ಕೊಲ್ಲೂರು: ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆ ಇವರ ಹೊರಾಂಗಣ ರಕ್ತದಾನ ಶಿಭಿರಕ್ಕೆ ಅವಶ್ಯವಿರುವ ರೂ. 11,12,383.00 ವೆಚ್ಛದ ಅಂಬುಲೆನ್ಸ್ ನ್ನು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಅಡ್ಯಂತಾಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣ ಮೂರ್ತಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ್, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯ ಅಧ್ಯಕ್ಷ ಎಸ್. ಜಯಕರ ಶೆಟ್ಟಿ, ಕಾರ್ಯದರ್ಶಿ ವೈ ಸೀತಾರಾಮ ಶೆಟ್ಟಿ, ಕೋಶಾಧಿಕಾರಿ ಶಿವರಾಮ ಶೆಟ್ಟಿ, ಸಂಚಾಲಕ ಆವರ್ಸೆ ಮುತ್ತಯ್ಯ ಶೆಟ್ಟಿ ಉಪಸ್ಥಿತರಿದ್ದರು. ಕೆ. ನರಸಿಂಹ ಭಟ್ ಇವರು ವಾಹನದ ಪೂಜೆಯನ್ನು ನೆರವೇರಿಸಿ ಹಾರೈಸಿದರು.
Author: ನ್ಯೂಸ್ ಬ್ಯೂರೋ
ಬೈಂದೂರು: ಕಳೆದ 18ವರ್ಷಗಳಿಂದ ಬೈಂದೂರು ಬಿಎಸ್‌ಎನ್‌ಎಲ್ ಕಛೇರಿಯಲ್ಲಿ ಹಿರಿಯ ಟೆಲಿಕಾಂ ಕಛೇರಿ ಸಹಾಯಕಿ ಆಗಿ ಕಾರ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ತೆರೆಸಾ ಪೌಲೂಸ್ ಅವರನ್ನು ಕಛೇರಿಯ ಸಿಬ್ಬಂಧಿಗಳು ಬೀಳ್ಕೊಟ್ಟರು. ಸಮಾರಂಭದ ಅಧ್ಯಕ್ಷತೆಯನ್ನು ಬೈಂದೂರು ದೂರವಾಣಿ ಸಬ್‌ಡಿವಿಜನ್ ಇಂಜೀನಿಯರ್ ಭಾಸ್ಕರ್ ಭಟ್ ವಹಿಸಿದ್ದರು. ಕುಂದಾಪುರ ವಿಭಾಗೀಯ ಇಂಜಿನಿಯರ್ ಉಪ್ಪುಂದ ಸತ್ಯನಾರಾಯಣ ಪುರಾಣಿಕ್ ನಿವೃತ್ತರಿಗೆ ಬಿಎಸ್‌ಎನ್‌ಎಲ್ ಸ್ಮರಣಿಕೆ ನೀಡಿ ಅವರ ಸೇವೆಯನ್ನು ಸ್ಮರಿಸಿ ಶುಭಕೋರಿದರು. ಈ ಸಂದರ್ಭ ಸಿನೀಯರ್ ಸುಪರ್‌ವೈಸರ್ ಮೋಹನ ಹೆಬ್ಬಾರ್, ಅಯ್ಯಪ್ಪನ್, ಹಿರಿಯ ಮೆಕಾನಿಕ್‌ಗಳಾದ ರಾಮ ಮೊಗವೀರ, ಪಿ. ಭಾಸ್ಕರ, ಬಿ. ನಾಗಪ್ಪ, ಗಂಗಾಧರ, ಕುಪ್ಪಯ್ಯ, ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದು ನಿವೃತ್ತರಿಗೆ ಶುಭಕೋರಿದರು.
ಬೈಂದೂರು: ರಾಜ್ಯದಲ್ಲಿರುವ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿರಿಸಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಈ ವರ್ಗದವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಅವರಿಂದಾಗುತ್ತಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಯಡ್ತರೆ ಗ್ರಾಪಂ ಆವರಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಶ್ರಮಶಕ್ತಿ ಯೋಜನೆಯಡಿ ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಯೋಜನೆಯಡಿ ರೂ. 101.42ಲಕ್ಷ ಸಾಲ, ಸಹಾಯಧನ ಸೌಲಭ್ಯದ ಚೆಕ್ ವಿತರಿಸಿ ಮಾತನಾಡಿದರು. 2015-16ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವಿವಿಧ ಯೋಜನೆಗಳಾದ ಶ್ರಮಶಕ್ತಿ ಯೋಜನೆಯಡಿ ಒಟ್ಟು 144 ಫಲಾನುಭವಿಗಳಿಗೆ ರೂ. 33.70ಲಕ್ಷ ಕಿರುಸಾಲ ಯೋಜನೆಯಡಿ ಒಟ್ಟು 25 ಸ್ವಸಹಾಯ ಸಂಘಗಳ 299 ಫಲಾನುಭವಿಗಳಿಗೆ ರೂ. 29.90ಲಕ್ಷ, ಅರಿವು ವಿದ್ಯಾಭ್ಯಾಸ ಸಾಲಯೋಜನೆಯಡಿ ಒಟ್ಟು 28ಫಲಾನುಭವಿಗಳಿಗೆ ರೂ.24.40ಲಕ್ಷ, ಸ್ವಾವಲಂಬನಾ ಯೋಜನೆಯಡಿ ಒಟ್ಟು 26 ಫಲಾನುಭವಿಗಳಿಗೆ ರೂ.6.66ಲಕ್ಷ ಹಾಗೂ ಗೃಹಸಾಲದ ಮೇಲಿನ ಬಡ್ಡಿ ರಿಯಾಯಿತಿ ಸಹಾಯಧನ ಯೋಜನೆಯಡಿಯಲ್ಲಿ 13 ಫಲಾನುಭವಿಗಳಿಗೆ ರೂ. 6.76ಲಕ್ಷ…
ಬೈಂದೂರು: ಅತ್ಯಂತ ಹಿಂದುಳಿದ ಗ್ರಾಮೀಣ ಭಾಗದ ಜನರಿಗೆ ತಮ್ಮ ಆರೋಗ್ಯ ಸಮಸ್ಯೆಯಿಂದ ದೂರದ ಆಸ್ಪತ್ರೆಗಳಗೆ ಹೋಗಲು ಅನಾನುಕೂಲತೆಯಿಂದ ಕಷ್ಟಸಾಧ್ಯ. ಹೀಗಾಗಿ ಆಯಾ ಹಳ್ಳಿಯಲ್ಲಿರುವ ಸಂಘ-ಸಂಸ್ಥೆಗಳು ಆರೋಗ್ಯ ಶಿಬಿರಗಳ ಮೂಲಕ ತಜ್ಞವೈದ್ಯರನ್ನು ಹಳ್ಳಿಗೆ ಕರೆಯಿಸಿ ಚಿಕಿತ್ಸೆ ಕೊಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಯಡ್ತರೆ ಗ್ರಾಪಂ ವ್ಯಾಪ್ತಿಯ ಸಹಿಪ್ರಾ ಶಾಲೆಯಲ್ಲಿ ನಡೆದ ಹಳೆ ವಿದ್ಯಾರ್ಥಿ ಸಂಘ ಉದ್ಘಾಟನೆ ಹಾಗೂ ಸಂಘದ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಇವರ ಸಹಯೋಗದಲ್ಲಿ ಆಯೋಜಿಸಲಾದ ಉಚಿತ ದಂತ, ನೇತ್ರ ಚಿಕಿತ್ಸಾ ಮತ್ತು ರಕ್ತವರ್ಗೀಕರಣ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳೆ ವಿದ್ಯಾರ್ಥಿ ಸಂಘ ಪ್ರಾರಂಭಗೊಂಡ ದಿನದಂದೇ 55 ವರ್ಷ ಇತಿಹಾಸವುಳ್ಳ ಈ ಭಾಗದ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ವ್ಯವಸ್ಥಿತವಾಗಿ ಬೃಹತ್ ಮಟ್ಟದ ಆರೋಗ್ಯ ಶಿಬಿರ ಸಂಘಟಿಸಿ ಈ ಭಾಗದ ಜನರಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು. ಯಡ್ತರೆ ಗ್ರಾಪಂ ಅಧ್ಯಕ್ಷ…
ಬೈಂದೂರು: ಕಿಂಡಿ ಅಣೆಕಟ್ಟು(ಬ್ಯಾರೇಜ್) ನಿರ್ಮಾಣದಿಂದ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಮದ್ದೋಡಿ-ಕುಂಜಳ್ಳಿ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ರೂ. 35ಲಕ್ಷ ವೆಚ್ಚದ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಈ ಮೊದಲು ಇಲ್ಲಿನ ರೈತರು ಹರಿಯುವ ನದಿಗೆ ಸ್ವತಃ ಕಟ್ಟು ನಿರ್ಮಿಸಿ ಕೃಷಿಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬ್ಯಾರೇಜ್‌ನಿಂದ ರೈತಾಪಿ ವರ್ಗದವರಿಗೆ ಅನುಕೂಲವಾಗಲಿದೆ ಎಂದರು. ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ್ ಗಾಣಿಗ, ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯರಾದ ಎಸ್. ರಾಜು ಪೂಜಾರಿ, ಕೆ. ರಮೇಶ ಗಾಣಿಗ, ರಾಮ ಕೆ., ಗುತ್ತಿಗೆದಾರ ಪ್ರದೀಪ್ ಶೆಟ್ಟಿ, ಇಂಜಿನಿಯರ್ ಅಲ್ವಿನ್ ಹಾಗೂ ಊರಿನವರು ಉಪಸ್ಥಿತರಿದ್ದರು.
ಬೈಂದೂರು: ಇಲ್ಲಿಗೆ ಸಮೀಪದ ಶಿರೂರು ಗ್ರೀನ್ ವ್ಯಾಲಿ ಶಾಲೆಯ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ತಿರುವಿನಲ್ಲಿ ಇನ್ನೋವಾ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡು ಓರ್ವನಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಮಧ್ಯಾಹ್ನದ ಸುಮಾರಿಗೆ ನಡೆದಿದೆ. ಭಟ್ಕಳ ಮೂಲಕ ಶಾದಿಕ್ ಹಾಗೂ ಮಹಮ್ಮದ್ ಮೀರಾ ಗಂಭೀರವಾಗಿ ಗಾಯಗೊಂಡವರು. ಭಟ್ಕಳದವರಾದ 6ಮಂದಿ ಬೆಳಿಗ್ಗೆ ದುಬೈನಿಂದ ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿದು ಅಲ್ಲಿಂದ ಇನೋವಾ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಹುಬ್ಬಳಿಯಿಂದ ಉಡುಪಿಗೆ ಕಡೆಗೆ ಸಾಗುತ್ತಿದ್ದ ಟ್ರಕ್ ಒಂದು ಡಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಅದರಲ್ಲಿದ್ದ 6 ಮಂದಿಯಲ್ಲಿ ಒಬ್ಬ ಗಂಭೀರ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯವಾಗಿತ್ತು. ಈ ಪೈಕಿ ಈರ್ವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೊರ್ವನಿಗೆ ಗೂಡ್ಸ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಗಂಭೀರ ಗಾಯಗೊಂಡು ಉಡುಪಿ ಆಸ್ಪತ್ರೆಗ ದಾಖಲಾದ ಘಟನೆ ಇಲ್ಲಿನ ಮಚ್ಚಟ್ಟು ಎಂಬಲ್ಲಿ ನಡೆದಿದೆ. ಮಚ್ಚಟ್ಟು ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಸ್ಥಳೀಯ ಅಣ್ಣಪ್ಪ ನಾಯಕ್ ಎಂಬುವರ ಪುತ್ರ ಕಾರ್ತಿಕ್(11) ಎಂಬಾತನೇ ಗಂಭೀರ ಗಾಯಗೊಂಡ ಬಾಲಕ. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟ ನಂತರ ಕಾರ್ತಿಕ್ ಮನೆಗೆ ನಡೆದುಕೊಂಡು ಹೋಗುತ್ತಿದ್ದ. ಇದೇ ಸಂದರ್ಭ ಬಂದ ಖಾಲಿ ಗೂಡ್ಸ್ ವ್ಯಾನು ವಿದ್ಯಾರ್ಥಿ ಕಾರ್ತಿಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಿದ್ಯಾರ್ಥಿಯ ತಲೆಗೆ ಹಾಗೂ ಕಾಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸುದ್ಧಿ ತಿಳಿದ ಶಾಲಾ ಮುಖ್ಯೋಪಾದ್ಯಾಯಿನಿ ಜ್ಯೋತಿ ಶೆಟ್ಟಿ ಬಾಲಕನನ್ನು ಆಸ್ಪತ್ರೆಗೆ ಸೇರಿಸಲು ಯತ್ನಿಸಿದರಾದರೂ ಯಾವುದೇ ವಾಹನಗಳಿಲ್ಲದ ಕಾರಣ ರಾಜ್ಯ ಸರ್ಕಾರೀ ನೌಕರರ ಸಂಘದ ಅಧ್ಯಕ್ಷರಿಗೆ ದೂರವಾಣಿ ಮೂಲಕ ಸುದ್ಧಿ ಮುಟ್ಟಿಸಿದ್ದಾರೆ. ಅನಾರೋಗ್ಯದ ರಜೆಯಲ್ಲಿದ್ದ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ತಕ್ಷಣ ಸಮಸ್ಯೆಗೆ ಸ್ಪಂದಿಸಿ…
ಗಂಗೊಳ್ಳಿ: ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಕಳೆದ ಮೂರ‍್ನಾಲ್ಕು ದಿನಗಳಿಂದ ಹೇರಳ ಮರಿ ಸಿಗಡಿ ದೊರೆಯುತ್ತಿರುವ ಹಿನ್ನಲೆಯಲ್ಲಿ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಸಭೆ ಸೇರಿದ ಗಂಗೊಳ್ಳಿ ವಲಯ ಟ್ರಾಲ್ ಬೋಟ್ ಯೂನಿಯನ್ ಪ್ರಮುಖರು ಈ ಬಗ್ಗೆ ಚರ್ಚೆ ನಡೆಸಿದರು. ಗಂಗೊಳ್ಳಿ ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷ ಜಿ.ಪುರುಷೋತ್ತಮ ಆರ್ಕಾಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟೇಶ ನಡಹಳ್ಳಿ ಅವರು ಮೀನುಗಾರರಿಗೆ ಮಾಹಿತಿ ಮಾರ್ಗದರ್ಶನ ನೀಡಿ ಮಾತನಾಡಿದರು. ಕಳೆದ ಕೆಲವು ದಿನಗಳಿಂದ ಬಹಳಷ್ಟು ಸಣ್ಣ ಸಣ್ಣ ಸಿಗಡಿ ಮೀನುಗಾರರಿಗೆ ದೊರೆಯುತ್ತಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಧಾರಣೆ ದೊರೆಯುತ್ತಿಲ್ಲ. ಹೀಗಾಗಿ ಈ ಸಂಬಂಧ ಸಿಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿ ಆ ಬಳಿಕ ಮೀನುಗಾರಿಕೆಗೆ ತೆರಳಲು ಟ್ರಾಲ್ ಬೋಟ್ ಮೀನುಗಾರರು ನಿರ್ಧರಿಸಿದ್ದಾರೆ. ಉಪಾಧ್ಯಕ್ಷ ವೈ.ಶ್ರೀನಿವಾಸ ಖಾರ್ವಿ, ಹಿರಿಯ ಮೀನುಗಾರ ಮುಖಂಡ ವಿಠೋಬ ಪಾಂಡು ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಗಂಗೊಳ್ಳಿ: ದೇಶದ ಭದ್ರತೆ ದೃಷ್ಟಿಯಿಂದ ಕರಾವಳಿ ಕಾವಲು ಪೊಲೀಸ್ ಕಾರ್ಯ ನಿರ್ವಹಿಸುತ್ತಿದ್ದು, ದೇಶದ ಕರಾವಳಿ ತೀರ ಪ್ರದೇಶ ಹಾಗೂ ಬಂದರುಗಳ ಭದ್ರತೆ ಕರಾವಳಿ ಕಾವಲು ಪೊಲೀಸ್ ಪಡೆಯ ಮುಖ್ಯ ಉದ್ದೇಶವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ಆರಂಭಗೊಂಡಿದ್ದು, ಇದೀಗ ನೂತನ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಕರಾವಳಿ ಕಾವಲು ದೃಷ್ಟಿಯಿಂದ ಅಗತ್ಯವಿರುವ ಸ್ಪೀಡ್ ಬೋಟ್ ಠಾಣೆಗೆ ಬರಲಿದೆ ಅಲ್ಲದೆ ಸುಸಜ್ಜಿತ ಜೆಟ್ಟಿ ಕೂಡ ನಿರ್ಮಾಣಗೊಳ್ಳಲಿದೆ ಎಂದು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೆಂಕಟೇಶ ನಡಹಳ್ಳಿ ಹೇಳಿದರು. ಅವರು ಗಂಗೊಳ್ಳಿಯ ಬಂದರು ಪ್ರದೇಶದಲ್ಲಿ ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಸಭೆಯಲ್ಲಿ ಮೀನುಗಾರರಿಗೆ ಮಾಹಿತಿ ನೀಡಿ ಮಾತನಾಡಿದರು. ಮೀನುಗಾರರು ಮೀನುಗಾರಿಕೆಗೆ ತೆರಳುವ ಸಂದರ್ಭ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಬೇಕು ಹಾಗೂ ಅಗತ್ಯ ಎಲ್ಲಾ ದಾಖಲೆ ಪತ್ರ ಮತ್ತು ಗುರುತಿನ ಚೀಟಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಎಲ್ಲಾ ದೋಣಿಯವರು ಒಟ್ಟಿಗೆ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ…
ಗಂಗೊಳ್ಳಿ: ಇತ್ತೀಚೆಗೆ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಸೈರ‍್ಯಪೇಟೆಯ ಲಯೋಲ ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಟೆನಿಕಾಯ್ಟ್ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ ಖಾರ್ವಿ ಭಾಗವಹಿಸಿದ್ದರು. ಇವರು ಗಂಗೊಳ್ಳಿಯ ದೇವಣ್ಣ ಮತ್ತು ಅಂಬಾ ಖಾರ್ವಿ ಅವರ ಪುತ್ರ. ವರದಿ: ನರೇಂದ್ರ ಎಸ್ ಗಂಗೊಳ್ಳಿ
