುಗಳನ್ನು ಮಾಡೋಕೆ ಹೊರಟಿರೋದು ನಿಜಕ್ಕೂ ಅಭಿನಂದನಾರ್ಹ. ಅವರ ಕಾರ್ಯ ಯಶಸ್ಸಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮಿಮಿಕ್ರಿ ದಯಾನಂದ್, ಸಿರಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚಿಕ್ಕಣ್ಣ, ಸಂಪಾದಕರಾದ ಲಲಿತಾನಾರಾಯಣ್ ಸೇರದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ಆಲ್ಬಂ ಪರಿಕಲ್ಪನೆ, ಸಾಹಿತ್ಯ, ಹಾಗೂ ಗಾಯನ ಇವು ಮೂರು ಅಂಶಗಳ ಹೊಣೆ ಹೊತ್ತಿರುವ ಸಂದೀಪ್ ಶೆಟ್ಟಿ ಹೆಗ್ಗದ್ದೆ ಮಾತನಾಡಿ, ಮೊದಲು ನಾವು ಹಾಡುಗಳನ್ನು ಬಿಡುಗಡೆಗೊಳಿಸಿ, ನಂತರ ಅದರ ಚಿತ್ರೀಕರಣವನ್ನು ಮಾಡಬೇಕೆಂದುಕೊಂಡಿದ್ದೇವೆ. ಇದರಲ್ಲಿ ಬಹುತೇಕ ಕುಂದಾಪರದ ಪ್ರತಿಭೆಗಳೇ ಕಾಣಿಸಿಕೊಳ್ಳಲಿದ್ದು, ಹಾಡುಗಳ ನಾಯಕನಾಗಿ ಕುಂದಾಪುರದವರಾದ, ಮಾಡೆಲಿಂಗ್ ಕ್ಷೇತ್ರದಲ್ಲಿ…
ನುಡಿಸಿರಿ 3ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು
ಬೈಂದೂರು,ನ27: ಇಲ್ಲಿಗೆ ಸಮೀಪದ ಶಿರೂರು ಗ್ರಾಮ ಪಂಚಾಯತ್ ಎದುರಿನ ರಾಷ್ಟ್ರೀಯ ಹೆದಾರಿ 66ರಲ್ಲಿ ಬ್ಯೆಕ್‌ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬ್ಯೆಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ರಾತ್ರಿ ವರದಿಯಾಗಿದೆ. ಸಿಗಂದೂರು ಮೇಳದಲ್ಲಿ ವೇಷಧಾರಿಯಾಗಿರುವ ಸುದೀಪ್ ಭಟ್ಕಳಕ್ಕೆ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಇನ್ನೊರ್ವ ವ್ಯಕ್ತಿ ಭಟ್ಕಳದ ವೆಂಕಟಾಪುರದ ನಿವಾಸಿ ವೆಂಕಟಪ್ಪ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯೆಂದೂರು ವೃತ್ತ ನಿರೀಕ್ಷಕ ಸುದರ್ಶನ್, ಬ್ಯೆಂದೂರು ಠಾಣಾಧಿಕಾರಿ ಸಂತೋಷ ಕಾಯ್ಕಿಣಿ ಘಟನಾ ಸ್ಥಳಕ್ಕಾಗಮಿಸಿದ್ದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
